Saturday, August 8, 2009

ಕಿವಿಯೂ.... ಚೆಲುವೆಲ್ಲಾ... ತಂದೆಂದಿತು....!!



ಕೂದಲಿನ ಮರೆಯಲ್ಲಿ...
ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ ...
ಸುಮ್ಮನಿರುವ ಕಿವಿಗೆ ತೂತು ಯಾಕೆ ಮಾಡಬೇಕು...??

ಈ... ನೋವು, ಕಣ್ಣೀರು ಎಲ್ಲಯಾಕೆ..?

ನನಗೆ ಅನುಮಾನ ಬಂದರೆ ಮೊದಲು ನೆನಪಾಗುವದು
ದಿ ಗ್ರೇಟ್ "ನಾಗು"
ಅವನ ಬಳಿಯೇ ಕೇಳಿದೆ....

"ಲೋ... ಪ್ರಕಾಶು ....
ನಮ್ಮ ಹಿರಿಯರು.. ಹುಚ್ಚರಲ್ಲ...
ಕಿವಿಯಲ್ಲಿ ಮೆದುಳಿಗೆ ಸಂಬಂಧಪಟ್ಟ ನರತಂತುಗಳು ಇವೆ...
ಅಲ್ಲಿ ತೂತು ಮಾಡಿದರೆ ಮೆದುಳು ಉದ್ದೀಪನೆಯಾಗುತ್ತದೆ....
ಪ್ರಚೋದನೆಯಾಗುತ್ತದೆ...
ನಮ್ಮಲ್ಲಿ ಗಂಡು ಹೆಣ್ಣಿನ ಬೇಧವಿಲ್ಲದೆ ಕಿವಿ ತೂತು ಮಾಡಿರುತ್ತಾರೆ..."
ಜನ ಬುದ್ಧಿವಂತರಾಗುತ್ತಾರೆ...
ಕಿವಿ ಚುಚ್ಚೋದರಿಂದ...
ನಿನ್ನಂಥವನ ತಲೆಯಲ್ಲೂ ಅನುಮಾನಗಳು ಬರುತ್ತವೆ..."


ನಾಗು ಮತ್ತೆ ಕೇಳಿದ. ...
" ನಿನಗೆ ಯಾರಾದರೂ ಇಂಟರ್ ನೆಟ್ ತಜ್ಞರು,
ಅರ್ಥ ಶಾಸ್ತ್ರಜ್ಞರು ಗೊತ್ತಿದ್ದರೆ ತಿಳಿಸು..

ನನ್ನ ಕೆಲವು ಅನುಮಾನಗಳನ್ನು ಪರಿಹರಿಸಿ ಕೊಳ್ಳ ಬೇಕು..."

ಈಗ ನನಗೆ ನೆನಪಾದದ್ದು ಗೆಳೆಯ
"ರಾಜೇಶ್ ಮಂಜುನಾಥ್"

ರಾಜು ಫೋನ್ ನಂಬರ್ ಕೊಟ್ಟೆ...
ಭಾವುಕ, ಬುದ್ಧಿವಂತ ...
ಸದಾ ಚಟುವಟಿಕೆಯಲ್ಲಿರುವ ನಗು ಮುಖದ ಹುಡುಗ....

ನಾಗು , ರಾಜು ಏನು ಮಾಡಿದರು ಗೊತ್ತಾಗಲಿಲ್ಲ....

ಆದರೆ ಮರುದಿನ.....
ಇಬ್ಬರು ಸೇರಿ ಹೇಳಿದ ವಿಷಯ ಕೇಳಿ...
ನಾನು ದಂಗಾಗಿ ಹೋದೆ....!!

" ಲೋ... ಪ್ರಕಾಶು... ನಮ್ಮದೇಶದ ಜನ ಸಂಖ್ಯೆ ಎಷ್ಟೋ...?"

"ನೂರು ಕೋಟಿ"

" ಇದರಲ್ಲಿ ನಲವತ್ತು ಪರ್ಸಂಟ್ ಹೆಣ್ಣುಮಕ್ಕಳು ಅಂದುಕೊ...
ಅದರಲ್ಲಿ, ಕಿವಿಗೆ ಏನನ್ನೂ ಧರಿಸದವರು,
ಜಾತಿ ಪಾತಿ ಎಲ್ಲ ಹದಿನೈದು.. ಪರ್ಸಂಟ್ ಕಳೆದು ಬಿಡು"

" ಉಳಿದದ್ದು ಇಪ್ಪತ್ತಾರು ಕೋಟಿ ಮಹಿಳೆಯರು... "

" ಹಾಗಾದರೆ ಈ ಇಪ್ಪಾತಾರು ಕೋಟಿ ಹೆಂಗಸರು...
ಒಬ್ಬಬ್ಬರು ತಲಾ ೫ ಗ್ರಾಮ್ ಚಿನ್ನ ಕಿವಿಗೆ ಧರಿಸುತ್ತಾರೆ ಅಂದುಕೊಂಡರೆ....
ಎಷ್ಟಾಯಿತು ಗೊತ್ತಾ... ಪ್ರಕಾಶು...?

"ಮಾರಾಯಾ... ಪುಣ್ಯಾತ್ಮಾ...
ನನ್ನ ಕಿವಿ ತೂತು ಈಗ ಮುಚ್ಚಿ ಹೋಗಿದೆ...
ನನಗೆ ಈಗ ಅನುಮಾನವಷ್ಟೇ ಬರೋದು...
ಪರಿಹಾರ ಹೊಳಿಯೋದಿಲ್ಲ....
ನೀನೇ ಹೇಳು..."

"೧೩೦೦ ಟನ್... ಬಂಗಾರ ಆಯಿತು...!!.."

" ಅಬ್ಬಾ...!! ಅಯ್ಯೋ... !! ಹೌದೇನೋ...?"

"ನಿಜ... ಇದು ಎಷ್ಟು ರೂಪಾಯಿ ಆಯಿತು ಗೊತ್ತಾ...???.."

"....!!...??...!!."

" ಲೋ.... ಪ್ರಕಾಶು...
ಇದು ನಿನ್ನ ಬಳಿ ಎಣಿಸಲಾಗದಷ್ಟು...!
೧,೮೨,೦೦೦ ಕೋಟಿ.. ರುಪಾಯಿಗಳು..!!!!
೧.೮೨ ಟ್ರಿಲಿಯನ್ ಅಂತ ಹೇಳ ಬಹುದು...."

ನಾನು ಎಚ್ಚರ ತಪ್ಪಿ ಬೀಳುವದೊಂದು ಬಾಕಿ....!!!!!

" ಅಂದರೆ....
ಕರ್ಣಾಟಕದ ಮೂರುವರ್ಷದ ಬಜೆಟ್ ಹಣದಲ್ಲಿ ನಿಭಾಯಿಸ ಬಹುದು...!!!!!

ನಮ್ಮದೇಶದ ರಕ್ಷಣಾ ವೆಚ್ಚವನ್ನು ನಿಭಾಯಿಸಿ....
ಕಾಶ್ಮೀರದ ಖರ್ಚನ್ನೂ ಭರಿಸ ಬಹುದು...!!!

" ಬಾಂಗ್ಲಾದೇಶದ ವಾರ್ಷಿಕ ಬಜೆಟ್ ಎರಡುವರ್ಷ ಮಾಡ ಬಹುದು....!!

ನನಗೆ ತಡೆದು ಕೊಳ್ಳಲಾಗಲ್ಲಿಲ್ಲ...

"ಪ್ರಕಾಶು... ಇನ್ನೊಂದು ವಿಷಯ ಗೊತ್ತಾ...??
... ಆರ್ಥಿಕ ಮುಗ್ಗಟ್ಟು ನಮ್ಮ ದೇಶಕ್ಕೆ ಸಮಸ್ಯೆನೇ ಅಲ್ಲ....
ನಮ್ಮ ಹೆಣ್ಣು ಮಕ್ಕಳು ಸ್ವಲ್ಪ ದೊಡ್ಡ ಮನಸ್ಸು ಮಾಡಿದರೆ....!!

" ಮಾರಾಯಾ.., ನೀನೂ..., ರಾಜೇಶ್ ಇದನ್ನೇ ಹುಡುಕಿದಿರಾ...??
ದೇಶದ ಹೆಣ್ಣು ಮಕ್ಕಳು ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ....
ಹೋಗಿ ಪೋಲಿಸ್ ಪ್ರೊಟೆಕ್ಷನ್ ತಗೊಳ್ಳಿ...
ಮನೆಗೆ ಹೋಗಿ ವಿಷಯ ಹೇಳ ಬೇಡಿ...
ದೊಣ್ಣೆ ತಗೋತಾರೆ...."


ರಾಜೇಶ್ ಮತ್ತು ನಾಗು ಹೇಳಿದ ವಿಷಯದಲ್ಲಿ ತರ್ಕ ಇದೆ ಅನಿಸಿತು.....

... ಕಿವಿಯಲ್ಲಿ ಎಷ್ಟು ತೂತು ಇದೆಯೆಂದು ಹೇಳ ಬಲ್ಲಿರಾ...?

ಚಿನ್ನದಂತಹ ಮನಸ್ಸು... ಹೃದಯದ ಬಂಗಾರಿಗೆ...
ಬಂಗಾರವೆಂದರೆ ಯಾಕಿಷ್ಟು ಮೋಹ...?


ಕಣ್ಣು ಬಿಟ್ಟು ...ನೀ .. ನೋಡು ಒಮ್ಮೆ...
ಕಿವಿಯ ಸೌಂದರ್ಯವಾ....!!



ಆರಂಕುಶ ವಿಟ್ಟೋಡೆನ್ನ ಮನ ನೆನೆವುದು...
ತರುಣಿಯ ಚಂದದ ಕಿವಿಗಳನು......


ಕಿವಿಯೂ.... ಚೆಲುವೆಲ್ಲಾ ತಂದೆಂದಿತು....!!


ಕಿವಿಯ ನೋಡುತಿರೆ....
ಮೊಗವ ನೋಡುವಾಸೆ....


ನಿನ್ನ ಕಿವಿಯ ಅಂದ...
ನುಡಿಸಿದೆ ನನ್ನ ಹೃದಯದಿ.... ಸರಿಗಮ.......



ಕವಿಯ ಕಾವ್ಯದ ಸೊಬಗು... ನಿನ್ನಯ ಕಿವಿಯು.....


ಕಿವಿಯ ಅಂದ ಚಂದ... ನೋಡುತ...
ಮನದ ಮೃದಂಗದ ... ತಕಧಿಮಿತಾ....


ಜಯಂತ್ ಕಾಯ್ಕಿಣಿಯವರ ಶಬ್ಧಗಳಲ್ಲಿ...
ಪದ್ಯವಾಗುವಾಸೆ......
ರಾಗವಾಗಿ ಹಾಡಾಗುವಾಸೆ....


ನನ್ನೊಲವಿನ ಓಲೆ...
ಬರೆಯುವೆನು...
ನಲ್ಲಾ..
ಕಿವಿಯೋಲೆಯ ಮೇಲೆ....

ನಿನ್ನ ಮೆಚ್ಚುಗೆಯ ನೋಟವೊಂದು ಸಾಕೆನಗೆ...
ಕಾದಿರುವೆ .. ಕಾತರದಿ... ತಿಳಿಯದೆ ನಿನಗೆ...?

