Thursday, April 9, 2009

ಸಂಶಯಾ... ಪ್ರೇಮ..ಕಾವ್ಯದಾ.. ಕಹಿ ಬರಹಾ...!

"ನನ್ನ ಹೆಸರು ವಿನಾಯಕ ಅಂತ. ನಮ್ಮನೆ " ಫಸ್ಟ್ ಫ್ಲೋರ್" ಕಟ್ಟಬೇಕಿತ್ತು..
ನೀವೊಮ್ಮೆ ಬರ್ತೀರಾ..? "

ಅಬ್ಬಾ !... ಈ ಆರ್ಥಿಕ ಹಿಂಜರಿತದ ಸಮಯದಲ್ಲಿ ..
ಒಂದು ಓಯಾಸಿಸ್ ಕಂಡ ಹಾಗಿತ್ತು...


ಇಂಥಹ ಸಮಯದಲ್ಲಿ ಆದ ಸಂತೋಷವನ್ನ,
ಖುಷಿಯ ಭಾವೋದ್ವೇಗವನ್ನ..
ವ್ಯಕ್ತ ಪಡಿಸ ಬಾರದೆಂಬ ಕಿವಿ ಮಾತು ಇದೆ...


"ವಿನಾಯಕರವರೆ ನಿಮ್ಮನೆ ಎಲ್ಲಿದೆ..?"

ಸರ್ಜಾಪುರ್ ರೋಡಿನ ವಿಳಾಸ ಕೊಟ್ಟರು..

ಎಷ್ಟು ದೊಡ್ಡ ಸೈಟಿರ ಬಹುದು.., ಓನರ್ ಹೇಗಿರ ಬಹುದು.. ಎನ್ನುವ ಯೋಚನೆ ಶುರುವಾಯಿತು...

"ಅಯ್ತು ಸರ್ ಬರ್ತೇನೆ.. ಈಗಲೇ ಹೊರಟಿದ್ದೇನೆ..."

ಕೂಡಲೇ ಸತ್ಯನಿಗೆ ಫೋನಾಯಿಸಿದೆ..
" ಹಲೋ .., ಪಾರ್ಟ್ನರ್ ... ಇವತ್ತು ನಾನು ಬರ್ತಾ ಇಲ್ಲಮ್ಮ...
ಅಪರೂಪಕ್ಕೆ ಮನೆ ಕಟ್ಟಿಸುವವರೊಬ್ಬರು ಸಿಕ್ಕಿದ್ದಾರೆ.. ಭೇಟಿಯಗಿ ಬರ್ತೀನಿ.."

"ಎಚ್ಚರಿಕೆಯಪ್ಪ... ಇಂಥಾ ಸಮಯದಲ್ಲಿ ಮನೆ ಕಟ್ಟಿಸ್ತಾನೆ ಅಂದ್ರೆ...
ಭಾರೀ ಬುದ್ಧಿವಂತ ಇರಬೇಕು.... ಹುಶಾರಿ...!
ಇಮೋಶನಲ್ ಆಗ ಬೇಡ ... ವಿಚಾರ ಮಾಡಿ ಮಾತಾಡು..."

ಸತ್ಯನ ಅನುಭವದ , ವಿಚಾರ, ಬುದ್ಧಿ ಶಕ್ತಿಯ ಮುಂದೆ ನಾನು ಮಾತಾಡುವದಿಲ್ಲ...

ಮನಸ್ಸಿಗೆ ಎಷ್ಟು ಖುಷಿಯಾಗಿತ್ತು ಅಂದರೆ..ಟ್ರಾಫಿಕ್ ಕೂಡ ಏನೂ ಅನ್ನಿಸಲೇ ಇಲ್ಲ...

ಎರಡು ತಾಸು ಡ್ರೈವ್ ಮಾಡಿ ಅಡ್ರೆಸ್ ಹುಡುಕಿ ಅವರ ಮನೆ ಮುಂದೆ ಬಂದೆ...
ಎಲ್ಲ ಸರಿಯಾಗಿದೆ...

ಕಾರ್ ನಿಲ್ಲಿಸಿ... ನೋಡಿದೆ...
ಎಲ್ಲವನ್ನೂ ಕಲ್ಲಿನಲ್ಲೇ ಕಟ್ಟಿದ್ದಾರೆ..
ಕಂಪೌಂಡ್ ಕೂಡ..ದೊಡ್ಡ ಶ್ರೀಮಂತನೇ ಇರಬೇಕು...
ಲಗುಬಗೆಯಿಂದ ಬಾಗಿಲ ಬಳಿ ಬಂದು ಬೆಲ್ ಮಾಡಿದೆ...

ಸುಮಾರು ಐವತ್ತು ವರ್ಷದವರೊಬ್ಬರು ಬಾಗಿಲು ತೆರೆದರು..
"ಬನ್ನಿ ನಾನು ವಿನಾಯಕ..."

ನಮಸ್ಕಾರ...." ನಾನು ಒಳಗೆ ಅಡಿಯಿಟ್ಟೆ...

ಅಲ್ಲಿ ನೋಡಿದರೆ ಅದ್ಭುತವಾದ ಮನೆ.. !
ಒಳಾಂಗಣ ವಿನ್ಯಾಸ ಬಹಳ ಸುಂದರವಾಗಿತ್ತು..

ಅವರ ಅಭಿರುಚಿ ..
ಮಾಡಿದ ಖರ್ಚು.. ಎದ್ದು ಕಾಣುತ್ತಿತ್ತು..

ಒಂದು ಬದಿಯಲ್ಲಿ ಮೂರು ಅಡಿಗೂ ದೊಡ್ಡದಾದ ಗಂಡ ಹೆಂಡತಿ ಫೋಟೊ...
ಪಕ್ಕದಲ್ಲಿ ಯುವಕನೊಬ್ಬನ ಫೋಟೊ...ಸಣ್ಣ ಮಗುವಿನ ಫೋಟೊ...

ಅಲ್ಲಿಯೇ ಕಂಪ್ಯೂಟರ್....

"ಬನ್ನಿ ಹೆಗಡೆಯವರೆ..ಅದು ನಮ್ಮ.. ಮೊಮ್ಮಗ ಮತ್ತು ಮಗ ವಿಜಯ್..
ಅಮೆರಿಕಾದಲ್ಲಿದ್ದಾರೆ.....

ನೀವು ನಿಮ್ಮ ವಿಸಿಟಿಂಗ್ ಕಾರ್ಡ್ ಕೊಡುತ್ತೀರಾ..?"

ನಾನು ತಡಕಾಡಿದೆ...
"ಗಾಡಿಯಲ್ಲಿದೆ.. ತರ್ತೀನಿ ಇರಿ..."
ನಾನು ಹೊರಗಿನಿಂದ ತಂದು ..ಕಾರ್ಡ್ ಕೊಟ್ಟೆ...

ಭವ್ಯವಾದ ಮನೆ... ನೋಡಲು ಖುಷಿಯಾಗುತ್ತಿತ್ತು...

ಎಲ್ಲೆಲ್ಲೂ ಅಲಂಕಾರ..!

ನಾನು ಅವರ ಪಕ್ಕದ ಸೋಫಾದಲ್ಲಿ ಕುಳಿತು ಕೊಳ್ಳಲು ಹೋದೆ...

"ಇಲ್ಲಿ ಬೇಡ ಇಲ್ಲಿ ಕುಳಿತು ಕೊಳ್ಳಿ"
ಅಂತ ತಮ್ಮ ಎದುರಿಗೆ ನನ್ನನ್ನು ಒತ್ತಾಯವಾಗಿ ಕುಳ್ಳಿರಿಸಿದರು..

ನನ್ನ ಹಿಂದೆ ಬೆಡ್ ರೂಮು.. ಕಿಚನ್.. ಇತ್ತು...

ನನಗೆ ಅಭಾಸ ಎನಿಸಿದರೂ ಮಹತ್ವ ಕೊಡಲಿಲ್ಲ....

"ಹೆಗಡೆಯವರೆ.. ನಾನು ಇಲ್ಲಿಯವರೆಗೆ ಮೂರು ಗುತ್ತಿಗೆದಾರರ ..
ಎಸ್ಟಿಮೇಶನ್ ತೆಗೆದು ಕೊಂಡಿದ್ದೇನೆ..
ನೀವು ಕೊಟ್ಟರೆ ನಾಲ್ಕನೆಯದು..

ಮತ್ತೆ ಯಾರದ್ದೂ ತೆಗೆದು ಕೊಳ್ಳುವ ವಿಚಾರವಿಲ್ಲ..."

ಉತ್ಸಾಹವೆಲ್ಲ ಟುಸ್ಸ್ ಅಂತ ಇಳಿದು ಹೋಯಿತು...

ಇದೆಲ್ಲ ನಮ್ಮ ವ್ರತ್ತಿಯಲ್ಲಿ ಇದ್ದದ್ದೇ...

"ನನ್ನ ಎಶ್ಟಿಮೇಶನ್ ಬೇಕುತಾನೆ ..? ನನಗೆ ನಿಮ್ಮ ಮನೆಯ ಪ್ಲಾನ್ ಕೊಡಿ..
ಒಂದೆರಡು ದಿನದಲ್ಲಿ ಕೊಡುತ್ತೇನೆ"

"ಅದಕ್ಕೂ ಮೊದಲು ನೀವು ಅವರ ಎಸ್ಟಿಮೇಶನ್ ನೋಡಿ.. ನನಗೆ ಅಭಿಪ್ರಾಯ ಹೇಳಿ"

ಓಹೋ... ಅವರ ಎಸ್ಟಿಮೇಶನ್ ದೋಷ ನನ್ನಿಂದ ಬೇಕು...

" ನಾನು ಬೇರೆಯವರ ಕೆಲಸದ ಬಗೆಗೆ ಏನೂ ಹೇಳುವದಿಲ್ಲ.....
ನಾನು ಏನಾದರೂ ಹೇಳುವದಿದ್ದರೆ
ನನ್ನ ಬಗ್ಗೆ.., ನನ್ನ ಕೆಲಸದ ಬಗ್ಗೆ..
ಬೇರೆಯವರ ಬಗೆಗೆ ನಾನು ಹೇಳುವದು ತಪ್ಪಾಗುತ್ತದೆ.. "

" ನೀವು ಇರಿ .." ಎಂದು ಹಾಲಿನ ಪಕ್ಕದ ರೂಮಿಗೆ ಹೋದರು...

ಮತ್ತೆ ಮನೆಯಲ್ಲವನೂ ಅವಲೋಕಿಸಿದೆ...

ನನಗೆ ಶಾಕ್ ಹೊಡೆದಂತಾಯಿತು...!

ಅವರ ಗಂಡ , ಹೆಂಡತಿ ಜೋಡಿ ಫೋಟೊ ಉಲ್ಟಾ ಇಡಲಾಗಿತ್ತು.....!

ನಾನು ಮೊದಲು ಬಂದು ನೋಡಿದಾಗ ಸರಿಯಾಗಿ ಇತ್ತಲ್ಲಾ...!

ನಾನು ಹೊರಗಡೆ ಹೋದಾಗ ಹೀಗೆ ಇಟ್ಟಿರ ಬಹುದಾ...?

ಮಗನ, ಮೊಮ್ಮಗನ ಫೋಟೊ ಕಾಣುವ ಹಾಗೇ ಸರಿಯಾಗಿ ಇತ್ತು...

ಅಷ್ಟರಲ್ಲಿ ಒಳಗಿನಿಂದ ಬಂದರು..

"ಹೆಗಡೆಯವರೆ.. ನೋಡಿ ಇದು ಒಬ್ಬರ ಎಶ್ಟಿಮೇಶನ್ನು"


ಅದರಲ್ಲಿ ಕೊನೆಯಲ್ಲಿ ಟೊಟಲ್ ಮೊತ್ತವನ್ನು ಅಳಿಸಲಾಗಿತ್ತು...
ಆದರೆ ರೇಟುಗಳು ಹಾಗೆಯೇ ಇತ್ತು..

ಇಪ್ಪತ್ತೈದು ವರ್ಷದ ಅನುಭವ.. ರೇಟು ನೋಡಿ ಟೋಟಲ್ ಮೊತ್ತ ಊಹೆ ಮಾಡಬಲ್ಲೆ..
ನನಗೆ ಮನಸ್ಸಿನಲ್ಲಿಯೇ ನಗು ಬಂತು..

"ಈ... ಎಸ್ಟಿಮೇಶನ್ ಹೇಗೆ..?"

