Tuesday, December 18, 2012

ಚಾಚಿಕೊ... ಬಾಚಿಕೋ.... ಅಪ್ಪಿಕೋ... !! !


ಯಾಕೊ ಗೊತ್ತಿಲ್ಲ....

ಇತ್ತೀಚೆಗೆ ದಿನಗಳು ಬಹಳ ಬೋರ್ ಎನ್ನಿಸುತ್ತಿದೆ....

ಅಂಥಹ ಸಮಸ್ಯೆಗಳು...

ಒತ್ತಡಗಳು ಏನೂ ಇಲ್ಲ...

ಆದರೂ ಬದುಕು ಒಂಥರಾ ಬೋರ್... !


ನಮ್ಮನೆಗೆ ಗೆಳೆಯ ಸತ್ಯ ಬಂದಿದ್ದ..


ಅವನದ್ದೂ ಅದೇ ಕಥೆ... !


"ಜನವರಿ ಹದಿನೈದರತನಕ ...

ಹೊಸ ಪ್ರಾಜೆಕ್ಟ್ ಶುರು ಮಾಡೊ ಹಾಗಿಲ್ಲ...
ಅದೇನೋ ಸಮಯ ಸರಿ ಇಲ್ವಂತೆ 
ಎಲ್ಲಾದ್ರೂ ಹೋಗೋಣ ಅಂದ್ರೆ ಮಕ್ಕಳಿಗೆ ಕಾಲೇಜು... ಇದೆ....

ತುಂಬಾ  ಬೋರ್ ಕಣೊ..."


ಡಿಸೆಂಬರ್ ಇಪ್ಪತ್ತೊಂದಕ್ಕೆ ....

ಶಿರಸಿಯ ಪ್ರಸಿದ್ದ ಅಡಿಕೆ ವ್ಯಾಪಾರಿಗಳಾದ ಜಿಟಿ ಅಣ್ಣನ ...
(ಗಣಪತಿ ಅಣ್ಣ ಊರುತೋಟ)ಮಗನ ಮದುವೆ...
ಅವರು ಆತ್ಮೀಯರು...
ಸ್ವತಃ ಮದುವೆಗೆ ಕರೆದು ಹೋಗಿದ್ದರು...

ಸತ್ಯ ಕೇಳಿದ..


"ಪ್ರಕಾಶು ...

ಮಕ್ಕಳು ಬರುವ ಹಾಗಿಲ್ಲ...
ಮಕ್ಕಳನ್ನು ನೋಡಿಕೊಂಡು ...
ನಮ್ಮ ...
ನಮ್ಮ ಶ್ರೀಯುತ ಶ್ರೀಮತಿಗಳು ಮನೆಯಲ್ಲಿ ಇರ್ತಾರೆ...

ನಾವಿಬ್ಬರು ಮದುವೆಗೆ ಹೋಗಿ ಬರೋಣ...


ಏನಂತಿಯಾ?"


ನಾನು ತಲೆ ಹಾಕುವವನಿದ್ದೆ...


ಅಷ್ಟರಲ್ಲಿ ...

ಆಕಾಶ.. ಭೂಮಿಗಳು  ಒಡೆದು ಹೋಗುವಂಥಹ  ಮಾತು ..!
ಅಡಿಗೆ ಮನೆಯಿಂದ ಬಂತು.... !

"ಸತ್ಯಾ...

ನೀನು ಬೇಕಾದರೆ ಹೋಗು...
ನಮ್ಮವರು ಬರೊಲ್ಲ..."

ಮಾತು ಹೇಗಿತ್ತು ಅಂದರೆ ಕತ್ತಿಯ ಮೊನೆಯ ಕಚ್ಚಿನಂತಿತ್ತು....


ಸತ್ಯ ಪ್ರಶ್ನಾರ್ಥಕವಾಗಿ ನೋಡಿದ..


ನನ್ನಾಕೆ ಇನ್ನೂ ಜೋರಾಗಿ ಹೇಳಿದಳು..


"ಸತ್ಯಾ...

ಇಪ್ಪತ್ತೊಂದಕ್ಕೆ ಪ್ರಳಯ...