ನನ್ನೊಲವು, ಚೆಲುವು...
ಹಲವು ಬಗೆಯ ಕಲರವು...
ನಿನ್ನ ಹ್ರದಯದಿ ಜಾಗ ಪಡೆಯಲು
ಈ ಎಲ್ಲ ಅಲಂಕಾರವು....



ಗೋರಿ ತೇರಾ ಕಾನ್ ಬಡಾ ಪ್ಯಾರಾ.....


ಮೈ ತೊಗಯಾ... ಮಾರಾ....
ದೇಖೆ ....ಯಹಾಂ..ರೇ....!!


ಹರಳು..... ರಗಳೆಯಾಗದೆ.... ತರಳೆ...?



ಜೋಲುವ.. ತೂಗುವ ವಿಸ್ಮಯ.... ವಿಚಿತ್ರ....!!


ತುಮ್ ... ಆಗಯೇ... ಹೋ...
ನೂರ್ ಆಗಯಾ... ಹೇ...!!



ಚಾಂದ್ ಜೈಸೆ ಮುಖಡೆಪೆ... ಯೇಹೈ.... ಸಿತಾರಾ...!!




ಅಂದ... ಚಂದ ವಿಚಿತ್ರದಲ್ಲೂ ಇದೆ....!!


ತೂತಿಲ್ಲದೆಯೂ ಅಲಂಕಾರ....


ಚಂದದ ಹಿಂದೆ ನೋವು ಇರಬೇಕಿಲ್ಲ....!!


ಹಳೆಯ ಸೊಬಗು.... ಹೊಸತನದ ಬೆಡಗು... ಕೂಡಿರಲು...


ಇವಳು ಯಾರು ಬಲ್ಲೆಯೇನು...?
ಮಲ್ಲಿಗೆ ಮುಡಿದವಳೇ...
ಚಂದದಾ ಮನಸಿನವಳೇ...
ಬ್ಲಾಗ್ ಲೋಕದಾ.... ಸಹೋದರಿಯೇ...!!
ಇವಳು ಯಾರು ಬಲ್ಲೆಯೇನು...?



ಚಿನ್ನವಾದರೇನು ಶಿವಾ...?
ಬೆಳ್ಳಿ ಯಾದರೇನು.... ಶಿವಾ...
ಕಿವಿಯಲ್ಲಾ ಚಂದವೇ.. ಶಿವಾ....



ಮತ್ತೆ.. ಮತ್ತೆ..
ಮತ್ತೂ
...
ಮತ್ತೇರಿಸಿದೆಯಲ್ಲೇ......
ನಷೆಯಿಲ್ಲದ ಮತ್ತು........
ನಿನ್ನ ಕಿವಿಯ ನತ್ತು....!!


ನಾಗು ಮತ್ತೆ ನನ್ನನ್ನು ಪ್ರಶ್ನಿಸಿದ...

" ನೋಡಪಾ....
ತೂತುಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳಿಗೇ....ಮಾಡಿ...
ಬಂಗಾರ, ಬೆಳ್ಳಿ ತೂಗು ಬಿಡುತ್ತಾರೆ.... ... ಯಾಕೆ ಗೊತ್ತಾ...?"


" ಪುಣ್ಯಾತ್ಮಾ... ದೇವರಾಣೆ ಗೊತ್ತಿಲ್ಲ..."

" ಪ್ರಕಾಶು... ಅದಕ್ಕೂ ಕಾರಣ ಇದೆ....
ಈಗಲೇ ಬೇಡ ಮುಂದಿನವಾರ ಹೇಳ್ತೇನೆ...."

ಎಂದು ರಾಜೇಶ್ ನನ್ನು ಎಳೆದು ಕೊಂಡು ಹೂರಟು ಹೋದ....

ಯಾಕೆ ಹೆಣ್ಣುಮಕ್ಕಳಿಗೆ... ಹೀಗೆ ಮಾಡುತ್ತಾರೆ...?"

ನಾನು ಕಿವಿಯನ್ನು ಒಮ್ಮೆ... ಮುಟ್ಟಿಕೊಂಡೆ... !!

ಮತ್ತೆ... ಅನುಮಾನಗಳು..ಶುರುವಾದವು ...!!.......!!




(ಕೃತಜ್ಞತೆಗಳು...

ವಿನೂತ......
ಡಾ. ಪ್ರಶಾಂತ್...
ಡಾ. ಲತಾ...
.................
..................
ರೂಪದರ್ಶಿಗಳು...)



(ಛಾಯಾ ಚಿತ್ತಾರಾ...
ನನ್ನ ಪ್ರೊಫೈಲ್ ನೋಡಿ.... )

75 comments:

NiTiN Muttige said...

ಬಜೆಟ್ ನ ಲೆಕ್ಕಾಚಾರ ಸೂಪರ್ ಕಣ್ರಿ!!!....
ಚೆಂದನೆಯ ಚಿತ್ರಕ್ಕೆ ಮತ್ತೊಮ್ಮೆ ಧನ್ಯವಾದಗಳು........ ಆ ದೇವರು ಹೆಂಗಳೆಯರಿಗೆ ಎಷ್ಟೋಂದು ಅಲಂಕಾರ ಕೊಟ್ಟ!!!...

Ittigecement said...

ನಿತಿನ್.....

ನೀವು ಹೇಳಿದ್ದು ನಿಜ...
ಅಂದವೊಂದೆ ಅಲ್ಲ...
ಅಲಂಕಾರ ಮಾಡಿಕೊಳ್ಳುವ ಅಭಿಮಾನವನ್ನೂ ಹೆಣ್ಣು ಮಕ್ಕಳಿಗೇ ಕೊಟ್ಟ ಆ ದೇವರು....
ಎಷ್ಟು ಫೋಟೊ ಒಟ್ಟಾದವು ಅಂದ್ರೆ ಯಾವುದನ್ನು ಹಾಕ ಬೇಕು.. ಯಾವುದನ್ನು ಬಿಡ ಬೇಕು ಅನ್ನುವದು ದೊಡ್ಡ ಸಮಸ್ಯೆ ಆಯ್ತು...
ಏನೇ ಹೇಳಿ...
ಸೌಂದರ್ಯದ ವಿಷಯದಲ್ಲಿ ನಮ್ಮ ಹಿರಿಯರು
ನಮ್ಮನ್ನು ಮೀರಿಸಿದ್ದರು...
ಸೌಂದರ್ಯ ಪ್ರಜ್ಞೆ,
ಚಂದ ನೋಡುವ ರೀತಿ ಅವರಷ್ಟು ನಮಗಿಲ್ಲ....

Keshav.Kulkarni said...

ಸಕತ್ತಾಗಿದೆ, ಸುಂದರ ಚಿತ್ರಗಳು, ನಗಿಸುವ ಬರಹ.

sunaath said...

ಪ್ರಕಾಶ,
ಎಷ್ಟೆಲ್ಲಾ ತರಹದ ಸುಂದರ ಕರ್ಣಗಳನ್ನೂ ಕರ್ಣಾಭರಣಗಳನ್ನೂ ತೋರಿಸಿದ್ದೀರಿ. Really great! ಅದಕ್ಕಿಂತ ಹೆಚ್ಚಿನದೆಂದರೆ, ಈ ಎಲ್ಲಾ ಕರ್ಣಾಭರಣಗಳ ಮೌಲ್ಯದ ತರ್ಕ.
ಅದು still greater!
ನಾಗುವು ಹೇಳುವ ತರ್ಕಕ್ಕಾಗಿ, ಮುಂದಿನ issueಗಾಗಿ ಕಾಯುತ್ತ ಇರುತ್ತೇನೆ.

nenapina sanchy inda said...
This comment has been removed by the author.
ಚಿತ್ರಾ said...

ಪ್ರಕಾಶಣ್ಣಾ,
ಮತ್ತೊಮ್ಮೆ, ನಾಗುವಿನ ತರ್ಕ , ಲೆಕ್ಕಾಚಾರ ನೋಡಿ ಬೆರಗಾದೆ ! ಕೇವಲ ಕಿವಿಗೆ ಹಾಕಿ ಕೊಳ್ಳುವ ಚಿನ್ನವೇ ಇಷ್ಟಿದ್ದರೆ .......
ಅಂದ ಹಾಗೆ, ಇತ್ತೀಚಿನ ಫ್ಯಾಶನ್ ಪ್ರಕಾರ ಹುಡುಗರೂ ಕೂಡ ಕಿವಿಗೆ ಆಭರಣ ಹಾಕಿಕೊಳ್ಳುತ್ತಾರೆ .( ನಮ್ಮ ಅಜ್ಜಂದಿರ ಕಾಲದಲ್ಲಿದ್ದಿದ್ದು ರಿಪೀಟ್ ಆಗಿದೆ ಅಷ್ಟೇ ) ಅದನ್ನು ನಾಗು ಅವರ ಚಿನ್ನದ ಲೆಕ್ಕಾಚಾರದಲ್ಲಿ ಸೇರಿಸಿಕೊಳ್ಳಬಹುದು ! ಮುಂದಿನ ಕಂತಿನಲ್ಲಿ .
ಏನಿದ್ದರೂ ಹೆಂಗಸರಿಗೆ ಅಲಂಕಾರದಲ್ಲಿರುವ ಆಯ್ಕೆಗಳನ್ನು ನೆನೆದುಕೊಂಡು , ಹೆಣ್ಣಾಗಿ ಹುಟ್ಟಿದ್ದಕ್ಕೆ ಮತ್ತೊಮ್ಮೆ ಖುಷಿ ಪಡುತ್ತಿದ್ದೇನೆ !

Ittigecement said...

ಕೇಶವ್ ಕುಲಕರ್ಣಿಯವರೆ....

ತುಂಬಾ ತುಂಬಾ ಥ್ಯಾಂಕ್ಸ್....

ನಮ್ಮ ಕನ್ನಡದ ಕವಿಗಳಿಗೆ...
ಈ ಸುಂದರ ಕಿವಿಗಳು ಸ್ಪೂರ್ತಿ ಕೊಡಲಿಲ್ಲವೆ...?
ನಾನು ಬಹಳ ಹುಡುಕಾಡಿದೆ...
ಒಂದೇ ಒಂದು ಕವನ ಸಿಗಲಿಲ್ಲ...
ಸಿನೇಮಾ ಹಾಡಿನಲ್ಲೂ ಸಹ....

ಏನೇನೊ ಬರಿತಾರೆ...
ಕಿವಿಯ ಬಗೆಗೂ ಕವಿತೆ ಬರೆಯ ಬಹುದಿತ್ತು... ಅಲ್ಲವಾ..?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುನಾಥ ಸರ್....

ನಮ್ಮ ದೇಶ ನಿಜಕ್ಕೂ ಶ್ರೀಮಂತ ದೇಶ....
ನಮ್ಮ ಜನಸಂಖ್ಯೆಯೇ ನಮ್ಮ ಅಸೆಟ್....
ಬಂಡವಾಳ..