"ಹೀಗೆಲ್ಲ ಹೇಳಲಾಗುವದಿಲ್ಲ..
ಲೆಕ್ಕಾಚಾರ ಮಾಡಿದ ಮೇಲೆ ಹೇಳಬೇಕಾಗುತ್ತದೆ"


"ನೀವು ಸ್ವಲ್ಪ ಇರಿ.." ಮತ್ತೆ ಒಳಗೆ ಹೋದರು...

ಮತ್ತೆ ಇಪ್ಪತ್ತು ನಿಮಿಷ ಬಿಟ್ಟು ಬಂದರು...

"ಇದನ್ನೂ ನೋಡಿ..."

"ನಾನು ನೋಡುವದಷ್ಟೆ... ಏನೂ ಹೇಳುವದಿಲ್ಲ " ಎಂದೆ...

ಅವರೇ ಮತ್ತೆ ಕೇಳಿದರು...
"ನಿಮ್ಮದು ಸ್ವಂತ ಮನೆಯಾ.?.. ಬಾಡಿಗೆ ಮನೆಯಾ.. ?"

"ಸ್ವಂತದ್ದು"

"ಯಾವಾಗ ಕಟ್ಟಿದ್ದು..?"

"ಕಳೆದ ವರ್ಷ"

" ಇಷ್ಟು ವರ್ಷ ಗುತ್ತಿಗೆದಾರರಾಗಿ ಬಾಡಿಗೆ ಮನೆಯಲ್ಲಿದ್ರಾ...?..?"

ಅವರಿಗೆ ಬಹಳ ಆಶ್ಚರ್ಯ..!

ನಾನು ಸುಮ್ಮನಿದ್ದೆ.. ಎದ್ದು ಹೋಗಿ ಬಿಡೋಣ ಎನಿಸುತ್ತಿತ್ತು...

"ಸ್ವಂತ ಮನೆ ... ಹುಂ..... ಲೇ.. ಟೀ.. ಕೊಡ್ತಿಯೇನೆ...?"

ಈಗ ಟೀ ಮಾಡು ಎಂದು ಹೇಳಿದಂತಿತ್ತು.....

ಅರೇ ..! ಮನೆಯಲ್ಲಿ ಇನ್ನೂ ಒಬ್ಬರಿದ್ದಾರಾ..?
ನನಗೆ ಆಶ್ಚರ್ಯವಾಯಿತು..

ಇವರು ಎದ್ದು ಹೋಗಿ..
ನಾನು ಕುಳಿತ ಸೋಫಾದ ಹಿಂದಿನ ಬೇಡ್ ರೂಮಿನ ಚಿಲಕ ತೆಗೆದರು...!


ಹಾಗೆ ನನ್ನೆದುರು ಬಂದು ಕುಳಿತರು...

ಅಷ್ಟರಲ್ಲಿ ಒಂದು ಹೆಣ್ಣಿನ ಆಕ್ರತಿ ಧಡಕ್ಕನೆ..
ಬಾಗಿಲು ತೆಗೆದು ತಟಕ್ಕನೆ ..
ಕಿಚನ್ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿತು...

ನಾನು ಕತ್ತು ತಿರುಗಿಸಿ ನೋಡುವಷ್ಟರಲ್ಲಿ ನಡೆದು ಹೋಯಿತು...

ವಿನಾಯಕರು ಏನೇನೊ ಮಾತನಾಡುತ್ತಿದ್ದರು...
ನಾನು ಮನಸ್ಸಿಲ್ಲದಿದ್ದರೂ ಕೇಳುತ್ತಿದ್ದೆ...

ಸ್ವಲ್ಪ ಹೊತ್ತಿನಲ್ಲಿ ಕೆಮ್ಮಿದ ಶಬ್ಧ.... ಮೂರು ಸಾರಿ....

ಓಹೊ... ಟೀ... ರೆಡಿ ಆಗಿರ ಬಹುದು ಅಂದು ಕೊಂಡೆ...

ಕಿಚನ್ ಬಾಗಿಲು ಹಾಕಿಯೇ ಇತ್ತು...

ಸ್ವಲ್ಪ ಹೊತ್ತಿನಲ್ಲಿ ಕಿಚನ್ ಬಾಗಿಲು ತಟಕ್ಕನೆ..
ತೆಗೆದು ಬೆಡ್ ರೂಮಿಗೆ ಹೋಗಿ ಬಾಗಿಲು.. ಧಡಕ್ಕನೆ..
ಹಾಕಿ ಕೊಂಡ ಶಬ್ಧ....


ಈಗ ವಿನಾಯಕರಿಗೆ ಗೊತ್ತಯಿತು ಅನಿಸುತ್ತದೆ...

"ಇರಿ... ಟೀ ರೆಡಿಯಾಯಿತು ... ತರ್ತೇನೆ.."

ಟೀ ತಂದರು...

"ನನ್ನ ಮಡದಿಯವರಿಗೆ ನಿನ್ನೆಯಿಂದ ಜ್ವರ...ನಾನೇ ನಿಮಗೆ ಕೊಡ ಬೇಕಾಯಿತು "

ಟೀ ಮಾಡಲಿಕ್ಕೆ ಜ್ವರ ಇಲ್ಲ... ಕೊಡಲಿಕ್ಕೆ ಜ್ವರವಾ...?

ನಾನು ಸುಮ್ಮನೆ ಕುಡಿದೆ...

"ನಾನು ಬರ್ತೀನಿ ವಿನಾಯಕರೆ..
ನಿಮ್ಮ ಮನೆಯಲ್ಲಿ ಹೇಗಿದ್ದರೂ ಇಂಟರ್ ನೆಟ್ ಇದೆ..

ನಿಮ್ಮ ಈಮೇಲ್ ಕೊಡಿ ಎಸ್ಟಿಮೇಶನ್ ಕಳಿಸ್ತೇನೆ".."

"ಅಯ್ಯೋ.. ಈಮೇಲಾ.... ನನಗೆ ಅದೆಲ್ಲ ಅರ್ಥ ಆಗಲ್ಲ...
ಕಂಪ್ಯೂಟರ್ ನನ್ನ ಶ್ರೀಮತಿಯವರಿಗೆ ಮಾತ್ರ ಗೊತ್ತು..
ಅದೆಲ್ಲ ಬೇಡಾರಿ... ನೀವೇ ಬಂದು ಕೊಡಿ..."

ನನಗೆ ಅರ್ಥವಾಯಿತು...

"ಹಾಗೇ ಮಾಡ್ತೇನೆ.."

ಎಂದು ಹೊರಗೆ ಬಂದೆ...ಇವರೂ ಹೊರಗೆ ಬಂದರು ಗೇಟಿನವರೆಗೆ...

"ನೀವು ಹೇಗೆ ಬಂದಿದ್ದೀರಿ...?"

"ಕಾರಿನಲ್ಲಿ"

"ಓಹೊ...! ಈ ಕಾರು ನಿಮ್ಮದಾ...? ಫೋರ್ಡು...!
ಛೇ.... ಈಗ ಊಟದ ಸಮಯ... ಊಟ ಮಾಡಿಕೊಂಡು ಹೋಗ ಬಹುದಿತ್ತು.."

"ಇಲ್ಲ ವಿನಾಯಕರೆ.... ನನಗೆ ತಡ ಆಯಿತು ಬರ್ತೇನೆ... ನಮಸ್ಕಾರ"

ಕಾರು ನೋಡಿದ ಮೇಲೆ ಊಟ ಹಾಕುವ ವಿಚಾರ..!

ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ಹೋರಟೆ....

ನನಗೆ ಮನಸ್ಸೆಲ್ಲ ಬೇಜಾರಾಗಿತ್ತು...

ಅಂದು ನನ್ನ ಮನೆಗೆ ಸ್ನೇಹಿತ ನಾಗು ಊಟಕ್ಕೆ ಬಂದಿದ್ದ....

ನಡೆದದ್ದೆಲ್ಲ ಹೇಳಿದೆ...

ನನ್ನ ಮಡದಿ ಒಳ್ಳೆಯ ಮೂಡಿನಲ್ಲಿದ್ದಳು...

"ರೀ... ನೀವು ಫೋಟೊವನ್ನು...
ನೋಡಿದ ರೀತಿನೇ ಸರಿ ಇಲ್ಲಾವಾಗಿತ್ತೇನೋ..?

ಫೋಟೋವನ್ನೇ.. ಹೀಗೆ ತಿನ್ನುವ ಹಾಗೆ ನೋಡ್ತಾನೆ..
ಇನ್ನು ಎದುರಿಗೆ ಹೆಂಡ್ತಿ ನೋಡಿದ್ರೆ ಹೇಗೆ..?
ಅಂತ ಹೆದರಿರ ಬೇಕು"


"ಇರೊ... ಒಂದು ಹೇಡ್ತೀನಾ ನೋಡಿದ್ರೆ ಸಾಕು..ಮಾರಾಯ್ತಿ...!
ಬೆರೆಯವರೆನ್ನೆಲ್ಲ ಏನು ನೋಡುವದು...?

ಅವರಿಗೂ ಐವತ್ತು ಆಗಿರ ಬಹುದೇನೋ...
ಮಗ., ಮೊಮ್ಮಗ..ಎಲ್ಲ ಇದ್ದಾರೆ..

ಅದು ಹಾಗಲ್ಲ...
ಅವನು ಸಂಶಯ ಪ್ರವರ್ತಿಯವ ಅನ್ನಿಸ್ತದೆ.."


ನಾಗು ಹೇಳಿದ....
" ಇದು ಕಂಪ್ಯೂಟರ್ ಯುಗ..
ಕಂಪ್ಯೂಟರ್ ಗೊತ್ತಿರುವ ಹೆಂಗಸು.
ಮೂವತ್ತು ವರ್ಷದಿಂದ....

ಈ ಮನುಷ್ಯನ...ಸಂಶಯ...
ಈ ಥರಹದ ಮಾನಸಿಕ ಚಿತ್ರ ಹಿಂಸೆ ..

ಹೇಗೆ ತಡೆದು ಕೊಂಡಿರ ಬಹುದು...?
ಸಂಶಯ ಪಡುವದಕ್ಕೂ ಮಿತಿ ಬೇಡವೆ..?"

ನನ್ನಾಕೆಗೆ ಅಷ್ಟು ಸಿಕ್ಕರೆ ಸಾಕಾಗಿತ್ತು...

"ಎಲ್ಲ ಗಂಡಸರೂ ಹಾಗೇನೆ... ಸಂಶಯ ಪಿಷಾಚಿಗಳು..!"

"ಸರ್ಟಿಫಿಕೆಟ್" ಕೊಟ್ಟೇ.. ಬಿಟ್ಟಳು...

"ಈ ಪ್ರಕಾಶನೂ ನಿನ್ನ ಸಂಶಯ ಮಾಡ್ತಾನಾ.?... ."

ನಾಗುವಿಗೆ .. ಕಾಲೆಳೆಯುವದಕ್ಕೆ ಅಷ್ಟು ಸಾಕಾಗಿತ್ತು...


ನನಗೆ ಕೋಪ ಹತ್ತಿತು...

"ಯಾಕೋ .. ನಾಗು ..? ... ನೀನು ಸಂಶಯ ಮಾಡಲ್ವಾ...?"

ಆಶಾ ಮಧ್ಯ ತಡೆದು ಹೇಳಿದಳು...

" ನಾಗುವಿಗೆ ... ವ್ಯವಹಾರದ ಮಧ್ಯೇ ಟೈಮ್ ಎಲ್ಲಿರುತ್ತದೆ...?

ಸಂಶಯ ಮಾಡ್ಲಿಕ್ಕೆ ಪುರುಸೊತ್ತೆಲ್ಲಿದೆ ..?

ಇವತ್ತು ಹೆಂಡ್ತಿ ಯಾವ ಡ್ರೆಸ್ ಹಾಕಿದಾಳೆ ?

ಗೊತ್ತಿದೆಯಾ ಕೇಳಿ..?

ಇಡೀ ದಿವಸ .. ಕೆಲಸ... ಕೆಲಸ !.ಕೆಲಸ !!.. .."

ನಾಗುವಿಗೆ ಸ್ವಲ್ಪ ಕೋಪ ಬಂದಿರ ಬೇಕು..

" ಅದೆಲ್ಲಾ ಬೇಡ.. ಈ ಪ್ರಕಾಶನ ಬಗೆಗೆ ಹೇಳು ...
ಈ... " ಡುಮ್ಮ " ಸಂಶಯ ಮಾಡೋಲ್ವಾ...?"

"ಇವರ ಸಂಶಯ ಸಂಶಯ ಅಲ್ವೋ... ನಾಗು..!

