ಗರುಡಾ ಮಾಲ್ ನಲ್ಲಿ "ಟ್ಯಾಕ್ಸಿ ನಂ. 9211" ನೋಡುತ್ತಿದ್ದೆ...
ನನ್ನ ಮೇಸ್ತ್ರಿ ಮಣಿ ಆತಂಕದಿಂದ ಫೋನ್ ಮಾಡಿದ..
"ಸಾರ್.. ರಾಜಕುಮಾರ್ .. ಸತ್ತೋಗಿ.. ಬುಟ್ಟವ್ರೆ....!
ಉಷಾರಾಗಿ ಮನೆಗೆ ಹೋಗಿ.. ಗಲಾಟೆ ಆದ್ರೂ ಆದೀತು..
ಜಲ್ದಿ ಮನೆಗೆ ಹೋಗಿ ಸೇರ್ಕಳಿ..."
ಅಷ್ಟೊತ್ತಿಗೆ ಸಿನೇಮಾ ಮಧ್ಯದಲ್ಲೇ ಅನೌನ್ಸ್ ಮಾಡಿದರು..
ಸುದ್ಧಿ ನಿಜವಾಗಿತ್ತು....!
ನಾನೂ ತಕ್ಷಣ ಮೇಸ್ತ್ರಿಗೆ ಫೋನ್.. ಮಾಡಿದೆ...
" ನೀವೂ, ನಿಮ್ಮ ಜನಗಳೂ ಸೈಟಿಂದ ಹೊರಗಡೆ ಹೋಗ್ಬೇಡಿ..!
ಗಲಾಟೆ ಆದೀತು" ಎಂದು ಎಚ್ಚರಿಸಿದೆ...
ನನ್ನ ಬಿಸಿನೆಸ್ಸಿಗೂ ತಮಿಳರಿಗೂ ನಂಟು... ಅವರಿಲ್ಲದೇ ನನ್ನ ವ್ಯವಹಾರ ಅಸಾಧ್ಯ..
ಒಂದುದಿನ ಸೈಟಿಗೆ ಹೋದಾಗ.. ಮೇಸ್ತ್ರಿ ಒಬ್ಬನನ್ನು ಕರೆದು ಕೊಂಡು ಬಂದಿದ್ದ..
"ಸಾರ್ ಇವನು "ಅಮವಾಸ್ಯೆ ಅಂತ.. ನಮ್ಮೂರಿನವನು..
ಒಳ್ಳೇ ಮನುಷ್ಯ..
ಇವನಿಗೆ ವಾಚಮನ್ ಕೆಲಸ ಕೊಡಿ.." ಅಂದ..
ನನಗೆ ಇವನ ಹೆಸರು ವಿಚಿತ್ರವೆನಿಸಿತು..
" ಅದು ಎಂಥಾ ಹೆಸರೊ.."ಅಮವಾಸ್ಯೆ.."..!
ಬೇರೆ ಹೆಸರು ಇಲ್ಲವಾ ಇವನಿಗೆ.... ?"
" ಇದೆ ಸಾರ್ .. ಇನ್ನೊಂದು ಹೆಸರು... "ಗಾಂಧಿ"
" ಗಾಂಧಿ ಅಂತಲಾ..?
ಆ ಹೆಸರು ಎಷ್ಟು ಬೆಲೆ ಬಾಳ್ತದೆ ಗೊತ್ತೇನಯ್ಯಾ..?
ಪುಣ್ಯ ಮಾಡಿರಬೇಕು ಆ ಹೆಸರು ಪಡೆಯಲಿಕ್ಕೆ.."
"ನಮ್ಮ ಕಡೆ ಹಾಗೇಯಾ..ಸಾರ್..
ಇವನು ಅಮವಾಸ್ಯೆ ದಿನ ಹುಟ್ಟಿದಾನೆ ..
ಅಮವಾಸ್ಯೆ ಒಳ್ಳೆಯ ದಿನ ಅದಕ್ಕೇ ಆ ಹೆಸರು..
ಮತ್ತೆ ಇವರ ಕುಟುಂಬದಲ್ಲಿ ಒಬ್ಬರಿಗಾದರೂ "ಗಾಂಧಿ " ಅಂತ ಹೆಸರು ಇದ್ದೇ ಇರ್ತದ್ದೆ..
ಇವನ ಅಪ್ಪನಿಗೆ ಒಬ್ಬನೇ ಮಗ..
ಹಾಗಾಗಿ ಇವನಿಗೆ ಎರಡು ಹೆಸರು.. "
ಅಂದಿನಿಂದ ಇಲ್ಲಿಯವರೆಗೆ "ಗಾಂಧಿ" ನಮ್ಮಲ್ಲೇ ಇದ್ದಾನೆ..
ಹೆಸರಿಗೆ ತಕ್ಕ ಹಾಗೆ ಪ್ರಾಮಾಣಿಕ.. ನಿಷ್ಥಾವಂಥ....
ತನ್ನ ಕುಟುಂಬದ ಸಂಗಡ.. ಒಂದು ನಾಯಿಯನ್ನು ಸಾಕಿದ್ದ.
ಅದು ಮುದಿಯಾಯಿತೆಂದು ಇನ್ನೊಂದು ಮರಿಯನ್ನೂ ಸಾಕಿದ್ದ..
ಅದು ಬೀದಿನಾಯಿಯಾಗಿದ್ದರೂ ಒಂಥರಾ ಮುದ್ದಾಗಿತ್ತು...
ನಾನು ಸೈಟಿಗೆ ಹೋದಾಗಲೆಲ್ಲ ಬಾಲ ಅಲ್ಲಡಿಸುತ್ತ ..
ನಾನು ಬರುವವರೆಗೂ ನನ್ನ ಹಿಂದೆಯೇ ಇರುತ್ತಿತ್ತು...
ನಾನು ವಾಚಮನ್ ಗೆ ದುಡ್ಡು ಕೊಟ್ಟು ಬಿಸ್ಕಿಟ್ ತರಿಸಿ ಕೊಟ್ಟಮೇಲೇಯೇ..
ಅದಕ್ಕೆ ಸಮಾಧಾನ ಆಗುತಿತ್ತು...
ಬಹಳ ಚುರುಕಾಗಿತ್ತು.. ಚೂಟಿಯಾಗಿತ್ತು...
ಮೊನ್ನೆ ಶನಿವಾರ..
ನಾನು ಮತ್ತು ನನ್ನ ಗೆಳೆಯ "ಸತ್ಯ"..
ಇಬ್ಬರೂ ಸೈಟಿಗೆ ಹೋಗಿದ್ದೆವು...
ಪೇಮೆಂಟ್.. ಮಾಡಲಿಕ್ಕೆ...
ನನ್ನ ಬಿಸಿನೆಸ್ಸಿಗೆ "ಸತ್ಯ" ಪಾಲುದಾರ.
ಗೆಳೆಯ ಎಲ್ಲವೂ ಅವನೇ...
ಅವನಿಲ್ಲದೆ ನಾನು ಏನೂ ನಿರ್ಣಯ ತೆಗೆದು ಕೊಳ್ಳುವದಿಲ್ಲ......
ಆ ದಿನ ನಾಯಿ ನನ್ನ ಹಿಂದೆ ಬರಲಿಲ್ಲ..
ಸುಮ್ಮನೇ... ಸಪ್ಪೆಯಾಗಿ... ಮಲಗಿ ಕೊಂಡಿತ್ತು..
ಜೀವನದಲ್ಲಿ " ಜಿಗುಪ್ಸೆ " ಬಂದವರ ಹಾಗೆ...!
ಆಳಸಿಯಾಗಿ ಮಣ್ಣಲ್ಲಿ ಬಿದ್ದುಕೊಂಡಿತ್ತು..
ನಾನು ಗಾಂಧಿಯನ್ನು ಕೇಳಿದೆ..
"ಏನಾಗಿದೆಯೋ ಇದಕ್ಕೆ.?
ಈ ಥರಹ ಜೀವ ಭಾರ.. ಆದವರ ಹಾಗೆ ಮಲಗಿದೆ..?
ಇದಕ್ಕೇ.... ಕಾಯುತಿದ್ದ ಗಾಂಧಿ.. ಕೋಪದಿಂದ..
"ಈ ... ಕಾರ್ಪೋರೇಸನ್ನವರಿಗೆ " ಆತ್ಮಾಗೀತ್ಮಾ".... ಇದೆಯಾ..? ಸಾರ್..
ಏನು ಮಾಡಿದಾರೆ ನೋಡಿ...??...!."
ಏರಿದ ಧ್ವನಿಯಲ್ಲಿ ಕೋಗತೊಡಗಿದ..
" ಏನಾಯ್ತೋ..?."
"ಆಲ್ಲ.. ಈ ಕಾರ್ಪೋರೇಸನ್ನವರಿಗೆ "ಆತ್ಮಾಸಾಕ್ಷಿ " ಏನೂ ಇಲ್ಲವಾ ಸಾರ್.?
ಎಂಥಾ.. ಜನ ಸಾರ್..ಇವರು..??
ಇವರು..? ಹೀಂಗೆ ಮಾಡಿದಾರೆ..?
ಅವರ ಆತ್ಮಕಿಷ್ಟು "ಬೆಂಕಿ " ಹಾಕಾ..!
ಅವರ ಆತ್ಮಕ್ಕೆ " ಹುಳ".. ಬಿದ್ದೋಗಾ..!
ಅವರ ಆತ್ಮ.."ಎಕ್ಕುಟ್ಟೋಗ" ...!!.."
ಮಂಗಳಾರತಿ.., ಮಂತ್ರಾಕ್ಷತೆ.. ಹಾಕತೊಡಗಿದ..!
ನನಗೆ ಇವನು ಏನು ಹೇಳ್ತಿದಾನೆ ಅರ್ಥ ಆಗ್ಲಿಲ್ಲ..!
ಅಷ್ಟರಲ್ಲಿ ಸತ್ಯ..
"ಏನೋ "ಆತ್ಮಾ ಗೀತ್ಮಾ" ಅಂತೀಯಾ..?
ಎಲ್ಲರಿಗೂ "ಆತ್ಮಾ" ಇರ್ತದೆ..
ಕಾರ್ಪೋರೆಶನ್ನವರಿಗೂ.. ಇರತ್ತದೆ..
"ನಂಗೂ " ಆತ್ಮ ಇದೆ...ಇದೆ.." ನಿಂಗೂ" ಆತ್ಮ ಇದೆ..