ನಾವು ಇಲ್ಲಿ ಲೆಕ್ಕಹಾಕಿದ್ದು ಕೇವಲ ಇಪ್ಪಾತ್ತಾರು ಕೋಟಿ ಜನರ ಬಳಿ ಐದು ಗ್ರಾಮ್ ಚಿನ್ನವಿದ್ದರೆ ಅಂತ....
ಇದಕ್ಕಿಂತಲೂ ಜಾಸ್ತಿ ಇದ್ದಿರುತ್ತದೆ..
ಇನ್ನು ಈ ಥಹ ಕಿವಿಯಲ್ಲಿ ಸೌಂದರ್ಯ ಕಂಡ ಬಗೆ...
ಇದನ್ನು ಕೆದಕುತ್ತ ಹೋದ ಹಾಗೆ ನಾನೇ ನಿಬ್ಬೆರಗಾಗಿದ್ದೇನೆ....

ನನ್ನ ಕಂಪ್ಯೂಟರಿಗೆ ವೈರಸ್ ಬಂದು ಕ್ರಾಷ್ ಆಗಿತ್ತು...
ಬರೆದ ಬರಹ ಎಲ್ಲ ಡಿಲೀಟ್ ಆಗಿದೆ..
ಮತ್ತೆ ಕುಳಿತು ಹೊಸತಾಗಿ ಬರೆಯುತ್ತಿದ್ದೇನೆ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು....

Ittigecement said...

ನೆನಪಿನ ಸಂಚಿಯಿಂದ...

ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ...
ನಿಮ್ಮ ಬರವಣಿಗೆ ಖುಷಿಯಾಗುತ್ತದೆ...

ಕಿವಿಯ ಚಂದ ಕಂಡು ಅಚ್ಚರಿಯಾಗಿದೆ....

ಕಿವಿಯಲ್ಲಿ ಜೋಲುವ ವಿಸ್ಮಯ ಕಂಡು ಮೂಕನಾಗಿದ್ದೇನೆ...
ಅದರ ಬಗೆಗಳು, ಅಂದ ಚಂದಗಳು...!

ಅದನ್ನು ಧರಿಸುವವರ ಶ್ರಮ,
ಸಂಭ್ರಮ...
ಸಂತೋಷ ಎಷ್ಟಿರ ಬಹುದು....?

ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು....

ವಿನುತ said...

ಪ್ರಕಾಶ್ ರವರೇ,

ನಿಮ್ಮ ನಾಗುವಿನ ಲೆಕ್ಕಾಚಾರಕ್ಕೆ ಒ೦ದು ಸಲಾಮ್! ನೀವು ಹಾಕಿರೋ ಚಿತ್ರಗಳಲ್ಲಿ ಬಹುತೇಕ ಚಿನ್ನದ್ದಲ್ಲದ ಕಿವಿಯೋಲೆಗಳೇ ಇವೆ :)
ಓಲೆ ಚೆ೦ದವೆ೦ದು ನಾರಿ ಬಳಸುತ್ತಾಳೋ, ನಾರಿ ಬಳಸುವುದರಿ೦ದ ಓಲೆ ಅಷ್ಟು ಸು೦ದರವಾಗಿ ಕಾಣುತ್ತೋ, ಹೇಳೋದು ಕಷ್ಟ.
ಚೆ೦ದದ ಚಿತ್ರಗಳಿಗಾಗಿ, ಹೊಸದೊ೦ದು ಲೆಕ್ಕಾಚಾರಕ್ಕಾಗಿ ಧನ್ಯವಾದಗಳು.

umesh desai said...

ಹೆಗಡೇಜಿ ಕಿವಿ ಹಾಗೂ ಓಲೆಯ ವರ್ಣನಾ ಚೆನ್ನ ನಿಮ್ಮ ನಾಗೂ ಎಕ್ಸಪರ್ಟ ಕಾಣಸ್ತಾನ..ಓಲೆ, ರಿಂಗು, ಬೆಂಡವಾಲಿ, ಝ್ಹುಮುಕಿ
ಒಂದೇ ಎರಡೇ ಆದರೂ ಹೆಂಗಸೂರಿಗೆ ತೃಪ್ತಿ ಇರೂದಿಲ್ಲ ಏನಂತೀರಿ

Ittigecement said...

ಚಿತ್ರಾ....

ನನ್ನ ಕಂಪ್ಯೂಟರ್ ಕ್ರ್ಯಾಷ್ ಆಗಿತ್ತು...
ಸಂಗಡ ಕೆಲಸದ ಒತ್ತಡ...
ಹಲವು ಬ್ಲಾಗ್‍ಗಳಿಗೆ ಹೋಗಲಾಗಲಿಲ್ಲ...
ಪ್ರತಿಕ್ರಿಯೆ ಕೊಡಲಾಗಲಿಲ್ಲವಾಗಿತ್ತು...

ನನ್ನ ಪುಸ್ತಕಕ್ಕೆ ಲೇಖನ ರೆಡಿ ಮಾಡಿ ಇಟ್ಟಿದ್ದೆ...
ಅದೂ ಕೂಡ ಡಿಲೀಟ್ ಆಗಿದೆ....

ಈಗ ಎಲ್ಲವೂ ಸರಿಯಾಗಿದೆ...
ಇನ್ನು ಎಂದಿನಂತೆ ನಿಮ್ಮ ಬ್ಲಾಗ್‍ಗಳಿಗೆ ಬರುತ್ತೇನೆ...

ಹೆಣ್ಣುಮಕ್ಕಳ ಅಲಂಕಾರ, ಸಂಭ್ರಮ ನೋಡಿದಾಗ ನಮಗೂ ಹೊಟ್ಟೆಕಿಚ್ಚಾಗುತ್ತದೆ...
ಒನಪು, ವಯ್ಯಾರ...
ಎಲ್ಲ ಚಂದಗಳನ್ನು ಹೆಣ್ಣು ಮಕ್ಕಳಿಗೇ ಇಟ್ಟು ಬಿಟ್ಟಿದ್ದಾನೆ ಭಗವಂತ...

ನಿಮ್ಮ ಚಂದದ ಪ್ರತಿಕ್ರಿಯೆ ಖುಷಿಯಾಗುತ್ತದೆ....
ಧನ್ಯವಾದಗಳು...

shivu.k said...

ಪ್ರಕಾಶ್ ಸರ್,

ಆಹಾ..! ಇದು ನಿಜಕ್ಕೂ ಅರ್ಥಿಕ ಮುಗ್ಗಟ್ಟಿನ ಕಾಲವಂತೂ ಅಲ್ಲ. ಎಷ್ಟೊಂದು ಚೆಂದದ ಕಿವಿಗಳು ಆದಕ್ಕೆ ತಕ್ಕಂತೆ ವೈವಿಧ್ಯಮಯ ಓಲೆಗಳು....ನನ್ನ ಕಣ್ಣುಗಳು ಪಾವನವಾದವು. ಮತ್ತೆ ಕಿವಿಯೋಲೆ ಹಿಂದೆ ಇಷ್ಟು ದೊಡ್ಡ ಚಿನ್ನದ ಹಣವಿದೆಯೆಂದು ಗೊತ್ತಿರಲಿಲ್ಲ. ಇಂಥ ವಿಚಾರವನ್ನು ಕಂಡುಹಿಡಿದ ನಾಗು ಮತ್ತು ರಾಜೇಶ್ ಇಬ್ಬರಿಗೂ ಧನ್ಯವಾದಗಳು ಇನ್ನಷ್ಟು ಹೊಸ ವಿಚಾರಗಳನ್ನು ಅವರು ಹುಡುಕಲಿ....

ಹದಿನೈದನೆ ಕಿವಿಯೋಲೆ ಜಾಗಟೆಯಂತಿರಬೇಕಾದರೆ ಹದಿನಾರನೆಯದು ಬಾರಿಸುವ ಕಪ್ಪು ಗುಂಡಿನಂತಿದೆಯಲ್ಲವೇ...ನಾನೊಮ್ಮೆ ಇವೆರಡನ್ನು ಉಪಯೋಗಿ ಜಾಗಟೆ ಬಾರಿಸುವ ಆಸೆಯಾಯಿತು.

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಅವರ ಫೋಟೋ ತೆಗೆದುಕೊಂಡಿದ್ದು ಹೇಗೆ? ತುಂಬಾ ಸಾಹಸ ಮಾಡಿದ್ದಿರಾ. ಉತ್ತಮ ಬರಹ. ನಾಗೂ ಅಂದಂತೆ ದೇಶದ ಆರ್ಥಿಕತೆ ಕೇವಲ ಒಂದು ೫ ಗ್ರಾಂ ಬಂಗಾರ ದಾನದಿಂದ ಸಂಪೂರ್ಣ ಸುಧಾರಿಸಬಹುದು

ಕ್ಷಣ... ಚಿಂತನೆ... said...

ಪ್ರಕಾಶ್ ಸರ್‍, ಕಿವಿಯೋಲೆಯ ಚಿತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ. ಎಲ್ಲವೂ ಒಳ್ಳೆಯ ಮೂಡಿನಲ್ಲಿಯೇ ಇವೆ. ಲೋಲಾಕು, ಝುಮ್ಕಿ, ರಿಂಗು, ಬೆಂಡೋಲೆ + ಸರಪಳಿ, ಇತ್ಯಾದಿ ವಿವಿಧ ವಿನ್ಯಾಸದವು.. ಅಬ್ಬಬ್ಬಾ... ಸೂಪರ್‍....

ಜೊತೆಗೆ ನಿಮ್ಮ ನಾಗು ಮತ್ತು ರಾಜೇಶರ ಲೆಕ್ಕಾಚಾರ, ಬಜೆಟ್ಟು, ಇತ್ಯಾದಿ ಎಲ್ಲವೂ ನಗುವಿನೊಂದಿಗೆ ಚಿಂತನೆಯನ್ನು ಕಿವಿಯಲ್ಲಿ ಮೊರೆಸುವಂತಿವೆ.

ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.

ಮನಸು said...

wow!!! tumba chennagide haha

ರಾಜೀವ said...

ಪ್ರಕಾಶ್ ಸರ್,

ಅಬ್ಬಬ್ಬಾ. ಇತ್ತೀಚಿಗೆ "ಒಲವೇ ಜೀವನ ಲೆಕ್ಕಾಚಾರ" ಎಂಬ ಹೆಸರಿನ ಚಿತ್ರ ಪ್ರಕಟವಾಯಿತು. ಹಾಗೇ "ನಾಗುವಿನ ಜೀವನದ ಲೆಕ್ಕಾಚಾರ"ಎಂದು ನಿಮ್ಮ ನಾಗುವಿನ ಅನಿಸಿಕೆಗಳು, ಚಿಂತನೆಗಳು, ಲೆಕ್ಕಾಚಾರಗಳು ಎಲ್ಲ ಸೇರಿಸಿ ಒಂದು ಚಿತ್ರ ತೆಗೆಯಬಹುದೇನೋ.

ರಾಜಕಾರಿಣಿಗಳ ಹೆಸರಿನಲ್ಲಿ ಸ್ವಿಸ್ಸ್ ಬಂಕ್ನಲ್ಲಿ ಇರುವುದಕ್ಕಿಂತ, ನಮ್ಮ ಹೆಣ್ಣುಮಕ್ಕಳ ಕಿವಿಯಲ್ಲಿ ಇರುವುದೇ ಮೇಲು, ಬಂಗಾರದ ಒಡವೆಗಳು. ಏನಂತಿರಾ?

ಸವಿಗನಸು said...

