ವಿಶ್ವೇಶ್ವರ ಭಟ್ ರವರ ಪುಸ್ತಕ ಬಿಡುಗಡೆ ಸಮಾರಂಭ...
ಜಯಂತ್ ಕಾಯ್ಕಿಣಿಯವರ ಮಾತಿನ ಮೋಡಿಯಲ್ಲಿ ಕಳೆದು ಹೋಗಿದ್ದೆ...
ಯಾರೋ ಬೆನ್ನು ತಟ್ಟಿದರು...
"ಸರ್... ನೀವು ಇಟ್ಟಿಗೆ ಸಿಮೆಂಟಾ...?"
ನನಗೆ ಆಶ್ಚರ್ಯವಾಯಿತು....
ನನಗೆ ಆಶ್ಚರ್ಯವಾಯಿತು....
ನನಗೆ ಏನು ಹೇಳ ಬೇಕೆಂದು ತೋಚಲಿಲ್ಲ...
ಇತ್ತೀಚೆಗೆ ನಾನು "ಇಟ್ಟಿಗೆ ಸಿಮೆಂಟು" ಅಂತ ಆಗಿದ್ದು...
ಆ... ಥರಹ ... ನನ್ನನ್ನು ಗುರುತಿಸುತ್ತಿರುವದು....
ಸ್ವಲ್ಪ ಬೇಸರವಾಗುತ್ತಿದ್ದರೂ...
ಖುಷಿಯಾಗುತ್ತಿದೆ...
ಬೇರೆ ಥರಹ ನನ್ನನ್ನು ಗುರುತಿಸುತ್ತಿದ್ದಾರಲ್ಲ
ಸಂತೋಷವೂ ಆಗುತ್ತಿದೆ...
ಘಟನೆ .. ಒಂದು...
ಮೊನ್ನೆ ಪರಿಸರ ವಿಜ್ಞಾನಿ, ಪರಿಸರ ಪ್ರೇಮಿ.. ನಾಗೇಶ ಹೆಗಡೆಯವರನ್ನು ಭೇಟಿಯಾಗುವ ಸುಯೋಗ ಬಂದಿತ್ತು...
ಅವರೊಡನೆ ಮೂರುತಾಸು ಮಾತನಾಡಿದ್ದೆ....
ಅವರೊಂದು ಜ್ಞಾನದ ಸಮುದ್ರ...
ಅವರ ಸಾಧನೆ... ಅಧ್ಯಯನ ಬಲು ದೊಡ್ಡದು...
ದೊಡ್ಡ ವ್ಯಕ್ತಿಯಾಗಿದ್ದರೂ ಅವರ ಸರಳತೆ ನೋಡಿ ಮೂಕನಾಗಿದ್ದೆ....
ಅಂಥವರೊಡನೆ ಕುಳಿತು ಮಾತನಾಡಿದ್ದು ನನ್ನ ಸುಯೋಗ...
ನನ್ನ ಪುಣ್ಯ...!
ಅವರು ನನ್ನ ಬ್ಲಾಗಿನ ಬಗೆಗೆ ಮೆಚ್ಚುಗೆಯ ಮಾತನಾಡುತ್ತಿದ್ದಾಗ ಖುಷಿಯಿಂದ ಕಣ್ಣಲ್ಲಿ ನಿರು ಬಂದಿತ್ತು......
ಘಟನೆ ಎರಡು...
"ಹೆಸರೇ... ಬೇಕಿರದ" ನನ್ನದೊಂದು ಪುಸ್ತಕಕ್ಕೆ.....
ಜಿ.ಎನ್ ಮೋಹನ್ ಸುಂದರ ಮುನ್ನುಡಿ ಬರೆದು ಕೊಟ್ಟಿದ್ದಾರೆ....
ಹಿತನುಡಿಗಳನ್ನು.. ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ....
ತಮ್ಮ ಕೆಲಸದ ಒತ್ತಡದ ನಡುವೆಯೂ ...
ನನ್ನ ಕೆಲಸವನ್ನೂ ಮಾಡಿಕೊಡುತ್ತಾರೆ.... ಇನ್ನು ಬರೆಯಿರಿ ಅಂತ ಬೆನ್ನು ತಟ್ಟುತ್ತಾರೆ....
ಅವರ ಶುಭ ಹಾರೈಕೆಗಳು, ಪ್ರೋತ್ಸಾಹಕ್ಕೆ...
ನನ್ನ ಉತ್ಸಾಹ ಇಮ್ಮಡಿಯಾಗುತ್ತಿದೆ..
ಹಲವಾರು ಗಣ್ಯರು ಪ್ರೋತ್ಸಾಹಕ ನುಡಿಗಳನ್ನು ಬರೆದುಕೊಟ್ಟು ಬೆನ್ನು ತಟ್ಟುತ್ತಿದ್ದಾರೆ....
ಘಟನೆ ಮೂರು...
ರಂಗಶಂಕರದದಲ್ಲಿ ಕಲಾ ಗಂಗೊತ್ರಿಯವರ
"ಮೈಸೂರು ಮಲ್ಲಿಗೆ " ನಾಟಕದ ಕೊನೆಯಲ್ಲಿ...
ಡಾ. ಬಿವಿ ರಾಜಾರಾಂ ಅವರು....
"ಇಟ್ಟಿಗೆ ಸಿಮೆಂಟಿನ ಪ್ರಕಾಶ ಹೆಗಡೆಯವರು..
ವೇದಿಕೆಗೆ ಬರಬೇಕು"
ಎಂದು ನೆನಪಿನ ಕಾಣಿಕೆ ಕೊಟ್ಟರು.....ಅಷ್ಟೆಲ್ಲಾ ಪ್ರೇಕ್ಷಕರ ಮುಂದೆ...!
ನಾನು ಮಾತು ಬಾರದೆ ಮೂಕನಾಗಿದ್ದೆ....
ಘಟನೆ ನಾಲ್ಕು.....
ಸುಶ್ರುತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ..
ಮೆಚ್ಚಿನ ಕಥೆಗಾರ "ವಸುಧೇಂದ್ರ " ಸಿಕ್ಕಿದ್ದರು...
"ಚೆನ್ನಾಗಿದ್ದೀರಾ... ಏನನ್ನುತ್ತದೆ ಇಟ್ಟಿಗೆ ಸಿಮೆಂಟು..?.."
ಎಂದು ಆತ್ಮೀಯವಾಗಿ ಕೇಳಿದರು..
ಅಂಥಹ ದೊಡ್ಡ ಕಥೆಗಾರ..!
ಘಟನೆ... ಐದು....
"ಸ್ವಾಮಿ... ನೀವು ಯಾರೆಂದು ಗೊತ್ತಿಲ್ಲ...
ನೀವು ಬರೆದ ಲೇಖನ ಓದಿ ...
ಮನೆಬಿಟ್ಟು ಓಡಿಹೋಗಿದ್ದ ನನ್ನ ಮಗ
ಐದು ವರ್ಷದ ನಂತರ ಮನೆಗೆ ಮರಳಿದ್ದಾನೆ..."
ಫೋನ್ ಮಾಡಿದವರು ಖುಷಿಯಿಂದ ಅಳುತ್ತಿದ್ದರೆ.....
ನನ್ನ ಕಣ್ಣಲ್ಲೂ ನೀರಾಡಿತ್ತು...
ಭಾವುಕನಾಗಿಬಿಟ್ಟಿದ್ದೆ....
( ಆ ಲೇಖನ....
"ಮಿಲ್ತಿ ಹೇ ಜಿಂದಗಿ ಮೇ ಮೊಹಬ್ಬತ್ ಕಭಿ... ಕಭಿ."...)
ನನ್ನ ಬ್ಲಾಗಿನ ಪ್ರೊಫೈಲ್ ನೋಡಿದವರ ಸಂಖ್ಯೆ ಹದಿಮೂರು ಸಾವಿರ ದಾಟಿದೆ...
ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಕಳೆದು ಹೋಗಿ...
ವ್ಯವಹಾರ.. ಕೆಲಸದ ಒತ್ತಡದಲ್ಲಿ ಮುಳುಗಿರುತ್ತಿದ್ದ...
ನನ್ನಂಥಹ ಸಾಮಾನ್ಯನಿಗೆ ಇವೆಲ್ಲ ಅಚ್ಚರಿಯ ಸಂಗತಿಗಳು...
ನಿರೀಕ್ಷೆಯೇ ಇರದ ಅನಿರೀಕ್ಷಿತ... ಖುಷಿಗಳು....
ಕನಸೋ... ನನಸೋ ಎಂದು ಚಿಗುಟಿ ನೋಡಿಕೊಳ್ಳುವಂಥಹ ಸಂಗತಿಗಳು....
ನನ್ನ ಮೆಚ್ಚಿನ ....
ಜೋಗಿ, ಬಿ. ಸುರೇಶ, ಪಿ. ಶೇಷಾದ್ರಿ...
ಮೆಚ್ಚಿನ ಅಭಿನೇತ್ರಿ ಜಯಲಕ್ಷ್ಮಿ ಪಾಟಿಲ್
(ಮುಕ್ತಾದ "ಮಂಗಳತ್ತೆ")
ಅವರು ಪ್ರೋತ್ಸಾಹಕ್ಕಾಗಿ...
ನನ್ನ ಬ್ಲಾಗ್ ಫಾಲೋ ಮಾಡಿ...
ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲ ಕೃತಜ್ಞತೆ ಹೇಳಲೂ...
ನನ್ನ ಬಳಿ ಶಬ್ಧಗಳಿಲ್ಲ...
ನಿಮ್ಮಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ...
ಅದಕ್ಕೆ ತಕ್ಕಂತೆ ನಡೆಯುವ ಪ್ರಯತ್ನ ಮಾಡುತ್ತೇನೆ...
ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದೂ ಇರಲಿ....
ಪ್ರೀತಿಯಿಂದ....
ಇಟ್ಟಿಗೆ ಸಿಮೆಂಟು....
"ಸ್ವಾಮಿ... ನೀವು ಯಾರೆಂದು ಗೊತ್ತಿಲ್ಲ...
ನೀವು ಬರೆದ ಲೇಖನ ಓದಿ ...
ಮನೆಬಿಟ್ಟು ಓಡಿಹೋಗಿದ್ದ ನನ್ನ ಮಗ
ಐದು ವರ್ಷದ ನಂತರ ಮನೆಗೆ ಮರಳಿದ್ದಾನೆ..."
ಫೋನ್ ಮಾಡಿದವರು ಖುಷಿಯಿಂದ ಅಳುತ್ತಿದ್ದರೆ.....
ನನ್ನ ಕಣ್ಣಲ್ಲೂ ನೀರಾಡಿತ್ತು...
ಭಾವುಕನಾಗಿಬಿಟ್ಟಿದ್ದೆ....
( ಆ ಲೇಖನ....
"ಮಿಲ್ತಿ ಹೇ ಜಿಂದಗಿ ಮೇ ಮೊಹಬ್ಬತ್ ಕಭಿ... ಕಭಿ."...)
ನನ್ನ ಬ್ಲಾಗಿನ ಪ್ರೊಫೈಲ್ ನೋಡಿದವರ ಸಂಖ್ಯೆ ಹದಿಮೂರು ಸಾವಿರ ದಾಟಿದೆ...
ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಕಳೆದು ಹೋಗಿ...
ವ್ಯವಹಾರ.. ಕೆಲಸದ ಒತ್ತಡದಲ್ಲಿ ಮುಳುಗಿರುತ್ತಿದ್ದ...
ನನ್ನಂಥಹ ಸಾಮಾನ್ಯನಿಗೆ ಇವೆಲ್ಲ ಅಚ್ಚರಿಯ ಸಂಗತಿಗಳು...
ನಿರೀಕ್ಷೆಯೇ ಇರದ ಅನಿರೀಕ್ಷಿತ... ಖುಷಿಗಳು....
ಕನಸೋ... ನನಸೋ ಎಂದು ಚಿಗುಟಿ ನೋಡಿಕೊಳ್ಳುವಂಥಹ ಸಂಗತಿಗಳು....
ನನ್ನ ಮೆಚ್ಚಿನ ....
ಜೋಗಿ, ಬಿ. ಸುರೇಶ, ಪಿ. ಶೇಷಾದ್ರಿ...
ಪತ್ರಕರ್ತ "ಅಶೋಕ್ ಕುಮಾರ್" ಅವರ ಪ್ರೋತ್ಸಾಹ ಮರೆಯಲಾರೆ..
ಪ್ರೋತ್ಸಾಹಿಸಿದ ಇನ್ನೂ ಅನೇಕರ ಹೆಸರು ಬಿಟ್ಟುಹೋಗಿದೆ...
ಬರೆಯಲು ಜಾಗವೂ ಸಾಲುವದಿಲ್ಲ...
ಅವರಿಗೆಲ್ಲ ಹೇಗೆ ಕೃತಜ್ಞತೆ ಅರ್ಪಿಸಲಿ...?
ಮೆಚ್ಚಿನ ಅಭಿನೇತ್ರಿ ಜಯಲಕ್ಷ್ಮಿ ಪಾಟಿಲ್
(ಮುಕ್ತಾದ "ಮಂಗಳತ್ತೆ")
ಇನ್ನೂ ಅನೇಕರು...ಅನೇಕರು....
ಹಲವರ ಹೆಸರೇ... ಗೊತ್ತಿಲ್ಲ...