ಯಾಕೋ ಹಾಗಂತೀಯಾ..? ಏನಾಯ್ತ್ಯು?"
" ಅಲ್ಲಾ ಸಾರ್...ಮನುಷ್ಯನ ಆತ್ಮಾ... ಮೂಕ ಪ್ರಾಣಿಗಳ ಆತ್ಮ ಬೇರೆ.. ಬೇರೆನಾ...?
ಎಲ್ಲರಿಗೂ... ಆತ್ಮ ಶಾಂತಿ ಒಂದೆ.. ಆಲ್ವಾ..? "
ಅಷ್ಟರಲ್ಲಿ ಮೇಸ್ತ್ರಿ ಬಂದ..
"ಅವನಿಗೆ ಬೇಜಾರಾಗಿ ಬಿಟ್ಟಿದೆ.. ಸಾರ್...
ಅದಕ್ಕೇ ಹಾಗಂತಾನೆ ಸಾರ್..
ನೀವು ಬನ್ನಿ ಈ ಕಡೆ..."
ಅಂದು ನಮ್ಮನ್ನು ಅಲ್ಲಿಂದ ಸಾಗಹಾಕ ತೊಡಗಿದ..
ಗಾಂಧಿಗೆ ತಡೆಯಲಾಗುತ್ತಿಲ್ಲ...! .. ಮತ್ತೆ ಶುರು ಹಚ್ಚಿಕೊಂಡ..
ಕೋಪ.. ಅಸಹಾಯಕತೆಯಿಂದ... ಮತ್ತೂ ..ಕೂಗತೊಡಗಿದ...
" ಇಡಿ.. ದೇಶದಲ್ಲಿ... ಮುಂಡೆ.. ಮಕ್ಕಳು..".. ಹಡೆದೂ.. ಹಡದೂ..
ದೇಶ ಹಾಳು ಮಾಡತಾ.. .. ಇದಾರೆ..!
ಅವ್ರು... ಕಣ್ಣಿಗೆ ಕಾಣ್ತಾ ಇಲ್ಲ ಇವರಿಗೆ..!
ಅಲ್ಲಿ ಹೋಗಿ ಮಾಡ್ಲಿ ಇವರ ಕೆಲಸಾನ.?
ಅವರ ಆತ್ಮ ಇವರಿಗೆ ಕಾಣಲ್ವಾ...?
ಇಲ್ಲಿ ಯಾಕೆ ಬರ್ತಾರೆ..? ನಾವೇನು ಮಾಡಿದೇವೆ..?..
ಎಡವಟ್ಟು ನನ್ನ ಮಕ್ಳನ್ನು ತಂದು.."
ಕೋಪದಿಂದ ಅವನು ಅದುರತೊಡಗಿದ...ಅವನ ಮೈ ಕಂಪಿಸುತ್ತಿತ್ತು..
ನನಗೆ ಸಮಸ್ಯೆಯಾಯಿತು..
"ಯಾಕೋ ಗಾಂಧಿ...? ಏನೋ ಏನಾಯ್ತು.. ??
ಕಾರ್ಪೋರೇಷನ್ನವರು ನಿನಗೆ ಹೊಡೆಯಲಿಕ್ಕೆ ಬಂದ್ರೇನೋ..?"
"ಅಲ್ಲಾ.... ನನ್ನ ಮೈ ಮುಟ್ಟಿದ್ರೆ ಅವರ "ಆತ್ಮಾನೇ" ತೆಗೆದು ಬಿಡ್ತಿದ್ದೆ.."
"ಛೇ... ಹಾಗೆಲ್ಲ.. " ಕೊಲೆ " ಮಾಡೋದು..
" ಮರ್ಡರ್" ಮಾತೆಲ್ಲ ನಮಗೆಲ್ಲ ಅಲ್ಲಪ್ಪಾ.."
ಸಮಾಧಾನ ಮಾಡ್ಕೋ..
ಹೇಳು ಏನಾಯ್ತು..?"
" ಅಲ್ಲ ಸಾರ.. ಈ ಕಾರ್ಪೋರೇಶನ್ನವರು..
ನಮ್ಮ ನಾಯೀನಾ ಹಿಡ್ಕೊಂಡು ಹೋಗಿ ಬಿಟ್ಟಿದ್ರು.."
" ಬಿಟ್ಟಿದ್ದಾರಲ್ಲಪ್ಪ.. ಇಲ್ಲೇ ಇದೆ..!"
"ಹಾಗಲ್ಲ.. ಸಾರ್.. ಅದಕ್ಕೆ ಮಕ್ಕಳಾಗದ ಹಾಗೆ....
ಅದರ " ಆತ್ಮಾನೇ" ಕಟ್ ಮಾಡಿಬಿಟ್ಟಿದ್ದಾರೆ..!.... ಸಾರ್..!!
ಬೇಜಾರಾಗೊಲ್ವಾ..?... ನೀವೇ ಹೇಳಿ..?
ಮುದ್ದಾಗಿ ಸಾಕಿದ್ದಿನಿ..
ಹಿಂಗೆ ಮಾಡಿಬಿಟ್ರೆ ಹೆಂಗೆ..???
ನಾನು ದಂಗಾಗಿ ಹೋದೆ..!!
ಆತ್ಮಕ್ಕೇ ಈ ಅರ್ಥನೂ ಇದೆಯಾ..? ..?
"ಅಲ್ಲ ಸಾರ್.. .. ಹೇಗೆ ಕುಣಿತಾ ಇದ್ದ ನಾಯಿಮರಿ ಹೇಗೆ ಮಲಗಿ ಬಿಟ್ಟಿದೆ..?
ಎರಡು ದಿನದಿಂದ ಅನ್ನ ನಿರು ಮುಟ್ಟಿಲ್ಲ.. ಸಾರ್..!
ಅದಕ್ಕೆ ಜೀವನದಲ್ಲಿ ಇನ್ನು ..ಎಂಥಾ ಖುಷಿ ಸಾರ್..?
ಅದರ.. ಆತ್ಮ ಸಂತೋಷಾನೇ ಕಿತ್ಗೋ.. ಬಿಟ್ರಲ್ಲಾ...!
ಆ ಕಾರ್ಪೋರೇಶನ್ನವರಿಗೆ... ತಲೆ ಸರಿ ಇದೆಯಾ..?"
ಅವರಿಗೇನು ".ಆತ್ಮಾ ಗಿತ್ಮಾ .. " ಇಲ್ವಾ..?
ಅವರ "ಆತ್ಮಕ್ಕಿಷ್ಟು.. ಬೆಂಕಿ ಹಾಕಾ...!
ಅವರ ಆತ್ಮ ಎಕ್ಕುಟ್ಟೋಗ...!!
ಅವರ ಆತ್ಮಕ್ಕೆ ಹುಳ ಬಿದ್ದೋಗ....!!
ಅವರ ಆತ್ಮಕ್ಕೆ ಬರಬರಾದ ರೋಗ ಬಂದೋಗ....!!.."
ಮತ್ತೆ ಶುರು ಶುರು ಹಚ್ಚಿಕೊಂಡ...
ಸತ್ಯ ಗಹಗ್ಗಹಿಸಿ ನಗತೊಡಗಿದ...
ಮೇಸ್ತ್ರಿ ಮಣಿ ಮೆಲ್ಲಗೇ ಹೇಳಿದ..
"ಸಾರ್... ಅವನ ಹೊಟ್ಟೆಲಿ ಸ್ವಲ್ಪ
"ಪರಮಾತ್ಮ " ಹೋಗಿದೆ ...
ನಿನ್ನೆ ಬೇಜಾರು ಮಾಡ್ಕೊಂಡು ಹಾಕಿದ "ಪರಮಾತ್ಮಾ " ಇನ್ನೂ ಇಳಿದಿಲ್ಲ ಸಾರ್..
ಅದಕ್ಕೇ ಹಾಗಾಡ್ತಿದಾನೆ..
ಆದ್ರೆ... ಆ ನಾಯಿ ಮರಿ ನೋಡಿ .. ಸಾರ್..
ಜೀವನದಲ್ಲಿ ಜಿಗುಪ್ಸೆ ಬಂದು ಬಿಟ್ಟಿದೆ..
ಮಲಕ್ಕೊಂಡೇ ಇರ್ತದೆ.. ಯಾವಾಗ್ಲೂ...
ಪಾಪದ ಮುಖ ಮಾಡಿ ಕೊಂಡು.. ಊಟನಾನೂ ಮಾಡಲ್ಲ..
ಛೇ... ಪಾಪ... ತ್ಚು... ತ್ಚು... ಛೇ.... ."
ನಾನು ಸತ್ಯ ಲಗುಬಗೆಯೋಂದ ಜಾಗ ಖಾಲಿ ಮಾಡಿದೆವು..
" ಇವರು ನಮ್ಮ " ಆಧ್ಯಾತ್ಮದ " ಶಬ್ದ ಎಲ್ಲ ಬದಲಾಯಿಸಿ ಬಿಡ್ತಾರೆ..!
ಯಾವುದು.. ಆತ್ಮಾನೋ..?
ಯಾವುದು.. ಪರಾಮಾತ್ಮನೋ..?
ದೇವರೇ ಕಾಪಾಡ.. ಬೇಕು... .!!.
ನನ್ನ ಅಂತರಾತ್ಮಕ್ಕೆ ಏನು ಗೊತ್ತಾಗ್ತಾ ಇಲ್ಲಪ್ಪ....!"
ಸತ್ಯನೂ "ಆಧ್ಯಾತ್ಮ" ಶುರು ಹಚ್ಚಿಕೊಂಡ...
ಮನೆಗೆ ಬಂದು ಲಗುಬಗೆಯಿಂದ ಬ್ಲಾಗ್ ಓಪನ್ ಮಾಡಿದೆ..
ನಾನು ಯವಾಗಲೂ ಮೊದಲು. ಶಿವು, , ಶಾಂತಲಾ ಭಂಡಿ,. "ಸಲ್ಲಾಪ" ಸರ್, . ಬತ್ತದ ತೂರೆ..
ರಾಜೇಶ್., ಮಲ್ಲಿಕಾರ್ಜುನ್,.. .ಇತ್ಯಾದಿ .. ಬೇರೆಯವರ..ಬ್ಲಾಗ್ ನೋಡಿ.. ನನ್ನ ಬ್ಲಾಗ್ ನೋಡ್ತೀನಿ..