ಪ್ರಕಾಶಣ್ಣ,
ಸೌಂದರ್ಯ ಎಲ್ಲೆಲ್ಲಿ ಇದೆ .....ಬಹಳ ಚೆನ್ನಾಗಿ ಸೆರೆ ಹಿಡಿದಿದ್ದೀರಾ....ಅದಕ್ಕೆ ತಕ್ಕ ಲೆಕ್ಕಾಚಾರ....ಲೇಖನ ನೋಡಿ ನಮ್ಮ ಹೆಣ್ಣು ಮಕ್ಕಳು ಇನ್ನಷ್ಟು ತಗೊತ್ತಾರೊ ಎನೊ ಗೊತ್ತಿಲ್ಲ....
ಇನ್ನಷ್ಟು ಬರಲಿ......

Unknown said...

ಪ್ರಕಾಶಣ್ಣ
ಹೆ೦ಗಸರ ಕಿವಿ ಓಲೆ ಹಾಗು ನಿಮ್ಮ ಬರಹ ೨ ರ ಹೊ೦ದಾಣಿಕೆ ಸೊಗಸಾಗಿ ಇದೆ .. ನೀವು ಕಿವಿಯ ಬಗ್ಗೆ ಬರೆದು
ಮೂಗಬೊಟ್ಟು ( ಮೂಗಿನ ನತ್ತು) ಬಗ್ಗೆ ಬರೆಯದಿದ್ದರೆ ಮೂಗು ಜಲಪಾತವನ್ನು ಹರಿಸುತ್ತದೆ .. ದಯವಿಟ್ಟು ಮೂಗಿನ ಬಗ್ಗೆ ಸಲ್ಪ ಕರುಣೆ ಹರಿಸುತ್ತಿರಿ ತಾನೇ ..?? :-) :-)
ಸೊಗಸಾದ ಬರಹ .. ಸು೦ದರ ಶೀರ್ಷಿಕೆಗಳು

Rajendra Bhandi said...

ಪ್ರಕಾಶಣ್ಣ ,
ಇದರಲ್ಲಿ ಮಲ್ಲಿಗೆ ಮುಡಿದಿರುವವಳ ಕಿವಿ, ಕಿವಿಯೋಲೆ ರಾಶಿ ಇಷ್ಟ ಆತು ಯಂಗೆ :-)

Rashmi Hegde said...

prakashanna.......nimma lekhana tumba chennagide,ashte sundara chaya chitra kooda....

Ittigecement said...

ವಿನುತಾ....

ಈ ಸಾರಿ ಚಿನ್ನದ ಆಭರಣಗಳ ಫೋಟೊ ಕಡಿಮೆ ಬಳಸಿರುವೆ...
ಮೊದಲನೆಯ ಚಿತ್ರಲೇಖನದ ತುಂಬಾ ಅದೇ ಇತ್ತಲ್ಲ....

ನಾಗುವಿನಷ್ಟೇ ವಿಚಿತ್ರ ಅವನ ಲೆಕ್ಕಾಚಾರಗಳು...
ನನ್ನ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಆತ ಬಂದೇ ಬರುತ್ತಾನೆ...

ಸಂತಸ, ಸಡಗರದಿಂದ ..
ಶೃಂಗಾರಗೊಂಡು..
ಸಂಭ್ರಮಿಸುವ ಹೆಣ್ಣನ್ನು ಕಂಡು ಹೊಟ್ಟೆಕಿಚ್ಚು ಆಗುವದಂತೂ ಸತ್ಯ........

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

Rajesh Manjunath - ರಾಜೇಶ್ ಮಂಜುನಾಥ್ said...
This comment has been removed by the author.
Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ಯಾವಾಗ ಎಲ್ಲಿ ದಾರೀಲಿ ಹೋಗುವಾಗ ನನ್ನನ್ನು ಮಹಿಳಾ ಮಣಿಯರು ಹಿಡಿದು ತದುಕುತ್ತಾರೋ ಗೊತ್ತಿಲ್ಲ, ಸ್ವಲ್ಪ ದಿನ ತಲೆ ಮರೆಸಿಕೊಂಡಿರುವುದು ನನಗೇ ಕ್ಷೇಮ ಎಂದೆನಿಸುತ್ತಿದೆ!!!

ಏನೇ ಆಗಲಿ ಚೆಂದದ ನಿರೂಪಣೆ ಮತ್ತು ಸೊಗಸಾದ ಫೋಟೋಗಳು, ಮತ್ತು ಮಲ್ಲಿಗೆ ಮುಡಿದವರಿಗೆ ನನ್ನ ನಮಸ್ಕಾರಗಳು...

ಏನೇ ಹೇಳಿ ನಿಮ್ಮ ಪ್ರೀತಿಗೆ ನಾನು ಆಭಾರಿ...

-ರಾಜು

ವನಿತಾ / Vanitha said...

ಈ ತರ್ಕ ಕೇಳಿ ದಂಗಾಗಿ ಹೋದೆ..ನಿಜಕ್ಕೂ ಎಷ್ಟು ಸತ್ಯ ಅಲ್ವ..!!!!! ಬರೀ ಕಿವಿ ಓಲೆ ಮಾತ್ರಾ ಸೇರಿದರೆ ಅಷ್ಟೊಂದು ಹಣ..ಇನ್ನು ಹೆಂಗಸರಾಗಲಿ, ಗಂಡಸರಾಗಲಿ, ಕೈಯಲ್ಲೊಂದು ರಿಂಗ್, ಕುತ್ತಿಗೆಯಲ್ಲೊಂದು ಚೈನ್ ಇಲ್ಲದವರು ತುಂಬಾ ಕಡಿಮೆ..ಅಬ್ಬಬ್ಬ..ತಲೆ ತಿರುಗೊದೊಂದೇ ಬಾಕಿ..!!!ನಿಜಕ್ಕೂ ನಮ್ಮದು ಶ್ರೀಮಂತರಿಂದ ಕೂಡಿದ ದೇಶ...ಒಳ್ಳೆಯ ಬರಹ ಹಾಗು ಚೆಂದದ ಫೋಟೋಗಳು..

Annapoorna Daithota said...

ಒಳ್ಳೇ ಕಲೆಕ್ಷನ್,

ಕಿವಿಗೆ ಆಭರಣ ಮಾಡುಸ್ಬೇಕು, ಒಳ್ಳೆ ಡಿಸೈನ್ ಇದ್ರೆ ಹೇಳಿ ಅಂತಾರಲ್ಲ, ಅವ್ರಿಗೆ ನಿಮ್ಮ ಬ್ಲಾಗ್ ಅಡ್ರೆಸ್ ಕೊಟ್ರಾಯ್ತು :-)

Ittigecement said...

ಉಮೇಶ್ ದೇಸಾಯಿಯವರೆ....

ಅಂದ... ಚಂದ ಬಯಸುವದೇ ಕಾಯಕ...
ಕನಸು ಕಾಣುವ ಕಣ್ಣಿಗೇನು ಕೆಲಸ...?

ಅಲಂಕಾರ,..
ಸಂತೋಷ.. ಸಡಗರ....
ಹುಚ್ಚುಕೋಡಿಯ ಮನಸು...
ಮತ್ತೆ ಮತ್ತೆ ಬೇಕೆನಿಸುತ್ತದೆ....
ಸಂಭ್ರಮಿಸುವ ಮನಗಳಿಗೆ....

ಇರಲಿ ಬಿಡಿ ಅತ್ರಪ್ತಿ...
ನಮ್ಮ ಜೇಬಿಗೆ ಬೀಳಬಾರದಷ್ಟೆ ಕತ್ತರಿ.....

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಶಿವು ಸಾರ್...

ಬಹಳ ಈ ಮೇಲ್ ಬರ್ತಾ ಇದೆ...
ನಾಗು ಮತ್ತು ರಾಜೇಶ್‍ರ್ ಫೋನ್ ನಂಬರ್ ಕೇಳಿಕೊಂಡು....
ಒಳ್ಳೆಯ ಮಸ್ತ್ ಆದ ಲೆಕ್ಕಾಚಾರ...!

ಹಿಂದೆ ಬಾಂಗ್ಲಾದೇಶದ ವಿಮೋಚನೆಯಲ್ಲಿ ನಮ್ಮ ದೇಶದ ಮಾನಿನಿಯರು..
ತಮ್ಮ ಆಭರಣಗಳನ್ನು ದಾನ ಮಾಡಿದ್ದರು..
ಎನ್ನುವ ವಿಷಯ ಹಿರಿಯರೊಬ್ಬರು ಫೋನ್ (ಸೋಮವಾರ ಪೇಟ್) ಮಾಡಿ ತಿಳಿಸಿದ್ದಾರೆ...
ಅಂಥಹ ಪರಿಸ್ಥಿತಿ ಇಲ್ಲ..
ಬರುವದಿಲ್ಲ ಬಿಡಿ...

ನಮ್ಮೂರಲ್ಲಿ "ಕಾಶಿ ಜವ್ಂಟೆ" (ಜಾಗಟೆ) ಅಂತ ಇರುತ್ತದೆ..
ಅದು "ಓಂ" ನಾದ ಸೃಷ್ಟಿಸುತ್ತದೆ...
ಪೂಜಾ ಸಮಯದಲ್ಲಿ ಅದನ್ನು ನುಡಿಸುತ್ತಾರೆ..
ಕೇಳಲು ಬಲು ಮಧುರ....

ಅದು ನೀವು ಹೇಳಿದ ಕಿವಿಯೋಲೆ ಥರಹ ಇರುತ್ತದೆ....

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಡಾ. ಗುರುಮೂರ್ತಿಯವರೆ(ಸಾಗರದಾಚೆಯ ಇಂಚರ)....

ಫೋಟೊಕ್ಕಾಗಿ ಬಹಳ ಕಷ್ಟ ಪಟ್ಟೆ...
ತುಂಬಾ ಪರಿಚಯದ ಒಬ್ಬ ಸಹೋದರಿಯ ಬಳಿ ಹಲವು ಬಗೆಬಗೆಯ ಕಿವಿಯೋಲೆಗಳಿದ್ದವು..
"ಪ್ರಕಾಶಣ್ಣ.. ಕಿವಿಯೋಲೆ ಕೊಡುತ್ತೇನೆ ..
ನನ್ನ ಫೋಟೊ ಮಾತ್ರ ಬೇಡ " ಎಂದಳು..
ಯಾಕೆಂದು ಬಿಡಿಸಿ ಕೇಳಿದಾಗ..
"ಫೋಟೊ ಕೆಳಗೆ ನೀನು ಬರೆಯುವ ಸಾಲುಗಳು
ನಿನ್ನ ಕವನಗಳು.. ಒಂಥರಾ ಮುಜುಗರ ಆಗುತ್ತದೆ..
ಆದರೆ ತುಂಬಾ ಚೆನ್ನಾಗಿರುತ್ತದೆ" ಅಂದು ಬಿಟ್ಟಳು...!


ರಸ್ತೆಯಲ್ಲಿಹೋಗುವಾಗ ಚಂದದ ಕಿವಿಗಳು ಕಾಣುತ್ತಿದ್ದವು...
ಹೇಗೆ ಕೇಳುವದು...?

