ಕಾರು ಸರ್ವೀಸಿಗೆ ಬಿಡಲು ಫೋರ್ಡ್ಗೆ ಹೋಗಿದ್ದೆ. ಅಲ್ಲಿ ಸತೀಶ್ ಎನ್ನುವ ಸರ್ವೀಸ್ ಎಂಜಿನೀಯರ್
ಪರಿಚಯವಾಯಿತು. ನಾನು ಗುತ್ತೀಗೆದಾರ ಅಂತ ತಿಳಿದು ಬಹಳ ಆಸಕ್ತಿಯಿಂದ ಮತಾಡಲು ಶುರು
ಮಾಡಿದರು.
ನಮ್ಮಂಥವರ ಬಳಿ ಹೆಚ್ಚಾಗಿ ಮನೆ ಕಟ್ಟಲು ತಯಾರಾದವರು,ಅಥವಾ ಮನೆಕಟ್ಟುತ್ತಿರುವವರು
ಪ್ರೀತಿಯಿಂದ , ಗೌರವದಿಂದ ಮಾತನಾಡುತ್ತಾರೆ.
ಅವರಿಗೆ ಕಟ್ಟಿ ತಯಾರಾದ ಮನೆ ಬೇಕಾಗಿತ್ತು. " ನಿಮ್ಮ ಬಜೆಟ್ ಎಷ್ಟು ? " ಅಂತ ಕೇಳಿದೆ.
" ೩೦ಲಕ್ಷದ ಆಸು ಪಾಸು" ಅಂದರು.
"ಹಾಗಾದರೆ ನಾನೆ ಕಟ್ಟಿದ ಅಪಾರ್ಟ್ಮೆಂಟ್ ಇದೆ.. ಅದೂ ೨೦ ಲಕ್ಷಕ್ಕೆ .." ಎಂದೆ.
'ಅಪಾರ್ಟ್ಮೆಂಟ್ ಬೇಡ ಸರ್.. ನಮ್ಮನೆಯಲ್ಲಿ ನಾಯಿ ಇದೆ.." ಅಂದರು
"ನೋಡಿ ಸರ್..ನೀವು ೧೦ಲಕ್ಷ ಉಳಿಸ ಬಹುದು.."
"ಬೇಡಾ ಸ್ವಾಮಿ..ನಮ್ಮನೆ ನಾಯಿ ಎಂತಾ ಮಾಡ್ಲಿ..?"
" ಕ್ಲೀನ್ ಇದ್ದರೆ ಮನೆ ಒಳಗಡೆ ಇಟ್ಗೊಳ್ಳೀ..ಇಲ್ಲಾಂದ್ರೆ ಹೊರಗೆ ಕಟ್ಟಿ ಹಾಕಿ.."
"ಒಂದಲ್ಲ..ಎರಡಲ್ಲಾ ಸಾರ್.. ಮೂರು ನಾಯಿ ಮುಂಡೇವು,, ಇವೆ.. "
" ನಾಯಿ ಮುಂಡೇವು ಅಂತಾ ನೀವೆ ಹೇಳ್ತಿದ್ದೀರಾ.. ಮಾರಾಟ ಮಾಡಿ..
ನಾಯಿಗೋಸ್ಕರ ೧೦ ಲಕ್ಷ ಖರ್ಚು ಮಾಡ್ತೀರಾ?"
" ನನಗೆ ಮೂರು ಮಕ್ಕಳು. ಎಲ್ಲ ಅಮೇರಿಕಾ.. ಇಂಗ್ಲಂಡ್..ಅಂತ ದೂರ ಇದ್ದಾರೆ..ಎರಡು ವರ್ಷಕ್ಕೆ
ಒಮ್ಮೆ ಬಂದರೆ ನಮ್ಮ ಪುಣ್ಯ.. ಆ.. ಮಕ್ಕಳ ನೆನಪಿಗೆ ಈ ನಾಯಿಗಳನ್ನ
ಸಾಕಿದ್ದೇನೆ.. ಹೆಸರನ್ನೂ ಅವರದ್ದೇ ಇಟ್ಟಿದ್ದೇನೆ.. ಅಟಾಚ್ಮೆಂಟ್ ಸಾರ್.."
ನನಗೆ ಮುಂದೆ ಏನು ಹೇಳಬೇಕೆಂದು ತೋಚಲಿಲ್ಲ..ಈ ಮಕ್ಕಳು ಹಣದ ಆಸೆಗೆ ಬಿದ್ದು ಮುಪ್ಪಿನಲ್ಲಿರುವ
ತಂದೆ ತಾಯಿ ಬಿಟ್ಟು ಹೇಗಾದರೂ ಅಲ್ಲಿ ಆರಾಮಿರುತ್ತಾರೆ..?
