Thursday, February 12, 2009

ಆದೆ.. ನೀ ಅನಿಕೇತನಾ.. ಓ..ನನ್ನ ಚೇತನಾ...


ಚೇತನಾ ನನ್ನಡೇಗೇ.. ಬರುತ್ತಿದ್ದಳು...!

ನನಗೆ ಕೈ.. ಕಾಲು ಬೆವರತೊಡಗಿತು...!

" ಪ್ರಕಾಶಣ್ಣಾ.." ಅಭಿನಂದನೆಗಳು ಅಂದು ಬಿಡ್ತಾಳಾ..?'

ನನಗೆ ಟೆನ್ಷನ್" ಜಾಸ್ತಿಯಾಗತೊಡಗಿತು...

ಅವಳ ಕಣ್ಣುಗಳನ್ನೇ.. ಗಮನಿಸಿದೆ..

ಏನೋ ಹೇಳಬೆಕೆಂಬ ತವಕ.... ಕಣ್ಣುಗಳಲ್ಲಿತ್ತು.......

ಅಷ್ಟರಲ್ಲಿ ಎಲ್ಲಿದ್ದನೋ ನಾಗು "ಪ್ರಕಾಶಣ್ಣ.. ಇಲ್ಲಿ ಬಾ.. ಪ್ರಿನ್ಸಿ ಕರೆಯುತ್ತಿದ್ದಾರೆ" ಅಂದ..

ಬದುಕಿದೇಯಾ ಬಡ ಜೀವವೆ ಅಂದುಕೊಂಡೆ....!

ಕಡೆ ದೌಡಾಯಿಸಿದೆ...

"
ಚೇತನಾಳ' ಆ.. ಸಂದರ್ಭ ತಪ್ಪಿಸಿಕೊಂಡೆ...

ಕ್ಲಾಸಿಗೆ ಹೋಗುವ ಮೂಡ್ ಇರಲಿಲ್ಲ...

ನಾನು ರೂಮಿಗೆ ಸೀದಾ ಬಂದೆ...ನಾಗೂವೂ ಬಂದ..

ನಾನು ಮಾತೇ ಆಡಲಿಲ್ಲ...

ರೂಮಿನಲ್ಲಿ ಎಲ್ಲ ಪಟಾಲಮ್ ಸೇರಿದ್ದರು..

"ಅಲ್ವೋ... ತೆಂಗಿನಾಕಾಯಿ.."ನೀ ಏನೇ ಹೇಳು.. ನಾಗೂ ..

"ಪ್ರಕಾಶಣ್ಣನಿಗೆ" ಹೀಗೆ ಮಾಡಬಾರದಾಗಿತ್ತು..ತ್ಚು..ತ್ಚು..

ಪಾಪ " ಪ್ರಕಾಶಣ್ಣ.."...!

ಬೆಂಕಿಗೆ ತುಪ್ಪ ಹಾಕುವಹಾಗೆ ಲೊಚಗುಟ್ಟಿದ..

"ಪ್ರಿನ್ಸಿಯವರೂ " ಪ್ರಕಾಶಣ್ಣ " ಅಂದ್ರೂ...ಕಣೊ..! ..
''
ಪ್ರಕಾಶಣ್ಣ" ನೋಡಿದ್ರೆ ನಂಗೆ ಅಯ್ಯೋ ಪಾಪ.. ಅನಿಸುತ್ತದೆ...
ಅಲ್ಲ
ಹೇಗಿದ್ದವ ಹೇಗಾಗಿ ಬಿಟ್ಟೆಯಲ್ಲೊ..
ಎಲ್ಲಾ ನಾಗು ನಿಂದ ಆಗಿದ್ದು.. ಹೀಗಾಗ ಬಾರದಿತ್ತು.. ತ್ಚು..ತ್ಚು.."

ಉಮಾಪತಿ ತನ್ನದೂ ...ಸೇರಿಸಿದ...

ನಾನು ಒಳಗೊಳಗೇ ಕುದಿಯುತ್ತಿದ್ದೆ..

ನಾಗುವಿಗೆ ಕೋಪ ಹತ್ತಿತು..

"ಈಗಲೂ ಕಾಲ ಮಿಂಚಿಲ್ಲ ಕಣ್ರೋ.. ಚೇತನಾ "ಪ್ರಕಾಶಣ್ಣ " ಹೇಳದ ಹಾಗೇ ಮಾಡ್ತೀನಿ..
ಬೆಟ್ ಇದೆಯಾ..?"

"ಇಡೀ ಪ್ರಪಂಚಕ್ಕೇ "ಪ್ರಕಾಶಣ್ಣಾ" ಮಾಡಿಬಿಟ್ಟೀದ್ದೀಯಾ..!

ಇನ್ನು "ವಿಜಯಾ" ಕೂಡ.. "ಪ್ರಕಾಶಣ್ಣ " ಅನ್ನೊ ಹಾಗೆ ಮಾಡಿಬಿಡ್ತೀಯಾ..??"


"ನೋಡ್ರೋ .. ಧೈರ್ಯ ಇದ್ದರೆ ಛಾಲೇಂಜಿಗೆ ಬನ್ನಿ.." ನಾಗು ಮತ್ತೆ ಸವಾಲು ಹಾಕಿದ..

ಉಮಾಪತಿ ,ಸೀತಾಪತಿ ಇಬ್ಬರೂ ಅದಕ್ಕೆ ರೆಡಿ ಆದರು..

"ಸರಿ.. ಚೇತನಾ.." ಪ್ರಕಾಶಣ್ಣ" ಅಂತ.. ಹೇಳಿಯೇ ಹೇಳ್ತಾಳೆ..!

ಅದಕ್ಕೆ ನೀನೇನು.. ಮಾಡ್ತೀಯಾ..ನಾಗು..?"


" ಚೇತನಾ " ಪ್ರಕಾಶಣ್ಣ" ಅಂದುಬಿಟ್ಟರೆ ಮೀಸೆ ತೆಗೆಯುತ್ತೇನೆ..!!..."


ನಾಗುವಿಗೆ ಮೀಸೆಯೆಂದರೆ ಬಹಳ ಅಭಿಮಾನ..


"ಲೋ ತೆಂಗಿನ ಕಾಯಿ ನೀವೇನು ಮಾಡ್ತೀರ್ರೋ.. ಹೇಳಿ.."


"ನಾವು.. .. ಮೀಸೆನೂ ತೆಗೆಯುತ್ತೇವೆ..!

ಸಂಗಡ ತಲೆನೂ ನುಣ್ಣಗೆ ಬೋಳಿಸಿ ಕೊಳ್ಳುತ್ತೇವೆ...!!..."


ಇಂಥಹ.. ಭಯಂಕರ ಭೀಷ್ಮ ಪ್ರತಿಜ್ಞೆಗಳಿಗೆ ನಾನು ಸಾಕ್ಷಿಯಾದೆ...

ನನಗೆ ಭಾಷಣದ ತಯಾರಿಯ ಕೆಲಸ ಇತ್ತು..

ನಾನು "ದಿವಾಕರ" ಬೆಳಗಾವಿ ಸ್ಪರ್ಧೆಗೆ ತಯಾರಿ ಮಾಡಲು ಅನುವಾದೆವು...

ಒಳ್ಳೆಯ ತಯಾರಿಯನ್ನೇ .. ಮಾಡಿದೆವು..

"ನಾಗು" ಮತ್ತೆ ಏನು ಮಾಡಬಹುದು..?"

ತಲೆಯಲ್ಲಿ
ಇದೆ ವಿಷಯ ಕೊರೆಯುತ್ತಿತ್ತು...

"ಕೆಟ್ಟ ಕುತೂಹಲ...!

ನನಗೂ, ಅವನಿಗೂ ಭಾವನಾತ್ಮಕ ಸಂಬಂಧ...

ಏನಾದರೂ ಮಾಡಿಯೇ ತೀರುತ್ತಾನೆಂಬ ಭರವಸೆ...ನನಗಿತ್ತು...

ಸ್ಪರ್ಧೆ ಮುಗಿಸಿ ಸಿದ್ದಾಪುರಕ್ಕೆ ಬಂದೆ..

ಅಷ್ಟರಲ್ಲಿ ಎರಡು ದಿನ ಕಳೆದಿತ್ತು......

ಬರುತ್ತಲೆ.. ತೆಂಗಿನ ಕಾಯಿ ಒಂದು ದಪ್ಪನೆಯ ಲೆಟರ್ ತಂದು ಕೊಟ್ಟ....

"ಚೇತನಾ" ಕೊಟ್ಟಿದ್ದಾಳೆ... ನಿನಗೇ ಬರೆದಿದ್ದಾಳೆ ಕಣೊ....

ನಾವೆಲ್ಲ
ಓದಿಯಾಗಿದೆ...! .. ಬೇಜಾರಾಗಬೇಡಪ್ಪ.."
ಅಂದ

ಅವರೆಲ್ಲ ಹಾಗೇನೆ.. ತರಲೆಗಳು...!

ಅವರ ಕೈಗೆ ಪತ್ರ ಸಿಕ್ಕರೆ.. ಓದಿಯೇ ತಂದು ಕೊಡುವ "ಅಭ್ಯಾಸ" ..

ನಾನು ಲಗುಬಗೆಯಿಂದ ಬಿಡಿಸಿದೆ..


"ನಾನು.. " ಏನಂತ " ಸಂಬೋಧಿಸಲಿ.....?

" ಪ್ರಕಾಶೂ "..," ಪ್ರಕಾಶಣ್ಣಾ "....," ಪ್ರಕಾಶ "..!...!

ಏನು ಹೇಳಿದರೇನು....?

ನನ್ನೊಳಗಿನ ಭಾವ ಮಹತ್ವವಲ್ಲವೇ..?