ನನ್ನ ಬ್ಲಾಗಿಗೆ ಬಂದು ಮೆಚ್ಚುಗೆಯಮಾತುಗಳನ್ನಾಡುತ್ತಾರೆ...
ಹಲವರ ಹೆಸರೇ... ಗೊತ್ತಿಲ್ಲ...
ನನ್ನ ಬ್ಲಾಗಿಗೆ ಬಂದು ಮೆಚ್ಚುಗೆಯಮಾತುಗಳನ್ನಾಡುತ್ತಾರೆ...
ಅವರು ಪ್ರೋತ್ಸಾಹಕ್ಕಾಗಿ...
ಸೌಜನ್ಯಕ್ಕೆಂದು ಹೇಳಿದ ಮಾತುಗಳಾದರೂ...
ನನಗಂತೂ ಖುಷಿಯಾಗುತ್ತದೆ...
ಇವೆಲ್ಲ ನಿಜವಾ....?
ಅಚ್ಚರಿಯಾಗುತ್ತದೆ.....
ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತದೆ....
ದಿನನಿತ್ಯ ಬರುವ ಹಲವಾರು ಈ ಮೇಲ್ ಗಳು ..,
ಲೇಖನಕ್ಕೆ ಬರುವ ಪ್ರೋತ್ಸಾಹದ ನುಡಿಗಳು...
ನನ್ನ ಪುಟ್ಟ ಪ್ರಪಂಚವನ್ನು ಬದಲಿಸಿ ಬಿಟ್ಟಿದೆ....
ಹಲವರ ಜೀವಮಾನದ ಕನಸುಗಳನ್ನು ನನಸು ಮಾಡುತ್ತಾ..
ಅವರ ಮನೆಕಟ್ಟಿ.....
ಅದರಲ್ಲಿ ಲಾಭ.., ನಷ್ಟ , ಕಷ್ಟ ಸುಖದಲ್ಲಿ ಮುಳುಗಿರುತ್ತಿದ್ದ...
ನನ್ನನ್ನು..
"ಇಟ್ಟಿಗೆ ಸಿಮೆಂಟು " ಬದಲಿಸಿ ಬಿಟ್ಟಿದೆ...
ಓದುಗರ ಪ್ರತಿಕ್ರಿಯೆಗಾಗಿ ಕಾಯುವದೂ ..
ಮುಂದಿನ ಬರಹಕ್ಕಾಗಿ ಯೋಚಿಸುವದೂ.... ಖುಷಿಯಾಗುತ್ತಿದೆ....
ಸ್ನೇಹಿತರಾದ ಶಿವೂ, ಮಲ್ಲಿಕಾರ್ಜುನ್ ಇನ್ನೂ ಹಲವರ ಪ್ರೋತ್ಸಾಹಗಳು..
ನನ್ನನ್ನು ಬಹಳ ಪ್ರೇರೇಪಿಸಿವೆ....
" ಈ ಬ್ಲಾಗಿನಿಂದ ಹೊಟ್ಟೆ ತುಂಬುವದಿಲ್ಲ ..."
ಎಂದು ನನ್ನ ಸ್ನೇಹಿತರು ಹಿತವಚನ ಕೊಡುತ್ತಿದ್ದರು......
ಅದಕ್ಕೂ ಈಗ ಉತ್ತರ ಸಿಕ್ಕಿದೆ...
ನನ್ನ ಬ್ಲಾಗ್ ಓದುಗರು ನನಗೆ ಮನೆಕಟ್ಟುವ ಗುತ್ತಿಗೆ ಕೊಟ್ಟಿದ್ದಾರೆ...
ಈ ಆರ್ಥಿಕ ಹಿಂಜರಿತದ ದಿನಗಳಲ್ಲೂ ಬ್ಲಾಗ್ ಓದುಗರು ಎರಡು ಕೆಲಸ ಕೊಟ್ಟಿದ್ದಾರೆ...
ಇದಕ್ಕೆಲ್ಲ ಕಾರಣ ನನ್ನ ಬ್ಲಾಗ್....ಈ ಬ್ಲಾಗ್ ಲೋಕ....!
ಬ್ಲಾಗ್ ಶುರುಮಾಡಿ ಇನ್ನೂ ಒಂದು ವರ್ಷವೂ ಆಗಿಲ್ಲ...
ಸಂಖ್ಯೆ ನೂರಾಗುತ್ತಿದೆ...
ಫೋಟೋಗಳನ್ನೂ ಸೇರಿಸಿ....
ಖುಷಿಯಾಗುತ್ತಿದೆ... ಭಾವುಕನಾಗಿಬಿಡುತ್ತೇನೆ....
ಮನದ ಹಿಗ್ಗು....
ಸಂತೋಷದ ಬುಗ್ಗೆಯಾಗಿದೆ...
ನನಗೆ ಪ್ರೋತ್ಸಾಹ ಕೊಡುತ್ತಿರುವ ಅಸಂಖ್ಯಾತ ಓದುಗರಿಗೆ...
ಅನಂತ... ಅನಂತ...
ತುಂಬಾ.... ತುಂಬಾ....
ರಾಶಿ... ರಾಶಿ... ಸಿಕ್ಕಾಪಟ್ಟೆ ಧನ್ಯವಾದಗಳು...
ನನ್ನ ತಪ್ಪು, ಒಪ್ಪುಗಳನ್ನು ತಿದ್ದಿ ಪ್ರತಿಕ್ರಿಯಿಸಿದ...
ನೋಡಿ ಪ್ರೋತ್ಸಾಹಿಸಿದ... ನಿಮಗೆಲ್ಲ ನಾನು ತುಂಬಾ ಆಭಾರಿಯಾಗಿದ್ದೇನೆ..
ನನಗಂತೂ ಖುಷಿಯಾಗುತ್ತದೆ...
ಇವೆಲ್ಲ ನಿಜವಾ....?
ಅಚ್ಚರಿಯಾಗುತ್ತದೆ.....
ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತದೆ....
ದಿನನಿತ್ಯ ಬರುವ ಹಲವಾರು ಈ ಮೇಲ್ ಗಳು ..,
ಲೇಖನಕ್ಕೆ ಬರುವ ಪ್ರೋತ್ಸಾಹದ ನುಡಿಗಳು...
ನನ್ನ ಪುಟ್ಟ ಪ್ರಪಂಚವನ್ನು ಬದಲಿಸಿ ಬಿಟ್ಟಿದೆ....
ಹಲವರ ಜೀವಮಾನದ ಕನಸುಗಳನ್ನು ನನಸು ಮಾಡುತ್ತಾ..
ಅವರ ಮನೆಕಟ್ಟಿ.....
ಅದರಲ್ಲಿ ಲಾಭ.., ನಷ್ಟ , ಕಷ್ಟ ಸುಖದಲ್ಲಿ ಮುಳುಗಿರುತ್ತಿದ್ದ...
ನನ್ನನ್ನು..
"ಇಟ್ಟಿಗೆ ಸಿಮೆಂಟು " ಬದಲಿಸಿ ಬಿಟ್ಟಿದೆ...
ಓದುಗರ ಪ್ರತಿಕ್ರಿಯೆಗಾಗಿ ಕಾಯುವದೂ ..
ಮುಂದಿನ ಬರಹಕ್ಕಾಗಿ ಯೋಚಿಸುವದೂ.... ಖುಷಿಯಾಗುತ್ತಿದೆ....
ಸ್ನೇಹಿತರಾದ ಶಿವೂ, ಮಲ್ಲಿಕಾರ್ಜುನ್ ಇನ್ನೂ ಹಲವರ ಪ್ರೋತ್ಸಾಹಗಳು..
ನನ್ನನ್ನು ಬಹಳ ಪ್ರೇರೇಪಿಸಿವೆ....
" ಈ ಬ್ಲಾಗಿನಿಂದ ಹೊಟ್ಟೆ ತುಂಬುವದಿಲ್ಲ ..."
ಎಂದು ನನ್ನ ಸ್ನೇಹಿತರು ಹಿತವಚನ ಕೊಡುತ್ತಿದ್ದರು......
ಅದಕ್ಕೂ ಈಗ ಉತ್ತರ ಸಿಕ್ಕಿದೆ...
ನನ್ನ ಬ್ಲಾಗ್ ಓದುಗರು ನನಗೆ ಮನೆಕಟ್ಟುವ ಗುತ್ತಿಗೆ ಕೊಟ್ಟಿದ್ದಾರೆ...
ಈ ಆರ್ಥಿಕ ಹಿಂಜರಿತದ ದಿನಗಳಲ್ಲೂ ಬ್ಲಾಗ್ ಓದುಗರು ಎರಡು ಕೆಲಸ ಕೊಟ್ಟಿದ್ದಾರೆ...
ಮನೆಕಟ್ಟುವವರು ನನ್ನ ಬಳಿ ಮಾಹಿತಿ ಪಡೆಯುತ್ತಿದ್ದಾರೆ..
ನನ್ನ ಈ ಬ್ಲಾಗಿನಿಂದ ನನಗೆ ಬಿಸಿನೆಸ್ ಸಿಕ್ಕುತ್ತಿದೆ..
ನಿಮಗೆಲ್ಲ ಹೇಗೆ ಕೃತಜ್ಞತೆ ಹೇಳಲಿ...?
ಬ್ಲಾಗ್ ಶುರುಮಾಡಿ ಇನ್ನೂ ಒಂದು ವರ್ಷವೂ ಆಗಿಲ್ಲ...
ಸಂಖ್ಯೆ ನೂರಾಗುತ್ತಿದೆ...
ಫೋಟೋಗಳನ್ನೂ ಸೇರಿಸಿ....
ಖುಷಿಯಾಗುತ್ತಿದೆ... ಭಾವುಕನಾಗಿಬಿಡುತ್ತೇನೆ....
ಮನದ ಹಿಗ್ಗು....
ಸಂತೋಷದ ಬುಗ್ಗೆಯಾಗಿದೆ...
ನನಗೆ ಪ್ರೋತ್ಸಾಹ ಕೊಡುತ್ತಿರುವ ಅಸಂಖ್ಯಾತ ಓದುಗರಿಗೆ...
ಅನಂತ... ಅನಂತ...
ತುಂಬಾ.... ತುಂಬಾ....
ರಾಶಿ... ರಾಶಿ... ಸಿಕ್ಕಾಪಟ್ಟೆ ಧನ್ಯವಾದಗಳು...
ನನ್ನ ತಪ್ಪು, ಒಪ್ಪುಗಳನ್ನು ತಿದ್ದಿ ಪ್ರತಿಕ್ರಿಯಿಸಿದ...
ನೋಡಿ ಪ್ರೋತ್ಸಾಹಿಸಿದ... ನಿಮಗೆಲ್ಲ ನಾನು ತುಂಬಾ ಆಭಾರಿಯಾಗಿದ್ದೇನೆ..
ಬ್ಲಾಗ್ ಲೋಕದ ...... ಈ ...ಆತ್ಮೀಯತೆಗೆ..
ಸ್ನೇಹ ಭಾವಕ್ಕೆ ನನ್ನದೊಂದು ಸಲಾಮ್...
ನನ್ನ ಬ್ಲಾಗ್ ಫಾಲೋ ಮಾಡಿ...
ನನ್ನನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ನಿಮಗೆಲ್ಲ ಕೃತಜ್ಞತೆ ಹೇಳಲೂ...
ನನ್ನ ಬಳಿ ಶಬ್ಧಗಳಿಲ್ಲ...
ನಿಮ್ಮಿಂದಾಗಿ ನನ್ನ ಜವಾಬ್ದಾರಿ ಹೆಚ್ಚಿದೆ...
ಅದಕ್ಕೆ ತಕ್ಕಂತೆ ನಡೆಯುವ ಪ್ರಯತ್ನ ಮಾಡುತ್ತೇನೆ...
ವರುಷದೊಳಗೆ ಸಂಖ್ಯೆ ನೂರು...
ನಿಮ್ಮ ಭಾವ ಜಗದೊಳು..
ಇನಿತು ಜಾಗವಷ್ಟೇ ಸಾಕು ಎನಗೆ.....
ಅಂಕೆ ಸಂಖ್ಯೆಗಳೆಲ್ಲವೂ...
ಅಗಣಿತ ಗಣಿತದ ಲೆಕ್ಕಾಚಾರವು...
ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದೂ ಇರಲಿ....
ಪ್ರೀತಿಯಿಂದ....
ಇಟ್ಟಿಗೆ ಸಿಮೆಂಟು....
113 comments:
ಪ್ರಿಯ ಚಿಕ್ಕಪ್ಪಾ...
ಬರಹ ನೂರಿದ್ದದ್ದು ಇನ್ನೂರಾಗಿ ಸಾವಿರವಾಗಲಿ. ಖುಷಿಯೂ...
ಪ್ರೀತಿಯಿಂದ,
-ಶಾಂತಲಾ.
ಇಟ್ಟಿಗೆ ಸಿಮೆಂಟಿನ ಪ್ರಕಾಶಣ್ಣ,
ನಮೋನಮ:....... ಹೀಗೆ ಸಾವಿರ, ಲಕ್ಷಕ್ಕೆ ಏರಲಿ ನಿಮ್ಮ ಸ್ನೇಹವೃಂದ...
ನಮ್ಮ ಪ್ರಕಾಶಣ್ಣ ಅಂತ ಹೆಮ್ಮೆ ಆಗುತ್ತಿದೆ...
ಪ್ರಕಾಶಣ್ಣ... ಜೈ ಹೋ....