ನಾನೀಗ ಅವರಿಗೆ ಸೈಟು ಹುಡುಕುವದರಲ್ಲಿ ನಿರತನಾಗಿದ್ದೇನೆ...
Wednesday, October 29, 2008
Subscribe to:
Post Comments (Atom)
6 comments:
ಆ ಮಕ್ಕಳು ಪಾಪ ಮಾಡಿ ನಾಯಿಗಳು ಹಿಂದಿನ ಜನ್ಮದಲ್ಲಿ ಹೆಚ್ಚು ಪುಣ್ಯ ಮಾಡಿದ್ದವು ಅಂತ ಕಾಣುತ್ತದೆ. ಅದರೇನು ನೀವು ನಿಮ್ಮ ಕೆಲಸ[ಮನೆ ಹುಡುಕುವುದು] ಮಾಡಿ ಮತ್ತಷ್ಟು ಪುಣ್ಯ ಕಟ್ಟಿಕೊಳ್ಳಬೇಕಾಗಿ ವಿನಂತಿ!
ಶಿವು.ಕೆ
ಚನ್ನಾಗಿದೆ....
ಮಕ್ಕಳಂತೆಯೇ ನಾಯಿಯನ್ನು ಸಾಕಿದವರನ್ನು ನೋಡಿದ್ದೇನೆ. ಆ ಸಂಬಂಧವನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಆದರೆ ನೀವು ಹೇಳಿರುವ ವಿಷಯದಲ್ಲಿ ಫಾರೀನ್ ಮಕ್ಕಳು ಮತ್ತು ಇಲ್ಲಿರುವ ಒಂದೇ ಹೆಸರಿನ ಮಕ್ಕಳು(ನಾಯಿಗಳು) ಒಂದೇ ಕಡೆ ಸೇರಿದಾಗ ಹೇಗಿರಬಹುದು ಊಹಿಸಿಕೊಳ್ಳಿ!
ಈ ವಾರದ ಸುಧಾ-ದಲ್ಲಿ ವಿದೇಶದಲ್ಲಿ ಮಕ್ಕಳಿರುವ ತಾಯ್ತಂದೆಯರು ನಾಯಿ ಸಾಕುವ ಬದಲು ಒಬ್ಬ ಅನಾಥ ಹುಡುಗನನ್ನು ದತ್ತು ತೆಗೆದುಕೊಳ್ತಾರೆ.
ಶಿವು..ನನಗೂ ಹಾಗೆ ಅನ್ನಿಸಿತು. ಬಾಂಧವ್ಯಕ್ಕಿಂತ ಹಣವೆ ಹೆಚ್ಚಾಯಿತು ಆ ಮಕ್ಕಳಿಗೆ. ಆಮೇಲೆ ಕೋಟಿ ಕೊಟ್ಟರೆ ತಂದೆ, ತಾಯಿ ಸಿಗುತ್ತಾರೆಯೆ?
ಆದಿತ್ಯರವರೆ ನಮ್ಮ ಬ್ಲೊಗ್ ಗೆ ಬಂದಿದ್ದಕ್ಕೆ ಧನ್ಯವಾದಗಳು.
ಮಲ್ಲಿಕಾರ್ಜುನ್ ರವರೆ.. ಈ ಫಾರಿನ್ ಮಕ್ಕಳನ್ನು ಕರೆದರೆ ಬರುತ್ತಾರೊ ಇಲ್ಲವೊ ಗೊತ್ತಿಲ್ಲ, ಆದರೆ ನಾಯಿ ಮಾತ್ರ ಖಂಡಿತ ಬರುತ್ತವೆ. ವಿಶ್ವಾಸತೊರಿಸುತ್ತದೆ ಅದೂ ಹ್ರದಯಪೂರ್ವಕವಾಗಿ.
ಚಂದ್ರಕಾಂತರವರೆ.. ಧನ್ಯವಾದಗಳು.. ಸುಧಾ ಪತ್ರಿಕೆ ಓದಲಿಕ್ಕೆ ಆಗಲಿಲ್ಲ.
Beautiful!
ನಗು ಹಾಗೂ ವಿಷಾದ ಎರಡೂ ಒಟ್ಟಿಗೆ ಹೊಮ್ಮಿದವು.
ಕೈಲಾಸಮ್ ಅವರ ಹಾಡೊಂದು ನೆನಪಿಗೆ ಬಂತು:
The raft of humour often veers,
From shoals of smiles to seas of tears"
Post a Comment