Friday, April 17, 2009

ಆಕಾಶ... ದೀಪವೂ... ನೀನು.....(ಭಾಗ ೨)




ನನಗೆ ಏಸಿಯಲ್ಲೂ... ಮೈ ಬೆವರಿತ್ತು....


ಪೋಲಿಸನಿಗೆ ಫೈನ್ ಕಟ್ಟಿ ಸಾಗ ಹಾಕಿದೆ...

ತಕ್ಷಣ ನಾಗುವಿಗೆ ಫೋನಾಯಿಸಿದೆ....

"ನಾಗು .. ಫೋನ್ ಬಂದಿತ್ತು... ಅವಳು ವಿಜಯನಾ...?"

"... "ರಾಜಿ" ವಿಷಯದಲ್ಲಿ ನೀನೂ ನನಗೆ ಸತಾಯಿಸಿದ್ದೀಯಾ...

ನನ್ನ ಮೇಲೆ ನಂಬಿಕೆ ಇಡು....
ಸತ್ಯನಾರಾಯಾಣ ಪೂಜೆಗೆ ಬರ್ತಿಯಲ್ಲ...

ಎಲ್ಲ.. ಗೊತ್ತಾಗ್ತದೆ... ಬಾ... ಅಲ್ಲಿಯವರೆಗೆ ಏನೂ ಹೇಳಲಾಗುವದಿಲ್ಲ..."

ತಥ್... ಇವನಾ...!

ಹೀಗೆ ಸತಾಯಿಸುವದು ನಾಗುವಿಗೆ ಮೊದಲಿನಿಂದಾ ಅಭ್ಯಾಸ...
ನನಗೆ ಪ್ರಾಣ ಸಂಕಟ...

ಈ ಸಾರಿ ಈ ವಿಷಯ ನನ್ನಾಕೆಗೆ ಹೇಳಲಿಲ್ಲ...

ನನ್ನೊಳಗೇ ಕಾತುರ.., ತಳಮಳ...

ಎಷ್ಟು ...ಬೇಗ.... ನಾಳೆ ...ಇಂದಾಗುತ್ತದೆ..!

ಇಂದು ....ಈಗ ...ಆಗುತ್ತದೆ...!

ಈಗ .. ಈ.. ಕ್ಷಣದಲ್ಲಿ ನಾನಿರ... ಬೇಕು....!


ಬೆಳಿಗ್ಗೆ ಹತ್ತು ಗಂಟೆಗೆ ನಾಗುವಿನ ಮನೆಯಲ್ಲಿ ನಾವಿದ್ದೆವು...


ಬಡ್ಡಿಮಗ... ನಾಗು ಇಂಥಹ ಸಮಯದಲ್ಲಿ....
ಎಂದಿಗಿಂತ ಹಸನ್ಮುಖಿ... ತಾಳ್ಮೆಯ ಪ್ರತೀಕ...

ಸಾಮಾನ್ಯವಾಗಿ ಅರ್ಥವಾಗುವ "ನಮೂನೆಯೇ" ಅಲ್ಲ...

ಯಾರ್ಯಾರೋ ಬಂದಿದ್ದರು.. ಎಲ್ಲಿ ನೋಡಿದರೂ ನಗು..
ನಾಗುವಿನ ಮನೆಗೆ ನಗಲಿಕ್ಕೇ ಬರ್ತಾರೆ...

ನನಗೆ ಆ ನಗು ಬೇಕಾಗಿರಲಿಲ್ಲ....

ನನ್ನ ನಗುವನ್ನು ಕಾಯುತ್ತಿದ್ದೆ....

ಕತ್ತು ತಿರುಗಿಸಿ ಗಮನವೆಲ್ಲ ಬಾಗಿಲ ಕಡೆ ನೋಡುತ್ತಿದ್ದೆ...

ಮಧ್ಯ ವಯಸ್ಸಿನ ದಂಪತಿಗಳು ಬಂದರು....

ಬಂದವರೇ ನನ್ನ ಬಳಿ..ಬಂದು ಪರಿಚಯದ ನಕ್ಕರು...

ಅವರ ಮಡದಿ ನೋಡಿದೆ....
ಹಸಿರು ರೇಷ್ಮೆ ಸೀರೆ.. ದೊಡ್ಡದಾಗಿ ಹಣೆಗೆ ಕುಂಕುಮ.. ಲಕ್ಷಣವಾಗಿದ್ದರು...

ಇವಳು ವಿಜಯಾನಾ...?

" ಸರ್...ನೀವು ಪ್ರಕಾಶ ಹೆಗಡೆಯವರಲ್ಲವೇ...?"

"ನಿಜ...ನನಗೆ ನಿಮ್ಮನ್ನು ನೋಡಿದ ನೆನಪಿಲ್ಲವಲ್ಲ..."

" ನಾವು ಈ ಮೊದಲು ಭೇಟಿಯೇ ಆಗಿಲ್ಲ...
ನಿಮ್ಮ ಸ್ಥೂಲ ಪರಿಚಯ ನಾಗು ಹೇಳಿದ್ದರು ಫೋನಿನಲ್ಲಿ..

ಹಾಗಾಗಿ ಗುರುತು ಹಿಡಿದೆ.."

ಓಹ್... ಇವಳು ವಿಜಯ...!!

ಮತ್ತೊಮ್ಮೆ ನೋಡಿದೆ...

ಕಣ್ಣಲ್ಲಿ ಹೊಳಪಿತ್ತು...

ನಗುವಿನಲ್ಲಿ ಮಿಂಚಿತ್ತು...

ಹದಿಹರೆಯದಲ್ಲಿ...??

ನನ್ನ ವಿಜಯಾ ಥರ...?

ಉಹೂಂ... ಇವಳು ವಿಜಯ ಅಲ್ಲ...!
ಇವಳು ವಿಜಯ ಆಗಿರಲು ಸಾಧ್ಯವೇ ಇಲ್ಲ....!

ಇವರು ನನ್ನ ಗುರುತು ಹೇಗೆ ಹಿಡಿದರು ...ಆಶ್ಚರ್ಯವಾಯಿತು...

" ನಿಮ್ಮ ನಾಗು ಬಹಳ ಪ್ರತಿಭಾವಂತ ಕಣ್ರೀ...
ಆರಡಿ ಅಗಲ...
ಆರು ಅಡಿ ಉದ್ದವಿದ್ದವರೊಬ್ಬರು ...
ಮೀಸೆ ಇಲ್ಲದೆ ನಗುತ್ತಿರುತ್ತಾರೆ..


ತಲೆಯ ಹಿಂಬದಿಗೆ ಇಥೋಪಿಯಾದ ನಕಾಶೆ ಇರುವವ ನಮ್ಮ ಪ್ರಕಾಶ ಅಂತ..
ನಾಗು ತುಂಬಾ ತಮಾಶೆ ವ್ಯಕ್ತಿ ಕಣ್ರೀ...
ನಿಮ್ಮನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆ...!!
ನನಗೆ ನಿಮ್ಮ ಪರಿಚಯ ಬಹಳ ಸುಲಭದಲ್ಲಿ ಆಯಿತು.. ನೋಡ್ರೀ..."

ನಾಗುವಿನ ತಲೆಗೆ ಏನಾದರೂ ತೆಗೆದು ಕೊಂಡು ಚಚ್ಚಬೇಕು ಅನಿಸಿತು...

ಹೀಗಾ ಪರಿಚಯ ಮಾಡಿ ಕೊಡುವದು...? ಅಹಾ....!

ನಾನು ಬಾರದ ನಗು ನಕ್ಕೆ...