ಇಬ್ಬರಿಗೂ.. ಕೆಟ್ಟ ಭಾವನೆ.." ಇಲ್ಲವೆಂದಮೇಲೆ....

ಕೂಗಿ.. ಕರೆಯುವ... ಹೆಸರಲ್ಲೇನಿದೆ..?

ನಾಗು ..ನನಗೆಲ್ಲ ಹೇಳಿದ್ದಾನೆ...

ನಿನ್ನ ಆಶಯ ನನಗೆ ಖುಷಿಯಾಗಿದೆ...

ನನಗೆ ನಿಮ್ಮ ಗೆಳೆಯರು.., ಗೆಳೆತನ ಕಂಡು ಹೊಟ್ಟೆಕಿಚ್ಚಾಗುತ್ತಿದೆ...

ನಿಮ್ಮೊಡನೆ ನನ್ನನ್ನೂ ಸೇರಿಸಿ ಕೊಳ್ಳಿ...

ಗೆಳತಿಯಾಗಿ ನಾನೂ ಮೌನವಾಗಿ...ನಿಮ್ಮೊಡನೆ.. . ಇರುವೆ...

ಆದರೆ.. .. ಸಮಾಜ ನಮ್ಮ ಸಂಬಂಧಕ್ಕೆ ಒಂದು ಹೆಸರು ಕೇಳುತ್ತಲ್ಲಾ..

ನಾನು ನಿನಗೆ "ಪ್ರಕಾಶಣ್ಣ" ಅಂದು ಹೇಳಲಾ..?

ಅಣ್ಣ ತಂಗಿಯ ಸಂಬಂಧವನ್ನು ಮೀರಿದ ಸ್ನೇಹದ ಭಾವ ನಮ್ಮದಾಗಲಿ....

ಗೆಳೆಯ, ಗೆಳತಿಯ ಭಾವಕ್ಕೂ ಮೀರಿದ ಅನುಬಂಧ ನಮ್ಮದಾಗಲಿ...

ಇದಕ್ಕೆ ಹೆಸರು, ಬಂಧನದ ಗೊಡವೆ ಬೇಕಿಲ್ಲ...

ಒಂಟಿಯಾದ ನನಗೆ ಜೀವದಲ್ಲಿ ನಿಮ್ಮ ಸ್ನೇಹ ಬೇಕು....

ಆದರೆ ಗೆಳೆಯಾ...

ನಾನು ನಿನ್ನ ಹಾಗೆ ಮನಬಿಚ್ಚಿ ಭಾವನೆ ಹೇಳಿಕೊಳ್ಳಲಾರೆ..

ನಿಮ್ಮಂತೆ ದೊಡ್ಡದಾಗಿ ನಕ್ಕು, ಕೂಗಿ,..

ಕೇಕೆ ಹಾಕಿ..ನಗಲಾರೆ..

ಮಾತನಾಡಲಾರೆ..

ಪುಟ್ಟಹಕ್ಕಿಗೂ ಚಿಲಿಪಿಲಿ ರಾಗವ ಕೊಟ್ಟ ... ಭಗವಂತ...

ನನಗೆ ಧ್ವನಿ ಕೊಡಲೇ ಇಲ್ಲ..

ನಾನು ಮೂಕ ಹಕ್ಕಿ....ಹುಟ್ಟಿನಿಂದ...!!"


ಚೇತನಾ ಮೂಕಳಾ..? ಮೂಗಿಯಾ..?


ಅಯ್ಯೊ ದೇವರೆ..!!..

ಇದೆಂಥಹ ಅನ್ಯಾಯ..!

ನನಗೆ ಕಣ್ಣಲ್ಲಿ ನೀರಾಡಿತು....

ಅದಕ್ಕೇ ಅವಳ ಕಣ್ಣುಗಳು ಅಷ್ಟು ಸುಂದರವಾಗಿದೆ..!

ಮಾತನಾಡುತ್ತದೆ...., ನಗುತ್ತದೆ...!


"ಗೆಳೆಯಾ.. ನನ್ನಮ್ಮ ಕೂಡ ..

ನನ್ನ
... ಕಣ್ಣೀರು ನೋಡಿಯೇ ನನ್ನ ಅಳುವನ್ನು ಕೇಳುತ್ತಿದ್ದಳು..!

ಸಮಧಾನ ಮಾಡುತ್ತಿದ್ದಳು...!

ನನ್ನ ನಗುವನ್ನು ...

ನನ್ನ
ಕಣ್ಣಲ್ಲಿ ಕಂಡು ಖುಷಿ ಪಡುತ್ತಿದ್ದಳು...!"


ನನಗೆ ಮುಂದೆ ಓದಲಾಗಲಿಲ್ಲ..ಭಾವೋದ್ವೇಗಕ್ಕೆ ಒಳಗಾಗಿದ್ದೆ..

ನಾಗುವಿನ ಭುಜಕ್ಕೆ ಒರಗಿದೆ...

ನಾಗು ನನ್ನ ಭುಜ ತಟ್ಟಿ ಸಮಾಧಾನ ಪಡಿಸಿದ..


ಆದರೆ ತರಲೆ ತೆಂಗಿನ ಕಾಯಿ...

"ನಾವೇನೂ ತಲೆ ಮೀಸೆ ಬೋಳಿಸುವ ಹಾಗಿಲ್ಲ....!

ನಾವು
ಬಚಾವಾದ್ವಿ,,!...

ಅವಳು.. "ಪ್ರಕಾಶಣ್ಣ : ಅಂದುಬಿಟ್ಟಳಲ್ಲ.."


ತೆಂಗಿನಕಾಯಿ ವಾತಾವರಣ ತಿಳಿಗೊಳಿಸುವ ಪ್ರಯತ್ನ ಮಾಡಿದ..
ಅವರೆಲ್ಲ ಹಾಗೆಯೇ.. ನನ್ನನ್ನು ನಗಿಸಲು .. ಹಾಗೆ ಮಾಡುತ್ತಾರೆ...

""ಎಲ್ರೋ.. ಯಾವಾಗ ಹೇಳಿದ್ದಾಳೋ.. ?

ಯಾರು
ಕೇಳಿದಾರ್ರೋ...?

ಪ್ರಕಾಶಣ್ಣ ಅಂದಿದ್ದನ್ನು ನಾನೇನೂ ಕೇಳಿಲ್ಲವಪ್ಪ..

ಅವಳು
ಹಾಗೇ ಎಲ್ಲಿ ಹೇಳಿದ್ದಾಳೆ..?

ಪ್ರೂವ್ ಮಾಡ್ರೊ..!"

ನಾಗೂವೂ ಶುರು ಹಚ್ಚಿಕೊಂಡ....

ಅವರಲ್ಲಿ
ಮತ್ತೆ ತಗಾದೆ.. ಶುರುವಾಯಿತು...


ಯಾರೂ ಏನೂ ಮಾಡಿಕೊಳ್ಳಲಿಲ್ಲ...

ಏನೂ
ಬೋಳಿಸಿಕೊಳ್ಳಲಿಲ್ಲ..


ಅವಳು ನಮ್ಮ ಗುಂಪಿನಲ್ಲಿ ಗೆಳತಿಯಾದಳು..

.. ಸಹೋದರಿಯಾದಳು....!

ನನ್ನ ಸಹಪಾಠಿಯನ್ನೇ ಪ್ರೇಮಿಸಿ ಮದುವೆಯಾದಳು....

.. ಅವಳ.. ಮದುವೆಗೆ ನಾವೇ ಓಡಾಡಿದ್ದೇವೆ...

ಅವಳ ಸಹೋದರರ.. ಹಾಗೆ....

ಜನರೆಲ್ಲ
ಹಾಗೇ ಅಂದರು...


ನಾನು ಜೋಕ್ ಹೇಳುತ್ತಿದ್ದೆ.... ಅವಳು ಕೇಳುತ್ತಿದ್ದಳು...

ಅವಳಿಗೆ ನಗು ಬಂದಿದೆ..!

ಖುಷಿಯಾಗಿದೆ ...!

ಅಂದು ಕೊಳ್ಳುತ್ತಿದ್ದೆ.....

ಅವಳು ಮೌನವಾಗಿ ನಗುತ್ತಿದ್ದಳು... ಮಾತನಾಡುತ್ತಿದ್ದಳು...!

ಅವಳ ಕಿರು ನಗುವಿನಲ್ಲಿಯೇ.. ಏನೋ.. ..ಹೇಳುತ್ತಿದ್ದಳು...!

ಅವಳ ಎಲ್ಲ ಭಾವ ಕಣ್ಣಲ್ಲೇ ವ್ಯಕ್ತವಾಗುತ್ತಿತ್ತು......

ಸುಂದರ ಕಣ್ಣುಗಳು ಇನ್ನೂ ನನ್ನ .. ಹ್ರದಯದಲ್ಲಿದೆ...

ಚೇತನಾ ನನ್ನಲ್ಲಿ ಯಾವಾಗಲೂ ಸ್ಪೂರ್ತಿಯಾಗಿದ್ದಾಳೆ...

ಬೇಜಾರಾದಾಗ.. ದುಃಖವಾದಾಗ..

ಮನದ ಖುಷಿಯ ಚಿಲುಮೆಯಾಗಿದ್ದಾಳೆ...

ಹೆಸರೇ..ಇಲ್ಲದ.. ಆ....

"
ಭಾವ.. ಸಂಬಂಧಕ್ಕೆ.. " ಎಲ್ಲೆಯುಂಟೆ..?



