Saturday, January 5, 2013

......... ಪರೀಧಿ .........


ನನ್ನ ಗೆಳತಿಯರೆಲ್ಲ ನನ್ನ ಬಳಿ ಮಾತನಾಡುವದನ್ನು ಬಿಟ್ಟು ಬಿಟ್ಟಿದ್ದಾರೆ..


ಅದಕ್ಕೆ ಕಾರಣ ನನ್ನ ಗಂಡ...


ನಿಮಗೂ ಆಶ್ಚರ್ಯವಾಗಬಹುದು...

ನಾನು ನನ್ನ ಗಂಡನನ್ನು ಹುಚ್ಚಿ ಥರಹ ಪ್ರೀತಿಸ್ತಿನಿ...

ಆತನ ಹುಚ್ಚಾಟಗಳು..

ಐಲುತನಗಳು... !
ಮುಗ್ಧ ಮಗುವಿನ ಹಾಗೆ ನನ್ನ ಹಿಂದೇನೆ ಇರೋದು... !
ಎಲ್ಲವೂ ಇಷ್ಟ..

ನಾನು ಕೋಪಿಷ್ಟೆ...

ಮುಂಗೋಪಿ..
ಸಿಟ್ಟು ಬಂದ್ರೆ ಸಿಕ್ಕಾಪಟ್ಟೆ ರೇಗಾಡಿಬಿಡ್ತಿನಿ...ಕೂಗಾಡ್ತಿನಿ..

ನನ್ನ ಗಂಡ ಎಷ್ಟು ರೇಗಾಡಿಸ್ತಾನೆ ಅಂದ್ರೆ ನನಗೆ ತಡೆದುಕೊಳ್ಳಲಿಕ್ಕಾಗುವದಿಲ್ಲ...

ಕೆಲವೊಮ್ಮೆ ಗುದ್ದು ಕೂಡ ಹಾಕಿಬಿಡ್ತಿನಿ..

ಆತನೋ...

ಗೌತಮ ಬುದ್ಧನ ಥರಹದ ಪೋಸು ಕೊಟ್ಟು ಮುಗುಳ್ನಕ್ಕು ಬಿಡುತ್ತಾನೆ..

ನನ್ನ ಅಂದವನ್ನು....

ನನಗೆ ಗೊತ್ತಿಲ್ಲದ ಹಾಗೆ ಹೀರುತ್ತಾನೆ...
ಆನಂದಿಸುತ್ತಾನೆ...

ಪೋಲಿಯಂತೆ ನನಗೇ ... ಲೈನು ಹೊಡೆಯುತ್ತಾನೆ.... !



ನನಗೆ ಪ್ರೀತಿಯಿಂದ ಪುಚ್ಚಿ ಅಂತ ಕರಿತಾನೆ...
"ಪುಚ್ಚಿ... ಪುಚ್ಚಿ.. " ಅಂತ ನನ್ನ ಬೆನ್ನ ಹಿಂದೇನೇ ಇರ್ತಾನೆ....!


ನನ್ನ ಕೋಪವನ್ನು ಆನಂದಿಸುತ್ತಾನೆ...
ಛೇಡಿಸುತ್ತಾನೆ...
ನನ್ನ ಹೆಣ್ತನವನ್ನು ಗುರುತಿಸುತ್ತಾನೆ...
ಅದರಲ್ಲಿ ಖುಷಿ ಪಡುತ್ತಾನೆ...!

ಒಂದು ಹೆಣ್ಣಾಗಿ ನನಗೆ ಇದಕ್ಕಿಂತ ಇನ್ನೇನು ಬೇಕು....?


ಅವನಿಗಾಗಿ ಊಟಕ್ಕಾಗಿ ಕಾಯುವದು...

ಅವನ ಮೆಚ್ಚಿನ ತಿಂಡಿಗಳನ್ನು ಮಾಡಿ..
ಆತ " ಡರ್ರ್  .... "ಅಂತ ತೇಗುವಾಗ ನನಗೂ ಸಂತೋಷ.....

ಪ್ರೀತಿಯ ಸವಿಯನ್ನು ಅನುಭವಿಸಬೇಕು...

ಅನುಭವಿಸುತ್ತಾ ಇದ್ದೇನೆ...

ಅವನಿಗೆ ನನ್ನ ಪ್ರೀತಿಯನ್ನು ಧಾರೆ ಎರೆಯುವದರ ಸಂತೋಷ ಹೇಳಲಾಗದು..


ಆ ದಿನ ...

ನನಗಿನ್ನೂ ನೆನಪಿದೆ...

ನಮ್ಮದು ಹಿರಿಯರು ನಿಶ್ಚಯಿಸಿದ ಮದುವೆ..

ನಮ್ಮ ಮದುವೆಯ ದಿನ ಪೂಜೆಯೆಲ್ಲ ಮುಗಿದು ಇಬ್ಬರೇ ಒಂದು ಸ್ವಲ್ಪ ಹೊತ್ತು ಇರುವ ಸಮಯ ಸಿಕ್ಕಿತ್ತು...

"ನಾವು ಪೂಜಿಸುವ ದೇವರಿಗೆ ..

ಸ್ವಲ್ಪವೂ ತಲೆಯಿಲ್ಲ ಕಣೆ...! "

ನನಗೆ ಆಶ್ಚರ್ಯವಾಯಿತು...!


"ಯಾಕೆ...ಹಾಗೆ ಹೇಳ್ತೀರಾ?.. "


"ಏನಿಲ್ಲ...

ನನಗೆ ಸಂಕೋಚದ ಸಮಸ್ಯೆ ಇಲ್ಲ...
ನಿನಗೆ ಏನಾದರೂ ನಾಚಿಕೆ ಆದರೆ ಅಂತ... ಹೇಳ್ತಾ ಇಲ್ಲ..."

"ಹೇಳಿ.. ಪರವಾಗಿಲ್ಲ...

ನಾವು ಇಂದಿನಿಂದ ಬಾಳ ಸಂಗಾತಿಗಳಾಗಿದ್ದೇವೆ..."

"ಸರಿ...

ಇಷ್ಟು  ಅನುಮತಿ ಸಿಕ್ಕರೆ ಸಾಕು...

ನೀ ಏನೇ ಹೇಳು ..

ಆ ದೇವರಿಗೆ ತಲೆ ಇಲ್ಲಾ ಕಣೆ...! "

"ಹೇಗೆ ಹೇಳ್ತೀರಿ...?"


"ಗಂಡು ಹೆಣ್ಣಿನ ಮಿಲನ ...

ಎಷ್ಟು ಕೆಟ್ಟದಾಗಿ ಮಾಡಿಟ್ಟಿದ್ದಾನೆ ನೋಡು...!

ಒಬ್ಬರೆದುರಿಗೆ ಒಬ್ಬರು ಬಟ್ಟೆ ಬಿಚ್ಚಿ..

ಬೆತ್ತಲಾಗಿ...
ಮಲಗಿ...

ನಿನಗೂ ನಾಚಿಕೆ... !

ನನಗೂ ಸಂಕೋಚ...!

ಯಾಕೆ ಇಷ್ಟೆಲ್ಲ ಕಸರತ್ತು... ಕಸಿವಿಸಿ ... ?


ಯಾಕೆ ಇಷ್ಟೇಲ್ಲ ತಲೆಹರಟೆ  ಅನುಭವಿಸ ಬೇಕು ಅಲ್ವಾ?...


ಇವೆಲ್ಲವನ್ನೂ...

ಸ್ವಲ್ಪ ಸುಲಭವಾಗಿ ....
ಸರಳ ವಿಧಾನ ಇಡಬಹುದಿತ್ತು.... ಅಲ್ವಾ? "

ಎಂಥಹ ಮನುಷ್ಯ ಈತ.... !!


ನಾನು ನಾಚಿ ನೀರಾದೆ...!


ಮದುವೆಯ ಮೊದಲ ದಿನ...

ಆ ಹಸಿ ...
ಬಿಸಿ ವಾತಾವರಣ...
ನಾನು ತಗ್ಗಿಸಿದ ತಲೆ ಎತ್ತಲಾಗಲಿಲ್ಲ...!

ಅವನು ಯಾವಾಗಲೂ ಹೀಗೆಯೇ...

ಸೀದಾ... ಸೀದ...
ತುಂಬಾ ನೇರ... ನೇರ ಮಾತುಗಳು...
ಕದ್ದು ಮುಚ್ಚಿ ಏನೂ ಇಲ್ಲ....

ಅವನ ಈ ಥರಹದ ..

ಹುಚ್ಚು ಮಾತುಗಳು..
ತುಂಟತನಕ್ಕೆ ನಾನು ಮರುಳಾಗಿ ಹೋದೆ...!

ನನಗೆ ...

ಇಂಥಹುದೇ ಹುಚ್ಚ ಸಂಗಾತಿ ಬೇಕಿತ್ತು...
ಆತ ಈಗಲೂ ಹಾಗೆನೇ... 
ಮದುವೆಯಾಗಿ ಇಷ್ಟು ವರ್ಷವಾದರೂ  ಬದಲಾಗಲಿಲ್ಲ...

ಅವನ ತುಂಟತನ...  ಇನ್ನೂ ಹಾಗೆ ಇದೆ...


ಯಾವಾಗ ಗಂಭೀರವಾಗಿರ್ತಾನೆ...?

ಯಾವಾಗ ಜೋಕ್ ಮಾಡ್ತಾನೆ ... ?
ಗೊತ್ತೇ .. ಆಗುವದಿಲ್ಲ..!

ಯಾವಾಗಲೂ ಅವನ ತಲೆಯಲ್ಲಿ ...

ನಾನು ಇರ್ತೀನಿ ಎನ್ನುವದು ಬಹಳ ಸಂತೋಷ ಕೊಡುತ್ತದೆ..
ಹೆಮ್ಮೆಯೂ ಆಗುತ್ತದೆ..

ಮನೆಯಿಂದ ಹೊರಗೆ ಹೋದಾಗಲೂ ...

ತಾಸಿಗೊಮ್ಮೆ ಫೋನ್ ಮಾಡ್ತಾ ಇರ್ತಾನೆ...

ಫೋನ್ ರಿಂಗ್ ಆಗ್ತ ಇದೆ...


"ಹಲ್ಲೊ..

ಪುಚ್ಚಿ....
ಒಂದು ಬೇಸರದ ಸುದ್ಧಿ...
ನಮ್ ಪಕ್ಕದ್ಮನೆ  ಗೆಳೆಯನ ಹೆಂಡತಿಗೆ ಅಪಘಾತವಾಗಿದೆ...!
ಆಸ್ಪತ್ರೆಗೆ ಸೇರ್ಸಿದ್ದೇನೆ......

ಮನೆಗೆ ಬರ್ತಾ  ಇದ್ದೇನೆ...


ಗಾಭರಿ ಪಡುವಂಥಾದ್ದು ಏನೂ ಇಲ್ಲ...


ನೀನು ಬೇಗ ರೆಡಿ ಆಗು...


ಮಕ್ಕಳನ್ನು ನೋಡಿಕೊಳ್ಳಲಿಕ್ಕೆ ನಿನ್ನ್ ಅಮ್ಮ ಬರ್ತಾರೆ..

ಅವರ ಹತ್ತಿರ ಮಾತಾಡಿದ್ದೇನೆ...
ಪಕ್ಕದ ಮನೆಯವರ ಮಕ್ಕಳೂ ನಮ್ಮನೆಯಲ್ಲೇ ಇರಲಿ...

ಹತ್ತು ನಿಮಿಷದಲ್ಲಿ ಅಲ್ಲಿರ್ತೇನೆ..... ರೆಡಿ ಆಗು..."


ನನಗೆ ಮಾತಾಡಲು ಅವಕಾಶ ಕೊಡದೆ ಫೋನ್ ಕಟ್ ಮಾಡಿದ...


ಅವನ ಕೆಲಸಗಳೇ ಹೀಗೆ...

ಚಕಾ ಚಕ್ ನಿರ್ಣಯಗಳು..
ದಕ್ಷತೆ... ಜವಾಬ್ದಾರಿತನ... ಇಷ್ಟವಾಗಿಬಿಡುತ್ತದೆ...

ನಾನು ಲಗುಬಗೆಯಿಂದ ತಯಾರಾದೆ...

ಪಕ್ಕದ ಮನೆಯ ಮಕ್ಕಳಿಗೆ ನಮ್ಮನೆಗೆ ಬಂದು ಇರಲು ಹೇಳಿದೆ..
ನನ್ನ ಮಕ್ಕಳಿಗೂ ವಿಷಯ ಹೇಳಿದೆ..

ಕೆಲವೊಮ್ಮೆ ಸಂದರ್ಭಗಳು ತಂತಾನೆ ಗಂಭೀರವಾಗಿಬಿಡುತ್ತವೆ...


ಅಮ್ಮನೂ ಬಂದಳು..


ಅಷ್ಟರಲ್ಲಿ ನನ್ನವನೂ ಬಂದ...


"ಗಾಭರಿಯಾಗುವದೂ ಏನೂ ಇಲ್ಲ...