ಶಿವುರವರ ಬ್ಲಾಗ್ ನೋಡಿದೆ... ..!!
ಹಾಗೆಯೇ... ನಿಂತುಬಿಟ್ಟೆ.. ಹ್ಹಾಂ..!!
ಅವರ ಲೇಖನದ.. "ಹೆಡ್ಡಿಂಗ್" ನೋಡಿ.. ದಂಗಾಗಿ ಬಿಟ್ಟೆ..
"ಈ... ದೇಹದಿಂದ....
ದೂರವಾದೆ .. ಏಕೇ .. ಆತ್ಮನೇ. ..?.. "
ನನಗೆ ನಗು ತಡೆಯಲಾಗಲಿಲ್ಲ...
ಜೋರಾಗಿ ನಕ್ಕುಬಿಟ್ಟೆ...
ಹಾಗೆಯೇ....
ಪಾಪದ ... ಮುಖದ...
" ನಾಯಿಮರಿಯೂ.. ." . ನೆನಪಾಯಿತು....!!
Wednesday, February 18, 2009
Subscribe to:
Post Comments (Atom)
65 comments:
ಛೆ..ನಾಯಿಯ "ಆತ್ಮ" ಕಟ್ ಮಾಡಿದ್ದನ್ನು ಓದಿ ಬೇಜಾರಾಯ್ತು.
ಆದ್ರೆ, ನಾನು ಆಫೀಸಿಂದ ಲೇಟಾಗಿ ಮನೆಗೆ ಬರೋವಾಗ ಅಟ್ಟಿಸಿಕೊಂಡು
ಬರ್ತಿದ್ದ ನಾಯಿಗಳನ್ನು ನೆನೆಸಿಕೊಂಡರೆ, ಹಾಗೆ ಸಾಯ್ಸಿ ಬಿಡೋಷ್ಟು ಕೋಪ ಬರುತ್ತೆ.
ಅದರೂ ಹೆಂಡವನ್ನು ಪರಮಾತ್ಮ ಅಂತಾ ಇದ್ದದ್ದು ಗೊತ್ತು, ಆದ್ರೆ "ಅದಕ್ಕೆ" ಆತ್ಮ ಅನ್ನೋದನ್ನ
ಮೊದಲ ಬಾರಿ ಕೇಳಿದ್ದು.
ಇನ್ನೊಂದು ಸಜೆಶನ್ ನಿಮಗೆ.
ದಯವಿಟ್ಟು ನಿಮ್ಮ ಬರಹದ ಅಕ್ಷರಗಳನ್ನು ಅಷ್ಟು ದಪ್ಪ ಮಾಡಬೇಡಿ.
ನಾರ್ಮಲ್ ಫಾಂಟ್ ಸೈಜಿನಲ್ಲೇ ಇರಲಿ. ಸುಮ್ನೆ ಸ್ಕ್ರಾಲ್ ಮಾಡೋಕೆ ಬೇಜಾರು ಹಾಗು ಕಣ್ಣಿಗೆ ಬಹಳ ತ್ರಾಸ ಕಣ್ರೀ ಪ್ರಕಾಶಪ್ಪ.
ಕಟ್ಟೆ ಶಂಕ್ರ
ಶಂಕರ್...
ನೀವು ಮೆಚ್ಚಿದ್ದು ಖುಷಿಯಾಯಿತು..
ಫೋಟೊ ಕೂಡ ಇದೆ ..
ಆ ಪಂಚ್ ಬರಲಿಕ್ಕಿಲ್ಲ ಅಂದು ಕೊಂಡು ಹಾಕಿಲ್ಲ...
ಆತ್ಮದ ಭಾಷೆ ನನಗೂ ಹೊಸದು..
ಆದರೆ "ಆತ್ಮಾನೇ ಬೇರೆ..
ಪರಾತ್ಮನೇ ಬೇರೆ.. ಎಂದಾಯಿತೆ..?
ಗಾಂಧಿ, ಆತ್ಮಾ.., ಪರಾಮಾತ್ಮಾ..!
ನಿಮ್ಮ ಸಲಹೆಗಳನ್ನು ಖಂಡಿತ ಧನಾತ್ಮಕವಾಗಿ ಸ್ವೀಕರಿಸುವೆ...
ಪ್ರತಿಕ್ರಿಯೆಗೆ ಧನ್ಯವಾದಗಳು..
ನಮಸ್ಕಾರ,
ನಿಮ್ಮ 'ಆತ್ಮ'ಕಥೆ ಓದಿ ನಕ್ಕೂ ನಕ್ಕೂ ಸುಸ್ತಾಯ್ತು. ಮದುವೆಯನ್ನು ಆತ್ಮಬಂಧನ ಅನ್ನುತ್ತಾರೆ ಹಿರಿಯರು. ನಿಮ್ಮ 'ಗಾಂಧಿ'ವಾಣಿ ಅದನ್ನು ಇನ್ನೂ 'ಅರ್ಥವತ್ತಾಗಿಸಿದೆ'. ಅಂದ್ಹಾಗೆ ಇಂಥ ಪುನರಾವರ್ತಿತ ಪದಬಳಕೆ ಬಗ್ಗೆ ನಾನೊಂದು ಲೇಖನ ಬರೆದಿದ್ದೆ. ಸಾಧ್ಯವಾದರೆ (ಹಿಂದೆ ಓದಿಲ್ಲವಾದರೆ)ಒಮ್ಮೆ ಓದಿ. ಲಿಂಕ್ ಹೀಗಿದೆ-
http://thatskannada.oneindia.in/column/humor/2008/1110-punching-dialogues-in-normal-life.html#cmntTop
ಆತ್ಮದ ಸ್ವರೂಪವನ್ನು ಸರಳವಾಗಿ ವಿವರಿಸಿದ ನಿಮ್ಮ ಗಾಂಧಿಗೆ ನನ್ನ ಕಡೆಯಿಂದ ವಂದನೆ ತಿಳಿಸಿ
ಪ್ರಕಾಶಣ್ನ,
ಬ್ಲೊಗ್ ಬರೆದು ಕೆಲವರಿಗೆ ಚಪಾತಿ ತಿನ್ನ ದಂತೆ ಮಾಡಿದೆ.ಅದು ಇದು ಎಂದು ಬ್ಲೊಗ್ ಬರೆದು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದೆ.
ಈಗ ನನ್ನ ಬ್ಲೊಗ್ ನಲ್ಲಿ ಆತ್ಮಾಭಿಮಾನ,ಆತ್ಮವಿಮರ್ಶೆ,ಆತ್ಮಗೌರವ,ಆತ್ಮೀಯತೆ,ಅಂತರಾತ್ಮ,
ಹುತಾತ್ಮ,ಮುಂತಾದ ಶಬ್ದಗಳನ್ನ ಬಳಸುವಾಗ ಒಮ್ಮೆ ಆತ್ಮಾವಲೋಕನ ಮಾಡುವಂತೆ ಮಾಡಿದೆ ಮಾರಾಯ.
(ಈ ಕಾಮೆಂಟ್ ಕೆಟ್ಟ ಅರ್ಥ ಕೊಡುವಂತಿದ್ದರೆ ದಯವಿಟ್ಟು ಆತ್ಮವಂಚನೆ ಮಾಡಿಕೊಳ್ಳದೇ ಅಳಿಸಿಬಿಡು)
ಹ್ಹಾ ಹ್ಹಾ ಹ್ಹಾ...
ಆತ್ಮಾಕ್ಕೆ ದಕ್ಕೆ ಬಂದಿದೆ...
ಪ್ರಕಾಶ್ ಸರ್,
ಬೆಳಿಗ್ಗೆಯಿಂದ ಒಂದು[ನಿಮಗೆ ಮನೆ ಬದಲಿಸಲು ಸಾಮಾನು ಪ್ಯಾಕ್ ಮಾಡುತ್ತಿದ್ದೆ] ನಿಮಿಷ ಪುರುಷೊತ್ತಿರಲಿಲ್ಲ....ಸ್ವಲ್ಪ ರಿಲ್ಯಾಕ್ಸ್ ಆಗಲಿಕ್ಕೆ ಬ್ಲಾಗಿಗೆ ಬಂದರೆ ನಿಮ್ಮ "ಆತ್ಮದ ಕತೆ" ಓದಿ, ನಾವಿಬ್ಬರೂ ಅದೆಂಥ ರಿಲ್ಯಾಕ್ಸ್ ಆದೆವು ಅಂದರೆ ಬೆಳಿಗ್ಗೆಯಿಂದ ಮಾಡಿದ ಕೆಲಸದ ಸುಸ್ತೆಲ್ಲಾ ಹೋಗಿ ಮತ್ತೆ ಹೊಸ ಹುರುಪು ಬಂದು ಬಿಟ್ಟಿತ್ತಲ್ಲ.....
ನಾನು ಬಳಸಿದ ಟೈಟಲನ್ನೇ ಈ ರೀತಿ ಕಾಮಿಡಿಯಾಗಿ ಕೊಟ್ಟಿದ್ದು...ನನಗಂತೂ ಸಿಕ್ಕಪಟ್ಟೆ ಖುಷಿಯಾಯ್ತು...
ಇರಬೇಕು ಹೀಗೆ ಜೀವನದಲ್ಲಿ ಒಂದೇ ಪದಕ್ಕೆ, ಒಂದೇ ವಾಕ್ಯಕ್ಕೆ ನಾನಾ ಅರ್ಥಗಳು ಆಗಲೇ ಜೀವನ ನವರಸ...ಏನಂತೀರಿ.....
ಕಥೆ ಓದಿ ನನ್ನ ಆತ್ಮಕ್ಕೆ ...ಛಿ ಛಿ..ಮನಸ್ಸಿಗೆ ತುಂಬಾ ಕಸಿವಿಸಿಯಾಯಿತು... ಆತ್ಮ ಸಂತೋಷವನ್ನೇ ಕಿತ್ತುಕೊಂಡರೆ ಹೇಗೆ ? ಅದೂ ವರ್ಷಕ್ಕೊಂದು ಸಲದ್ದು ?
ಪ್ರಕಾಶ್ ಸರ್,
ಒಂದು ಕಡೆ "ಶಿವು ಸರ್ ಬ್ಲಾಗಿನ ಬರಹದ ಶಿರೋನಾಮೆ ಕಳುವಾಗಿದೆ", ಇನ್ನೊಂದೆಡೆ ನಾವಾಗಲೇ "ಚಪಾತಿ" ಶಬ್ದ ಕಳೆದುಕೊಂಡಾಗಿದೆ. ಈಗ "ಆತ್ಮ"ದ ಸರದಿಯೇನು...