63 comments:

Geetha said...

hello sir,
ಕೆಲವು ದಿನ ಬ್ಲಾಗ್ ನೋಡಿರಲಿಲ್ಲ, ಏನು ಸಿಕ್ಕಾಪಟ್ಟೆ ನಗೆ ಬರಹಗಳನ್ನು ಬರೆದ್ ಹಾಕಿಬಿಟ್ಟಿದೀರ :) ಬಹಳ ಚೆನ್ನಾಗಿದೆ ನಿಮ್ಮ ಕಾಲೇಜು ಕಥೆಗಳು...ಹಹ....ನಮ್ಮ ಕಾಲೇಜಲ್ಲಿ ಹುಡುಗರೆಲ್ಲ ಗೆಳೆಯರೆ , ಆದ್ರೆ ಪಿರಿ ಪಿರಿ ಮಾಡುವ ಹುಡುಗರು ಮಾತ್ರ "ಅಣ್ಣಾವ್ರು"!!

Unknown said...

ಒಳ್ಳೆ ಭಾವನಾತ್ಮಕ ಕಥೆ ಆಯಿತು ಇದು
ಬಹಳ ಚೆನ್ನಾಗಿದೆ.. :)

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್ ,
ಹಿಂದಿನ ನಿಮ್ಮ ಲೇಖನ ಓದಿ ತುಂಬಾ ನಕ್ಕಿದ್ದೆ, ಈಗ ಅನ್ನಿಸ್ತಿದೆ ಯಾಕಾದರೂ ಯಾವಾಗ ಮುಂದುವರೆಸುತ್ತಿರೋ ಅಂತ ಕೇಳಿದೆ ಅಂತ. ಬರಹವೇನೋ ನಿಜಕ್ಕೂ ಚೆನ್ನಾಗಿದೆ, ಬರಹದ ಒಳ ಹೂರಣ, ಕರಳು ಕಿವುಚುತ್ತದೆ. ಹೆಚ್ಚೇನು ಇದರ ಬಗ್ಗೆ ಬರೆಯಲು ಶಕ್ತನಲ್ಲ, ಬರಿಯ ಬರಹವಾದರೆ ಓದಿ ಆನಂದಿಸಬಹುದು, ಬದುಕು ಅನುಭವವಾಗಿರುವದರಿಂದ ಕಸಿವಿಸಿಯಾಗುತ್ತದೆ. ಎಲ್ಲ ಸುಖಾಂತ್ಯವಾಗಿದ್ದು ತುಂಬಾ ಸಂತಸ ತಂದಿತು.
-ರಾಜೇಶ್ ಮಂಜುನಾಥ್

NiTiN Muttige said...

ಅಬ್ಬಾ!! ಅಂತೂ ಪ್ರಕಾಶಣ್ಣ ಅಂಥ ಹೇಳಲಾ ಅಂಥಾ ಪತ್ರದಲ್ಲಿ ಹೇಳೆ ಬಿಟ್ಟಳಲ್ಲ!!! ಕಾಲೇಜು ದಿನಗಳ "ರಹಸ್ಯ" ಬಿಡಿಸಿಟ್ಟಿದ್ದಿರಾ!! ಆ ಭಾವ ಸಂಬಂಧಕ್ಕೆ ಬೆಲೆ ಕಟ್ಟಲಸಾಧ್ಯ ಅಲ್ಲವೇ "ಪ್ರಕಾಶಣ್ಣ"!!

Kishan said...

excellent writing. Subject is very nice indeed, but the way you presented the dialogues are too good. However, the interesting and nice thing about this writing is that during this entire episode, there is absolutely no spoken word from you, and of course from Chetana!! Outstanding ....!!!! Very well matched and it shows the underlying essence of what you wanted to say.

shivu.k said...

ಪ್ರಕಾಶ್ ಸರ್,

ಇದು ನಿಜಕ್ಕೂ ವ್ಯಾಲೆಂಟೈನ್ಸ್ ಡೇ ಗಿಫ್ಟು!!

ಏನೋ ನಿರೀಕ್ಷಿಸಿದ್ದ ನಮಗೆಲ್ಲಾ ಈ ಲೇಖನದ ದಿಕ್ಕೂ ಈ ರೀತಿ ಬದಲಾದದ್ದು ನಿಜಕ್ಕೂ ಮಾತ್ರ ನಿಮ್ಮ ಶೈಲಿಯ ಕೊನೆ ಪಂಚ್.....

ಪಕ್ಕದಲ್ಲಿ ನಿಂತು ಎಲ್ಲವೂ ಸಿನಿಮಾ ನೋಡಿದ ಹಾಗೆ, ನೋಡುತ್ತಾ, ಅದರ ಎಲ್ಲಾ ಭಾವಗಳನ್ನು[ಭಾವಗಳನ್ನು ವರ್ಣಿಸಲಾರೆ]ಅನುಭವಿಸಿದಂತಾಯಿತು.....

ಇಂಥ ಭಾವನೆಗಳೇ ಅಲ್ಲವೇ ನಮ್ಮನ್ನೆಲ್ಲಾ ಜೀವನ್ಮುಖಿ ಬದುಕಿನತ್ತ ಸಾಗಲು ಉತ್ಸಾಹದಿಂದ ಕೈಯಿಡಿದು ನಡೆಸುತ್ತಿರುವುದು....ಇಂಥ ಪ್ರೀತಿಯನ್ನು ಅನುಭವಿಸಿದ ನಿಮಗೆ ವ್ಯಾಲೆಂಟೈನ್ಸ್ ಡೇ ಅಭಿನಂದನೆಗಳು!!

Geetha said...

ಓಹ್ ಸರ್,
ನನ್ನ ಮೊದಲ ಕಾಮೆಂಟ್ ನಿಮ್ಮ ಬರಹದ ಮೊದಲ ಭಾಗಕ್ಕೆ,ಅಲ್ಲಿ ಬರೆಯಲು ಇಲ್ಲಿ ಬರೆದುಬಿಟ್ಟಿದ್ದೇನೆ... ಈ ಭಾಗ ಬರಿ ನಗೆ ಬರಹವಲ್ಲ, ಚಿಂತನೆಗೆಹಚ್ಚುವಂತಹದ್ಡು, ಚೆನ್ನಾಗಿ ಬರೆದಿದ್ದೀರಿ

Dr.Gurumurthy Hegde said...

Prakashanna, adhbhuta, odale bhari khushi agutte
Keep wiritng

Ittigecement said...

ಗೀತಾರವರೆ...

ಬಹಳ ದಿನಗಳ ನಂತರ ಬರುತ್ತಿದ್ದೀರಾ..!

ಇದು ಮೊದಲ ಬರಹಕ್ಕೆ ಪ್ರತಿಕ್ರಿಯೆನಾ..?

ನೀವು ಎಲ್ಲಿಯೇ ಬರೆದರೂ...

ನನಗದು ಅಮೂಲ್ಯ...

ನಿಮ್ಮ ಪ್ರೋತ್ಸಾಹದ ಒಂದು ನುಡಿ ..

ನನಗೆ ಇನ್ನೂ ಬರೆಯ ಬೇಕೆಂಬ ಉತ್ಸಾಹ ತರುತ್ತದೆ...

ಪಿರಿ, ಪಿರಿ ಮಾಡುವ ಹುಡುಗರೆಲ್ಲ "ಅಣ್ಣಾವ್ರು"

ಚೆನ್ನಾಗಿದೆ ನಿಮ್ಮ ಐಡಿಯಾ..

ನಾನು ಏನೂ ಇಲ್ಲದೆ ಇಡಿ ಕಾಲೇಜಿಗೆ ಅಣ್ಣನಾಗಿ ಬಿಟ್ಟಿದ್ದೆ"
ಸಾರ್ವತ್ರಿಕವಾಗಿ..

ಒಬ್ಬಳಾದರೂ "ಗೆಳತಿಯಾಗಿ" ಇರಬಾರದೆ..?

ಬಯಸಿದರೂ ಸಿಗದಂತಹ..
"ಮೌನ ಗೆಳತಿ" ಸಿಕ್ಕಿದ್ದಳು...

ನಮ್ಮ ಸ್ನೇಹ ತುಂಬಾ ಚೆನ್ನಾಗಿತ್ತು..

ಪ್ರತಿಕ್ರಿಯೆಗೆ ಧನ್ಯವಾದಗಳು...

ಮನಸು said...

ಪ್ರಕಾಶ್ ಸರ್,

ನಿಮ್ಮ ಕಥೆ ತುಂಬ ಚೆನ್ನಾಗಿದೆ... ಸ್ನೇಹಕ್ಕೆ ಹೆಣ್ಣಾಗಲಿ, ಗಂಡಾಗಲಿ ಭೇದವಿಲ್ಲ... ಸ್ನೇಹ ಚಿರಾಯು, ಸ್ನೇಹ ಜೀವನ ಮಧುರ, ಅಮರ ಅದು ಅನುಭವಿಸಿದವರೇ ಧನ್ಯರು..

ನಾನು ಕೂಡ ನಿಮ್ಮ ಹಾಗೆ ಒಳ್ಳೆ ಸ್ನೇಹಿತರನ್ನು ಪಡೆದಿದ್ದೇನೆ... ಇಂದಿಗು ನಾವು ಹಾಗೇ ಇದ್ದೇವೆ... ಒಂದೆ ಮನೆಯವರಾಗೆ...

ವಂದನೆಗಳು..

ಸುಧೇಶ್ ಶೆಟ್ಟಿ said...

ಪ್ರಕಾಶಣ್ಣ...

ಏನು ಹೇಳಬೇಕು ಅ೦ತ ಗೊತ್ತಾಗುತ್ತಿಲ್ಲ. ಚೇತನಾರ೦ತಹ ಗೆಳತಿಯನ್ನು ಪಡೆದ ನೀವು ಭಾಗ್ಯವ೦ತರೋ ಅಥವಾ ನಿಮ್ಮ೦ತಹ ಮಿತ್ರರನ್ನು ಪಡೆದ ಚೇತನಾ ಭಾಗ್ಯವ೦ತೆಯೋ ಗೊತ್ತಾಗುತ್ತಿಲ್ಲ. ನಿಮ್ಮ ಸ್ನೇಹ ಹೀಗೆ ಇರಲಿ ಎ೦ದು ಹಾರೈಸುವೆ.