"ನೋಡಿ ನನಗೊಂದು ಮನೆ ಕಟ್ಟ ಬೇಕು... ನೀವು ಚಂದವಾಗಿ ಮನೆ ಕಟ್ಟುತ್ತೀರಂತೆ..
ಪ್ರಾಮಾಣಿಕರಂತೆ..ನಮ್ಮನೆ ಬನ್ನಿ ನಮ್ಮ ಮನೆ ಕಟ್ಟುವ ಜವಾಬ್ದಾರಿ ನಿಮ್ಮದು..
ಹಣ ಕೊಟ್ಟರೂ ಪ್ರಾಮಾಣಿಕರು ಸಿಗುವದಿಲ್ಲವಲ್ಲ ಈ ಪ್ರಪಂಚದಲ್ಲಿ.."

ಇಲ್ಲಿಯವರೆಗೆ ನೆನಪಾಗಿ ಕಾಡಿದ್ದ... ಕನಸಿಗಿಂತ......

ಎದುರಿಗಿದ್ದ ಬದುಕಿನ ಅವಶ್ಯಕತೆ ಮಹತ್ವ ಎನಿಸಿತು....


ವಾಸ್ತವ ಕೂಡ ಅನಿಸಿತು...
ಕೆಲಸ ಸಿಗುತ್ತಿದೆಯಲ್ಲ..!
ಖುಷಿಯಾಯಿತು...

" ಖಂಡಿತ ಸರ್.. ಬರ್ತೀನಿ... ನಾಗುವಿನ ಪರಿಚಯ ಎಂದರೆ ಖಂಡಿತ ಮನೆ ಕಟ್ಟಿಕೊಡುತ್ತೇನೆ..

ಒಂದು ಒಳ್ಳೆಯ ಪ್ಲಾನ್ ಹಾಕಿಕೊಡುತ್ತೇನೆ"

ಕೆಲಸ ಸಿಕ್ಕಿದ ಸಂಭ್ರಮ ಅನುಭವಿಸಲು ಸಾಧ್ಯವಾಗಲಿಲ್ಲ........

ಮಾತಾಡುತ್ತಿರುವಂತೆ ಊಟದ ಸಮಯ ಆಯಿತು..
ಕತ್ತು ತಿರುಗಿಸಿ.., ಕತ್ತು ತಿರುಗಿಸಿ.. ಸುಸ್ತಾಯಿತು...
ವಿಜಯಳ ಸುಳಿವಿಲ್ಲ....

ಆ ದಿನ ವಿಜಯ ಬರಲೇ ಇಲ್ಲ....

ಮನೆಯ ತುಂಬಾ ನೆಂಟರಿದ್ದರಿಂದ ನಾಗೂ ಕೂಡ ಮಾತಿಗೆ ಸಿಗಲಿಲ್ಲ....

ನಿರಾಸೆಯಾದರೂ .. ಮನೆಗೆ ಬಂದೆ...

ಇಂಟರ್ ನೆಟ್ ಓಪನ್ ಮಾಡಿ ಈಮೇಲ್ ನೋಡಿದೆ...

ನಾಗುವಿನ ಮೆಸೇಜ್ ಇತ್ತು...

"ಪ್ರಕಾಶು...
ನನ್ನ ಮೇಲೆ ಸಿಟ್ಟು ಬಂದರೂ ಕುತ್ತಿಗೆ ಹಿಚುಕ ಬೇಡ...

ನಾನು ಮಾಡಿದ ತಮಾಷೆ ಬಗೆಗೆ ಕ್ಷಮೆ ಇರಲಿ...

ಈ ರಜೆಯಲ್ಲಿ ನಿನ್ನ ವಿಜಯಾ ಹುಡುಕಿ..
ನಿನಗೆ, ಆಶಾಳಿಗೆ ತೋರಿಸುತ್ತೇನೆ...
ಇದು ನನ್ನ ಪ್ರತಿಜ್ಞೆ...
ಆಣೆ ಮಾಡಿ ಹೇಳುತ್ತಿದ್ದೇನೆ ಅವಳನ್ನು ಹುಡುಕಲು ಇದೇ ವಾರ ಹೋಗುತ್ತಿದ್ದೇನೆ ..
ಒಂದುವಾರ ಸಮಯ ಕೊಡು"


ಇನ್ನೊಂದು ಹೆಸರಿಲ್ಲದ ಈಮೇಲ್ ಇತ್ತು....!!


" ಪ್ರಕಾಶ....

ಸತ್ಯನಾರಾಯಣ ಪೂಜೆಗೆ ಬರಲಿಲ್ಲ...
ಹಲವಾರು ಕಾರಣಗಳು...ಇವೆ...

ಭೇಟಿಯಾಗಲು ಸಮಯ ಕೂಡಿ ಬರಲಿಲ್ಲ...

ನಮ್ಮವರು ನಮ್ಮನು ಕರೆದು ಕೊಂಡು ಅಮೇರಿಕಾ ಹೋಗುತ್ತಿದ್ದಾರೆ..
ಅವರಿಗೆ ಅಲ್ಲಿ ಕೆಲಸ ಸಿಕ್ಕಿದೆ..
ವೀಸಾ ಸಲುವಾಗಿ ಓಡಾಟ.. ಇತ್ಯಾದಿ...

ಬರಲಾಗಲಿಲ್ಲ... ಆಸೆ ಇತ್ತು...

ಇನ್ನು ಮುಂದೆ ನಿನ್ನನ್ನು ಭೇಟಿಯಾಗುತ್ತಿರುತ್ತೇನೆ ... ನಿನ್ನ ಬ್ಲಾಗಿನಲ್ಲಿ..
ನಿನಗೆ ಕೊಡುವ ಪ್ರತಿಕ್ರಿಯೆಯಲ್ಲಿ...
ಬೇರೆ ಬೇರೆ ಹೆಸರಲ್ಲಿ...

ವಿಜಯಾ ಮೇಲಿನ ನಿನ್ನ ಆಸಕ್ತಿ ಕಂಡು ಮೂಕನಾಗಿದ್ದೇನೆ...
ಕೆಟ್ಟ ಭಾವನೆ ಇಲ್ಲವಾದರೂ...
ಕೆಲವೊಂದು ಭಾವ ನಮ್ಮಲ್ಲೇ ಬಚ್ಚಿಟ್ಟು ಕೊಂಡಿರ ಬೇಕು... ಜತನವಾಗಿ...

ಏಕಾಂತದಲ್ಲಿ ..ಆಗಾಗ ತೆಗೆದು ನೋಡಿಕೊಳ್ಳುತ್ತಿರಬೇಕು...

ನೋವಾದರೂ ಖುಷಿ ಇರುತ್ತದೆ...
ಹ್ರದಯ ರೋಧಿಸಿದರೂ... ಹಿತವಾದ ಸುಖವಿರುತ್ತದೆ...

ಹಳೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟ... ನೆನಪುಗಳು ಅವು...
ನಮಗೆ ಹ್ರದಯದ ವಿಷಯ ..
ಬೇರೆಯವರಿಗೆ ಹಾಸ್ಯವಾಗ ಬಾರದು...

ಪ್ರಕಾಶು...

ನಿನಗೆ ನಿನ್ನ ನಿನ್ನ ಜೀವನದಲ್ಲಿ ಗೆಳತಿಯಾಗಿ ವಿಜಯಾ ಇದ್ದಳು..
ಇದು ನನಗೇ ಗೊತ್ತೇ ಅಗಲಿಲ್ಲ ನೋಡು..

ಮೂರು ವರ್ಷ ನಿನ್ನಸಂಗಡ ಇದ್ದರೂ ತಿಳಿದಿರಲಿಲ್ಲ...