ಮಾಮೂಲಿ ಅಪಘಾತ...
ನಾವು ಆಸ್ಪತ್ರೆಗೆ ಹೋಗಿ ಬರುತ್ತೇವೆ..."

ನಾನು ಅವನ ಜೊತೆ ಹೊರಟೆ.....


"ಪುಚ್ಚಿ...

ಅವಳಿಗೆ ಅಪಘಾತವಾದ ಸ್ಥಳದಿಂದ  ...
ನನ್ನ ಆಫೀಸು ತುಂಬಾ ಹತ್ತಿರ...

ನನಗೆ ಗೊತ್ತಾದ ಕೂಡಲೇ ಓಡಿ ಹೋದೆ...

ತಲೆಗೆ ಜೋರಾಗಿ ಏಟು ಬಿದ್ದಿದೆ...
ಪ್ರಜ್ಞೆ ಇಲ್ಲ... !

ಗಾಭರಿಯಾಗುವಂಥಾದೂ ಏನು ಇಲ್ಲ ಅಂತ ಡಾಕ್ಟರ್ ಹೇಳಿದ್ದಾರೆ..."


ಒಂದೊಂದೇ ವಿಷಯ ಅನಾವರಣ ಆಗ್ತಾ ಇದೆ....!


"ನಿಮ್ಮ ಗೆಳೆಯನಿಗೆ ಹೇಳಿದ್ರಾ?"


"ಅವನೂ ಬರ್ತಾ ಇದ್ದಾನೆ..."


ನನಗೆ ಅಳು ಒತ್ತರಿಸಿ ಬಂತು...


ನಮ್ಮ ಎರಡು ಕುಟುಂಬಗಳದ್ದು ಬಹಳ ಚಂದದ ಗೆಳೆತನ...


ಯಾವುದೋ ಜನ್ಮದಲ್ಲಿ ..

ನನ್ನವ ಮತ್ತು ಆತಅಣ್ಣ  ತಮ್ಮಂದಿರಾಗಿದ್ದರೇನೋ...
ಬಹಳ ಅನ್ಯೋನ್ಯತೆ.. ಆತ್ಮೀಯತೆ...

ನಾವು ಮನೆ ಕಟ್ಟಿಸುವಾಗ ..

ಅವರೂ ನಮ್ಮ ಪಕ್ಕದಲ್ಲಿಯೇ ಮನೆ ಕಟ್ಟಿಸಿಕೊಂಡರು...

ಅವರದ್ದೂ ...

ಎರಡು ಮಕ್ಕಳ ಸುಂದರ ಸಂಸಾರ.
ಗಂಡ ಹೆಂಡತಿ ಇಬ್ಬರೂ ನೌಕರಿ ಮಾಡುತ್ತಾರೆ...
ಮಕ್ಕಳಿಬ್ಬರೂ ನನ್ನ ಬಳಿಯೇ ದೊಡ್ದವರಾಗುತ್ತಿದ್ದಾರೆ...

ನನಗೆ ದುಃಖ ಉಮ್ಮಳಿಸಿ ಬರ್ತಿತ್ತು...


"ಸುಮ್ಮನಿರು ಪುಚ್ಚೀ...

ಈಗ ನಾವು ಅವರ ಜೊತೆ ಇದ್ದು ಧೈರ್ಯ ತುಂಬ ಬೇಕು...
ಅಳಬೇಡ...
ಕಣ್ಣು ಒರೆಸಿಕೊ..."

ನನ್ನವನ ಈ ಧೈರ್ಯ ತುಂಬುವ ಸ್ವಭಾವ ...

ನನಗೆ ಯಾವಾಗಲೂ ಇಷ್ಟ...
ಆತ ಯಾವಾಗಲೂ ನನ್ನ ಆತ್ಮ ವಿಶ್ವಾಸದ ಪ್ರತೀಕ...

ಆಸ್ಪತ್ರೆ ಬಂತು...


ಆಕೆಯನ್ನು ಐಸಿಯೂ ದಲ್ಲಿಟ್ಟಿದ್ದರು...


ಸ್ವಲ್ಪ ಹೊತ್ತಿನಲ್ಲಿ ಅವಳ ಗಂಡ ಬಂದ...


 ಬರುತ್ತಲೆ ಅಳತೊಡಗಿದ...


ನನ್ನವ ಆತನನ್ನು  ತಬ್ಬಿ ಹಿಡಿದುಕೊಂಡ...


"ಅಳಬೇಡ್ವೊ..

ಏನೂ ಆಗೋದಿಲ್ಲ ಅಂತ ಡಾಕ್ಟ್ರು ಹೇಳಿದ್ದಾರೆ.."

ಅಷ್ಟರಲ್ಲಿ ಡಾಕ್ಟರ್ ಬಂದರು...


"ನೋಡಿ ...

ಅರ್ಜಂಟಾಗಿ ಶಸ್ತ್ರಕ್ರಿಯೆ ಮಾಡಬೇಕು...
ದಯವಿಟ್ಟು ಕೌಂಟರಿನಲ್ಲಿ ಹಣಕಟ್ಟಿ...
ತಡಮಾಡಬೇಡಿ..."

ನನ್ನವ ತಟಕ್ಕನೆ ಎದ್ದ...

ಆತನ ಗೆಳೆಯ ಆತನ ಕೈಹಿಡಿದ...

"ನೋಡು..

ನೀನು ಸಮಾಧಾನ ಮಾಡಿಕೊ...
ನಾನು ಹಣ ಕಟ್ಟಿ ಬರುವೆ..
ನಮ್ಮ ಲೆಕ್ಕಾಚಾರ ಎಲ್ಲ ಆಮೇಲೆ ನೋಡೋಣ.."

ಆತನನ್ನು ಅಲ್ಲೇ ಕುಳ್ಳಿರಿಸಿ ನನ್ನವ ಹಣ ಕಟ್ಟಿ ಬಂದ...


ಅಷ್ಟರಲ್ಲಿ ನರ್ಸ್ ಬಂದು .... 

"ರಕ್ತದ ವ್ಯವಸ್ಥೆ ಮಾಡಿ..
ನಮ್ಮಲ್ಲಿ ರಕ್ತ ಇದೆ...
ಆದರೆ ಬದಲಿಗೆ ನಿಮ್ಮಲ್ಲಿ ಯಾವುದಾದರೂ ರಕ್ತ ಕೊಡಿ..."

ನನ್ನವ ನನ್ನನ್ನೂ ಎಬ್ಬಿಸಿಕೊಂಡು ಹೋದ...


ನಾನು .. ನನ್ನವ ರಕ್ತ ಕೊಟ್ಟೆವು...


"ದೇವರೇ... 

ಅವಳಿಗೆ ಏನೂ ಆಗದೇ ಇರಲಿ...
ಗುಣಾಮುಖವಾಗಿ ವಾಪಸ್ಸು ಬರ್ಲಿ..."

ಪರಿಸ್ಥಿತಿ ಕೈ ಮೀರಿದಾಗ...

ಪ್ರಾರ್ಥನೆ ಮಾಡುವದಷ್ಟೆ ನಮ್ಮ ಕೆಲಸ....

ಸಮಯ ಓಡುತ್ತಲೇ ಇಲ್ಲ...

ಏನನ್ನೂ ಮಾತಡಲೂ ಆಗುತ್ತಿಲ್ಲ...
ಸುಮ್ಮನೆ ಕುಳಿತುಕೊಳ್ಳಲೂ ಆಗದ ಸ್ಥಿತಿ.... !

ನಮ್ಮ ಎರಡು ಕುಟುಂಬಗಳು ಹತ್ತಿರವಾಗಲು ಮಕ್ಕಳೂ ಸಹ ಕಾರಣ...

ಅವರ ಮಕ್ಕಳೂ..
ನಮ್ಮ ಮಕ್ಕಳೂ ಒಳ್ಳೆಯ ಸ್ನೇಹಿತರು...
ಒಟ್ಟಿಗೆ ಒಂದೇ ಶಾಲೆಗೆ ಹೋಗುತ್ತಾರೆ...
ಆಡುತ್ತಾರೆ... ಒಟ್ಟಿಗೆ ಓದುತ್ತಾರೆ..

ಅವರಿಬ್ಬರೂ ನೌಕರಿ ಮಾಡುತ್ತಿರುವದರಿಂದ.. 

ಮಕ್ಕಳು ಯಾವಾಗಲೂ ನಮ್ಮ ಮನೆಯಲ್ಲೇ ಇರುತ್ತಾರೆ...

ಹಾಗಾಗಿ ನನಗೆ ನಾಲ್ಕು ಮಕ್ಕಳು...


ಅಷ್ಟರಲ್ಲಿ ಡಾಕ್ಟರ್ ಬಂದರು...


"ಶಸ್ತ್ರಕ್ರಿಯೆ ಯಶಸ್ವಿಯಾಗಿದೆ....

ಅವರು ಕೋಮಾ ಸ್ಥಿತಿಯಲ್ಲಿದ್ದಾರೆ...
ಇನ್ನು ಎಂಟು ತಾಸು ಏನೂ ಹೇಳಲಾಗುವದಿಲ್ಲ...

ಒಳ್ಳೆಯದಾಗಲಿ ಎಂದು ಆಶಿಸೋಣ.. ಧೈರ್ಯವಾಗಿರಿ.."


ಮಕ್ಕಳ ಮುಖ ಕಣ್ಣ ಮುಂದೆ ಬಂದಿತು...


ತುಂಬಾ ಒಳ್ಳೆಯ ಮಕ್ಕಳು...

ನನಗೆ ಅಮ್ಮಾ  "ಸಣ್ಣಮ್ಮ"  ಕರೆಯುತ್ತಾರೆ...

ನಾವೆಲ್ಲ ಎಲ್ಲಿಗೆ ಹೋಗುವದಿದ್ದರೂ ಒಟ್ಟಿಗೆ ಹೋಗುವದು...

ಸಿನೇಮಾ..
ಟ್ರಿಪ್ಪು... ಪ್ರವಾಸ...

ಮೊನ್ನೆ ತಾನೆ ದಕ್ಷಿಣ ಭಾರತ ಪ್ರವಾಸ ಹೋಗಿ ಬಂದೆವು...


ಎಲ್ಲವೂ ಸೊಗಸಾಗಿತ್ತು...

ಎಷ್ಟುಂದು  ನಗು... ಹರಟೆ...!

ಹಾಡು... ಡ್ಯಾನ್ಸ್... ವಾಹ್ !!


ಎಲ್ಲವೂ ಚೆನ್ನಾಗಿರುವಾಗ ಯಾಕೆ ಹೀಗಾಗಿಬಿಡುತ್ತದೋ... !


ನನ್ನ ಕಣ್ಣಲ್ಲಿ ...

ದಳ ದಳನೆ ಕಣ್ಣೀರು ಇಳಿಯುತ್ತಿತ್ತು...

ನನ್ನವ ನನ್ನನ್ನು ತನ್ನೆದೆಯಲ್ಲಿ ಹುದುಗಿಸಿಕೊಂಡ..


"ಪುಚ್ಚೀ......

ಧೈರ್ಯ ತಂದುಕೋ....."

ಮನಸ್ಸಿಗೆ ಸಾಂತ್ವನ ಬೇಕಿತ್ತು...

ಆದರೆ ಕಣ್ಣೀರು ನಿಲ್ಲಲಿಲ್ಲ...

ಐಸಿಯು ದಿಂದ ಹೊರಗೆ ಬಂದ ನರ್ಸ್ ...

ಡಾಕ್ಟರ್ ಕರೆದುಕೊಂಡು ಒಳಗೆ ಹೋದಳು...

ನಮಗೆಲ್ಲ ಆತಂಕ... 


"ಏನೂ ಕೆಟ್ಟದಾಗದಿರಲಿ... ದೇವರೆ..."


ಡಾಕ್ಟರ್ ಹೊರಗೆ ಬಂದವರು ನಿರಾಸೆಯ ನೋಟ ಬೀರಿದರು...

"ಅವರು ಇನ್ನಿಲ್ಲ.... ! ... "


ಗೆಳೆಯನ ದುಃಖ ತಡೆಯಲಾಗಲಿಲ್ಲ...


ನನ್ನವ ಓಡಿ ಹೋಗಿ ಆತನನ್ನು ಹಿಡಿದುಕೊಂಡ..


"ಸಮಾಧಾನ ಮಾಡ್ಕೊ...

ಇದು ನಮ್ಮ ಕೈಮೀರಿದ್ದು...
ಒಳ್ಳೆಯವರು ಯಾವಾಗಲೂ ದೇವರಿಗೆ ಪ್ರಿಯರಾಗಿರುತ್ತಾರೆ..

ನೀನು ಧೈರ್ಯಗುಂದಬೇಡ...

ಮಕ್ಕಳನ್ನು ನೋಡಿ ಸಮಾಧಾನ ಮಾಡಿಕೊ...

ನಾವೆಲ್ಲ ಇದ್ದೇವೆ ... ಧೈರ್ಯವಾಗಿರು..."


ಎಷ್ಟೇ ದುಃಖವಾಗಿದ್ದರೂ ...

ಮುಂದಿನ ಕೆಲಸ ಕಾರ್ಯ ಮಾಡಲೇ ಬೇಕಲ್ಲವೆ...?