ಬರಹ ನಗೆಗಡಲಲ್ಲಿ ತೇಲಿಸಿ, ಮುಳುಗಿಸಿ, ತೋಯಿಸಿ ಬಿಡುತ್ತದೆ. ಬೊಂಬಾಟ್ ನಿರೂಪಣೆ...
ಪ್ರಕಾಶಣ್ಣ. ಅಳಬೇಕಾ ನಗ ಬೇಕಾ ಗೋತ್ತಾಗದೇ ಸ್ವಲ್ಪ ಬೇಜಾರಿಂದಲೇ ನಗೆ ಆಡಿದೆ.ನಾವು ಪ್ರಾಣಿಗಳನ್ನ ಬಹಳ ಹಚ್ಚಿಕೊಂಡರೆ ಅವರಿಗೆ ಏನೇ ಆದರೂ ನಮಗೆ ಆಗಿದ್ದಕ್ಕಿಂತ ಹೆಚ್ಚೆ ಬೇಜಾರಾಗುತ್ತದೆ.ನಮ್ಮ ಕಾರ್ಪೋರೇಶನ್ ಅವರು ನಾಯಿಗಳ ಆತ್ಮ ಕಟ್ ಮಾಡಿದಂತೆ ಮನುಷ್ಯರದ್ದು ಮಾಡಲಾರರು.ಏಕೆ? ಮನುಷ್ಯರಿಂದಲೇ ದಿನಕ್ಕೆ ನೂರಾರು ಕೊಲೆ,ಅತ್ಯಾಚಾರ ಎಲ್ಲ ಆಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿದೆ. ಆದರೆ ನಾಯಿಗಳು ಕಚ್ಚ್ಚಿ ಹೆದರಿಸುತ್ತದೆ ಎಂದು ಎಲ್ಲ ನಾಯಿಗಳ "aatma" vannu tegedare avara naisargika kriyege addipdisuvante aagallave?
adEkO aa gaandhi bagge kushi aayitu...
ಹ್ಹ ಹ್ಹ ಹ್ಹ, ಆತ್ಮ ಚೆನ್ನಾಗಿದೆ, ನಾಯಿಮರಿ ಬಗ್ಗೆ ಪಾಪ ಅನ್ನಿಸ್ತು.
ರೇಖಾರವರೆ...
ನನ್ನ ಬ್ಲಾಗಿಗೆ ಸ್ವಾಗತ..
"ಆತ್ಮ" ಶಬ್ಧವನ್ನು ಅವನು ಬಳಸಿದ ರೀತಿ ನೋಡಿ ನನಗಂತೂ ನಕ್ಕು ನಕ್ಕು ಸುಸ್ತಾಗಿದ್ದೆ..
ಸಂಗಡ "ಸತ್ಯ" ಕೂಡ..
ಆದರೆ ಆ ಗಾಂಧಿ ಆ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದಾನೆ..
ತಾನು ಊಟ ಮಾಡುವದನ್ನೇ ಅದಕ್ಕೇ ಹಾಕುತ್ತಾನೆ..
ಅವನ ಸಂಗಡವೇ ಅವು ಮಲಗುತ್ತವೆ..
ಅವುಗಳನ್ನು ತನ್ನ ಮಕ್ಕಳ ಹಾಗೇ ಸಾಕಿದ್ದಾನೆ..
ಹಾಗಾಗಿ ಅವನಿಗೆ ಅಷ್ಟು ಕೋಪ..
ಅದು ಸಹಜ ಕೂಡ...
ಇದಕ್ಕೇನು ಪರಿಹಾರ..?
ನಿಮ್ಮ ಚಂದದ ಪ್ರತಿಕ್ರಿಯೆಗೆ ವಂದನೆಗಳು...
ಪಾಲಚಂದ್ರ..
ಬರೆಯುವಾಗ ನನಗೆ ಹೆದರಿಕೆ ಇತ್ತು..
ನೀವೆಲ್ಲ "ಇದನ್ನು" ಹೇಗೆ ಸ್ವೀಕಾರ ಮಾಡುತ್ತೀರೋ ಎಂದು...
ಬಂದಿರುವ ಪ್ರತಿಕ್ರಿಯೆ ನೋಡಿ ಖುಷಿಯಾಯಿತು..
ಇದರಲ್ಲಿ ಒಂದು "ನೋವು" ಕೂಡ ಇದೆ...
ನಾಯಿ ಬಗೆಗೆ ಅಷ್ಟು ನಿರ್ಧಾಕ್ಷಿಣ್ಯವಾಗಿ ವರ್ತಿಸುವ ಸರಕಾರ..
ಮನುಷ್ಯರ ಬಗೆಗೆ "ಇಬ್ಬದಿ" ನೀತಿ ಏಕೆ..?
ಪ್ರತಿಕ್ರಿಯೆಗೆ ವಂದನೆಗಳು..
ಮೂರ್ತಿ...
ಹ್ಹಾ...ಹ್ಹೋ...ಹ್ಹೋ...
ನಿನ್ನ ಪ್ರತಿಕ್ರಿಯೆ ಓದಿ ನಗು ತಡೆಯಲಾಗುತ್ತಿಲ್ಲ ಮಾರಾಯಾ...!
ಎಷ್ಟೆಲ್ಲಾ "ಆತ್ಮದ" ಶಬ್ಧ ಕಲೆ ಹಾಕಿಬಿಟ್ಟಿದ್ದೀಯಾ..!
ನಾನು ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ ..
ನಿಮ್ಮ ಇಂಥಹ ಪ್ರೋತ್ಸಾಹ ನನಗೆ ಟಾನಿಕ್ಕಿನಂತೆ...
ಇನ್ನೂ ಬರೆಯಬೇಕೆಂಬ ಉತ್ಸಾಹ ತರುತ್ತದೆ...
ಪ್ರೋತ್ಸಾಹ ಹೀಗೆಯೆ ಇರಲಿ..
ಬಂದು ಓದಿ ಒಂದು ಪ್ರತಿಕ್ರಿಯೆ ಕೊಡಿ..
ಅದುವೆ ನನಗೆ "ಆತ್ಮ ಸಮ್ಮಾನ"
ಮೂರ್ತಿ..
ಹ್ರದಯ ಪೂರ್ವಕ ಧನ್ಯವಾದಗಳು...
ಶಿವ ಪ್ರಕಾಶ್...
ಆತ್ಮಕ್ಕೆ ಧಕ್ಕೆ ಬಂದರೆ..
ಆತ್ಮಾಭಿಮಾನಕ್ಕೆ ಧಕ್ಕೆ ಬಂದ ಹಾಗೇನೆ...!
ಹುಷಾರಾಗಿರಿ..
ಪ್ರತಿಕ್ರಿಯೆಗೆ ಧನ್ಯವಾದಗಳು..
mama neenu innu auto kathe baredille adanna bari please
ಸರ್,
ನಕ್ಕು ನಕ್ಕು ಸಾಕಾಯ್ತು. Comments ನಲ್ಲಿ ಯಾರೋ ನಿಮ್ಮ ಆತ್ಮಕಥೆ ಎಂದು ಬರೆದಿರುವುದನ್ನು ನೋಡಿ ಹೊಟ್ಟೆ ಹಿಡಿದು ನಕ್ಕೆ. ಆತ್ಮ, ಪರಮಾತ್ಮ, ಗಾಂಧಿ, ಅಮಾವಾಸ್ಯೆ...ಅಬ್ಬಬ್ಬಾ ..ಆತ್ಮಸಾಕ್ಷಿಯಾಗಿಯೂ ಚೆನ್ನಾಗಿದೆ!!
ಶಿವು...ಸರ್...
ನಿಮ್ಮ ಪ್ರೋತ್ಸಾಹವೇ ಸ್ಪೂರ್ತಿ...
ಬೇರೆ ಯಾರೇ ಆಗಿದ್ದರೂ ಜಗಳ ಕಾಯುತ್ತಿದ್ದರು...
ನನ್ನ ಹೆಡ್ಡಿಂಗಿಗೆ ಅವಮಾನ ಮಾಡಿದ್ದೀಯಾ ಅಂದುಬಿಟ್ಟು...
ನೀವು ಖುಷಿ ಪಟ್ಟಿದ್ದು ತುಂಬಾ ಸಂತೋಷವಾಯಿತು..
ಅವರವರ ನೋಟ..
ಅವರವರ ಭಾವ...ಅಲ್ಲವಾ..?
ಆ ಹಾಡಿನಲ್ಲಿಯೂ ಹಾಸ್ಯ ಕಂಡು ನಗುವದು
ವಿಪರ್ಯಾಸವೇ ಸರಿ...
ನನಗಂತೂ ಸಿಕ್ಕಾಪಟ್ಟೆ ನಗು ಬಂತು..
ನಿನ್ನೆ ವಿವಿಧ ಭಾರತಿಯಲ್ಲಿ ಆ ಹಾಡು ಬಂದಿತ್ತು..
ನಮ್ಮ ಮನೆಯಲ್ಲಿ ನಗೆಯ ಬಾಂಬ್ ಸ್ಪೋಟವಾಗಿತ್ತು..
ಆದರೆ ಆ ನಾಯಿಮರಿಯ ನೋವು..?
ನಿಮ್ಮ ಪ್ರತಿಕ್ರಿಯೆಗೆ
ಹ್ರದಯಪೂರ್ವಕ ವಂದನೆಗಳು..
ನಿಮ್ಮೆಲ್ಲ ಕನಸು,
ಆಸೆ..
ಹೊಸಮನೆಯಲ್ಲಿ..
ಸಾಕಾರವಾಗಲಿ..
ಹಿತ್ತಲಮನೆಯ ಬೀಗಣ್ಣನವರೆ...
ಹ್ಹೋ..ಹ್ಹೋ..ಹ್ಹೀ..
ಈ ಘಟನೆ ನಡೆದು ಎರಡು ದಿವಸ ನನ್ನಷ್ಟಕ್ಕೇ ನಗುತ್ತಿದ್ದೆ..
ನಾವೆಲ್ಲರೂ...