ಅದು ಪೊಸೆಸ್ಸಿವನೆಸ್ಸ್...!

ಅದು ಪ್ರೀತಿ...ಪ್ರೇಮದ..ಬಾಂಧವ್ಯದ ..

ಮಧ್ಯೆ.. ಇರಲೇ .. ಬೇಕಾದದ್ದು.......!

ಆ ಥರಹದ ಸಂಶಯ ಪ್ರತಿ ಹೆಂಗಸರೂ ಬಯಸುತ್ತಾರೆ..!

ತನ್ನ ಗಂಡ ತನ್ನನ್ನು ಸಂಶಯ ಮಾಡ್ತಾನೆ...

ಅಂದ್ರೆ.... ತನ್ನಲ್ಲಿ ಇನ್ನೂ "ಅಂದ ಚಂದ"... ಇದೆ ಅಂತ ಅರ್ಥ...!

ತಾನು ಇನ್ನೂ ಆಕರ್ಷಕವಾಗಿದ್ದಿನಿ ಅಂತ ಕಣೋ...

ಆ ತರಹದ ಸಂಶಯ ಸಣ್ಣದಾಗಿ ಇರಬೇಕು......!

ಹೋಗಿ... ನಿನ್ನ ಹೆಂಡ್ತಿ ಕೇಳು... ಹೇಳ್ತಾಳೆ...!.. "

ನಾಗುವಿಗೆ ಆಶಾ ಉತ್ತರ ಕೇಳಿ ಸುಸ್ತಾಗಿತ್ತು...

"ನೀವು ಹೆಂಗಸರೆಲ್ಲಾ ಒಂದೆ...
ನಿಮಗೆ ನಮ್ಮ ಸ್ವಾತಂತ್ರ್ಯ ಜಾಸ್ತಿ ಆಗಿ ಬಿಟ್ಟಿದೆ..

ನೋಡು ಪ್ರಕಾಶು... ಇವತ್ತೇ ಎಶ್ಟಿ ಮೇಶನ್ ರೆಡಿ ಮಾಡು..
ಕೊಡಲಿಕ್ಕೆ ನಾನೂ ಬರ್ತೀನಿ...
ಆ ಮನುಷ್ಯನನೊಮ್ಮೇ ನೋಡಿ ಬರಬೇಕು...

ಸಾಧ್ಯ ಆದ್ರೆ ಫೋಟೋ ತೆಕ್ಕೊಂಡು ಬರ್ತೇನೆ.."

ಯಾಕೆ..?

" ದೊಡ್ಡದಾಗಿ ಮನೆಯಲ್ಲಿ ಹಾಕಲಿಕ್ಕೆ...
ಮನುಷ್ಯನ ಫೋಟೋ ನೋಡಿದ್ರೆ..
ನಮ್ಮ ಹೆಂಗಸರಿಗೆ ಗೊತ್ತಾಗಲಿ..
ಇಂಥವರೂ ಇರ್ತಾರೆ ... ಅಂತ..
ನಮ್ಮ ಪ್ರೀತಿ ಇವರಿಗೆ ಆಗಾಗ.. ನೆನಪು ಮಾಡಿ ಕೊಡ್ತಾ ಇರಬೇಕು..
ಮನುಷ್ಯನ ಫೋಟೋ ನೋಡಿದ್ರೆ ನಮ್ಮ ಪ್ರೀತಿ ಇವರಿಗೆ ನೆನಪಾಗ್ತಾ ಇರಬೇಕು.."

ಆಶಾಳಿಗೆ ಕೋಪ ಬಂದಿತು.. ನಾಗುವಿಗೆ ತರಾಟೆ ತೆಗೆದು ಕೊಂಡಳು...

" ಜಗತ್ತಿನ ಎಲ್ಲ ಹೆಂಡತಿಯರಿಗೂ..
ಗಂಡನ ಮೇಲೆ ಕಂಪ್ಲೆಂಟ್ ಇದ್ದೆ ಇರ್ತದೆ....!"

ಇನ್ನು ಸುಮ್ನೆ ಇದ್ರೆ ಇಷ್ಟಕ್ಕೆ ನಿಲ್ಲಲ್ಲ ಅಂತ ನಾನು ಹೆದರಿದೆ...

"ನೋಡೇ .. ನಿಮ್ಮಪ್ಪ ಫೋನ್ ಮಾಡಿದ್ರು...!
ನಾಳೆ ನಮ್ಮನೆಗೆ ಬರ್ತಾರಂತೆ..
ಜೊತೆಗೆ ನಿಮ್ಮಮ್ಮನೂ .. ಬರ್ತಾರಂತೆ.. !."


" ನಿಜವೆನ್ರಿ...?..!!.. "


ಎಷ್ಟೇ ಕೋಪವಿರಲಿ... ತವರು ಮನೆಯ ಸೆಳೆತವೆ ಬೇರೆ..!

ತವರು ಮನೆ ಸುದ್ಧಿ ಕೇಳಿದ ..

ಸಂತೋಷ .!! .. ಖುಷಿ..! !...ಸಂಭ್ರಮ..!!

ಧ್ವನಿಯಲ್ಲಿ ಕಾಣ್ತಾ ಇತ್ತು...!!

ಅದು ನನಗೂ ಬೇಕಾಗಿತ್ತು...!


ಕಂಪ್ಯೂಟರ್ ಗೊತ್ತಿರುವ...
ಮನೆಯಲ್ಲಿ ಬೀಗ ಹಾಕಿಸಿ ಕೊಂಡು...
ಜೈಲಿನಲ್ಲಿರುವ...

ಅವರ ವಿದ್ಯಾವಂತ ಮಡದಿಯನ್ನು ಒಮ್ಮೆ ನೋಡುವ ಬಯಕೆ ನನಗೂ ಆಯಿತು....

ಗಂಡ ಹೆಂಡತಿಯ ಮಧುರ ಸಂಬಂಧದಲ್ಲಿ...

ಪ್ರೀತಿ ಪ್ರೇಮದಿಂದ ಬೆಸೆಯುವ ಬಾಂಧವ್ಯದಲ್ಲಿ...

ಈ ಸಂಶಯ ಯಾಕೆ...?

ಎಸ್ಟಿ ಮೆಶನ್ ರೆಡಿ ಆಗ್ತಾ ಇದೆ.....


( ಪ್ರತಿಕ್ರಿಯೆಗಳು ಚೆನ್ನಾಗಿವೆ...
ಅರ್ಥ ಪೂರ್ಣವಾಗಿವೆ... ಓದಿ...)

72 comments:

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಎಂದಿನಂತೆ ಮತ್ತೊಂದು ಉತ್ತಮ ಬರಹ, ಆ ಮನ್ಸುಹ್ಯನ ಹೆಂಡತಿಯನ್ನು ಒಮ್ಮೆ ಕಂಡಿತ ನೋಡಿ ಬನ್ನಿ, ವರ್ಣಿಸಿದ ರೀತಿ ಚೆನ್ನಾಗಿದೆ. ಅವರಿಗೆ ಎಷ್ತಿಮೆಶನ್ ಯಾವಾಗ ಕೊಡುತ್ತಿರಿ?

ಅದರಲ್ಲೂ ''"ನೋಡೇ .. ನಿಮ್ಮಪ್ಪ ಫೋನ್ ಮಾಡಿದ್ರು...
ನಾಳೆ ನಮ್ಮನೆಗೆ ಬರ್ತಾರಂತೆ..."

"ನಿಜವೆನ್ರಿ...?..!!.. "

ತವರು ಮನೆ ಸಂತೋಷ .!! ., ಸಂಭ್ರಮ...!

ಖುಷಿ ಧ್ವನಿಯಲ್ಲಿ ಕಾಣ್ತಾ ಇತ್ತು...

ಅದು ನನಗೂ ಬೇಕಾಗಿತ್ತು...''

ಸೂಪರ್ ಈ ಮಾತು

ಸಿಮೆಂಟು ಮರಳಿನ ಮಧ್ಯೆ said...

ಗುರುಮೂರ್ತಿಯವರೆ....

ತಮ್ಮನ್ನು ಸಾಕಿ, ಸಲಹಿದ ತವರು ಮನೆಯನ್ನು ಬಿಟ್ಟು,
ಕಷ್ಟವಿರಲಿ, ಸುಖವಿರಲಿ ..,
ಗಂಡನನ್ನೇ ನಂಬಿ ಜೀವನ ಪೂರ್ತಿ ಬಾಳುವ ಸಂಗಾತಿಯನ್ನು..
ಸಂಶಯಿಸುವದು ಎಷ್ಟರ ಮಟ್ಟಿಗೆ ಸರಿ..?

ಅದೂ ತನ್ನ ಮನೆಯಲ್ಲಿ ಖೈದಿಯಾಗಿ..?
ಮಗ ಅಮೇರಿಕಾದಲ್ಲಿ..ತಾನು ವಿದ್ಯಾವಂತೆ...

ಆ ಬದುಕಿಗೆ ಏನು ಅರ್ಥ?

ಬಹಳಷ್ಟು ಪ್ರಶ್ನೆಗಳಿವೆ...
ಉತ್ತರ ಸಧ್ಯದಲ್ಲಿ ದೊರೆಯಲಿದೆ ಎಂಬ ಆಸೆಯಿದೆ...

ಲೇಖನ ಇಷ್ಟ ಪಟ್ಟಿದ್ದಕ್ಕೆ

ಧನ್ಯವಾದಗಳು...

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ಲೇಖನ ಚನ್ನಾಗಿದೆ.
ಕೆಲವರು ಹಾಗೆ, ಸಂಶಯ ಪಿಶಾಚಿಗಳು...
ನನಗು ಅವರ ಒಂದು ಫೋಟೋ, ಅಲ್ಲ ಅಲ್ಲ, ಅವರ ಪಾದದ xerox ಕೊಡಿ.. :)
ಧನ್ಯವಾದಗಳು...

akshara4u said...

namma janaralli prethi kadime aguthide, e anumana annuva pishachi yaakadaro barutho.....?
yaaradu thappu yaaradu sari antha kandu hidiyuvadaralle namma jeevana mugidu hoagibiduthe......
mathu egina janaralli svartha jasthi.....

ಸಿಮೆಂಟು ಮರಳಿನ ಮಧ್ಯೆ said...

ಶಿವಪ್ರಕಾಶ್....

ಆ ಗಂಡ ಮಹಾಶಯನ ಬದುಕಿನ ಅರ್ಥವೇನು...?
ಕೇವಲ ಹಣವೆ...?

ಮದುವೆಯಾದ ಸಂಗಾತಿಯನ್ನು ಮನೆಯಲ್ಲಿ ಕೂಡಿ ಹಾಕಿ..
ಸಾಧಿಸಿದ ಪುರುಷಾರ್ಥವೇನು..?

ಪ್ರೀತಿಂದ ಮಾತಾಡಿ..,
ಸ್ನೇಹ, ಪ್ರೇಮದ ಅನುಭವದ ಅವಶ್ಯಕತೆ ಅವರಿಗೆ ಬೇಡವೆ..?
ಅಥವಾ..
ಪ್ರೇಮ ಸಂಬಂಧದ ಅನುಭವದ ರುಚಿಯೇ ಗೊತ್ತಿಲ್ಲವೇ..?

ಪ್ರಶ್ನೆಗಳು ಹಲವಾರು ಇವೆ...

ಉತ್ತರ ಸಿಗಲಿದೆಯೆಂಬ ಆಸೆಯಿದೆ...

ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

Dr. B.R. Satynarayana said...

Prakash,
Nice Story! nimma baravanige dinadinda dinakke improve aaguttide. wish u good luck. estiamate kottu baruvudannu naavu kaayuttirutteve

ಅಂತರ್ವಾಣಿ said...

ಚೆನ್ನಾಗಿತ್ತು ಬರಹ. ಎಂದಿನಂತೆ ನಗು ಮೂಡಿಸಿತು.

ನಮ್ಮ ಆಫೀಸಿನವರೆಗು ಬಂದಿದ್ದೀರಲ್ಲ... ಅವರಿಗೆ Estimate ಕೋಡೋಕೆ ಬಂದಾಗ ನಮ್ಮ ಆಫೀಸಿಗೆ ಬನ್ನಿ.ಆರನೇ ಫ್ಲೋರ್ ಕಟ್ಟಿಸ ಬೇಕು...೫ ಜನರ ಹತ್ತಿರ Estimate ಮಾಡಿಸಿದ್ದೀನಿ..ನೀವು ಆರನೆಯವರು.. :)

ಸಿಮೆಂಟು ಮರಳಿನ ಮಧ್ಯೆ said...

