Tuesday, April 14, 2009

ನಿನ್ನನ್ನೂ... ಕಣ್ ತುಂಬಾ... ನೋಡುವಾಸೆ.. ಎಲ್ಲಿರುವೇ...? (ಭಾಗ ೧)

ನಾಗು ಯಾವಾಗಲೂ ಹೀಗೆಯೇ..
ಪೂರ್ತಿಯಾಗಿ ವಿಷಯ ಹೇಳುವದೇ ಇಲ್ಲ...

ಎಲ್ಲಾ ಸಸ್ಪೆನ್ಸ್... ಇಟ್ಟಿರುತ್ತಾನೆ....

"ಪ್ರಕಾಶು... ನಿನಗೊಂದು " ಸರಪ್ರೈಜ್ ".. ಇದೆ...
ಬಹುದಿನದ ಆಸೆ ಪೂರ್ತಿಯಾಗುತ್ತಿದೆ..."..

ನಾಗು ಫೋನ್ ಮಾಡಿ ಥರ ಹೇಳಿದಾಗ ನನಗೇ ಆಶ್ಚರ್ಯ..

" ನಾಗು.. ಸ್ವಲ್ಪ ಬಿಡಿಸಿ ಹೇಳೊ.. ಪುಟ್ಟಾ...
ಹೀಗೆಲ್ಲ .."ಸಡನ್ ಸರಪ್ರೈಸ್" ತಡೆದುಕೊಳ್ಳುವ ವಯಸ್ಸು ನಂದಲ್ಲಪ್ಪ...
ಒಂದು ಸಾರಿ ಅಟಾಕ್ ಆಗಿದೆ ಮಾರಾಯಾ..."

"ಬಿಡ್ತು ಅನ್ನು...!
ಒಂದು ಕ್ಲೂ ಕೊಡ್ತೀನಪ್ಪಾ...
ನನ್ನಿಂದ ನಿನಗೊಂದು ಸಹಾಯ ಆಗ್ತಾ ಇದೆ..
ಇದರ ಬಗೆಗೆ ನಿನಗೊಂದು ಫೋನ್ ಬರುತ್ತದೆ...
ನೀನು ಇಷ್ಟು ದಿನ ಕಾಯ್ತಾ ಇದ್ದುದು..ಹಣ್ಣಾಗ್ತದೆ..
ಇನ್ನೂ ಮುಂದಿನದು ನಾನು ಹೇಳಲಾಗುವದಿಲ್ಲ..
ಸಾರಿ ಕಣೊ.."

ಇಷ್ಟು ಹೇಳಿ ಫೋನ್ ಇಟ್ಟು ಬಿಟ್ಟಿದ್ದ...

ಆಗಾಗ ನನ್ನ ತಲೆಯಲ್ಲಿ ಹುಳ ಬಿಡುವದು ಅವನ ಅಭ್ಯಾಸ...
ಇಲ್ಲದಿದ್ದರೆ ತಿಂದ ಅನ್ನ ಜೀರ್ಣವಾಗುವದಿಲ್ಲ ಅವನಿಗೆ..
ಕಾಲೇಜಿನ ದಿನಗಳಿಂದಲೂ....ಸ್ವಲ್ಪ ಹಾಗೇಯೇ....ಆತ...

ಏನಿರ ಬಹುದು...?

ವಿಜಯಾ...!!.. ?...?

ಇರಬಹುದಾ...? ಸ್ವಲ್ಪ ಪುಳಕಿತನಾದೆ....!

"ನನಗೊಂದು ಮಹದಾಸೆ"ಯಿಂದ ಅಪರಾಧಿ ಮನೋಭಾವ...
ತನಗೆ ಆಗ್ತಾ ಇದೆ ಅಂತ ಆಗಾಗ ಹೇಳ್ತಾ ಇದ್ದ...!

ಪ್ರಾಯಶ್ಚಿತ ಮಾಡಿಕೊಳ್ಳುತ್ತಿರ ಬಹುದಾ...?

ಕೆಲವು ಸಾರಿ ನನ್ನ ಮಡದಿಗೆ ವಿಷಯ ಹೇಳಿರುತ್ತಾನೆ...

ಮಡದಿಗೆ ಕೇಳಿದೆ.."ನಾಗು ಏನಾದರೂ ಫೋನ್ ಮಾಡಿದ್ದನಾ...?"

"ಏನು ಹೇಳ ಬೇಕಿತ್ತು.. ನಾಗು ನನಗೆ..?
ನೀವು ಮತ್ತು ನಿಮ್ಮ ನಾಗು ಜಗತ್ತಿನ ವಿಚಿತ್ರ ನಮೂನೆಗಳು..
ಯಾರಿಗೂ ಅರ್ಥವಾಗುವಂಥ ವಿಷಯಗಳಲ್ಲ......"

ಸರ್ಟಿಫಿಕೇಟ್ ಕೊಟ್ಟಳು..

ನಾನು ಏನು ಅಂತ ಕೇಳಲಿ......?

ವಿಜಯಾ ವಿಷಯ ಏನಾದರೂ ಹೇಳಿದಾನಾ ಅಂತನಾ...?

ಹೇಗೆ ಕೇಳಲಿ...?

"ವಿಜಯಾ ... ಅಂದರೆ ಅಷ್ಟೆಲ್ಲಾ ಆಸೆಯಾ ನಿಮಗೆ?"

ಅಂತ ಕಾಲೆಳೆಯುವದಕ್ಕೆ ಶುರು ಹಚ್ಚಿಕೊಂಡರೆ...?

"ಏನಿಲ್ಲ ಬೀಡು.." ಅಂತ ಮಾತು ಮುಗಿಸಿದೆ...

.. ಹೈಸ್ಕೂಲ್ ದಿನಗಳು...
ಮಾತಿಲ್ಲದೆ ..
ಕಣ್ಣಲ್ಲಿ ನಡೆದ ಸಂಭಾಷಣೆಗಳು....

ಪ್ರೀತಿ.., ಪ್ರೇಮ.., ಬದುಕಿನ ಆಳವರಿಯದ ಹರೆಯದ...
ಬರೆ... ಬಣ್ಣದ ಕನಸಿನ ದಿನಗಳು....

ಅವೆಲ್ಲ ನನ್ನ ಕಲ್ಪನೆಗಳಾ...?
ವಿಜಯಾಗೆ ಅಂಥಹ ಭಾವನೆಗಳಿದ್ದವಾ...?

ಅವಳ ನಗು...
ದಟ್ಟ ಕಣ್ಣುಗಳು....
ನನ್ನೆದೆಯಲ್ಲಿ ಹಾಗೆ ಉಳಿದು ಬಿಟ್ಟಿವೆ...

ನೆನಪಾದಗಲೆಲ್ಲ ಎದೆಯಲ್ಲೊಂದು ಛಳಕು...
ಅದು ನೋವಾ... ಸುಖವಾ...?

ಹಿತವಾಗಿರುತ್ತದೆ... ಕ್ಷಣಗಳು...
ದಿನಗಳ ನೆನಪಿನ ಮೆಲುಕು.. ಸಿಹಿಯಾಗಿರುತ್ತದೆ....

"ಇದೇ.. ಹುಡುಗಿಯನ್ನು ನನ್ನ ಮನದಲ್ಲೇ ಬಹಳ ಇಷ್ಟ ಪಟ್ಟಿದ್ದೆ ಕಣೆ...!"..

ಅಂತ ನನ್ನಾಕೆಗೊಮ್ಮೆ ತೋರಿಸ ಬೇಕೆಂಬ ನನ್ನ ಹಂಬಲ ಈಡೇರುತ್ತಿದೆಯಾ...?

ನಾಗು ಮನಸ್ಸು ಮಾಡಿದರೆ ಆಗುತ್ತದೆ....


ನಾನು ಹೆಬ್ಬಾಳದ ಕಡೆಗೆ ಹೊರಟಿದ್ದೆ...... ಎಂದಿನಂತೆ...

ಗೆಳೆಯ ಮಲ್ಲಿಕಾರ್ಜುನನನಿಗೆ ಫೋನ್ ಮಾಡು ಚಟ ...
ಮಾಡಲೆಂದು ನೋಡಿದಾಗ ಮಿಸ್ಸಡ್ ಕಾಲ್ ಕಾಣಿಸಿತು..
ಅದಕ್ಕೇ ರಿಂಗ್ ಮಾಡಿದೆ...

"ಹಲೋ.. ನಾನು ಪ್ರಕಾಶ್ ಹೆಗಡೆ ಅಂತ...
ನನಗೆ ನಂಬರಿಂದ ಕಾಲ್ ಬಂದಿತ್ತು.. ಯಾರೆಂದು ಗೊತ್ತಾಗಲಿಲ್ಲ...."
ಅಂದೆ...

ಕಡೆಯಿಂದ ಧ್ವನಿ ಏನೂ ಕೇಳಿಸಲಿಲ್ಲ...
ನಾ ಮತ್ತೆ "ಹಲೋ" ಅಂದೆ...

ಒಂದು ಸುಂದರವಾದ ಹೆಣ್ಣು ಧ್ವನಿ ನಿಧಾನವಾಗಿ "ಹಲೋ" ಅಂದಿತು...

ವಿಜಯಾ ಧ್ವನಿ ಹೀಗಿರ ಬಹುದಾ...? ನನ್ನೆದೆ ಢವ.. ಢವ ಅನ್ನತೊಡಗಿತು...

"ನೀವು ಯಾರೆಂದು ಗೊತ್ತಾಗಲಿಲ್ಲ.."

" ನಿಜವಾಗಿಯೂ ...ಗೊತ್ತಾಗಲಿಲ್ಲವಾ...?"

ಬೇರೆ ಯಾವುದೇ ಗಂಡಿನ ಧ್ವನಿಯಾಗಿದ್ದರೆ ಝಾಡಿಸಿ ಬಿಡುತ್ತಿದ್ದೆ..
ಈಗ ಹಾಗೆ ಮಾಡಲು ಮನಸ್ಸು ಬರಲಿಲ್ಲ...