ಕೆಲವೊಂದು ಕಾರಿನ ಒಳಗಿನಿಂದ ತೆಗೆದಿರುವೆ...
ಕೆಲವೊಂದನ್ನು ಹಾಲಂಡ್ ದೇಶದಿಂದ ವಿನೂತಾ
ಪ್ರೀತಿಯಿಂದ ಕಳಿಸಿದ್ದಾರೆ..
ಡಾ. ಪ್ರಶಾಂತ್ ಕೆಲವು ಕಳಿಸಿದ್ದಾರೆ...

ಕಿವಿಯೋಲೆಗಳ ಫೋಟೊ ಸಂಗ್ರಹಿಸಿದ ಕಥೆ ಇನ್ನೂ ದೊಡ್ಡದಿದೆ....

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...
This comment has been removed by the author.
Ittigecement said...

ಚಂದ್ರ ಶೇಖರ್....

ಕಿವಿಯ ಫೋಟೊ ತಲೆಯಲ್ಲಿದ್ದೆ...
ಕಳೆದ ಬೇಸಿಗೆಯಲ್ಲಿ ಕಾರವಾರಕ್ಕೆ ಅಕ್ಕನ ಮನೆಗೆ ಹೋಗಿದ್ದೆ...
ಮುಸ್ಲಿಮ್ ಮಹಿಳೆಯೊಬ್ಬಳ ಕಿವಿಯಲ್ಲಿ ಚಂದದ ಕಿವಿಯೋಲೆ ಕಂಡಿತು...
ಏನು ಮಾಡಲಿ...?
ನನ್ನಾಕೆಯನ್ನು ಪುಸಲಾಸಿ ಮಾತನಾಡಿಸಿದೆ...
ನಾನೂ ಸಹ ಹೇಳಿದೆ...
"ಇದು ಡಿಜಿಟಲ್ ಕ್ಯಾಮರಾ...
ನಾನು ಮುಖ ತೆಗೆಯುವದಿಲ್ಲ... ಕಿವಿ ಮಾತ್ರ" ಅಂದೆ...
"ಯಜಮಾನ್ ಕೊ ಪೂಚನಾ.." ಅಂತ ದೂರದಲ್ಲಿದ್ದ ಗಂಡನನ್ನು ತೋರಿಸಿದಳು....
ಅವನಿಗೆ ವಿನಂತಿಸಿದೆ.....
ಆತ . ನೋಡು ನೋಡುತ್ತಿದ್ದಂತೆ ಹತ್ತು ಹದಿನೈದು ಜನರನ್ನು ಕರೆಸಿದ...
ನನಗೆ ಬೆವರಿಳಿಯಿತು....

"ನಾನು ತುಂಬಾ ಪ್ರಾಮಾಣಿಕ...
ಎಂದು ಮಡದಿಯನ್ನು ತೋರಿಸಿ ಸಾಬೀತು ಪಡಿಸಿದೆ.....
ನನ್ನಾಕೆ " ಇವತ್ತು ನಾನಿಲ್ಲದಿದ್ದರೆ ನಿಮ್ಮ ವೇಟ್ ಕಡಿಮೆಯಾಗುತ್ತಿತ್ತಲ್ಲ.."
ಎಂದು ಬಹಳ ಬೇಸರ ಮಾಡಿಕೊಂಡಳು....

ಬಲು ಕಷ್ಟ ಈ ಕೆಲಸ......

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು......

Unknown said...

ಕಿವಿಯ ಬಗೆಗಿನ ನಿಮ್ಮ ಹುಡಕಾಟ, ತಮಾಷೆಯಾಗಿ ಪ್ರಾರಂಭವಾಗಿ ಘನಗಂಭೀರ ವಿಷಯಗಳನ್ನು ತಿಲೀಸಿಕೊಟ್ಟಿದೆ.
ಅಂದ ಹಾಗೆ ನಾನು ಕಳೆದ ಬಾರಿಯೇ ಕೇಳಿದ್ದೆ. ಯಾರು ಈ ನಾಗು? ಹಿಂದೆ ಕೆಲವು ಕನ್ನಡ ಸಾಹಿತಿಗಳು ಕೆಲವೊಂದು ಪಾತ್ರಗಳನ್ನು ಸೃಷ್ಟಿಸಿ ಅವನ್ನು ಶಾಶ್ವತಗೊಳಿಸಿದ್ದಾರೆ. ಉದಾಹೃನೆಗೆ ಬೀಚಿಯವರ ತಿಮ್ಮ. ಹಾಗೇ ನಾಗು ಎಂಬುವವರನ್ನು ಬ್ಲಾಗ ಲೋಕದ ಬರಹದಲ್ಲಿ ವಿಶಿಷ್ಟವಾಗಿ ಬಿಂಬಿಸುತ್ತಿದ್ದೀರಾ. ಹೀಗೇ ಮುಂದುವರೆಯಲಿ.

Shweta said...

ಪ್ರಕಾಶಣ್ಣ ,
ಮತ್ತದೇ ಲಾಜಿಕ್ .ವಾಹ್ ಅನ್ನುವ ತೆರನಾದುದು ನಾಗು ವಿನ ಐಡಿಯಾಗಳು..ನಿಮ್ಮ ಪುಸ್ತಕಕ್ಕಾಗಿ ಕಾಯುತಿದ್ದೇವೆ .
ಬೇಗ ಬರಲಿ.

PaLa said...

ವಾವ್, ಒಳ್ಳೇ ಸಂಗ್ರಹ.. ನಿಮ್ಮ ತಾಳ್ಮೆಗೆ ಅಭಿನಂದನೆ

ಜ್ಯೋತಿ said...

ಓಲೆಗಳು ಚೆನ್ನಾಗಿವೆ.
ಶಿವೂ ಅವರು ಭೂಪಟಗಳ ಹಿಂದೆ ಹೋದ ಹಾಗೆ ನೀವೂ ಕಿವಿಯ ಹಿಂದೆ ಬಿದ್ದಿದ್ದೀರ! ಒಂದಷ್ಟು ಒಳ್ಳೆ design ನೋಡಿದ ಹಾಗಾಯಿತು! ಇನ್ನಷ್ಟು ಬರಲಿ :-)

Ittigecement said...

ಮನಸು....

ಸಿಹಿಯಾದ ರಜಾದಿನ ಕಳೆದು ಮತ್ತೆ ಬ್ಲಾಗ್ ಲೋಕಕ್ಕೆ ಸ್ವಾಗತ....

ಈ ಫೋಟೊಗಳನ್ನು ಬಹಳ ಕಷ್ಟಪಟ್ಟು ತೆಗೆದೆ....

ಪರಿಚಯದವರೊಬ್ಬರ ಕಾಲೇಜಿಗೆ ಹೋಗುವ ಮಗಳೊಬ್ಬರ ಬಳಿ ಹಲವಾರು ಕಿವಿಯೋಲೆಗಳಿದ್ದವು...
"ಅಂಕಲ್ ನನ್ನ ಕಿವಿಯ ಫೋಟೊ ತೆಗೆದು ಕೊಳ್ಳಿ" ಅಂದಳು...
ನಾನು ತೆಗೆದು ಕೊಂಡೆ...
ಆ ನನ್ನ ಪರಿಚಯದವರು ಕೆಂಡಾಮಂಡಲವಾಗಿ ಅಬ್ಬರಿಸಿದರು...
"ಅವಳು ಸಣ್ಣ ಹುಡುಗಿ ತಿಳುವಳಿಕೆ ಇಲ್ಲ...
ನೀನು ವಿಚಾರ ಮಾಡ ಬೇಕಿತ್ತು...
ನಿನ್ನ ಬ್ಲಾಗ್ ಬಹಳ ಜನ ಓದುತ್ತಾರೆ..
ಇವಳು ಮುಂದೆ ಮದುವೆಯಾಗೋ ಹುಡುಗಿ...
ಅವಳ ಫೋಟೊ ಎಲ್ಲ ಹಾಕ ಬೇಡ ಮಾರಾಯಾ " ಅಂದು ಬಿಟ್ಟರು...
ನಾನು ಅವರನ್ನು ಕರೆದು ಫೋಟೊ ತೋರಿಸಿದೆ...
ಆಗ ಸಮಾಧಾನವಾಯಿತು...

ಮುಂದಿನದು ಮೂಗಿನ ಪ್ರಕಾರಗಳು, ಕುತ್ತಿಗೆ.. ಕೈ ಅಲಂಕಾರಗಳಿವೆ...

ಮೊಡೆಲ್ ಎಲ್ಲೆಂದು ಹುಡುಕಲಿ...?

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Umesh Balikai said...

ಪ್ರಕಾಶ್ ಸರ್,

ಅಂಕಿ-ಅಂಶ ಓದಿ ನನ್ನ ತಲೆ ಸಹ ಗಿರ್ರ್ ಅಂತು. ಅಷ್ಟೊಂದು ದೀರ್ಘ ಅಂಕಿ-ಸಂಖ್ಯೆ ಲೆಕ್ಕ ಹಾಕಿದ ನಾಗು ಮತ್ತು ರಾಜೇಶ್ ಗೆ ಅಭಿನಂದನೆಗಳು. ಸುಂದರವಾಗಿರೋ ಕಿವಿಗೆ ಅಷ್ಟೆಲ್ಲಾ ಹಿಂಸೆ ಕೊಟ್ಟು ಯಾಕಾದ್ರೂ ಅಷ್ಟೊಂದು ರಂಧ್ರಗಳನ್ನು ಮಾಡಿಸ್ಕೊತಾರೋ ಗೊತ್ತಿಲ್ಲ. ಬೇಕಿದ್ರೆ ಕೊರಳಲ್ಲೇ ಇನ್ನೊಂದೈದು ಗ್ರಾಂ ಜಾಸ್ತಿ ಚಿನ್ನ ಹಾಕ್ಕೋಬಹುದಲ್ಲ ಅನ್ನಿಸ್ತು. ಏನೇ ಆಗಲಿ, ನಿಮ್ಮ 'ಕಿವಿ' ಸಂಗ್ರಹ ಮಾತ್ರ ಅದ್ಭುತವಾಗಿದೆ. ಚಿತ್ರಗಳ ಜೊತೆಗಿರುವ ಶೀರ್ಷಿಕೆಗಳಂತೂ ಎಂದಿನಂತೆ ಕ್ಯಾಚೀ ಆಗಿವೆ. ಎಷ್ಟೊಂದು ತರದ ಕಿವಿಯೋಲೆಗಳ ಪರಿಚಯ ಮಾಡಿಸಿಕೊಟ್ರಿ, ತುಂಬಾನೆ ಥ್ಯಾಂಕ್ಸ್.

- ಉಮೇಶ್

PARAANJAPE K.N. said...