ಇಟ್ಟಿಗೆ ಸಿಮೆಂಟಿನ ಪ್ರಕಾಶ್ ರಿಗೆ ನಮಸ್ಕಾರ...
ಸಾರ್ ಮನೆ ಕಟ್ಟಿಕೊಟ್ಟು, ವಾಸಿಸುವ ಜನರು, ಜೀವಮಾನ ಪೂರ್ತಿ ನಿಮ್ಮನ್ನು ನೆನಪಿಸಿಕೊಳ್ಳುವಂತಹ ಸತ್ಕಾರ್ಯ ಮಾಡುತ್ತಿದ್ದೀರಿ. ನಿಮ್ಮ ಬ್ಲಾಗಿನ ಮೂಲಕ ಇಟ್ಟಿಗೆ ಸಿಮೆಂಟಿಗೂ ಜೀವ ತುಂಬುತ್ತಿದ್ದೀರಿ....ತುಂಬಾ ಸಂತೋಷ ಸಾರ್..ನೂರು..ಸಾವಿರ..ಲಕ್ಷಾಂತರ..ಕೋಟ್ಯಾಂತರ
ವಾಗಲಿ... ನಾವು ಓದುತ್ತಲೇ ಇರುತ್ತೇವೆ... ಸದಾ ಶುಭ ಹಾರೈಸುವ......
ಶ್ಯಾಮಲ
ಪ್ರೀತಿಯ ಪ್ರಕಾಶಣ್ಣ,
ನಿನ್ನ ಬರಹಗಳು ಹೀಗೆ ಬರುತ್ತಿರಲಿ.... ನಿನ್ನ ಬರಹಗಳು ಹೀಗೆ ಆಪ್ತವಾಗಲಿ.. ನಿನ್ನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೋಯ್ಯಲಿ. ಶುಭ ಹಾರೈಕೆಗಳೊಂದಿಗೆ..
ಶರಶ್ಚಂದ್ರ ಕಲ್ಮನೆ
ಪ್ರಕಾಶಣ್ಣ,
ನನ್ನ ಕಡೆಯಿಂದಲೂ ಹಾರ್ದಿಕ ಶುಭಾಶಯಗಳು. ನಿಮ್ಮ ಸಂತೋಷ ಹೀಗೇ ಸದಾ ನಿಮ್ಮೊಂದಿಗಿರಲಿ.
ಪ್ರಕಾಶ್ ಹೆಗ್ಡೆ ಅವರೇ,
ನಿಮ್ಮದೇ ಶ್ರಮ, ಸಾಧನೆ ತಪಸ್ಸಿನ ಫಲವೇ ಅಲ್ಲವೇ ಈ ಅಭಿವೃದ್ದಿ, ಆಶಿರ್ವಚನಗಳೆಲ್ಲಾ.... !
ನೀವು ಹೀಗೆ ನಿರಂತರವಾಗಿ ಕೂಡಿ, ಕಳೆದು, ಕಟ್ಟಿ, ಬರೆಯುತ್ತಾ ಇರಬೇಕು. ಅದನ್ನೆಲ್ಲಾ ನಾವು ಸ್ವನುಭಾವಿಸಬೇಕು ಅಲ್ಲವೇ?
ಇದರಿಂದ ನಮ್ಮೆಲ್ಲರ ಸ್ನೇಹಲೋಕದ ಬುನಾದಿ ಎಂದೆಂದಿಗೂ ಬಲವಾಗಿರಲೆಂದು ಆಶಿಸುತ್ತಾ......!
ಪ್ರಕಾಶಣ್ಣ.. ಕನಸೋ ಇದು.. ನನಸೋ ಇದು... :-)
ನಿನ್ನ ಬ್ಲಾಗಲ್ಲಿ ಪ್ರತಿ ಬರಹವೂ ನಗುವಿನ ಬುಗ್ಗೆ ಉಕ್ಕಿಸುವುದರೆ ಜೊತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಅರಿವು ಮೂಡಿಸ್ತು. ಅದೇ ನಿನ್ನ ಬ್ಲಾಗಿನ ಹೆಗ್ಗಳಿಕೆ..
ಹೀಗೇ ಮುಂದುವರೆಯಲಿ ನಿನ್ನ ಬ್ಲಾಗಿನ ಅಭಿಯಾನ.. ಹೀಗೇ ಇರ್ತು ನಮ್ಮ ಅಭಿಮಾನ :-)
ಈ ಖುಶಿ-ಖುಶಿಯ ಸಂದರ್ಭದಲ್ಲಿ ನನ್ನದೂ ಒಂದಷ್ಟು ಖುಶಿಯ ಹಾರೈಕೆ. ಎಲ್ಲಾ ಚೊಲೋದಾಗ್ಲಿ ಪ್ರಕಾಶಣ್ಣ...
ಶಾಂತಲಾ....
ನೀನು ಸಿಕ್ಕಿದ್ದೂ ಕೂಡ ಈ ಬ್ಲಾಗ್ ಲೋಕದಿಂದ..
ಸರಸತ್ತೆ ಪ್ರಕರಣ ಬರೆಯುವಾಗ ನಾನು ನಿನಗೆ "ಚಿಕ್ಕಪ್ಪ" ಅಂತ ಗೊತ್ತಾದದ್ದು...
ಎಲ್ಲವೂ ಇನ್ನೂ ಹಸಿರಾಗಿದೆ...
ಎಷ್ಟೋದಿನಗಳ ಸ್ನೇಹ ಸಂಬಂಧ ಇದು ಅನಿಸುತ್ತದೆ...
ನಿನ್ನ ಬ್ಲಾಗ್ ಬಿಟ್ಟು ಬೇರೆ ಬ್ಲಾಗಿಗೆ ಪ್ರತಿಕ್ರಿಯೆ ಕೊಡದ ನಿನ್ನ ಪತಿ ಮಹಾಶಯ "ರಾಜೇಂದ್ರ" ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ಕೊಡುತ್ತಾನೆ...
ಫೋನ್ ಮಾಡಿ ತಾಸುಗಟ್ಟಲೆ ಮಾತನಾಡುತ್ತಾನೆ...
ಇನ್ನೂ ಮುಖ.. ಪರಿಚಯ ಆಗಿಯೇ ಇಲ್ಲ...
ಈ ಸ್ನೇಹ ಬಾಂಧವ್ಯ ಹೀಗೆಯೇ ಇರಲಿ...
ನನಗೂ ನಿನ್ನಂತೇ ಬರೆಯುವ ಆಸೆ...
ನಿಮ್ಮ ಪ್ರೋತ್ಸಾಹ ನನಗೆ ಉತ್ಸಾಹ ಕೊಟ್ಟಿದೆ.. ಕೊಡುತ್ತದೆ..
ನಿಮ್ಮ ಪ್ರೀತಿ ವಿಶ್ವಾಸಕ್ಕೆ ನನ್ನ ಪುಟ್ಟ ನಮನಗಳು...
ಪ್ರಕಾಶ್ ಸರ್,
ಒಂದು ವರ್ಷದೊಳಗೆ ನೂರು ಪೂರೈಸಿದ್ದೀರಿ ಇದು ಕಡಿಮೆ ಸಾಧನೆಯೇನಲ್ಲ. ನಿಮ್ಮ ಎಲ್ಲಾ ಲೇಖನಗಳನ್ನು ಓದಿದ್ದೇನೆ. ಮನಸ್ಸಿಗೆ ಬೇಸರವಾದಾಗ ಅದನ್ನು ಹೋಗಲಾಡಿಸಲು ಅನೇಕ ಮಾರ್ಗಗಳಿವೆ. ಬ್ಲಾಗ್ ಲೋಕದ ಅನೇಕರ ಬರವಣಿಗೆಗಳನ್ನು ಓದಿದರೆ ಬೇಸರ ಇಲ್ಲವಾಗುತ್ತದೆ. ಅಂಥಹ ಬ್ಲಾಗುಗಳಲ್ಲಿ ನಿಮ್ಮದು ನನಗೆ ಇಷ್ಟವಾಗುತ್ತದೆ. ಖಂಡಿತ ಖುಷಿಕೊಡುತ್ತದೆ....
ನಿಮ್ಮ ಅಭಿಯಾನ ಮುಂದುವರಿಯಲಿ...ಸಾವಿರ...ಸಾವಿರಕ್ಕೆ...
ಅಭಿನಂದನೆಗಳು.
ಸವಿಗನಸು...(ಮಹೇಶ್)
ಬ್ಲಾಗ್ ಲೋಕ ಕೊಟ್ಟ ಮತ್ತೊಂದು ಆತ್ಮೀಯ ಸಹೋದರ ನೀವು...
ನನಗೆ ಬೋರ್ ಆದಗಲೆಲ್ಲ ಚುಟುಕು ಹಾರಿಸಿ ನಗಿಸುವ ನಿಮಗೆ
ಅನಂತ ವಂದನೆಗಳು...
ಯಾವ ಊರು.. ಯಾವ ನೆಲ ಏನೂ ಗೊತ್ತಿಲ್ಲ..
ಇನ್ನೂ ಮುಖಪರಿಚಯವೂ ಆಗಿಲ್ಲ...
ಗಂಟೆಗಟ್ಟಲೆ ಮಾತಾಡುತ್ತೇವೆ...
ಬ್ಲಾಗ್ ಲೋಕದ ಹಿತಕರವಾತಾವರಣಕ್ಕೆ..
ಸ್ನೇಹ ಭಾವಕ್ಕೆ ಮತ್ತೊಮ್ಮೆ ನಮಸ್ಕಾರಗಳು...
ಮಹೇಶ್ ನಿಮ್ಮ ಉತ್ಸಾಹದ ಪ್ರೋತ್ಸಾಹ..
ನಮ್ಮ ಸ್ನೇಹ ಸಂಬಂಧ ಯಾವಾಗಲೂ ಹೀಗೆಯೇ ಇರಲಿ....
ಹೆಗಡೇಜಿ ಅಭಿನಂದನೆಗಳು...ಸೆಂಚುರಿ ಸಣ್ಣವಿಷಯವಲ್ಲ ನಿಮ್ಮ ಅಭಿಮಾನಿಗಳಲ್ಲಿ ನಾನೂ ಒಬ್ಬ ಜೀವನ ಅಲ್ಲಿ ಸಿಗೋ ವ್ಯಕ್ತಿ
ಗಳ ಬಗ್ಗೆ ನಿಮ್ಮ ಅವಲೋಕನ ಛಲೋ ಇರ್ತದ. ನಿಮ್ಮ ಬರವಣಿಗೆ ಹೀಗೆ ಬೆಳೆಯಲಿ ನಿಮ್ಮ ಪುಸ್ತಕ ಬಿಡುಗಡೆ ದಿನ ಕರ್ಯೂದು
ಮರೀಬ್ಯಾಡ್ರೀ....!
ಅಂತರಂಗದ ಮಾತುಗಳು (ಶ್ಯಾಮಲ)
ಮನೆಕಟ್ಟುವದು ಪುಣ್ಯದ.. ಭಾವನಾತ್ಮಕ ಕೆಲಸವಾದರೂ..
ಅಲ್ಲಿ ದಿನವಿಡಿ ಲೆಕ್ಕಾಚಾರವೇ ಇರುತ್ತದೆ..
ಚೊಕ್ಕ ಕೆಲಸ ಮಾಡಿ..
ಒಪ್ಪುವ ಮನೆಕಟ್ಟಿ..
ಲೆಕ್ಕಾಚಾರದ ವೇಳೆ ಬಲು ಕಷ್ಟ...
ಎಲ್ಲರೂ ಒಂದೇ ರೀತಿ ಇರುವದಿಲ್ಲ..
ನನಗೆ ಸಿಕ್ಕಿದ್ದು ಒಳ್ಳೆಯವರೇ ಜಾಸ್ತಿ...
ನಿಮ್ಮ ಅಂತರಂಗದ ಮಾತುಗಳಿಗೆ ಧನ್ಯವಾದಗಳು..
ಪ್ರೋತ್ಸಾಹ ಹೀಗೆಯೇ ಇರಲಿ...
ನಿಮ್ಮ ಮನದ ಮಾತು ಓದಿದೆ. ಚೆನ್ನಾಗಿದೆ. ಅಕ್ಷರಲೋಕದ ನಿಮ್ಮ ಬ೦ಧ-ಸ೦ಬ೦ಧ, ಇಟ್ಟಿಗೆ ಸಿಮೆ೦ಟಿನ೦ತೆ ಗಟ್ಟಿಯಾಗಲಿ, ಚಿತ್ರ-ಲೇಖನಗಳ ಸ೦ಖ್ಯೆ ನೂರು ದಾಟುತ್ತಿರುವ ಸ೦ದರ್ಭದಲ್ಲಿ ಶುಭಕಾಮನೆಗಳು. ನೂರು ಸಾವಿರವಾಗಲಿ, ಎ೦ದು ಹಾರೈಸುವೆ. ನಿಮ್ಮ ಪುಸ್ತಕದ ನಿರೀಕ್ಷೆಯಲ್ಲಿದ್ದೇನೆ.