ಅಕ್ಷರ..(ನಿಮ್ಮ ಹೆಸರು ಗೊತ್ತಾಗಲಿಲ್ಲ)

ನನ್ನ ಬ್ಲಾಗಿಗೆ ಸ್ವಾಗತ...
ಜನರಲ್ಲಿ ಸ್ವಾರ್ಥ ಜಾಸ್ತಿಯಾಗಿದೆ ನಿಜ...
ಸಂಶಯ ಪ್ರವರ್ತಿಗೆ ಸ್ವಾರ್ಥ ಕಾರಣನಾ...?

ಇರಲಿಕ್ಕಿಲ್ಲ...

ಅಸಹಾಯಕತೆ, ಕೀಳರಿಮೆ, ಹೊಟ್ಟೆಕಿಚ್ಚು
ಸಂಶಯಕ್ಕೆ ಕಾರಣವಿರ ಬಹುದು..

ಇನ್ನೂ ಕಾರಣ ಇರಬಹುದು...

ಒಟ್ಟಿಗೆ ಬಾಳಲಿಕ್ಕೆ, ಪ್ರೀತಿಯಿಂದ ಇರಲಿಕ್ಕೆ
ಮದುವೆಯಾಗುವದು...
ಸಂಶಯ ಎನ್ನುವ ಶಬ್ಧ
ಹತ್ತಿರ ..ಸುಳಿಯಬಾರದು ಅಲ್ಲವಾ...?

ಪ್ರತಿಕ್ರಿಯೆಗೆ ವಂದನೆಗಳು...

sunaath said...

ಇದು ನಿಜವೆ? ಹೀಗೆ ಇರಲು ಸಾಧ್ಯವೆ?

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶಣ್ಣ,
ಎಂತಹ ಕೆಟ್ಟ ಖಾಯಿಲೆಯಲ್ಲವೇ ಈ ಅನುಮಾನ, ಅದೆಂತೆಂತಹ ಜನರಿದ್ದಾರೆ ನಮ್ಮ ಸುತ್ತ ಮುತ್ತ.

ಬಿಸಿಲ ಹನಿ said...

ಪ್ರಕಾಶ ಅವರೆ,
ಸಂಶಯದ ಬಗ್ಗೆ ನಿಮ್ಮ ಲೇಖನ ತುಂಬಾ ಚನ್ನಾಗಿದೆ. I liked it very much.

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ...

ಇದು ಸತ್ಯವಾಗಿ ನಡೆದ ಘಟನೆ....

ಇಂಥಹ ಘಟನೆ ನನಗೆ ಈ ಹಿಂದೂ ಆಗಿದೆ..

ಟೀ ಮಾಡಿದ್ದರೂ ಗಂಡನೇ ತಂದು ಕೊಡುವದು...
(ಅಲ್ಲಿ ಬಾಗಿಲು ಹಾಕುವದು ಇರಲಿಲ್ಲ)
ಹೆಂಡತಿ ಮುಂದೆ ಕಾಣಿಸಿ ಕೊಳ್ಳ ಬಾರದು...

ಹೆಂಡತಿ ಅಭ್ಯಾಗತನನ್ನು ಇಷ್ಟ ಪಟ್ಟರೆ ಅಂತಾನಾ...?

ಅಭ್ಯಾಗತ ಮಡದಿಯನ್ನು ಕೆಟ್ಟ ದ್ರಷ್ಟಿಯಿಂದ ನೋಡಿದರೆ ಅಂತಾನಾ...?

ಅಂತಹ ಸಣ್ಣ ಮನಸ್ಸುಗಳು ಯಾವಾಗ ಸುಧಾರಿಸ ಬಹುದು..?

ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿಯವರೆ...

ಇಲ್ಲಿ ಬರುವ ಮನುಷ್ಯನ ಥರಹದವರು ನಿಮ್ಮ

ಆಫೀಸ್ ನಲ್ಲಿ ಇಲ್ಲ ಅಲ್ಲವೇ..?

ಖಂಡಿತ ಬರುವೆ... ಅಲ್ಲಿ ಬಂದಾಗ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ನನನಗೆ ಅವಮಾನ ಆದಂತಾಗಿತ್ತು...
ಬೇಸರವೂ ಆಗಿತ್ತು...
ಮನೆಗೆ ಬಂದು ಹೇಳಿ ಕೊಂಡರೆ..
ಇಲ್ಲಿ ಮತ್ತೊಂದು ಥರಹದ ಚರ್ಚೆ...!!

ನಮ್ಮ ಸಮಾಜದಲ್ಲಿ ಇಂಥಹ ಮನಸ್ಸುಗಳು...
ಬೇಕಾದಷ್ಟಿವೆ.... ಸರ್....!

ಇವೆಲ್ಲ ರಿಪೇರಿ ಆಗುವದು ಕಡಿಮೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರಾಜೇಶ್....

ಸಣ್ಣ ಅನುಮಾನ ಇರಬೇಕಂತೆ..
ಸಣ್ಣ ಅನುಮಾನ ಹೆಣ್ಣುಮಕ್ಕಳಿಗೆ ಖುಷಿತರುವಂತ್ತ್ದಂತೆ...

ಅಪರಿಚತರು ಬಂದಾಗ ಹೆಂಡತಿಯನ್ನು ನೋಡುವದು..
ಇವರು ಸೀರೆ ಸೆರಗನ್ನು ತಲೆಗೆ ಹಾಕಿಕೊಳ್ಳುವದು...
ಇದೆಲ್ಲ ಉತ್ತರ ಭಾರತದಲ್ಲಿ ಇಂದಿಗೂ ಇದೆ...

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಬಿಸಿಲ ಹನಿಯವರೆ...

"ನನ್ನ ಬಿಟ್ಟು ನೀನು ಬೇರೆಯವರನ್ನು ನೋಡ ಬೇಡ..."
ಈ ಮನೋಭಾವ ಇದಕ್ಕೆ ಕಾರಣವಿರಬಹುದಾ...?

ಗಂಡನಿಗಿಂತ ಹೆಂಡತಿ ಚಂದ ಇದ್ದು ಬಿಟ್ಟರೆ..
ಈಥರಹ ಆಗುತ್ತದಾ..?

ರೇಲ್ವೆಯಲ್ಲಿ, ಬಸ್ಸುಗಳಲ್ಲಿ, ಇಂಥಹ ಮನಸ್ಸುಗಳ
ದಬ್ಬಾಳಿಕೆ ನಾನು ಬಹಳ ಸಾರಿ ಕಂಡಿದ್ದೇನೆ...

ಅಪರಿಚತರೊಡನೆ ಹೆಂಡತಿ ನಕ್ಕರೆ
ಗಂಡನಿಗೆ ಕೋಪ ಬಂದು ಬಿಡುತ್ತದೆ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಹಿರಿಯ ಲೇಖಕ ಶ್ರೀ ನಾಗೇಶ್ ಹೆಗಡೆಯವರು ಹೇಳುತ್ತಾರೆ...

ಮೊದಲ ಕಂತು ಚೆನ್ನಾಗಿದೆ.
ಮುಂದಿನ ವಿವರ ಏನೆಂದು ಅರಿಯುವ ಕುತೂಹಲವನ್ನು ಉಳಿಸಿ ಕೊಂಡಿದೆ.

ಚಿತ್ರ ಚಿತ್ತಾರ: said...

ಈವೊತ್ತು ಶುಭ ಶುಕ್ರವಾರ. ರಜಾ ಕೊಟ್ಟಿದ್ದಾರೆ ಸರ್ಕಾರದವರು ಅಂತಾ ಬೆಳಿಗ್ಗೆನೇ, ಹೆಂಡತಿ ಹೇಳಿದರೂ ಕೇಳದೆ ಕಂಪ್ಯೂಟರ್ನಲ್ಲಿ ನಿಮ್ಮ ಲೇಖನ ಓದಿದೆ. ನನ್ನ ಈ ಬೆಳಿಗ್ಗೆ ಸಾರ್ಥಕವಾಯಿತು. ನನಗೂ ಅನಿಸೊತ್ತೆ ಈ ತರಾ ಒಂದೆರಡು ಪುಟ ಬರೆಯೋಣ ಎಂದು. ಆದರೆ ಅಷ್ಟೊಂದು ಸಹನೆ ಇಲ್ಲ ಅನಿಸೊತ್ತೆ. ನಿಮ್ಮ ಲೇಖನ ಓದಿ ಓದಿ ಎಂದೋ ನಾನೂ ಬರೆಯುತ್ತೇನೆ ಎಂಬ ನಂಬಿಕೆ.

PARAANJAPE K.N. said...

ಪ್ರಕಾಶರೇ,
ಚೆನ್ನಾಗಿದೆ ಮಾರಾಯರೇ ಕಥೆ. ನಾನೂ ಇ೦ತಹ ಸ೦ಶಯಪಿಶಾಚಿಗಳನ್ನು ಕ೦ಡಿದ್ದೇನೆ. ನೀವು ಆ ಪಾರ್ಟಿಗೆ estimate ಕೊಟ್ಟು ಬ೦ದು ಕಥೆಯ ಮು೦ದಿನ ಭಾಗವನ್ನು ಬರೆದು ನಮ್ಮ ಸ೦ಶಯ ತಣಿಸಿ.

Geetha said...

ನಮಸ್ಕಾರ ಸರ್,

ಚೆನ್ನಾಗಿದೆ ಲೇಖನ. ಎಂತೆಂತ ಜನ ಸಿಗುತ್ತಾರೆ ಸರ್ ನಿಮಗೆ! ಐವತ್ತು ವರ್ಷವಾದವರು, ಮಕ್ಕಳು, ಮೊಮ್ಮಕ್ಕಳು ಇರುವವರು ಹೀಗಿರುವರೆ! ಬಲು ಕಷ್ಟ....

Ramya Hegde said...

ಇಂತಹ ಜನರು ಮಾನಸಿಕ ರೋಗಿಗಳಾ..., ಜೀವನದಲ್ಲಿ ಅಭದ್ರತೆಯ... ಅಂತ ಸ್ವಲ್ಪ ಅನುಮಾನ ಇದ್ದು.ಅಂತ ಮನುಷ್ಯ ನಿಮ್ಮ ಕಾರ್(fordu..) ನೋಡಿದ
ನಂತರ ಊಟ ಮಾಡಬಹುದಿತ್ತು ಅಂದರೆ...,
ಮುಂದಿನ ಎಪಿಸೋಡ್ ಬೇಗ ಬರಲಿ.......

ಧರಿತ್ರಿ said...

ಇದೇನಿದು ಸರ್? ನಿಜವೇ? ಭಾಳ ಕಷ್ಟ ಸರ್..ಅಮೆರಿಕಾದಲ್ಲಿ ಮಗ, ಮೊಮ್ಮಗ, ಹೆಂಡತಿ ಪಂಜರದಲ್ಲಾ...ಈಗಲೂ ಇಂಥ ಜನ ಇರ್ತಾರಾ? ಅದೂ ಚಿಲಕ ಹಾಕಿ ಹೆಂಡತಿಯನ್ನು ಕೋಣೆಯಲ್ಲಿ ಇರಿಸುವಷ್ಟು ಕೆಟ್ಟ ಮನುಷ್ಯರು...?! ಥೂ! ಆ ಮನುಷ್ಯನ ಬಗ್ಗೆ ಅಸಹ್ಯ, ಅಸಹನೆ ಮೂಡುತ್ತೆ. ಹೀಗಿದ್ದರೂ ಆ ಹೆಣ್ಣು ಇಷ್ಟು ವರುಷ ವಿನಾಯಕ ಜೊತೆ ಬದುಕಿದ್ದಳಲ್ಲಾ...! ಸಂಶಯವೆಂಬ ಹುತ್ತದ ಸುತ್ತ...ಇನ್ನಷ್ಟು ಕಥೆಗಳಿರಬಹುದು. estimate ಕೊಡಕೆ ಹೋದಾಗ ಸ್ವಲ್ಪ ಜಾಸ್ತಿನೇ ತಿಳಿದುಕೊಂಡು ಬನ್ನಿ..ನಮಗೆ ಕಥೆ ಹೇಳಿ.

-ಧರಿತ್ರಿ

Amit Hegde said...

Striking reality blended with humor... :-) Good work sir...!

PaLa said...