ನನ್ನವ ಮುಂದೆ ನಿಂತು  ಎಲ್ಲವನ್ನೂ ಮಾಡಿದ...


ಸ್ಮಶಾನಕ್ಕೆಕ್ಕೆ ಫೋನ್ ಮಾಡಿದ..

ಪೋಸ್ಟಮಾರ್ಟಮ್ ವರದಿ ತೆಗೆದುಕೊಂಡ..

ಮುಂದಿನ ಕ್ರಿಯಾ ಕರ್ಮಗಳ ವ್ಯವಸ್ಥೆ ಮಾಡಿದ...


ತನ್ನ ಗೆಳೆಯನ ಜೊತೆಗೇ ಇದ್ದ...


ನನ್ನಮ್ಮ ಆ ದುಃಖದ ಸನ್ನಿವೇಶದಲ್ಲೂ ಅಳಿಯನನ್ನು ಹೊಗಳಿದರು..


"ನನ್ನ ಅಳಿಯ..

ಅವನ ಸ್ನೇಹಿತನ ಪ್ರೀತಿ ಮೆಚ್ಚುವಂಥಾದ್ದು...

ಕಷ್ಟಕಾಲದಲ್ಲೇ ಅಲ್ಲವೆ ಸಂಬಂಧಗಳ ಪರಿಚಯವಾಗುವದು...


ನಿನ್ನ ಗಂಡ ಬಹಳ ದೊಡ್ಡ ಮನುಷ್ಯ ಕಣೆ.."


ನನಗೂ ನನ್ನವನ ಮೇಲೆ ಪ್ರೀತಿ..ಮತ್ತೂ ಹೆಚ್ಚಾಯಿತು...


ಬೆಳಿಗ್ಗೆ ...

ನಗು ನಗುತ್ತ ಇದ್ದ ಜೀವ ಸಾಯಂಕಾಲ ಬೂದಿಯಾಯಿತು...

ನೆನಪುಗಳು....

ಬಾಂಧವ್ಯಗಳು ಬೂದಿಯಾಗುವದಿಲ್ಲವಲ್ಲ...

ನಮ್ಮೆಲ್ಲರಿಗೂ ಶೂನ್ಯ ಆವರಿಸಿತು...



ಸಮಯ ...
ಮತ್ತು ಹಸಿವೆ ... ನಮಗಾಗಿ ಕಾಯುವದಿಲ್ಲವಲ್ಲ...

ಅವು ನಿರ್ದಯವಾಗಿ ತಮ್ಮ ಕೆಲಸ ಮಾಡುತ್ತಿರುತ್ತವೆ....



ರಾತ್ರಿ ನಿದ್ದೆ ಬರಲಿಲ್ಲ..

ಬೆಳಿಗ್ಗೆ ನಮ್ಮ ಮನೆಯಲ್ಲೆ ತಿಂಡಿಗೆ ವ್ಯವಸ್ಥೆ ಮಾಡಿದೆ...


ಮಕ್ಕಳಿಗೂ...  

ಅವರ ಅಪ್ಪನಿಗೂ ನಾವೆಲ್ಲ ಸಮಾಧಾನ ಮಾಡಿ ...
ತಿಂಡಿ ಒತ್ತಾಯ ಮಾಡಿ ತಿನ್ನಿಸಿದೆವು...

ನನಗೆ ಗೊತ್ತಿಲ್ಲದಂತೆ  ಆ ಮಕ್ಕಳಿಗೆ ನಾನು ತಾಯಿಯಾಗಿಬಿಟ್ಟಿದ್ದೆ...


ನನ್ನವ ರೆಡಿಯಾಗಿ ಎಲ್ಲಿಗೋ ಹೊರಟಿದ್ದ..


"ಇಲ್ಲೇ ...

ಬ್ಯಾಂಕಿಗೆ ಹೋಗಿ ಬರ್ತಿನಿ...
ಬರುವಾಗ ಪುರೋಹಿತರನ್ನೂ ಭೇಟಿಯಾಗಿ ಬರ್ತಿನಿ ಕಣೊ...

ನೀನು ಸ್ವಲ್ಪ ಸಮಾಧಾನ ಮಾಡ್ಕೊ..."


ಎಂದು ಹೊರಗೆ ಹೋದ...


ಅಮ್ಮ ಮಕ್ಕಳನ್ನು ಆಡಿಸುತ್ತ ಹೊರಗೆ ಇದ್ದರು...


ಹೆಂಡತಿಯನ್ನು ಕಳೆದುಕೊಂಡ ಅವನ ದುಃಖ ನನಗೂ ನೋಡಲಾಗುತ್ತಿಲ್ಲ...


"ಭಾವಾ..

ಸಮಾಧಾನ ಮಾಡಿಕೊ...
ಹೋದವರು ಹೋಗಿಬಿಟ್ಟರು...

ಮಕ್ಕಳ ಭವಿಷ್ಯ ... 

ಅವರ ಜವಾಬ್ದಾರಿ ಬಗೆಗೆ ವಿಚಾರ ಮಾಡು...

ಸಮಾಧಾನ ಮಾಡಿಕೊ..."


ಆತನಿಗೆ ದುಃಖ ಉಮ್ಮಳಿಸಿ ಬಂತು...


ಅಳುತ್ತಿದ್ದ...


ಅವನ ಹತ್ತಿರ ಹೋಗಬೇಕು ...

ಸಾಂತ್ವನ ಮಾಡಬೇಕು ಅಂತ ಅಂದುಕೊಂಡೆ...

ಅಷ್ಟರಲ್ಲಿ ನನ್ನವ ವಾಪಸ್ ಬಂದ...


"ನನಗೆ ಮರೆತು ಹೋಗಿತ್ತು... ಇವತ್ತು ಬ್ಯಾಂಕ್ ರಜೆ.."


ಮನೆಯಲ್ಲಿ ಮೌನ ಆವರಿಸಿತು...

ಮಾತು ಯಾರಿಗೂ ಬೇಡವಾಗಿತ್ತು...

ನನ್ನವ ಗಂಭೀರವಾಗಿದ್ದ....


ಮೌನ ಅಸಹನೀಯವಾಗಿತ್ತು....


ಆತನಿಗೂ ...

ಏನು ಮಾಡಬೇಕೆಂದು ತೋಚಲಿಲ್ಲ...

ಸ್ವಲ್ಪ ಹೊತ್ತು ಬಿಟ್ಟು ..

ಕಣ್ಣೊರಿಸಿಕೊಳ್ಳುತ್ತ ತನ್ನ ಮನೆಗೆ ಎದ್ದು ಹೋದ...

 ನನ್ನವನ ಮೌನ ಇನ್ನೂ ಮುಂದು ವರೆದಿತ್ತು...


"ರೀ...

ಎಷ್ಟು ಕಷ್ಟ ಅಲ್ಲವಾ ಈ ದುಃಖಗಳು...?"

"ಪುಚ್ಚಿ......

ನಾವು ಶೀಘ್ರದಲ್ಲಿ ಮನೆ ಬದಲಿಸಿಬಿಡೋಣ .. ...."

ನನಗೆ ಆಶ್ಚರ್ಯವಾಯಿತು..!!....


" ಯಾಕ್ರೀ...?

ಇಂಥಹ ಸಂದರ್ಭದಲ್ಲಿ ...
ನಾವು ಅವರ ಜೊತೆಯಲ್ಲಿ ಇರಬೇಕು.. 
ಹತ್ತಿರ ಇರಬೇಕಾದ ನಾವೇ..ಹೀಗೆ ಮಾಡಿದರೆ ಹೇಗೆ...? "

"ನೋಡು ಪುಚ್ಚಿ......


ನನಗೆ ನನ್ನ ಪ್ರೀತಿ...

ನನ್ನ ಹೆಂಡತಿ... 
ಮಕ್ಕಳು..
ನನ್ನ ಸಂಸಾರ ಮೊದಲು...

ನನ್ನ ಕುಟುಂಬಕ್ಕೆ ಮೊದಲ ಆದ್ಯತೆ......"


ಇಲ್ಲಿವರೆಗೆ ಒಳ್ಳೆಯವನಂತಿದ್ದ ...

ನನ್ನವ ನನಗೆ ಪ್ರಶ್ನೆಯಾಗತೊಡಗಿದ...

ಅರ್ಥವಾಗದೆ ಆತನನ್ನು ನೋಡಿದೆ...


ಆತ ನನ್ನನ್ನು ..

ತನ್ನೆದೆಗೆ ಎಳೆದುಕೊಂಡ...

"ಪುಚ್ಚೀ....

ಪ್ರಪಂಚದ ವೈಯಕ್ತಿಕ ದುರಂತಗಳಿಗೆ ನಾವು ಜವಾಬ್ದಾರರಲ್ಲ ...
ಪುಚ್ಚಿ......
ಅವರವರದ್ದು ಅವರವರಿಗೆ...

ನಮ್ಮದು  ... ನಮಗೆ...


ನೀನು ನನ್ನ ಪ್ರೀತಿಯ ಪುಚ್ಚಿ...."


ಆತನ ಅಪ್ಪುಗೆ ಬಿಗಿಯಾಗಿತ್ತು...


ನನಗೆ ಕಸಿವಿಸಿಯಾದರೂ ಹಿತವಾಗಿತ್ತು...




(ಉತ್ತಮ ಪ್ರತಿಕ್ರಿಯೆಗಳಿವೆ....   ದಯವಿಟ್ಟು  ಓದಿ.....  )



39 comments:

ಜಲನಯನ said...

ಜಗದ ಕಷ್ಟ ಜಗಕ್ಕೆ, ನಿಜ ಆದರೆ ಎಲ್ಲೋ ಏನೋ ಕಸಿವಿಸಿ ಇಂತಹ ಕಷ್ಟ ನೋಡಿದರೆ, ನಾಯಕ ಹೊರಟು ನಿಂತರೂ ಅವನು ಎಲ್ಲೂ ಹೋಗಲಾಗದು..ಹೋದಲ್ಲಿ ಇನ್ನೊಬ್ಬರು ತೊಂದರೆಯಲ್ಲಿದ್ದರೆ ತುಡಿತ ಎಳೆಯುತ್ತೆ ಸಹಜವಾಗಿ, ತಾತ್ಕಾಲಿಕ ಪಲಾಯನ ಅಷ್ಟೇ, ಮನಸ್ಥಿತಿ ಅದೇ ಹಾಗಾಗಿ ಪುಚ್ಚೀಗೂ ಗೊತ್ತಾಗಿರಬೇಕು...ಇಲ್ಲಿಂದ ಹೋಗ್ತಾರೆ ಇನ್ನೆಲ್ಲೋ ಮತ್ತೆ ಇಂತಹವರು ಸಿಗದೇ ಇರುವರೇ.. ಒಬ್ಬರ ಧುಃಖಕ್ಕೆ ಸ್ಪಂದಿಸುವ ಮನಸ್ಸಿನವರಿಗೆ ಸಿಗುವ ಜನ ಅಪವಾದ ಇದೇ..ಮೂರ್ಖ ಇವನೊಬ್ಬ, ಯಾರೋ ಕಷ್ಟ ಎಂದರೆ ಕರಗುತ್ತಾನೆ...ನಿಜ,,,ಅದು ಇವನ ಸ್ವಭಾವ..ಇಂತಹವರ ಸ್ವಭಾವ..ಬದಲಾಗದು ಸ್ಥಳ ಬದಲಾದರೂ...
ಬಹಳ ಚನ್ನಾಗಿ ಓದಿಸಿಕೊಂಡು ಹೋಗುವ ನಿನ್ನ ಎಂದಿನಂತಹ ಶೈಲಿ ಇಷ್ಟವಾಯಿತು ದೋಸ್ತಾ...

balasubramanya said...

ವಾಹ್ ಮಾನವ ಸಂಬಂಧಗಳ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದೀರಿ.ಪತಿ ಪತ್ನಿಯರ ಪರಸ್ಪರ ಸಂಬಂಧ,, ಗೆಳೆಯ ಗೆಳೆಯರ ಸಂಬಂಧ, ಎರಡು ಕುಟುಂಬಗಳ ನಡುವಿನ ಸಂಬಂಧ, ಹೀಗೆ ಹಲವು ಬಗೆಯ ಗೆಳೆತನದ ಮಜಲುಗಳು ಇಲ್ಲಿ ಚೆನ್ನಾಗಿ ಬಿಂಬಿತವಾಗಿವೆ. ಈ ಸಂಬಂಧಗಳ ನಡುವೆ ವಾಸ್ತವ ನೆಲೆಗಟ್ಟಿನ ದರ್ಶನವೂ ಕೂಡ ಇಲ್ಲಿ ಸಿಗುತ್ತದೆ. ಈ ಕೆಳಗಿನ ಸನ್ನಿವೇಶ ಒಮ್ಮೆ ನೋಡಿದರೆ ಪತಿ ಪತ್ನಿಯನ್ನು ಶಂಕಿಸಿದನೆ ?? ಅಥವಾ ಗೆಳೆಯನ ಕರುಣಾಜನಕ ಪರಿಸ್ಥಿತಿ ತನ್ನ ಪತ್ನಿಯ ಮನಸನ್ನು ಕದಡಿ ಕರುಣೆಯು ಪ್ರೀತಿಯಾಗಿ ಅವನೆಡೆಗೆ ಹರಿದು, ತನ್ನ ಸಂಸಾರದ ಮೇಲೆ ಪ್ರಭಾವ ಬೇರ ಬಹುದೇ ಎಂಬ ಅನುಮಾನ ಕಾಡಿತೆ ?? ಎನ್ನಿಸುತ್ತದೆ.ಅದಕ್ಕೆ ಪೂರಕವಾಗಿ ಅವನ ಮನಸು ಮನೆಯನ್ನು ಬದಲಾಯಿಸಲು ಬಯಸಿತೆ ?? ಎಂಬ ಪ್ರಶ್ನೆ ಕಾಡುತ್ತದೆ. ಒಟ್ಟಿನಲ್ಲಿ ವಾಸ್ತವತೆಯ ಸತ್ಯ ದರ್ಶನ ಆಗುತ್ತದೆ. ಭಲೇ ಪ್ರಕಾಶಣ್ಣ. ಭಲೇ.