ಪೌರಾಣಿಕಸಿನೇಮಾದ ಡೈಲಾಗ್ ನೆನಪಾದರೂ..(ಬಬ್ರುವಾಹನ...ಇತ್ಯಾದಿ)
ನಗು ಬರುತ್ತಿತ್ತು...
ನಿಜ..
ನಾಯಿಯ ಉಪಟಳ ಜಾಸ್ತಿಯೆಂದು ನಗರಪಾಲಿಕೆಯವರು
ಈರೀತಿ ಮಾಡಿದ್ದಾರೆ..
ಆದರೂ..
ಬೇಜಾರಾಗುತ್ತದೆ..
ಪ್ರತಿಕ್ರಿಯೆಗೆ
ಧನ್ಯವಾದಗಳು...
ರಾಜೇಶ್...
ನೀವು ನಿನ್ನೆ.... ಫೋನ್ ಮಾಡಿ ನಗುತ್ತಲೇ ಇದ್ದೀರಿ..
ಮಾತೇ ಅಡುತ್ತಿರಲಿಲ್ಲ..
ನಿಮ್ಮ ಖುಷಿ...
ನನಗೆ ಎಲ್ಲೋ
ಸಾರ್ಥಕತೆಯ..ಅನುಭವ...
ಪ್ರೋತ್ಸಾಹ ಹೀಗೇಯೇ ಇರಲಿ..
ಧನ್ಯವಾದಗಳು...
ನಿತಿನ್...
ನೀವೆನ್ನುವದು ನಿಜ..
ಏನು ಮಾಡೋಣ..
ಮನುಷ್ಯ ತಲೆ ಇರುವ ಪ್ರಾಣಿ..
ಇವನಿಗೆ "ವೋಟ್" ಇದೆಯಲ್ಲ..!
"ಸುನಾಥ"ರವರು ನನ್ನ ಹಿಂದಿನ ಬ್ಲಾಗಿನಲ್ಲಿ ಕೈಲಾಸ್ಂ ರವರ ಒಂದು ಪದ್ಯವನ್ನು ಬರೆದಿದ್ದರು..
ಅದು ಬಹಳ ಸೂಕ್ತ ಅನ್ನುವದು ನನ್ನ ಭಾವನೆ..
ಚಂದದ ಪ್ರತಿಕ್ರಿಯೆಗೆ ವಂದನೆಗಳು..
ಭಾರ್ಗವಿಯವರೆ...
ಈ ಲೇಖನಕ್ಕೆ ಹೆಣ್ಣುಮಕ್ಕಳು ಪ್ರತಿಕ್ರಿಯೆ ಕೊಡುವದಿಲ್ಲ...
ಎಂದು ಸತ್ಯ ಹೇಳಿದ್ದ..
ನಿಮಗೂ "ರೇಖಾರವರಿಗೂ"
ಸ್ಪೆಷಲ್ ಧನ್ಯವಾದಗಳು...
ಗಾಂಧಿ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದಾನೆ..
ಹಾಗಾಗಿ ಅವನಿಗೆ ಸಿಟ್ಟು ಬಂದಿದೆ...
ಮೊಬೈಲಿನಿಂದ ಫೋಟೊ ಕೂಡ ತೆಗೆದಿದ್ದೆ..
ಅಷ್ಟು ಚೆನ್ನಾಗಿ ಸ್ಪಷ್ಟವಾಗಿ ಬರಲಿಲ್ಲ..
ಆ ಫೋಟೊದಿಂದ "ಪಂಚ್" ಹೊರಟುಹೋಗಬಹುದೆಂದು ಹಾಕಿಲ್ಲ..
ಪ್ರತಿಕ್ರಿಯೆಗೆ ಧನ್ಯವಾದಾಗಳು...
ಪ್ರಕಾಶರೇ,
ನಾಯಿಯ "ಆತ್ಮ" ಕಥೆ ಬಹಳ ಚೆನ್ನಾಗಿದೆ. ನಿಮ್ಮ "ಚಪಾತಿ" ಪ್ರಕರಣದಿ೦ದಲೂ ಓದುತ್ತಲೇ ಇದ್ದೇನೆ. ಕೆಲವೊ೦ದು ಶಬ್ದಗಳಿಗೆ ಹೊಸ ಹೊಸ ಅರ್ಥಗಳನ್ನು ಕಲ್ಪಿಸಿ
ನಗುವನ್ನು ಸ್ಫುರಿಸುವಲ್ಲಿ ಯಶಸ್ವಿಯಾಗಿದ್ದೀರಿ. ಥ್ಯಾಂಕ್ಸ್.
ನೀವ್ಯಾಕೆ ಪ್ರತಿ ಸಾಲಿಗೂ enter ಒತ್ತುತ್ತೀರಾ ಅಂತ ಅರ್ಥ ಆಗ್ತಿಲ್ಲ.. ಓದೋಕೆ ತುಂಬಾ ಕಿರಿಕಿರಿ ಆಗುತ್ತೆ. ಪ್ರತಿ ಸಾಲೂ ಒಂದೊಂದು ಪ್ಯಾರಾಗ್ರಾಫ್ ಆಗಿದೆ ಇಲ್ಲೆ. ಸ್ಕ್ರಾಲ್ ಮಾಡಿಯೇ ಮುಗಿಯೊಲ್ಲ.
ಪ್ರಕಾಶ್ ಸರ್,
ಚೆನ್ನಾಗಿದೆ, ಪರಮಾತ್ಮನ ತಗೊಂಡು ಮಾತಾಡಿದ ಆ ಗಾಂಧಿ, ಪರಮಾತ್ಮ ಇಲ್ಲದೆ ಇರುವಾಗಲು ನಿಮ್ಮೊಂದಿಗೆ ಹೀಗೆ ಧೈರ್ಯವಾಗಿ ಮಾತಾಡುತ್ತಾರ, ಹ ಹ ಹ... ಅದು ಸಾಧ್ಯವಾಗಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ... ಹೇಗೋ ಪರಮಾತ್ಮನ ದೆಸೆಯಿಂದ ಹ ಹ ಅಸ್ಟು ಮಾತು ನಿರರ್ಗಳವಾಗಿ ಬಂದಿದೆ ಹ ಹ ಹ ... ಮತ್ತಿನ್ನೊಂದು ನಾಯಿಗೂ ಜೀವ, ಆತ್ಮ, ಪ್ರೀತಿ ಇದೆಯೆಂದು ಗಾಂಧಿಗೆ ಪರಮಾತ್ಮನ ದಯೆಯಿಂದ ಬಂದಿದೆ... ಇದು ನಾಯಿ ಪ್ರೀತಿಯೋ, ಪರಮಾತ್ಮನ ಪ್ರೀತಿಯೋ ನಾ ಕಾಣೆ...
ಇನ್ನು ಹಲವು ವಿಷಯಗಳು ಬರಲಿ ನಮಗೆ ಗೊತ್ತಿಲ್ಲದಿರೋದನ್ನೆಲ್ಲ ಕಲಿಸಿ ಹ ಹ ಹ ಹ
ಪರಮಾತ್ಮ ಆಡಿಸಿದಂತೆ ಆಡಿದನವನು... ಎಂದು ಟೈಟಲ್ ಕೊಟ್ಟಿದ್ದಾರೆ ಚೆನ್ನಾಗಿತ್ತೇನೋ ಹ ಹ ಹ ..
ವಂದನೆಗಳು..
ಪ್ರಕಾಶಣ್ಣ,
ಗಾಂದಿಯವರಿಗೆ "ಪರಮಾತ್ಮ" ಒಳಗೆ ಹೋಗಿ ಆತ್ಮದ ಬಗ್ಗೆ ತಿಳಿದುಕೊಂಡಿದ್ದು ಖುಷಿಯಾಯಿತು..
ಹೀಗೆ ಬರಿತ್ತಾ , ನಗಿಸ್ತಾ ಇರಿ .......
ಸರ್..ನಂಗೆ ಹೊಟ್ಟೆಗಿಚ್ಚಾಯ್ತು. ನಕ್ಕು ನಕ್ಕು ಹೊಟ್ಟೆ ಹಣ್ಣಾಯ್ತು,..ಆದರೆ ಹೀಗೆಲ್ಲ ಹೆಡ್ಡಿಂಗ್ ಕದಿಯುವ ಕೆಲಸ ಮಾಡಬಾರದು ಸರ್. ಹಾಕಿ ಕೆಳಗಡೆ: "ನಾನು ಶಿವು ಬ್ಲಾಗಿನ ಶೀರ್ಷಿಕೆ ಕದ್ದು, ಓದುಗರು ಕನ್ಫ್ಯೂಸ್ ಆಗಿದ್ದಾರೆ. ಅದಕ್ಕಾಗಿ ವಿಷಾದಿಸುತ್ತೇನೆ ಅಂತ".ಇ ನ್ನು ಯಾವ ಯಾವ 'ಆತ್ಮ' ಕತೆ ಬರಲಿದೆ ಸರ್. ನಿಜವಾಗಲೂ ನಿಮ್ಮ ಬರಹ ತುಂಬಾ ಖುಷಿಗೊಡುತ್ತೆ ಸರ್...
-ಚಿತ್ರ
ಪ್ರಕಾಶ್,
ನಗರ ಪಾಲಿಕೆಯ ದಯೆಯಿಂದ 'ಗಾಂಧಿ'ಯ ನಾಯಿ 'ಆತ್ಮಾರ್ಪಣೆ' ಮಾಡಬೇಕಾದ್ದು ಓದಿ ನಗು ಬಂತು. ಆದ್ರೆ 'ಗಾಂಧಿ' ಸಿಟ್ಟಾಗಿದ್ರಲ್ಲಿ ತಪ್ಪಿಲ್ಲ ಬಿಡಿ :-)
ಪ್ರಕಾಶ,
ಈಗ ಗೊತ್ತಾಯ್ತು ನೋಡಿ: ನಮ್ಮ ಒಳಗೆ ಪರಮಾತ್ಮ ಹೋದಾಗಲೇ ನಮ್ಮ ಆತ್ಮ ನೆಟ್ಟಗಿರೋದು ಅಂತ!
hwai... fantabuloussu!!!!!
ತುಂಬಾ ಮಜವಾಗಿದೆ!
ಪಾವನಾ... ಪುಟ್ಟಿ...
ಇನ್ನೂ ಯಾಕೆ ಬರಲಿಲ್ಲ ನೀನು ಅಂದು ಕೊಂಡಿದ್ದೆ...
ಹೇಗಿದೆ ಅಮೇರಿಕಾ?