ಇ೦ತಹ ಬರಹಗಳನ್ನು ಓದುತ್ತಿದ್ದರೆ ಬದುಕನ್ನು ಎದುರಿಸುವ ಛಲ ಮೂಡಿ ಬರುತ್ತದೆ.

ವಿನುತ said...

ಮನದ ಮೂಲೆಯಲೆಲ್ಲೋ ಎದ್ದು ನಿಂತಿದ್ದ ಸಂಶಯದ ಭೂತವನ್ನು, ನೀನು ಈ ಬಾರಿ ಗೆಲ್ಲಲಾರೆ ಎಂದು ಹೇಳಿ ಕೂರಿಸಿದ್ದೆ. ಆದರೇನು, ವಿಧಿಯ ಮೀರಿದವರುಂಟೆ?

ಭಾವಲೋಕದೊಳಗೊಂದು ಕಿರುಪಯಣಕ್ಕೆ, ನಿಮಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಚಂದದ ಬರಹಕ್ಕೆ ಅದ್ಭುತವಾದ ಟೈಟಲ್ ಕೊಟ್ಟಿದ್ದೀರಿ. ಅನಿಕೇತನವೆಂದರೆ ಎಲ್ಲವನ್ನು ಮೀರಿದ್ದು ಎಂದರ್ಥ.ನಿಮ್ಮ ಸಂಬಂಧವೂ ಹಾಗೇ ಅಣ್ಣ,ತಂಗಿ ಎಂಬ ಹೆಸರಿರಿಸುವ ಸಂಬಂಧವನ್ನು ಮೀರಿದಂತಹದ್ದು. ನೀವು ಅದೃಷ್ಟವಂತರು ಮತ್ತು ಹೃದಯವಂತರು.

Ittigecement said...

ವಿಜಯ್...

ಮೂಕರ ಬವಣೆ ಅರಿತಂತಾಯಿತು...
ಅದು ಬಹಳ ಕಷ್ಟ..

ನಮ್ಮಲ್ಲಿಯ ಭಾವನೆ ಹೇಳಿ ಕೊಳ್ಳುವದೇ ಬಹಳ ಕಷ್ಟ..

ಅದರಲ್ಲೂ ಮಾತು ಬರಲ್ಲ ಅಂದರೆ ಇನ್ನೂ ಕಷ್ಟ..

ಬಹಳ ತಾಳ್ಮೆ ಬೇಕು..

ಅವರ ಭಾವನೆ ನಾವು ಅರ್ಥ ಮಾಡಿಕೊಂಡಗ ಅವರಲ್ಲಿ ಆಗುವ

ಮುಖಭಾವನೆಯ ಹರ್ಷ.. ಬಹಳ ಚಂದ..

ಮೆಚ್ಚಿದ್ದಕ್ಕೆ ಧನ್ಯವಾದಗಳು..

Ittigecement said...

ರಾಜೇಶ್...

ಒಮ್ಮೆ...
ಮೂಕರೊಂದಿಗೆ ಸ್ನೇಹ ಮಾಡಿನೋಡಿ.. ..

ನೀವು ಮೌನವಾಗಿಯೇ ಎಷ್ಟು ಮಾತನಾಡುತ್ತೀರಿ..
ಎಷ್ಟು ಆನಂದಿಸುತ್ತೀರಿ..
ಹೆಚ್ಚಾಗಿ ಅವರು ಅಲಕ್ಷಿತರು..
ಅವರಲ್ಲಿ ಆ ಭಾವನೆ ಇರುತ್ತದೆ..

ನೀವು ಖುಷಿಯಿಂದ ಮಾತಾಡಿದರೆ ಅವರ ಪ್ರೀತಿಯ ಭಾವ..

ಶಬ್ಧದಲ್ಲಿ... ವರ್ಣಿಸಲು ಆಗುವದಿಲ್ಲ..

ಧನ್ಯವಾದಗಳು..

Ittigecement said...

ನಿತಿನ್ ರವರೆ..

ನಿಜ ಆ ಸ್ನೇಹ ಸಂಬಂಧಕ್ಕೆ ಬೆಲೆ ಕಟ್ಟಲಾಗುವದಿಲ್ಲ.

ಭಾವ ಸಂಬಂಧಗಳೇ ಹಾಗೆ..

ಸಿಕ್ಕಿದಾಗ ಬಿಡಬಾರದು..

ಗಟ್ಟಿಯಾಗಿ ಹಿಡಿದು ಕೊಂಡು ಬಿಡಬೇಕು..

ಬಿಟ್ಟರೆ ಮತ್ತೆ ಸಿಗುವದು ಕಷ್ಟ..

ಧನ್ಯವಾದಗಳು.. ನಿಮಗೆ..

Ittigecement said...

ಕಿಶನ್..

ಬರವಣಿಗೆಯಲ್ಲಿ ಸೀಮಿತ ಶಬ್ಧಗಳಲ್ಲಿ ಅನುಭವದ ಭಾವಗಳನ್ನು..
ವಿವರಿಸುವದು ಕಷ್ಟ ..
ಇದು ನನ್ನ ಭಾವನೆ..

ಇದರಲ್ಲಿ ಸಫಲನಾಗಿದ್ದೇನೆ ಅಂದರೆ ..
ಬಹಳ ಖುಷಿಯಾಗುತ್ತದೆ..

ನಿಮ್ಮ ಪ್ರೋತ್ಸಾಹ ಹೀಗೆಯೆ ಇರಲಿ..

ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು..

Ittigecement said...

ಶಿವು ಸರ್..

ನಮ್ಮ ಜೀವನವನ್ನೂ ನಾವು ಮೂರನೆಯವರಾಗಿ ನೋಡ ಬೇಕಂತೆ..
ಘಟನೆಗಳನ್ನೂ..ಸಹ..

ಆಗ ಚೆನ್ನಾಗಿ ಅನುಭವಿಸಬಹುದಂತೆ..
ಆನಂದಿಸ ಬಹುದಂತೆ..

ನಿಮ್ಮ ಪ್ರೋತ್ಸಾಹ , ಬೆಂಬಲ ಹೀಗೆಯೇ ಇರಲಿ..

ಹ್ರದಯ ಪೂರ್ವಕ ವಂದನೆಗಳು..

Ittigecement said...

ಗೀತಾರವರೆ..

ಮೊದಲೇ ಹೇಳಿದ ಹಾಗೆ ನಿಮ್ಮ ಪ್ರತಿಕ್ರಿಯೆ ನನಗೆ ಬಹಳ ಅಮೂಲ್ಯ..

ನಮಗೆ ಎಲ್ಲ ಅಂಗಾಂಗ ಸರಿ ಇದ್ದುದರಿಂದ ಅದರ ಬೆಲೆ ಗೊತ್ತಾಗುವದಿಲ್ಲ..

ಒಮ್ಮೆ ಮೂಕರ ಸ್ನೇಹ ಮಾಡಿ ನೋಡಿ..

ಬಹಳ ಭಾವುಕರಾಗಿರುತ್ತಾರೆ..

ಭಾವನೆಯನ್ನು ವ್ಯಕ್ತಪಡಿಸಲು ಬಹಳ ಹೆಣಗುತ್ತಾರೆ..

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

Ittigecement said...

ಗುರುಮೂರ್ತಿಯವರೆ..

ಗಂಡು ಹೆಣ್ಣಿನ ಗೆಳೆತನ ಬಹಳ ಸೂಕ್ಷ್ಮ..

ಅದೂ ನಮ್ಮ ಸಮಾಜದಲ್ಲಿ..

ಅವಳು ಮೂಕಿಯಾಗಿದ್ದರಿಂದ.. ಅವರ ಮನೆಯವರೂ ..

ನಮ್ಮನ್ನು ಒಪ್ಪಿದರು...

ನಮಗೆ ಸ್ನೇಹದಿಂದ ಇರಲು ಸಾಧ್ಯವಾಯಿತು..

ಆ ಒಡನಾಟದ ಬಗೆಗೆ ಬರೆದಷ್ಟೂ ಸಾಲದು...

ನಾನೇ "ಭಾಗ್ಯವಂತ" ಅಂದು ಕೊಳ್ಳಲೇ...?

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ಧನ್ಯವಾದಗಳು..

PaLa said...

ಒಳ್ಳೆ ಕ್ಲೈಮಾಕ್ಸ್

ಚಿತ್ರಾ ಸಂತೋಷ್ said...