ಹೆಂಡತಿಯನ್ನು ಕಳೆದುಕೊಂಡ ಅವನ ದುಃಖ ನನಗೂ ನೋಡಲಾಗುತ್ತಿಲ್ಲ...

"ಭಾವಾ..
ಸಮಾಧಾನ ಮಾಡಿಕೊ...
ಹೋದವರು ಹೋಗಿಬಿಟ್ಟರು...

ಮಕ್ಕಳ ಭವಿಷ್ಯ ...
ಅವರ ಜವಾಬ್ದಾರಿ ಬಗೆಗೆ ವಿಚಾರ ಮಾಡು...

ಸಮಾಧಾನ ಮಾಡಿಕೊ..."

ಆತನಿಗೆ ದುಃಖ ಉಮ್ಮಳಿಸಿ ಬಂತು...

ಅಳುತ್ತಿದ್ದ...

ಅವನ ಹತ್ತಿರ ಹೋಗಬೇಕು ಅಂದುಕೊಂಡೆ...

ಅಷ್ಟರಲ್ಲಿ ನನ್ನವ ವಾಪಸ್ ಬಂದ...

"ನನಗೆ ಮರೆತು ಹೋಗಿತ್ತು... ಇವತ್ತು ಬ್ಯಾಂಕ್ ರಜೆ.."

ಮನೆಯಲ್ಲಿ ಮೌನ ಆವರಿಸಿತು...
ಮಾತು ಯಾರಿಗೂ ಬೇಡವಾಗಿತ್ತು...

ನನ್ನವ ಗಂಭೀರವಾಗಿದ್ದ....

ಮೌನ ಅಸಹನೀಯವಾಗಿತ್ತು....

ಆತನಿಗೂ ...
ಏನು ಮಾಡಬೇಕೆಂದು ತೋಚಲಿಲ್ಲ...

ಸ್ವಲ್ಪ ಹೊತ್ತು ಬಿಟ್ಟು ..
ಕಣ್ಣೊರಿಸಿಕೊಳ್ಳುತ್ತ ತನ್ನ ಮನೆಗೆ ಎದ್ದು ಹೋದ...

ನನ್ನವನ ಮೌನ ಇನ್ನೂ ಮುಂದು ವರೆದಿತ್ತು...

"ರೀ...
ಎಷ್ಟು ಕಷ್ಟ ಅಲ್ಲವಾ ಈ ದುಃಖಗಳು...?"

"ಪುಚ್ಚಿ......
ನಾವು ಶೀಘ್ರದಲ್ಲಿ ಮನೆ ಬದಲಿಸುತ್ತಿದ್ದೇವೆ... ...."

ನನಗೆ ಆಶ್ಚರ್ಯವಾಯಿತು..!!....

"ಇಂಥಹ ಸಂದರ್ಭದಲ್ಲಿ ...
ನಾವು ಅವರ ಜೊತೆಯಲ್ಲಿ ಇರಬೇಕು..
ಹತ್ತಿರ ಇರಬೇಕಾದ ನಾವೇ..ಹೀಗೆ ಮಾಡಿದರೆ ಹೇಗೆ...? "

"ನೋಡು ಪುಚ್ಚಿ......

ನನಗೆ ನನ್ನ ಪ್ರೀತಿ...
ನನ್ನ ಹೆಂಡತಿ... ಮಕ್ಕಳು..
ನನ್ನ ಸಂಸಾರ ಮೊದಲು...

ನನ್ನ ಕುಟುಂಬಕ್ಕೆ ಮೊದಲ ಆದ್ಯತೆ......"

ಇಲ್ಲಿವರೆಗೆ ಒಳ್ಳೆಯವನಂತಿದ್ದ ...
ನನ್ನವ ನನಗೆ ಪ್ರಶ್ನೆಯಾಗತೊಡಗಿದ...

ಅರ್ಥವಾಗದೆ ಆತನನ್ನು ನೋಡಿದೆ...

ಆತ ನನ್ನನ್ನು ..
ತನ್ನೆದೆಗೆ ಎಳೆದುಕೊಂಡ...

"ಪುಚ್ಚೀ....
ಪ್ರಪಂಚದ ವೈಯಕ್ತಿಕ ದುರಂತಗಳಿಗೆ ನಾವು ಜವಾಬ್ದಾರರಲ್ಲ ...
ಪುಚ್ಚಿ......
ಅವರವರದ್ದು ಅವರವರಿಗೆ...
ನಮ್ಮದು ನಮಗೆ...

ನೀನು ನನ್ನ ಪ್ರೀತಿಯ ಪುಚ್ಚಿ...."

ಆತನ ಅಪ್ಪುಗೆ ಬಿಗಿಯಾಗಿತ್ತು...

ನನಗೆ ಕಸಿವಿಸಿಯಾದರೂ ಹಿತವಾಗಿತ್ತು...

Ittigecement said...

ಆಜಾದೂ....

ಪ್ರತಿಯೊಂದೂ ದಂಪತಿಗಳು ತಮ್ಮ ಸಂಸಾರಕ್ಕೊಂದು "ಪರೀಧಿ" ಹಾಕಿಕೊಂಡು ಅದರೊಳಗೇ ಬದುಕುತ್ತಾರೆ...

ಆ ಪರೀಧಿಯೊಳಗೆ "ದಂಪತಿಗಳಾಗಿದ್ದವರಿಗೆ" ಮಾತ್ರ ಅವಕಾಶ....

ಇಲ್ಲಿ ಆತ ಗೆಳೆಯನಾಗಿದ್ದ..
ಆತನಿಗೆ ಬೆನ್ನಿಗೆ ಬೆನ್ನಾಗಿ ನಿಂತು ಸಹಾಯ ಮಾಡಿದ ನಿಜ...

ಆದರೆ ಈಗ ಆತ ಗೆಳೆಯನಿಗಿಂತ ಹೆಚ್ಚಾಗಿ .."ವಿಧುರ"....
ಹೆಂಡತಿಯನ್ನು ಕಳೆದುಕೊಂಡವ..

ಪ್ರತಿಯೊಂದು ಸಂಸಾರ ತನ್ನ ಪರಿಧಿಯೊಳಗೆ ಅಷ್ಟು ಸುಲಭವಾಗಿ ಬೇರೆಯವರನ್ನು ಬಿಟ್ಟುಕೊಡುವದಿಲ್ಲ...

ಅಲ್ಲವಾ?

ಪ್ರೀತಿ.. ಸ್ನೇಹ.. ವಿಶ್ವಾಸ... ಸಹಾಯ ಎಲ್ಲವೂ ಆಮೇಲೆ...
ಮೊದಲು ತನ್ನ ಸಂಸಾರ...
ತನ್ನ ಕುಟುಂಬ...

ಇದು ತಪ್ಪೋ.. ಸರಿಯೋ ಅವೆಲ್ಲ ಆಮೇಲಿನ ಮಾತು...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು ... ಜೈ ಹೋ !!

Ittigecement said...

ಪ್ರೀತಿಯ ಬಾಲಣ್ಣ....

ಮಡದಿಯಾಗಲೀ...
ಪತಿಯಾಗಲಿ...

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿಸಲಿ...

ಪರ ಪುರುಷನೊ... ಮಹಿಳೆಯೊ ಅವರ "ಪರೀಧಿಯೊಳಗೆ" ಬರುತ್ತಾರೆಂದರೆ ಹದ್ದಿನ ಕಣ್ಣುಗಳಾಗಿ ಬಿಡುತ್ತಾರೆ...

ಇದು ಸರಿಯೊ.. ತಪ್ಪೊ ಪ್ರಶ್ನೆ ಬೇರೆ...

ತಮ್ಮ ಪರೀಧಿಯೊಳಗೆ ಅಷ್ಟು ಸುಲಭವಾಗಿ ಬೇರೆಯವರನ್ನು ಬಿಟ್ಟುಕೊಡಲಾರರು...

ಇಲ್ಲಿ ಆತ್ಮೀಯ ಸ್ನೇಹಿತನಾದರೂ... ಆತ ಈಗ "ವಿಧುರ..."

ಬಹಳ ಚಂದದ ವಿಶ್ಲೇಷಣೆ ನಿಮ್ಮದು...

ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು ... ಜೈ ಹೋ ಬಾಲಣ್ಣ...!!

umesh desai said...

ಕಥೆ ಚೆನ್ನಾಗಿದೆ..ದ್ವಂದ್ವ ಇದೆ ಇಲ್ಲಿ ಎರಡು ದನಿ ಇವೆ
ತದ್ವಿರುದ್ಧವಾದದ್ದು..ಯಾವುದು ಸರಿ ಈ ಗೊಂದಲ ಇದೆ..
ಯಾಕೆ ನಾಯಕ ಹಾಗೆ ಮಾಡಿದ ಕತೆಗಾರರಾದ ನೀವು ಹೇಗೆ
justifyಮಾಡ್ತೀರ ಅನ್ನೊ ಕುತೂಹಲ ಇದೆ..ದಯವಿಟ್ಟು ಹೇಳಿ..

samanvaya bhat said...

nijwad maatu....... nanage idu kathe antha anistane ille.... soooper prakashanna...

Mahesh Gowda said...

annaya super agide ....konege nayaka yake aaa tirmanakke bandda antaa odugara vevechange bittidira..

Ittigecement said...

ಉಮೇಶ ಭಾಯ್...

ಇದು ಸ್ವಲ್ಪ ಕಷ್ಟ.........

ಕಥೆಗಾರ ನಿರ್ಣಯ .., ಜಸ್ಟಿಫೈ ಕೊಡುವದು ಕಷ್ಟ ಅಲ್ಲವಾ?

ಆತ ತನ್ನ ಕುಟುಂಬದ ಹಿತಾಸಕ್ತಿಗೆ ಅನುಗುಣವಾಗಿ ಸರಿಯಾದ ನಿರ್ಣ್ಯಯ ತೆಗೆದುಕೊಂಡಿದ್ದಾನೆ ಎನ್ನ ಬಹುದೇನೊ...

ತನ್ನ ಗೆಳೆಯನ ಮಡದಿ ಬದುಕಿದ್ದಾಗ ಇಂಥಹ ಪ್ರಶ್ನೆ ಬರಲಿಲ್ಲವೆನೊ...

ಅವಳು ಹೋದ ಮೇಲೆ ತಾನು ಇಲ್ಲದಿದ್ದಾಗ ಗೆಳೆಯ ಒಂಟಿಯಾಗಿ ತನ್ನ ಮನೆಯಲ್ಲಿ ಕುಳಿತುಕೊಳ್ಳುವದು ಸಹಿಸಲು ಕಷ್ಟವಾಗಿರಬಹುದು...

ಅನುಮಾನ ಎನ್ನುವದಕ್ಕಿಂತ... "ಮುಂಜಾಗರುಕತೆ" ಎಂದರೆ ಸರಿಯಾಗಿರುತ್ತದೆ...

ಗೆಳೆಯನ ಮಕ್ಕಳು... ಅವನ ಕುಟುಂಬಕ್ಕೆ ಸಹಾಯದ ಅಗತ್ಯ ...
ಮಾನವೀಯತೆ ಎಲ್ಲವೂ ಸರಿ...

ಸಹಾಯ ಮಾಡಲು ಹೋಗಿ ತನ್ನ ಕುಟುಂಬದ ಹಳಿ ತಪ್ಪಿದರೆ ಅಂತ ಈ ನಿರ್ಧಾರಕ್ಕೆ ಬಂದಿರ ಬಹುದು...

ಇಲ್ಲಿ ಗೆಳೆಯನ ಮೇಲೆ ಅನುಮಾನವೋ.. ಮಡದಿಯ ಮೇಲೋ ...?

"ಮುಂಜಾಗರುತೆ" ಕೆಲಸ ಮಾಡಿದೆ ಅಂತ ಅಂದುಕೊಳ್ಳೋಣ...

ಚಂದದ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು... .....

ಮಹಿಮಾ said...