"ಇಲ್ಲಾರಿ ಗೊತ್ತಾಗಲಿಲ್ಲ.."

"ನಿಮ್ಮ ಬ್ಲಾಗ್ ನಾನು ಯಾವಾಗಲೂ ಓದುತ್ತಿರುತ್ತೇನೆ...
ಚೆನ್ನಾಗಿ
ಬರೆಯುತ್ತೀರಿ ನೀವು..."

"ಥಾಂಕ್ಸ್.. ನೀವು ಯಾರು..?"

"ನಿಮ್ಮ ಕ್ಲಾಸ್ ಮೇಟ್... ಹೈಸ್ಕೂಲ್ ನಲ್ಲಿ ಜೊತೆಯಾಗಿ ಓದಿದ್ದೇವೆ.."

ಅಯ್ಯೋ... ದೇವರೆ.. ಇದೇನಿದು...?
ನಿಜವಾಗುತ್ತಿದೆಯಾ...?

ಏನು ಕೇಳಲಿ..?
ಏನು ಹೇಳಲಿ..?
ಕೈಯೆಲ್ಲ ...ಬೆವರ ತೊಡಗಿತು...

ವಿಜಯಾ ಎದುರಿಗೆ ಬಂದು ನಸು ನಕ್ಕಂತೆ ಭಾಸ ವಾಯಿತು...

ಕಾರ್ ಸ್ಪೀಡ್ ಕಡಿಮೆ ಮಾಡಿದೆ...

" ಕ್ಲಾಸ್ ಮೇಟಾ..? ಯಾರು..?"

"ನಿಜವಾಗಿಯೂ ಗೊತ್ತಾಗಲಿಲ್ಲವಾ,,,? ಪ್ರಕಾಶಾ.... "

"ದಯವಿಟ್ಟು ಹೇಳಿ... ನನಗೆ ಗೊತ್ತಾಗಲಿಲ್ಲ..."

" ಬಹುವಚನ ಬೇಡೋ... ಮಾರಾಯಾ..!.. ಅದು ರೂಢಿ.. ಇಲ್ಲ...
ನೀನು ಡ್ರಾಯಿಂಗ್ ಕ್ಲಾಸಿನಲ್ಲಿ ಬಿಡಿಸಿದ್ದ ಚಿತ್ರ ಇನ್ನೂ ನನ್ನ ಬಳಿ ಇದೆ..
ನೀನೇ ನನಗೆ ಕೊಟ್ಟಿದ್ದೀಯಾ..."

ಅರೆ... ಇದು ನನಗೆ ನೆನಪಾಗುತ್ತಿಲ್ಲ...

"ಪ್ರಕಾಶ.. ನನಗೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿದ್ದಾರೆ..
ಒಬ್ಬಳು ಸಾಫ್ಟವೇರ್ ಇಂಜನೀಯರ್.. ನಿನ್ನ ಬ್ಲಾಗ್ ಓದುತ್ತಾಳೆ..
ನಿನ್ನ ಬ್ಲಾಗ್ ಫಾಲೋ ಮಾಡ್ತಾಳೆ...
ಅವಳೇ ನನಗೆ ನಿನ್ನ ಬಗೆಗೆ ಹೇಳಿದ್ದಾಳೆ...
ನೀನು
ಬರೆದದ್ದೆಲ್ಲ ಓದಿದ್ದೇನೆ..."

ಹೌದಾ...?"

" ನೀನು ಬರೆದ " ನನಗೊಂದು ಮಹದಾಸೆ " ಓದಿದೆ..."

ಬ್ಲಾಗ್ ಯಾರಾದರೂ ಹೊಗುಳುತ್ತಾರೆಂದರೆ ಏರಿಬಿಡುವ ನನಗೆ...
ಹೀಗೆಲ್ಲ ಹೊಗಳಿದರೆ ಏನಾಗಿರ ಬೇಡ...!

ನನಗೆ ಹ್ರದಯ ಬಾಯಿಗೆ ಬಂದಿತ್ತು....

"ಪ್ರಕಾಶಾ...ವಿಜಯಾ ಅನ್ನೋದು..
ನಿಜವಾದ ಹೆಸರು ಅಲ್ಲ ..!
ವಿಜಯಾ ಹೆಸರು ಬೇರೇನೇ ಇದೆ ..ಅಲ್ಲವಾ..?......"

"ನಿಜವಾದ ಹೆಸರು ಹೇಗೆ ಬರೆಯಲಿಕ್ಕೆ ಸಾಧ್ಯ..?

"ಅದೂ ಸರಿ ಅನ್ನು.."

ಹೌದಾ...? ದೇವರೆ.. ಇದೇನಿದು...?
ಇಷ್ಟು ದಿನಗಳ ಕನಸು ನಿಜವಾಗುತ್ತಿದೆಯಾ...?

ಈಗ ಏನು ಹೇಳಬೇಕು..?
ಏನು ಮಾತಾಡ ಬೇಕು...??

ಬಾಯೆಲ್ಲ ಒಣಗಿದ ಅನುಭವ....!

"ಪ್ರಕಾಶ.. ಬ್ಲಾಗ್ ಓದಿ ಗೊತ್ತಾಯಿತು ..
ನಿನ್ನ ಸಂಸಾರ ಚೆನ್ನಾಗಿದೆ ಅಂತ.. ನಿನ್ನ ಮಗ ಚಂದ ಇದ್ದಾನೆ..
ಬಹಳ ಖುಷಿಯಾಗ್ತಿದೆ.."

" ನೀನು ಹೇಗಿದ್ದೀಯಾ..?"

" ಚೆನ್ನಾಗಿದ್ದೀನಿ...ಎರಡು ಮಕ್ಕಳ ಸಂಗಡ.. ಇದ್ದೇನೆ..
ನಾಗೂ ಮನೆಯ ಸತ್ಯನಾರಾಯಣ ಪೂಜೆಗೆ ಬರ್ತಾ ಇದ್ದೇನೆ ..
ಬಾ ಅಲ್ಲಿ ಭೇಟಿಯಾಗುವ...
ನನ್ನ ಮಕ್ಕಳೂ ಬರ್ತಾರೆ.. "

ನನಗೆ ಟೆನ್ಷನ್ ಜಾಸ್ತಿಯಾಗ ತೊಡಗಿತು...

"ನೀನು ವಿಜಯಾನಾ..? ಪ್ಲೀಸ್ ಹೇಳು.."

" ನಾನು ಹೇಗೆ ಹೇಳಲು ಸಾಧ್ಯ...?
ನೀನು ಹೇಳಿದರೆ ತಾನೆ ..?
ಈಗ ಗೊತ್ತಾದರೂ ಏನು ಪ್ರಯೋಜನ...?
ಒಂದಷ್ಟು ಹಗಲು ಕನಸು...ಅಲ್ಲವಾ...? "

ಆದರೂ... ನನ್ನ ಆಶಾಗೆ ..
ವಿಜಯಾ
ತೋರಿಸೊ ಆಸೆ ಇದೆ...
ಮತ್ತೆ ಯಾವುದೇ ಕೆಟ್ಟ ಉದ್ದೇಶ ಇಲ್ಲ.."

"ನಿನ್ನ ಬಗ್ಗೆ ನನಗೆ ಗೊತ್ತಿದೆ ಕಣೊ...
ಪುಕ್ಕಲು..ಹಿಡಿ ಕಡ್ಡಿಯ ಹಾಗಿದ್ದೆ ಆಗ....
ಡುಮ್ಮ ಆಗಿದೆಯಂತೆ.. ನೀನೆ ಬರ್ಕೊತಿಯಲ್ಲ..."

ನನ್ನ ತಾಳ್ಮೆ ...ಸಹನೆಯ ಕಟ್ಟೆ ಮೀರತೊಡಗಿತು....

" ಪ್ರಕಾಶಾ ...
...ಛಾನ್ಸು ಬಿಟ್ಟರೆ ಇನ್ನು ಸಿಗಲಿಕ್ಕಿಲ್ಲ... !

ಬಿಡ ಬೇಡ ಕೇಳು ...!

ಒಳಗಿನ ಮನಸ್ಸು ಕೂಗ ತೊಡಗಿತು...!!

"ನೀನು ವಿಜಯಾ ಹೌದೋ ಅಲ್ಲವೊ...?
ನಿನ್ನ ನಿಜವಾದ ಹೆಸರು ಹೇಳು ಮಾರಾಯ್ತಿ..
ನನಗೆ ವಿಜಯಾ ಹೌದಾ ಅಲ್ಲದಾ ಗೊತ್ತಾಗ್ತದೆ..."

ಅಷ್ಟರಲ್ಲಿ ಟ್ರಾಫಿಕ್ ಪೋಲಿಸ್ ಕಾರು ನಿಲ್ಲಿಸಿದ...

ನಾನು ಗ್ಲಾಸ್ ಇಳಿಸಿದೆ...

"ಸರ್ ... ಡ್ರೈವಿಂಗ್ ಮಾಡುವಾಗ ಮೋಬೈಲು...
ಯೂಸ್ ಮಾಡಬಾರದು...
ಐನೂರು ರುಪಾಯಿ ಫೈನ್ ಕಟ್ಟಿ..."

ಇವನು ಈಗಲೇ.. ವಕ್ರಿಸ ಬೇಕಾ...? ಛೇ...

" ಸ್ವಲ್ಪ ಇರಿ ಸಾರ್...ಫೈನ್ ಕಡ್ತೀನಿ.. ಮಾತು ಕಂಪ್ಲೀಟ್ ಮಾಡ್ತೀನಿ.."

"ಹಲೋ ನೀನು ಯಾರು...?
ನಿಜವಾದ ಹೆಸರು ಹೇಳು ಮಾರಾಯ್ತಿ.. ಪ್ಲೀಸ್.."