ಪ್ರಕಾಶಣ್ಣ,
ನಿಮ್ಮ ಬರಹ ಇನ್ನು ಹೆಚ್ಚಲಿ, ಹೆಚ್ಚು ಹೆಚ್ಚು ಪುಸ್ತಕಗಳು ಪ್ರಕಟವಾಗಲಿ,
ಹೀಗೆಯೇ ಬರೆಯುತ್ತಿರಿ
ವಾರ್ಷಿಕೋತ್ಸವದ ಶುಭಾಶಯಗಳು ಪ್ರಕಾಶಣ್ಣ.ನೀವೆಂದಂತೆ ಬ್ಲಾಗ್ ನಮಗೆಲ್ಲ ಹೊಸದೊಂದು ಐಡೆಂಟಿಟಿ ಕೊಡುತ್ತದೆ.ನಿಮ್ಮ ಈ ಪ್ರಯಾಣ ನಿರಂತರವಾಗಿರಲಿ. ಹೊಸ ಹೊಸ ವಿಚಾರಧಾರೆ ಹೀಗೆ ಹರಿಯುತ್ತಿರಲಿ ಎಂಬುದೇ ನಮ್ಮ ಹಾರೈಕೆ.
ಇಟ್ಟಿಗೆ ಸಿಮೆಂಟಿನ ತುಂಬ ಜೀವ ತುಂಬಿ ಬರೆಯುವ ನಿಮಗೆ ಅಭಿನಂದನೆಗಳು. ಇನ್ನೂ ನೂರಲ್ಲ, ಸಾವಿರ ಬರಲಿ.
- ಕೇಶವ
ಭಾವಯಾನ ಶರತ್.....
ಈ ಬ್ಲಾಗ್ ನನ್ನ ಪುಟ್ಟ ಪ್ರಪಂಚವನ್ನು ಬದಲಿಸಿ ಬಿಟ್ಟಿದೆ...
ಹೆಚ್ಚಿನದಾಗಿ ನಾನು ಮನೆಯಲ್ಲಿ ಖಾಲಿ ಇರುವ ಸಮಯ ನೆಟ್ ಮುಂದೆ ಕಳೆಯುತ್ತೇನೆ..
ಮೊದಲು ಟಿವಿ ಮುಂದೆ ಅಥವಾ ಕಥೆ, ಕಾದಂಬರಿ ಓದುತ್ತಿದ್ದೆ...
ಈಗ ಓದುವದು ಕಡಿಮೆಯಾಗಿ ಬಿಟ್ಟಿದೆ...
ಬೀದಿಯಲ್ಲಿ ನಿಂತು ನೋಡುವವನಿಗೆ ವಿಷಯದ ಕೊರತೆ ಇರುವದಿಲ್ಲ ಅಲ್ಲವಾ...?
ಜನ ನನ್ನನ್ನು ಗುರುತಿಸುತ್ತಿರುವದು...
ಒಂದು ದೊಡ್ಡ ಜವಾಬ್ದಾರಿ ಅಂತ ಅಂದುಕೊಂಡಿದ್ದೇನೆ...
ಈಗಂತೂ ಸಂಖ್ಯೆ ನೂರಾಗಿದೆ...
ನೋಡೋಣ ಮುಂದೆ ಏನಾಗುತ್ತದೆಂದು...
ನಿಮ್ಮೆಲ್ಲ ಪ್ರತಿಕ್ರಿಯೆ, ಪ್ರೋತ್ಸಾಹಗಳು ಹೀಗೆಯೇ ಇರಲಿ...
ಧನ್ಯವಾದಗಳು ಶರತ್...
ಪ್ರಕಾಶ್
ನೀವು ನಿಮ್ಮ ಬ್ಲೋಗ್ ಮೂಲಕ ನೇ ನಂಗೆ ಪರಿಚಯ ಆಗಿದ್ದು. ಅಂದ್ರೆ ನಿಮ್ಮನ್ನು ನಾನು ತಿಳಿದದ್ದು ನಿಮ್ಮ ಬರಹದಿಂದ. ಮನ ಮುಟ್ಟುವಂತೆ, ಸ್ವಾರಸ್ಯಕರವಾಗಿ ಬರೆಯೋಡೊಂದೇ ಅಲ್ಲದೇ, ಇತರರಿಗೆ ಪ್ರೋತ್ಸಾಹವನ್ನೂ ನೀಡುವ ನಿಮ್ಮ ಹೃದಯವಂತಿಕೆ ನಂಗೆ ತುಂಬಾ ಇಷ್ಟವಾದ ವಿಷಯ. ಹೀಗೆ ಬರೆಯುತ್ತಿರಿ..ಇನ್ನೂ ಮೇಲಕ್ಕೆ ಏರುತ್ತೀರಿ ಎಂಬ "ಆಶ"ಯದೊಡನೆ..........
ಪ್ರಕಾಶ,
ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಬ್ಲಾಗ್ ಹಾಗು ನೀವು ಇದೇ ರೀತಿ ಉತ್ಕರ್ಷ ಪಡೆಯಲಿ ಎಂದು ಹಾರೈಸುವೆ.
ಪ್ರಕಾಶಣ್ಣ....
ನಮ್ಮೆಲ್ಲರ ಇಷ್ಟದ ಬ್ಲಾಗ್ ನೂರರ ಗಡಿ ದಾಟಿತು ಎ೦ದರೆ ತು೦ಬಾ ಖುಷಿ ಆಗುತ್ತಿದೆ.... ನೂರು ಬರಹಗಳನ್ನು ಓದಿದ್ದೇವಾ!
ಎಲ್ಲವೂ ಒ೦ದಕ್ಕಿ೦ತ ಒ೦ದು ಚೆನ್ನಾಗಿತ್ತು. ಹೀಗೆ ಬರೆಯುತ್ತಿರಿ ಪ್ರಕಾಶಣ್ಣ....
ನೂರರ ಸ೦ಭ್ರಮದಲ್ಲಿ ಮೆಲುಕು ಹಾಕಿದ ಘಟನೆಗಳು ಮನತಟ್ಟಿತು... ಇದೇ ರೀತಿ "ಇಟ್ಟಿಗೆ ಸಿಮೆ೦ಟಿ" ಯಶಸ್ಸಿನ ತುದಿಗೇರಲಿ :)
hi prakashanna. sushrutannana book release function li ninna bheti maadiddi.nenpidda?:) heege barita iru.nanondu sanna haaraike ninge:)
ಪ್ರಕಾಶ್ ಸರ್,
ನೂರರ ಸಂಭ್ರಮದ ಸಡಗರದಲ್ಲಿ ನಾನೂ ನಿಮ್ಮೊಂದಿಗೆ ಭಾಗಿಯಾಗುವೆ. ನೂರು, ಇನ್ನೂರು, ಐನೂರು, ಸಾವಿರವಾಗಲಿ ಎಂದು ಹಾರೈಸುವೆ. ಅಂದಹಾಗೆ ನಿಮ್ಮ ಪುಸ್ತಕ ಬಿಡುಗಡೆಗೆ ಶುಭಹಾರೈಕೆಗಳು.
ಹೆಗ್ಡೆಯವರೇ,
ನಿಮಗೆ ಅಭಿನಂದನೆಗಳು. ನೂರು ಸಾವಿರವಾಗಲಿ.
ನಿಮ್ಮ ಬರಹಗಳಲ್ಲಿರುವ ಹಾಸ್ಯ, ಬರೆಯುವ ಶೈಲಿ, ಅದರಲ್ಲಿರುವ ವಿಚಾರಗಳು ಸಾಮಾನ್ಯ ಓದುಗನಿಗೂ ಇಷ್ಟವಾಗುತ್ತದೆ.
ನಿಮ್ಮ ಬ್ಲಾಗಿನಿಂದ ಹೊಟ್ಟೆ ತುಂಬುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಮನಸ್ಸಂತೂ ಖಂಡಿತ ತುಂಬುತ್ತದೆ.
ಸೆಂಚುರಿ ಬಾರಿಸಿದ್ದಕ್ಕೆ ಅಭಿನಂದನೆಗಳು.
ಪ್ರಕಾಶ್ ಅವರೇ,
ನಿಮಗೆ ಹಾರ್ದಿಕ ಶುಭಾಶಯಗಳು..
ನಿಮ್ಮ ಒಳ್ಳೆ ಒಳ್ಳೆ ಲೇಖನಗಳೇ ನಮ್ಮನ್ನು ಓದುವಂತೆ ಮಾಡಿವೆ. ನಮಗೂ ಬರೆಯುವ ಹುಮ್ಮಸು ತರಿಸಿವೆ.
ಹೀಗೆ ಸದಾಕಾಲ ನಿಮ್ಮ ಬ್ಲಾಗ್ ಮಿಂಚುತ್ತಿರಲಿ ಎಂದು ಹಾರೈಸುತ್ತಿದ್ದೇನೆ...
Congratulations Prakashanna !
ಪ್ರಕಾಶಣ್ಣ,
ನಿನ್ನಿಂದ ಇನ್ನು ಉತ್ತಮ ಬರಹಗಳನ್ನು ನಿರೀಕ್ಷಿಸುತ್ತೇವೆ.
ಇಂತಿ ವಿಶ್ವಾಸಿ,
ಸುಧೀಂದ್ರ
ಆತ್ಮೀಯ ಪ್ರಕಾಶರೆ,
ಇಟ್ಟಿ ಸಿಮೆಂಟ್ ಮಧ್ಯೆ ನೀವೊಬ್ರೇ ಇಲ್ಲ, ನಾವೂ ಇದ್ದೀವಿ.
ಅಂತರ್ಜಾಲದಲ್ಲಿ ಕನ್ನಡ ಬಳಕೆಗೆ ನಿಮ್ಮ ಬ್ಲಾಗ್ನಿಂದನೂ ಸಾಕಷ್ಟು ಕಾಣಿಕೆ ನೀಡ್ತಾ ಇದ್ದೀರಾ.
ಪ್ರತಿಕ್ರಿಯೆಗಳು ನಿಮಗೆ ಪ್ರೋತ್ಸಾಹ ಅನ್ಸಿದ್ರೆ, ಓದುಗರಿಗೆ ನಿಮ್ಮ ಬರಹವೇ ಒಂದು ಕುತೂಹಲ ಅನ್ನೋದು ನನ್ನ ಅಭಿಪ್ರಾಯ.
ನಿಮ್ಮ ಬ್ಲಾಗ್ ಓದೋವಾಗ, ನಮಿಗೆ ಶುರು ಮಾಡಿದ್ದಷ್ಟೇ ಗೊತ್ತಾಗಿರುತ್ತೆ, ಮುಗ್ಸಿದ ಮೇಲೆ ಅಯ್ಯೋ ಮುಗಿತಲ್ಲ ಅಂತ ಇನ್ನೊಂದ್ಸಾರಿ ಓದಬೇಕು ಅನ್ಸುತ್ತೆ.
ಪ್ರಕಾಶ್ ಸರ್,
ನಿಮ್ಮ ಲೇಖನ ಗಳ ಸರಮಾಲೆ, ಬರಿ ನೂರಲ್ಲ,,, ಸಿಮೆಂಟು ಇಟ್ಟಿಗೆ ಜೋಡಿಸಿ ಮನೆ ಕಟ್ಟೋ ಹಾಗೆ,,, ಇನ್ನು ಹೆಚ್ಚು ಹೆಚ್ಚು ಬರಲಿ...
ಒಳ್ಳೆ ಮಜಾ ಇರುತ್ತೆ, ನಿಮ್ಮ ಪ್ರತಿಯೊಂದು ಲೇಖನಗಳನ್ನು ಓದಬೇಕಾದರೆ...
congrtulations...!
ಪ್ರಕಾಶಣ್ಣ,
ಶುಭಾಶಯಗಳು, ಶುಭವಾಗಲಿ ನಿಮಗೆ
ಪ್ರಕಾಶಣ್ಣ..,
ಶತಕ ಭಾರಿಸಿದ್ದಕ್ಕೆ ಅಭಿನಂದನೆಗಳು. ಶತಕ ಸಹಸ್ರವಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆ .........
ಶರತ್....
ತೀರಾ ಸಾಮಾನ್ಯನಾದ ನನಗೆ ಈ ಥರಹದ ರಿಕಗ್ನಿಷನ್ ಖುಷಿ ಕೊಟ್ಟಿದೆ...
ತಲೆಗೆ ಏರಬಾರದು ಅಷ್ಟೆ...
ನಿಮ್ಮೆಲ್ಲರ ಪ್ರೋತ್ಸಾಹ ಹೀಗೆಯೇ ಇರಲಿ...
ಕೆಲಸದ ಒತ್ತಡ ಇದ್ದಷ್ಟೂ ಬರೆಯಲು ಉತ್ಸಾಹ...
ಈಗಂತೂ ಕೆಲಸವೂ ಶುರುವಾಗಿದೆ...
ಗೋವಿನ ಮದುವೆಯ ಬೆಳವಣಿಗೆಯ ಬಗೆಗೆ ಬರೆಯಲೇ ಬೇಕಾದ ಸ್ಥಿತಿ ಬಂದು ಬಿಟ್ಟಿದೆ...
ಬರೆಯುತ್ತೇನೆ...
ಪ್ರೋತ್ಸಾಹ ಹೀಗೆಯೇ ಇರಲಿ...
ಪ್ರೀತಿಯ ಪ್ರಕಾಶ್ ಸರ್,
ನಿಮ್ಮ ಮೇಲೆ ನಾವೆಲ್ಲರೂ ಅರಮನೆ ಕಟ್ಟುವ ಜವಾಬ್ದಾರಿ ಹೊರಸುತ್ತಿದ್ದೇವೆ. ಹೀಗೆ ಚೆನ್ನಾಗಿ ಬರೆಯುತ್ತಿರಿ. ಇನ್ನಷ್ಟು ಲೇಖನಗಳು ಬರಲಿ ಎಂದು ಆಶಿಸೋಣ.