ಪ್ರಕಾಶರೇ
ಕಿವಿಯ ಬಗೆಗಿನ ನಿಮ್ಮ ಬರಹ, ಸು೦ದರ ಕಿವಿಗಳ ಚಿತ್ರ-ಚಿತ್ತಾರ ನೋಡಿ ಪುಳಕಗೊ೦ಡೆ. ನೀವು ಮು೦ದಿಟ್ಟ ಅ೦ಕಿ-ಅ೦ಶ ಕೂಡ ಬೆಚ್ಚಿ ಬೀಳಿಸುವ೦ತಿದೆ. ಬ್ಲಾಗೋದುಗರಿಗೆ ಏನಾದರು ಹೊಸದನ್ನು ಕೊಡಬೇಕೇ೦ಬ ನಿಮ್ಮ ತುಡಿತ ನಿಮ್ಮ ಪ್ರತಿ ಬರಹದಲ್ಲೂ ಕಾಣುತ್ತಿದೆ. ಚೆನ್ನಾಗಿದೆ. ಹೆಣ್ಣು ಅಲ೦ಕಾರಪ್ರಿಯೆ. ಉಳ್ಳವರು ಕಿವಿಗೂ ತೆರಪಿಲ್ಲದೆ ತೂತು ಮಾಡಿಸಿ ಚಿನ್ನದ ವಾಲೆ ಹಾಕಿಕೊಳ್ಳುವರು. ಅದು ಅವರವರ ಆರ್ಥಿಕ ಸಬಲತೆ ಅವಲ೦ಬಿಸಿದೆ. ಆದರೆ ವೈಯ್ಯಕ್ತಿಕವಾಗಿ ನನಗೆ ನಿರಾಭರಣ ಸೌಂದರ್ಯವೇ ಇಷ್ಟ.

ಬಾಲು said...

ಯಪ್ಪಾ... ಏನ್ರಿ ಇದು ಇ ತರ ಲೆಕ್ಕಾಚಾರ!!!

ನಾಗು ದೇಶದ ಅರ್ಥ ಮಂತ್ರಿ ಆಗಿದ್ದರೆ ಚೆನ್ನಾಗಿ ಇರ್ತ ಇತ್ತು.
ಅರ್ಥಿಕ ಹಿಂಜರಿತ ಇರ್ತ ಇರಲಿಲ್ಲ.

ಇಷ್ಟೆಲ್ಲಾ ಸಂಶೋದಿಸಿದ ನಾಗು, ರಾಜೇಶ್ ಗೆ ನಂ ಕಡೆ ಇಂದ ಸಿಕ್ಕಾಪಟ್ಟೆ ಅಭಿನಂದನೆ ಗಳು.
ಹಾಗು ಮಾಹಿತಿ ನ ನಮಗೆ ಕೊಟ್ಟ ನಿಮಗೂ, ತಮ್ಮ ಸುಂದರ ಕಿವಿ, ಓಲೆ ಮುಂತಾದುವುಗಳಿಗೆ ರೂಪದರ್ಶಿ ಆದವರಿಗೂ... ಥ್ಯಾಂಕ್ಸ್...

Ittigecement said...

ರಾಜೀವ....

ನೀವು ಹೇಳುತ್ತಿರುವದು ಸತ್ಯದ ಮಾತು...
ರಾಜಕಾರಣಿಗಳು ನುಂಗುವದಕ್ಕಿಂತ ನಮ್ಮ ಹೆಣ್ಣುಮಕ್ಕಳ ಕಿವಿಯಲ್ಲೇ ಇರುವದು ಉತ್ತಮ....

ನಮ್ಮ ಮಿತ್ರರಾದ "ಬಾಲು" ರವರ ಬ್ಲಾಗಿನಲ್ಲಿ ನೋಡಿ..
ರಾಜಕೀಯದವರ ಬಗೆಗೆ ಸೊಗಸಾದ ಹಾಸ್ಯ, ವ್ಯಂಗ್ಯ ಲೇಖನ ಬರೆದಿದ್ದಾರೆ....
ಪ್ರಸ್ತುತ ರಾಜಕೀಯದವರ ಲೇವಡಿ ಬಲು ಸೊಗಸಾಗಿ ಮಾಡಿದ್ದಾರೆ...
ಪ್ರತಿಕ್ರಿಯೆ ವಿಭಾಗದಲ್ಲಿ "ಬಾಲು" ಅಂತ ಅವರ ಲಿಂಕ್ ಸಿಗುತ್ತದೆ....

ನಾಗುವನ್ನು ನಿಮಗೆಲ್ಲ ನನ್ನ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಭೇಟಿಮಾಡಿಸುತ್ತೇನೆ....

ಅವನ ಲೆಕ್ಕಾಚಾರಗಳು ಐಡಿಯಾಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

Ittigecement said...

ಮಹೇಶ್....

ಸೌಂದರ್ಯ ಹುಡುಕುತ್ತ ಹೊರಟ ನನಗೆ ಬಹಳ ಫಜೀತಿ ಆಗಿದೆ...
ಅದು ಕೂಡ ಒಂದು ಬ್ಲಾಗ್ ವಿಷಯ ಆಗುವಷ್ಟಿದೆ....

ಹೆಣ್ಣಿನ ಮುಖದಲ್ಲಿ ಇನ್ನೂ ಏನೇನೊ ಕಾಣಿಸ್ತಾ ಇದೆ...
ಅದೆಲ್ಲ ಬ್ಲಾಗಿನಲ್ಲಿ ಹಾಕುವೆ ನೋಡುತ್ತಾ ಇರಿ.....

ಕಿವಿಯ ಸೊಬಗು ಮೆಚ್ಚಿದ್ದಕ್ಕೆ ಧನ್ಯವಾದಗಳು....

Ittigecement said...

ರೂಪಾರವರೆ....

ನಿಜ ಹೇಳಿದ್ದೀರಿ....
ನನ್ನ ಮುಂದಿನ ಟಾರ್ಗೆಟ್ ಅದೂ ಇದೆ....

ಹಿಂದೆ "ರಾಜಿ ಬಲು ಸುಂದರಿ" ಲೇಖನ ಬರೆದಾಗಲೇ ಕೆಲವರು ಈ ವಿಷಯ ಹೇಳಿದ್ದರು...
ಮೂಗಿಗೂ" ಆದ ಅನ್ಯಾಯ ಸರಿ ಪಡಿಸೋಣ....

ನಿಮ್ಮ ಪ್ರತಿಕ್ರಿಯೆಯಿಂದ ಇನ್ನಷ್ಟು ಉಬ್ಬಿ ಹೋಗಿದ್ದೇನೆ...
ಥ್ಯಾಂಕ್ಸು... ಥ್ಯಾಂಕ್ಸು... ಥ್ಯಾಂಕ್ಸು....!

Ittigecement said...

ಪ್ರೀತಿಯ ರಾಜೇಂದ್ರ....

ನನಗೆ ಸ್ವಲ್ಪ ಅಳುಕು ಇತ್ತು...
ಫೋಟೊ ಹಾಕಿದ್ದು ಇಷ್ಟ ಇಲ್ಲವೇನೋ ಅಂತ...
ಈಗ ಖುಷಿಯಾಯಿತು....

"ಮಲ್ಲಿಗೆ ಮುಡಿದವಳ..
ಮನದಿನಿಯನ...
ಮನದಾಳದ ಮಾತು..
ಮುದವ ತಂದಿದೆ....."

ಹಿರಿಯಣ್ಣನ ಶುಭ ಹಾರೈಕೆಗಳು........

ಆಗಾಗ ಆದರೂ ಬರುತ್ತಿರು ಮಾರಾಯಾ....

Ittigecement said...

ರಷ್ಮೀ.....

ನನ್ನ ಬ್ಲಾಗಿಗೆ ಸ್ವಾಗತ....

ಖುಷಿಯಾಗಿ ಬರೆದ ನಾಲ್ಕು ಸಾಲುಗಳು..
ಇನ್ನಷ್ಟು ಬರೆಯಲು ಉತ್ಸಾಹ ತಂದಿದೆ....

ತುಂಬಾ... ತುಂಬಾ ಧನ್ಯವಾದಗಳು....

Ittigecement said...

ರಾಜು (ರಾಜೇಶ್ ಮಂಜುನಾಥ್)

ನಿನಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು...
ನಾಗುವಿನ ತರಲೆ ಅನುಮಾನಗಳನ್ನು
ಸಮರ್ಥವಾಗಿ ನಿವಾರಿಸಿದ್ದಿಯಲ್ಲ...

ಮಹಿಳಾ ಮಣಿಗಳು ನಿನ್ನನ್ನು ಹಿಡಿದು ಕೊಂಡರೆ..
"ನಾಗುವಿನ" ಹೆಸರು ಹೇಳಿ ಬಿಡು...

ನಿನ್ನ ಫೋನ್ ನಂಬರ್ ಕೇಳುತ್ತಿದ್ದಾರೆ...
ಹುಡುಗಿಯರು... ಕೊಡ ಬಹುದಾ...?

ಕೆಲಸದ ಒತ್ತಡದ ನಡುವೆ...
ತರಲೆ ಸಮಸ್ಯೆಗಳನ್ನು ಪರಿಹರಿಸಿದ್ದಕ್ಕೆ
(ಅದೂ ರಾತ್ರಿಯಿಡಿ ಕುಳಿತು)

ಧನ್ಯವಾದ ಹೇಳಿದರೆ ಸಾಲದು...
ನಿನಗೆ ನಾನೊಂದು ಶಾಪ ಕೊಡುವೆ...

"ಶೀಘ್ರ ಕಲ್ಯಾಣ ಮಸ್ತು..."

Ittigecement said...

ವನಿತಾರವರೆ....

ನನ್ನ ಬ್ಲಾಗಿಗೆ ಸ್ವಾಗತ....
ನಿಮ್ಮ ಬ್ಲಾಗಿನಲ್ಲಿ ಬರುವ ಬಾಯಲ್ಲಿ ನೀರೂರಿಸುವ ಅನೇಕ ಅಡಿಗೆ ಪದಾರ್ಥಗಳನ್ನು
ಮನೆಯಲ್ಲಿ ಮಾಡಿಸಿ.. ರುಚಿಗೆ ಮರುಳಾಗಿ..
ನಿಮ್ಮ ಅಡಿಗೆ ಬ್ಲಾಗಿನ ಅಭಿಮಾನಿಯಾಗಿದ್ದೇನೆ...

ತುಂಬಾ ಸರಳವಾಗಿ..
ಸುಂದರವಾಗಿ ಬರೆಯುತ್ತೀರಿ...

ನಮ್ಮ ದೇಶ ಶ್ರೀಮಂತ ದೇಶ..
ಇಲ್ಲಿ ಬಡತನವೇನಿದ್ದರು ನಮ್ಮ ರಾಜಕಾರಣಿಗಳು ಮಾಡಿದ್ದು...
ನಮ್ಮ ಬಡತನಕ್ಕೆ ರಾಜಕೀಯದವರೆ ಕಾರಣ...

ಚಂದ್ರಶೇಖರ್ ಪ್ರಧಾನ ಮಂತ್ರಿಯಾಗಿದ್ದಾಗ
ವಿಶ್ವ ಬ್ಯಾಂಕ್ ಸಾಲ ತೀರಿಸಲು ನಮ್ಮ ಸ್ವಲ್ಪ ಬಂಗಾರ ಮಾರಾಟ ಮಾಡಿದರು...
ಲಜ್ಜೆಯಿಲ್ಲದ ರಾಜಕಾರಣಿಗಳು...!
ಆಗ ಯಶವಂತ್ ಸಿನ್ಹಾ ಹಣಕಾಸು ಮಂತ್ರಿಯಾಗಿದ್ದರು...

"ಲಾಲ್ ಬಹಾದ್ದೂರ್ ಶಾಸ್ತ್ರಿ" ಅಂಥವರು ನಮ್ಮ ನಾಯಕರಾಗಬೇಕಿತ್ತು...