ನಾನು ..

ನನ್ನ ಗಂಡನನ್ನು  ಕಳಿಸುವದಿಲ್ಲ...!

ಇಷ್ಟು ದಿನ ಇಬ್ಬರು ಒಟ್ಟಿಗೆ ಇದ್ದೇವೆ...


ಪ್ರಳಯ ಆಗುತ್ತೊ.. ಬಿಡುತ್ತೊ ಗೊತ್ತಿಲ್ಲ...


ಅವತ್ತೊಂದು ದಿನ ಅವರು ನನ್ನೊಂದಿಗೆ ಇರಲೇ ಬೇಕು...."


ಸತ್ಯ ನೆಗೆಯಾಡಿದ...


" ಮಾರಾಯ್ತಿ.....

ಪ್ರಳಯದ ಬಗೆಗೆ ನನಗೂ  ಗೊತ್ತಿಲ್ಲ..!

ನಿಮ್ಮನೆಯಲ್ಲಿ 

"ಪ್ರೀತಿ..
ಪ್ರೇಮ.. ಪ್ರಣಯವಂತೂ " ....  ಆಗುತ್ತದೆ ಕಣೆ... ! "

ಎಲ್ಲರೂ ನಕ್ಕೆವು...


ನನ್ನಾಕೆ ...

ಓಡಿ ಬಂದು ನನ್ನನ್ನು ತಬ್ಬಿಕೊಂಡಳು...

ಆಕೆಯ  ಕಣ್ಣಲ್ಲಿ ನೀರ ಹನಿ ಇಣುಕಿತ್ತು...


ಈ ಹುಚ್ಚು ಪ್ರೀತಿ ಬಿಟ್ಟು ಒಬ್ಬನೇ  ಹೇಗೆ ಹೋಗಲಿ...?


ಆ ..ದೇವರು...

ಇಷ್ಟು ಚಂದದ ನಮ್ಮ ... 
ನಮ್ಮ ಜಗತ್ತುಗಳನ್ನು ..
ಹಾಳು ಮಾಡುವಷ್ಟು ಕ್ರೂರಿ ಇರಲಿಕ್ಕಿಲ್ಲ ಅಲ್ವಾ... ?

.....  ..................  ............ .....


............  .................. ..... ಶಾರಿ ಬಳಿ ಮಾತನಾಡದೆ ತುಂಬಾ ದಿನಗಳಾಗಿ ಬಿಟ್ಟಿತ್ತು...


ನಮ್ಮ ಮನೆಯಲ್ಲಿ ...

ಶಾರಿಗೆ ಫೋನ್ ಮಾಡಿದರೆ ಸ್ಪೀಕರ್ ಫೋನ್ ಚಾಲು ಮಾಡಿಯೇ ಮಾತನಾಡುತ್ತೇವೆ...

ನನ್ನ ಮಾತು ಕೇಳಿ ಶಾರಿಗೆ ಬಹಳ ಖುಷಿಯಾಗಿತ್ತು...


"ಏನೋ .... ಗೊಮಟೇಶ್ವರಾ...?


ಯಾವಾಗ ಬರ್ತಿಯೋ ಊರಿನ ಕಡೆ...

ಬಾರೊ.. ಬಹಳ ಬೇಜಾರು ಬಂದಿದೆ..."

"ಶಾರಿ...

ಪ್ರಳಯ ಮುಗಿದ ಮೇಲೆ ಬರ್ತಿನೆ..."

"ಅಯ್ಯೊ ... ಮಾರಾಯಾ..

ಈ ಪ್ರಳಯ ಆಗೋದಿಲ್ಲ ಕಣೊ... ! "

"ಹೇಗೆ ಹೇಳ್ತೀಯಾ?"


"ಮೊದಲು ನಮ್ಮ ರಾಜ್ಯದ ವಿಷಯ ...


ಎಷ್ಟೆಲ್ಲ ರಾಜಕಾರಣಿಗಳಿಗೆ ...

" ಮುಖ್ಯ ಮಂತ್ರಿ " ಆಗುವ ಆಸೆ ಇದೆ ನೋಡು...