Prakashanna ...
congrats!!!...
all the best ...
ಇನ್ನೊಂದು ಮುಖ್ಯವಾದ ವಿಷಯ ನನಗೆ ಬರೆಯಲು ಪ್ರೇರಣೆ ಸಿಕ್ಕಿದ್ದೇ ನಿಮ್ಮ ಇಟ್ಟಿಗೆ ಸಿಮೆಂಟ್ ಮತ್ತು ರಸಾಯನ ಬ್ಲಾಗ್ ಗಳಿಂದ.
ಶುಭಾಶಯ ಪ್ರಕಾಶಣ್ಣಾ.. ಈ ನಿನ್ನ ಖುಷಿ ಇನ್ನೂ ಜಾಸ್ತಿಯಾಗ್ಲಿ..
ಶುಭಾಷಯಗಳು ನಿಮ್ಮ ಅಕ್ಷರ ಯಾನಕ್ಕೆ. :)
ಪುಸ್ತಕದ ನಿರೀಕ್ಷೆಯಲ್ಲಿ...
ಬಾಲು.
Preetiya Prakashanna,abhinandanegalu..nimma ondu pustakavalla nooraru pustakagalu prakataneyagali,mattomme shubhashayagalu................
ಜೈ ಹೋ!
ಪ್ರಕಾಶ್ ಸರ್, ಸಾರೀ... ಇಟ್ಟಿಗೆ ಸಿಮೆಂಟ್ ಸಾರ್,
ನಿಮ್ಮ ಲೇಖನಗಳು ಅಷ್ಟೊಂದು ಜನರನ್ನ ಆಕರ್ಷಿಸಿದ್ದರಲ್ಲಿ ವಿಶೇಷವೇನೂ ಇಲ್ಲಾ!!!! ಯಾಕಂದ್ರೆ ನಿಮ್ಮ ಪ್ರತಿ ಬರಹವನ್ನೂ ೨-೩ ಬಾರಿ ಓದುವವರು ನನ್ನಂಥವರೆಷ್ಟೋ... ಅಷ್ಟೊಂದು ಚೆನ್ನಾಗಿರೋ ನಿಮ್ಮ ಬರಹಗಳನ್ನು ಅದೆಷ್ಟೇ ಬ್ಯುಸಿ ಯಾಗಿರುವವರೂ ಖಂಡಿತ ಒಂದು ಬಾರಿಯಾದರೂ ಓದುತ್ತಾರೆ...ನಿಮ್ಮ ಖುಷಿ ಇಮ್ಮಡಿಯಾಗಲಿ... ಶುಭ ಹಾರೈಕೆಗಳು...
ಅಭಿನಂದನೆಗಳು:)
ಶುಭ ಹಾರೈಕೆಗಳು :)
ಪ್ರಕಾಶ್ ಸರ್,
ನೂರು ನಿಮ್ಮ ಸಾಮರ್ಥ್ಯದ ಮುಂದೆ ನಗಣ್ಯ. ಸಾವಿರ ಸಾವಿರ ಲೇಖನಮಾಲೆಗಳು ನಿಮ್ಮ ಬತ್ತಳಿಕೆಯಲ್ಲಿವೆ. ನಮಗೆಲ್ಲಾ ಹೇಳಿ ನಗಿಸಿದ, ಚಿಂತಿಸುವಂತೆ ಮಾಡಿದ ಎಷ್ಟೋ ಸಂಗತಿಗಳಿನ್ನೂ ನೀವು ಬರೆಯಬೇಕಿದೆ. ಬ್ಲಾಗಿಂದಾಗಿ ಬದುಕನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ.ನಿಮ್ಮ ಲೇಖನವನ್ನು ಓದಿ ನಾನಿಲ್ಲಿ ನಮ್ಮೂರಿನಲ್ಲಿ ತುಂಬಾ ಜನಕ್ಕೆ ಹೇಳುವುದರಿಂದಾಗಿ ಬ್ಲಾಗ್ ಓದದವರೂ ಸಾಕಷ್ಟು ಮಂದಿ ನಿಮ್ಮ ಅಭಿಮಾನಿಗಳಿದ್ದಾರೆ. ನಿಮ್ಮ ಪುಸ್ತಕ ಬಿಡುಗಡೆಯಾಗಿ ಇನ್ನಷ್ಟು ಅಗಾಧ ಮಂದಿ ನಿಮ್ಮನ್ನು ಇಷ್ಟಪಡುತ್ತಾರೆ. ಅಭಿನಂದನೆಗಳು. ಶುಭಾಶಯಗಳು.
ಪ್ರಕಾಶಣ್ಣ ನಿಮ್ಮ ಈ ಆನಂದ ಮತ್ತು ಬರಹಗಳು ದುಪಟ್ಟ ಆಗಲಿ ಎಂದು ಆಶಿಸುವೆ..
ಅಭಿನಂದನೆಗಳು :) ಇಟ್ಟಿಗೆ ಸಿಮೆಂಟಿನ ನಡುವೆ ಸೃಜನಶೀಲತೆ ಇರುವುದರಿಂದಲೇ ನಮಗೆಲ್ಲ ಇಷ್ಟವಾಗಿರುವುದು.. ಇನ್ನಷ್ಟು ಬರೆಯಿರಿ..
ಪ್ರಕಾಶಣ್ಣ,
ಶತಕದ ಗಡಿ ದಾಟಿದ್ದೀರಿ!!! ಹೀಗೆ ಸಾಗುತಲಿರಲಿ ಬರಹ ಪ್ರವಾಹ... ಓದುವುದಕ್ಕೆ ಇದ್ದೇ ಇರ್ತೀವಿ ನಾವುಗಳು. ಎಲ್ಲಾ ಒಳ್ಳೆಯದಾಗಲಿ.
ಪ್ರಕಾಶಣ್ಣ.......
ಬ್ಲಾಗ್ ಮೂಲಕ ಒಳ್ಳೊಳ್ಳೆಯ ಬರಹ ನೀಡಿದ್ದಕ್ಕಾಗಿ ನಾವು ನಿಮಗೆ ಧನ್ಯವಾದ ಹೇಳಬೇಕು.
ತೇಜಸ್ವಿನಿಯವರೆ...
ನಿಮ್ಮ ಜೀವನ ಬದುಕುವ ರೀತಿ ನಮಗೆಲ್ಲ ಸ್ಪೂರ್ತಿಯಾಗಿದೆ...
ನಿಮ್ಮ ಬರವಣಿಗೆಗಳು ತುಂಬಾ ಚೆನ್ನಾಗಿರುತ್ತದೆ..
ಎಷ್ಟೋ ಲೇಖನಗಳು ನಿಮ್ಮ ಬರವಣಿಗೆಯಿಂದ ಸ್ಪೂರ್ತಿ ಪಡೆದಿದ್ದೇನೆ...
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು..
ಎಸೆಸ್ಕೆಯವರೆ...
ನಾನು ಬರೆಯುತ್ತಿದ್ದರೂ ಅದು ನನ್ನ ಕಾಲೇಜುದಿನಗಳಲ್ಲಿ..
ಅದು ಹೆಚ್ಚಿಗೆ ಬರೆದಿಲ್ಲ..
ನಂತರ ಪಿಯುಸಿಯಲ್ಲಿ ಫೇಲ್ ಆಗಿದ್ದು ನನ್ನ ಜೀವನ ಬದಲಿಸಿಬಿಟ್ಟಿತ್ತು...
ನನ್ನ ಓದು.. ಕೆಲಸ.. ವ್ಯವಹಾರದಲ್ಲಿ ಮುಳುಗಿ ಹೋಗಿದ್ದೆ...
ಈ ಬ್ಲಾಗ್ ಲೋಕ ಮತ್ತೆ ನನ್ನನ್ನು ಇಲ್ಲಿಗೆ ಕರೆತಂದಿದೆ...
ತುಂಬಾ ತುಂಬಾ ಥ್ಯಾಂಕ್ಸ್..
ನೀವು ಬರೆವ ಒಂದು ಸಾಲು ನನಗೆ ಮತ್ತಷ್ಟು ಬರೆಯಲು ಉತ್ಸಾಹ ತರುತ್ತದೆ..
ಧನ್ಯವಾದಗಳು...
NANDU LATE AAGI LATEST AAGI ONDU SHUBHASHAYA. PUSTAKAKKE KAYTHA IDDI.. CHOLO AAGLI ELLA.
ಪ್ರಕಾಶಣ್ಣ,
ಅಭಿನಂದನೆಗಳು. ನಿಮ್ಮ ಬರಹಗಳು ನೂರನ್ನೂ ದಾಟಿ ಸಾವಿರವಾಗಲಿ. ಉತ್ತಮ ಭಾಷೆ ಮತ್ತು ಉತ್ತಮ ಚಿತ್ರಗಳಿಂದ ಬರಹದ ಬ್ಲಾಗ್ ಮನೆಯನ್ನು ಕಟ್ಟಿದ್ದೀರಿ. ಮತ್ತಷ್ಟು ಮಹಲುಗಳನ್ನು ಹೊಂದಲಿ ಎಂದು ಆಶಿಸುತ್ತಾ...
ಚಂದ್ರು.
ಹರೀಷ್...
ತುಂಬಾ ಅಪರೂಪ ಆಗಿಬಿಟ್ಟಿದ್ದೀಯಾ...
ಬ್ಲಾಗ್ ಶುರು ಮಾಡಿದ ದಿನಗಳಲ್ಲಿ ನಿನ್ನ ಪ್ರತಿಕ್ರಿಯೆ ತಪ್ಪದೇ ಇರ್ತಿತ್ತು...
ಒಂದು ವರ್ಷದ ಹಿಂದೆ ಈಮೇಲ್ ಕೂಡ ಇರಲಿಲ್ಲ...
ಶಿವು ಮನೆಗೆ ಅಕಸ್ಮಾತ್ ಹೋಗಿದ್ದು..
ಅವರ ಬಳಿ ಒಂದು ಕೆಲಸ ಇತ್ತು..
ಅದು ಜಲ್ದಿ ಮುಗಿದು ಹೋಯಿತು..
ಆಗ ಶಿವು ಒಂದು ಜೀಮೇಲ್ ಅಕೌಂಟ್ ಓಪನ್ ಮಾಡಿ..
ಅವರೇ ಪಾಸ್ವರ್ಡ್ ಕೊಟ್ಟು (ಅದನ್ನು ಒಂದು ಪೇಪರ್ನಲ್ಲಿ ಬರೆದು ಕೊಟ್ಟಿದ್ದರು. ಅದು ಇನ್ನೂ ಇದೆ)
ಬ್ಲಾಗ್ ಓಪನ್ ಮಾಡಿ, ನಾವಿಬ್ಬರೂ "ಇಟ್ಟಿಗೆ ಸಿಮೆಂಟು " ಅಂತ ನಾಮಕರಣ ಮಾಡಿದ್ದು...
ಮನೆಗೆ ಬಂದು ಒಂದು ಫೋಟೊ ಹಾಕಿದೆ..
ಹಾಗೆ ಮೊದಲು ಬರೆದದ್ದು "ನೀವುಂಟು ನಮ್ಮ ಮಿಸೆಸ್ ಉಂಟು" ಲೇಖನ...
ಎಲ್ಲ ನಿನ್ನೆ ಮೊನ್ನೆ ನಡೆದಂತಿದೆ....
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು...
Hi annayya..
sakat aagi iddu...
ಕಂಗ್ರಾಟ್ಸ್ !. ಬ್ಲಾಗ್ ಓದಲಿಕ್ಕೇ ಬಹಳ ಸೊಗಸು. ನಿಮ್ಮ ಪುಸ್ತಕಕ್ಕಾಗಿ ಕಾಯುತ್ತಿದ್ದೇವೆ.
ಪೂರ್ಣಿಮಾ....
ನಿಮ್ಮೆಲ್ಲರ ಶುಭ ಹಾರೈಕೆ ಯಾವಾಗಲೂ ನನ್ನ ಮೇಲಿರಲಿ..
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು..
ಶಿವು ಸರ್...
ನಿಮ್ಮೆಲ್ಲರ ಸಹಕಾರ ಇಲ್ಲದಿದ್ದರೆ ಇವೆಲ್ಲ ಅಸಾಧ್ಯವಾಗುತ್ತಿತ್ತು..
ನೀವಂತೂ ನನಗೆ ಬ್ಲಾಗ್ ಓಪನ್ ಮಾಡಿಕೊಟ್ಟಿದ್ದೀರಿ...
ಪ್ರತಿಯೊಂದು ಲೇಖನಕ್ಕೂ ಬೆನ್ನು ತಟ್ಟಿ..
ತಪ್ಪು , ಒಪ್ಪುಗಳನ್ನು ತಿಳಿಸಿ ಹೇಳಿದ್ದೀರಿ..
ನಿಮಗೆಲ್ಲ ನಾನು ಚಿರಋಣಿ...
ದೇಸಾಯಿಯವರೆ...
ಪುಸ್ತಕದ ಬಿಡುಗಡೆಗೆ ನಿಮ್ಮನ್ನೆಲ್ಲ ಖಂಡಿತ ಕರೆಯುತ್ತೇವೆ...