ಶಾಸ್ತ್ರಿಯವರುಪ್ರಧಾನ ಮಂತ್ರಿಯಾಗಿದ್ದಾಗ ಅವರ ಮಗ
"ಅನಿಲ್ ಶಾಸ್ತ್ರಿಯವರು " ಸೀಮೆ ಎಣ್ಣೆಗಾಗಿ...
ಕ್ಯೂ ನಲ್ಲಿ ನಿಂತು ತರುತ್ತಿದ್ದರಂತೆ....

ಕ್ಷಮಿಸಿ ಎಲ್ಲಿಗೋ ವಿಷಯ ಹೊರಳಿಬಿಟ್ಟಿತು...

ಪ್ರತಿಕ್ರಿಯೆಗಾಗಿ ಧನ್ಯವಾದಗಳು...

geeta bhat said...

Hi............

yavagalu ittigecement madyane iravu kuda istu sukshmavagi,istu aalavgi hengasara aabharanada bagge yochane madti andre nabale agta ille.nange nachike agta iddu,nanu hennagi idra bagge ondinanu yochane madidnille heli..........nanage hagella kivi chuchkyandavra nodidre ontara....agta ittu.nimma photo nodida mele,matte nimma anisike nodidamele adra soudarya swalpa swalpa gotagta.... iddu.

and once again thanks ,nimma baraha nanna yochanena badalayisidakke.........!!

Prabhuraj Moogi said...

ಬಂಗಾರದಂತಾ ಮಾತು ಸರ್, ಏನ್ ಬಂಗಾರ ಇದೆಯಲ್ಲ... ಈಗಲೇ ಇಷ್ಟು ಇದ್ದರೆ ಇನ್ನು ಬ್ರಿಟೀಷರು ಬಂದಾಗ ಇನ್ನೆಷ್ಟು ಇದ್ದೀತು ಅಂತೀನಿ.
ಕಿವಿಯೋಲೆಗಳೂ ಒಂದಕ್ಕಿಂತ ಇನ್ನೊಂದು ಚೆನ್ನಾಗಿವೆ, ಈಗ ಗಂಡಸರೂ ಕಿವಿಯೋಲೆ ಹಾಕಿತಿದಾರೆ ಫ್ಯಾಷನ್ನ್ ಅಂತ... ಅದನ್ನೆರಡು ಎಲ್ಲಾದ್ರೂ ಹುಡುಕಿ ಹಾಕಬೇಕಿತ್ತು ಹಾಗೇ ಸುಮ್ಮನೇ ಹೇಳಿದೆ :)

Ittigecement said...

ಅನ್ನಪೂರ್ಣಾರವರೆ....

ಈ ಕಿವಿಯ ಬಗೆಗೆ ಇನ್ನೂ ಒಂದು ಭಾಗ ಬರಲಿದೆ....
ಇದರ ಬಗೆಗೆ ಹುಡುಕುತ್ತ ಹೋದ ಹಾಗೆ ಬಹಳಷ್ಟು ವಿಷಯ ತಿಳಿದು..
ನಾನು ದಂಗಾಗಿ ಹೋದೆ....

ಫೋಟೊ ಲೇಖನ ಇಷ್ಟವಾಗಿದ್ದಕ್ಕೆ...
ನನ್ನ ಶ್ರಮ ಸಾರ್ಥಕ...

ಧನ್ಯವಾದಗಳು...

mukhaputa said...

sir ee recesion time-nalli olle idea kottiddiri tumba chanda baravanige

Ittigecement said...

ಸತ್ಯ ಸರ್.....

"ನಾಗು" ಪುಣ್ಯಾತ್ಮ ಇದ್ದಾನೆ...
ನನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಂದೇ ಬರ್ತಿನಿ ಅಂತ ಪ್ರಾಮಿಸ್ ಮಾಡಿದ್ದಾನೆ...
ಖಂಡಿತ ಬರ್ತಾನೆ.
ನಿಮಗೆಲ್ಲ ಪರಿಚಯ ಮಾಡಿಸ್ತಿನಿ....

ದಕ್ಷಿಣ ಅಮೇರಿಕಾದಲ್ಲಿ ಒಂದು ಜನಾಂಗದವರು ಮೂಗಿಗೆ ಅಡ್ಡವಾಗಿ ಒಣಗಿದ ಕಡ್ಡಿಯನ್ನು ಚುಚ್ಚಿಕೊಳ್ಳುತ್ತಾರೆ...
ಅದರಿಂದ ಯಾವುದೇ ರೋಗ ಬರುವದಿಲ್ಲವೆಂದು ಅವರ ನಂಬಿಕೆ...

ಕಿವಿಯ ಜೋಲುವ ವಿಸ್ಮಯ ಇಷ್ಟಪಟ್ಟಿದ್ದು ತುಂಬಾ ಖುಷಿ ಆಯ್ತು...
ಧನ್ಯವಾದಗಳು...

Ittigecement said...

ಶ್ವೇತಾ.....

ಸುಶ್ರುತನ ಪುಸ್ತಕ ಬಿಡುಗಡೆ ಸಮಯದಲ್ಲಿ "ಶ್ರೀಧರ್" ಸಿಕ್ಕಿದ್ದರು..
ಅವರು ನಿಮ್ಮ ಬರವಣಿಗೆಯ ಬಗೆಗೆ ಹೇಳಿದರು...
ನಿಮ್ಮ ಬ್ಲಾಗ್, ಬರವಣಿಗೆ ತುಂಬಾ ಚೆನ್ನಾಗಿದೆ....

ಮಹಿಳೆಯರ ಈ ಥರಹದ ಫೋಟೊ ಲೇಖನಗಳಿಗೆ..
ರೂಪದರ್ಶಿಗಳನ್ನು ಹುಡುಕುವದು ತುಂಬಾ ಕಷ್ಟವಾಗಿದೆ...

ಇಲ್ಲವಾದಲ್ಲಿ ಕದ್ದು ಫೋಟೊ ಸೆರೆಹಿಡಿಯ ಬೇಕು...
ಅದು ಇನ್ನೂ ಕಷ್ಟ....

ಗಂಡು ಮಕ್ಕಳ ಬಗೆಗೆ ಇದೇ ಥರಹದ ಫೋಟೊ ಲೇಖನ ಸಿದ್ದವಾಗುತ್ತಿದೆ...
ಇಲ್ಲಿ ರೂಪದರ್ಶಿಗಳ ಸಮಸ್ಯೆ ಇಲ್ಲ...
"ಸಾಕ್ರೋ ಮಾರಾಯರಾ.." ಅನ್ನ ಬೇಕಾಗಿದೆ.....

ಫೋಟೊ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

Ittigecement said...

ಪಾಲಚಂದ್ರ....

ತಾಳ್ಮೆ.....
ಅದೇ ನನ್ನ ಆಯುಧ ಹಾಗು ದೌರ್ಬಲ್ಯ....
ಸ್ನೇಹಿತ ಮಲ್ಲಿಕಾರ್ಜುನ್ ಈ ಸಾರಿ ತಮ್ಮ ಬ್ಲಾಗಿನಲ್ಲಿ ಕೇರಳದ ಮಹಿಳಾ ಮಣಿಗಳು ಉಪಯೋಗಿಸುವ ತೈಲದ ಬಗೆಗೆ ಬರೆದಿದ್ದಾರೆ....
ಆ ತೈಲದಿಂದಾಗಿ ಅವರ ತಲೆಕೂದಲು ಕಪ್ಪಗಿರುತ್ತದೆ...

ತಾವು ಚಂದವಾಗಿ ಇರಲಿಕ್ಕೆ ಮಹಿಳೆಯರು ಎಷ್ಟೆಲ್ಲಾ ಕಷ್ಟ ಪಡುತ್ತಾರೆ...

ಗಂಡಸರಿಗೆ ಅದು ಸಾಧ್ಯವೇ ಇಲ್ಲ....

ಫೋಟೊ ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು....

shridhar said...

ಬಜೆಟ್ ಲೆಕ್ಕಾಚಾರ ಸೂಪರ್ ... ಅಂತೆಯೇ ನಿಮ್ಮ ಕಿವಿಯೋಲೆ ಚಿತ್ರ ಬರಹವು ಸಹ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಅಣ್ಣೋ... ನಿಮಗೂ, ನಿಮ್ ನಾಗುವಿಗೂ ಒಂದು ದೊಡ್ ನಮಸ್ಕಾರ!!! :-)

ಪಾಚು-ಪ್ರಪಂಚ said...

Prakashanna,

Soundarya ellelli adagirutto..?? adannu noduva kanniddare, anubhavisuva manasiddare pratiyondu vastuvinallu soundarya kaanabahudu antha proove madiddeeri.
Nimma photogalannu nodida mele, naanu kiviya cheluvannu saviyalarambhisiddene, yavaga edavattu agutto gottilla...:-)

Sundara chitra-baraha..

Rohini said...

very very nice prakashanna, very intersting photos.really enjoyed.

UMESH VASHIST H K. said...

Lekkachaara bombaat, Photogalu bombaat, foriegn kivigalu bere ide lekhana,padya gadya yella chennagide

Unknown said...

Lekhana lekkacharadondige hasyavu seri tumba chennagide.sundaravada photogalu.naguvina vichara ishtavayitu.

Ittigecement said...

ಜ್ಯೋತಿಯವರೆ....

ಈ ಆರ್ಥಿಕ ಮುಗ್ಗಟ್ಟಿನ ಸಂದರ್ಭ ಎದುರಿಸುವದು ಸುಲಭದ ಮಾತಲ್ಲ...
ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಗೊತ್ತಿಲ್ಲ...
ನಮ್ಮ ತಲೆಯನ್ನು ಬೇರೆ ಕಡೆ ಎಂಗೇಜಿನಲ್ಲಿಡುವದು ತುಂಬಾ ಅವಶ್ಯಕ...
ಈ ನಿಟ್ಟಿನಲ್ಲಿ......
ನನಗೆ ಈ ಬ್ಲಾಗ್ ತುಂಬಾ ಸಹಾಯ ಮಾಡಿದೆ...

ಖುಷಿಯಿಂದ ಬರೆಯುತ್ತೇನೆ..
ನಿಮಗೂ ನನ್ನ ಶ್ರಮ ಇಷ್ಟವಾದಲ್ಲಿ ತುಂಬಾ ಸಂತೋಷ....

ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಎಷ್ಟೋಂದು ತರತರದ ಕಿವಿಗಳು ಸರ್. Simply superb.
ನೀವು ಅದಕ್ಕೆ ಎಷ್ಟೆಲ್ಲಾ ಕಷ್ಟ ಪಟ್ಟಿರಬೇಕು...
ನಮ್ಮ ದೇಶದ ಹೆಂಗೆಳೆಯರ ಕಿವಿಗಳಲ್ಲಿರುವ ಬಂಗಾರದಿಂದ ದೇಶದ ಸಾಲ ತೀರಿಸುವುದಕ್ಕಿಂತ ಭ್ರಷ್ಟ ರಾಜಕಾರಣಿಗಳು ಸ್ವಿಸ್ ಬ್ಯಾಂಕಲ್ಲಿಟ್ಟಿರುವ ಹಣದಿಂದ ತೀರಿಸಬೇಕು ಅಲ್ವಾ ಸರ್?
ಏಕೆಂದರೆ ಹೆಂಗಸರು ಸ್ವಲ್ಪ ಹಣ ಕೂಡಿಟ್ಟುಕೊಂಡರೆ ಮಾಡಿಸಿಕೊಳ್ಳುವುದೇ ಈ ಓಲೆ.
ಅದಿರಲಿ ನಿಮ್ಮ ನಾಗು ಮತ್ತು ರಾಜೇಶ್ ಅವರಿಗೂ ಖಂಡಿತ ಥ್ಯಾಂಕ್ಸ್ ಹೇಳಬೇಕು ಸರ್. ಉತ್ತಮ ಮಾಹಿತಿ ಕೊಟ್ಟಿದ್ದಾರೆ.
ಒಟ್ನಲ್ಲಿ ನಿಮ್ಮ ಬ್ಲಾಗ್ ಚೆಲುವೂ ಚೆಲುವು...