"ಪ್ರಕಾಶಾ... ನಾಗೂ ಮನೆ ಸತ್ಯನಾರಾಯಣ ಪೂಜೆಗೆ ನಾಳೆ ಬರ್ತೀನಿ..
ಮಕ್ಕಳನ್ನೂ ಕರ್ಕೊಂಡು ಬರ್ತೀನಿ.. ಅಲ್ಲಿ ಭೇಟಿಯಾಗುವ...
ಸ್ಸಾರಿ... ನೀನು... ಡ್ರೈವ್ ಮಾಡ್ತಿರೋದು ಗೊತ್ತಾಗಲಿಲ್ಲ....
ನೀನು ಫೈನ್ ಕಟ್ಟು... ಬೈ.."

ಫೋನ್ ಕಟ್ ಆಯಿತು...

ಛೇ,,...!

ನಾನು ಫೈನ್ ಕಟ್ಟಲು ಜೇಬು ತಡಕಾಡಿದೆ...

ಎದೆಯ ಢವ.. ಢವ ಶಬ್ದ ಹೊರಗಡೆ ಕೇಳುವ ಹಾಗೆ ಬಡಿದು ಕೊಳ್ಳುತ್ತಿತ್ತು...
ದೇವಾಲಯದ ನಗಾರಿಯ ಹಾಗೆ...

ಏಸಿಯಲ್ಲೂ ಸೆಖೆಯಾಗಿತ್ತು...

ಹೇಳಲಾಗದ ಭಾವ ..
ಖುಷಿನಾ.. ನೋವಾ...
ಗೊತ್ತಾಗಲಿಲ್ಲ... ಬೆವರು ಹನಿಹನಿಯಾಗಿತ್ತು...!


( ನಾನು ಬರೆದ
ನನಗೊಂದು ಮಹದಾಸೆ. ಓದಿ...)



77 comments:

ಅನಿಲ್ ರಮೇಶ್ said...

ಪ್ರಕಾಶ್,
ಮನಸ್ಸಿನ ತಳಮಗಳನ್ನು ಚೆನ್ನಾಗಿ ಬರೆದಿರುವಿರಿ.

ಅಂದಹಾಗೆ, ಕಾರ್‍ ಡ್ರೈವ್ ಮಾಡುವಾಗ ಮೊಬೈಲಿನಲ್ಲಿ ಮಾತನಾಡಬಾರದು. ಹೆಡ್ ಸೆಟ್ ಇದ್ದಿದ್ರೆ ಚೆನ್ನಾಗಿರ್ತಿತ್ತು.

-ಅನಿಲ್.

Ittigecement said...

ಅನಿಲ್....

ಬದುಕಿನ ಜವಾಬ್ದಾರಿ ಇಲ್ಲದ..
ಬಾಲ್ಯದ ನಂತರದ ದಿನಗಳ...
ಹರೆಯದ ಪ್ರೀತಿ.., ಪ್ರೇಮ ...
ಪ್ರತಿಯೊಬ್ಬರ ಮರೆಯಲಾಗದ ..
ಅದು....ಅಪೂರ್ವ... ಪವಿತ್ರ.. ಮಧುರ ಭಾವ..

ಅದನ್ನು ವ್ಯಕ್ತ ಪಡಿಸುವಲ್ಲಿ ಎಷ್ಟರ ಮಟ್ಟಿಗೆ..
ಸಫಲನಾಗಿದ್ದೇನೆ,,,. ಗೊತ್ತಿಲ್ಲ...

ಹೆಡ್ ಸೆಟ್ ಇದ್ದರೂ ಇಂಥಹ ಸಂದರ್ಭ ಫೈನ್ ಕಟ್ಟಿಸಿ ಬಿಡುತ್ತದೆ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Anonymous said...

Welcome to Kannada Bloggers Community BLOGKUT

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ನಿಮ್ಮ ಮಹದಾಸೆ ಆದಷ್ಟು ಬೇಗ ನೆರವೇರಲಿ. ನಿಮ್ಮ ಎರಡು ಬರಹ ಓದಿ ಮುಗಿಸಿದೆ, ಮನಸ್ಸನ್ನು ಕಾಡುವವರ ನೆನಪುಗಳೇ ಹೀಗಲ್ವ ಪ್ರಕಾಶಣ್ಣ, ಸತ್ಯನಾರಾಯಣ ಪೂಜೆ ಮುಗಿಸಿ ಬಂದವರೇ ಏನಾಯ್ತು ಅಂತ ಬರೆದು ಬಿಡಿ, ಕಾಯ್ತಿರ್ತೀನಿ.

ಭಾರ್ಗವಿ said...

ಪ್ರಕಾಶ್ ರವರೆ,
ಈ ಲೇಖನ ಮುಂದುವರಿಯುತ್ತೆ ಅಂದುಕೊಂಡಿದ್ದೇನೆ.ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ. ಅವರೇ ವಿಜಯನಾ? ಬೇಗ ಬರೆಯಿರಿ.
ನಿಮ್ಮವರ ಸರ್ಟಿಫಿಕೆಟ್ ಸೂಪರ್ :-). ನಕ್ಕುಬಿಟ್ಟೆ.ಕ್ಷಮಿಸಿ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಕಥೆ ಮುಂದುವರಿಸಿ ಆ ಹುಡುಗಿಯ ಹೆಸರು ತಿಳಿಸಿ. ಅಂತೂ ಜೀವನದಲ್ಲಿ ಮಹಾ ಪುಂಡಾಟಿಕೆ ಮಾಡಿದ್ದಿರ ಹ ಹ ಹ.
ವರ್ಣನೆ ತುಂಬಾ ಸೊಗಸಾಗಿದೆ. ಕಣ್ಣಿಗೆ ಕಟ್ಟುವಂತೆ ವಿವರಿಸುವುದರಲ್ಲಿ ಸಿದ್ಧಹಸ್ತರು,
ಕಥೆ ಮುಂದುವರಿಯಲಿ

Ramya Hegde said...

ರಾಶಿ ಚಂದ ಬರದ್ದೆ ಪ್ರಕಾಶಣ್ಣ...,ನಿನ್ನ ಕನಸಿನ ಕನ್ಯೆಯನ್ನ 'ಆಶಕ್ಕಂಗೆ' ತೋರಿಸೋ ಮಹದಾಸೆ ಆದಷ್ಟು ಬೇಗ ಈಡೇರಲಿ.All the best...:).

ಮಲ್ಲಿಕಾರ್ಜುನ.ಡಿ.ಜಿ. said...

ಯೌವನದ ಬಿಸಿ ಬಿಸಿ ಆಕರ್ಷಣೆಯ ನೆನಪು ಮನಸ್ಸನ್ನು ಹೇಗೆ ವಿಲಿವಿಲಿಗುಟ್ಟಿಸುತ್ತೆ ಎಂಬುದನ್ನು ಸೊಗಸಾಗಿ ಬರೆದಿರುವಿರಿ.
ಅದೆಲ್ಲ ಸರಿ ಸರ್, ನಿಮ್ಮ ನಾಗು ಹೇಳಿದ್ದು ಇದೇನಾ? ನೀವು ಮಾತನಾಡಿದ್ದು ವಿಜಯ ಅವರನ್ನಾ? ವಿಜಯರನ್ನು ಭೇಟಿ ಮಾಡಿದ್ರಾ? ನಮಗೂ tension ಮಾಡಿಡ್ತೀರ.
ಫೋನು, ಫೈನು ಅಂತ ಹೇಳಿ ಯಾಮಾರಿಸಬೇಡಿ. ಕೇಳಲು ಕಾತರತೆಯಿಂದಿದ್ದೀವಿ....

ಬಾಲು said...

urgent aagi heli...phone madiddu vijaya na? avarannu bheti madidra? maneyavarige thorisidra?...

thumba chennagide, kaaduva vyakthi galu jeevanadalli sikthare andre adu sikkapatte kushi haagu anubhoothi kodutte....

bega part 2 barali!!!

PARAANJAPE K.N. said...

ಪ್ರಕಾಶರೇ
ನಿಮ್ಮ ಎಂದಿನ ಸುರಸ ಶೈಲಿಯ ಬರಹ. ಆಕೆ ಯಾರೆ೦ದು ಹೇಳದೇ ಮುಂದಿನ ಕ೦ತಿಗೆ ಕಾಯುವ೦ತೆ ಮಾಡಿದ್ದೀರಿ. ನಿಮ್ಮ ತಲೆಗೆ ನಾಗು ಹುಳ ಬಿಟ್ಟ೦ತೆ ನೀವು ನಮ್ಮ ತಲೆಗೊ೦ದು ಹುಳ ಬಿಟ್ಟು ಹೋಗಿದ್ದೀರಾ ? ಬೇಗ ಹೇಳಿ ಮಾರಾಯರೇ.
ಅ೦ದ ಹಾಗೆ ಇನ್ನೊ೦ದು ವಿಚಾರ ಬಹಳ ದಿನಗಳಿ೦ದ observe ಮಾಡ್ತಿದ್ದೇನೆ. ನೀವು ಬ್ಲಾಗ್ ಬರೆಯುವಾಗ/ಪ್ರತಿಕ್ರಿಯೆ ಬರೆಯುವಾಗ single line spacing ನಲ್ಲಿ ಏನನ್ನೂ ಬರೆಯುವುದಿಲ್ಲ. ಎಲ್ಲ double line ಸ್ಪೇಸಿ೦ಗು. . ಬಾರಿಬಾರಿಗೂ Enter ಯಾಕೆ ಒತ್ತುತ್ತೀರಿ. ತಿಳಿಯಲಿಲ್ಲ.

Unknown said...