ನನ್ನ ಪುಸ್ತಕದ ಸಂಗಡ...
ಗೆಳೆಯ "ಶಿವು" ಅವರ "ವೆಂಡರ್ ಕಣ್ಣು...
ಮತ್ತು ಮತ್ತೊಬ್ಬ ಆತ್ಮೀಯ ಗೆಳೆಯ
ಧಾರವಾಡದ "ದಿವಾಕರ"ನ "ಸಂತೆ ಮತ್ತು ಉದ್ಧಾರ"
ದಿವಾಕರನದು ನಾಟಕ..
ಖಂಡಿತ ಕರೆಯುತ್ತೇನೆ ಬರಲೇಬೇಕು...
ನನ್ನ ಬ್ಲಾಗಿಗೆ ಬಂದು ಯಾವಾಗಲೂ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ಪರಾಂಜಪೆಯವರೆ...
ತೀರಾ ಸಾಮಾನ್ಯನಾದ ನನಗೆ ...
ಇವೆಲ್ಲ ಸಣ್ಣ ಸಂಗತಿಗಳಾದರೂ ಬಹಳ ಖುಷಿ ಕೊಡುತ್ತದೆ...
ಬರೆದ ಲೇಖನಗಳಿಗೆ ನಿಮ್ಮ ಪ್ರತಿಕ್ರಿಯೆ ಓದಿ ಖುಷಿ ಪಡುತ್ತೇನೆ...
ಕೆಲವು ಸಾರಿ ಕೆಲಸದ ಒತ್ತಡದಿಂದ ಎಲ್ಲರಿಗೂ ಉತ್ತರಿಸಲು ಸಾಧ್ಯವಾಗದಿರಬಹುದು...
ನಿಮ್ಮ ನಿರಂತರ ಪ್ರೋತ್ಸಾಹವೇ ನನಗೆ ಬರೆಯಲು ಪ್ರೇರೇಪಿಸಿದೆ...
ಅನಂತಾನಂತ ಧನ್ಯವಾದಗಳು...
ಡಾ. ಗುರುಮೂರ್ತಿಯವರೆ... (ಸಾಗರದಾಚೆಯ ಇಂಚರ)
ಪ್ರತಿಕ್ರಿಯೆ ಹೆಚ್ಚು ಹೆಚ್ಚು ಬಂದಷ್ಟು ನನಗೆ ಖುಷಿಯ ಜೊತೆಗೆ ಸ್ವಲ್ಪ ಆತಂಕ..
ಇನ್ನೂ ಚೆನ್ನಾಗಿ ಬರೆಯ ಬೇಕೆಂಬ ಒತ್ತಡ..
ಒತ್ತಡ ಅನ್ನುವದಕ್ಕಿಂತ ಅದೊಂದು ಗುರುತರ ಜವಾಬ್ದಾರಿ..
ಈ ವಿಷಯದಲ್ಲಿ ಆದಷ್ಟೂ ನ್ಯಾಯವಾಗಿರಲು ಪ್ರಯತ್ನ ಮಾಡಿದ್ದೇನೆ...
ನಿಮ್ಮೆಲ್ಲರ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ..
ಧನ್ಯವಾದಗಳು...
ಸುಮಾರವರೆ...
ಅಂದಿನ ಸಮಾರಂಭದಲ್ಲಿ ನಿಮ್ಮ ಯಜಮಾನರಾದ "ಸುಧಾಕಿರಣ್" ನನ್ನನ್ನು ಗುರುತು ಹಿಡಿದು ಮಾತನಾಡಿಸಿದಾಗ
ನನಗೆ ಬಹಳ ಖುಷಿಯಾಯಿತು...
ಬಹಳ ಸಂಭ್ರಮಪಟ್ಟಿದ್ದೆ...
ಎಲ್ಲೋ ಅನಾಮಿಕನಾಗಿದ್ದ ನನಗೆ ಈ ಬ್ಲಾಗ್ ಲೋಕ ಹೊಸದೊಂದು
ಐಡೆಂಟಿಟಿ ತಂದು ಕೊಟ್ಟಿದೆ..
ಖುಷಿಯಾಗುತ್ತದೆ...
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಹೃದಯಪೂರ್ವಕ ಧನ್ಯವಾದಗಳು...
ಡಾ. ಕೇಶವ ಕುಲಕರ್ಣಿಯವರೆ...
ನಾನು ನಿಮ್ಮ ತೊದಲು ಮಾತಿನ "ನೀಲುವಿನ ಅಭಿಮಾನಿ...
ನಿಮ್ಮ ಬ್ಲಾಗಿನ ಖಾಯಮ್ ಓದುಗ ನಾನು...
ಹಾಡುಗಳಲ್ಲಿನ ರಾಗಗಳು ... ಆಹಾಡುಗಳ ಪರಿಚಯ
ನನಗೆ ತುಂಬಾ ಇಷ್ಟ..
ನಿಮ್ಮ ಪ್ರೋತ್ಸಾಹದ ನುಡಿಗಳು ತುಂಬಾ ಖುಷಿಯಾಗುತ್ತದೆ...
ಬರುತ್ತಾ ಇರಿ..
ಹೃದಯ ಪೂರ್ವಕ ಧನ್ಯವಾದಗಳು...
ಸುಮನಾರವರೆ...
ಮೂಲತಹ ಬರಹಗಾರನಲ್ಲದ ನನಗೆ ನಿಮ್ಮ ಮೆಚ್ಚುಗೆಗಳು
ನನ್ನ ಜವಾಬ್ದಾರಿ ಹೆಚ್ಚಿಸಿವೆ...
ಮೈಸೂರು ಮಲ್ಲಿಗೆ ನಾಟಕದಲ್ಲಿ ನಿಮ್ಮನ್ನೆಲ್ಲ ನೋಡಿದ್ದು ನನಗಿನ್ನೂ ಹಸಿರಾಗಿದೆ...
ಬಹಳ ಖುಷಿ ಪಟ್ಟಿದ್ದೆ..
ನಿಮ್ಮ ಪ್ರೋತ್ಸಾಹಗಳು..ಹೀಗೆಯೇ ಇರಲಿ...
ಹೃದಯ ಪೂರ್ವಕ ಧನ್ಯವಾದಗಳು...
ಸುನಾಥ ಸರ್...
ನಿಮ್ಮ ಬಗೆಗೆ ನನಗೆ ಬಹಳ ಹೆಮ್ಮೆ ಎನಿಸುತ್ತದೆ...
ನಿಮ್ಮ ಅಧ್ಯಯನಶೀಲತೆ.., ನಿಮ್ಮ ಬರಹಗಳು
ನಮ್ಮ ಬ್ಲಾಗ್ ಲೋಕಕ್ಕೊಂದು ಹಿರಿಮೆ...
ನನ್ನ ಪ್ರತಿಯೊಂದೂ ಲೇಖನಕ್ಕೆ ಬಂದು ಮೆಚ್ಚುಗೆಯ ಮಾತುಗಳನ್ನಾಡಿ..
ನನ್ನನ್ನು ಹುರಿದುಂಬಿಸಿದ್ದೀರಿ..
ತುಂಬಾ... ತುಂಬಾ ಧನ್ಯವಾದಗಳು...
ನಿಮ್ಮ ಅಜೇಯ ಶತಕಕ್ಕೆ ಅಭಿನ೦ದನೆಗಳು ಪ್ರಕಶಣ್ಣ :)
ಸುಧೇಶ್...
ನಿಮ್ಮೆಲ್ಲರ ಶುಭ ಹಾರೈಕೆಗಳು ಯಾವಾಗಲೂ ನನ್ನ ಮೇಲಿರಲಿ...
ನೂರು ಒಂದು ಗಣಿತದ ಲೆಕ್ಕಾಚಾರದ ಸಂಖ್ಯೆ...
ನಿಮ್ಮ ಪ್ರೋತ್ಸಾಹಕ್ಕೆ ನಾನು ಯಾವಾಗಲೂ ಚಿರಋಣಿ...
ನಿಮಗೆಲ್ಲ ನಾನು ಕೃತಜ್ಞನಾಗಿದ್ದೇನೆ...
ಧನ್ಯವಾದಗಳು ಸುಧೇಶ್...
ಗೌತಮ್....
ನನಗೆ ಚೆನ್ನಾಗಿ ನೆನಪಿದೆ...
ಸುಶ್ರುತನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಿಮ್ಮನ್ನೆಲ್ಲ ಭೇಟಿಯಾಗಿದ್ದು ಬಹಳ ಖುಶಿಯಾಗಿತ್ತು...
ಅಲ್ಲಿ "ಶ್ರೀಧರ್" ಕೂಡ ಭೇಟಿಯಾಗಿದ್ದರು...
ನಿಮ್ಮೆಲ್ಲ... ಮೆಚ್ಚುಗೆ..
ಶುಭ ಹಾರೈಕೆಗಳು ನನ್ನ ಮೇಲೆ ಯಾವಗಲೂ ಇರಲಿ...
ಹೃದಯ ಪೂರ್ವಕ ವಂದನೆಗಳು...
ಉದಯ್...
ನಿಮ್ಮನ್ನು ಅಂದು "ಅಥಿತಿ ಗ್ರ್ಯಾಂಡ್" ಹೊಟೆಲ್ಲಿನಲ್ಲಿ ಭೇಟಿಯಾಗಿದ್ದು...
ನೀವು ನಮಗೆಲ್ಲ ಒಂದು ಸುಂದರ ಸಂಜೆ ವ್ಯವಸ್ಥೆ ಮಾಡಿದ್ದು...
ನಿಮ್ಮೆಲ್ಲರ ಸಂಗಡ ಮಾತುಕಥೆ..
ಆ ಜೋಕುಗಳು...
ತುಂಬಾ ಖುಷಿಯಾಗಿತ್ತು...
ನಿಮ್ಮ ಪ್ರೋತ್ಸಾಹ , ವಿಶ್ವಾಸ ಯಾವಾಗಲೂ ಹೀಗೆಯೇ ಇರಲಿ...
ಧನ್ಯವಾದಗಳು...
ಅಭಿನಂದನೆ ಪ್ರಕಾಶ್.:)ಒಂದು ವರ್ಷದಲ್ಲಿ ನೂರು ಬರಹಗಳೆಂದರೆ ಸಾಮಾನ್ಯ ಮಾತಲ್ಲ! ಅದೂ ಬಹುಪಾಲು ಗಟ್ಟಿ ಬರಹಗಳೇ ಎಲ್ಲ!!
ರಾಜೀವ....
ಬ್ಲಾಗಿನಿಂದ ಹೊಟ್ಟೆ ತುಂಬುವದಿಲ್ಲ" ಎಂದು ನನ್ನ
ಆತ್ಮೀಯ ಹಿತೈಷಿಗಳು ನನಗೆ ಹೇಳುತ್ತಿದ್ದರು...
ಈಗ ನನಗೆ ಕೆಲಸವಿಲ್ಲದ ಸಮಯದಲ್ಲಿ ಎರಡು ಮನೆಕಟ್ಟುವ ಕಾಂಟ್ರಾಕ್ಟ್ ಸಿಕ್ಕಿದೆ...
ಅವರಿಬ್ಬರೂ ನನ್ನ ಬ್ಲಾಗ್ ಓದುಗರು...
ಖುಷಿಯಾಗುತ್ತಿದೆ...
ನಿಮ್ಮೆಲ್ಲರ ಪ್ರೋತ್ಸಾಹ..
ಶುಭ ಹಾರೈಕೆಗಳು ಹೀಗೆಯೇ ಇರಲಿ...
ಧನ್ಯವಾದಗಳು...
ಉಷಾರವರೆ...
ಮೊದಲು ಲೇಖನಗಳು ಐವತ್ತು ಆಗಿದ್ದಾಗ ಓದಗರು ನನಗೆ ಅಭಿನಂದನೆ ತಿಳಿಸಿದ್ದರು...
ಆದರೆ ಸೋಜಿಗ ಅಂದರೆ ನನಗೇ ಗೊತ್ತಾಗಿರಲಿಲ್ಲ...
ಸಂಖ್ಯೆ ನೂರಾದ ಮೇಲೆ "ಕಾಲ್ಪನಿಕ" ಕಥೆಗಳನ್ನು ಬರೆಯ ಬೇಕು ಅಂದುಕೊಂಡಿದ್ದೆ..
ಆದರೆ ಈಗ ಇನ್ನೂ ಹಲವು ಘಟನೆಗಳು ಉಳಿದು ಬಿಟ್ಟಿವೆ...
"ನಾಗುವಿನ" ಕಥೆ ಇನ್ನೂ ಪೂರ್ತಿಯಾಗಿಲ್ಲ...
ಕುಷ್ಟನ, ಪೆಟ್ಟಿಗೆ ಗಪ್ಪತಿ, ಗೋವಿನ ಮದುವೆ ಇತ್ಯಾದಿಗಳು
ಮುಗಿದ ಮೇಲೆ ಕಥೆ ಬರೆಯುವೆ...
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ಶಿವಪ್ರಕಾಶ್...
ನಿಮ್ಮ ಬ್ಲಾಗಿನ ಲೇಖನಗಳು ಮಸ್ತ್ ಆಗಿರುತ್ತವೆ..
ನಾನು ತಪ್ಪದೆ ಓದುವ ಬ್ಲಾಗುಗಳಲ್ಲಿ ನಿಮ್ಮದೂ ಒಂದು...