Unknown said...

ಪ್ರಕಾಶಣ್ಣಾ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು . ಶ್ರೀ ಕೃಷ್ಣನು ತಮಗೆ ಸಕಲ ಸೌಭಾಗ್ಯವನ್ನು ಕೊಟ್ಟು ಹರಸಲಿ ಎ೦ದು ಈ ಶುಭ ಸ೦ದರ್ಭದಲ್ಲಿ ಹಾರೈಸುತ್ತೇನೆ
ರೂಪಾ

Arun said...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net

Ittigecement said...

ಉಮೇಶ್....

ಕಿವಿಗೆ ಒಂದು ಅಲಂಕಾರವಿದ್ದರೆ ನೋಡಲು ಚಂದ...
ಅದು ಊಟದ ಸಂಗಡ ಇರುವ ಉಪ್ಪಿನ ಕಾಯಿಯ ಹಾಗೆ...

ಬೋಳು ಕಿವಿ, ಬೋಳು ಹಣೆ...
ಅದರಲ್ಲಿ ಏನೂ ಸೊಗಸಿಲ್ಲ ಅನ್ನುವದು ನನ್ನ ಅನಿಸಿಕೆ....

ಆದರೆ ಉಪ್ಪಿನ ಕಾಯಿಯೇ ಊಟವಾಗಬಾರದು...

ಈ ಚಂದದ ಕಿವಿಗಳಿಗೆ ಸಮಸ್ಯೆಗಳು ಹಲವಾರು..
ಈ ಆಭರಣಗಳು ಕೂದಲಿಗೆ ಸಿಕ್ಕಿ ಹಾಕಿಕೊಳ್ಳುತ್ತವೆ..
ಅದನ್ನು ಧರಿಸುವದು ಸುಲಭದ ಮಾತಲ್ಲ...

ಕೆಲವೊಮ್ಮೆ (ಹೆಚ್ಚಿನ ಬಾರಿ) ಪತಿ ಮಹಾಶಯನ ಡ್ಯೂಟಿ ಇದು....
ಈ ಆಭರಣಗಳ ಡಿಸೈನ್ ಬಲು ಬೇಗ ಬದಲಾಗುತ್ತ ಇರುತ್ತದೆ..
ಜೇಬಿಗೆ ಕತ್ತರಿ..!

ಇಷ್ಟೆಲ್ಲ ಇದ್ದರೂ ಇದೊಂದು ಸೊಗಸು...
ಬಿನ್ನಾಣಗಿತ್ತಿಯರ ಸೊಬಗು ಹೆಚ್ಚಿಸುವದು.. ಏನಂತೀರಾ...?

ಉಮೇಶ್ ..
ಕಿವಿಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Shweta said...

Thank you prakaashanna..
You are right..
Waiting for the next article.

Dr. HARISH KUMARA BK (BANUGONDI) said...

adbuta!!!!!!!!!!

Me, Myself & I said...

ನಮೋನ್ನಮಃ

Ittigecement said...

ಪರಾಂಜಪೆಯವರೆ....

ನಾನು ನನ್ನ ಕಾಲೇಜು ದಿನಗಳಲ್ಲಿ..
ಪುಷ್ಪಕ ವಿಮಾನ" ಅಂತ ಮೂಕಿ ಚಿತ್ರ ನೋಡಿದ್ದೆ..
ಅದರಲ್ಲಿ ಒಂದು ಆಭರಣದ ಅಂಗಡಿಯಲ್ಲಿ ಕಮಲ್ ಹಾಸನ್..
ಅಮಲಾಳಿಗೆ ಕಿವಿಯ ಓಲೆ ಸಿಲೆಕ್ಟ್ ಮಾಡಿಸುತ್ತಾನೆ..
ಎಲ್ಲೂ ಎಲ್ಲೆ ಮೀರದ..
ಹಿತವಾದ.., ಸುಖಾನುಭವ ಕೊಡುವ
ಆ ವಯಸ್ಸಿನ ಪ್ರೇಮ ಆ ಸಿನೇಮಾದಲ್ಲಿದೆ...

ಅದರಲ್ಲಿ ಕೊನೆಯ ದೃಷ್ಯದಲ್ಲಿ ಕಮಲ್ ಅಮಲಾಳಿಗೆ "ನಿನ್ನ ಕಿವಿಯ ಓಲೆ ಚೆನ್ನಾಗಿದೆ ಅಂತ ಅಭಿನಯ ಮಡಿ ತೋರಿಸುತ್ತಾನೆ..
ಅದಕ್ಕೆ ..ಅಮಲಾ
"ನಿನ್ನ ಹೃದಯ ತುಂಬಾ ಒಳ್ಳೆಯದಿದೆ...
ನೀನು ಒಳ್ಳೆಯವ"
ಎಂದು ಅಭಿನಯಿಸಿ ಹೇಳುವಾಗ ಅವಳ ಕಣ್ಣಲ್ಲಿ ನೀರು ಜಿನುಗುತ್ತದೆ..

ನಮ್ಮ ಕಣ್ಣಲ್ಲೂ ಕೂಡ...

ನೀವು ಇಷ್ಟಪಟ್ಟಿದ್ದು ತುಂಬಾ ಖುಷಿಯಾಗುತ್ತಿದೆ...
ಧನ್ಯವಾದಗಳು...

ಸುಧೇಶ್ ಶೆಟ್ಟಿ said...

nanna comment hege delete aayithu? :)

Ittigecement said...

ಸುಧೇಶ್....

ನಿಮ್ಮ ಕಮೆಂಟ್ಸ್ ನಾನು ಓದಿಯೇ ಇಲ್ಲ....

ಹಾಗೆಯೇ
"ನೆನಪಿನ ಸಂಚಯಿಂದ" ಅನ್ನುವವರ ಪ್ರತಿಕ್ರಿಯೆ ಕೂಡ ಡಿಲೀಟ್ ಆಗಿದೆ....

ಇದು ಹೇಗೆ ಸಾಧ್ಯ....?
ನಾನಂತು ಪ್ರತಿಕ್ರಿಯೆಗಳಿಗೆ ಕಾತರಿಸುತ್ತಿರುತ್ತೇನೆ....
ನಾನು ಡಿಲೀಟ್ ಮಾಡಿಲ್ಲ....

ಯಾರಾದರೂ ಸಾಧ್ಯತೆಯ ಬಗೆಗೆ ತಿಳಿಸುವಿರಾ...?

ಏನಾಗಿರ ಬಹುದು...?

Dhoomakethu said...

Tumba chennagi bardidira saar,ast potogala jotege idnu serskond bidi :)

http://www.flickr.com/photos/dhoomakethu/3190035066/in/set-72157612463129332/

ಧರಿತ್ರಿ said...

ಪ್ರಕಾಶ್ ಸರ್..ತುಂಬಾ ದಿನಗಳಾಯ್ತು ಇತ್ತ ತಲೆಹಾಕದೆ. ಅಂದಹಾಗೆ..ಕಿವಿಯೋಲೆ ಮತ್ತೊಮ್ಮೆ ಮನ ಚುಂಬಿಸಿದೆ. ನಾಗು ಸರ್ ನ ಬಜೆಟ್ ಲೆಕ್ಕಾಚಾರವಂತೂ ಸಕತ್ತಾಗಿದೆ. ಅವರಿಗೂ ಧನ್ಯವಾದ ತಿಳಿಸಿ.
-ಧರಿತ್ರಿ

ಜಲನಯನ said...

ಪ್ರಕಾಶ್ ನಿಮ್ಮ ಇಟ್ಟಿಗೆಗೆ - ಸಿಮೆಂಟ್ ಸಿಕ್ಕಂತೆ ಕಿವಿಗಳಿಗೆ ಓಲೆ ಸಿಕ್ಕಿರುವುದು ಬಹಳ ಸಂತಸದ ವಿಷಯ, ಅಲ್ಲಾ..ನಿಮಗೆ ಇದಕ್ಕೆ ಸಮಯ ಎಲ್ಲಿ ಸಿಕ್ತು ಅಂತೀನಿ..??? ಕೊರೆಸಿಕೊಳ್ಳುವರಿದ್ದರೆ ಕಿವಿ ತೂತುಗಳಿಗೆ ಕೊರತೆ ಇರದು ಹಾಗೇ ಓಲೈಸುವರಿದ್ದರೆ ಓಲೆ ಕೊಳ್ಳುವವರಿಗೆ ಕಿವಿಗೆ ಏರಿಸುವವರಿಗೆ ಬರವಿಲ್ಲ. ನನಗೆ ಕ್ರಿಕೆಟ್ ಕಾಮೆಂಟರಿಯಲ್ಲಿ ಬರುತ್ತಿದ್ದ ಓಲೆಗಳ ಪಾರ್ಶ್ವ ವೀಕ್ಷಕ ವಿವರಣೆ ನೆನಪಿಗೆ ಬಂತು. ಚನ್ನಾಗಿ ಮೂಡಿಸಿ ಪದ-ವಿವರ ನೀಡಿದ್ದೀರಿ..ಭೇಷ್ ಎನ್ನದೇ ವಿಧಿಯಿಲ್ಲ.

sweet hammu said...

"ಸಾರ್.... ಚಂದ ಯಾರು ನೋಡ್ತಾರೆ...?
ಹೊಟ್ಟೆ ತುಂಬಿದವರು...!
ಹಸಿವು ಇರುವವನಿಗೆ ಚಂದ ಕಾಣಿಸೋದಿಲ್ಲ... ಸಾರ್...!
ಅವನಿಗೆ ಅದರ ಅಗತ್ಯವೂ ಇಲ್ಲ...
ಬಣ್ಣ... ಬಣ್ಣದ ಬದುಕು..
ಅಂದ.. ಚಂದ...
ಎಲ್ಲ ಹೊಟ್ಟೆ ತುಂಬಿದವರಿಗೆ... ಸಾರ್...!
ಹಸಿವಿಗೆ ಧರ್ಮವೇ.. ಇಲ್ಲ ಸಾರ್...!
ಅದಕ್ಕೆ ಧರ್ಮವೇ ಬೇಕಿಲ್ಲ..." ನಿಜಕ್ಕೂ ಪಕ್ಕದಲ್ಲಿ ಯಾರೋ ಕೂತು ಹೇಳಿದ ಹಾಗಿದೆ. ಬದುಕಿನ ಸತ್ಯ ಹಾಗು ವಾಸ್ತವ . Delete Comment

Swathi Bhat said...
This comment has been removed by the author.