ಸಕ್ಕತ್ ಟೈಟಲ್ ನೋಡದೇ, ಬರೀ ಬರಹ ಓದ್ಕೊಂಡ್ ಹೋದ್ರೆ ಒಂಥರಾ ಕುತೂಹಲ.. ಯಾಕೆ ಹೀಗೆ ಮಾಡ್ತಿದಾರೆ ಅಂತ..

"ಸಂಶಯಾ... ಪ್ರೇಮ..ಕಾವ್ಯದಾ.. ಕಹಿ ಬರಹಾ...!" - ನಿಮ್ದೇನಾ ರೀಮಿಕ್ಸು?

pavana m hegde said...

very beautifully written great

ಸಿಮೆಂಟು ಮರಳಿನ ಮಧ್ಯೆ said...

ಶ್ರೀ ನಾಗೇಶ್ ಹೆಗಡೆಯವರೆ...

ನಿಮ್ಮ ಸಲಹೆ , ಸೂಚನೆಗಳು..
ನನ್ನ ಬರವಣಿಗೆಗೆ ಸಹಾಯವಾಗುತ್ತಿದೆ..

ನೀವು ಲೇಖನ ಮೆಚ್ಚಿದ್ದು ಖುಷಿಯಾಗುತ್ತಿದೆ...
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚಿತ್ರ ಚಿತ್ತಾರ....

ನನ್ನ ಬ್ಲಾಗಿಗೆ ಸುಸ್ವಾಗತ....

ನನ್ನ ಲೇಖನದಿಂದ ನಿಮಗೆ ಸ್ಪೂರ್ತಿ ಸಿಕ್ಕರೆ...
ನನಗೆ ಖುಷಿ...ಸಂತೋಷ...

ನಾನೂ ಕೂಡ ಚಿತ್ರಾ(ದ್ವಯರು), ಶಾಂತಲಾ ಭಂಡಿ,ಚಂದ್ರಕಾಂತಾ
ಮನಸು ಮುಂತಾದವರಿಂದ ಸ್ಪೂರ್ತಿ ಪಡೆದಿದ್ದೇನೆ...
ಜೋಗಿ, ರವಿ ಬೆಳಗೇರೆ,ವಸುಧೇಂದ್ರ
ಇವರೂ ನನಗೆ ಬರೆಯಲು ಸ್ಪೂರ್ತಿ..

ನನ್ನ ಸ್ನೇಹಿತರಾದ ಶಿವು, ಮಲ್ಲಿಕಾರ್ಜುನ್..
ನನ್ನ ಬೆನ್ನು ತಟ್ಟಿ ಸಪೋರ್ಟ್ ಮಾಡಿದ್ದಾರೆ...

ನೀವೂ ಕೂಡ ಬರೆಯ ಬಲ್ಲಿರಿ.. ಬರೆಯಿರಿ..
ಓದಲು ನಾವಿದ್ದೇವೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

shivu said...

ಪ್ರಕಾಶ್ ಸರ್,

ಆ ಎಶ್ಟಿಮೇಷನ್ ವ್ಯಕ್ತಿಯನ್ನು ನಾನು ನೋಡಬೇಕೆನ್ನಿಸುತ್ತೆ...ಮಾಹಾನ್ ವ್ಯಕ್ತಿಯೆನಿಸುತ್ತದೆ...
ಮಗ-ಮೊಮ್ಮಗ ಅಮೇರಿಕದಲ್ಲಿ ಖೈದಿ, ಹೆಂಡತಿ ಬೆಡ್ ರೂಮಲ್ಲಿ ಖೈದಿ, ಈತ ಬದುಕಿನ ಎಶ್ಟಿಮೇಷನ್ ನೊಳಗೆ ಖೈದಿ...

ಪ್ರೀತಿ ಪ್ರೇಮಕ್ಕೆ, ಪೊಸೆಸೀವ್‍ನೆಸ್‌ಗೆ, ಮನೆಯವರಿಗೆ ತವರುಮನೆ ಕಡೆಯಾ ಪ್ರೀತಿಗೆ, ಮನೆಯಲ್ಲಿ ನಡೆಯುವ ಇಂಥ ಪುಟ್ಟ ಆಟಗಳಿಗೂ ಎಶ್ಟಿಮೇಷನ್ ಹಾಕಿಬಿಡಿ...
ಹಿತಮಿತವಾದ ನಗು..ಚಿಂತನೆ...ತರಿಸುವ ಬರಹ..
ಮುಂದುವರಿಯಲಿ...

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ತವರು ಮನೆ ವಿಚಾರ ಜ್ಞಾಪಿಸಿ ಹೆಂಡತಿಯರ ಕೋಪ ತಣ್ಣಗೆ ಮಾಡಬಹುದು(ಟೋಪಿ ಹಾಕಬಹುದು!);Mr.ವಿನಾಯಕರಂತಹವರ ಬಗ್ಗೆ ಹೇಳಿ ನಾವೆಷ್ಟು ಒಳ್ಳೆಯವರು ಎಂದು ಹೇಳಬಹುದು. ತುಂಬಾ message ಇದೆ ನಿಮ್ಮ ಬರಹದಲ್ಲಿ. ಅರ್ಥಮಾಡಿಕೊಂಡು ವಿವಾಹಿತರು ಅಳವಡಿಸಿಕೊಳ್ಳಬೇಕು, ಅವಿವಾಹಿತರು ನೆನಪಿನಲ್ಲಿಟ್ಟುಕೊಳ್ಳಬೇಕು!!!

Guru's world said...

ಪ್ರಕಾಶ್.
ಚೆನ್ನಾಗಿದೆ ನಿಮ್ಮ ಬರಹ... ಹೌದು ಅಲ್ವ...ಸಂಶಯ ಅನ್ನೋದು ಎಂಥ ವಿಚಿತ್ರ ರೋಗ...... ಎಲ್ಲರ ಮದ್ಯೆ ಒಂದು ಗ್ಯಾಪ್ ಮೂಡಿಸಿಬಿಡುತ್ತೆ.. ಎಂದಿನಂತೆ ನಿಮ್ಮ ಇ ಲೇಖನ ಹಾಸ್ಯಾಸ್ಪದವಾಗಿ , ಸಿಂಪಲ್ ಆಗಿ ಮೂಡಿ ಬಂದಿದೆ... ಮತ್ತೆ ಅವರ ಮನೆಗೆ ಹೋಗೋ ಚಾನ್ಸ್ ಇದೆ ಅಲ್ವ.. estimation ಆದಮೇಲೆ ಅವಾಗ ನಿಮ್ಮ ಸಂಶಯ ವನ್ನು (:-) )ಪರಿಹರಿಸಿಕೊಳ್ಳಬಹುದು,,
ನಿಮ್ಮ ಮುಂದಿನ ಲೇಖನವನ್ನು ಎದುರು ನೋಡುತ್ತಿರುತ್ತೇವೆ...

ಮನಸು said...

ಪ್ರಕಾಶ್ ಸರ್,
ನಿಜಕ್ಕೋ ಭಯ ಹಾಗು ಅನುಮಾನ ಪಡಿಸುವ ವ್ಯಕ್ತಿಯ ಚಿತ್ರಣ ತೋರಿಸಿದ್ದೀರಿ... ಜನ ಎಷ್ಟೇ ಮುಂದುವರಿದರು ತಮ್ಮ ಕೆಟ್ಟ ಬುದ್ದಿ ಬಿಟ್ಟಿರೋಲ್ಲ.. ಚಂದ್ರನಲ್ಲಿ ಹೋಗಿಬಂದ ಮಹಿಳೆ ಇರುವಾಗಲೂ ಈ ತರದ ಅನುಮಾನ ಪ್ರಾಣಿಗಳು ಇದ್ದಾರೆ..ಛೆ ಬೇಸರದ ಸಂಗತಿ... ಮತ್ತೊಮ್ಮೆ ಹೋಗಿ ಬನ್ನಿ ಅವರ ಮನೆಗೆ ಇನ್ನು ಹತ್ತು ಹಲವು ಸಂಗತಿಗಳು ತಿಳಿದು ಬರಬಹುದು .... ಹ ಹ ಹ ಹಾಗೆ ಒಂದು ಫೋಟೋ ತೆಗೆದುಕೊಂದು ಬನ್ನಿ ಹ ಹ ಹ ....
ಮನೆ ದೊಡ್ಡದಾದರು ಮನಸ್ಸು ದೊಡ್ಡದಿಲ್ಲ, ಸುಂದರ ಸ್ವಚ್ಚ,ಬಣ್ಣ ಬಣ್ಣ ಅಲಂಕೃತ ಮನೆ ಇದ್ದರು ಮನ ಸ್ವಚ್ಚವಿಲ್ಲ ಅಲ್ಲವೇ..?ಅವರು ಎಷ್ಟಕ್ಕೆ ಬದುಕ್ಕಿದರೇನು ಬಿಡಿ ..


ನಿಮ್ಮ ಕೊನೆಯ ಮಾತು ಹ ಹ ತವರ ತವಕ ಕೊನೆವರೆಗೆ ಇರುತ್ತೆ ಹೆಣ್ಣು ಮಕ್ಕಳಿಗೆ .....ನಿಮ್ಮವರ ಕುಶಿ ಕಂಡು ನೀವು ಕುಶಿ ಪಟ್ಟಿದ್ದು ಇನ್ನು ದೊಡ್ಡ ವಿಷಯ ಹೀಗೆ ಇರಿ...

Kishan said...

Shocking experience, written effortlessly with nice narration.

I am sure the character you met is a mental patient, to put in simple terms. Feel sorry for his wife(?) however.

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ....

ತನ್ನ ಹೆಂಡತಿ ಚಂದವಿದ್ದರೆ..,ಬುದ್ಧಿವಂತೆ, ಜಾಣೆಯಾಗಿದ್ದರೆ..
ತನ್ನ ಬಗೆಗೆ ತನಗೇ ಕೀಳರಮೆ ಇದ್ದರೆ...
ಈ ಥರಹದ ಸಂಶಯ ಶುರುವಾಗ ಬಹುದೇನೋ...

ಸುಮಧುರ ಬಾಂಧವ್ಯದಲ್ಲಿ..

ಈ ಸಂಶಯದ ಅಗತ್ಯವೇ ಇಲ್ಲ ಎನ್ನುವದು ನನ್ನ ಅಭಿಪ್ರಾಯ..

ಏನಂತೀರಿ..

ಸಿಮೆಂಟು ಮರಳಿನ ಮಧ್ಯೆ said...

ಗೀತಾರವರೆ...

ಈ ಮನುಷ್ಯ ಫೋಟೊ ತಿರುಗಿಸಿ ಇಟ್ಟಾಗ
ನನಗೆ ಅವಮಾನವಾಗಿತ್ತು...
ಎದ್ದು ಬಂದು ಬಿಡೋಣ ಎಂದು ಕೊಂಡೆ...

ವ್ಯವಹಾರದಲ್ಲಿ ತೀರಾ ವಯಕ್ತಿಕ ವಿಷಯಗಳನ್ನು ಗಣನೆಗೆ ತೆಗೆದು ಕೊಳ್ಳ ಬಾರದು..

ಅವರ ವಯಕ್ತಿಕ ವಿಷಯ ನನಗೆ ಸಂಬಂಧವಿಲ್ಲವಿದಿರುವ ವಿಷಯ..

ನನಗೆ ಕೆಲಸ ಕೊಡ ಬಹುದಾ...?

ಇದೊಂದು ಯಕ್ಷ ಪ್ರಶ್ನೆ...

ನೋಡೋಣ ಏನಾಗುತ್ತದೆಂದು..

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ರಮ್ಯಾರವರೆ...

ಸ್ವಂತ ಮನೆ ಇದೆ ಅಂದಾಗ ಟೀ ಸಿಕ್ಕಿತು...
ಕಾರು ನೋಡಿದ ಮೇಲೆ ಊಟಕ್ಕೆ ಆಹ್ವಾನ ಸಿಕ್ಕಿತು...

ಎಲ್ಲವೂ ಹಣದಿಂದ ಅಳೆಯುವ ಮನುಷ್ಯ ಎಂದಾಯಿತಲ್ಲವೇ..?

ಇಂಥಹ ಜನರ ಮನೆಯನ್ನೂ ನಾನು ಕಟ್ಟಿದ್ದೇನೆ...
ಆ.. ವಿಚಿತ್ರ ಅನುಭವಗಳು...
ನನ್ನನ್ನು ಕಾಡುತ್ತಿರುತ್ತವೆ...

ನನ್ನದಲ್ಲದ ಸ್ವಭಾವದ ಜೊತೆ ಸೇರಿ ಕೆಲಸ ಮಾಡುವದು ..
ಒಂದು ರೀತಿಯ ಛಾಲೇಂಜಿಂಗ್ ವಿಷಯ...
ಅಲ್ಲವಾ...?