ದಯವಿಟ್ಟು ನನ್ನ ಭೇಟಿಗೆ.. ಪ್ರಯತ್ನಿಸ ಬೇಡ...
ನಿನ್ನ ವಿಜಯ ನಾನಲ್ಲ...

ನನಗೂ ಆ ದಿನಗಳಲ್ಲಿ ಗೆಳೆಯನೊಬ್ಬನಿದ್ದ..
ನಿನ್ನ ಹಾಗೆ.. ನಿನಗೆ ವಿಜಯ ಇದ್ದ ಹಾಗೆ...

ಯಾರೆಂದು ಕೇಳ ಬೇಡ.. ಅರ್ಥಮಾಡಿಕೊ...

ಹ್ರದಯವಿರುವವರಿಗೆ ಅರ್ಥ ಆಗುತ್ತದೆ...

ನಮ್ಮ ದಿನಗಳ... ಕನಸಿನ ಹಾಗೆ ನಾವಿರ ಬೇಕು...
ನಾನು ,ನಾಗು, ನೀನು.., ನಿನ್ನ ವಿಜಯಾ..
ಎಲ್ಲರೂ ಸೇರಿ ಆಕಾಶದಲ್ಲಿ ಹಾರಾಡ ಬೇಕು...
ಸಂತೋಷದಿಂದ ನಗಬೇಕು...

ನಗುತ್ತಲೇ ಇರ ಬೇಕು...

ನಿನ್ನ ಮಗನಿಗೆ ಆಶೀರ್ವಾದಗಳು.....
ನಿನ್ನ ಬಾಳ ಸಂಗಾತಿಗೆ ಶುಭ ಹಾರೈಕೆಗಳು.. ...

ಇಂತಿ...

ತುಂಬು ಹ್ರದಯದ ಪ್ರೀತಿಯೊಂದಿಗೆ..."
................................
...............................



ಅವಳ ಗೆಳೆಯ ಯಾರು...?

ನನಗೆ ತಲೆಯಲ್ಲ ಧಿಮ್ ಅಂದಿತು...
ಹೀಗೂ ಇರುತ್ತದಾ...?
ಹೀಗೂ ಇದ್ದಿತ್ತಾ...?


ಪ್ರಶ್ನೆಗಳಿಗೆ ಉತ್ತರವಿತ್ತು..!

ಉತ್ತರಗಳಿಗೆ ಪ್ರಶ್ನೆಯೂ ಇತ್ತು....!

ಅರ್ಥವಾದರೂ... ಸಮಾಧಾನವಾಗದ ಸ್ಥಿತಿ ಇತ್ತು....

ಮನಸ್ಸೆಲ್ಲ ಗೋಜಲು... ಗೋಜಲು... ಮನಸ್ಸು ಭಾರವಾಯಿತು....

ಹ್ರದಯ ತುಂಬಿ ಬಂದಿತು....

ಏನೂ.. ಹೇಳಲಾಗದ ಶೂನ್ಯ ಭಾವ ಆವರಿಸಿತು....

ನಾಗುವಿನ ಈಮೇಲ್... ಇನ್ನೊಮ್ಮೆ ಓದಿದೆ........



(ದಯವಿಟ್ಟು... ಹಿಂದಿನ ಲೇಖನ ಓದಿ.....)




55 comments:

ಕ್ಷಣ... ಚಿಂತನೆ... said...

Prakash sir, lekhana oduttaa oduttaa hodante ellavoo nigooDa aaguttide aniside. what next??? anta kutoohala.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಮಸ್ಕಾರ ನಿಮ್ಮ ಬರಹಕ್ಕೆ ನೀವೇ ಸಾಟಿ....
ಏನಿದು ಓದುತ್ತ ಹೋದಂತೆ ತಲೆ ಧಿಂ ಅನ್ನಲು ಶುರುವಾಯಿತು. ಯಂಡಮೂರಿಯವರ ಕಾದಂಬರಿ ಓದಿದಂತಾಯಿತು. ಸಕತ್ತಾಗಿದೆ ಹರಿವು, ಮುಂದೇನಾಯ್ತು ಎಂಬುದು ತುಂಬಾನೇ ನಿಗೂಢ ಮತ್ತು ಕುತೂಹಲಕಾರಿಯಾಗಿದೆ, ಕಾಯ್ತಿರ್ತೀನಿ...

Ittigecement said...

ಕ್ಷಣ ಚಿಂತನೆ......

ಮೀನಿನ ದಾರಿ....
ಹೆಣ್ಣಿನ ಮನಸ್ಸು ...
ಅರಿಯಲು ಕಷ್ಟವಂತೆ.....

ಬದುಕೆಲ್ಲ ಮರೆಯದ ನೆನಪಾಗಿ ಕಾಡಿದ್ದ ಹುಡುಗಿ....
ಮುಖ ದರ್ಶನ ಅಗಬಹುದಾ...?
ಮನಸ್ಸು ಗೊತ್ತಾಗ ಬಹುದಾ...?

ಸ್ವಲ್ಪ ಕಾಯಬೇಕಷ್ಟೆ.....

ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ರಾಜೇಶ್.....

ನಾವು ಯಾರನ್ನೋ ಇಷ್ಟ ಪಡುತ್ತ ನಮ್ಮ ಕನಸಿನ..
ಕಲ್ಪನೆಯ ಲೋಕದಲ್ಲಿರ್ತೀವಿ...

ಹಾಗೆ ನಮ್ಮನ್ನೂ ಯಾರೋ ಇಷ್ಟ ಪಡುತ್ತಿರ ಬಹುದಲ್ಲ...!

ನಮಗೆ ನಮ್ಮ ಕನಸಿನ ಹೊರಗೆ...
ವಾಸ್ತವದಲ್ಲಿ..
ಇನ್ನೊಬ್ಬರ ಕನಸೂ ಇರಬಹುದೆಂಬ ವಿಚಾರ ಬರುವುದೇ ಇಲ್ಲ....

ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ಧನ್ಯವಾದಗಳು...

PaLa said...

ಮುಂದುವರಿಸಿ :)

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ಓದ್ತಾ ಓದ್ತಾ ನಮಗೆ ಇಷ್ಟು ಸಂಕಟ ಆಗ್ತಾ ಇರುವಾಗ, ನಿಮಗೆ ಎಷ್ಟು ಸಂಕಟ ಆಗಿರಬಹುದು ?
ಮತ್ತೆ ಸ್ಟೋರಿ ಸಸ್ಪೆನ್ಸ್ ಆಗ್ಬಿಡ್ತು, ಛೆ !!
ಮುಂದೆ ?..................?

ಧನ್ಯವಾದಗಳು :)

ಶಿವಪ್ರಕಾಶ್ said...

ನಿಮ್ಮ ಹಾಡಿಗೆ ನನ್ನದೊಂದು ಸಾಲು...

ಆಕಾಶ... ದೀಪವೂ... ನೀನು.....
ನಿನ್ನ ಕಾಣದೆ ಸಂಕಟದಲಿ ನಾನು :)

ಸಾಗರದಾಚೆಯ ಇಂಚರ said...

Prakaashana,

wonderful,

Umesh Balikai said...

ಪ್ರಕಾಶ್ ಸರ್,

ಮತ್ತೆ ಕುತೂಹಲ ಉಳಿಸಿಯೇ ಮುಗಿಯಿತು ನಿಮ್ಮ ಬರಹ. ವಿಜಯಾ ಬಗ್ಗೆ ಹೇಳಲು ಇನ್ನೂ ಎಷ್ಟು ಸತಾಯಿಸ್ತೀರೊ ಕಾಣೆ. ಆದರೂ ಕಾಯುತ್ತಿರುತ್ತೇನೆ.