ಪ್ರಕಾಶ್,
ನಿಮ್ಮ ಬರವಣಿಗೆ ಶೈಲಿ ನನಗಿಷ್ಟವಾಯಿತು. ನೀವು ಬರೆದಿರುವ ವಸ್ತುವೂ ಕೂಡಾ! ಹದಿಹರೆಯದ ಪ್ರೇಮಿಗಳ ಬರಹದಲ್ಲಿ ಕಾನುವ ಹಪಾಹಪಿತನವಾಗಲೀ, ಕೆಲವು ಕನ್ನಡ ಸಿನಿಮಾಗಳ ಕೆಟ್ಟ ಡೈಲಾಗಿನ ಪ್ರಭಾವವಾಗಲೀ ನನಗಿಲ್ಲ ಕಾಣಲಿಲ್ಲ. ಿದು ಒಂದು ರೀತಿಯ ಮನೋನಿವೇದನೆ! ಹೀಗೆ ಬರೆಯುತ್ತಿರಿ, ಹಾಂ ಮರೆತಿದ್ದೆ.
ಆ.. ಹೈಸ್ಕೂಲ್ ದಿನಗಳು...
ಮಾತಿಲ್ಲದೆ ..
ಕಣ್ಣಲ್ಲಿ ನಡೆದ ಸಂಭಾಷಣೆಗಳು....
ಪ್ರೀತಿ.., ಪ್ರೇಮ.., ಬದುಕಿನ ಆಳವರಿಯದ ಹರೆಯದ...
ಬಾರೆ ಬಣ್ಣದ ಕನಸಿನ ದಿನಗಳು....
ಈ ಸಾಲುಗಳು ಮನಸ್ಸಿನಲ್ಲಿ ನಿಂತುಬಿಟ್ಟಿವೆ. ಏಕೆ ಗೊತ್ತಿಲ್ಲ!

ಮನಸು said...

ಪ್ರಕಾಶಣ್ಣ,
ಛೆ ಎಂತ ಪರಿಸ್ಥಿತಿ ನಿಮಗೆ ಅಲ್ವ... ನಾವಂತು ಚೆನ್ನಾಗಿ ನಕ್ಕು ಸುಸ್ತಾಗಿದೀವಿ.. ಸತ್ಯನಾರಯಣ ಪೂಜೆಗೆ ಹೋಗಿ ಬನ್ನಿ... ಆಮೇಲೆ ಯಾರು ಎಂದು ನಮಗೂ ತಿಳಿಸಿ... ಈ ರೀತಿ ಬ್ಲಾಗ್ನಲ್ಲಿ ಅವರ ಬಗ್ಗೆ ಬರೆದಿದ್ದಕ್ಕೆ ಅವರ ಬೇಸರವೆನಿಲ್ಲವೇ..? ಅವರಿಗೆ ಬೇಸರ ಮಾಡಬೇಡಿ.. ಹ ಹ ಹ ..... ನಿಮ್ಮ ಮನೆಯವರಿಗೆ ಒಳ್ಳೆ ಟಾಪಿಕ್ ಸಿಕ್ಕಿದೆ ನಿಮಗೆ ರೇಗಿಸಲು...ಹ ಹ ಹ ....
ಫೋನ್ ನಲ್ಲಿ ಮಾತನಾಡುವಾಗಲೇ ಫೈನ್ ಕಟ್ಟಿದೀರಿ ಇನ್ನು ಎದುರು ನೋಡಿದರೆ ಯಾವ ದಂಡ ಕಟ್ಟಬೇಕೋ ಯಾವುದಕ್ಕೂ ಸ್ವಲ್ಪ ನೀವು ಹುಷಾರಾಗಿ ಇರಿ ಹ ಹ ಹ ಹ ...ಸ್ವಲ್ಪ ಹಣ ಜಾಸ್ತಿ ಇಟ್ಟುಕೊಂಡಿರಿ ಹ ಹ ಹ (ತಮಾಷೆ ಮಾಡಿದೆ ಬೇಸರವಾಗಬೇಡಿ).

ನಗುವಿನೊಂದಿಗೆ ಧನ್ಯವಾದಗಳು..
ಮುಂದಿನ ಭಾಗಕ್ಕೆ ಕಾಯುತ್ತಲಿದ್ದೇವೆ...
ವಂದನೆಗಳು

Umesh Balikai said...

ಪ್ರಕಾಶ್ ಸರ್,

ಆ ವಯಸ್ಸಿನಲ್ಲಿ ಮನದಲ್ಲಿ ಮೂಡುವ ಭಾವನೆಗಳನ್ನು ಈಗ ನೆನೆಸಿಕೊಂಡರೆ ಒಂಥರಾ ಮುಗ್ಧ ಮಧುರಾನುಭೂತಿ ಮೂಡಿಸುತ್ತವೆ. ಬಾಲ್ಯದಲ್ಲಿ ಇಷ್ಟಪಟ್ಟ ಗೆಳತಿಯೇನಾದರೂ ಮತ್ತೆ ಕಾಣಲು ಸಿಗುತ್ತಾಳೆಂದರೆ, ಆಗ ಆಗುವ ಆ ಪುಳಕವನ್ನು ತುಂಬಾ ಚೆನ್ನಾಗಿ ಅಕ್ಷರರೂಪಕ್ಕೆ ಇಳಿಸಿದ್ದೀರ.

ನೀವೆಂದಾದರೂ ಪತ್ತೇದಾರಿ ಕಾದಂಬರಿಕಾರರಾಗಿದ್ದೀರ? ತುಂಬಾ ಕುತೂಹಲ ಕೆರಳಿಸುತ್ತೆ ನಿಮ್ಮ ಬರಹ.

ಸತ್ಯನಾರಾಯಣ ಪೂಜೆ ಮುಗಿದ ತಕ್ಷಣ ಮುಂದಿನ ಭಾಗ ಬರೆದು ಹೇಳಿ ನೀವು ವಿಜಯಾ ನ ಭೇಟಿ ಮಾಡಿದೀರ ಅಂತ. ಕಾಯುತ್ತಿದ್ದೇವೆ.

ಧನ್ಯವಾದಗಳು.

ಪಾಚು-ಪ್ರಪಂಚ said...

ಪ್ರಕಾಶಣ್ಣ...

ಮೆಗಾ ಧಾರಾವಾಹಿಯ ಹಾಗೆ..ಫುಲ್ ಸಸ್ಪೆನ್ಸು..!! ಮೇಲಕ್ಕೆ ಕರೆದೊಯ್ದು ಪಕ್ಕನೆ ನಿಲ್ಲಿಸಿ ..ಮುಂದಿನ ವಾರ ವೀಕ್ಷಿಸಿ ಅನ್ನೋ ಹಾಗೆ..!!
ಪ್ರೀತಿಯ ಅನುಭವಗಳನ್ನ ಸೊಗಸಾಗಿ ನಿರೂಪಿಸಿದ್ದೀರಿ...ಹಳೆಯ ನೆನಪಾಗುತ್ತಿದೆ...ಮನಸ್ಸಿನ ತಳಮಳ...ಕಾತುರ...!! ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ...!! ತುಂಬಾ ಇಷ್ಟವಾಯಿತು...
ಮುಂದಿನ ಭಾಗಕ್ಕೆ ಕಾಯುತ್ತಿರುವೆ..!

ಮೂರ್ತಿ ಹೊಸಬಾಳೆ. said...

no comments.

ಸುಧೇಶ್ ಶೆಟ್ಟಿ said...

ನಿಮ್ಮ ಜೊತೆ ನಮ್ಮನ್ನೂ ಸತ್ಯ ನಾರಾಯಣ ಪೂಜೆಗೆ ತುದಿಕಾಲಿನಲ್ಲಿ ಕಾಯುವ೦ತೆ ಮಾಡಿಬಿಟ್ಟಿದ್ದೀರಾ ಪ್ರಕಾಶಣ್ಣ....

ತು೦ಬಾ ದಿನಗಳ ನ೦ತರ ನಿಮ್ಮ ಬ್ಲಾಗ್ ಓದುತ್ತಿದ್ದೇನೆ.. ಎಲ್ಲಾ ಲೇಖನಗಳನ್ನೂ ಒ೦ದೇ ಸಮನೆ ಓದಿ ಬಿಟ್ಟೆ. ಎಲ್ಲವೂ ತು೦ಬಾ ಚೆನ್ನಾಗಿದ್ದವು ಎ೦ದಿನ೦ತೆ.

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ನಿಮ್ಮ ನಾಗು ಈ ಸಾರೀ ಕೈ ಕೊಡದಿರಲಿ.
ನಿಮ್ಮ ಆಸೆ ಇಡೆರಲಿ.
"ನನಗೊಂದು ಮಹದಾಸೆ.." ಓದಿ ತುಂಬಾ ನಗು ಬಂತು...
ಧನ್ಯವಾದಗಳು...

Unknown said...

ಚೆನ್ನಾಗಿತ್ತು ... ಸತ್ಯನಾರಾಯಣ ಪೂಜೆಗೆ ಹೋಗಿಬನ್ನಿ... ಪ್ರಸಾದ ನಮಗೂ ಹಂಚಿ..(ಲೇಖನದ ಮುಂದುವರಿದ ಭಾಗ :-))...
ನಿಮ್ಮ ಈ ಲೇಖನ ಓದುವಾಗ ಸ್ವಲ್ಪ ರವಿಬೆಳಗೆರೆಯವರ ಲವ್ ಲವಿಕೆ ಧಾಟಿ ನೆನಪಾಯಿತು...

ಕ್ಷಣ... ಚಿಂತನೆ... said...

ಪ್ರಕಾಶ್‌ ಅವರೆ, ಲೇಖನ ಪತ್ತೇದಾರಿ ಧಾರಾವಾಹಿಯಂತಿದೆ ಅನಿಸಿತು. ಇದು ಏಪ್ರಿಲ್‌ ತಿಂಗಳೂ ಸಹ ಆಗಿರುವುದರಿಂದ ಸಸ್ಪೆನ್ಸ್‌ ಹಾಗೇ ಉಳಿಸಬೇಡಿ.

ವಿಶ್ವಾಸದೊಂದಿಗೆ,

ಚಂದ್ರಕಾಂತ ಎಸ್ said...