ಅವರವ ಪರಿಧಿ..ಅವರವರ ಭದ್ರತೆ..ಸ್ನೇಹಿತನನ್ನೂ ನಂಬದ ಮನಸ್ತಿತಿ..ಅಬಾ..ನಂಗೆ ನಿಮ್ಮ ಬರಹ ಇಷ್ಟ ಆಗೋದು ಅದಕ್ಕೇ..ಕಥೆ ಹೆಳ್ತಾ ಸತ್ಯದ ಅನಾವರಣ ಮಾಡಿಸ್ತೀರಿ..

asha hegde said...

ಸತ್ಯ ಕಹಿಯಾದರೂ ನಿಜವಾದ ಮಾತು...ತುಂಬಾ ಒಳ್ಳೇ ಕತೆ ಪ್ರಕಾಶಣ್ಣ......

Badarinath Palavalli said...

ಕಡೆಯ ನಿರ್ಧರವು ಲೈಕಿಕತೆ.

ಪ್ರಕಾಶಣ್ಣ ಸಹಾಯಗಳಿಗೂ ಒಂದು ಲಿಮಿಟ್ ಇರಬೇಕಲ್ಲವೇ? ಅಂತೇಯೇ ನಾಯಕನ ನಿರ್ಧಾರವೂ..

ಆಜಾದಣ್ಣ ಹೇಳಿದಂತೆ "ಮೂರ್ಖ ಇವನೊಬ್ಬ, ಯಾರೋ ಕಷ್ಟ ಎಂದರೆ ಕರಗುತ್ತಾನೆ". ಕೆಲವೊಮ್ಮೆ ಇಂತಹ ಮನಸ್ಸುಗಳಿಂದ ಮನೆಯವರಿಗೂ ಕಸಿವಿಸಿಯೇ ಅಲ್ಲವೇ!

ಬಾಲಣ್ಣನ ಮತ್ತು ಉಮೇಶಣ್ಣನ ಪ್ರತಿಕರಿಯೆಗಳೂ ಸರಿಯಾಗೇ ಇವೆ.

ಅಂದ ಹಾಗೆ ಹೀಗೆಲ್ಲ ನೀವು ಆಸ್ಪತ್ರೆ ಅಂತ ಈ ನಡುವೆ ತುಂಬಾ ಬರೆಯುತ್ತಿದ್ದೀರಿ. ಬೇಡಣ್ಣಾ...

Sudeepa ಸುದೀಪ said...

ನಾಯಕನ ಧಿಡೀರ್ ನಿರ್ಧಾರ ಕಥೆಗೆ ದೊಡ್ಡ ತಿರುವನ್ನೇ ಕೊಡ್ತು. ನಾನು ನನ್ನವರು ಮೊದಲು ಅಂದದ್ದು ನಿಜವೇ.... ಉತ್ತಮ ನಿರೂಪಣೆ ಎಂದಿನಂತೆ ಪ್ರಕಾಶಣ್ಣ....

Oha Yoha said...

ಸಮಯ ಸಂಧರ್ಭ ಯಾವಾಗಲೂ ಒಂದೇ ತರಹ ಇರೊಲ್ಲ...
ಇದು ನಂಬಿಕೆ ಅಪನಂಬಿಕೆಯ ಪ್ರಶ್ನೆ ಅಲ್ಲ...
ಕೆಲವೊಂದು ಸಂಧರ್ಭದಲ್ಲಿ ಯಾರ ತಪ್ಪೂ ಇರುವುದಿಲ್ಲ...
ಸಹಜ ಪ್ರಕ್ರತಿ ನಿಯಮನಕ್ಕನುಸಾರವಾಗಿ ತಪ್ಪು ನಡೆಯುವ ಸಾಧ್ಯತೆ ಇರುತ್ತದೆ...
ಈ ನಾಯಕ ನಿಜವಾದ ನಾಯಕ...
ಮುಂದೆ ದೊಡ್ಡ ತಪ್ಪಾಗಿ, ಅವನ ಸ್ನೇಹ, ಪ್ರೀತಿ ಎರಡನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ..
ಮುಂಜಾಗ್ರತೆಯಾಗಿ, ತೆಗೆದುಕೊಂಡ ಕ್ರಮದಿಂದ ಸ್ನೇಹಕ್ಕೆ ತಾತ್ಕಾಲಿಕವಾಗಿ ಸ್ವಲ್ಪ ಬೇಜಾರಗಬಹುದು,ಆದರೆ ಸ್ನೇಹ ಪ್ರೀತಿ ಶಾಶ್ವತವಾಗಿ ಸ್ವಚ್ಚವಾಗಿ ಉಳಿಯುತ್ತದೆ...

ನೈಜ ಜೀವನದ, ನೈಜ ಸೂಕ್ಷ್ಮಗಳನ್ನು ತಿಳಿಸುವ ನಿಮ್ಮ ಕಥೆಗಳು, ಹಿರಿಯರ ಇಸೋಪನ ನೀತಿಕಥೆಗಳು...

Unknown said...

ತುಂಬ ಸಂವೇದನಾಶೀಲ ಕಥೆ. ನಮ್ಮ ಮನಸ್ಸನ್ನು ಗಟ್ಟಿಯಾಗಿ ಹಿಡಿದುಕೊಂಡೇ ಮುಂದುವರಿಯುವ ಕಥೆ. ಸ್ನೇಹದ ಬಂಧವನ್ನು ಮನಂಬುಗುವಂತೆ ಚಿತ್ರಿಸಿದ್ದೀರಿ. ಚಿಕ್ಕ ಚಿಕ್ಕ ವಾಕ್ಯಗಳಲ್ಲೇ ಎಲ್ಲವನ್ನೂ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತೀರಿ. 'ಆ' ಸಂದರ್ಭದಲ್ಲಿ ನೀವು ಏನೂ ಹೇಳದೆಯೂ ನಮಗೆ ಅದು ಅರ್ಥವಾಗುವಂತೆ ಮಾಡಿದ್ದೀರಲ್ಲ...! ನಿಜಕ್ಕೂ ಅದು ದೊಡ್ಡ 'ಕಲೆ'...
ಪ್ರಕಾಶ್ ಜಿ, ಬೇಗ ನಿಮ್ಮ ಒಂದು ಕಥಾ ಸಂಕಲನ ಕನ್ನಡಿಗರ ಕೈಸೇರಲಿ.

Ittigecement said...

ಸಮನ್ವಯಾ....

ಈ ಕಥೆಗೆ ಬೇರೆ "ತಿರುವು" ಕೊಟ್ಟಿದ್ದೆ...
ಗೆಳೆಯರು ಯಾಕೊ ಸರಿ ಅನ್ನಿಸ್ತ ಇಲ್ಲ ಅಂತ ಹೇಳಿದಾಗ ಬದಲಿಸಿದೆ...

ಕೊನೆಯಲ್ಲಿ ಮಡದಿ "ಇಂಥಹ ಸಂದರ್ಭದಲ್ಲಿ ನಾವು ಅವರನ್ನು ಬಿಟ್ಟು ದೂರ ಹೋಗುವದು ಸರಿಯಾ? ಅಂತ ಕೇಳಿದಾಗ

" ನನ್ನ ಗೆಳೆಯ ಸಂಸಾರಸ್ಥನಾಗಿದ್ದ....
ಗ್ರಹಸ್ಥನಾಗಿದ್ದ...

ಆದರೆ ಈಗ ಆತ "ವಿಧುರ ......."....

ಆದರೆ ಈ ರೀತಿಯ ನೇರವಾಗಿ ಹೇಳುವ ಕೊನೆಯನ್ನು ಗೆಳೆಯರಿಗೆ ಇಷ್ಟವಾಗಲಿಲ್ಲ...
ನನಗೂ ಸರಿ ಎನಿಸಿತು...

ಕಥೆ ಇಷ್ಟವಾಗಿದ್ದಕ್ಕೆ ..
ಸಣ್ಣದಾದರೂ.... ಪ್ರತಿಕ್ರಿಯೆ... ಪ್ರೋತ್ಸಾಹ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಪ್ರತಿಕ್ರಿಯೆಗಳು ಟಾನಿಕ್ ಥರಹ.... ಮತ್ತಷ್ಟು ಬರೆಯಲು ಖುಷಿ ಕೊಡುತ್ತವೆ....

Ittigecement said...

ಪ್ರೀತಿಯ ಮಹೇಶು.....

ನಾನು ಮೊದಲ ಕಥೆ ಬರೆದಾಗ ನನ್ನ ಗೆಳೆಯ ನಾಗು ನನಗೊಂದು ಕಿವಿ ಮಾತು ಹೇಳಿದ್ದ...

"ಕಥೆಯೆಂದರೆ... ನಿಜ ಜೀವನದ ಚಿತ್ರದಂತಿರಬೇಕು...
ವಾಸ್ತವಕ್ಕೆ ಹತ್ತಿರವಾಗಿರಬೇಕು..

ವಿಷಯವನ್ನು.... ಘಟನೆಯನ್ನು ನೇರವಾಗಿ ಹೇಳಬೇಕು....

ತೀರ್ಮಾನವನ್ನು
ಓದುಗರು ತಾಮಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳಬೇಕು..."

ಆತನ ಮಾತು ನನಗೆ ಬಹಳ ಇಷ್ಟವಾಯ್ತು...
ಆದಷ್ಟು ಪಾಲಿಸವ ಪ್ರಯತ್ನ ನನ್ನದು...

ಅಷ್ಟು ಆತ್ಮೀಯರಾಗಿದ್ದಾಗ...
ಮಧ್ಯದಲ್ಲಿ....
ನಮ್ಮ ಅವಶ್ಯಕತೆ ನಮ್ಮ ಆತ್ಮೀಯರಿಗೆ ಅನಿವಾರ್ಯವಾಗಿದ್ದಾಗ...
ನಿರ್ದಯವಾಗಿ...
ಕೈ ಬಿಟ್ಟು ಹೋಗುವದು ಯಾರಿಗಾದರೂ ಕಷ್ಟ....

ಜೀವನ ಪೂರ್ತಿ ಮಾನಸಿಕ ಹಿಂಸೆ ಅನುಭವಿಸಬೇಕೆನೋ ಅಲ್ವಾ?

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಮಹೇಶು.....

Ittigecement said...

ಮಹೀ.....

"ಹತ್ತಾರು ವರ್ಷ ಹೆಣ್ಣಿನೊಡನೆ ಸಂಸಾರ ಮಾಡಿದ ಒಂಟಿ ಗಂಡು ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ..."
ಇದು ಎಲ್ಲೊ ಓದಿದ ನೆನಪು...

ಅಪವಾದಗಳು ಬೇಕಾದಷ್ಟು ಇವೆ...
ನಮ್ಮ ಪಕ್ಕದೂರಿನಲ್ಲಿ ಸಣ್ಣ ವಯಸ್ಸಿನಲ್ಲಿ ಮಡದಿಯನ್ನು ಕಳೆದುಕೊಂಡ ಒಬ್ಬರು ಮದುವೆಯಾಗದೆ ಮಗನನ್ನು ದೊಡ್ಡಮಾಡಿ..
ಅವನಿಗೊಂದು ಬಾಳುಕೊಡುವದರಲ್ಲಿ ಸಾರ್ಥಕತೆಯನ್ನು ಕಂಡರು..
ಇಂಥವರೂ ಇದ್ದಾರೆ...

"ಗೆಳೆಯನಾದರೂ....
ಆತ ಒಬ್ಬ ಗಂಡು.... ಅದರಲ್ಲೂ ವಿಧುರ..."

ನಿನ್ನೆ ಸಹೋದರಿ ಕಾವ್ಯಶ್ರೀ ಫೋನ್ ಮಾಡಿದ್ದಳು...
ಅವಳು ಇಂಜಯರಿಗ್ ವಿಧ್ಯಾರ್ಥಿನಿ ಮಂಗಳೂರಿನಲ್ಲಿ...

"ಅಣ್ಣಾ...
ಗಂಡಸರಿಗೆ ಪೊಸ್ಸೆಸ್ಸಿವನೆಸ್ ಕಡಿಮೆ....
ಅದು ಸಹಜವಾಗಿ ಹೆಂಡತಿಯರ ಸ್ವತ್ತು.... ಅಲ್ವಾ?"
ಅಂತ ತನ್ನ ಅಭಿಪ್ರಾಯ ಹೇಳಿದಳು...

ಬೇರೊಬ್ಬ ವ್ಯಕ್ತಿಯನ್ನು ...
ಅಷ್ಟು ಸುಲಭವಾಗಿ ತಮ್ಮ ಸಂಸಾರದೊಳಗೆ "ಪತಿ, ಪತ್ನಿಯರು" ಒಪ್ಪುವದಿಲ್ಲ...
ಆದಕ್ಕೆ ಲಿಂಗಬೇಧವಿಲ್ಲ ಅಂತ ನನ್ನ ಭಾವನೆ...

ಪ್ರೀತಿಯ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು...

Ranjita said...