ಇವರಂತೂ ವಿಜಯಾ ಅಲ್ಲ ಅಂತ ಆಯ್ತು. ಆದರೆ, ಇವರು ಮತ್ತಿನ್ಯಾರು ಎಂದು ಹೇಳಲೇ ಇಲ್ಲ... ನಿಮಗೆ ಗೊತ್ತಾಗಿದೆ ತಾನೇ?

ಉಮೀ

Kishan said...
This comment has been removed by the author.
Kishan said...

The story line(incident line) flows flawlessly like a river in your writing.

Your way of coating humorous sugar over a solid storyline is commendable as ever.

Amit Hegde said...

ಸಾರ್ ಇದೇನು ಪುಲ್ ಸಸ್ಪೆನ್ಸ್ maintain ಮಾಡ್ತಿದೀರ.... ನಮ್ಮ ಮೇಲೆ ಸ್ವಲ್ಪನಾದ್ರು ಕರುಣೆ ತೋರ್ಸಿ ಸಾರ್...!

Ittigecement said...

ಪಾಲಚಂದ್ರ....

ಫೋನಲ್ಲಿ ಮಾತಾಡಿದ ಹುಡುಗಿ ಯಾರನ್ನ ಇಷ್ಟ ಪಟ್ಟಿರಬಹುದು...?

ಹೇಳಿಕೊಳ್ಳಲಾಗದ..
ಪ್ರೇಮ..
ಪ್ರಕಟಿಸಲಾಗದ ಬಾವನೆ...
ಎಲ್ಲರಲ್ಲೂ ಇದ್ದೇ ಇರುತ್ತದೆ...

ಆ ತೊಳಲಾಟ ಇಲ್ಲಿ ಹೇಳಲು ಹೊರಟಿರುವೆ...

ಮೆಚ್ಚುಗೆಗೆ ಧನ್ಯವಾದಗಳು...

Ittigecement said...

ಶಿವಪ್ರಕಾಶ್.....

ಬದುಕಿನ ಬೇಸರದಲ್ಲಿ..
ಖುಷಿಯಲ್ಲಿ...
ದೂರದ ನೆಲೆಯಲ್ಲಿ... ಬೇರೂರುತ್ತಿರುವಾಗ
ಒಂಟೀಯಾಗಿದ್ದಾಗ...
ನನ್ನ ....
ಮೌನದಲ್ಲಿ ಮಾತಾಗಿ...
ಮಾತಿಲ್ಲದೆ ಮೌನವಾಗಿ...
ಜೊತೆಯಿದ್ದ ಗೆಳತಿಯನ್ನೊಮ್ಮೆ...
ಕಣ್ಣತುಂಬ ಕಾಣಬೇಕೆಂಬ
ಹಂಬಲ....ತುಮಲ.....

ಇಷ್ಟೆಲ್ಲ ಬರೆಸಿದೆ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Guruprasad said...

ಪ್ರಕಾಶ್,
simply the great.... ಚೆನ್ನಾಗಿ ಬರಿತಿರ..... ಹಾಂ... ಇನ್ನೇನು ಹೇಳೋಕೆ ಆಗೋಲ್ಲ .....
ಗುಡ್... ಕೀಪ್ ಇಟ್ ಅಪ್

ಗುರು

ಮಲ್ಲಿಕಾರ್ಜುನ.ಡಿ.ಜಿ. said...

ಬಯಸುವುದೇನೋ, ಸಿಗುವುದೇನೋ, ದೂರದಲ್ಲೊಂದು ಮಿಂಚು ಗೋಚರಿಸುವುದು, ಇನ್ನಾವುದೋ ತಿರುವಿನಲ್ಲಿ ಫಳಕ್ಕನೆ ಹಾದುಹೋದ ಹೊಳೆವ ಮುತ್ತೋ...!
ಜೀವನದ ಜೋಳಿಗೆಯೆಷ್ಟಿದೆಯೋ, ಅದರಲ್ಲಿ ಬೀಳುವುದೆಷ್ಟೋ..!
ಇದೆಲ್ಲದರ ನಡುವೆ ಮನಸ್ಸಿನ ಹೊಯ್ದಾಟ, ತುಮುಲ , ದುಗುಡ...!
ನಿಮ್ಮ ಬರಹದಿಂದ ನಾನಾ ಭಾವಗಳು ಸ್ಫುರಿಸುತ್ತವೆ. ಮುಂದೇನಾಯಿತು ಎಂದು ಕಾತರತೆ, ಹೀಗಿದ್ದರೆ ಹೇಗೆ? ಹಾಗಾದರೆ ಹೇಗೆ? ಎಂಬ ನಾನಾ ಆಲೋಚನೆ...

Ittigecement said...

ಶಿವ ಪ್ರಕಾಶ್....

"ಆಕಾಶ ದೀಪವೂ ನೀನು .."
ಈ ಹಾಡು ನನಗೆ ಇಷ್ಟ...
ಕೈಗೆ ಸಿಗದ...
ದೂರದಿಂದ ನೋಡಿ ಸಂತೋಷ ಪಡುವ ಮನದ ಇಂಗಿತದ
ದ್ಯೋತಕವಾಗಿ..
ಈ ಹೆಡ್ಡಿಂಗ್ ಕೊಟ್ಟಿರುವೆ...

ನಿಮ್ಮ ಕಲ್ಪನೆ ಚೆನ್ನಾಗಿದೆ...

Ittigecement said...

ಗುರುಮೂರ್ತಿಯವರೆ....

ನಾವಂದು ಕೊಂಡಂತೆ ನಡೆಯುವದಿಲ್ಲವಲ್ಲ....
ಪೂಜೆಯ ದಿನ ನಡೆದದ್ದೇ ಬೇರೆ...
ಆ ಮನದಲ್ಲಿರುವದೇ ಬೇರೆ...

ಮೆಚ್ಚುಗೆಗೆ ಧನ್ಯವಾದಗಳು...

Ittigecement said...

ಉಮೀ....

ಇವರು ಯಾರು ಅಂತ ನನಗೂ ಗೊತ್ತಾಗಲಿಲ್ಲವಲ್ಲ...!
ಅವಳು ವಿಜಯ ಎಂಬ ಭಾವನೆಯಲ್ಲಿ ನಾನಿದ್ದೆ...
ಅವಳು ಮನದಲ್ಲಿ ಒಬ್ಬ ಗೆಳೆಯನ್ನು ಪೂಜಿಸುತ್ತಿದ್ದ ಮತ್ತೊಂದು ಜೀವ...!

ನಾವಂದು ಕೊಂಡಂತೆ ಇಲ್ಲೇನೂ ನಡೆಯುವದಿಲ್ಲವಲ್ಲ...

ನಾಗು ಓರಲ್ಲಿ ಇದ್ದಾನೆ..
ಇದೋ ಹೊರಟಿದ್ದೇನೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಕಿಶನ್...

ಬಡ್ಡಿಮಗ ನಾಗು ಕೆಲವು ಸಾರಿ ನನ್ನು ಹೊಗಳುತ್ತಾನೊ..
ತೆಗಳುತ್ತಾನೊ.. ಗೊತ್ತಾಗುವದಿಲ್ಲ...
ಅವರು ಸರಿಯಾಗಿ ನನ್ನನ್ನೇ ಗುರುತು ಹಿಡಿದು ನಕ್ಕರಲ್ಲ..!
ಅದು ನಾಗುವಿನ ಟ್ಯಾಲೆಂಟ್....

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಅಮಿತ್....

ಸ್ವಲ್ಪ ಇರಿ....