ಪ್ರಕಾಶ್ ಅವರೆ

ಅಂತೂ ಓದುಗರಿಗೆಲ್ಲಾ ಒಳ್ಳೆ ಚಳ್ಳೆಹಣ್ಣು ತಿನ್ನಿಸುತ್ತಿದ್ದೀರಿ!!ಬೇರೆಯವರೆಲ್ಲಾ ನಿಮ್ಮ ‘ವಿಜಯ’ಳ ಬಗ್ಗೆ ತಿಳಿದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದರೆ ನೀವು ಮನಸ್ಸಿನಲ್ಲೇ ನಗುತ್ತಿರುತ್ತೀರಿ ಅಂತ ನನಗೆ ಗೊತ್ತು.

ಅಂತೂ ಸತ್ಯನಾರಾಯಣನನ್ನು ಮಧ್ಯೆ ತಂದಿರುವಿರಿ. ಓದುಗರೆಲ್ಲಾ ಸತ್ಯನಾರಾಯಣನ ಜಪ ಮಾಡಿದರೆ ನಿಮಗೆ ಪುಣ್ಯ ಸಿಗುತ್ತೆ ಎಂಬ ಲೆಕ್ಕಾಚಾರವಿರಬೇಕಲ್ಲಾ?

ನೀವು ವಿಜಯಾಳ ಹೆಸರು ಎಂದು ಹೇಳಿ ಯಾವುದೇ ಹೆಸರು ಹೇಳಿದರೂ ಅದು ನಿಜ ಅಂತಾ ನಾನಂತೂ ನಂಬುವುದಿಲ್ಲ.

ಇಡೀ ಲೇಖನದಲ್ಲಿ ಆಶಾ ಅವರ ಮಾತು ಮಾತ್ರ ಸತ್ಯ ಅನಿಸುತ್ತದೆ!!

(ಇದು ತಮಾಷೆಗಾಗಿ ಬರೆದ ಪ್ರತಿಕ್ರಿಯೆ.ಆಮೇಲೆ ಆ ದಿನ ಶಿವು ಮುನಿಸಿಕೊಂಡ ಹಾಗೆ ನೀವೂ ಮುನಿಸಿಕೊಳ್ಳ ಬೇಡಿ.ನೀವು ಕಿವಿ ಹಿಂಡಲು ಅಪ್ಪಣೆ ಕೊಟ್ಟಿದ್ದರಿಂದ ಇದನ್ನು ಬರೆದಿರುವೆ)

ನಿಜಕ್ಕೂ ಇದು ಉತ್ತಮ ಬರಹ. ಏಲಕ್ಕಿ, ಚಪಾತಿಗಳಿಗಿಂತ ಇಂತಹ ಬರಹಗಳು ಮೂಡಿಸುವ ಮುಗುಳ್ನಗೆ ಹೆಚ್ಚು ಚೇತೋಹಾರಿ.

Shweta said...

Super!........next part please.....

Veena DhanuGowda said...

Maaaaast ide :)
Waiting for satyanarayan Pooja

Unknown said...

ಸತ್ಯನಾರಾಯಣ ಪೂಜೆಗೆ ನನ್ನೂ ಕರೆಯೋ ಮಾರಾಯ !
ಒಳ್ಳೆ ಕುತೂಹಲ ಇದ್ದು ಕತೇಲಿ

Ittigecement said...

ಧನ್ಯವಾದಗಳು....

blogkut..!

ನಿಮ್ಮನ್ನು ಸೇರುತ್ತಿದ್ದೇನೆ...

ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ ಇದೆ...

guruve said...

ಶೀರ್ಷಿಕೆ ಸಕತ್ತಾಗಿದೆ... ಹಾಗೆ ನೀವು ವಿವರಿಸುವ ಘಟನೆಯೂ ಕೂಡ,
ಕುತೂಹಲಕಾರಿ ಘಟ್ಟಕ್ಕೆ ತಂದು ನಿಲ್ಲಿಸಿಬಿಟ್ಟಿದ್ದೀರ! ಮುಂದಿನ ಭಾಗ ಬೇಗ ಬರಲಿ..

Ittigecement said...

ರಾಜೇಶ್....

ನನಗಂತೂ ಅದೆಲ್ಲ ಸಿಹಿ, ಮಧುರ ನೆನಪುಗಳು...

ಅದೊಂದು ಕೆಟ್ಟ ಕುತೂಹಲ...

ಅವಳಿಗೂ ಆ ರೀತೀಯ ಭಾವನೆಗಳಿತ್ತಾ..?
ಇದ್ದರೂ ಈಗ ನಿಜ ಹೇಳುತ್ತಾರಾ..?

ನನ್ನ ಬ್ಲಾಗು ಓದುತ್ತಾರಂತೆ...!

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಭಾರ್ಗವಿಯವರೆ...

ನೀವು ಈ ನಡುವೆ ಬರುವದು ಬಹಳ ಕಡಿಮೆ ಆಗಿಬಿಟ್ಟಿದೆ....!
ದಯವಿಟ್ಟು ಬರ್ತಾ ಇರಿ...!

ನನಗೆ ಗೊತ್ತು ..
ನೀವೆಲ್ಲ ನನ್ನಾಕೆಗೇ ಸಪೋರ್ಟ್ ಮಾಡ್ತೀರಂತ...!

ಅವಳೇ ನಾನು ಇಷ್ಟ ಪಟ್ಟ ವಿಜಯ ಆಗಿರಲಿ ಅಂತ ದೇವರಲ್ಲಿ ಹರಕೆ ಇದೆ..
(ನನ್ನಾಕೆಯದೂ ಕೂಡ...)

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಗುರುಮೂರ್ತಿಯವರೆ...

ಅದು ಪುಂಡಾಟಿಕೆ ಆಲ್ಲಾ...!
ಪುಂಡನಾಗಿದ್ದರೆ ವಿಜಯಾಳಿಗೆ ನೇರವಾಗಿ ಹೇಳಿಬಿಡುತ್ತಿದ್ದೆ...

ಮನೆತನದ ಗೌರವದ ಭಯ...
ಚಿಕ್ಕಪ್ಪ ಅದೇ ಸ್ಕೂಲಿನಲ್ಲಿ ಉಪನ್ಯಾಸಕರು...!
ಹಳ್ಳಿಯ ಹೈಸ್ಕೂಲ್....!
ಬೆಳೆದ ವಾತಾವರಣ...!

ಸಹಜವಾಗಿ ಧರ್ಯ ಬರಲಿಲ್ಲ....!

ಈಗ ಇದೆಯಾ..?

ಈಗ ನಿನ್ನ ಭಾವನೆ ಹಾಗೆ ಇತ್ತಾ ಅಂತ ಕೇಳಲಿಕ್ಕೆ ದೈರ್ಯ ಸಾಲಲಿಲ್ಲ...

ಈಗ ಬ್ಲಾಗಿನ ಈ ಲೇಖನ ಓದಿರುತ್ತಾರಲ್ಲ...
ನಿಮ್ಮೆಲ್ಲ ಪ್ರತಿಕ್ರಿಯೆ ಓದಿರ್ತಾರಲ್ಲ...

ಅವರೇ ಹೇಳ ಬಹುದಲ್ಲ..
ಎಂಬ ಧೈರ್ಯ ಇದೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಶಿವಶಂಕರ್....

ಇಂಥಹ ಸಂದರ್ಭದಲ್ಲಿ ಫೈನ್ ಕಟ್ಟಿದ್ದು ಏನೂ ಅನ್ನಿಸುವದಿಲ್ಲ...

ಆದರೆ ಪೋಲಿಸ್ ಬಂದಿರದಿದ್ದರೆ...
ವಿಷಯ ಹೊರಗೆ ಬರುತ್ತಿತ್ತು...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...
ಹೀಗೆ ಬರುತ್ತಾ ಇರಿ...

Ittigecement said...

ರಮ್ಯಾರವರೆ....

ನನ್ನಾಕೆಗೆ ವಿಜಯ ವಿಷಯ ಮೊದಲ ಬಾರಿ ಹೇಳಿದಾಗ ಬಹಳ ಖುಷಿಯಿಂದ ಕೇಳಿದರು...
ಹಾಗೆಯೇ ನೋಡುವ ಆಸೆಯನ್ನೂ ವ್ಯಕ್ತಪಡಿಸಿದರು...

ನಾನೂ ನೋಡಿರಲಿಲ್ಲವಲ್ಲ...!

ಮಡದಿಗೆ ತೋರಿಸುವ ನೆಪದಲ್ಲಿ...
ನನಗೂ ನೋಡು ಆಸೆ ಇದೆ ಎನ್ನುವದು ಅಷ್ಟೇ ಸತ್ಯ...!

ನಿಮ್ಮ ಹಾರೈಕೆಯನ್ನು
ಭಗವಂತ.. ಇಷ್ಟರಲ್ಲೇ ನೆರವೇರಿಸಲಿದ್ದಾನೆ ಎನ್ನುವ "ಆಸೆ(ಆಶಾ ಭಾವನೆ) ಇದೆ...
ಆಶಾಳಿಗೂ ಕೂಡ..!

ಧನ್ಯವಾದಗಳು...

Ittigecement said...

ಮಲ್ಲಿಕಾರ್ಜುನ್...

ಈ ಮಹದಾಸೆ... ಬಹಳದಿನಗಳಿಂದ ಇದೆ...
ನನ್ನ ಮದುವೆಗೆ ವಿಜಯಾ ಕರೆಯಬೇಕೇಂದು ಮಹದಾಸೆ ಆಸೆ ಇತ್ತು...
ನಾಗು ಬಹಳ ಓಡಾಡಿದ್ದ...