ಕಥೆ ಇಷ್ಟ ಆತು. ಮೊದಲು ಒಳ್ಳೆಯವನಾಗಿದ್ದ ನಾಯಕ ಕಥೆಯ ಕೊನೆಯಲ್ಲಿ ಕೆಟ್ಟವನು ಅಂತ ಅನಿಸ್ತು ಆದರು ಸಂಸಾರಕ್ಕಾಗಿ ಅವನು ತೆಗೆದುಕೊಂಡ ನಿರ್ಧಾರ ಸರಿ ಇದ್ದು.

ಪದ್ಮಾ ಭಟ್ said...

ತುಂಬಾನೇ ಇಷ್ಟ ಆತು.. ಓದುತ್ತಾ ಓದುತ್ತಾ ಒಂದು ಕ್ಷಣ ಕಳೆದು ಹೋಗಿದ್ದೆ..

Srikanth Manjunath said...

"ತಾಯಿ ಕಾವೇರಿಗೆ ಏರಿಳಿತ ಉಂಟು...ತಪ್ಪುತದೆಯೇ ಈ ನರರಿಗೆ..."

ಅನುಬಂಧ, ಮಿಲನ, ಪರಿಣಯದ ಪದಗಳ ಜೊತೆ ಶುರುವಾದ ಸಿನಿಮಾ..ಬರುತ್ತಾ ಬರುತ್ತಾ...ಗುಪ್ತಗಾಮಿನಿಯ ಜೀವನದ ಅನುಭವಗಳು ಹರಿದು ಬಂದು ಅಚಾನಕ್ ತಿರುವು ಕಂಡಿತು..ಸ್ನೇಹ ಪ್ರೀತಿ ಎಲ್ಲರ ಉಸಿರಲ್ಲೂ ಬೆರೆತಿರುತ್ತದೆ..ಅದನ್ನು ಕೂದಲಿನ ಎಳೆಯಂತೆ ಕಥಾನಾಯಕಿಯ ಮೂಲಕ ವಿವಾಹ ಬಂಧನದ ಸೊಬಗು, ಕೌತುಕ, ಸಾಮರಸ್ಯದ ಕಗ್ಗಂಟುಗಳು ಬಿಡಿ ಬಿಡಿಯಾಗಿ ಹೇಳಿದ ಪರಿ ಮುದ್ದಣ್ಣ ಮನೋರಮೆಯ ಸಂಭಾಷಣೆಯಂತೆ ಮುದ ಕೊಡುತ್ತದೆ.

ಆದ್ರೆ ಜೀವನವೆಂದರೆ ಬರಿ ಅಲ್ಲವಲ್ಲ ಪ್ರೀತಿ ಪ್ರೇಮದ ಸ್ನೇಹದ ಬೆನ್ನಲ್ಲೇ ಕಷ್ಟ ಕಾರ್ಪಣ್ಯಗಳು ಜೊತೆ ಬರುತ್ತವೆ..

ಈ ನಿಟ್ಟಿನಲ್ಲಿ ಕಥಾನಾಯಕಿಯ ನಾಯಕ ತೋರಿದ ಗೆಳೆತನದ ಮಹತ್ವ..ಕಷ್ಟಕ್ಕೆ ನೇರವಾಗಿ ನಿಂತ ರೀತಿ, ಪ್ರತಿಯೊಂದು ಕೆಲಸವನ್ನು ಗುರಿ ಮುಟ್ಟಿಸಿದ ರೀತಿ ಗೆಳೆತನ ಎಂದರೆ ಇದೆ, ಹೀಗೆಯೇ ಎನ್ನುವ ಮಾದರಿಯಾಗಿ ನಿಲ್ಲುತ್ತಾನೆ. ಬಳ್ಳಿಗೆ ಮರ ಆಸರೆ ನಿಂತಾಗ...ಬಳ್ಳಿಗೆ ತನಗೆ ಒಬ್ಬರ ಆಸರೆ ಇದೆ ಎನ್ನುವ ವಿಶ್ವಾಸ ಮೂಡುತ್ತದೆ..ಇದು ನಾಯಕ ತನ್ನ ಗೆಳೆಯನ ಸಂಕಷ್ಟದ ಸಮಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವ ಸಂದರ್ಭ ಆನಾವರಣಗೊಂಡಿದೆ...ನೀರು ಹೆಚ್ಚಾದರೆ ಲತೆ ಸೊರಗುವ ಅಪಾಯಕೂಡ ಇದೆ ಎನ್ನುವುದನ್ನು ಅರಿತ ನಾಯಕ ಬೇರೆಡೆಗೆ ಹೋಗುವ ನಿರ್ಧಾರ ತಳೆಯುತ್ತಾನೆ...ಇದರಿಂದ ತಿಳಿಯುವುದು ದುಃಖ... ಅಲೆಗಳ ಅಬ್ಬರದಂತೆ ಕೊಂಚ ಕಾಲ ಏರಿ ನಂತರ ಇಳಿಯುತ್ತದೆ..ಆಗ ಗೆಳೆಯ ತನ್ನ ಜೀವನದ ಹರಿವನ್ನು ನೋಡಿಕೊಳ್ಳುವ ವಿಶ್ವಾಸ ಬರುತ್ತದೆ ಎನ್ನುವ ವಿಶ್ವಾಸ ನಾಯಕನದು.ಗೆಳೆಯನಿಗೆ ಆ ಕ್ಷಣದಲ್ಲಿ ಬೇಕಾಗಿದ್ದು ಮಾನಸಿಕ ಬೆಂಬಲ.....ಜೊತೆಯಲ್ಲೇ ಇದ್ದು ದಿನ ಅದರ ನೆನಪೇ ಮಾಡುತ್ತಾ ಗೆಳೆಯನನ್ನು ಬಲಹೀನ ಮಾಡುವ ಬದಲು ವಿಶ್ವಾಸ ಪ್ರತಿರೂಪ ಮಾಡಲು ಹೋರಾಟ ನಾಯಕನ ಗುಣ ಇಷ್ಟವಾಗುತ್ತದೆ. ಈ ವಿಚಾರವನ್ನು ಖಂಡಿತ ತನ್ನ ನಾಯಕಿಗೆ ತಿಳಿ ಹೇಳಿ ಒಪ್ಪಿಸಿ ರಮಿಸುವ ಬುದ್ದಿವಂತಿಕೆ ನಾಯಕನದು ಎನ್ನುವ ವಿಶ್ವಾಸ ನನ್ನದು..
ಗಂಗಾ ನದಿಯಂತೆ..ಎಲ್ಲೋ ಹುಟ್ಟಿ, ಜೊತೆಯಲ್ಲೇ ಹರಿದು, ಎಲ್ಲರೊಡನೆ ಒಂದಾಗುವ ನಾಯಕ ನಾಯಕಿಯಾ ಪಾತ್ರಗಳು ಇಷ್ಟವಾಗುತ್ತವೆ.ಅದರಲ್ಲೂ ನಾಯಕಿಯ ಅಮ್ಮ ನಾಯಕನನ್ನು ಹೊಗಳುವ, ಅಥವಾ ವ್ಯಕ್ತಿತ್ವವನ್ನು ಮೆಚ್ಚಿದ ಪರಿ ಇಷ್ಟವಾಗುತ್ತದೆ.
ನೀವು ಭಾವ ಪ್ರಪಂಚದಲ್ಲಿ ಪದಗಳ ಬೆಂಬಲದಲ್ಲಿ ಮೋಡಿ ಮಾಡುವ ಜಾದುಗಾರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಗೆಳತಿ said...

ಅಣ್ಣಯ್ಯ.. ಕಥೆ ಚೆನ್ನಾಗಿದೆ... ಪ್ರತಿ ಹೆಣ್ಣು ಬಯಸುವುದು ಇಂತಹ ಗಂಡನನ್ನೆ. ಆದರೆ ಮುಚ್ಚುಮರೆ ಇಲ್ಲದೇ ಹೇಳಬೇಕೆಂದರೆ ಕಥೆಯ ಕೊನೆಯ ತಿರುವು ನನಗೆ ಹಿಡಿಸಲಿಲ್ಲ..

ಈ ಕಥೆಗೆ ಬಂದಿರುವ ಪ್ರತಿಕ್ರಿಯೆಗಳು, ಆ ಪ್ರತಿಕ್ರಿಯೆಗೆ ನಿಮ್ಮ ಪ್ರತಿಕ್ರಿಯೆ ನೋಡಿದಾಗ ಸರಿ ಎನಿಸಿದರೂ.. ಮನಸ್ಸು ಸ್ನೇಹಿತನ ಈ ನಡವಳಿಕೆಯನ್ನು ಒಪ್ಪುತ್ತಾ ಇಲ್ಲ... ಕ್ಷಮೆ ಇರಲಿ...

ದಿನಕರ ಮೊಗೇರ said...

ಪ್ರಕಾಶಣ್ಣ,
ಮೊದಲಿಗೆ ಒಂದು ವಿಶ್ಯ... ಅದೇನೋ.... ’ಸರಳ ವಿಧಾನ ಇದ್ದಿದ್ದರೆ ’ ಎಂದರಲ್ಲ ..ಅದು ಏನು...?
ಕಥಾನಾಯಕ ಕೊನೆಯಲ್ಲಿ ವಿಲನ್ ಅನ್ನಿಸಿ ಬಿಡುತ್ತಾನೆ...ಆದರೂ.... ನಮ್ಮ ಕುಟುಂಬ.. ನಮ್ಮ ಜೀವನ ಎಂದೆಲ್ಲಾ ನೋಡಿದಾಗ ಇದು ಸರಿ ಎನಿಸುತ್ತದೆ.... ಎಲ್ಲದ್ದಕ್ಕೂ ಒಂದು ಪರಿಧಿ ಇರಬೇಕು.... ನಮ್ಮ ಪರಿಧಿ ಯಾವುದು.. ಎಲ್ಲಿದೆ ಎಂದು ನಮಗೂ ಅರಿವಿರಬೇಕು... ಮತ್ತು ಇನ್ನೊಬ್ಬರಿಗೆ ಅರಿವಿಗೆ ಬರುವ ಹಾಗೆ ವರ್ತಿಸಬೇಕು.... ಈ ರೀತಿ ಯೋಚಿಸಿದಾಗ ಈ ಕಥೆಯ ಅಂತ್ಯ........ ಅತ್ಯಂತ ಒಪ್ಪಿಗೆಯಾಯಿತು....

ಅದಿರಲಿ.... ಮೊದಲು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ....

http://santasajoy-vasudeva.blogspot.com said...

ಗಂಡಸಿನ ಮನಸ್ಥಿತಿಯನ್ನು ನೇರವಾಗಿ ಹೇಳಿದ್ದಿರಿ ಜಿ ..ಅದ್ಭುತ :-)

Ittigecement said...

ಆಶಾರವರೆ....

ಈ ಕಥೆ ಬರೆದಾದ ಮೇಲೆ ಜಯತೀರ್ಥ ಎನ್ನುವರ ಮೆಸೇಜ್ ಬಂದಿತ್ತು...

"ಸರ್...
ನಿಮ್ಮ ಕಥೆ ಓದಿದ ಮೇಲೆ ನನಗನ್ನಿಸ್ತಾ ಇದೆ..
"ದಾಂಪತ್ಯ ಸಂಶಯದ ತಳಹದಿಯ ಮೇಲೆ ನಿಂತಿರುತ್ತಾ?"

"ಯಾಕೆ..?" ಅಂತ ಸಹಜವಾಗಿ ಮೆಸೇಜ್ ಕಳುಹಿಸಿದೆ..

"ಪತಿ/ ಪತ್ನಿಯರಿಬ್ಬರೂ ..
ತಮ್ಮ ಪರೀಧಿಯೊಳಗಡೆ ಮತ್ತೊಂದು ವ್ಯಕ್ತಿಯನ್ನು ಸುಲಭವಾಗಿ ಬಿಟ್ಟುಕೊಡುವದಿಲ್ಲ"... ಇದರ ಅರ್ಥ ..
"ಪರಸ್ಪರರ ಮೇಲೆ ಸಂಶಯ ತಾನೆ...?"

"ಹಾಗಲ್ಲ... ಅದು "ಪೊಸ್ಸೆಸ್ಸಿವನೆಸ್"...
ಪ್ರೀತಿಸುತ್ತೇವೆ ಎನ್ನುವದರ ಇನ್ನೊಂದು ರೂಪ.."

ಅಷ್ಟಕ್ಕೆ ಅವರು ಸುಮ್ಮನಾದರು...

ಈಗ ನನಗೆ ಅನ್ನಿಸ್ತಾ ಇದೆ... "ಪೊಸ್ಸೆಸ್ಸಿವನೆಸ್.... ಕೂಡ ಸಂಶಯದ ಇನ್ನೊಂದು ರೂಪ ಅಲ್ವಾ?..

ಈ ಕಥೆಯೊಳಗೆ ಇಷ್ಟೆಲ್ಲ ವಿಷಯ ಅಡಗಿತ್ತು ಅಂತ ಬರೆಯುವ ಮೊದಲು ಗೊತ್ತಿರಲಿಲ್ಲ...

ಪ್ರೀತಿಯಿಂದ ಓದಿದವರೆಲ್ಲರಿಗೂ ಪ್ರೀತಿಯ ವಂದನೆಗಳು...