ನಾಗು ಊರಿನಿಂದ ಫೋನ್ ಮಾಡಿದ್ದಾನೆ...
ಹೊರಟಿದ್ದೇನೆ....
ಆಸೆಗಳ ದೊಡ್ಡ ಮೂಟೆಯನ್ನೇ ಹೊತ್ತು ಹೊರಟಿದ್ದೇನೆ...

ಲೇಖನ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು..

Ittigecement said...

ಗುರು....

ಬಹುದಿನಗಳಿಂದ..
ಮನದಲ್ಲಿ
ಹುದುಗಿದ್ದ ಭಾವ...
ಮನದಣಿಯೇ ನೋಡುವ ಬಯಕೆ...
ಕಾತುರ.. ತವಕ..
ಒಳಗಿನ ತುಮಲ...
ಭಾವನೆಗಳ ರೂಪ ಈ ಲೇಖನ...

ಇಷ್ಟಪಟ್ಟು..
ಪ್ರೋತ್ಸಾಹಿಸಿದ್ದಕ್ಕೆ

ಧನ್ಯವಾದಗಳು....

Unknown said...

ಬೆಳದಿಂಗಳ ಬಾಲೆಯ ಕಥೆ ನಿಮ್ಮದು,ಬೇಸರವೆನಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಬರಹಕ್ಕಿರುವ ಚಿತ್ರಕ ಶಕ್ತಿ. ಸನ್ನಿವೇಶ ಕಣ್ಣಿಗೆ ಕಟ್ಟುವಂತೆ ಕೆಲವೇ ಶಬ್ದಗಳಲ್ಲಿ ಹಿಡಿದಿಡುವ ಶೈಲಿ ನನಗಿಷ್ಟವಾಯಿತು. ನಾಗುವಿನ ಮನೆಯ ಸನ್ನಿವೇಸದಲ್ಲಿ ನಾವೂ ಸತ್ಯನಾರಾಯಣ ಪೂಜೆಯ ಗೌಜುಗದ್ದಲದೊಳಗೆ ಇದ್ದೇವೆಯೇನೋ ಎಂಬಂತ ಭಾವನೆ! ಸಣ್ಣಕಥೆ, ಪ್ರಬಂದ, ಹರಟೆ ಎಲ್ಲ ಮಾನದಂಡಗಳನ್ನು ಮೀರಿದ ಹೊಸರೀತಿಯ ಬರಹಶಯಲಿ ನಿಮ್ಮದು ಅನ್ನಿಸುತ್ತಿದೆ. ಇನ್ನಷ್ಟು ಬರಲಿ!

Ramya Hegde said...

ನಿಮ್ಮ ಅವಸ್ಥೆ ನಿಜವಾಗೂ 'ಬೆಳದಿಂಗಳ ಬಾಲೆ' ಕಥೆ ಇದ್ದಂಗೆ ಇದ್ದು ಪ್ರಕಾಶಣ್ಣ...,ಆದ್ರೆ ರಾಶಿ ಚಂದ ಮಾಡಿ ಬರದ್ದೆ.keep it up...

Chandrika said...

:D
TuMbA chennAgi chitrisiddeeri. KannaDada kAdaMbari Odida anubhavavAyitu. :)

IMdigU nanage uttara sigada prashne eMdare - dEsha, vESHa, bhASHe, rakta saMbaMdhagaLellavannU meerida preeti eSHTaramaTTige sari, eSHTaramaTTige hita, eSHTaramaTTige apAra hAgu ShAshvata?

Chandrika said...

Aa prashne nimma jeevanada mElina nanna Teekeyalla. SpaSHTa satyakkAgi huDukATavaSHTe. DayaviTTu anyathA bhAvisabEDi.:)

ಧರಿತ್ರಿ said...

ಪ್ರಕಾಶ್ ಸರ್...
ನಮಸ್ಕಾರ...ನಮಸ್ಕಾರ....ಮತ್ತೆ ಹುಳ ಬಿಟ್ರಾ? ಏನ್ಸಾರ್ ನಿಮ್ಮ ಬ್ಲಾಗಿಗೂ ಧಾರವಾಹಿಗೂ ಏನೂ ವ್ಯತ್ಯಾಸ ಇಲ್ಲ ಎನಿಸುತ್ತೆ ನಂಗೆ. ದಯವಿಟ್ಟು ಮುಂದಿನ ಸಂಚಿಕೆಯಲ್ಲಿ ಕಥೆ ಪೂರ್ಣಗೊಳಿಸಿ...ಹೊಸತಕ್ಕೆ ಅನುವು ಮಾಡಿಕೊಡಬೇಕಾಗಿ ಮಾನ್ಯ ಹೆಗಡೆ ಸರ್ ಬಳಿ ಕಳಕಳಿಯ ವಿನಂತಿ. ಹುಡುಗಿ-ಹುಡುಗ್ರ ಬಗ್ಗೆ ಬರೆದು ಬರೆದು ನಮ್ಮ ತಲೆಯೆಲ್ಲಾ ಹಾಳ್ ಮಾಡಿ ಬಿಟ್ರೀ ಸರ್..(ತಮಾಷೆಗಂದೆ)

ಮೀನಿನ ದಾರಿ....
ಹೆಣ್ಣಿನ ಮನಸ್ಸು ...
ಅರಿಯಲು ಕಷ್ಟವಂತೆ.....ಇದು ಯಾಕಂತೆ? ಗೊತ್ತಾಗಲಿಲ್ಲ ನಂಗೆ...ಮುಂದಿನ ಬಾರಿ ಹೇಳ್ತೀರಾ...

ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯ ಸಂಪುಟ ಭಾಗ 2-ವಿಚಾರ ಸಾಹಿತ್ಯ ಓದಿದ್ರೆ ನಿಮ್ಮ ಬರಹಕ್ಕೆ ಬಹಳಷ್ಟು ಪೂರಕ ಸಾಮಾಗ್ರಿಗಳು ಸಿಗಬಹುದು. ಒಂದ್ಸಲ ಓದಿ.
-ಪ್ರೀತಿಯಿಂದ
ಧರಿತ್ರಿ

ನಾಗೇಶ್ said...

ಏನು ಕಲೆ ಸಾರ್ ನಿಮ್ಮದು ಬರೆಯೋಧರಲ್ಲ್ಲಿ hats off to u

ಮನಸು said...

ಪ್ರಕಾಶ್ ಸರ್,
ಏನು ಸತ್ಯನಾರಾಯಣ ಪೂಜೆಗೆ ಹೋಗಿ ಬೇರೇನೋ ಹೊಸ ಹಾದಿಗೆ ಬಂದಿದ್ದೀರಿ... ಮುಂದಿನ ಭಾಗ ಬೇಗ ಪೂರ್ಣ ತಿಳಿಸಿಬಿಡಿ ... ನಮಗೆ ಅಸ್ಟು ತಾಳ್ಮೆ ಇಲ್ಲ ... ಕಾಯುವಸ್ಟು.. ಹ ಹ ಹ

Unknown said...

Interesting ... Please ಕತೆ ಮುಂದುವರೆಸು ಪ್ರಕಾಶಣ್ಣ ....Waiting for next post

Ittigecement said...

ಮಲ್ಲಿಕಾರ್ಜುನ್....

ಜೀವನವೆಂದರೆ ಅದೇ ತಾನೆ...?
ತಾನೆಣಿಸಿದಂತೆ ಆಗುವದಿಲ್ಲ...
ಗೊಂದಲ, ಗೊಜಲುಗಳ ನಡುವೆಯೇ ಬದುಕು...