ಪ್ರೋತ್ಸಾಹಕ್ಕಾಗಿ ಹೇಳುವದು ಒಂದು ಸಾಲುಗಳಾದರೂ
ಅದರ ಪರಿಣಾಮ ಬಲು ದೊಡ್ಡದು..
ಅದು ಖಂಡಿತವಾಗಿ ಇನ್ನಷ್ಟು ಬರೆಯಲು ಉತ್ಸಾಹ ನೀಡುತ್ತದೆ...
ನಿಮ್ಮೆಲ್ಲರ ಪ್ರೋತ್ಸಾಹಕ್ಕಾಗಿ ನಾನು ಕೃತಜ್ಞನಾಗಿದ್ದೇನೆ...
ಧನ್ಯವಾದಗಳು...
ಆತ್ಮೀಯ ಹಿತ್ತಲ ಮನೆಯವರೆ...
ಮೊದಲು ಬ್ಲಾಗ್ ಶುರು ಮಾಡಿದಾಗ "ನೀನು ಬರಿ ಮಾರಾಯಾ..
ನಿನ್ನ ಬಳಿ ಸಿಕ್ಕಾಪಟ್ಟೆ ವಿಷಯಗಳಿವೆ" ಎಂದು ಹುರಿದುಂಬಿಸಿದವರಲ್ಲಿ ನೀನೂ ಒಬ್ಬ...
ಖುಷಿಯಾಗುತ್ತದೆ ನಿನ್ನ ಹಾರೈಕೆಗಳು ನಿಜವಾಗಿದ್ದಕ್ಕೆ...
ತುಂಬಾ.... ತುಂಬಾ ಥ್ಯಾಂಕ್ಸ್ ಬೀಗಣ್ಣನವರೆ....
ಸುಧೀಂದ್ರ...
ನಾವೆಲ್ಲ ಒಟ್ಟಿಗೇ ಒಂದೇ ಬಿಲ್ಡಿಂಗಿನಲ್ಲಿದ್ದರೂ..
ಓದುಗರಾಗಿ ನಿಮ್ಮ ಪರಿಚಯ ಬೇರೆಯೇ ಆಗಿದೆ...
ನೀವೆಲ್ಲ ಆಗಾಗ ಬಂದು ಬೆನ್ನು ತಟ್ಟಿ
"ಪ್ರಕಾಶಣ್ಣ ಬರೆದದ್ದು ಮಸ್ತ್ ಇದ್ದು" ಎಂದು ಹೇಳೀದ್ದು ಖುಷಿಯಾಗುತ್ತಿತ್ತು...
ನಿಮ್ಮೆಲ್ಲರ ಪ್ರೋತ್ಸಾಹ ನನ್ನ ಜವಾಬ್ದಾರಿ ಹೆಚ್ಚಿಸಿದೆ...
ಆ ನಿಟ್ಟಿನಲ್ಲಿ ನನ್ನ ಪ್ರಯತ್ನ ನಡೆಯಲಿದೆ...
ಧನ್ಯವಾದಗಳು...
ಪ್ರಿಯ ಲೋದ್ಯಾಶಿಯವರೆ....
ನಿಮ್ಮ ಚಂದದ ಪ್ರತಿಕ್ರಿಯೆಗಳು ನನಗೆ ಉತ್ಸಾಹ ತರುತ್ತದೆ...
ಇದು ನಿಜ..
ಇನ್ನು ನನ್ನ ಬರೆಯುವ ಶೈಲಿಯ ಬಗೆಗೆ ನಾನು ತಲೆ ಕೆಡಿಸಿಕೊಂಡಿಲ್ಲ...
ಮೊದಲಿನಿಂದಲೂ ಹಾಗೆಯೇ ಮಾಡಿದ್ದೇನೆ...
ಹೇಳುವದನ್ನು ನೇರವಾಗಿ ಹೇಳುವ ಸ್ವಭಾವ ನನ್ನದು...
ಅಲ್ಲಿ ಓದುಗರಿಗೆ ಕಷ್ಟವಾಗ ಬಾರದು.. ಅಷ್ಟೆ...
ನಿಮ್ಮೆಲ್ಲರ ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು...
ಗುರುರವರೆ...
ನಿಮ್ಮ ಸೋಜಿಗದ ಬ್ಲಾಗಿನ ಅಭಿಮಾನಿ ನಾನು...
ನನ್ನ ಮಗ ನಿಮ್ಮ ಬ್ಲಾಗನ್ನು ತಪ್ಪದೆ ನೋಡುತ್ತಾನೆ...
ಪ್ರತಿವಾರವೂ ಹೊಸ ಹೊಸ ಸೋಜಿಗ ನೀಡುವ ನಿಮ್ಮ ಹುಡುಕಾಟಕ್ಕೆ ನಮ್ಮ ಸಲಾಮ್....
ನಿಮ್ಮನ್ನು ನೋಡ ಬೇಕೆಂಬ ಕುತೂಹಲ ನನಗೆ ಬಹಳ ಇತ್ತು...
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬೇಟಿಯಾಗಿದ್ದೇವಲ್ಲ...
ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ...
ಈ ಬಾಂಧವ್ಯ ಹೀಗೆಯೇ ಇರಲಿ...
ಧನ್ಯವಾದಗಳು...
ಭೂಮಿಕಾ....
ಸರಸತ್ತೆ ಪ್ರಸಂಗ ಬಹಳ ಇಷ್ಟಪಟ್ಟಿರುವ ನಿಮ್ಮ ಪ್ರೋತ್ಸಾಹ ಮರೆಯಲಾರೆ...
ಅಪರೂಪಕ್ಕೆ ಬಂದರೂ ಸರಿಯೇ ಬರುತ್ತಿರಿ...
ನೀವೂ ಬರೆಯಿರಿ...
ಧನ್ಯವಾದಗಳು...
ಮನಸು...
ಬ್ಲಾಗಿನ ಮೂಲಕದ ಪರಿಚಯ
ಎಷ್ಟೊಂದು ಆತ್ಮೀಯವಾಗಿ "ಪ್ರಕಾಶಣ್ಣ" ಅನ್ನುತ್ತೀರಿ..!
ಖುಷಿಯಾಗುತ್ತದೆ...
ನಿಮ್ಮ ಬರವಣಿಗೆಯೂ ಆಪ್ತವಾಗಿರುತ್ತದೆ...
ಇದೆಲ್ಲ ಒಂದುವರ್ಷದಲ್ಲಿ ಆದ ಬೆಳವಣಿಗೆಗಳು...
ನಿಮ್ಮ ಪ್ರ್ಒತ್ಸಾಹ ಯಾವಾಗಲೂ ಹೀಗೆಯೇ ಇರಲಿ...
ಧನ್ಯವಾದಗಳು...
ರಮ್ಯಾರವರೆ....
ನಿಮ್ಮೆಲ್ಲರ ಪ್ರೋತ್ಸಾಹ ನಿರಂತರವಾಗಿರಲಿ...
ನನ್ನ ಬರೆಯುವ ಪ್ರಯತ್ನ ಹೀಗೆಯೇ ಸಾಗಲಿ...
ಬರುತ್ತಾ ಇರಿ...
ಪ್ರತಿಕ್ರಿಯೆಗೆ ಧನ್ಯವಾದಗಳು...
ಗೋಪಾಲರವರೆ...
ನನ್ನ ಬ್ಲಾಗ್ ಫಾಲೋ ಮಾಡಿ ..
ಪ್ರತಿಕ್ರಿಯೆ ಕೊಟ್ಟು ಪ್ರೋತ್ಸಾಹಿಸಿದ್ದಕ್ಕೆ
ಹೃದಯಪೂರ್ವಕ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು....
ದಿವ್ಯಾರವರೆ...
ನಿಮ್ಮ ಬರಹಗಳು ಸೊಗಸಾಗಿರುತ್ತವೆ...
ನಿಮ್ಮ ಪ್ರೋತ್ಸಾಹ ಯಾವಗಲೂ ಹೀಗೆಯೇ ಇರಲಿ...
ಧನ್ಯವದಗಳು...
ಗೋಪಾಲರವರೆ...
ನೀವು ನಮ್ಮಿಂದ ಸ್ಪೂರ್ತಿ ಪಡೆದದ್ದು ಖುಷಿಯಾಗುತ್ತದೆ..
ಅಲ್ಲಿ ನನ್ನ ಬರವಣಿಗೆಯ ಸಾರ್ಥಕತೆ ಕಾಣುತ್ತೇನೆ...
ಧನ್ಯವಾದಗಳು...
ಸುಶ್ರುತ....
ನೀವೆಲ್ಲ ಮೊದಲಿನಿಂದಲೂ ಬಂದು ಪ್ರೋತ್ಸಾಹಿಸಿದ್ದು ನನಗೆ ಬರೆಯಲು ಸ್ಪೂರ್ತಿಯಾಯಿತು...
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..
ಧನ್ಯವಾದಗಳು...
ಬಾಲುರವರೆ...
ಪುಸ್ತಕಕ್ಕೆ ನಮ್ಮೆಲ್ಲರ ಆತ್ಮೀಯ ಜಿ.ಎನ್. ಮೋಹನ್ರವರ ಪ್ರೋತ್ಸಾಹವೇ ಕಾರಣ...
ಅವರ ಮಾರ್ಗದರ್ಶನವೇ ಕಾರಣ...
ನಿಮ್ಮ ಬ್ಲಾಗಿನ ಪಂಚ್ ಲೇಖನಗಳ ಅಭಿಮಾನಿ ನಾನು...
ನಿಮ್ಮ ಬರಹಗಳಿಂದ ಸ್ಪೂರ್ತಿಯನ್ನು ಪಡೆದಿದ್ದೇನೆ...
ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ...
ಧನ್ಯವಾದಗಳು...
ರಶ್ಮೀ....
ಎಷ್ಟೊಂದು ಪ್ರೀತಿಯಿಂದ ಬರೆದಿದ್ದೀರಿ...
ಕೆಲವೊಮ್ಮೆ ಶಬ್ಧಗಳು ನಿಸ್ಸಹಾಯಕರಾಗಿ ಬಿಡುತ್ತವೆ..
ಅದರ ಅನುಭವ ನಗಾಗುತ್ತಿದೆ...
ಪ್ರೋತ್ಸಾಹ ನಿರಂತರವಾಗಿರಲಿ...
ಧನ್ಯವಾದಗಳು...
ಸಂದೀಪ್....
ನೀವು ಇನ್ನೂ ನನ್ನ ಬ್ಲಾಗಿಗೆ ಬಂದೇ ಇಲ್ಲವಲ್ಲ ಅಂದುಕೊಳ್ಳುತ್ತಿದ್ದೆ...
ನಿಮ್ಮ ನೇರನುಡಿಯ ಬರಹಗಳನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತೇನೆ...
ಸಹಜ ಬರಹಗಾರರು ನೀವು...
ನೀವು ಬಂದು ಪ್ರೋತ್ಸಾಹಿಸಿದ್ದು ಖುಷಿಯಾಗುತ್ತಿದೆ...
ಧನ್ಯವಾದಗಳು...
ರವಿಕಾಂತ್ ಗೋರೆಯವರೆ..
ನಿಮ್ಮ ನುಡಿಗಳಿಗೆ ನನ್ನ ನಮನಗಳು...
ಕೇವಲ ನನ್ನ ವ್ಯವಹಾರದಲ್ಲಿ ಮುಳುಗಿರುತ್ತಿದ್ದ ನನ್ನ ಜೀವನದಲ್ಲಿ ಈ ಬ್ಲಾಗ್ ಒಂದು ತಿರುವು ಕೊಟ್ಟಿದೆ ಅನ್ನ ಬಹುದು...
ನನಗೆ ನನ್ನ ಮನಸ್ಸನ್ನು ಎಂಗೇಜಿನಲ್ಲಿಡಲು ಹೊಸ ದಾರಿ ಸಿಕ್ಕಿದೆ...
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು...
ಅನ್ನ ಪೂರ್ಣ ದೈತೋಟರವರೆ...
ನಿಮ್ಮ ಪ್ರತಿಕ್ರಿಯೆಗಳು ನನ್ನಲ್ಲಿ ಉತ್ಸಾಹ ತುಂಬಿವೆ...
ಬರೆಯುವ ಒಂದು ಸಾಲುಗಳಿಗೆ ಬೆಲೆ ಕಟ್ಟಲಾಗದು...
ಪ್ರೋತ್ಸಾಹ ಯಾವಗಲೂ ಇರಲಿ
ಧನ್ಯವಾದಗಳು...
ಮಲ್ಲಿಕಾರ್ಜುನ್...
ನೀವು ಬ್ಲಾಗ್ ಓಪನ್ ಮಾಡಿಕೊಡದಿದ್ದರೆ ....!
ಪ್ರತಿನಿತ್ಯ ಫೋನ್ ಮಾಡಿ ತಲೆ ತಿನ್ನುವಾಗಲೂ ನನಗೆ ಗಿಲ್ಟಿ ಫೀಲಿಳ್ಗ್ ಇರುತ್ತದೆ..
ನಿಮಗೆ ತೊಂದರೆ ಕೊಡುತ್ತಿದ್ದನೇನೋ ಅಂತ...
ಬ್ಲಾಗಿನಿಂದಾಗಿ ಬದುಕನ್ನು ನೋಡುವ ದೃಷ್ಟಿ ಬದಲಾಗಿದೆ...
ನೀವೆನ್ನುವದು ನೂರಕ್ಕೆ ನೂರು ಸರಿ...