"ನಮ್ಮೆಲ್ಲಾ ದೌರ್ಬಲ್ಯ ನ್ಯೂನತೆಗಳೊಂದಿಗೆ ನಮ್ಮನ್ನು ಪ್ರೀತಿಸುವವರು, ಆದರಿಸುವವರು ನಿಜವಾದ ಗೆಳೆಯರು"..ಎಲ್ಲೋ ಓದಿದ ಮಾತು. ಚೇತನಾಗೆ ಅಂಥಹ ಉತ್ತಮ ಗೆಳೆಯ ನೀವಾಗಿದ್ದೀರಿ. ನಿಮ್ಮ ಹಿಂದಿನ ಬರಹದಲ್ಲಿದ್ದ ಕುತೂಹಲಕ್ಕೆ ಇವತ್ತು ಬೆಳ್ಳಂಬೆಳಿಗ್ಗೆ ಬಂದು ನಿಮ್ಮ ಬ್ಲಾಗ್ ತೆರೆದೆ..ರಾಶಿಗಟ್ಟಲೆ ಕೆಲಸ ಇದ್ರೂ, ನಿಮ್ಮ ಬ್ಲಾಗಲ್ಲಿ ಏನಿದೆ ಅನ್ನುವ ಬೆಟ್ಟದಷ್ಟು ಕುತೂಹಲ ಮನಸ್ಸಲ್ಲಿತ್ತು. ಸಂಬಂಧಗಳಿಗೆ ಯಾವತ್ತೂ ಹೆಸರಿಡಬಾರದು..ಅದೊಂದು ಪ್ರೀತಿಯ ಸಂಬಂಧವಷ್ಟೇ ಆಗಿರಬೇಕು ಅನ್ನೋದು ನನ್ನದೂ ಅಭಿಪ್ರಾಯ. ಈ ಬರಹ ನಂಗೆ ತುಂಬಾನೇ ಇಷ್ಟವಾಯಿತು ಸರ್...ನಿಜವಾಗಲೂ ಈ ಶೀರ್ಷಿಕೆ ಕೂಡ ಇದಕ್ಕೆ ಹೇಳಿಮಾಡಿಸಿದಂತಿದೆ. ನಿಮ್ಮ ಪ್ರತಿ ಲೇಖನ ನೋಡಿ ನಕ್ಕು ನಕ್ಕು ಹಣ್ಣಾಗುತ್ತಿದ್ದ ನಾನು ಇಂದು ಅತ್ತು ಅತ್ತು ನೀರಾಗಿದ್ದೀನಿ. ..ನಿಮ್ಮ ಸ್ನೇಹನೂ 'ಅನಿಕೇತನ'ವಾಗಲಿ..

-ಚಿತ್ರಾ

PARAANJAPE K.N. said...

ಪ್ರಕಾಶರೇ,
ಸ್ನೇಹ, ಗೆಳೆತನಗಳ ಬಾ೦ಧವ್ಯಕ್ಕಿ೦ತ ಮಿಗಿಲಾದದ್ದು ಇಲ್ಲ.
ಉತ್ತಮ ಬರಹ.

Harisha - ಹರೀಶ said...

ಪ್ರಕಾಶಣ್ಣ, ಪ್ರೈಮರಿ ಸ್ಕೂಲಿನಲ್ಲಿ ನನ್ನ ಆತ್ಮೀಯ ಗೆಳೆಯನೊಬ್ಬ ಮೂಕನಾಗಿದ್ದ.. ಈ ಕಥೆ ಕೇಳಿ ಅವನ ಜೊತೆ ಕಳೆದ ದಿನಗಳೆಲ್ಲ ನೆನಪಾದವು... Those were the golden days! :-(

Umesh Balikai said...

ಓದಿ ತುಂಬಾ ಭಾವುಕನಾಗಿಬಿಟ್ಟೆ. ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನಿಮ್ಮ ಸ್ನೇಹ ಸದಾ ಹೀಗೆಯೇ ಹಸಿರಾಗಿರಲಿ.

Santhosh Rao said...

ಕೊನೆಗೂ ಪೂರ್ತಿ ಕಥೆ ಹೇಳಿದಕ್ಕೆ ಧನ್ಯವಾದಗಳು.. ಹೃದಯಸ್ಪರ್ಶಿ ಬರಹ ... ಯಾಕೋ ಇದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡಲು ಇಷ್ಟ ಪಡಲ್ಲ

sunaath said...

ನಿಮ್ಮ ಲೇಖನ ಓದಿ, ಕೈಲಾಸಮ್ ಅವರ ಕವನವೊಂದು ನೆನಪಿಗೆ
ಬಂದಿತು:
The raft of humour
Often sails
From shoals of smiles
To seas of tears.
ರಾಜರತ್ನಮ್ ಇದನ್ನು ಕನ್ನಡಕ್ಕೆ ಹೀಗೆ ಅನುವಾದಿಸಿದ್ದಾರೆ:

ಕಿರಿಯಾಳದ ನಗೆನೀರಿನ ಮೇಲೆ
ತಿರುಗಾಡುತ ಬಹು ವೇಳೆ
ಕಣ್ಣೀರಿನ ಕಡಲಿನ ಪಾಲು
ಹಾಸ್ಯದ ಹರಿಗೋಲು!

ಚಿತ್ರಾ said...

ಪ್ರಕಾಶ್,

ನೀವು ಈ ಲೇಖನವನ್ನು ಹಾಗೇ ಅರ್ಧಕ್ಕೆ ಬಿಟ್ಟಿದ್ದರೇ ಚೆನ್ನಾಗಿತ್ತು. ಪೂರ್ತಿ ಓದಿದ ಮೇಲೆ ಏನೋ ಸಂಕಟ !
ಏನೇ ಇದ್ದರೂ , ಚೇತನಾ ನಿಮ್ಮ ಸ್ನೇಹಿತೆಯಾಗಿದ್ದು ಸಂತೋಷದ ವಿಷಯ !

ತೇಜಸ್ವಿನಿ ಹೆಗಡೆ said...

ಹೃದಯಸ್ಪರ್ಶಿಯಾಗಿದೆ. ಚೇತನಾ ಈಗ ಎಲ್ಲಿದ್ದಾರೆ? ತುಂಬಾ ಇಷ್ಟವಾಯಿತು ಬರಹ.

Ittigecement said...

ಮನಸು...

ನಿಜ ..
ಸ್ನೇಹಕ್ಕೆ ಹೆಣ್ಣಾಗಲಿ..ಗಂಡಾಗಲಿ ಭೇದವಿಲ್ಲ...
ಆದರೆ ಈ ಸಮಾಜ ಅದನ್ನು ಒಳ್ಳೆಯ ದ್ರಷ್ಟಿಯಿಂದ ನೋಡುವದಿಲ್ಲವಲ್ಲ..
ಸಂಶಯ.. ಮಾಡುತ್ತದೆ...

" ಚೇತನಾ " ಮೂಕಿಯಾಗದೇ ಇದ್ದಲ್ಲಿ ಮನೆಯವರು ಒಪ್ಪುತ್ತಿದ್ದರಾ..?
ಅವರು ಕೊನೆಯವರೆಗೂ ನಮ್ಮನ್ನು "ಸಹೋದರ" ಅಂತಲೇ ತಿಳಿದಿದ್ದರು..
ನಮಗೇನೂ ಅಭ್ಯಂತರ ಇರಲಿಲ್ಲ...
ಅವಳ ಮದುವೆಯಲ್ಲಿ ನಮಗೂ ಕಣ್ಣೀರು ಬಂದಿತ್ತು...

ನಿಮ್ಮ ಸ್ನೇಹ ಜೀವನಕ್ಕೆ ಶುಭಾಶಯಗಳು..

ಅದು ಚಿರಾಯುವಾಗಿರಲಿ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸುಧೇಶ್...

ನಾಗುವಿನ ಸ್ನೇಹಕ್ಕೆ ಎಲ್ಲೆಡೆ ವಿರೋಧವಿತ್ತು..
ಅವನು ಒಳ್ಳೆಯವನಲ್ಲ ಅಂತ..
ಅದು ಯಾವ ಜನ್ಮದ ಬಂಧವೋ ಗೊತ್ತಿಲ್ಲ...
ಯಾರು ಏನೇ ಹೇಳಿದರೂ ನಮ್ಮ ಸ್ನೇಹ ಬಲವಾಗುತ್ತಲೇ ಇತ್ತು..

ನಿಮ್ಮ ಚಂದದ ಪ್ರತಿಕ್ರಿಯೆ ನನಗೆ ಸ್ಪೂರ್ತಿ ತಂದಿದೆ..
ಬರೆಯುವ ಉತ್ಸಾಹ ತಂದಿದೆ..

ಪ್ರೋತ್ಸಾಹ ಹೀಗೆಯೆ ಇರಲಿ

ಧನ್ಯವಾದಗಳು...

Ittigecement said...

ವಿನುತಾ...

ನಿಮ್ಮ ಬ್ಲಾಗಿನ ಕವಿತೆ ತುಂಬಾ ಚೆನ್ನಾಗಿದೆ..
ಅದರಲ್ಲಿ ಪ್ರೀತಿಯ ಹಲವು ಮಜಲುಗಳನ್ನು ತೆರೆದಿಟ್ಟಿದ್ದೀರಿ...

ಈ ನಾಗು ಏನಾದ್ರೂ ಮಾಡೇ ಮಾಡ್ತಾನೆ ಅಂತ ಭರವಸೆ ಇತ್ತು..

ಭಾವುಕನಾದ ನನಗೆ ಚೇತನಾಳ ಸ್ನೇಹ ಇಷ್ಟ ಆಯಿತು..

ಮೂಕಳಾಗಿದ್ದರೂ ಅವಳ ಸ್ಪಂದನೆ ನಮಗೆ ಇಷ್ಟ ಆಗಿತ್ತು..

ನಾವೆಲ್ಲ ಜೋಕು ಹೇಳಿ ನಗುವಾಗ.. ಅವಳೂ ಎನಾದರೂ ಹೇಳುತ್ತಿದ್ದಳು..

ಖುಷಿಯಾಗುತ್ತದೆ ಆ ದಿನಗಳು ನೆನಪಾದರೆ..

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ವಂದನೆಗಳು..
ಬರುತ್ತಾ ಇರಿ

Ittigecement said...

ಮಲ್ಲಿಕಾರ್ಜುನ್...
ಚೇತನಾ" ನಿಜವಾದ ಹೆಸರಲ್ಲ..
ಕುವೆಂಪುರವರ ಓ..ನನ್ನ ಚೇತನಾ.." ಹಾಡುನನಗೆ ಬಹಳ ಇಷ್ಟ..

ನನಗೆ "ಅನಿಕೇತನ"ದ ಅರ್ಥ ಸರಿಯಾಗಿ ಗೊತ್ತಿರಲಿಲ್ಲ..