ಲಕ್ಷ್ಮೇಶ್ವರದ "ಆಟೋ' ಕಥೆ ಅಲ್ಲವಾ..?
ನಾನು ಸತ್ಯ ಹೋದಾಗ ಆಗಿದ್ದು..?
ಅಥವಾ
ನಾನು ವಿನಾಯಕ.. ಬಾಣಸವಾಡಿ ಸಂತೆಗೆ ಹೋಗಿ "ಕ್ಯಾಪ್ಸಿಕಮ್" ತಂದಿದ್ದಾ?
ಹೀಗೆ ಘಟನೆ ನೆನಪಿಸುತ್ತಿರು..
ಶುಭಾಶೀರ್ವಾದಗಳು...
ಮಲ್ಲಿಕಾರ್ಜುನ್...
ನನ್ನ ಎದುರಿಗೇ ಈ ಘಟನೆ ಆದಾಗ ನನಗೆ ನಗು ತಡೆಯಲಾಗಲಿಲ್ಲ..
ಅದರಲ್ಲೂ ಸತ್ಯ ಆಧ್ಯಾತ್ಮದ ಭಾಷಣ ಶುರು ಹಚ್ಕೊ ಬಿಟ್ಟಿದ್ದ...
ಹೆಬ್ಬಾಳದಿಂದ ಕೋಣನ ಕುಂಟೆಗೆ ಬರುವಷ್ಟರಲ್ಲಿ ಇಬ್ಬರೂ ನಕ್ಕು ನಕ್ಕು ಸುಸ್ತಾಗಿ ಬಿಟ್ಟಿದ್ವಿ...
ಟ್ರಾಫಿಕ್ ಗೊತ್ತೇ ಆಗಲಿಲ್ಲ..
ಪ್ರತಿಕ್ರಿಯೆಗೆ ಧನ್ಯವಾದಗಳು...
ಪರಾಂಜಪೆಯವರೆ...
ಪ್ರಾಣೇಶರು ಹೇಳುತ್ತಾರೆ...
ನಗಲಿಕ್ಕೆ ಕಾರಣ ಹುಡುಕುತ್ತ ಹೋಗಬೇಕಿಲ್ಲವಂತೆ..
ನಮ್ಮ ಕಾಲುಬುಡದಲ್ಲೇ ಇರುತ್ತಂತೆ...
ನಾನು ಪ್ರಾಣೇಶರ ಅಭಿಮಾನಿ...
ನನ್ನ ಅಕ್ಕನ ಮಗಳು.. "ಆಟೊ" ಕಥೆ ನೆನಪಿಸಿದ್ದಾಳೆ..
ಅದು ತುಂಬಾ ಮಜವಾಗಿದೆ..
ನೋಡುತ್ತಾ ಇರಿ...
ಪ್ರೋತ್ಸಾಹ ಹೀಗೆಯೆ ಇರಲಿ...
ಧನ್ಯವಾದಗಳು..
ಶತಾಭಿಶಾ..
ನನ್ನ ಬ್ಲಾಗಿಗೆ ಸುಸ್ವಾಗತ...
ನನ್ನ ಬ್ಲಾಗನ್ನು ಒಬ್ಬರು ಹಿರಿಯರು ತಪ್ಪದೇ ಓದುತ್ತಾರೆ..
ಫೋನ್ ಮಾಡಿ ಪ್ರತಿಕ್ರಿಯೆ ಕೊಡುತ್ತಾರೆ..
ಅವರಿಗೆ ೭೫ ವರ್ಷ..
ಅವರು ಹಿರಿಯ ಜ್ಯೋತಿಷಿ.. ಕೊಡಗಿನವರು...
(ವೆಂಕಟರಮಣ ಭಟ್)
ಅವರಿಗೋಸ್ಕರ ಅಕ್ಷರ ದೊಡ್ಡದಾಗಿ..
ಲೈನ್ ಬಿಡಿಸಿ ಬಿಡಿಸಿ.. ಬರೆಯುತ್ತಿರುವೆ...
ನಿಮಗಾದ ಅನಾನುಕೂಲತೆಗೆ "ಪ್ರಕಾಶಣ್ಣ"ನನ್ನು ಕ್ಷಮಿಸಿ..
ಪ್ರೋತ್ಸಾಹ, ಅಭಿಮಾನ ಹಿಗೇಯೆ ಇರಲಿ...
ನಿಮಗೆ "ಆತ್ಮ" ಇಷ್ಟವಾಯಿತೆ..?
ಧನ್ಯವಾದಗಳು...
ಮನಸು...
ನಮ್ಮ ಸೈಟಿನಲ್ಲಿ "ಪ್ರಜಾಪ್ರಭುತ್ವ" ಇದೆ..
ಅವರು ಸಲುಗೆಯಿಂದ .. ನಮ್ಮೊಂದಿಗೆ ವ್ಯವಹರಿಸುತ್ತಾರೆ..
ಗಾಂಧಿಗೆ ಬಹಳ ಬೇಸರವಾಗಿತ್ತು..
ನೀವೆಂದಹಾಗೆ "ಪರಮಾತ್ಮ" ಕೂಡ ಕೆಲಸ ಮಾಡುತ್ತಿದ್ದ...
ತಾನು ಮುದ್ದಿನಿಂದ ಸಾಕಿದ "ನಾಯಿಮರಿಗೆ" ಹೀಗಾಗಿಬಿಟ್ಟಿತಲ್ಲ..
ಅವನ ನೋವು , ಹತಾಶೆ ಅಷ್ಟೆಲ್ಲ ಕೂಗಿಸಿತು..
ನನಗೆ ಶಿವುರವರ ಬ್ಲಾಗಿನಲ್ಲಿ ಆ"ಟೈಟಲ್" ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ..
ನಿಮ್ಮ ಪ್ರೋತ್ಸಾಹ ಹೀಗೆಯೆ ಇರಲಿ...
ಹೆಣ್ಣುಮಕ್ಕಳು ಪ್ರತಿಕ್ರಿಯಿಸುವದಿಲ್ಲ...
ಮಾತನ್ನು ಸುಳ್ಳಾಗಿಸಿದ್ದಕ್ಕೆ
ನಿಮಗೆ..
ಸ್ಪೆಷಲ್ ಧನ್ಯವಾದಗಳು...
ಜ್ಞಾನ ಮೂರ್ತಿಯವರೆ...
ಗಾಂಧಿ ಪರಮಾತ್ಮ ತೆಗೆದು ಕೊಳ್ಳುವದು ಅಪರೂಪ...
ಅದೂ ನಮ್ಮೆದುರಿಗೆ ಇಲ್ಲವೇ ಇಲ್ಲ..
ಮೊನ್ನೆ ಶನಿವಾರ ನಾಯಿಮರಿಯಿಂದಾಗಿ ತೆಗೆದುಕೊಂಡಿದ್ದನಂತೆ..
ಗಂಧಿಯ ಇನ್ನೊಂದು ಕಥೆಯಿದೆ..
ಇನ್ನೊಮ್ಮೆ ಬರೆಯುವೆ...
ಪ್ರತಿಕ್ರಿಯೆಗೆ ವಂದನೆಗಳು...
ಪ್ರಕಾಶಣ್ಣ,
ಎಂಥಹ ಸಂದಿಗ್ದ ಸ್ಥಿತಿಗೆ ನಮ್ಮನ್ನು ನೀವು ತಂದಿದ್ದಿರ ಅಂದ್ರೆ ನಮ್ಮ ಬರಹಕ್ಕೆ ಯಾವ ಟೈಟಲ್ ಕೊಡುವುದು ಎಂದು ಯೋಚಿಸುವಂತಾಗಿದೆ. ಯಾಕಂದ್ರೆ ನಮ್ಮ ಟೈಟಲ್ ನೆ ನೀವು ಆಹಾರ ಮಾಡಿಕೊಂಡು ಆತ್ಮವನ್ನು ಪರಮಾತ್ಮನನ್ನು ಬೇರೆ ಮಾಡಿದರೆ ಕಷ್ಟ. ಸುಮ್ಮನೆ ತಮಾಷೆಗೆ ಹೇಳಿದೆ. ಯಾವತ್ತಿನಂತೆ ತುಂಬ ಸುಂದರದ ಬರಹ. ಯಥಾ ಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿರ. ಹೀಗೆ ಬರೆಯುತ್ತಿರಿ.
ತಮ್ಮ ಗುರುಮೂರ್ತಿ
ಪ್ರಕಾಶಣ್ಣ
ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಆತ್ಮ, ಗೀತ್ಮ, ಪರಮಾತ್ಮ, ಆಧ್ಯಾತ್ಮ ಗಳ ಜೋಡಣೆ ತುಂಬಾ ಖುಷಿ ಕೊಟ್ಟಿತು. ಆ ಗಾಂಧಿ ಆತನಿಗೆ ಆ ನಾಯಿ ಮೇಲೆ ಇರೋ ಪ್ರೀತಿ ಹಾಗೂ ಕಾರ್ಪೋರೇಶನ್ನವರ ಮೇಲಿರುವ ಕೋಪ ಎಲ್ಲಾ ಚೆನ್ನಾಗಿ ವರ್ಣಿಸಿದ್ದೀರಿ ನಿಮ್ಮ ಬ್ಲಾಗಿ ಗೆ ನನ್ನ ಮೊದಲ ಭೇಟಿ ತುಂಬಾನೇ ಖುಷಿ ಕೊಟ್ಟಿತು. ಬೇಜಾರಲಿದ್ದ ಮನಸನ್ನ ನಗುವಂತೆ ಮಾಡಿತು. ಧನ್ಯವಾದಗಳು ತಮಗೆ.
ಪ್ರಕಾಶಣ್ಣ...
ನೀವು ಗೆಳೆಯರಿಬ್ಬರು(ಶಿವು ಅವರು ಮತ್ತು ನೀವು) ಪರಸ್ಪರ ನಿಮಗೆ ನೀವೇ ಸಮ. ‘ಒಂದೇ ಟೈಟಲ್ ಇಟ್ಟುಕೊಂಡು ವಿಭಿನ್ನ ಭಾವ ಹುಟ್ಟಿಸುವ ಲೇಖನ ಬರೆಯೋಣ’ ಅಂತ ಮಾತಾಡಿಕೊಂಡು ಬರೆದಿದ್ದೀರಿ ಅಂತ ನನ್ನ ಸಂದೇಹ. ರಾಜ್ ಕುಮಾರ್ ಅವರ ಹಳೆಯ ಚಿತ್ರವೊಂದರ ಚೆಂದದ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿಟ್ಟುಕೊಂಡು ನೀವುಗಳು ಹೆಣೆದ ವಿಭಿನ್ನ ಭಾವಗಳ ಎರಡು ಬರಹಗಳು ತುಂಬವೇ ಇಷ್ಟವಾದವು. ಸ್ನೇಹಿತರೆಂದರೆ ನಿಮ್ಮಗಳ ಹಾಗಿರಬೇಕು. ನಿಮ್ಮಿಬ್ಬರಿಗೂ ಧನ್ಯವಾದಗಳು.