ಆಶಾರವರೆ...
ನಿಮ್ಮ ಮಾತು ನಿಜ... "ಸತ್ಯ ಕಹಿಯಾದರೂ... ನಿಜವಾದ ಮಾತು"..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಬದರಿ ಭಾಯ್...

ನಿನ್ನೆ ಕೂಡ ನೀವು ಫೋನ್ ಮಾಡಿ "ಆಸ್ಪತ್ರೆ ಕಥೆಗಳನ್ನು ಕಡಿಮೆ ಮಾಡಿ" ಅಂತ ಹೇಳಿದ್ದು..
ನಿಮ್ಮ ಪ್ರೀತಿಗೆ ಸಾಕ್ಷಿ..

ಎರಡು ಫೋಟೊ ಲೇಖನ ಇದೆ...
ಫೋಟೊಗಳನ್ನು ಸ್ವಲ್ಪ ಸಂಸ್ಕರಿಸಿ ಹಾಕಬೇಕು...
ಅದಕ್ಕಾಗಿ ಒಂದೆರಡು ತಾಸು ಕುಳಿತುಕೊಳ್ಳಬೇಕು... ಹಾಗಾಗಿ ಆಗಲಿಲ್ಲ...

ಈ ಕಥೆಯಲ್ಲಿ ಆಸ್ಪತ್ರೆ ಇಲ್ಲದಿದ್ದಲ್ಲಿ ಇಶ್ಟು ಪರಿಣಾಮಕಾರಿಯಾಗಿ ಬರುತ್ತಿರಲಿಲ್ಲ ಎನ್ನುವದು ನನ್ನ ಅನಿಸಿಕೆ...

ಇತ್ತೀಚೆಗೆ ಬರೆದ ಕಥೆಗಳಲ್ಲಿ ಇದು ಬಹಳ ಚರ್ಚಿತ ಕಥೆಯಾಗಿಬಿಟ್ಟಿದೆ... ಇದು ಬಹಳ ಖುಷಿ ಕೊಟ್ಟಿದೆ...

ಬಾಲಣ್ಣ... ನೀವು... ಕಾವ್ಯಶ್ರೀ... ಜಯತೀರ್ಥ... ರಮೇಶು.. ಇನ್ನೂ ಅನೇಕರು ಫೋನ್ ಸಹ ಮಾಡಿದ್ದೀರಿ..
ಎಲ್ಲರಿಗೂ ಹೃದಯಪೂರ್ವಕ ವಂದನೆಗಳು...

ಪ್ರೀತಿ ಹೀಗೆ ಇರಲಿ...

Ittigecement said...

ಸುದೀಪ... (ಸುಮತಿ...)

ನನ್ನ ಗೆಳೆಯನೊಬ್ಬ ಇತ್ತೀಚೆಗೆ ತೀರಿಕೊಂಡಾಗ ಆತನ ಕಡೆಯವರು...
ಮಡದಿಯ ತವರಿನ ಕಡೆಯವರ್ಯಾರೂ ಸಹಾಯಕ್ಕಾಗಿ ಬರಲಿಲ್ಲ....
ನನ್ನ ಗೆಳೆಯ ಅವರಿಗೆಲ್ಲ ಹಣಕಾಸಿನ ಸಹಾಯ ಮಾಡಿದ್ದ..
ವಾಪಸ್ಸು ಬೇಕು ಅಂತ ಕೇಳಿರಲಿಲ್ಲ.... ಬಂದರೆ ಎಲ್ಲಿ ಹಣ ತಿರುಗಿ ಕೊಡಬೇಕಾಗಿ ಬರುತ್ತೇನೊ ಅಂತ ಒಬ್ಬರೂ ಬರಲಿಲ್ಲವಾಗಿತ್ತು...
ನನ್ನ ಗೆಳೆಯನ ಮಡದಿ ಯಾರಾದರೂ ಆಸ್ಪತ್ರೆಗೆ ಬನ್ನಿ ಅಂತ ವಿನಂತಿಸಿದಾಗ...
ಅಲ್ಲೊಬ್ಬ ಹೀಗೆ ಉತ್ತರ ಕೊಟ್ಟಿದ್ದನಂತೆ...

"ನಿನ್ನ ಕಷ್ಟಗಳಿಗೆ...
ತೊಡರೆ ತೊಡಕುಗಳಿಗೆ ನೀವೇ ಜವಾಬ್ದಾರರು...
ಆ ತೊಂದರೆಗಳು ನಮ್ಮನ್ನು ಅವಲಂಬಿಸಿ ಬರಲಿಲ್ಲ...
ನಾನೂ ಕೂಡ ಕಷ್ಟದಲ್ಲಿದ್ದೀನಿ... ಬರಲಾಗುವದಿಲ್ಲ..."

ಎಂದು ಖಡಾ ಖಂಡಿತವಾಗಿ ಹೇಳಿದ್ದನಂತೆ... ಇದು ಬಹಳ ನೋವು ತಂದಿತ್ತು...

ಈ ಕಥೆಯಲ್ಲಿ ನಾಯಕ ತನ್ನ ಮಡದಿ...
ಸಂಸಾರವನ್ನು ಎಷ್ಟೇ ಪ್ರೀತಿಸಿದರೂ....
ಗೆಳೆಯನ ಸಂಸಾರವನ್ನು ಮಧ್ಯದಲ್ಲಿ ಕೈ ಬಿಟ್ಟು ಹೋಗುವದು ನಿರ್ಧಯವಾದ ನಿರ್ಧಾರ.....

ಕಥೆಯನ್ನು ಓದಿ ಮೆಚ್ಚಿದ್ದಕ್ಕೆ...
ಪ್ರೋತ್ಸಾಹಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಚಿನ್ಮಯ ಭಟ್ said...

ಹಮ್ ಚೆನಾಗಿದೆ ಪ್ರಕಾಶಣ್ಣಾ..
ಅಂತ್ಯವಂತೂ ಬಹಳ ಇಷ್ಟವಾಯ್ತು...
ಮೊದಲೇ ಹೇಳಿದ್ದೀರಿ ಅವನ ಮಾತುಗಳೆಲ್ಲಾ ನೇರಾ ನೇರ ಅಂತಾ..ಹಾಗಾಗಿ ಎಲ್ಲೋ ಒಳಮನಸ್ಸಿನಲ್ಲಿ ಛೇ ಎಂದು ಕೊರಗುವುದಕ್ಕಿಂತ ಇದೇ ಒಳ್ಳೆಯದು..ಬಹಳ ಇಷ್ಟವಾಯ್ತು...
ಬರೆಯುತ್ತಿರಿ..ಒಂದೇ ಸಲಕ್ಕೆ ಓದಿಸಿಕೊಂಡು ಹೋಯ್ತು..
ಹಿಂದಿನ ಕಥೆಗಳಲ್ಲಿರುವಷ್ಟು ಸಂಕೀರ್ಣತೆ ಇಲ್ಲದದ್ದಕ್ಕೋ ಏನೋ ಬೇಗ ಅರ್ಥವಾಯ್ತು..ಇಷ್ಟವಾಯ್ತು..
ಓದಿ ಖುಷಿಯಾಯ್ತು...
ಬಂದಿದ್ದು ಸಾರ್ಥಕವಾಯ್ತು..
ನಮಸ್ತೆ :)

ಸತೀಶ್ ನಾಯ್ಕ್ said...

ಈ ಕಥೆಯನ್ನ ಭಾನುವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ನಿದ್ದೆ ಇಂದ ಕೂಡ್ಲೇ ಮೊಬೈಲ್ ನಲ್ಲಿ ಓದಿದ್ದೆ.. ಅನಿಸಿಕೆಯನ್ನ ಫೇಸ್ಬುಕ್ ನಲ್ಲೆ ಹಾಕಿದ್ದೆ. ಮೊಬೈಲ್ ನಲ್ಲಿ ಕನ್ನಡ ಬರೆಯೋ ಅವಕಾಶ ಇಲ್ಲವಾದ್ದರಿಂದ ಇಲ್ಲಿ ತಡವಾದ ಪ್ರತಿಕ್ರಿಯೆ ನೀಡ್ತಾ ಇರೋದಕ್ಕೆ ಕ್ಷಮೆ ಇರಲಿ.

ಮೊದ ಮೊದಲು ಓದ್ತಿದ್ದ ಹಾಗೆ ಪ್ರೇಮ ಕಥೆಯೇನೋ ಎನಿಸಿ ಬಿಡೋದುಂಟು.. ಹೌದು ಇದು ಪ್ರೇಮ ಕಥೆಯೇ.. ನಂತರ ನಂಗೆ ಈ ಅನುಮಾನ ಯಾಕೆ ಬಂತು ಗೊತ್ತಾಗ್ಲಿಲ್ಲ. ನೀವು ಅವರಿಬ್ಬರ ಪ್ರೇಮದ ಪರಿಮಿತಿಗಳನ್ನ ವಿವರಿಸುತ್ತಾ ಹೋದಾಗ ಆಗುವ ಆಹ್ಲಾದಕರ ಅನುಭೂತಿಗಳು ಅಂತಹ ಭಾವಗಳನ್ನ ಮೂಡಿಸಬಹುದು.

ಕಥೆ ಇದ್ದಕ್ಕಿದ್ದಂತೆ ತಿರುವು ತೆಗೆದು ಕೊಳ್ಳುತ್ತೆ.. ಥೇಟ್ ನಮ್ಮ ಜೀವನದಂತೆ. ಗೆಳೆಯನ ಹೆಂಡತಿಗಾಗುವ ಅಫಗಾಟ ಅದಕ್ಕವನ ಸ್ಪಂದನೆ.. ಅವನು ತೆಗೆದುಕೊಳ್ಳುವ ನಡವಳಿಕೆ ಎಲ್ಲವೂ ಅವನ ಸುಪ್ತ ಮಾನವೀಯತೆಯ ಒಂದು ಸ್ಪಷ್ಟ ಮುಖದ ಅನಾವರಣ ಗೊಳಿಸುತ್ತದೆ. ಕತೆಯ ಅಂತ್ಯ ಒಂದು ಬಹು ದೊಡ್ಡ ತತ್ವ ಸಂದೇಶವನ್ನೇ ಹೇಳುತ್ತದೆ ಖರೆ.

ಆಪತ್ತಿನಲ್ಲಿ ಅಥವಾ ಸಂಕಷ್ಟದಲ್ಲಿ ಸಿಲುಕಿರೋ ಒಬ್ಬ ವ್ಯಕ್ತಿ ಮೊದಲು ತಾನು ಸುರಕ್ಷಿತನಾಗಿದ್ದು ನಂತರ ಮತ್ತೊಬ್ಬನ ಸುರಕ್ಷತೆಗೆ ಧಾವಿಸಬೇಕು ಅನ್ನೋದು ಮೂಲ ಸುರಕ್ಷತಾ ನಿಯಮ. ಇಲ್ಲಿ ಆದದ್ದು ಅದೇ ಅಲ್ಲಿ ಅವನು ಸುರಕ್ಷಿತ ಗೊಳಿಸಿದ್ದು ಅವನ ಜೀವನವನ್ನ. ಮುಂದೆ ಅಪಘಾತ ಆಗುವುದೋ ಇಲ್ಲವೋ ಅದು ಆನಂತರದ ಘಟ್ಟ. ಆದರೆ ಅಪಘಾತ ವಾಗುವ ಮೊದಲೇ ಸುರಕ್ಷತೆಯತ್ತ ಹೊರಳುವುದು ಯಾವತ್ತಿಗೂ ಬುದ್ದಿವಂತಿಕೆಯ ನಡೆ. ನಾಯಕ ಬುದ್ಧಿವಂತ ಮಾತ್ರವಲ್ಲ ಅವನು ಸಂವೇದನಾ ಶೀಲ ಕೂಡ. ಅವನಿಗಾದ ಅಥವಾ ಅವನು ಕಂಡಿರಬಹುದಾದ ಹಲ ಉದಾಹರಣೆಗಳ ಜಾಡಿನಿಂದ ಅವನಿಗೆ ಆ ಕ್ಷಣಕ್ಕೆ ಆ ರೀತಿ ತೋಚಿರಬಹುದು. ಅದು ಅವನ ಒಳ್ಳೆಯ ನಡೆ. ಅತೀ ಹೆಚ್ಚು ಹಚ್ಚಿಕೊಂಡ ಸಂಭಂಧಗಳು ಸೃಷ್ಟಿಸಿ ಬಿಡೋ ಅವಾಂತರಗಳಿಗೆ ಆನಂತರ ಸುಲಭದ ಪರಿಹಾರ ಸಿಕ್ಕೋದು ತುಂಬಾ ಕಷ್ಟ.

ಇಲ್ಲಿ ಅವನ ಪ್ರೀತಿಯೂ ಸುರಕ್ಷಿತ ಅವನ ಗೆಳೆತನವೂ ಸುರಕ್ಷಿತ ಎರಡರ ನಡುವೆ ಕೊಂಚ ನೋವು ಉಂಟಾಗಬಹುದೆ ವಿನಃ ಹಾನಿಕಾರಕ ಅಂಶಗಳು ಯಾವತ್ತಿಗೂ ಕಂಡು ಬರುವುದಿಲ್ಲ ಒಂದೊಳ್ಳೆ ಕಥೆ ತುಂಬ ಇಷ್ಟವಾಯ್ತು ಪ್ರಕಾಶಣ್ಣ.

shubha hegde said...