ಇವೆಲ್ಲವನ್ನೂ ನನ್ನಿಂದ ..
ದಿನನಿತ್ಯ,,,,ಕೊರೆಸಿ ಕೋಂಡರೂ..
ಆತ್ಮೀಯವಾಗಿ ಸ್ನೇಹ ಇನ್ನೂ ಮುಂದುವರಿಸಿಕೊಂಡಿರುವದಕ್ಕೆ...
ಚಂದವಾದ ಪ್ರತಿಕ್ರಿಯೆ.., ಪ್ರೋತ್ಸಾಹಕ್ಕೆ..

ಧನ್ಯ..
ಧನ್ಯವಾದಗಳು...

shivu.k said...

ಪ್ರಕಾಶ್ ಸರ್,

ಬಿಡುವಿಲ್ಲದ ಕೆಲಸದಲ್ಲೂ ಹಿಂದಿನ ಲೇಖನದ ಮುಂದುವರಿಕೆ ಓದಲು ಬಂದೆ.

ಹಳೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟ... ನೆನಪುಗಳು ಅವು...
ನಮಗೆ ಹ್ರದಯದ ವಿಷಯ ..

ಅಂದುಕೊಂಡಿದ್ದಕ್ಕಿಂತ ಬೇರೇನೋ ಆಗಿದೆ...ಆಗುವುದೆಲ್ಲಾ ಒಳ್ಳೆಯದಕ್ಕೆ "

ಧನ್ಯವಾದಗಳು...

Ittigecement said...

ಸತ್ಯನಾರಾಯಣರೆ...

ನಿಮ್ಮ ತೇಜಸ್ವಿಯವರ ಬಗೆಗಿನ ಎರಡನೆ ಲೇಖನ ನನಗೆ ಬಹಳ ಇಷ್ಟವಾಯಿತು...
ತೇಜಸ್ವಿಯವರಿಗೆ ಅಪಚಾರವಾಗಬಾರದೆನ್ನುವ ನಿಮ್ಮ ಕಾಳಜಿ ..
ನಿಮ್ಮ ಬರಹ ಬಹಳ ಇಷ್ಟವಾಯಿತು...

ನಿಮ್ಮ ಚಂದದ ವಿಶ್ಲೇಷಣೆ..
ನನಗೆ ಇನ್ನೂ ಬರೆಯಲು ಸ್ಪೂರ್ತಿ ಕೊಡುತ್ತಿದೆ...

ಧನ್ಯವಾದಗಳು...

Ittigecement said...

ರಮ್ಯಾ.....

ನನ್ನ ಅವಸ್ಥೆಗೆ ಸ್ವಲ್ಪ ನಾಗುವೂ ಕಾರಣ...

ಪ್ರತೀ ಸಾರಿ ನಾಗು ಏನಾದರೂ ಮಾಡಿ..
ಪೇಚಿಗೆ ಸಿಲುಕಿಸಿ ಬಿಡುತ್ತಾನೆ..

ಚಡ್ಡಿ ದೋಸ್ತ.., ಆಪ್ತ ಮಿತ್ರ...
ಹಾಗಾಗಿ ಬದುಕಿದ್ದಾನೆ..
ಸೀತಾಪತಿ,ಉಮಾಪತಿ,ಪೆಟ್ಟಿಗೆ ಗಪ್ಪತಿ, ನಾನು...
ಎಲ್ಲರಿಗೂ ಸತಾಯಿಸಿದ್ದಾನೆ..
ಆದರೂ ನಮಗೆಲ್ಲ ಆತನೆಂದರೆ ಪ್ರಾಣ...

ಒಳ್ಳೆಯ ಮನಸ್ಸು..., ಸ್ವಚ್ಛ ಹ್ರದಯ...
ಇಷ್ಟವಾಗುತ್ತಾನೆ..

ನಿಮಗೆ ಇಷ್ಟವಾಗಿದ್ದಾನಾ...?

ಯಾರೂ ಅವನ ಬಗೆಗೆ ಏನೂ ಹೇಳಿಯೇ ಇಲ್ಲ...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಚಂದ್ರಿಕಾ....

ಈ ಪ್ರಶ್ನೆಗೆ ಇಲ್ಲಿ ಬರುವ ಯಾರು ಬೇಕಾದರೂ ಉತ್ತರ ಕೊಡ ಬಹುದು...
ಈ ವೇದಿಕೆ ನಿಮಗಾಗಿದೆ...

ನಿಮ್ಮ ಪ್ರಶ್ನೆ ಬಹಳ ಗಹನವಾದದ್ದು...
ನನಗೆ ಅಷ್ಟೆಲ್ಲ ಜ್ಞಾನವಿಲ್ಲ...
ನನಗೆ ತಿಳಿದರೀತಿಯಲ್ಲಿ ಹೇಳುವೆ...

ಪ್ರೀತಿಸುವ ಹ್ರದಯ ದೇಶ, ಭಾಷೆ, ರಕ್ತ ಸಂಬಂಧಗಳನ್ನು ನೋಡುವದಿಲ್ಲ...
ಅವೆಲ್ಲ ಅದಕ್ಕೆ ಅಗತ್ಯವೂ ಇಲ್ಲ...

ವಿವೇಕಾನಂದರು ವಿಶ್ವವನ್ನೇ ಪ್ರೀತಿಸಿದರು...
ಮದರ್ ತೆರೆಸಾ, ಗಾಂಧಿಯವರೆಲ್ಲ ವಿಶ್ವ ಮಾನವರು..
ಬುದ್ಧ, ಏಸು ಮಹಾವೀರ,ಗುರು ನಾನಕ್ ಎಲ್ಲರೂ ಇವರನ್ನು ಪ್ರೀತಿಸುತ್ತಾರೆ...

ಪ್ರೇಮಕ್ಕೆ ಯಾವುದೇ , ಬೇಲಿ ಗೋಡೆಗಳು ಅಡ್ಡಿಯಾಗಲಾರದು..

ಇನ್ನು ಗಂಡು ಹೆಣ್ಣಿನ ಪ್ರೀತಿ,ಪ್ರೇಮದ ವಿಷಯ...
ಯಾರನ್ನೂ ಬೇಕಾದರೂ ಪ್ರೀತಿಸ ಬಹುದಲ್ಲ...
ಹ್ರದಯದೊಳಗೆ ಬಚ್ಚಿಟ್ಟು, ಪ್ರೀತಿಸಿ..
ಪ್ರೀತಿಸಿದ ವ್ಯಕ್ತಿ ಬಾಳಿನಲ್ಲಿರಬೇಕು ಎನ್ನುವಾಗ...
ಗೋಡೆಗಳು//, ಬೇಲಿಗಳು ಅಡ್ಡ ಬರಬಹುದು..

ಅವೆಲ್ಲವನ್ನೂ ಮೀರಿದ ಪ್ರೇಮ ಒಂದು ಅನುಭೂತಿ...

ಚಂದ್ರಿಕಾ..

ಚಂದದ ಪ್ರಶ್ನೆಗೆ.. ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಧರಿತ್ರಿ...

ನಿಮ್ಮದು ಇನ್ನೂ ಸಣ್ಣ ವಯಸ್ಸು..
ಪ್ರೀತಿ, ಪ್ರೇಮವೆಲ್ಲ ಅರ್ಥವಾಗುವಂಥದ್ದಲ್ಲ....

ನೀವು ರಾಜೇಶ್ ಖನ್ನಾ ಸಿನೇಮಾದ
"ಪ್ಯಾರ್ ದೀವಾನಾ ಹೋತಾ ಹೈ...
ಮಸತಾನಾ ಹೋತಾಹೈ..." ಹಾಡು ಕೇಳಿದ್ದೀರಾ...?( ಬಹುಷಃ ಕಟೀ ಪತಂಗ್ ಫಿಲ್ಮ್)
ಬೆಂಕಿಯಲ್ಲಿ ಸುಟ್ಟು ಕೊಂಡರೂ..,ಅದರಲ್ಲಿ ಪತಂಗಕ್ಕೆ ಮಜಾ ಇರುತ್ತದಂತೆ...!