ಅಂದಹಾಗೆ, ನನ್ನಮ್ಮ ಚಿಕ್ಕಕ್ಕಿರುವಾಗ ಅವರ ಮನೆಯಲ್ಲಿ (ಅಂದರೆ ನನ್ನ ಅಜ್ಜಿಮನೆಯಲ್ಲಿ) ದ್ದ ಅಡುಗೆ ಭಟ್ಟರು ಸದಾ ಇದೇ ಹಾಡನ್ನು ಹಾಡುತ್ತಲಿರುತ್ತಿದ್ದರಂತೆ. ನಮ್ಮಮ್ಮ ಈ ಹಾಡನ್ನು ಕೇಳಿದಾಗೆಲ್ಲ ನೆನಪಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ ಬೆಳಿಗ್ಗೆಯಿಂದ ಸಂಜೆತನಕ ಒಂದೇ ಹಾಡನ್ನು ಗುನುಗುಡುತ್ತಿದ್ದರೆ ಈಗಲೂ ಹೇಳುತ್ತಾರೆ ‘ಭಟ್ರಂಗೆ ಎಂತಾ ಆ ನಮ್ನಿ ಒಂದೇ ಹಾಡು ಹೇಳ್ತ್ಯೆ’ ಅಂತ ಹೇಳಿ ನಗುತ್ತಿರುತ್ತಾರೆ.
ಅಲ್ಲಾ, ಶೀರ್ಷಿಕೆ ಓದಿ ಒಂದುಸಲ ಕನ್ಫ್ಫ್ಯೂಸ್ ಆಗೋದಿ !ಮೊನ್ನೆ ಮೊನ್ನೆ ಶಿವು ಅವರದ್ದೂ ಇದೇ ಹೆಸರಿನ ಲೇಖನ ಇತ್ತಲ್ಲಾ ಅಂತ.
ನಕ್ಕೂ ನಕ್ಕೂ ಸುಸ್ತಾತು !ಶಿವು ಅವರ ಲೇಖನ ಓದಕಾದ್ರೆ ಮನಸ್ಸಿಗೆ ಬೇಜಾರಾಗಿ ತಲೆಲಿ ಆ ಹಾಡೇ ಸುತ್ತುತಾ ಇತ್ತು. ಈಗ ನಿಮ್ಮ ಬರಹ .. ಹ ಹ ಹಾ.
ಈಗ ಸ್ವಲ್ಪ ಮುಂಚೆ ಪೇಪರ್ ಸರಿಮಾಡಿ ಇಡಕಾದ್ರೆ ಎರಡು ದಿನ ಹಿಂದಿನ ’ ಉದಯವಾಣಿ ’ಯಲ್ಲಿ ಯಾರದ್ದೋ ಫೋಟೋ ಕೆಳಗೆ ಇದ್ದ ಲೈನ್ " ದೇವರು ಶ್ರೀಯುತರ 'ಆತ್ಮ'ಕ್ಕೆ ಚಿರಶಾಂತಿ ನೀಡಲಿ !" ನೆನಪಾಗಿ ನಗು ಹೆಚ್ಚಾಗ್ತಾ ಇದ್ದು .
ಪ್ರಕಾಶಣ್ಣ,
ಎಂತಹೇಳಲೂ ತಿಳೀತಾ ಇಲ್ಲೆ.. ಅದ್ಕೇಯಾ ಇಷ್ಟೇ :) :) :D :D
ಚಿತ್ರಾ...
ನಿಮ್ಮಣ್ಣ ನನ್ನ ಆತ್ಮೀಯ ಸ್ನೇಹಿತ ಕಣಮ್ಮ..!
(ಆತ್ಮದ ಅಪಾರ್ಥ ಬೇಡ)
ಅಣ್ಣನಿಗೆ ಮಾತ್ರ ಪ್ರೀತಿ ಇಟ್ಟು ಬಿಟ್ಟಿದ್ದೀರಾ?
ನಾನು ಇದನ್ನು ಬರೆಯೋದು ಅವರಿಗೆ ಗೊತ್ತಿಲ್ಲ..
ಅವರ ಖುಷಿ ಅವರ ಪ್ರತಿಕ್ರಿಯೆಯಲ್ಲಿ ನೋಡಿ..
ಈ ಆತ್ಮದ ಇನ್ನೊಂದು ಘಟನೆ ಬರಲಿದೆ..
ಅದು ಬಹಳ ಮಜಾ ಇದೆ..
ನೀವು ನಿಮ್ಮ ಬ್ಲಾಗಿನಲ್ಲಿ ಸ್ವಲ್ಪ ಹಾಸ್ಯವನ್ನೂ ಬರೆಯಿರಿ..
ಅದು ನನ್ನ ಕಡೆಯಿಂದ ಪ್ರೀತಿಯಿಂದ ಆಗ್ರಹ..
ಪ್ರೋತ್ಸಾಹ ಹೀಗೆಯೇ ಇರಲಿ..
ಧನ್ಯವಾದಗಳು..
ಪೂರ್ಣಿಮಾ...
ಗಾಂಧಿ ಕಥೆಯಿಂದಾಗಿ ನಮ್ಮ ಆತ್ಮಕ್ಕೆ ಖುಷಿಯಾಯಿತಲ್ಲ..!!
ನೀವು ನಿಮ್ಮ ಬ್ಲಾಗ್ ಬಹಳ ದಿನಗಳಿಂದ ಖಾಲಿ ಬಿಟ್ಟಿದ್ದೀರಿ..
ದಯವಿಟ್ಟು ಬರೆಯಿರಿ..
ಹೀಗೆ ಬರುತ್ತಿರಿ..
ಪ್ರತಿಕ್ರಿಯೆಗೆ ಧನ್ಯವಾದಗಳು..
ಸುನಾಥ ಸರ್...
ಹ್ಹಾ...ಹ್ಹಾ...!
ಹ್ಹಿ..ಹ್ಹೀ..!
ಹ್ಹೋ..ಹ್ಹೋ..!
ನಂಗೆ ಏನು ಹೇಳಬೇಕೊ ಗೊತ್ತಾಗ್ತಾ ಇಲ್ಲ ಸಾರ್...!!
ನನ್ನ ಆತ್ಮಕ್ಕೆ ಖುಷಿಯಾಯಿತು...!!
ಹ್ಹ..ಹ್ಹಾ..!
ಧನ್ಯವಾದಗಳು..
ಕಿಶನ್..
ನಿಮ್ಮ ಆತ್ಮಕ್ಕೆ ಖುಷಿ ಆಯಿತಲ್ಲ...!
ಅದು ನನ್ನ ಆತ್ಮಕ್ಕೂ ಖುಷಿ..!
ಒಟ್ಟಿನಲ್ಲಿ ಆತ್ಮ ಸಂತೋಷ ಮುಖ್ಯ..!!
ಹ್ಹಾ..ಹ್ಹಾ...!
ವಂದನೆಗಳು...
ಗುರುಮೂರ್ತಿಯವರೆ......
ಪರಮಾತ್ಮನಲ್ಲಿ ಆತ್ಮವಿದೆ..
(ಪರಮ + ಆತ್ಮ = ಪರಮಾತ್ಮ..!)
ಗಾಂಧಿಯ ಕಥೆ ಕೇಳಿ..
ನಿಮ್ಮ ಅಂತರಾತ್ಮಕ್ಕೆ ಖುಷಿಯಾಗಿದೆಯಲ್ಲವೇ..?
ಅದು ನಮ್ಮ ಆತ್ಮಕ್ಕೂ ಸಂತೋಷ..
ಪ್ರೋತ್ಸಾಹ ಹೀಗೆಯೇ ಇರಲಿ..
ಧನ್ಯವಾದಗಳು..
ಭಾವನಾಲಹರಿ...
ನನ್ನ ಬ್ಲಾಗಿಗೆ ಸುಸ್ವಾಗತ...
ಮನದ ಬೇಸರ ಓಡಿ ಹೋಯಿತಲ್ಲ..
ತುಂಬಾ ಸಂತೋಷವಾಯಿತು..
ಯಾವಾಗಲೂ ನಗುತ್ತಾ ಇರಿ..
ನನ್ನ ಹಳೆಯ.. ಕಥೆಗಳನ್ನೂ ಓದಿ..
ನಿಮ್ಮ ಬ್ಲಾಗೂ ಚೆನ್ನಾಗಿದೆ.
ಶುಭಾಶಯಗಳು..
ಪ್ರತಿಕ್ರಿಯೆಗೆ ಧನ್ಯವಾದಗಳು
ಬರುತ್ತಾ ಇರಿ..
ಶಾಂತಲಾ..
ನಾನು ಆತ್ಮದ ಕಥೆ ಬರೆದದ್ದು ಶಿವು ರವರಿಗೇ ಗೊತ್ತೇ ಇಲ್ಲ..
ಅವರೂ "ಕನ್ಫ್ಯೂಸ್" ಆದರು..
ಇದು ನಿಜ.. ಒಂದೇ ವಸ್ತುವನ್ನು ಎರಡು ಭಾವದಲ್ಲಿ ನೋಡ ಬಹುದಲ್ಲ..
ಖುಷಿ, ದುಃಖ ಎಲ್ಲದರಲ್ಲೂ ಇರುತ್ತವೆ.. ಅಲ್ಲವಾ..?
ನಿಮ್ಮ ಅಮ್ಮನಿಗೆ "ಗಾಂಧಿಯ ಆತ್ಮ"ದ ಕಥೆ ಹೇಳಿ..
ಮತ್ತೆ ಆ ಹಾಡನ್ನು ಹಾಡುತ್ತಾರ...ನೋಡಿ..?
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರೋತ್ಸಾಹ ಹೀಗೆಯೆ ಇರಲಿ..
ಧನ್ಯವಾದಗಳು..