ನನ್ನ ಬದುಕಿನ ರೀತಿಯನ್ನೇ ಇದು ಬದಲಿಸಿದೆ...
ನಿಮ್ಮ ಪ್ರೋತ್ಸಾಹಕ್ಕೆ
ಮಾರ್ಗದರ್ಶನಕ್ಕೆ...
ನಾನು ಚಿರ ಋಣಿ...
ನವೀನ್ರವರೆ...
ನಿಮ್ಮ ಬ್ಲಾಗನ್ನೂ ತಪ್ಪದೇ ಓದುತ್ತೇನೆ...
ನಿಮ್ಮಲ್ಲಿ ವೈವಿಧ್ಯತೆಗಳಿವೆ...
ಖುಷಿಯಗುತ್ತದೆ...
ನಿಮ್ಮ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...
ಬರುತ್ತಾ ಇರಿ...
ರೂಪಾಶ್ರೀಯವರೆ...
ಬಹಳ ಖುಷಿಯಿಂದ ಓದುವ ಬ್ಲಾಗುಗಳಲ್ಲಿ ನಿಮ್ಮದೂ ಒಂದು...
ಎಷ್ಟು ಸುಂದರವಾಗಿರುತ್ತವೆ ನಿಮ್ಮ ಕವಿತೆಯ ಸಾಲುಗಳು..!
ನೀವೊಂದು ಅದ್ಭುತ ಪ್ರತಿಭೆ...!
ಹೊಸ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮ ಬಾಳು ಹಸನಾಗಿರಲಿ...
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು...
ರಾಜೇಶ್...
ಈ ಬ್ಲಾಗ್ ಲೋಕ ಕೊಟ್ಟ ಆತ್ಮೀಯ ಸಹೋದರರಲ್ಲಿ ನೀವೂ ಒಬ್ಬರು...
ನನಗೆ ಸಮಸ್ಯೆ ಬಂದಾಗ...
ನನ್ನ ಹುಚ್ಚು ಐಡಿಯಾಗಳು ತಲೆ ಹೊಕ್ಕಾಗ ನಿಮ್ಮ ತಲೆ ತಿಂದಿದ್ದೇನೆ..
ತೊಂದರೆ ಕೊಟ್ಟಿದ್ದೇನೆ...
ನೀವು ಸ್ವಲ್ಪವೂ ಬೇಸರಗೊಳ್ಳಲಿಲ್ಲ..
ನಿಮ್ಮ ಬರವಣಿಗೆಯೂ ತುಂಬಾ ಆತ್ಮೀಯವಾಗಿರುತ್ತದೆ...
ಬರೆಯದೆ ಬಹಳ ದಿನಗಳಾದವು ... ಬರೆಯಿರ್ಇ...
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ ಧನ್ಯವಾದಗಳು....
ಶಾಂತಲಾ....
ನೀವು ಶಂತಲಾ ಭಂಡಿ ಅಂತ ಮೊದ ಮೊದಲಿಗೆ ಕನ್ಫ್ಯೂಸ್ ಮಾಡಿಕೊಂಡಿದ್ದೆ...
ಇಮ್ಮ ಬರವಣಿಗೆಗಳೂ ಸೊಗಸಾಗಿರುತ್ತವೆ... ಬರೆಯಿರಿ...
ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ
ಹೃದಯಪೂರ್ವಕ ಧನ್ಯವಾದಗಳು...
ವಿ.ರಾ.ಹೆ.. (ವಿಕಾಸವಾದ)
ನಿಮ್ಮ ವಿಕಾಸವಾದ ಬ್ಲಾಗನ್ನು ತಪ್ಪದೇ ಓದುವವರಲ್ಲಿ ನಾನೂ ಒಬ್ಬ...
ಬಹಳ ಚೆನ್ನಾಗಿರುತ್ತದೆ ನಿಮ್ಮ ಬರವಣಿಗೆಗಳು...
ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ...
ಧನ್ಯವಾದಗಳು...
ಕ್ಷಣ ಚಿಂತನೆಯ ಚಂದ್ರುರವರೆ...
ಬ್ಲಾಗ್ ಲೋಕದಲ್ಲಿ ನಿಮ್ಮದು ವಿಶಿಷ್ಟವಾದ ಒಂದು ಬ್ಲಾಗ್...
ಯಾವಾಗಲೂ ಒಳ್ಳೆಯ ಚಿಂತನೆಯ ವಿಷಯಗಳನ್ನು ಬರೆಯುತ್ತೀರಿ..
ನಿಮ್ಮಲ್ಲಿ ಒಂದು ಪ್ರತ್ಯೇಕತೆಯಿದೆ...
ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ
ಧನ್ಯವಾದಗಳು...
ಶ್ರೀ....
ಇವತ್ತು ಬಹಳ ಖುಷಿಯಾಗುತ್ತಿದೆ...
ಇದು ನನ್ನ ನೂರನೆಯ ಪೋಸ್ಟ್...
ಇದಕ್ಕೆ ನೂರು ಪ್ರತಿಕ್ರಿಯೆಗಳಿಗಿಂತ ಹೆಚ್ಚು ಬಂದಿವೆ..!
ನನ್ನ ಬ್ಲಾಗಿನಲ್ಲಿ ಇದೇ ಮೊದಲು...!
ನೂರನೆಯ ಬರಹಕ್ಕೆ...
ನೂರು ಪ್ರತಿಕ್ರಿಯೆಗಳು...!!
ನಿಮಗೆಲ್ಲ..
ತುಂಬಾ.. ತುಂಬಾ...
ರಾಶಿ... ರಾಶಿ....
ಸಿಕ್ಕಾಪಟ್ಟೆ...
ಹೃದಯಪೂರ್ವಕ ಧನ್ಯವಾದಗಳು..!!!!!!!!!!!
!!!!!!!!!!!!!!!!!!!!!!!!!!!!!!!!!!!!!!!!!!!!!!!!!
ಕೆಲವು ಬಾರಿ ಶಬ್ಧಗಳು ನಿಸ್ಸಹಾಯಕರಾಗಿ ಬಿಡುತ್ತವೆ..
ಆ ಅನುಭವ ನನಗೆ ಆಗುತ್ತಿದೆ..
ನಿಮ್ಮಗೆಲ್ಲ
ತುಂಬು ಹೃದಯದ ವಂದನೆಗಳು....!!!
thank you very much...!!!!!!!!!!!!!!!!!!!!!!!!!
ಪ್ರಕಾಶಣ್ಣ,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ. ನಾನು ತಪ್ಪದೆ ಓದುವ ಬ್ಲಾಗ್ ಗಳಲ್ಲಿ ನಿಮ್ಮದೂ ಒಂದು. ನಿಮಗೆ ಪ್ರತಿಕ್ರಯಿಸುವಾಗ "ಪ್ರಕಾಶ್ ಹೆಗಡೆಯವರೇ" ಅನ್ನುವುದರ ಬದಲಾಗಿ ಪ್ರಕಾಶಣ್ಣ ಅಂತಾನೆ ಮನಸ್ಸಲ್ಲಿ ಬಂದು ಬಿಡುತ್ತೆ. ಅಷ್ಟು ಆತ್ಮೀಯ...!
ಇದೆ ರೀತಿಯ ನಿಮ್ಮ ಕೂಡಿ ಕಳೆದು ಕಟ್ಟುವ ತರ ತರದ ಕಥೆಗಳು ಸಾವಿರವಾಗಲಿ.
ಮನಸಾರೆ ಅಭಿನಂದನೆಗಳು..!!
ALl the very best prakashanna :)
ಸಂತಸದ ಸಮಯದಲ್ಲಿ ನನ್ನಿಂದಲೂ ಹಾರ್ದಿಕ ಶುಭಾಶಯಗಳು. ಹೀಗೆ ಖುಷಿ ಖುಷಿಯಿಂದ ಮುಂದುವರೆಯಲಿ. ನಮ್ಮ ಪ್ರೋತ್ಸಾಹ ಯಾವಾಗಲೂ ಇರುತ್ತೆ.
ಪ್ರಕಾಶ್ ರಿಗೆ ನಮಸ್ಕಾರ ನಿಮ್ಮ ಬರಹಗಳು ಹೀಗೆ ಬರುತ್ತಿರಲಿ.
ಮೋಹನ್
It's not just 100 numbers, I call 100 valuables!!! Expecting more and more...
Prakaashanna!
Ninna "Ittige-Cement" innashtu,Mattashtu....sikkapatte...kandaapate janapriyavaagli!!!!!!!!!
"Blog andre yentadu heli gottittille....aadre iga Bere yava blogu ishtu cholo agtille"
ನಮಸ್ತೆ
ನಿಮ್ಮ ಹೆಸರು ಬ್ಲಾಗಿನ ಲೋಕದಲ್ಲಿ ಮನೆ ಮಾತಾಗುತ್ತಿರುವುದು ಕಂಡು ನನಗಂತೂ ಬಹಳ ಸಂತೋಷವಾಗುತ್ತಿದೆ. ನಿಮಗೆ ನೆನಪಿರಬಹುದು! ಬ್ಲಾಗುಗಳ ಓಟದಲ್ಲಿ ನೀವೂ ಓಡಿದಿರಿ, ಅದರ ಬಗ್ಗೆ ನಿಮ್ಮನ್ನು ನಾನಂದು ಕೇಳಿದ್ದೆ. ಹೇಗೆ ಮತ್ತು ಯಾಕೆ ಕೇಳಿದಿರಿ ಎಂಬ ನಿಮ್ಮ ಪ್ರಶ್ನೆಗೆ ನಾನು ಉತ್ತರ ಕೊಟ್ಟಿರಲಿಲ್ಲ. ನೀವು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟಾಗಿನಿಂದ ನಾನು ನಿಮ್ಮ ಬರಹವನ್ನು ನೋಡುತ್ತಿರುವೆ. ಆ ಓಟವನ್ನು ವೀಕ್ಷಿಸಿದ ಜ್ಯೂರಿಗಳಲ್ಲಿ ನಾನು ಒಬ್ಬ ಎಂದು ಇಂದು ಹೇಳುತ್ತಿರುವೆ. ಆ ಓಟದಲ್ಲಿ ಓಡಿದ ಕನ್ನಡ ಬ್ಲಾಗುಗಳು ಕೇವಲ ಮೂರು ಮಾತ್ರ. ಕನ್ನಡ ಬಲ್ಲ ಜ್ಯೂರಿ ನಾನೊಬ್ಬನು ಮಾತ್ರ. ಅದರ ಫಲಿತಾಂಶ ಸದ್ಯದಲ್ಲಿಯೇ ಹೊರಬೀಳಲಿದೆ.
ನಿಮ್ಮ ಬ್ಲಾಗಿನ ಹೆಸರು ನಿಮ್ಮ ಹೆಸರಿನೊಂದಿಗೆ ಇನ್ನೂ ಎತ್ತರಕೆ ಬೆಳೆಯಲಿ ಎಂದು ಆಶಿಸುವೆ
ಗುರುದೇವ ದಯಾ ಕರೊ ದೀನ ಜನೆ
Dear Prakashanna!
Many congratulations, from our bottom of the heart. The way you have elevated yourself in such a short span of time is commendable. You have undoubtedly raised your standard by many folds and you belong to the big league of writers already without a doubt.
Thanks heaps for treating the readers with your polished writing and let this flow remain for many years to come.
ಅಜೇಯ ಶತಕ !!!
ನನ್ನನ್ನು ಪತ್ರಕರ್ತನಾಗಿಸಿ ಬಿಟ್ಟಿರುವಂತಿದೆ.
ಕೃತಜ್ಞತೆಗಳು :)
ಶುಭಾಶಯಗಳು ಪ್ರಕಾಶಣ್ಣ..
ದಿನಾ ನಡೆದ ಆಡು ಮಾತುಗಳೊಂದಿಗೆ ಬರೆಯುವ ನಿಮ್ಮ ಶೈಲಿ ಅದ್ಭುತ..
ಮಗಳ ಸ್ಕೂಲ್, ಆಫೀಸ್ ಕೆಲಸ, ಆತ್ಮೀಯರ ಅಗಲಿಕೆ ಎಲ್ಲಾ ನನ್ನನ್ನು ಬ್ಲಾಗ್ ಲೋಕದಿಂದ ಸ್ವಲ್ಪ ದೂರ ನಿಲ್ಲುವಂತೆ ಮಾಡಿದೆ..ಆಗೆಲ್ಲ ನಿಮ್ಮ ಬ್ಲಾಗ್, ಶಿವೂ ಬ್ಲಾಗ್ ನಗಿಸುವಂತೆ ಮಾಡುತ್ತದೆ...ತುಂಬಾ ಥ್ಯಾಂಕ್ಸ್...
Congratulations prakashanna ..
ಅಭಿನಂದನೆಗಳು ಪ್ರಕಾಶಣ್ಣ.....
ನೂರು ದಾಟಿ, ಸಾವಿರ ಮುಟ್ಟಿ, ಲಕ್ಷ ವನ್ನ ತಟ್ಟಿರಿ.....ನೀವೂ ನಗ್ತಾ , ನಮ್ಮನು ನಗಿಸ್ತಾ ಇರಿ.....
prakashanna,
nimma pustaka aadashtu bEga barali.
nimma blog praarambhavaagi swalpa dinadalle world famous aagidakke shubhaashayagaLu.
comments nalloo century baarisiddeera. oLLEdu aagali
Post a Comment