"ಚಿತ್ರಾ" ನನಗೆ ಸಹಾಯ ಮಾಡಿದರು..
ಆಮೇಲೇ ಇದೇ ಹೆಸರು ಸೂಕ್ತ ಅನಿಸಿತು

ಯಾರು ಏನು ಬೇಕಾದರೂ ಅಂದು ಕೊಳ್ಳಲಿ..

ಸಹೋದರತೆ, ಸ್ನೇಹವನ್ನೂ ಮೀರಿದ ಸಂಬಂಧ ನಮ್ಮದಾಗಿತ್ತು..
ಅದಕ್ಕೇ ಹೆಸರೇ ಇಲ್ಲವಾಗಿತ್ತು..

ನಿಜಕ್ಕೂ ನಾನು ಭಾಗ್ಯವಂತ..

ಸೂಕ್ಷ್ಮತೆಯಿಂದ ಹೆಸರನ್ನೂ ಗಮನಿಸಿದ ನಿಮಗೆ ಧನ್ಯವಾದಗಳು..

ನಿಮ್ಮ ಪ್ರೇಮಿಗಳ ದಿನದ "ಉಡುಗೊರೆ" ಅದ್ಭುತವಾಗಿದೆ..

ಎಲ್ಲರ ಬ್ಲಾಗಿಗಿಂತ "ವಿಶಿಷ್ಟವಾಗಿದೆ..

ಅಭಿನಂದನೆಗಳು..

Ittigecement said...

ಪಾಲಚಂದ್ರ ..

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Anonymous said...

ಲೇಖನ ಚೆನ್ನಾಗಿದೆ ಪ್ರಕಾಶಣ್ಣ.
ಆದರೆ ಸಂಬಂಧಗಳಿಗೆ ಗೆಳೆತನ/ಸಹೋದರ ಭಾವನೆ ಅನ್ನುವ ಹೆಸರುಗಳು ಬರಿಯ ಹೊರಗಿನ ಪ್ರಪಂಚಕ್ಕೆ ಮಾತ್ರ.
ನನ್ನ ಅಣ್ಣ ನನಗೆ ಇಲ್ಲಿಯವರೆಗೆ ಸಿಕ್ಕಿದ ಅತ್ಯುತ್ತಮ ಗೆಳೆಯ(best friend), ನಾನು ಹೇಳುವ ಮೊದಲೇ ಎಲ್ಲಾ ಅರ್ಥ ಮಾಡಿಕೊಳ್ಳುತ್ತಿದ್ದ.
ಎಲ್ಲರ ಮುಂದೆ ಹೇಳಲು ಸಂಬಧಕ್ಕೆ ಯಾವ ಹೆಸರಾದರೇನು?
ಉತ್ತಮ ಗೆಳತಿಯನ್ನು ಪಡೆದಿದ್ದಕ್ಕೆ ಅಭಿನಂದನೆಗಳು.

Greeshma said...

ಚೆನ್ನಾಗಿದೆ ಬರಹ. pure friendship. ಖುಷಿ ಆಯ್ತು :)

ಅಂತರ್ವಾಣಿ said...

prakaashaNNa,

film nalli naDeyo thara naDedide nimma jeevanadalli.

nimma sneha heege irali chetana avara jothe.

Ashok Uchangi said...

ಹೃದಯಸ್ಪರ್ಶಿ.....

Ittigecement said...

ಚಿತ್ರಾ...

ಮೊದಲು ನನಗೆ "ಅನಿಕೇತನ" ಅರ್ಥ ತಿಳಿಸಿ ಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು..

ತುಂಬಾ ಅರ್ಥವಿರುವ,
ಕೆಟ್ಟ ಭಾವನೆ ಇಲ್ಲದಿರುವಾಗ..
ಸಂಬಂಧಕ್ಕೆ ಹೆಸರು ಬೇಕಿಲ್ಲ.. ಅಲ್ಲವಾ?

ಒಂದು ಗೆಳತಿಗಾಗಿ ಹಂಬಲಿಸಿದ್ದೆ..
ಅದು ಅಪೂರ್ವ ಸಂಬಂಧದ"ಚೇತನ" ಆಗಿದ್ದು ನನ್ನ ಪುಣ್ಯ..

ಚಂದದ ಪ್ರತಿಕ್ರಿಯೆಗಾಗಿ
ಧನ್ಯವಾದಗಳು..

Ittigecement said...

ಪರಾಂಜಪೆಯವರೆ..

ಪ್ರೇಮಿಗಳ ದಿನದ ಬಗೆಗೆ ನಾನು ನನ್ನ ಕಾಲೇಜಿನ ಇನ್ನೊಂದು ಘಟನೆ ಬರೆಯ ಬೇಕಿಂದಿದ್ದೆ...

ನನ್ನೊಬ್ಬ ಸ್ನೇಹಿತ ಪ್ರೇಮದಲ್ಲಿ ಬಿದ್ದಿದ್ದ..
ನನಗೂ, ನಾಗೂವಿಗು "ಪತ್ರ" ಬರೆದು ಕೊಡಲು ಹೇಳಿದ್ದ..

ಅ ಪ್ರಸಂಗ ಮಜವಾಗಿತ್ತು..

ಓದುಗರ ಒತ್ತಾಯಕ್ಕೆ ಇದನ್ನೇ ಬರೆದೆ..
ಲೇಖನ ಮೆಚ್ಚಿದ್ದಾಕ್ಕಾಗಿ ಧನ್ಯವಾದಗಳು..

Ittigecement said...

ಹರೀಷ್..

ಮಾತು ಬಾರದವರ ಮೂಕ ಸಂಕಟ ..
ಬಹಳ ಕಷ್ಟ..

ಅವರು ವಿವಿಧ ರೀತಿಯಲ್ಲಿ ಸ್ಪಂದಿಸುತ್ತಾರೆ..

ನಾನು ಫೋನ್ ಮಾಡಿದಾಗ ..
ಫೋನ್ ಬಟನ್ ಒತ್ತಿ "ಕೀಂಕ್" ಶಬ್ಧಗಳಿಂದ ಪ್ರತಿಕ್ರಿಯೆ ಕೊಡುತ್ತಾಳೆ..!

ಅದೊಂದು ವರ್ಣಿಸಲಾಗದ ಆನಂದ..

ಸ್ನೇಹಿತ ಇನ್ನೂ ಸಂಪರ್ಕದಲ್ಲಿದ್ದಾನೇಯೇ..?

ಧನ್ಯವಾದಗಳು..

Ittigecement said...

ಉಮೀ...

ಅವಳು ಚಂದವಾಗಿ ಚಿತ್ರ ಬಿಡಿಸುತ್ತಿದ್ದಳು..

ಅವಳು ಬಿಡಿಸಿದ ನನ್ನ ಚಿತ್ರ ಬಹಳ ದಿನಗಳವರೆಗೆ ನನ್ನ ಬಳಿ ಇತ್ತು..

ದೇವರು ಮಾತು ಕೊಡದಿದ್ದರೂ ."ಚಿತ್ರಕಲೆ" ಅವಳಿಗೆ ಕೊಟ್ಟಿದಿದ್ದ..

ಅಂಥವರಿಗೆ ..
ಬೇರೆ ಏನಾದರೂ ಪ್ರತಿಭೆ ಇರುವದನ್ನು ನಾನು ಗಮನಿಸಿದ್ದೇನೆ...

ಧನ್ಯವಾದಗಳು..

Ittigecement said...

ಸಂತೋಷ್...

ಒಳ್ಳೆಯ ಸ್ನೇಹ, ಸ್ನೇಹಿತೆ ಬಗೆಗೆ ಖುಷಿಯಿದ್ದರೂ..

ದಿನಂಪ್ರತಿ.. ಅವಳು ಎದುರಿಸುವ..
ಸವಾಲುಗಳು..
ದುಖಃ ತರಿಸುತ್ತವೆ...

ಅವಳು ಮಗನಿಗೆ..
ಅತ್ತಾಗ ಸಮಾಧಾನ ಪಡಿಸುವಾಗ...
"ಕಂದಾ" ಎಂದು ಮನಃ ಪೂರ್ತಿ ಕೂಗುವ ಹಾಗೆಯೆ ಇಲ್ಲವಲ್ಲ...!

ಹೀಗೆ ಬಹಳಷ್ಟು ವಿಷಯಗಳಿಗೆ ಬೇಸರವಾಗುತ್ತದೆ..

ವಂದನೆಗಳು...

Ittigecement said...

ಸುನಾಥ ಸರ್...

ಅದ್ಭುತ ಪ್ರತಿಕ್ರಿಯೆ..

ಹಾಸ್ಯದ ಹಿಂದೆ ದುಃಖ...!

ಕೈಲಾಸಂ, ಹಾಗು ಜೀಪಿ ರಾಜರತ್ನಮ್ ರವರಿಗೆ ಪ್ರಣಾಮಗಳು..

ಒಂದು ಬಲು ಚಂದದ ..

ಸಾಲು ನೆನಪಿಸಿದ್ದಕ್ಕೆ ..
ನಿಮಗೂ..
ಹ್ರದಯ ಪೂರ್ವಕ ..
ಧನ್ಯವಾದಗಳು..

Ittigecement said...

ಚಿತ್ರಾ..

ಬೆಳಗಾವಿಯಲ್ಲಿ ನನ್ನ ಸಣ್ಣ ಮಾವ ಇದ್ದಾರೆ..