ಪ್ರೇಮಿಸಿದವ ಬಲ್ಲ ಪ್ರೇಮದ ಪರಿಯ....
ಅದರ ಸರಸ, ವಿರಸ, ವಿರಹಗಳ ರಸಾನುಭವವನ್ನು...

ವಿಜಯ ಬಗೆಗೆ ಗೊತ್ತಿರುವ ಹುಡುಗಿ ನನಗೆ ಫೋನ್ ಮಾಡಿ..
ಬರುತ್ತೇನೆಂದು ಬರದೆ..,
ತನಗೂ ಆ ವಯಸ್ಸಿನಲ್ಲಿ ಪ್ರೇಮವಿತ್ತು ಎಂದು ಹೇಳಿ...
ತಾನು ಮೆಚ್ಚಿದ ಹುಡುಗ ಯಾರೆಂದು ಹೇಳದೆ...
ಮರೆಯಾಗುತ್ತಾಳಲ್ಲ...
ಹೆಣ್ಣಿನ ಈ ನಡೆ
ನನಗೆ ಅರ್ಥವಾಗಲಿಲ್ಲ....

ಹಾಗಾಗಿ ಮೀನಿನ ನಡೆ ಅಂತ ಹೇಳಿದ್ದು...

ಚಂದದ ಪ್ರತಿಕ್ರಿಯೆಗೆ
ಧನ್ಯವಾದಗಳು..

ಸುಧೇಶ್ ಶೆಟ್ಟಿ said...

ತು೦ಬಾ ಗೋಜಲು ಗೋಜಲು ಪ್ರಕಾಶಣ್ಣ.... ಮು೦ದಿನ ಪೋಸ್ಟಿಗೆ ಕಾಯುತ್ತಿದ್ದೇನೆ....

Ittigecement said...

ನಾಗೇಶ್...

ನನ್ನ ಬ್ಲಾಗಿಗೆ ಸ್ವಾಗತ...

ನನ್ನ ಬ್ಲಾಗನ್ನು ಅನುಸರಿಸುತ್ತಿದ್ದರೂ..
ಮೊದಲಬಾರಿಗೆ ನಿಮ್ಮನ್ನು ಇಲ್ಲಿ ನೋಡಿದೆ..

ನಿಮ್ಮ ಕವನಗಳು ಸಕ್ತ್ ಆಗಿವೆ...
ಅಭಿನಂದನೆಗಳು...

ನನ್ನ ಲೇಖನ ಮೆಚ್ಚಿ..
ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ
ಧನ್ಯವಾದಗಳು..

ನಿಮ್ಮ ಪ್ರೋತ್ಸಾಹ ನನಗೆ ಬರೆಯಲು ಟಾನಿಕ್...

Ittigecement said...

ಮನಸು....

ಜೀವನದ ತಿರುವುಗಳೇ ಹಾಗೆ...
ಏನೋ ಅಂದುಕೊಳ್ಳುತ್ತೇವೆ...
ಮತ್ತೇನೋ ಆಗಿ ಬಿಡುತ್ತದೆ...

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಸುಧೀಂದ್ರ....

ನಿಮ್ಮ ಜಲವರ್ಣ ಬ್ಲಾಗ್ ಸೂಪರ್ ಆಗಿ ಬರ್ತಿದೆ...
ನೀವು ಒಳ್ಳೆಯ ಚಿತ್ರ, ಕಲೆಗಾರರು...
ಅಭಿನಂದನೆಗಳು....

ಸೋಮವಾರ ಮುಂದಿನ ಭಾಗ ಬರುತ್ತದೆ...
(ನೆಟ್ ಸರಿ ಇದ್ದರೆ)

ಲೇಖನ ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ittigecement said...

ಶಿವು ಸರ್...

ಆಗುವದೆಲ್ಲ ಒಳ್ಳೆಯದಕ್ಕೆ...
ನಿಜಕ್ಕೂ ಹೌದು...

ನಾವೆಣಿಸದಂತೆ ಆಗದ ನೋವು ಎದೆಯಲ್ಲಿ ಇರಬೇಕಂತೆ..

ಆಗ ವರ್ತಮಾನದ ಖುಷಿಯ, ಸಂತೋಷದ ಕ್ಷಣಗಳನ್ನು ಅನುಭವಿಸ ಬಹುದಂತೆ...
ಇದು ಓಷೋ ಹೇಳಿದ್ದು

ಮುಂದೇನಾಗುತ್ತೋ ನೋಡಿಯೇ ಬಿಡೋಣ...

ಲೇಖನ ಮೆಚ್ಚಿದ್ದಕ್ಕೆ..
ಬಿಡುವಿಲ್ಲದ ಕಾರ್ಯದಲ್ಲೂ..
ಗೆಳೆಯನ ನೆನಪಾಗಿ..
ಪ್ರತಿಕ್ರಿಯೆ ಕೊಟ್ಟಿದ್ದಕ್ಕೆ ..ಧನ್ಯವಾದಗಳು..

Ittigecement said...

ಶಿವಶಂಕರ್...

ಯಂಡಮೂರಿಯವರ ಕ್ರತಿಗಳನ್ನು..
ಬಹಳ ಇಷ್ಟಪಟ್ಟು.. ಓದಿದ್ದೇನೆ..
ಪ್ರಭಾವಿತನಾಗಿದ್ದೇನೆ...

ಆ ಅನುಭವ ಒಮ್ಮೆ ಬರೆಯಲೇ ಬೇಕು...

ನೀವು ಲೇಖನ ಇಷ್ಟ ಪಟ್ಟಿದ್ದಕ್ಕೆ
ಧನ್ಯವಾದಗಳು...

Ittigecement said...

ಸುಧೇಶ್....

ಆ ಹುಡುಗಿ ಯಾರನ್ನು ಇಷ್ಟ ಪಟ್ಟಿದ್ದಳು...?

ಭೇಟಿಯಾಗಲು ಇಷ್ಟ ಪಡಲಿಲ್ಲ....
ನಾಗು, ಅಥವಾ ನನ್ನನ್ನು ಇಷ್ಟ ಪಟ್ಟಿರ ಬಹುದಾ,,,?

ನಾವು ನಮ್ಮದೇ ಕಲ್ಪನೆಯ,ಕನಸಿನ, ಭಾವನೆಯ ಪ್ರಪಂಚದಲ್ಲಿರುತ್ತೇವೆ...
ನಾವೂ ಕೂಡ ಬೇರೆಯವರ ಕನಸಿನ, ಕಲ್ಪನೆಯ ಪ್ರಪಂಚ ಆಗಿರ ಬಹುದಲ್ಲವೇ...?

ಮೂರು ವರ್ಷ ..
ಆ ಹುಡುಗಿ ಸಂಗಡನಾನು, ನಾಗು ಇಬ್ಬರೂ ಇದ್ದೆವು..
ನಮಗೆ ಗೊತ್ತಾಗಲಿಲ್ಲ....

ಇದೇ ರೀತಿ ವಿಜಯಳಿಗೂ ಆಗಿರ ಬಹುದಾ...?
ಅದು ಬರೀ ನನ್ನ ಕಲ್ಪನೆಯಾ...?

ಏನೇ ಆಗಿದ್ದರೂ ಅದು ಈಗ, ವರ್ತಮಾನದಲ್ಲಿ ಅಪ್ರಸ್ತುತ..