ಅಗಲಿಲ್ಲ...
ನಿಜ .. ನನ್ನ ಜೀವನದ ಪ್ರತಿಯೊಂದು ಘಟ್ಟದಲ್ಲಿ..
(ಆಶಾ ಬರುವ ಮೊದಲು)
ಅವಳ ನೆನಪಾಗುತ್ತಿತ್ತು...ನೆನಪಾಗಿ ಕಾಡಿದ್ದಳು..
ವಿಜಯಾ...!

ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲ...
ಈಗ ಬಂದಿರ ಬಹುದು...
ಧನ್ಯವಾದಗಳು...

Ittigecement said...

ಬಾಲು ಸರ್...

ಎಷ್ಟೋ ಬಾರಿ ಪರಿತಪಿಸಿದ್ದೇನೆ..
ಹೇಳಬೇಕೆಂದಿರುವ...
ಹೇಳಲಾಗದ ಭಾವಗಳ ಬಗೆಗೆ...

ಆ ಪ್ರೇಮವನ್ನು ಆರಾಧಿಸಿದ್ದೇನೆ...

ನನ್ನ ಏಕಾಂತದಲ್ಲಿ ಅವಳಿದ್ದಳು...
ಮಾತಾಡುತ್ತಿದ್ದೆ...ಕೇಳುತ್ತಿದ್ದಳು..
ಗೆಳತಿಯಾಗಿ...
ನನ್ನ ದುಗುಡ ದುಮ್ಮಾನಗಳನ್ನು....
ಆಲಿಸಿದ್ದಳು..
ಓಲೈಸಿದ್ದಳು.... ಕಲ್ಪನೆಯಾಗಿ.....
ನನ್ನಲ್ಲಿದ್ದಳು... ನನ್ನದೆಯಲ್ಲಿದ್ದಳು......
ಹೂವಿನಂತ ಹಾಡಾಗಿ.....

ಬಾಲು ಸರ್...
ವಂದನೆಗಳು...

Geetha said...

hello sir,

ಎಂದಿನಂತೆ...... ತುಂಬ ಚೆನ್ನಾಗಿದೆ ಲೇಖನ. ಈ ಸಾರಿ ಮತ್ತೆ ಟೋಪಿ ಹಾಕಿಸಿಕೊಳ್ಳದಿರಿ ಅಂತ ನಮ್ಮ ’ಆಶ’ಯ ;)

ಗಿರೀಶ್ ರಾವ್, ಎಚ್ (ಜೋಗಿ) said...

you have your own style of telling things and it's very unique. I like your writings. keep writing.
-jogi

Aditya Bedur said...

ತುಂಬಾ ಚನ್ನಾಗಿ ಬರೆದಿದ್ದೀರಿ, ನನಗೊಂದು ಮಹದಾಸೆ ಪುಟದ ಕೊಂಡಿಯನ್ನು ಲಗತ್ತಿಸಿದ್ದರೆ ಅನುಕೂಲವಾಗುತ್ತಿತ್ತು :)

umesh desai said...

ಪ್ರಕಾಶ್ ಚೆನ್ನಾಗಿದೆ ಆದರೆ ಈ ವಯಸ್ಸಿನಲ್ಲೂ ಹುಡುಗಿಯರ
ಬಗ್ಗೆ ಬರೆಯುವ ನಿಮ್ಮ ಖಯಾಲಿ ಹಿಡಿಸಿತು....keepit up....

ತೇಜಸ್ವಿನಿ ಹೆಗಡೆ said...

ಪ್ರಕಾಶಣ್ಣ,

ಒಳ್ಳೆ ಸಸ್ಪೆನ್ಸ್‌ನಲ್ಲಿ ಕೊನೆಯಾಗಿದೆ ಲೇಖನ. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ. ಅಂದ ಹಾಗೆ ಎಂದು ಈ ಸತ್ಯನಾರಾಯಣ ಪೂಜೆ? :)

ಧರಿತ್ರಿ said...

ಪ್ರಕಾಶ್ ಸರ್...

ನಾಗು ಮಾತ್ರವಲ್ಲ ನೀವೂ ನಮ್ಮ ತಲೆಗೆ ಹುಳ ಬಿಡೋ ಕೆಲಸ ಆಗಾಗ ಮಾಡ್ತಾ ಇರ್ತೀರ ಅಲ್ವಾ?

ಅದೇ ರಾಗ, ಅದೇ ಹಾಡು..ಅದೇ ಶೈಲಿ, ಅದೇ ಬಾಲ್ಯ, ವಿಜಯಾ, ಕುತೂಹಲ, ನಮ್ಮ ತಲೆಗೆ ಹುಳ ಬಿಟ್ಟು ಮುಂದಿನ ಬರಹಕ್ಕೆ ಕಾಯುವಂತೆ ಮಾಡಿದ್ದಕ್ಕೆ ಹ್ಯಾಟ್ಸಾಫ್!
ಸುಂದರ ಬರಹಕ್ಕೆ ಅಭಿನಂದನೆಗಳು
-ಧರಿತ್ರಿ

ವಿನುತ said...

ಪ್ರಕಾಶ್ ಅವರೇ,

ಒಳ್ಳೆ ನೆನೆಗುದಿಯಲ್ಲಿ ನಿಲ್ಲಿಸಿದ್ದೀರ ಓದುಗರನ್ನ. 'ನನಗೊಂದು ಮಹದಾಸೆ' ಲೇಖನದ ಕೊ೦ಡಿಯನ್ನು ಕೊನೆಗೆ ಹಾಕಿದ್ದಿದ್ದರೆ ಅನುಕೂಲವಾಗುತ್ತಿತ್ತು ಎ೦ದು ನನ್ನ ಅನಿಸಿಕೆ. ಆ ಲೇಖನವನ್ನೂ ಓದಿದೆ. ಕೊನೆಯ 'ಪಂಚ್' ಚೆನ್ನಾಗಿದೆ. ಈ ಬಾರಿಯೂ ಹಾಗಾಗದಿರಲಿ :)

Jayalaxmi said...

ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುವ ಕಲೆ ನಿಮಗೆ ಸಿದ್ಧಿಸಿದೆ ಪ್ರಕಾಶ್ ಅವರೆ..ಸರಳ,ಸುಂದರ, ರಮ್ಯ ನಿಮ್ಮ ಬರಹ. ಬರೆಯುವುದನ್ನು ಯಾವ ಕಾರಣಕ್ಕೂ ನಿಲ್ಲಿಸಬೇಡಿ. ಮಂಗಳತ್ತೆ ನಿಮ್ಮ ಬರಹಗಳನ್ನು ಓದ್ತಾಳೊ ಇಲ್ವೊ ಜಯಲಕ್ಷ್ಮೀಯಂತು ಖಂಡಿತ ಓದ್ತಾಳೆ.

shivu.k said...

ಪ್ರಕಾಶ್ ಸರ್,

ಲೇಖನದಲ್ಲಿ ಮನಸ್ಸಿನ ತಳಮಳ, ಆನಂದ, ಇತ್ಯಾದಿಗಳು ಲೇಖನದಲ್ಲಿ ಚೆನ್ನಾಗಿ ಇಣುಕಿವೆ....

ಯುವ ವಯಸ್ಸಿನ ನೆನಪುಗಳು ಬಲು ಸುಂದರ..ಆಗುವ ಅನುಭವಗಳ ಚಿತ್ರಣ ಚೆನ್ನಾಗಿದೆ....
ಸತ್ಯನಾರಾಯಣ ಪೂಜೆಯ ನಂತರ ನಡೆದ ಘಟನೆಗಳಿಗೆ ಕಾಯುತ್ತೇನೆ....

ಧನ್ಯವಾದಗಳು...

Radhika Nadahalli said...

ವಾಹ್! ಪ್ರತಿ ಸಾಲು ಓದಕ್ಕಾದ್ರು ಮುಂದೆ ಎಂತ ಆತು ಅಂತ ಕುತೂಹಲ ಹುಟ್ಟಿಸ್ತು...ಒಳ್ಳೆ ಸುಸ್ಪೆನ್ಚೆ ಕಥೆ ತರಹ ಬರದ್ದೆ...ಸಕ್ಕತ್ ಇದ್ದು... :-) ಆದ್ರೆ ಕೊನೆಗೆ ಸತ್ಯನಾರಾಯಣ ಪೂಜೆ ಕಥೆ ಎಂತ ಆತು ಅಂತ ಗೊತ್ತಾಗ್ಲೆ :-)

Amit Hegde said...

ಹಿಂಗೆ ಅರ್ದಕ್ಕೆ ನಿಲ್ಸಿದ್ರೆ ಹೆಂಗೆ...? ಸಸ್ಪೆನ್ಸ್ ತಡ್ಕಂಬ್ಲೆ ಆಗ್ತಾ ಇಲ್ಲೇ ಮಾರಾಯ ಮುಂದೆಂತಾ ಆತು ಹೇಳು ಲಗುವಾ...!!???

NiTiN Muttige said...

ಪ್ರಕಾಶ್ ಅಣ್ಣಾ, ನಿಮ್ಮನಾ ನೋಡಿದ್ರೆ ಹೊಟ್ಟೆ ಉರಿತು.ಅದೇಷ್ಟು ಚೆಂದಕೆ ವರ್ಣಿಸ್ತೆ!! ಸತ್ಯನಾರಾಯಣ ಕಥೆಯಲ್ಲಿನ ಕಥೆ ಬೇಗ ಬರಲಿ..!!

ನಿಮ್ಮ ಬರಹದಲ್ಲಿ ಕೊನೆಯಲ್ಲಿ ಕೊಟ್ಟ ಲೀಂಕ್ ಕೆಲಸಮಾಡ್ತಾ ಇಲ್ಲಾ, ಪತ್ರದ್ದು...

Guruprasad said...

ಪ್ರಕಾಶ್,
ಏನ್ರೀ ನೀವು,, ನೀವು ಕೂಡ tension ತಗೊಳೊದಲ್ದಿರ . ಈ ಥರ ಕತೆ ಬರೆದು ನಮಗೂ tension ಹಚ್ತಿರಲ್ರಿ .....