ಅವರಿಗೆ ಎರಡೂ ಮಕ್ಕಳೂ ಬುದ್ಧಿ ಮಾಂದ್ಯರು..
ಒಂದು ಮಗು ಇತ್ತೀಚೆಗೆ ತೀರಿ ಕೋಡಿತು..
ಇನ್ನೊಂದು ಮಗುವಿಗೆ ೨೪ ವರ್ಷ..
ಊಟ ತಿಂಡಿ.. ಎಲ್ಲವೂ ಇವರೇ ಮಾಡಿಸಬೇಕು..
ಪ್ರತಿಕ್ರಿಯೆ ಸಹ ಕೊಡುವದಿಲ್ಲ..

ನೀವು ಅವರನ್ನು ನೋಡಿದರೆ..

ಅವರ ಬಳಿ ಮಾತನಾಡಿದರೆ..
ಜೀವನದಲ್ಲಿ ಅವರಿಗೆ ಅಷ್ಟು ದುಃಖ ಇದೆಯಂತ ಗೊತ್ತೇ ಆಗುವದಿಲ್ಲ..

ನೀವು ಅವರ ಬಳಿ ಹತ್ತು ನಿಮಿಷ ಮಾತನಾಡಿದರೆ..
ತಿಂಗಳಿಗಾಗುವಷ್ಟು ನಗಿಸಿ, ಜೋಕ್ ಹೇಳಿ ಕಳಿಸುತ್ತಾರೆ...!

ನಮಗೆ ನಗಲಿಕ್ಕೆ ಕಾರಣ ಬೇಕೆ?

ಇನ್ನೊಮ್ಮೆ ಅವರ ಬಗೆಗೆ ಬರೆಯುವೆ..

ಏನೋ ಹೆಳಿಬಿಟ್ಟೆ ಅಂದು ಕೊಳ್ಳಬೇಡಿ..
ಎಲ್ಲರ ಪ್ರತಿಕ್ರಿಯೆ ಓದುತ್ತಿರುವಾಗ ಇವರ ನೆನಪಾಯಿತು..

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ತೇಜಸ್ವಿನಿಯವರೆ...

ನನ್ನ ಗೆಳೆಯನನ್ನೇ ಮದುವೆಯಾಗಿ.. ದೂರದ ಊರಲ್ಲಿದ್ದಾರೆ..
ಒಂದು ಗಂಡು ಮಗು..

ಪ್ರೀತಿಸುವ ಗಂಡ..ಚಂದದ ಸಂಸಾರ..

ಎರಡು ವರ್ಷಕ್ಕೊಮ್ಮೆ ಬಂದಾಗ ಸಿಗುತ್ತಾರೆ..

ಆಗಾಗ ಫೋನ್ ಬರುತ್ತದೆ..

ಅಂಥಹ..

ಪ್ರತಿನಿತ್ಯದ ಬದುಕು ಕಷ್ಟ..

ಅವಳ ಉತ್ಸಾಹ, ಛಲ.. ನಮಗೆ ಆಶ್ಚರ್ಯ ತರುವಂತಿತ್ತು.. ಇದೆ..

ನಿಮ್ಮ ಬದುಕಿನ ಹೋರಾಟ ಗಾಥೆಯೂ ನಮಗೆಲ್ಲ ಸ್ಪೂರ್ತಿ...

ಧನ್ಯವಾದಗಳು..

ಮೂರ್ತಿ ಹೊಸಬಾಳೆ. said...

ಪ್ರಕಾಶಣ್ನ,
ನೀ ಕುತೂಹಲ ಸೃಷ್ಟಿಸಿದಾಗಲೇ ಅಂದು ಕೊಂಡಿದ್ದೆ ದೊಡ್ಡ ಶಾಕ್ ಕೊಡುತ್ತೀಯೆ ಎಂದು ಹಿಂದಿನ ಒಂದು ಲೇಕನದಲ್ಲೂ ಇಂತದ್ದೆ ಕೊಟ್ಟಿದ್ದೆ.
ನಿಜವಾದ ಸ್ನೇಹಕ್ಕೆ ಮಾತುಬೇಡ,ಭಾಷೆಬೇಡ,ಮಾತನಾಡುವ ಅದನ್ನ ಅರ್ಥಮಾಡಿಕೊಳ್ಳುವ ಮನಸ್ಸು ಇದ್ದರೆ ಸಾಕಲ್ಲವೇ?

ಚಂದ್ರಕಾಂತ ಎಸ್ said...

ಅಬ್ಬಾ ನಿಮ್ಮ ಬ್ಲಾಗ್ ಗೆ ಬಂದರೆ ಸಾಕು ಬರಹಗಳ ಸುರಿಮಳೆ... ಪ್ರತಿಕ್ರಿಯೆಗಳ ಸುರಿಮಳೆ...ಇರಲಿ ಬರಹ ಬಹಳ ಚೆನ್ನಾಗಿದೆ. ಆದರೂ... ಅಪರಿಚಿತರು ಪರಿಚಿತರಾಗಲು ಸಂಬಂಧದ ಕೊಂಡಿ ಬೇಕೇ ಬೇಕೆ?ಅದಕ್ಕೊಂದು ಹೆಸರು ಬೇಕೆ? ಈ ಪ್ರಶ್ನೆ ಯಾವಾಗಲೂ ಕಾಡುತ್ತದೆ.

ಮೂಕಪಕ್ಷಿಯ ಬಗ್ಗೆ ಬರೆದಿರುವಿರಿ. ಅಚಾನಕ್ ಆಗಿ ಕಲರ್ಸ್ ಚಾನಲ್ಲಿನ ‘ ಜೀವನ್ ಸಾಥಿ’ ನೆನಪಿಗೆ ಬಂತು. ಬಹುಶಃ ನೀವೂ ನೋಡಿರುತ್ತೀರಿ ಅದರಲ್ಲಿ ಬರುವ ಮೂಕ ಈಶ್ವರ್ ಪಾತ್ರ ಮನದಲ್ಲಿ ಮಿಂಚಿತು

Ittigecement said...

ಜ್ಯೋತಿ...

ನಿವೆನ್ನುವದು ನಿಜ..

ನನ್ನಕ್ಕ..ನನಗೆ ಒಳ್ಳೆಯ ಗೆಳತಿ ಕೂಡ..

ತಾಯಿಯ ಸ್ಥಾನವನ್ನೂ ಕೊಟ್ಟಿದ್ದೇನೆ..

ಭಾವ ಮುಖ್ಯ..

ಸಂಬಂಧಕ್ಕೊಂದು ಹೆಸರು ಬೇಕೇ ಬೇಕಾ..?

ಯಾಕೆ..?

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ಧನ್ಯವಾದಗಳು..

Ittigecement said...

ಗ್ರೀಷ್ಮಾ...

ಯವುದೇ ಸಂಬಂಧ "ಶುದ್ಧ" (pure) ಇದ್ದಲ್ಲಿ ಖುಷಿಯೇ ಆಗುತ್ತದೆ..
ಅಣ್ಣ , ತಮ್ಮ, ಗಂಡ ಹೆಂಡತಿ, ಅಪ್ಪ,ಮಗ... ಇತ್ಯಾದಿ..
ಅಲ್ಲವಾ..?

ಪ್ರತಿಕ್ರಿಯೆಗೆ ವಂದನೆಗಳು..

ಬರುತ್ತ ಇರಿ...

Ittigecement said...

ಅಂತರ್ವಾಣಿ..

ಈ ಲೇಖನವನ್ನು ಒಂದೇ ಆಗಿ ಬರೆಯುವ ವಿಚಾರ ಇತ್ತು..

ತುಂಬಾ ಉದ್ದವಾಗುತ್ತದೆ ಎಂದು ಅಲ್ಲಿಗೆ ನಿಲ್ಲಿಸ ಬೇಕಾಯಿತು..

ಅಡಿಗೆಗೆ ಸ್ವಲ್ಪ "ಒಗ್ಗರಣೆ" ಹಾಕಿದ್ದೇನೆ..

ರುಚಿಯಾಗಿದೆ ಅಲ್ಲವೆ?

ನಿವೇಲ್ಲ ಮೆಚ್ಚಿದ್ದು..
ನನಗೂ ಸಾರ್ಥಕವೆನಿಸುತ್ತದೆ..

ಪ್ರೋತ್ಸಾಹ ಹೀಗೆಯೆ ಇರಲಿ..

ಧನ್ಯವಾದಗಳು..

Ittigecement said...

ಅಶೋಕ್...

ನಿಮ್ಮ ಲೇಖನದಷ್ಟೇ ಅಲ್ಲ..
ಪ್ರತಿಕ್ರಿಯೆಯ ಅಭಿಮಾನಿ ಕೂಡ..

ನೀವು ಮೆಚ್ಚಿದ್ದು ಖುಷಿಯಾಗಿದೆ..

ಬರುತ್ತಾ ಇರಿ..

ನಿಮ್ಮ ಬ್ಲಾಗಿಗೆ ಬಹಳ ದಿನಗಳಿಂದ ಹೋಗಿ ಬರುತ್ತಿರುವೆ..

ಬರೆಯಿರಿ..

ಕಾಯುತ್ತಿರುವೆ..

ಧನ್ಯವಾದಗಳು..

Radhika Nadahalli said...

ಪ್ರಕಾಶಣ್ಣ ತುಂಬ ಚನಾಗಿದ್ದು ಬರಹ...
ಎಲ್ಲರೂ ಇಂತಹ ಒಂದು ಅನನ್ಯ,ಅಮೂಲ್ಯ ಭಾವಗಳ ಅನುಭವವ ಹೊಂದಲು ಬಯಸುವರು ಎಂದು ನನ್ನ ಭಾವನೆ...

Ittigecement said...

ಮೂರ್ತಿ...

ನಾನು ಈ ಘಟನೆಯನ್ನು ಗೆಳೆಯ ಮಲ್ಲಿಕಾರ್ಜುನ್ ಬಳಿ ಹೇಳಿದೆ..