ಚಿತ್ರಾ..
ನಮ್ಮನೆಯಲ್ಲಿ ಚಪಾತಿ ಸಂಗಡ
"ಆತ್ಮ"ವನ್ನೂ ನಿಷೇಧಿಸಿ ಬಿಟ್ಟಿದ್ದಾರೆ...
ಟಿವಿಯಲ್ಲಿ ಒಂದು ಕ್ರೈಸ್ತ ಗುರುಜಿಯವರ ವಚನಾಮ್ರತ ಬರುತ್ತಿತ್ತು..
"ನಾವು ನಮ್ಮ "ಆತ್ಮವನ್ನು" ಶುದ್ಧವಾಗಿ ಇಟ್ಟುಕೊಳ್ಳಬೇಕು...
ಆತ್ಮ"ಶುದ್ಧವಿದ್ಧರೆ ಮನಶ್ಯಾಂತಿ ದೊರೆಯುತ್ತದೆ..."
ನಮ್ಮನೆ ಟಿವಿಯನ್ನೂ ಆಫ್ ಮಾಡಲಾಯಿತು...
ಹ್ಹಾ...ಹ್ಹಾ...!
ಪ್ರತಿಕ್ರಿಯೆಗೆ ವಂದನೆಗಳು...
ಸರ್..
ವಿಷಾದಿಸಿ..ಅಂತ ಹೇಳಿ ಈಗ ನಾನೇ 'ವಿಷಾದಪಡುತ್ತೇನೆ' ಅಂತ ಹೇಳಬೇಕಾ? (:)
ಶಿವಣ್ಣನಿಗೆ ಮಾತ್ರ ಪ್ರೀತಿ ಇಟ್ಟುಬಿಟ್ಟಿಲ್ಲ..ನಿಮಗೂ ಇದೆ..ಪ್ರೀತಿ ಬತ್ತದ ತೊರೆ..ಪ್ರೀತಿಗೆ ಬರವಿಲ್ಲ. ನಿಮ್ಮ ಮುಂದಿನ ಮಜಾ ಕತೆ ಓದಿ..ಮಜಾ ಉಡಾಯಿಸಕ್ಕೆ ಕಾಯುತ್ತಿರುತ್ತೀವಿ..ಬರೆಯಿರಿ ಸರ್..
-ಚಿತ್ರಾ
ತೇಜಸ್ವಿನಿ...
ನನ್ನ ಮಾವ ಬೆಳಿಗ್ಗೆ ಯಾವಗಲೂ "ಆಧ್ಯಾತ್ಮ" ಟೀವಿ ನೋಡುತ್ತಿರುತ್ತಾರೆ...
ಈಗ ಬಿಟ್ಟು ಬಿಟ್ಟಿದ್ದಾರೆ...
"ಈ ಆಧ್ಯಾತ್ಮ..
ಪರಮಾತ್ಮ... ಎಲ್ಲ ನಮ್ಮಂಥವರಿಗಲ್ಲಪ್ಪ...
ವಯಸ್ಸಾಯಿಯು ಅಂತಾರೆ...!!
ಹ್ಹಾ...ಹ್ಹಾ...!
ಪ್ರತಿಕ್ರಿಯೆಗೆ ವಂದನೆಗಳು...
ಚಿತ್ರಾ...
ಅಭಿಮಾನ, ಪ್ರೋತ್ಸಾಹ ಹೀಗೆಯೇ ಇರಲಿ.. ..
ಸಧ್ಯದಲ್ಲೇ ಆ ಹಾಸ್ಯವನ್ನೂ ಹೇಳುವೆ...!
ಧನ್ಯವಾದಗಳು..
ಆತ್ಮ ಪರಮಾತ್ಮ ಮತ್ತು ಆಧ್ಯತ್ಮ ಲಿನ್ಕು ತುಮ್ಬಾ ಚೆನ್ನಾಗಿ ತಗೂನ್ದು ಬನ್ದಿದ್ದಿರಾ ಒದಿ ನಕ್ಕು ಮಜಾ ಮಾಡೀದ್ವಿ - ವಿನಯ್ / ಮಾಯಾ
ವಿನಯ್ ಸರ್..
ಮಾಯಾ ಮೇಡಮ್..
ನಿಮಗಿಬ್ಬರಿಗೂ ನನ್ನ ಬ್ಲಾಗಿಗೆ ಸುಸ್ವಾಗತ...
ಗಾಂಧಿಯ ಆತ್ಮ, ಪರಮಾತ್ಮ, ಓದಿ..
ನಿಮ್ಮ ಆತ್ಮಕ್ಕೂ ಖುಷಿಯಾದದ್ದು..
ನನ್ನ ಆತ್ಮಕ್ಕೂ ಖುಷಿಯಾಯಿತು...
ಹೀಗೆ ಬರುತ್ತಾ ಇರಿ..
ಧನ್ಯವಾದಗಳು..
ಪ್ರಕಾಶಣ್ಣ, ಆತ್ಮ ಸಾಕ್ಷಿಯಾಗಿ ಹೇಳ್ತಾ ಇದ್ದಿ, ಓದಿ ನಕ್ಕು ನಕ್ಕು ಸುಸ್ತಾತು ....
"ಆತ್ಮೀಯ" ಪ್ರಕಾಶ ಅವರಿಗೆ...
ಎಲ್ಲರೂ ಸಕಾರತ್ಮಕವಾಗಿ ಸ್ಪಂದಿಸುವಂಥ ಲೇಖನ ಕೊಟ್ಟಿದ್ದೀರಿ, ನಕ್ಕು ನಕ್ಕು ಸುಸ್ತಾಯಿತು...
ರಾಜೇಂದ್ರ..
ಆತ್ಮದ ಪರಿಭಾಷೆಯಾಗಿ ಇನ್ನೊಂದಿದೆ..
ಸಧ್ಯದಲ್ಲೇ ಹೇಳುವೆ..
ಇದನ್ನು ಓದಿ ನಿಮ್ಮ ಆತ್ಮಕ್ಕೂ ಖುಷಿಯಾಗಿದ್ದು..
ನನಗೂ ಖುಷಿ..
ದನ್ಯವಾದಗಳು...
ಪ್ರಭುರವರೆ..
ಸಣ್ಣ ಹೆದರಿಕೆ ಇತ್ತು..
ಯಾರಾದರೂ ಹಿರಿಯರು.."ನಕಾರಾತ್ಮಕವಾಗಿ" ಪ್ರತಿಕ್ರಿಯಿಸಿದರೆ..? ಅಂತ
ಹಾಗಾಗಲಿಲ್ಲ..
ನನ್ನಾತ್ಮಕ್ಕೆ ಸಂತೋಷವಾಯಿಯು..
ಗಾಂಧಿ, ಪರಮಾತ್ಮ, ಆತ್ಮವನ್ನು ಖುಷಿಪಟ್ಟಿದ್ದಕ್ಕೆ..
ವಂದನೆಗಳು..
ಪ್ರಕಾಶ್ ಅವರೆ
ನಿಜಕ್ಕೂ ನಿಮ್ಮ ಟೈಟಲ್ ನೋಡಿ ಈಗಾಗಲೇ ಓದಿದ ಬರಹ ಅಂದುಕೊಂಡು ಬಿಟ್ಟಿದ್ದೆ.ನಾನು ಓದಲು ಬರುವಷ್ತರಲ್ಲಿ...
ಇದರ ಬಗ್ಗೆ ಏನೂ ಹೇಳಲಾಗುತ್ತಿಲ್ಲ. ಚೆನ್ನಾಗಿದೆ ಎಂದು ಮಾತ್ರ ಹೇಳಬಲ್ಲೆ.
ಚಂದ್ರಕಾಂತರವರೆ..
ಇದು ಹಾಸ್ಯವಾದರೂ..
ಇಲ್ಲಿ ಒಂದು ನೋವಿನ ಎಳೆಯಿದೆ..
ಪ್ರಶ್ನೆಯಿದೆ...
ಗಾಂಧಿ ಕೇಳಿದ ಪ್ರಶ್ನೆ ನಮ್ಮಲ್ಲೇ ಉಳಿದು ಬಿಡುತ್ತದೆ...
ಖುಷಿಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ..
ಧನ್ಯವಾದಗಳು...
HA!!Ha!! Haaaa!!!!!!Please rename your website name as
"NAGUVA TAANA". Ittige cement is really hard name I think.
ವಾಣಿ...
ಏನು ಮಾಡೋಣ ಹೇಳಿ..
ಈ ಇಟ್ಟಿಗೆ ಸಿಮೆಂಟು ನನಗೆ ಊಟ ಕೊಡುತ್ತಿದೆ..
ಇಟ್ಟಿಗೆ ಸಿಮೆಂಟಿನ ಭದ್ರ ಬುನಾದಿಯ ಮೇಲೆ ...
ನಗುವ ಮನದ ಕಟ್ಟಡ.. ನಿಲ್ಲಲಿ..
ಏನಂತಿರಾ..?
ನಿಮ್ಮ ಸಂತೋಷಕ್ಕೆ..
ಅಭಿಮಾನಕ್ಕೆ
ನನ್ನದೊಂದು
ಸಲಾಮ್...
ನಾಯಿಮರಿಯ ಆತ್ಮದ ಕಥೆ ಅಂತೂ ಪರಮಾತ್ಮನ ದೆಸೆಯಿಂದ ನಿಮಗೆ ತಿಳಿಯಿತೆನ್ನಿ. ಚೆನ್ನಾಗಿದೆ. ನೀವು ಬರೆಯುವ ಸರಳ ಶೈಲಿ ಗೆಳೆಯರೊಡನೆ ಹರಟೆಹೊಡೆದ ಖುಷಿ ಕೊಡತ್ತೆ.
ಸುಪ್ತದೀಪ್ತಿಯವರೆ..
ಗಾಂಧಿಯೋಳಗಿನ ಪರಮಾತ್ಮ ನಮಗೆ
ನಾಯಿಯ ಆತ್ಮದ ವಿಚಾರ ತಿಳಿಸಿತು...
ಅಲ್ಲವಾ..?
ಹ್ಹಾ...ಹ್ಹಾ...!
ಲೇಖನ ಮೆಚ್ಚಿದ್ದಕ್ಕೆ.. ವಂದನೆಗಳು..
ಪ್ರೋತ್ಸಾಹ ಹೀಗೇಯೇ ಇರಲಿ...
Post a Comment