ಒಮ್ಮೆ ನೋಡಬೇಕು, ಮಡದಿಗೆ ತೋರಿಸ ಬೇಕು..
ಅನ್ನುವ ಮಹದಾಸೆ...

ನೋಡೋಣ ಏನಾಗುತ್ತದೆಂದು...

ಧನ್ಯವಾದಗಳು...

Vani Satish said...

ನಿಮ್ಮ ಈ ಲೇಖನ ಯಂಡಮೂರಿ ಕಾದಂಬರಿ ಯಂತೆ ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ.
Continue......

Geetha said...

ನಮಸ್ಕಾರ ಸರ್,

ಏನ್ ಸರ್ ಒಳ್ಳೆ ಟಿವಿ ಸೀರಿಯಲ್ ಥರ ಕಂತು ಕಂತಾಗಿ, ಏನಾದ್ರು ನಿರ್ಧಾರ ಆಗೋ ಮುಂಚೆ break ಕೊಡೋ ಹಾಗೆ ಬರಿತಿದೀರಾ ;)
ಮುಂದಿನ ಕಂತಿಗೆ ಹೇಳಿಬಿಡಿ ಎಲ್ಲ...

ಬಾಲು said...

prakash avare nange anniso mattige navu thumba ishta paduva, hesaru heli sambanda kodalaagada vyakthi galu kevala nenapaagi irabeku. avaru innomme jeevanadalli sikkaru a modalina vyakthi yaagi illade hodalli aga aguva dukha mattondilla.

amele vijaya barthale antha sullu helidakke nagu vige kolu thegedu kondu eradu pettu kodi!!! :) amele heegu parichaya madi kodabahudu endu thilisidakkagi nan kade inda thnx heli!!!

Greeshma said...

ಅಲ್ಲಾ ಪ್ರಕಾಶಣ್ಣ, ನಿಮಿಗಂತೂ ತಾಳ್ಮೆ ಮತ್ತು ಅದರ ಕಷ್ಟ ಅನಿವಾರ್ಯ. ನಮಗಾದ್ರೂ ಬೇಗ ಬೇಗ ಏನ್ ಆಯ್ತು ಅಂತ ಹೇಳೋದಲ್ವಾ?

Prabhuraj Moogi said...

ಮೆಚ್ಚಿಗೆಯಾಗುವರೆಷ್ಟೊ, ಮೆಚ್ಚಿದವರನ್ನೇ ಮದುವೆಯಾಗುವರೆಷ್ಟೊ, ಮದುವೆಯಾಗಿ ಮೆಚ್ಚುವರೆಷ್ಟೊ, ಪ್ರತಿಯೊಬ್ಬರ ಜೀವನದಲ್ಲೂ ಅವರಿಗೆ ಬಹಳ ಮೆಚ್ಚಿಗೆಯಾದವರು ಇದ್ದೇ ಇರುತ್ತಾರೆ, ಅವರ ನೆನಪು ಸದಾ ಕಾಡುತ್ತಿರುತ್ತದೆ, ಮೆಚ್ಚಿದವರೆಲ್ಲ ಮಡದಿಯಾಗಲ್ಲವಲ್ಲ ಅನ್ನೋದು ಬೇಜಾರು, ಜೀವನವೇ ಹಾಗೆ... ಎರಡೂ ಲೇಖನದ ಸರಣಿ ಚೆನ್ನಾಗಿತ್ತು, ಸ್ವಗತ ಬಿಚ್ಚಿಟ್ಟಷ್ಟು ನಮಗೆ ಬಹಳ ಹತ್ತಿರದವರಾಗುತ್ತಿದ್ದೀರೀ... ಮುಂದುವರೆಯಲಿ

Ittigecement said...

ವಾಣಿ.....

ಬದುಕಿನ ತಿರುವುಗಳು...
ಅದು ನಮ್ಮ ಎಣಿಕೆಗೆ ಇರುವದಿಲ್ಲವಲ್ಲ....

ಲೇಖನ ಇಷ್ಟಪಟ್ಟಿದ್ದಕ್ಕೆ

ವಂದನೆಗಳು....

Ittigecement said...

ಬಾಲು ಸರ್....

ಬಹಳ ಚೆನ್ನಾಗಿ ಹೇಳಿದ್ದೀರಿ....

ನಿಮ್ಮ ಚಂದದ ಪ್ರತಿಕ್ರಿಯೆ ನನಗೆ ಸ್ಪೂರ್ತಿಯಾಗ ಬಹುದು....
ಮತ್ತೊಂದು ಕಥೆ ಬರೆಯಲು....

ಪಾಪ ನಾಗು ಸಹ ಅವಳಿಗಾಗಿ ಕಾಯುತ್ತಿದ್ದ....
ಅವಳು ಅವನಿಗೂ ಕೈ ಕೊಟ್ಟಿದ್ದಳು...

ನಾಗುವಿಗೆ ಹೇಗೆ ಹೊಡೆಯಲಿ... ಮಾರಾಯರೆ...?

ಅವನಿಲ್ಲದೆ ನಾನು ಹೇಗೆ ಬರೆಯಲಿ...?

ನನ್ನ ಜೀವದ ಜೀವ ಆತ...

ನಿಮ್ಮ ಅಭಿನಂದನೆ ಖಂಡಿತ ಅವನಿಗೆ ತಿಳಿಸುವೆ....

Ittigecement said...

ಗೀತಾ.....

ನನಗೆ ಗೊತ್ತು...
ಮುಂದಿನ ಕಂತಿನಲ್ಲಿ ನಾನು ಮುಗಿಸದಿದ್ದರೆ...
ನೀವೆಲ್ಲ ಕೋಲು ತಗೊಂಡು ಬಾರಿಸಿಬಿಡ್ತೀರಿ ಎಂದು....

ಊರಿಗೆ ಹೋಗ್ತಾ ಇದ್ದೇನೆ...
ಏನಾಗ್ತದೆ ನೋಡೋಣ....

ನಿಮ್ಮ ಪ್ರೋತ್ಸಾಹಕ್ಕೆ

ವಂದನೆಗಳು...

Ittigecement said...

ಗ್ರೀಷ್ಮಾ....

ಸ್ವಲ್ಪ ಇರಿ...
ಸೋಮವಾರ ಫಲಿತಾಂಶ ಬಂದು ಬಿಡುತ್ತದೆ...
ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬಹುದು....

ನೀವು ಇದನ್ನು ಇಷ್ಟಪಟ್ಟಿದ್ದು ನನಗೆ ಬರೆಯಲು ಸ್ಪೂರ್ತಿ....
ಧನ್ಯವಾದಗಳು...

Ittigecement said...

ಪ್ರಭು....

ಮೆಚ್ಚುಗೆಯಾದವರು ಮದುವೆಯಾಗಲು ಸಿಗದಿದ್ದಲ್ಲಿ...
ಮಡದಿಯನ್ನೇ ಮೆಚ್ಚಿದರಾಯಿತು....

ಇದು ತುಂಬಾ ಸಿಂಪಲ್... ಮತ್ತು ಸರಳ.., ವಾಸ್ತವ...!

ನಿಮ್ಮ ಲೇಖನಗಳು ತುಂಬಾ ಚೆನ್ನಾಗಿ ಬರುತ್ತಿವೆ....
ಖುಷಿಯಾಗುತ್ತಿದೆ,,,
ಅಭಿನಂದನೆಗಳು....

ನೀವು ಲೇಖನ ಇಷ್ಟಪಟ್ಟಿದ್ದಕ್ಕೆ

ಧನ್ಯವಾದಗಳು...

Shreekanth Hegde said...

Superb....

Ittigecement said...

Thanks shree.....!!

plz read my other articles....