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಧರಿತ್ರಿ....

ಮಗ ಅಮೇರಿಕಾದಲ್ಲಿದ್ದಾನೆ ಅಂದರೆ...

ಆ ಮಗ ತನ್ನ ತಾಯಿಯನ್ನು ಅಪ್ಪ ನಡೆಸಿಕೊಳ್ಳುವದನ್ನು ನೋಡಿರುತ್ತಾನೆ ಅಲ್ಲವೇ...?

ಆ ಮಗ ತನ್ನ ತಾಯಿಗೆ ಏನೂ ಸಹಾಯ ಮಾಡದ ಸ್ಥಿಯಲ್ಲಿದ್ದಾನಾ...?

ಆ ಹೆಣ್ಣುಮಗಳು ಇಂಥಹ ಮನುಷ್ಯನ ಸಂಗಡ ಬದುಕುವ ಅನಿವಾರ್ಯತೆಯಾದರೂ ಏನು...?

ಇಂಥಹ ಬದುಕು ಅನಿವಾರ್ಯವಾ...?

ಧರಿತ್ರಿ...
ಬಹಳಷ್ಟು ಪ್ರಶ್ನೆಗಳಿವೆ...
ಉತ್ತರಕ್ಕಾಗಿ ನಾನೂ ಕುತೂಹಲದಿಂದ...

ಈ ಆರ್ಥಿಕ ಹಿಂಜರಿತದ ಸಮಯದಲ್ಲಿ ಕಾಯುತ್ತಿರುವೆ....

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅಮಿತ್....

ಇಲ್ಲಿ ಬಹು ಮುಖ್ಯವಾದ ವಿಷಯ ನನ್ನ ಮಡದಿಯವರು ಹೇಳಿದ್ದು...

ಗಂಡ ತನ್ನಲ್ಲಿ ಆಕರ್ಷಣೆ ಇಟ್ಟುಕೊಂಡಿದ್ದಾನೆ ಎನ್ನುವ ಭಾವ..
ಹೆಂಗಸರಿಗೆ ಬಹು ಮುಖ್ಯ....ಬಲು ಅಗತ್ಯ....

ಹೊರಗಡೆ ಕೆಲಸ, ವ್ಯವವಹಾರದಲ್ಲಿ ಮುಳುಗಿರುವ ಗಂಡಸರಿಗೆ ಇದು ಅರ್ಥವಾಗುವದು ಕಡಿಮೆ...

ಇಡೀ ದಿವಸ ಮನೆ, ಮಕ್ಕಳ ಪ್ರಪಂಚದಲ್ಲಿ ಮುಳುಗಿರುವ ಮಡದಿಗೆ..
ತನ್ನ ಬಗೆಗೆ ಪತಿಯ ಆಕರ್ಷಣೆ..
ಬಹಳ ಮಹತ್ವ ಎನಿಸುತ್ತದೆ...

ಕೆಲಸದಲ್ಲಿ ಮುಳುಗಿರುವ ಗಂಡಸರೇ...
ಈ ಬಗೆಗೂ ಗಮನ ಇರಲಿ...

ಸಣ್ಣವಯಸ್ಸಿನ ನಿಮಗೆ ಬಹಳ ಹೇಳಿ ಬಿಟ್ಟೆ.....
ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಪಾಲಚಂದ್ರ....

ಇದಕ್ಕೆ ಮೊದಲು ಬೇರ್‍ಎ ತಲೆ ಬರಹ ಕೊಟ್ಟಿದ್ದೆ....

"ಮನೆಕಟ್ಟುವವರ ಮನದೊಡತಿಯರು (ಭಾಗ ..೨)"

ಮನೆಕಟ್ಟುವವರ ಮನದೊಡತಿಯರು
ವಿಚಿತ್ರ ರೀತಿಯ ,ವಿಭಿನ್ನ
ಅನುಭವ ನನಗಾಗಿದೆ...
ಮುಂದಿನ ದಿನಗಳಲ್ಲಿ ಬರಲಿದೆ....

ಒಟ್ಟಿಗೆ, ಪ್ರೀತಿ,ಪ್ರೇಮದಿಂದ ಬಾಳುವೆವು ಎಂದು...
ಮದುವೆಯಾಗುತ್ತಾರೆ... ವಿಶ್ವಾಸ, ನಂಬುಗೆ ಇರಲಾರದೇನು...?
ಸಂಶಯ ಯಾಕೆ...?

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪಾವನಾ......

ಪ್ರೀತಿ, ಪ್ರೇಮದ ಬಾಳುವೆಗೆಂದು..
ಮದುವೆಯಾದದ್ದು...

ಈ ಥರಹದ ಜೀವನ ಯಾವ ಪುರುಷಾರ್ಥಕ್ಕೆ...?

ಮಕ್ಕಳು, ಮೊಮ್ಮಕ್ಕಳು ಎಲ್ಲರೆದುರಿಗೆ ಯಾವರೀತಿಯ ಆದರ್ಶ ಇಡುತ್ತಾರೆ...?

ಇರುವ ನಾಲ್ಕು ದಿನ ಖುಷಿಯಿಂದ ಇರಲಾರದಷ್ಟು...
ಬೇಲಿಗಳನ್ನು, ಗೋಡೆಗಳನ್ನು ...
ಈ ಮನುಷ್ಯರು ಯಾಕೆ ಕಟ್ಟಿಕೊಳ್ಳ ಬೇಕು...?

ನನಗಂತೂ ಬಹಳ ವಿಚಿತ್ರ ಅನಿಸುತ್ತದೆ...
ಏನಂತಿರಿ...?

ವಿನಾಯಕನ ಮದುವೆಗೂ, ಗುಲಾಮಗಿರಿಗೂ..
ವ್ಯತ್ಯಾಸ ನನಗೇನೂ ಕಾಣುತ್ತಿಲ್ಲ...

ಧನ್ಯವಾದಗಳು....

ಶಿವಶಂಕರ ವಿಷ್ಣು ಯಳವತ್ತಿ said...

ಸಾರ್..

ಇನ್ನೊಮ್ಮೆ ಆ ಮನೆಗೆ ಹೋದಾಗ, ಬೇರೆ ದೃಷ್ಟಿಕೋನದಿಂದ ಅವಲೋಕಿಸಿ..

ಬೇರೆ ಅಭಿಪ್ರಾಯ ಬಂದರೂ ಬರಬಹುದು,,

ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ
http:/shivagadag.blogspot.com

Prabhuraj Moogi said...

ಸಂಸಾರದಲ್ಲಿ ಅಷ್ಟು ಸಂಶಯ ಇರಬಾರದು, ಆದರೆ ಕೆಲವರ ಮನಸ್ಥಿತಿ ಹಾಗೇ ಇರುತ್ತದೆ, ಅತೀ ಪ್ರೀತಿಯೂ ಅದಕ್ಕೊಂದು ಕಾರಣ.. ಹಾಗಾದಾಗ ಹಾರಾಡೊ ಹಕ್ಕಿನಾ ಪ್ರೀತಿಯಿಂದ ಪಂಜರದಲ್ಲಿ ಕೂಡಿಟ್ಟ ಹಾಗಾಗುತ್ತದೆ...

Asima said...

ಅಲ್ರೀ ಸಾಹೇಬರ, ನಿಮಗ ಮನಿ ಅದ ಅಂದಾಗ ಟೀ ಕೊಟ್ಟಾವ, ಫೋರ್ಡ್ ಗಾಡಿ ಕಂಡಾಗ ಊಟ ಮಾಡ್ರಿ ಅಂದಾವ ನಿಮಗ ಕೆಲಸ ಕೊಡಾಣಿಲ್ಲ ಕಾಣ್ರಿ! ನಿಮ್ ಮಾತಿಗ್ ಒಪಿಗೊಂಡ ನೀವ ಎಸ್ಟಿಮೇಶನ್ ಕೊಟ್ ಬರ್ರಿ ಮತ್ತ, ಎಂಥಾ ಆಶಾ ಇಟಗೋಬ್ಯಾಡ್ರಿ. ಹೆಂತಿ ಫೋಟೋ ಮ್ಯಾಕೇ ನಿಮ್ ಕಣ್ಣ್ ಬೀಳದ್ ಹಾಂಗ ನೋಡಿಕೊಂಡಾವ, ಇನ್ನ ನಿಮಗ ಕೆಲಸ ಕೊಟ್ಟ್ ನಿಮ್ಮ್ ಕಣ್ ಅವಳ ಮೇಲೇ ಬೀಳೋ ಚಾನ್ಸ್ ತರಿಸಿಗೋತಾನೇನು? ನೀವ್ ಅಷ್ಟೂ ಛಂದ ಅದೀರೇನ್ರೀ ಯಜಮಾನ್ರೆ? ಆಶಾ ಮೇಡಮ್ಮಗ ಈ ಲಾಜಿಕ್ಕು ತಿಳಿಸಿ ಹೇಳ್ರೀ ಮತ್ತ!

ನಾನೂ ಕಂಡೀನ್ರೀ ಇಂಥ ನಾಯಿಗೋಳ್ನ, ಬರೋಬ್ಬರಿ ಕಂಡೀನಿ. ಕೆಲವಕ್ಕೆ ಸ್ವತಃ ಕಚ್ಚೆ ನಿಲ್ಲವಲ್ದು, ಹೇಂತಿ ಮೇಲೆ ಹದ್ದಿನ್ ಕಣ್ಣು. ಕೊಚ್ಚೆ ನಾಯಿಗೋಳ್ನ್ ತಂದು

ಕಥಿ ಛಂದಕ್ಕ ಹೇಳತೀರ ನೀವು. ಬರ್ತೀನ್ರೀ ಮತ್ತ, ಓದಲಕ್ಕ.

umesh desai said...

ಸುಪರ್ ಸಾರ್ ! ನಿಮ್ಮೊಳಗ ಅಧ್ಬುತ ಪ್ರತಿಭಾ ಅದ. ಯಾಕ್ ನೀವು ಬರವಣಿಗೆ(ಪ್ರಬಂಧ ರೂಪದಲ್ಲಿ) ಪ್ರಕಟಿಸಬಾರದು...?

aak said...

you have maintained suspense throughout

agniprapancha said...

ಚೆನ್ನಾಗಿದೆ...
ನನಗೊಂದು ಕುತೂಹಲ. ನಿಮ್ಮ ಬರಹದಲ್ಲಿ ಅಂದಾಜು ಎಷ್ಟು ... ಇದ್ದಿರಬಹುದು. ? ಇದು ಕೂಡ?

guruve said...

ನಿಮ್ಮ ಪ್ರಸಂಗಕ್ಕೆ ತಾತ್ವಿಕ ಮೆರುಗು ಕೊಟ್ಟಿದ್ದೀರ, ಬರಹ ಅದ್ಭುತ.

ಆದರೆ ಆ ವೃದ್ಧರ ವ್ಯಯಕ್ತಿಕ ಜೀವನವನ್ನು ಸಂಪೂರ್ಣ ತಿಳಿಯದೆ (ತಿಳಿದರೂ), ಅದನ್ನು ಚರ್ಚಿಸುವುದು ಉಚಿತವಲ್ಲವೇನೋ ಎಂಬುದು ನನ್ನ ವ್ಯಯಕ್ತಿಕ ಅನಿಸಿಕೆ. ಇಂತಹ ಸಂಗತಿಗಳನ್ನು ಚರ್ಚಿಸುವುದು ಒಳ್ಳೆಯದೇ, ಆದರೆ ಯಾವುದೇ ವ್ಯಕ್ತಿಯ ಕಡೆಗೆ ಬೆಟ್ಟು ಮಾಡದೆ ಚರ್ಚಿಸುವುದು ಒಳ್ಳೆಯದೇನೋ!

Vinutha said...