ಹಾ ಹಾ ಚೆನ್ನಾಗಿ ಇದೆ ಸರ್ ... ಮುಂದೆ ಏನ್ ಆಗಿದೆ ಅಂತ, ಬೇಗ ಹೇಳಿ....

ಗುರು

Ittigecement said...

ಪರಾಂಜಪೆಯವರೆ...

ನೀವೆಲ್ಲ ನನ್ನ ಬರಹ ಇಷ್ಟ ಪಡುವದು ಖುಷಿಯಾಗುತ್ತದೆ...

ಬಹಲ ಕೆಲಸದ ಒತ್ತಡ ಇರುವದರಿಂದ
ನಿಮ್ಮ ಪ್ರತಿಕ್ರಿಯೆಗಳಿಗೆ ತಡವಾಗಿ ಉತ್ತರ ಕೊಡುತ್ತಿರುವದಕ್ಕೆ..
ಕ್ಷಮೆ ಇರಲಿ...

ಕೆಲವರ ಅಭ್ಯಾಸ ಬಲ..
ಕೆಲವರ ಶೈಲಿಯೇ ಹಾಗಿರುತ್ತದೆ....

ನಿಮ್ಮ ಪ್ರೋತ್ಸಾಹ, ಪ್ರತಿಕ್ರಿಯೆಗೆ ವಂದನೆಗಳು....

Ittigecement said...

ಸತ್ಯನಾರಾಯಣರವರೆ....

ನಾನೂ , ಮಲ್ಲಿಕಾರ್ಜುನ್ ನಿಮ್ಮ ಬರವಣಿಗೆ..
ಬರಹಗಳನ್ನು ಇಷ್ಟಪಟ್ಟು ಮಾತನಾಡುತ್ತಿರುತ್ತೇವೆ...

ನಿಮ್ಮದು ಸರಳ, ಸಹಜ ಸೈಲಿ..
ನಿಮ್ಮ ಹಾಗೆ ಬರೆಯಲು ನನಗೆ ಬರುವದಿಲ್ಲ...

ನೀವು ಲೇಖನ ಇಷ್ಟಪಟ್ಟಿದ್ದು ಖುಷಿಯಾಗುತ್ತದೆ...
ಧನ್ಯವಾದಗಳು...

Ittigecement said...

ಮನಸು....

ಬ್ಲಾಗಿನಲ್ಲಿ ಈ ವಿಷಯ ಬರೆದರೂ ಅವರ ಹೆಸರು ಬರೆಯಲಿಲ್ಲವಲ್ಲ...
ಅವರು ಅನಾಮಧೇಯರಾಗಿಯೇ ಇದ್ದಾರಲ್ಲ...

ಲೇಖನ ಇಷ್ಟಪಟ್ಟಿದ್ದು ಖುಶಿಯಾಯಿತು...
ಧನ್ಯವಾದಗಳು...
ಹೀಗೆ ಬರುತ್ತಾ ಇರಿ...

Ittigecement said...

ಉಮೀ....

ಇಷ್ಟಪಟ್ಟವರನ್ನು...
ಇಪ್ಪತ್ತು ವರ್ಷಗಳಿಂದ ನೋಡಿಲ್ಲ...
ನೆನಪಾಗಿ ಕಾಡುತ್ತಿದ್ದವರು ಫೋನಿನಲ್ಲ ಬಂದು ಬಿಟ್ಟರೆ...?
ಬಹಳ ಕಷ್ಟ ...

ನಿಮ್ಮ ಪ್ರೋತ್ಸಾಹ, ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಪ್ರಶಾಂತ್....

ಹದಿಹರೆಯದ ಬೆಚ್ಚಗಿನ ಅನುಭವಗಳು...
ಆ ದಿನಗಳು..
ಎಲ್ಲರಿಗೂ ರೋಮಾಂಚನಕಾರಿಯಾಗಿರುತ್ತದೆ...

ಲೇಖನ ಇಷ್ಟ ಪಟ್ಟಿದ್ದಕ್ಕೆ..
ಧನ್ಯವಾದಗಳು....

Ittigecement said...

ಮೂರ್ತಿ....

ಇದೇನಿದು...??

ನೋ ಕಮೆಂಟ್ಸ್...ಅಂತ ..
ಕಮೆಂಟ್ಸ್ ಕೊಟ್ಟೀದ್ದೀರಲ್ಲ....!

ಸ್ವಲ್ಪ ಬಿಡಿಸಿ ಹೇಳಿ ಮಾರಾಯರೆ...!
ನಿಮಗೂ ಈ ಅನುಭವ ಆಗಿತ್ತಾ...?

ನಿಮ್ಮ ನೋ ಕಮೆಂಟ್ಸಿಗೂ...

ತುಂಬುಹ್ರದಯದ
ಧನ್ಯವಾದಗಳು...

Ittigecement said...

ಸುಧೇಶ್....

ಸತ್ಯನಾರಾಯಣ ಪೂಜೆಯಲ್ಲಿ ಆದದ್ದನ್ನು ಬರೆಯಲು..
ತಡವಾದುದಕ್ಕೆ ಕ್ಷಮೆ ಇರಲಿ...
ಸಧ್ಯದಲ್ಲಿ ಇದರ ಕೊನೆಯದು ಹಾಗೂ ಮೂರನೆಯದು ಬರುತ್ತದೆ...

ಧನ್ಯವಾದಗಳು...

ಬರುತ್ತಾ ಇರಿ.

Ittigecement said...

ಶಿವಪ್ರಕಾಶ್....

ನಾಗೂ ಯಾವಾಗಲೂ ನನಗೆ ಸಹಾಯವನ್ನೇ ಮಾಡಿದ್ದಾನೆ...
ಸ್ವಲ್ಪ ತಲೆಹರಟೆ ಎನ್ನುವದನ್ನು ಬಿಟ್ಟರೆ...
ಒಳ್ಳೆಯ ಹ್ರದಯವಂತ...

ನನ್ನ ಲೇಖನ ಇಷ್ಟ ಪಟ್ಟಿದ್ದಕ್ಕೆ ವಂದನೆಗಳು...

Ittigecement said...

ರವಿಯವರೆ....

ರವಿ ಬೆಳಗೆರೆ ಎಲ್ಲಿ...?
ನಾನೆಲ್ಲಿ...?

ಅವರ ಸ್ಪೂರ್ತಿಯಂತೂ ಇದ್ದೇ ಇದ್ದಿರುತ್ತದೆ...

ಸತ್ಯನಾರಾಯಣಪೂಜೆಯ ಘಟನೆ ಬರೆಯಲು ತಡವಾಗಿದ್ದಕ್ಕೆ
ಬೇಸರಿಸದಿರಿ...
ಪ್ರತಿಕ್ರಿಯೆಗೆ ಧನ್ಯವಾದಗಳು....

Ittigecement said...

ಕ್ಷಣ ಚಿಂತನೆ....

ಬದುಕಿನ ತಿರುವುಗಳು..
ಹೇಗಿರುತ್ತವೆ.. ಅಂತ ನಮಗೇ ಗೊತ್ತಿರುವದಿಲ್ಲ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಚಂದ್ರಕಾಂತಾರವರೆ...

ನಿಮಗೆ ಕೀಟಲೆ ಮಾದಲೂ ಬರುತ್ತದೆಂದು
ತಿಳಿದು ಖುಷಿಯಾಯಿತು...
ನೀವೆಲ್ಲ ಆಶಾಳನ್ನು ಮೆಚ್ಚಿದ್ದರಿಂದ ಉಬ್ಬಿಹೋಗಿದ್ದಾಳೆ...

ಮುಂದಿನದ್ದೆಲ್ಲಾ... ಈಗ ಹೇಗೆ ಊಹೆ ಮಾಡಲು ಸಾಧ್ಯ...?

ನೀವು ಗುರುಮಾತೆ ಎಂದು ಒಪ್ಪಿಕೊಂಡಿದ್ದೇನೆ...

ನಿಮಗೆ ಕಿವಿಹಿಡಿಯಲು ಅಧಿಕಾರ ಇದ್ದೇ ಇರುತ್ತದೆ...
ಅದು ಶಿಷ್ಯನಿಗೆ ಗೊತ್ತಿದೆ...

ಲೇಖನ ಇಷ್ಟಪಟ್ಟಿದ್ದು ಖುಷಿಯಾಗುತ್ತಿದೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಶ್ವೇತಾರವರೆ...

ಲೇಖನ ಇಷ್ಟಪಟ್ಟಿದ್ದು ಸಂತೋಷವಾಯಿತು...
ಪ್ರತಿಕ್ರಿಯೆಗೆ ಧನ್ಯವಾದಗಳು...

ಹೀಗೆ ಬರುತ್ತಾ ಇರಿ...

Ittigecement said...

ವೀಣಾರವರೆ....

ಸತ್ಯನಾರಾಯಣ ಪೂಜೆಯ ಕಥೆ ಬರೆಯಲು ತಡ ಆಗಿದ್ದಕ್ಕೆ ಕ್ಷಮೆ ಇರಲಿ...

ಲೇಖನ ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ
ಧನ್ಯವಾದಗಳು...

Ittigecement said...

ಸುಧೀಂದ್ರ...

ಖಂಡಿತ ಕರೆಯುತ್ತಿದ್ದೆ...

ಶಿವ ಪೂಜೆಯಲ್ಲಿ ಕರಡಿ..?

ತಮಾಶೆಗೆ ಹೇಳಿದೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಗುರುಪ್ರಸಾದ್...

ಮುಂದಿನ ಭಾಗ ಬರೆಯಲು..
ನಿಮಗೆಲ್ಲ ಉತ್ತರಿಸಲು ತಡವಾಯಿತು...
ಕೆಲಸದ ಒತ್ತಡ...

ಪ್ರತಿಕ್ರಿಯೆಗೆ..
ಲೇಖನ ಮೆಚ್ಚಿದ್ದಕ್ಕೆ ವಂದನೆಗಳು...