ಅವರೆ ಇದನ್ನು ಬರೆಯಲು ಹೇಳಿದ್ದು..

ಇದರ ಮುಕ್ತಾಯ ಅವರಿಗೊಬ್ಬರಿಗೆ ಗೊತ್ತಿತ್ತು

ನನ್ನ ಮಡದಿಗೂ ಗೊತ್ತಿತ್ತು..

ಅಡಿಗೆಗೆ ಸ್ವಲ್ಪ ಒಗ್ಗರಣೆ ಹಾಕಿದ್ದೇನೆ..

ರುಚಿ ಇಷ್ಟವಾಗಿದ್ದು ನನಗೂ ಖುಷಿ..

ಪ್ರೋತ್ಸಾಹ ಹೀಗೆಯೆ ಇರಲಿ..

ಬರುತ್ತಾ ಇರಿ..

ಧನ್ಯವಾದಗಳು..

Ittigecement said...

ಚಂದ್ರಕಾಂತರವರೆ..

ಬಹಳ ದಿನಗಳ ನಂತರ ಭೇಟಿ ಮಾಡುತ್ತಿದ್ದೀರಿ..

ಹೆಸರಿನ ಸಂಬಂಧ "ಅನಿವಾರ್ಯ" ಎಂದು ನನ್ನ ಭಾವನೆ..

ಎದುಗಿರುವ ವ್ಯಕ್ತಿ ನಮ್ಮ ಬಗೆಗೆ ಏನು ಭಾವನೆ ಇಟ್ಟುಕೊಂಡಿದ್ದಾನೆ.."
ಇದು ಮಹತ್ವ ಆಗುತ್ತದೆ..
ಒಡನಾಟ ಮುಂದುವರೆಯಲು ಇಂಥಹ ಹೆಸರಿನ "ಸಂಬಂಧ" ಬೇಕಲ್ಲವೆ..?

ಅವನು/ ಅವಳು ಸಂಬೊಧಿಸಿದ್ದು ನಿಜವಿರಬಹುದು ಅಥವಾ
ಸುಳ್ಳೂ ಇರಬಹುದು..

ಗುರುತು.. ಪರಿಚಯವಾಗಲು ಇದು ಅಗತ್ಯ ಎಂಬುದು ನನ್ನ ಭಾವನೆ..

ಏನನ್ನುತ್ತೀರಿ.?

ನನ್ನಾಕೆ " ಜೀವನ್ ಸಾಥಿ" ನೋಡಿ ಈಶ್ವರ್ ಪಾತ್ರದ ಬಗೆಗೆ ಹೇಳುತ್ತಿರುತ್ತಾರೆ..

ನಾನು ಇನ್ನೂ ನೋಡಿಲ್ಲ ನೋಡುವೆ..

ನಿಮ್ಮ ಬ್ಲಾಗನಲ್ಲಿ ಹಾಸ್ಯ ಬರಹದ" ಪ್ರೊಮಿಸ್" ಮಾಡಿದ್ದೀರಿ..

ಇನ್ನೂ ಬಂದಿಲ್ಲ..

ಕಾಯುತ್ತಿರುವೆ..

ನಿಮ್ಮ ಪ್ರೋತ್ಸಾಹ ಹೀಗೆಯೆ ಇರಲಿ..
ಧನ್ಯವಾದಗಳು..

Ittigecement said...

ಸಿಂಚನಾ...

ನಿಜ ಪ್ರತಿಯೊಬ್ಬರೂ ಪ್ರೀತಿ ಪ್ರೇಮಕ್ಕಾಗಿ ಹಂಬಲಿಸುತ್ತಾರೆ..
ಅದಕ್ಕಾಗಿ ಹಾತೊರೆಯುತ್ತಾರೆ..
ಪರಿತಪಿಸುತ್ತಾರೆ..

ಆದರೆ ಶುದ್ಧ ಪ್ರೇಮ, ಸ್ನೇಹ ಭಾವ ಸಿಗಲು..
ನಾವೇನು ಮಾಡಬೇಕು..?

" ಅದು " ನಮ್ಮಲ್ಲಿ ಇದ್ದರೆ ಖಂಡಿತ ನಮಗೆ
ಅಂಥಹ ಅನನ್ಯ,ಅಮೂಲ್ಯ,
ಅನುಭಾವ ಸಿಗುತ್ತದೆ ಎನ್ನುವದು ನನ್ನ ಭಾವನೆ..

ಏನನ್ನುತ್ತೀಯಾ..?

ಬಹಳ ದಿನಗಳ ನಂತರ ಅಣ್ಣನ ಮನೆಗೆ ಬಂದಿದ್ದೀಯಾ..
ಪ್ರತಿಕ್ರಿಯೆಗೆ ಧನ್ಯವಾದಗಳು..

Unknown said...

ಬರಹ ಚೆನ್ನಾಗಿ ಮೂಡಿ ಬಂದಿದೆ. ಅಂಥಹ ಒಳ್ಳೆಯ ಸ್ನೇಹವನ್ನು ಜೀವನದುದ್ದಕ್ಕೂ ಕೊಂಡೊಯ್ಯಲು ಬಹಳ ಶ್ರಮ ವಹಿಸಬೇಕಾಗುತ್ತದೆ.

Ittigecement said...

ಕ್ರಷ್ಣರವರೆ...

ನನ್ನ ಬ್ಲಾಗಿಗೆ ಸ್ವಾಗತ...

ಅಂಥಹ ಸೂಕ್ಷ್ಮವಾದ ಸಂಬಂಧವನ್ನು ಕಾಯ್ದು ಕೊಳ್ಳುವದೂ ಕಷ್ಟ..

ಅಂತಹ ಬಂಧ ಒಮ್ಮೆ ಗಟ್ಟಿಯಾದರೆ..
ಬಿಡಿಸಲೂ ಸಾಧ್ಯವಿಲ್ಲ...!

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

ಹ್ರದಯ ಪೂರ್ವಕ ಧನ್ಯವಾದಗಳು..

Prabhuraj Moogi said...

ಅಂತೂ ಗೆಳತಿಯಬ್ಬಳು ಸಿಕ್ಕಳಲ್ಲ... ಹೆಸರಲ್ಲೇನಿದೆ ಬಿಡಿ ಭಾವನೆಗಳು ಮುಖ್ಯ, ಕುತೂಹಲ ಅಂತೂ ತಣಿಸಿದ್ದಕ್ಕೆ ಧನ್ಯವಾದಗಳು.

Ittigecement said...

ಪ್ರಭು..

ಅದು ನನ್ನ ಅದ್ರಷ್ಟ ಅಂದು ಕೊಳ್ಳುತ್ತೇನೆ...

ಹೆಸರಿನಲ್ಲೇನಿದೆ?

ನಾವು "ಗೆಳೆಯ ಗೆಳತೀಯರು" ಅಂದಿದ್ದರೆ..
ನನ್ನನ್ನು ಹೊರಗಿಡುತ್ತಿದ್ದರೇನೋ..
ಅವಳ ಮನೆಯವರು..!

ಒಳ್ಳೆಯ..,
ಎಲ್ಲರೂ ಬಯಸುವಂಥಹ..
ಗೆಳತಿ ಅವಳು..

ಧನ್ಯವಾದಗಳು..

ಭಾರ್ಗವಿ said...

ಈ ಬರಹದ ಬಗ್ಗೆ ಕುತೂಹಲದಿಂದಲೇ ಓದಲು ಪ್ರಾರಂಭಿಸಿ ಮುಗಿಸುವಾಗ ಮನಸ್ಸೆಲ್ಲೋ ಹೋದಂತಿತ್ತು. ಏನು ಬರೆಯೋದು ತಿಳಿತಾಇಲ್ಲ. ಚೇತನ ಚೆನ್ನಾಗಿದ್ದಾರಲ್ವ,ಖುಷಿಯಾಯ್ತು.ಓದಿದ ದಿನನೇ ಪ್ರತಿಕ್ರಯಿಸಲು ಆಗಲಿಲ್ಲ. ತಡವಾಯ್ತು. ಕ್ಷಮೆಯಿರಲಿ:-).

ಭಾರ್ಗವಿ said...

ಈ ಬರಹದ ಬಗ್ಗೆ ಕುತೂಹಲದಿಂದಲೇ ಓದಲು ಪ್ರಾರಂಭಿಸಿ ಮುಗಿಸುವಾಗ ಮನಸ್ಸೆಲ್ಲೋ ಹೋದಂತಿತ್ತು. ಏನು ಬರೆಯೋದು ತಿಳಿತಾಇಲ್ಲ. ಚೇತನ ಚೆನ್ನಾಗಿದ್ದಾರಲ್ವ,ಖುಷಿಯಾಯ್ತು.ಓದಿದ ದಿನನೇ ಪ್ರತಿಕ್ರಯಿಸಲು ಆಗಲಿಲ್ಲ. ತಡವಾಯ್ತು. ಕ್ಷಮೆಯಿರಲಿ:-).

Ittigecement said...

ಭಾರ್ಗವಿಯವರೆ...

ನೀವು ಯಾವಾಗ ಬಂದರೂ ಖುಷಿಯೇ..

ನಿಮ್ಮ ಪ್ರತಿಕ್ರಿಯೆ ಆಪ್ತವಾಗಿರುತ್ತದೆ..

"ಚೇತನಾ" ಖುಷಿಯಾಗಿದ್ದಾರೆ..

ಒಳ್ಳೆಯ ಸಂಸಾರ..
ಪ್ರೀತಿಸುವ ಗಂಡ...

ಹೀಗೆಯೇ ಅವಳ ಬಾಳು ಇರಲೆನ್ನುವದು ..
ನನ್ನ ಆಶಯ..

ಪ್ರತಿಕ್ರಿಯೆಗೆ ಧನ್ಯವಾದಗಳು