ಪ್ರಕಾಶ್ ರವರೆ,
ಮತ್ತೊ೦ದು ಹಾಸ್ಯ ಲೇಪಿತ ಚಿ೦ತನಾರ್ಹ ಬರಹ.
ಹೀಗೂ ಉ೦ಟೆ? ನಿಜವಾಗಿಯೂ ಅ೦ತಹ ಮಾನಸಿಕ ರೋಗಿಯೊ೦ದಿಗೆ ಬಾಳ್ವೆ ನಡೆಸುತ್ತಿರುವ ಆ ಮಹಾತಾಯಿಗೆ ಒ೦ದು ನಮನ. ಜೊತೆಗೊ೦ದಿಷ್ಟು ಬೇಸರ. ಅಷ್ಟೆಲ್ಲಾ ಸಾಮರ್ಥ್ಯಗಳಿದ್ದರೂ, ಯಾವ ಪುರುಷಾರ್ಥಕ್ಕಾಗಿ ಅ೦ಥಹ ವ್ಯಕ್ತಿಯೊ೦ದಿಗೆ ಜೀವನ? ಸಮಾಜವನ್ನೆದುರಿಸುವ ಧೈರ್ಯದ ಕೊರತೆಯಿರಬೇಕಷ್ಟೇ. ನಮ್ಮ ಕಣ್ಣಿಗೆ ಕ೦ಡದ್ದಿಶ್ಟು. ಇದನ್ನು ಮೀರಿದ ಅದೆಷ್ಟು ಸ೦ಕಷ್ಟಗಳನ್ನು ಹೊಟ್ಟೆಯಲ್ಲಿಟ್ಟುಕೊ೦ಡು ಬಾಳುತ್ತಿರುವವರೆಷ್ಟು ಮ೦ದಿಯೋ?

ಉಮಿ :) said...

ಪ್ರಕಾಶ್ ಸರ್,

ನೀವು ಹೇಳಿದಂತೆ, ತನ್ನ ಬಗ್ಗೆ ತನಗೇ ಕೀಳರಿಮೆ ಇದ್ದವರಿಗೆ ಮಾತ್ರ ಆ ತರಹದ ಸಂಶಯ ಪ್ರವೃತ್ತಿ ಇರುತ್ತೆ. ಗಮನಿಸಿ ನೋಡಿ, ಅವರು ಯಾವಾಗಲೂ ನೋಡಲು ತಮಗಿಂತ ಚೆನ್ನಾಗಿರುವ, ಆದರೆ ಆಸ್ತಿ-ಅಂತಸ್ತಿನಲ್ಲಿ ತಮಗಿಂತ ಕೆಳಗಿನವರ ಮನೆಯ ಹೆಣ್ಣನ್ನೇ ಮದುವೆ ಮಾಡಿಕೊಂಡಿರುತ್ತಾರೆ. ಹೆಂಡತಿ ಮತ್ತು ಹೆಂಡತಿಯ ತವರು ಮನೆಯವರು ತಾವು ನಡೆಸುವ ದಬ್ಬಾಳಿಕೆಗೆ ವಿರೋಧ ವ್ಯಕ್ತಪಡಿಸದಿರಲಿ ಅಂತ.

ಅರ್ಥಗರ್ಭಿತ ಲೇಖನ, ಚೆನ್ನಾಗಿ ಮೂಡಿ ಬಂದಿದೆ.

Jayalakshmi said...

Most probebly she must be his second wife(?) and he might not be in the mood to bring her in public(?). Or she might not be his wife and what if the lady in photo is totally different from the one who was in bedroom?

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್..

ಚಂದವಾಗಿ ನಗುತ್ತ ಬಾಳಬೇಕಾದ..
ಜೀವನದಲ್ಲಿ ನಾವೇ ಹಾಕಿಕೊಂಡ ಬೇಲಿಗಳಿಂದ ಹೀಗಾಗುತ್ತದೆ...
ನಮಗೆ ಖುಷಿ ಕೊಡದ ಈ ಬೇಲಿಗಳು ಏಕೆ ಬೇಕು...?

ಸಂಸಾರದಲ್ಲಿ ನಡೆವ ಇಂಥಹಸಣ್ಣಪುಟ್ಟ ಚರ್ಚೆಗಳು ನಮಗೆ ಅತ್ಯಗತ್ಯ..
ನಮ್ಮನ್ನು ತಿದ್ದಿಕೊಳ್ಳಲು ಇವು ಅವಶ್ಯ...
ಹಾಗಾಗಿ ಇವಕ್ಕೆಲ್ಲ ಎಶ್ಟಿಮೇಷನ್ ಹಾಕಿಲ್ಲ...
ನೀವೂ ಹಾಕಲಿಕ್ಕೆ ಹೋಗಬೇಡಿ
ಹಾಗೆ ಹಾಕಲಿಕ್ಕೆ ನನ್ನ ಸಹೋದರಿ ಹೇಮಾ ಬಿಡುವದಿಲ್ಲ...
ಯಾಕೆಂದರೆ ನಿಮ್ಮನೆಯ ಇಂಥಹ ಚರ್ಚೆಗಳಲ್ಲಿ ನಾನಿದ್ದೆ..

ಧನ್ಯವಾದಗಳು....

Shweta said...

Prakashanna..

New approach!! Tumba chennagide..janaru tamma mele nambike kaledu kondaga etararannu samshayadinda noduttaare.alvaa?

ಸಿಮೆಂಟು ಮರಳಿನ ಮಧ್ಯೆ said...

ಮಲ್ಲಿಕಾರ್ಜುನ್...

ನನ್ನ ಬರಹದ ನಿಜವಾದ ಆಶಯ ನೀವು ಹೇಳಿರುವದು...
ಆ ವಿನಾಯಕರ ಬಗೆಗೆ ಬೊಟ್ಟು ತೋರಿಸುವದಲ್ಲ...

ಆ ಘಟನೆಯಿಂದ ನಾವು(ನನ್ನನ್ನೂ ಸೇರಿಸಿ) ಕಲಿಯುವಂಥದ್ದು ಬಹಳ ಇದೆ....
ನಮಗೆ ಅರಿವಿಲ್ಲದೆಯೇ ನಾವು ತಪ್ಪು ಮಾಡಿರ್ತೇವೆ..

ಇಂಥಹ ಸಂದರ್ಭದಲ್ಲಿ ಅವಲೋಕನ ಮಾಡಿ ಕೊಳ್ಳುವ ಅವಶ್ಯಕತೆ ಇದೆಯೆಂದು ನನ್ನ ಭಾವನೆ..

ಚರ್ಚೆ ಸುಖದಲ್ಲಿ ಕೊನೆಗೊಳ್ಳ ಬೇಕಲ್ಲ..
ಹಾಗಾಗಿ ತವರು ಮನೆ ನೆನಪಿಸಿದ್ದು...
ಸಧ್ಯ ಮಾವನ ಎದುರಲ್ಲಿ ಈ ವಿಷಯ ಪ್ರಸ್ತಾಪ ಬರಲಿಲ್ಲ...
ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಗುರು...

ಸಂಶಯ ಹ್ರದಯ ಸಂಬಂಧದ ಬಾಂಧವ್ಯದಲ್ಲಿ ಅನಗತ್ಯ...

ಆದರೆ ಪ್ರೇಮವಿದ್ದಲ್ಲಿ ಸಂಶಯ ಇದ್ದೇ ಇರುತ್ತದಂತೆ...
ಅಸೂಯೇ ಕೂಡ ಇರುತ್ತದಂತೆ..
ಇರಬಾರದು ಎನ್ನುವದು ಈ ಲೇಖನದ ಆಶಯ...
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಸು...

ಅಷ್ಟು ಚಂದದ ಮನೆ..
ಸುಂದರವಾದ, ಭವ್ಯವಾದ ಮನೆಯಲ್ಲಿ..
ಒಳ್ಳೆಯ ಮನದ ಅವಷ್ಯಕತೆ ಇದೆ...

ಎಷ್ಟು.. ಏನಿದ್ದರೇನು...?
ಸಂತೋಷವಾಗಿರಲಿಕ್ಕೆ ಒಳ್ಳೆಯ ಮನಸ್ಸು ,ಹ್ರದಯ ಬೇಕು...

ಆ ವಿದ್ಯಾವಂತ ಹೆಣ್ಣು ಮಗಳ ಸ್ಥಿತಿ ನೆನೆದು ಬೇಸರ ವಾಗುತ್ತದೆ..

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಕಿಶನ್...

ನಿಜ... ಆತ ಮಾನಸಿಕ ರೋಗಿಯಾಗಿರ ಬಹುದು...

ಈ ಥರಹದ ಬಗೆಗೆ ನನಗೊಂದು ಈಮೇಲ್ ಬಂದಿದೆ..
ಅವರು ಮನಶ್ಯಾಸ್ತ್ರ ಓದಿದವರು..
ಅವರ ಪ್ರತಿಕ್ರಿಯೆಯನ್ನೂ ಪ್ರಕಟಿಸುವೆ ..
ದಯವಿಟ್ಟು ಓದಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಶಿವಶಂಕರ್...

ನಾನು ಯಾವಾಗಲೂ ಮೂರನೆವ್ಯಕ್ತಿಯಾಗಿ ಘಟನೆಯನ್ನು ಅನುಭವಿಸುತ್ತೇನೆ...
ಯಾವುದೇ ಪೂರ್ವಗ್ರಹ ಪೀಡಿತನಾಗಿರುವದಿಲ್ಲ...

ನಿಮ್ಮ ಸಲಹೆಯಂತೆ ಇತರ ಕೋನಗಳಿಂದಲೂ ಪರಿಶೀಲಿಸುವೆ...
ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪ್ರಭು...

ನೀವೆನ್ನುವದು ನಿಜ...
ಅತೀಯಾದ ಪ್ರೀತಿಯೂ ಸಂಶಯಕ್ಕೆ ಕಾರಣ...
ಆದರೆ ಅಂಥಹ ಅತೀ ಪ್ರೀತಿ ದಿನಕಳೆದಂತೆ ಮಾಗುತ್ತದೆ...
ಪ್ರೇಮದದ ಭಾವ ಜಾಸ್ತಿಯಾಗುತ್ತದೆ...
ಅಂಥಹ ಮಾಗಿದ ಪ್ರೇಮ ಇನ್ನೂ ಚಂದ...

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಅಸಿಮಾ....ಸಹೋದರಿ....

ಬೈದರೆ ನಿಮ್ಮ ಹಾಂಗೆ ಬೈಯ್ಯಬೇಕು ಕಣ್ರೀ...
ಯಾವ ಮುಲಾಜಿಲ್ಲದೆ, ತೆರೆದ ಹ್ರದಯದಿಂದ ಬೈಯ್ದಿದ್ದೀರ್ರೀ...

ಕೆಟ್ಟ ಮನಸ್ಸಿನವಂಗೆ ನಾ ಚಂದ ಕಂಡ್ರೆ ಅದು ನನ್ನ ತಪ್ಪಿಲ್ಲ ಬಿಡ್ರಿ...

ನಿಮ್ಮ ಲೆಕ್ಕಾಚಾರ ಚೆನ್ನಾಗಿದೆ...
ಕೆಲಸ ಕೊಡ್ತಾ..ನೋ ಅಂತ ಗೊತ್ತಿಲ್ಲ...
ನಾವಂತೂ ಹೋಗಿ ನೋಡ್ಕೊಂಡು ಬರ್ತೀವಿ...

ನಿಮ್ಮ ತೆರೆದ ಮನಸ್ಸಿನ ಪ್ರತಿಕ್ರಿಯೆಗೆ ಶರಣ್ರೀ ಅಕ್ಕಾ....

ಬರ್ತಾ ಇರ್ರೀ ಮತ್ತ... ಈ ತಮ್ಮನ ಮನೆಗೆ...

ಸಿಮೆಂಟು ಮರಳಿನ ಮಧ್ಯೆ said...

ಉಮೇಶ ಸಾಹೇಬರೆ...

ನನ್ನ ಬರಹ ಪ್ರಕಟ ಮಾಡ್ತೀನಿ ಅಂತ ಎರಡು ಜನರು ಮುಂದೆ ಬಂದಿದಾರ್ರೀ...

ಇದರ ಬಗೆಗೆ ವಿಚಾರಗಳು ನಡಿತಾ ಇದೆ..
ಗೆಳೆಯರೂ ಪ್ರೋತ್ಸಾಹ ಕೊಡ್ತಾ ಇದಾರ್ರೀ...

ನನಗೇ ಧೈರ್ಯ ಇಲ್ಲಾರಿ...

ಪ್ರೋತ್ಸಾಹಕ್ಕೆ
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅಶೋಕ್ ಸರ್....

ನಿಮ್ಮ ಬ್ಲಾಗುಗಳ ಅಭಿಮಾನಿ ನಾನು...

ನಿಮ್ಮ ಸಲಹೆ ಪ್ರೋತ್ಸಾಹ ನನಗೆ ಟಾನಿಕ್ ಥರ...
ಹೀಗೆಯೇ ಬರ್ತಾ ಇರಿ...
ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅಗ್ನಿಹೋತ್ರಿಯವರೆ...