Ittigecement said...

ಗೀತಾರವರೆ...

ನೀವು ಆಶಾರವರ ಆಶಯವನ್ನೇ ಹೊಂದಿದ್ದೀರಿ...

ನಿಮ್ಮ ಆಶಯವನ್ನೇ ನಾನು, ಆಶಾ ಬಯಸುವದು...
ಲೇಖನ ಇಷ್ಟಪಟ್ಟಿದ್ದಕ್ಕೆ..
ಧನ್ಯವಾದಗಳು...

Ittigecement said...

ಜೋಗಿಯವರೆ....

ನಿಮ್ಮ ಲೇಖನಗಳ.., ಕಥೆಗಳ
ಅಭಿಮಾನಿ ನಾನು...

ನೀವು ಇಷ್ಟಪಟ್ಟಿದ್ದು...,
ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯೆ ಕೊಟ್ಟಿದ್ದು..
ನನ್ನ ಪಾಲಿಗೆ ದೊಡ್ಡ ವಿಷಯ...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...
ಧನ್ಯವಾದಗಳು...

Ittigecement said...

ಆದಿತ್ಯರವರೆ...

ನನಗೆ ಈ ತಾಂತ್ರಿಕ ವಿಷಯಗಳು ಗೊತ್ತಿಲ್ಲ...
ಹರೀಷ್, ರಾಜೇಶ್ ಸಹಾಯ ಪಡೆದು ಮುಂದಿನ ಬಾರಿ ಹಾಕುವೆ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಉಮೇಶ್ ದೇಸಾಯಿಯವರೆ...

ಆಕರ್ಷಣೆ ಯಾವಾಗಲೂ ಇರಬೇಕು ಸ್ವಾಮಿ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ತೇಜಸ್ವಿನಿ...

ಸತ್ಯನಾರಾಯಣನ ಪೂಜೆ ಆಗಿ ಹೋಗಿದೆ..
ಲೇಖನ ಪ್ರಕಟಿಸಲು ತಡವಾಯಿತು...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸ್ವಲ್ಪ ಬಿಡುವು ಮಾಡಿಕೊಂಡು..
ನಿಮ್ಮ ಲೇಖನಿಗೂ ಕೆಲಸ ಕೊಡಿ...

Ittigecement said...

ಧರಿತ್ರಿ....

ಅನುಭವಗಳೇ ಹಾಗೆ...
ನೆನಪಾಗುತ್ತಿದ್ದ ಹಾಗೆ ಬಿಚ್ಚಿಕೊಳ್ಳುತ್ತವೆ...

ಬರಹ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Ittigecement said...

ವಿನುತಾ....

ಜೀವನ ಚದುರಂಗದಾಟದಂತೆ...
ಒಂದು ಆಟದಂತೆ ಇನ್ನೊಂದು ಇರುವದಿಲ್ಲ...

ಲಿಂಕ್ ನನಗೆ ಕೊಡಲು ಬಂದಿಲ್ಲ...
ಯಾರದ್ದಾದರೂ ಸಹಾಯ ಪಡೆದು ಮುಂದೆ ಕಲಿತು ಕೊಳ್ಳುವೆ...

ಮೆಚ್ಚಿದ್ದಕ್ಕೆ ವಂದನೆಗಳು..

Ittigecement said...

ಜಯಲಕ್ಷ್ಮೀಯವರೆ...

ನಿಮ್ಮನ್ನು ಮುಕ್ತ ಧಾರವಾಹಿಯ ಮಂಗಳತ್ತೆಯಾಗಿ ನೋಡಿದ್ದರಿಂದ..
ನಿಮ್ಮ ಮೂಲ ಹೆಸರು ಅಷ್ಟಾಗಿ ನೆನಪಾಗುವದಿಲ್ಲ...

ನಿಮ್ಮ ಮನೋಜ್ಞ ಅಭಿನಯ ನಮಗೆಲ್ಲ ಇಷ್ಟ..
ನಮ್ಮನೆಯವರೆಲ್ಲ ನಿಮ್ಮ ಅಭಿಮಾನಿಗಳು...

ನೀವು ಇಷ್ಟಪಟ್ಟಿದ್ದು..,
ಬಂದು ಪ್ರೋತ್ಸಾಹ ಕೊಟ್ಟಿದ್ದಕ್ಕೆ..
ಹ್ರದಯಪೂರ್ವಕ ವಂದನೆಗಳು...

Ittigecement said...

ಶಿವು ಸರ್....

ಆ ಹರೆಯದ ದಿನಗಳ..
ನೆನಪುಗಳು.. ಮೆಲುಕುಗಳು..
ಮನಸ್ಸಿಗೆ ಮುದಕೊಡುತ್ತವೆ...

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು..

ನೀವೇ ಅಲ್ಲವೆ ನನ್ನನ್ನು ಈ ಲೋಕಕ್ಕೆ ತಂದಿದ್ದು...

ಧನ್ಯವಾದಗಳು...

Ittigecement said...

ಸಿಂಚನಾ....

ಬಹಳ ಅಪರೂಪ ಆಗಿಬಿಟ್ಟಿದ್ದೀರಿ...

ನನ್ನ ಬರಹ ಇಷ್ಟಪಟ್ಟಿದ್ದಕ್ಕೆ..,
ಪ್ರೋತ್ಸಾಹಕ್ಕೆ
ಧನ್ಯವಾದಗಳು..
ಬರುತ್ತಾ ಇರಿ....

Ittigecement said...

ಅಮಿತ್.....

ಒಂದೇ ಸಾರಿ ಬರೆದರೆ ಬಹಳ ಉದ್ದವಾಗಿ ಬಿಡುತ್ತದಲ್ಲಾ...!

ಸ್ವಲ್ಪ ತಡವಾಯಿತು....

ಮೂರನೇ ಲೇಖನ ಸರಿಯಾಗಿ ಜಲ್ದಿ ಹಾಕುತ್ತೇನೆ... ಖಂಡಿತಾ ಕಾಯಿಸೋದಿಲ್ಲ...

ಮೂರನೇ ಲೇಖನದಲ್ಲಿ "ವಿಜಯಾ" ಲೇಖನ ಮುಗಿಯಬಹುದು...

ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ನಿತಿನ್....

ಘಟನೆ ಅನುಭವಿಸಿದ್ದರಿಂದ ಬರೆಯಲು ಸಾಧ್ಯವಾಯಿತು....

ನೆನಪಾಗಿ, ಕನಸಾಗಿ..
ಮನಸಲ್ಲಿ...
ಕಾಡಿದ್ದ ಹುಡುಗಿ...
ಒಮ್ಮೆಯಾದರೂ ಸಿಗಬಹುದೆಂಬ ಆಸೆ...

ಕಾದು..
ಕಾಯುವ ಮನದದ..
ತುಮಲ, ತವಕ..
ಬರಹವಾಗಿದೆ....

ಮೆಚ್ಚಿದ್ದಕ್ಕೆ ಧನ್ಯವಾದಗಳು....

Ittigecement said...

ಗುರು....

ಬದುಕಿನ ಬೇಸರದಲ್ಲಿ..
ಖುಷಿಯಲ್ಲಿ...
ದೂರದ ನೆಲೆಯಲ್ಲಿ... ಬೇರೂರುತ್ತಿರುವಾಗ
ಒಂಟೀಯಾಗಿದ್ದಾಗ...
ನನ್ನ
ಮೌನದಲ್ಲಿ ಮಾತಾಗಿ...
ಮಾತಿಲ್ಲದೆ ಮೌನವಾಗಿ...
ಜೊತೆಯಿದ್ದ ಗೆಳತಿಯನ್ನೊಮ್ಮೆ...
ಕಣ್ಣತುಂಬ ಕಾಣಬೇಕೆಂಬ ಹಂಬಲ....

ಇಷ್ಟೆಲ್ಲ ಬರೆಸಿದೆ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Unknown said...

ಓಹೋ,,,,,ನಾನೂ ತುಂಬಾ ಕುತೋಹಲಕಾರಿಯಾಗಿದ್ದೇನೆ.ಬೇಗನೆ ನಿಮಗೆ ಆ ಕನಸಿನ ಹುಡುಗಿ ಸಿಗಲಿ, ನಿಮ್ಮ ಮಡದಿಗೆ ತೋರಿಸಿ, ಹಾಗೆಯೇ ಅವಳ ಫೋಟೊ ನಿಮ್ಮ ಬ್ಲಾಗ್ ಗೆ ಹಾಕಿರಿ, ನಾವೆಲ್ಲರೂ ನೋಡುವಂತಾಗಲಿ.
(ಖುಷ್ವಂತ್ ಪುಣೆ)

long Ke Hike said...

Kathe Tumba chennagiddu Prakashanna

Ittigecement said...

ಖುಷಿ ಯವರೆ....

ನನ್ನ ಮನಸ್ಸೂ ಬಯಸುವದು ಅದನ್ನೇ...

ನಿಮ್ಮ ಪ್ರೋತ್ಸಾಹಕ್ಕಾಗಿ ವಂದನೆಗಳು...

ಆಗಾಗಲಾದರೂ ಬರುತ್ತಾ ಇರಿ...

Ittigecement said...

ಲಾಂಗ್ ಕೆ ಹೈಕ್...

ನಿಮ್ಮನ್ನು ಹೇಗೆ ಕರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ...

ಇಲ್ಲಿ ವಿಜಯಾ ಕುರಿತು ನನ್ನ ಭಾವನೆಗಳು ಮಾತ್ರ ಸತ್ಯ...
ಉಳಿದವುಗಳು ಕಾಲ್ಪನಿಕ....

ಕಥೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹದ ನುಡಿಗಳು..
ನನಗೆ ಇನ್ನಷ್ಟು ಬರೆಯಲು ಉತ್ಸಾಹ ತರುತ್ತವೆ...
ಧನ್ಯವಾದಗಳು...