U have designed an entire story beautifully especially the love and concern of partners. Franky,this story have touched my heart.Felt that theme of this story is very specific..both husband and wife must have a sense of conscious regarding their bond of love...'Precaution is better than to suffer latter' i do agree with this concept. however you change the home but how can u change the mindset of men? I think that personal status does not affect an illegal or any criminal activities.One who have strong morality and social responsibility he could not take turn to wrong route...

ಮೌನವೀಣೆ said...

ಪ್ರಕಾಶಣ್ಣ, ನಿಮ್ಮ ಬರಹ ಓದಿ ಮಾತೇ ಹೊರಡುತ್ತಿಲ್ಲ. ಪತಿ-ಪತ್ನಿಯರ ನಡುವಿನ ಕಳಕಳಿ, ಪ್ರೋತ್ಸಾಹ, ಪ್ರೀತಿಯ ಪರಕಾಷ್ಟೆಯ ಹತ್ತು ಮುಖಗಳ ವಿವೇಚನೆ ಮತ್ತು ಆದಿ ಅಂತ್ಯವೇ ಇಲ್ಲದ ಬಾಳ ಸಾಗರಕ್ಕೆ ತಮ್ಮದೇ ಶೈಲಿಯಲ್ಲೊಂದು ಪರಿದಿಯ ಕಟ್ಟೆ...ಕೊನೆಗೆ ನಾಯಕ ಯಾಕೆ ಇದ್ದಕ್ಕಿದ್ದಗೆ ಬದಲಾಗಿ ಬಿಟ್ಟ ಎಂಬುದೇ ಒಂದು ಸಲ ದ್ವಂದ್ವಕ್ಕೆ ಎಡೆಮಾಡಿಬಿಟ್ಟಿತು.

ಸಂಧ್ಯಾ ಶ್ರೀಧರ್ ಭಟ್ said...

"ಪರಿಧಿ " ಕಥೆಗೆ ತಕ್ಕನಾದ ಹೆಸರು.

ಮನಸ್ಸೇ ಹೀಗೆ ತನ್ನದೆಂದು ಗೆರೆ ಎಳೆದು ಗುರುತಿಸಿಕೊಂಡರೆ ಮುಗಿಯಿತು. ಆ ಗೆರೆ ಚೂರೇ ಚೂರು ಆ ಕಡೆ ಈ ಕಡೆ ಆದರೂ ಸಹಿಸುವುದಿಲ್ಲ. ಎಲ್ಲವನ್ನು , ಅದರಲ್ಲೂ ಪ್ರೀತಿಯನ್ನು ತನ್ನ ಪರಿಧಿಯಿಂದ ಹೊರ ಹೋಗಲು ಕೊಡುವುದಿಲ್ಲ. ಸಂಬಂಧಗಳನ್ನು ಎಲ್ಲೋ ಒಂದು ಕಡೆ ಪೊಸ್ಸೆಸ್ಸಿವ್ ನೆಸ್ ಕೂಡ ಗಟ್ಟಿಯಾಗಿ ಹಿಡಿದು ನಿಲ್ಲಿಸುತ್ತದೆ ಎನಿಸುತ್ತದೆ. ಇಲ್ಲಿಯೂ ನಾಯಕ ತನ್ನ ಪುಟ್ಟ ಗೂಡಲ್ಲಿ ಯಾವತ್ತಿಗೂ ಸಂತೋಷದಿಂದ ಇದ್ದವ.ಇನ್ನೊಬ್ಬರಿಗೂ ಆ ಖುಷಿಯನ್ನು ಹಂಚಿದವ. ಆದರೆ ತನ್ನ ಪರಿಧಿ ದಾಟಿ ಖುಷಿ ಹಂಚುವುದು ಅಥವಾ ಇನ್ನಾವುದೋ ಖುಷಿ ಅಥವಾ ದುಃಖ ತನ್ನ ಪರಿಧಿಯ ಒಳಗಡೆ ಬರುವುದು ಅವನಿಗೆ ಬೇಕಾಗಿರಲಿಲ್ಲ. ಮೊದಲು ಗುಣದಿಂದ ಇಷ್ಟವಾಗುವ ನಾಯಕ ಕೊನೆಗೆ ಅವನ ನಿರ್ಧಾರದಿಂದ ಕೆಟ್ಟವನೆನಿಸಿದರೂ , ಅವನ ಪರಿಧಿಯ ಒಳಗೆ ಅವನ ನಿರ್ಧಾರ ಸರಿಯಾಗೇ ಇದೆ ಎನಿಸುತ್ತದೆ.

ಕಥೆಯ ತಿರುವಿನಲ್ಲಿ ನಾಯಕ ಇಷ್ಟವಾಗದೆ ಹೋದರೂ, ಕಥೆಯೇ ಇಷ್ಟವಾಗಿಬಿಡುತ್ತದೆ.
ನಾಯಕ ಓದುಗನ ಮನ ಗೆಲ್ಲುವಲ್ಲಿ ಸೋತರೂ ಒಳ್ಳೆಯ ಕಥೆ ಕೊಟ್ಟು ನೀವು ಗೆದ್ದು ಬಿಟ್ಟಿರಿ ಪ್ರಕಾಶಣ್ಣ.

Ittigecement said...

ಪ್ರೀತಿಯ ಸುದರ್ಶನ...
ಪ್ರತಿಕ್ರಿಯೆ ಓದಿ ತುಂಬಾ ಖುಷಿಯಾಯಿತು...
ನಾನು ಕಥೆಯನ್ನು ಇದೇ ವಿಚಾರ ಇಟ್ಟುಕೊಂಡು ಬರೆದದ್ದು....

ಗೆಳೆಯನ ಕುಟುಂಬ ಕಷ್ಟದಲ್ಲಿದೆ..
ಸಹಾಯ ಮಾಡಬೇಕು ನಿಜ...

ಎಲ್ಲಕಿಂತ ದೊಡ್ಡದು" ತಾನು... ತನ್ನದು... ತನ್ನ ಪ್ರೀತಿ ...ತನ್ನ ಕುಟುಂಬ.."
ಇದನ್ನು ಸಂಶಯಿಸುವ..
ಕಳೆದುಕೊಳ್ಳುವ ಸಂದರ್ಭವನ್ನು ಯಾವ ದಂಪತಿಗಳೂ ಬಯಸುವದಿಲ್ಲ.... ಊಹೆಯನ್ನು ಸಹ ಮಾಡಬಯಸುವದಿಲ್ಲ...

ಆ ದೃಷ್ಟಿಯಿಂದ ವಿಚಾರ ಮಾಡಿದಾಗ ನಾಯಕನ ನಿರ್ಧಾರ ಸರಿ...

"ಜಗತ್ತಿನ ವೈಯಕ್ತಿಕ ದುರಂತಗಳಿಗೆ ನಾವು ಜವಾಬ್ದಾರರಲ್ಲ"....

ಬಹಳ ಚಂದದ ವಿಶ್ಲೇಷಣೆ.. ತುಂಬಾ ಇಷ್ಟವಾಯಿತು ಹುಡುಗಾ...

ತುಂಬಾ ತುಂಬಾ ಧನ್ಯವಾದಗಳು...

Kishan said...

Nice story. I would say 2 stories, having entirely different core and theme. However, they are blended so nicely... like a 'graduation' which we do in photo editing.

Ittigecement said...

ಗೋಪಾಲ ವಾಜಪೇಯಿಯವರೆ...

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಕಥಾ ಸಂಕಲನದ ಆಸೆ ನನಗೂ ಇದೆ..../

ನಿಮ್ಮ ಪ್ರೀತಿ.. ಆಶೀರ್ವಾದ ಹೀಗೆ ಇರಲಿ.... ಸಧ್ಯದಲ್ಲಿಯೇ ಕಥಾಸಂಕಲನ ಬಂದೀತು....

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಮತ್ತೊಮ್ಮೆ ನಮನಗಳು..

Ittigecement said...

ರಂಜಿತಾ....

ದ್ವಂದಗಳೇ ನಮ್ಮನ್ನು ಯಾವಾಗಲೂ ಕಾಡುವದು... ಅಲ್ವಾ?

ಸರಿ... ತಪ್ಪುಗಳು ಮಧ್ಯದಲ್ಲಿ ನಡೆಯಲು ಜಾಗವೇ ಇಲ್ಲ...
ಸರಿಯಾಗಿರಬೇಕು... ಅಥವಾ ತಪ್ಪಾಗಿರಬೇಕು...

ಒಮ್ಮೆ ಸರಿಯೆನ್ನಿಸಿದ್ದು ಮತ್ತೊಮ್ಮೆ ತಪ್ಪು ಎನ್ನಿಸಬಹುದು.....

ಸಮಯವೇ ನಿರ್ಧಾರಗಳ ತಪ್ಪು ಸರಿಗಳನ್ನು ನಿರ್ಧರಿಸುತ್ತದೆ ...

ಪ್ರತಿಕ್ರಿಯೆಗೆ ಧನ್ಯವಾದಗಳು...

shasana_samshodhane said...

ಕಥೆ ಚೆನ್ನಾಗಿದೆ. ಆದರೆ ಕಥೆಯ ಕೊನೆ ನನಗೆ ಇಷ್ಟವಾಗಲಿಲ್ಲ.

shasana_samshodhane said...

ನಿಜಕ್ಕೂ ಕಥೆ ತುಂಬಾ ಚೆನ್ನಾಗಿದೆ. ಕೊನೆ ಮಾತ್ರ ಗೊಂದಲ.

Ittigecement said...

ಪದ್ಮಾ....

ಇಲ್ಲಿಯವರೆಗೆ ಬಂದ ಅಭಿಪ್ರಾಯಗಳಲ್ಲಿ ಎರಡು ವಿಧ....

ಬಹುತೇಕವಾಗಿ...
ಮದುವೆಯಾದವರು "ನಾಯಕನ ನಿರ್ಧಾರ ತನ್ನ ಕುಟುಂಬದ ಹಿತದೃಷ್ಟಿಯಿಂದ ಸರಿಯಾದದ್ದು" ಅಂತ ಹೇಳಿದ್ದಾರೆ..

ಹೆಚ್ಚಾಗಿ
ಇನ್ನೂ ಮದುವೆಯಾಗದವರು "ನಾಯಕನ ನಿರ್ಧಾರ ಇಷ್ಟವಾಗಲಿಲ್ಲ" ಅಂತ ಖಡಾಖಂಡಿತವಾಗಿ ಹೇಳಿದ್ದಾರೆ..

(ಎಸ್ಸೆಮ್ಮೆಸ್ಸು/ ಈಮೇಲ್/ ಫೇಸ್ ಬುಕ್... ಬ್ಲಾಗಿನಲ್ಲಿನ ಅಭಿಪ್ರಾಯ.. ಎಲ್ಲವನ್ನೂ ಸೇರಿಸಿ ನೋಡಿದ ಅಭಿಪ್ರಾಯಗಳು)

ಅಂದರೆ...
ನಮ್ಮ ವಸ್ತುಸ್ಥಿತಿ ನಮ್ಮ ಅಭಿಪ್ರಾಯಗಳನ್ನು ನಿರ್ಧರಿಸುತ್ತದೆ ಅಂತಾಯಿತು....

ಒಂದು ಕಥೆಯನ್ನು ಇಷ್ಟು ಚಂದವಾಗಿ ಮಂಥನವಾಗಬಲ್ಲದು ಎನ್ನುವದು ಖುಷಿಕೊಡುವಂಥಹ ವಿಚಾರ...

ನಿಮಗೆಲ್ಲರಿಗೂ ಧನ್ಯವಾದಗಳು...

ದಿನಕರ ಮೊಗೆರ ತಮ್ಮ ಅಭಿಪ್ರಾಯಕ್ಕೆ ಉತ್ತರ ಕೊಡಲೇ ಬೇಕು ನುಣುಚಿಕೊಳ್ಳಬಾರದು ಅಂತ ಆಗ್ರಹಿಸಿದ್ದಾರೆ...
ಅದು ಒಂದು ತುಂಬಾ ಸ್ವಾರಸ್ಯಕರವಾದ ಘಟನೆ...

ಹೇಗೆ ಹೇಳಲಿ...? ನೋಡೋನ... ತುಂಬಾ ಇಕ್ಕಟ್ಟಿನ ಪರಿಸ್ಥಿತಿ ಇದು... ಹ್ಹಾ ಹ್ಹಾ !!

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ
ಪದ್ಮಾ ಪುಟ್ಟಿ ಧನ್ಯವಾದಗಳು....

ಚೈತ್ರ ಬಿ . ಜಿ . said...

ಆತ ಮಾಡಿದ್ದು ತುಂಬಾ ಸರಿ , ಗಂಡ ಹೆಂಡತಿ ಅಂತ ಬಂದಾಗ ಎಲ್ಲರೂ ' ಪರಿಧಿ ' ಆಚೆಗಿನವರೆ ..!