ಇದು ೧೦೦% ನಡೆದ ಘಟನೆ..
ಉಳಿದ ಲೇಖನಗಳ ಹಾಗೆ ಮಸಾಲೆ, ಒಗ್ಗರಣೆ ಹಾಕಿಲ್ಲ..
ನನ್ನ ಮಡದಿಯವರಿಗೂ, ನಾಗೂವಿಗೂ ನಡೆದ ಚರ್ಚೆ ಪೂರ್ತಿಯಾಗಿ ಹಾಕಲಿಕ್ಕೆ ಆಗಲಿಲ್ಲ...
ಬಹಳ ಖಾರವಾಗಿತ್ತು..
ನಮ್ಮನೆಯಲ್ಲಿ ಹಾಗೇಯೇ.... ಪ್ರಜಾಪ್ರಭುತ್ವವಿದೆ...
ಗೆಳೆಯ ಶಿವು ಅವರ ಮನೆಯಲ್ಲೂ ಇಂಥಹ ಚರ್ಚೆ ಕಂಡಿದ್ದೇನೆ..

ಚೆನ್ನಾಗಿರುತ್ತದೆ ಚರ್ಚೆಗಳು..

ಘಟನೆ ನಡೆದ ದಿನವೇ ಲೇಖನ ಬರೆದು ಹಾಕಿದೆ...
ಬಹಳ ಬೇಸರ ಆಗಿತ್ತು...

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಗುರು ಪ್ರಸಾದ್..

ಇಲ್ಲಿ ವಯಕ್ತಿಕವಾಗಿ ಯಾರನ್ನೂ ದೂಷಿಸಿಲ್ಲ...
ಅವರ ಹೆಸರನ್ನೂ ಬಳಸಿಲ್ಲ...

ಇಂಥಹ ಮನಸ್ಸಿನ ಬಗೆಗೆ ಆರೋಗ್ಯಪೂರ್ಣವಾದ ಚರ್ಚೆ ನಡೆದು...
ಒಳ್ಳೆಯ ಫಲಿತಾಂಶ ಬಂದರೆ...
ಲೇಖನ ಬರೆದದ್ದು ಸಾರ್ಥಕ..

ಇಲ್ಲಿ ನಾನು ಯಾವುದೇ ಪೂರ್ವಗ್ರಹವಿಲ್ಲದೇ ಲೇಖನ ಬರೆದಿದ್ದೇನೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ವಿನುತಾ...

ವಿದ್ಯಾವಂತೆ..
ಇಂಥಹ ಅನಾಗರಿಕ ವ್ಯಕ್ತಿಯೊಡನೆ ಬಾಳುವೆ ಮಾಡುವ
ಅನಿವಾರ್ಯ ಸ್ಥಿತಿ ಏನಿದೆಯೋ...

ಇಂಥವರು ನಮ್ಮ ಸಮಾಜದಲ್ಲಿ ಎಷ್ಟು ಜನರಿದ್ದಾರೆಯೋ ಗೊತ್ತಿಲ್ಲ...

ಎದುರಿಗೆ ನಗು ನಗುತ್ತ
ಒಳಗೊಳಗೆ ಹಿಂಸೆ ಅನುಭವಸುವ...
ಎಷ್ಟೋ ಹೆಣ್ಣುಮಕ್ಕಳು ಇದನ್ನು ಓದಿ...

ಏನಾದರೂ ಉಪಯೋಗ ಆದಲ್ಲಿ ಲೇಖನ ಬರೆದದ್ದು ಸಾರ್ಥಕ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಉಮೀ...

ನೀವೆನ್ನುವದು ನಿಜ...
ಅಂಥಹ ಮನಸ್ಥಿತಿಯವರು...
ಬಡ ಹೆಣ್ಣುಮಕ್ಕಳನ್ನೇ ಮದುವೆಯಾಗ್ತಾರೆ...
ತಮ್ಮ ಪೌರಷತೋರಿಸಲು.., ದಬ್ಬಾಳಿಕೆ ಮಾಡಲು..
ಛೇ... ಬೇಸರವಾಗುತ್ತದೆ...

ವಿದ್ಯಾವಂತೆಯರೂ, ತಿಳುವಳಿಕೆ ಉಳ್ಳವರೂ..
ಇಂಥಹ ಅನಾಗರಿಕರೊಡನೆ ಬಾಳಬೇಕಾಗುತ್ತದೆ..

ಮಕ್ಕಳ ಭವಿಷ್ಯಕ್ಕಾಗಿ...!

ಹೀಗೊಂದು ನನಗೆ ಈಮೇಲ್ ಪ್ರತಿಕ್ರಿಯೆ ಬಂದಿದೆ...

ಪ್ರತಿಕ್ರಿಯೆಗೆ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ಜಯಲಕ್ಷ್ಮೀಯವರೆ...

ನಿಮ್ಮ ಅಭಿನಯದ ಅಭಿಮಾನಿ ನಾನು...
ನೀವು ಬಂದು ಪ್ರತಿಕ್ರಿಯೆ ಕೊಟ್ಟಿದ್ದು ಸಂತೋಷವಾಯಿತು...

ಈಗ ನಾನು ಈ ಲೇಖನದಲ್ಲಿ ಏನು ಹೇಳಿದ್ದೇನೋ ಅದೆಲ್ಲವೂ ನಿಜ...
ಅವರು ಅವರ ಹೆಂಡತಿ..

ಆ ಮನುಷ್ಯನ ಸ್ವಭವದಲ್ಲೇ ತೊಂದರೆ ಇದೆ...

ಆ ಬಡ ಹೆಣ್ಣು ಮಗಳು ಮೌನವಾಗಿ ಸಹಿಸಿ ಕೊಂಡಿದ್ದಾಳೆ...
ಇದು ಸತ್ಯ...

ಹೀಗೇ ಬರ್ತಾ ಇರಿ..

ಪ್ರೋತ್ಸಾಹಕ್ಕಗಿ ಧನ್ಯವಾದಗಳು...

ನನ್ನ ಹಳೆಯ ಲೇಖನಗಳನ್ನೂ ಓದಿ...

ಸಿಮೆಂಟು ಮರಳಿನ ಮಧ್ಯೆ said...

ಶ್ವೇತಾ...

ನಮ್ಮ ಹಿರಿಯರನ್ನು ನೋಡಿ..
ಅವರಿಗೆ ಅಸಾಧ್ಯ ನಂಬಿಕೆ, ಭರವಸೆ..
ತಮ್ಮ ಬದುಕಿನ ಬಗೆಗೆ.. ಕೆಲಸದ ಬಗೆಗೆ..

ನಂಬಿಕೆ, ವಿಶ್ವಾಸವಿಲ್ಲದ ಬದುಕು ಅದೆಂಥಹ ಬದುಕು...?

ತಾನು ಇಲ್ಲಿಯವರೆಗೆ ಬದುಕಿ, ಬಾಳಿದ ತವರನ್ನು ಬಿಟ್ಟು..
ಇವನನ್ನೇ ನಂಬಿ, ಜೀವನ ಸಾಗಿಸಲು ಬಂದ...
ಆ ಹೆಣ್ಣುಮಗಳ ಮೇಲೆ ಸ್ವಲ್ಪವೂ ನಂಬಿಗೆ ಇಲ್ಲವೆನ್ನುವದು ವಿಪರ್ಯಾಸವೇ ಸರಿ....

ಸಂಶಯಾ.. ಪ್ರೇಮ ಕಾವ್ಯದಾ ಕಹಿ ಬರಹಾ...!

ಅಲ್ಲವಾ...?

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಪ್ತದೀಪ್ತಿ ಬ್ಲಾಗಿನ ಜ್ಯೋತಿಯವರು ಹೀಗೆ ಹೇಳುತ್ತಾರೆ....
jyothi mahadev

ನಮಸ್ಕಾರ ಪ್ರಕಾಶ್,

ನಿಮ್ಮ ಲೇಖನ ಓದಿದೆ, ಚೆನ್ನಾಗಿದೆ. ಸೊಗಸಾಗಿ ಬರೆದಿದ್ದೀರಿ.
ನಿಮ್ಮ ಬರವಣಿಗೆಯ ಶೈಲಿ ಸುಲಲಿತ, ಸರಳ, ನೇರ. ಓದಲು ಖುಷಿಯಾಗುತ್ತದೆ.
ಈ ಬರಹದಲ್ಲಿರುವ ಮಹಾಶಯನಂಥವರನ್ನು ನಾನು ಕಂಡಿದ್ದೇನೆ. ಅವರ ಮನೆಯಲ್ಲಿ ಜೀವಿಸುವ ಮಹಿಳೆಯ ಬದುಕು ನರಕ, ಅಷ್ಟೇ! ಅಂಥವರನ್ನು ಮಾನವರೆಂದು ಕರೆದರೂ ಮನುಕುಲಕ್ಕೆ ಅವಮಾನ. ಅವರೆಲ್ಲ ಪಿಶಾಚಿಗಳು. ಅಂಥ ಅಮಾನವೀಯರಿಗೆ ಕೆಲಸ ಮಾಡಿ ಕೊಡಲು ನನ್ನ ನೈತಿಕತೆ ಒಪ್ಪಲಾರದು, ನಾನಾದರೆ ಇನ್ನೊಮ್ಮೆ ಅವರ ಮನೆಯ ಕಡೆಗೂ ತಲೆಹಾಕಲಾರೆ. ಇದು ನನ್ನ ಸ್ವಂತ ಅಭಿಪ್ರಾಯ, ನಿಮಗೆ ಸಲಹೆ/ಸೂಚನೆಯೇನಲ್ಲ.

ಇಂತಿ,
ಜ್ಯೋತಿ.

ರವಿಕಾಂತ ಗೋರೆ said...

ಇಂಥಾ ಹಡಬೆ ಜನಗಳೂ ಇರ್ತಾರ?...

vani said...

ಆ ಮಹಾಶಯನ ಶ್ರೀಮತಿಯವರ ಬಗ್ಗೆ ಅನುಕಂಪ ಮೂಡುತ್ತಿದೆ.ನಿಜಯಾಗಿಯೂ ಒಳ್ಳೆಯ ಜೀವನಸಾಥಿ ಸಿಗಲು ಪುಣ್ಯಮಾದಿರಬೇಕು. I am blessed to have Mr.Satish as my partner.

ಸಿಮೆಂಟು ಮರಳಿನ ಮಧ್ಯೆ said...

ಸುಪ್ತದೀಪ್ತಿಯವರೆ....

ನಾನು ಅವನ ಮನೆ ಕಟ್ಟಲಿ.. ಬಿಡಲಿ

ಆ ಮನುಷ್ಯನ ಸ್ವಭಾವ ಬದಲಾಗುವದಿಲ್ಲ...
ನಾನಿಲ್ಲದಿದ್ದರೆ ಮತ್ತೊಬ್ಬ ಬಂದು ಕಟ್ಟುತ್ತಾನೆ...

ನಾವೇ ಅವನೊಡನೆ ಒಡನಾಡಿ ಬದಲಾಯಿಸಲು ಪ್ರಯತ್ನಿಸಿದರೆ...?

ಅವನು ಕೆಲಸ ಕೊಡುವದು ನನಗಂತೂ ಅನುಮಾನ....

ನಿಮ್ಮ ಪ್ರತಿಕ್ರಿಯೆ ಬಗೆಗೆ ಖಂಡಿತ ವಿಚಾರ ಮಾಡುವೆ....

ನಿಮ್ಮ ಪ್ರ್ಯಾಕ್ಟಿಕಲ್ ಪರತಿಕ್ರಿಯೆ ಬಹಳ ಇಷ್ಟವಾಯಿತು...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ರವಿಕಾಂತ್...

ಇಂಥಹ ಜನ ಇದ್ದಾರೆ...
ಮುಂದೆಯೂ ಇರ್ತಾರೆ....

ನಮ್ಮ ಹೆಣ್ಣು ಮಕ್ಕಳು ಎಚ್ಚೆತ್ತುಕೊಳ್ಳ ಬೇಕು....

ಅವರ ಅಸಾಹಯಕ ಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳುವವರು
ಈ ಜಗತ್ತಿನಲ್ಲಿ ಬಹಳ ಇದ್ದಾರೆ...
ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ವಾಣಿಯವರೆ....

ಪ್ರತಿಕ್ರಿಯೆಗೆ ಧನ್ಯವಾದಗಳು...

ನಿಮಗೂ, ನಿಮ್ಮ ಯಜಮಾನರಿಗೂ ...

ಶುಭಾಶೀರ್ವಾದಗಳು....