ಕುಮಾರ ಸ್ವಾಮಿ..

ಯಡಿಯೂರಪ್ಪ... ಈಶ್ವರಪ್ಪ...
ಕಾಂಗ್ರೆಸ್ಸಿನಲ್ಲಿ ಲೆಕ್ಕವಿಲ್ಲದಷ್ಟು..
ಇನ್ನೂ ಬಾಲ ಉದ್ದವಿದೆ ಕಣೊ..

ನಮ್ಮ ಹಾಗೆ ಅಲ್ಲ  ಇವರೆಲ್ಲ...


 ಭಯಂಕರ ದೈವ ಭಕ್ತರು.... !


ಹೋಮ ...

ಹವನ... ಯಜ್ಞ  ಎಲ್ಲ ಮಾಡಿಸ್ತಾ ಇರ್ತಾರೆ.. !

ದೇವಸ್ಥಾನಗಳಿಗೆ ಹೋಗ್ತಾಇರ್ತಾರೆ..

ಹರಕೆ ಮಾಡಿಕೊಳ್ತಾರೆ....

ದೇವರು ...

ಅವರ ಆಸೆ ನೆರವೇರಿಸುವ ತನಕ ಪ್ರಳಯ ಮಾಡೊಲ್ಲ ಕಣೊ...!

ನಮ್ಮ ದೇವರು ...

ನಮ್ಮಂಥಹ ಸಾಮಾನ್ಯರ ಪ್ರಾರ್ಥನೆಗಳನ್ನು ಕೇಳುವದಿಲ್ಲ ಕಣೊ..."

"ಶಾರಿ...

ಅವರ ಸಂಖ್ಯೆ ಕಡಿಮೆ ಇದೆ ಕಣೆ...
ನಮ್ಮಂಥವರ ಸಂಖ್ಯೆ ಜಾಸ್ತಿ ಇದೆ..."

"ಡುಮ್ಮಣ್ಣ...

ನಮ್ ಜನಕ್ಕೆ ಏನೇ ಆದ್ರೂ ಸಮಸ್ಯೆ ಇಲ್ಲ...

ಸರ್ಕಾರಗಳು ..

ತ್ರಿ ಜಿ... ಕಲ್ಲಿದ್ದಲು  ಅಂತೆಲ್ಲ ...
ಹಗರಣಗಳ ಮೇಲೆ ಹಗರಣ ಮಾಡುತ್ತ...
ಕೋಟಿ ಗಟ್ಟಲೆ ಗುಳುಮ್ ಮಾಡುತ್ತಿದ್ದರೂ ನಿಶ್ಚಿಂತೆಯಿಂದ ಇರ್ತಾವೆ...

ಕೇಂದ್ರ  ಸರ್ಕಾರದ ಹಗರಣಗಳೊ... !

ರಾಮ ರಾಮಾ.... !

ಎಲ್ಲ ಪಕ್ಷಗಳು ..

ಹಗರಣಗಳನ್ನು ವಿರೋಧಿಸಿದರೂ...
ಸರ್ಕಾರ ಮಾತ್ರ ತನ್ನ ಅವಧಿಯನ್ನು ಪೂರೈಸುತ್ತದೆ...!


ಎಲ್ಲವೂ ದೊಡ್ಡವರ ...
ಕೊಡು..
ತೆಗೆದುಕೊಳ್ಳುವ ವಿಚಾರಗಳು...!

ಮುಂದೆಯೂ .. ಇಂಥಾದ್ದೇ  ಸರ್ಕಾರ ...ಬರುತ್ತದೆ...!

ಚುನಾವಣೆಯಲ್ಲಿ ಯಾರು ಆರಿಸಿ ಬಂದರೆ ಏನು ...?


ಮಹಿಷಾಸುರ ಹೋದರೆ....

ಭಸ್ಮಾಸುರ ಬರ್ತಾನೆ...!

ಎಲ್ಲರೂ ..

ತಮ್ಮ ಯಕ್ಷಗಾನ ಕುಣಿತ ತೋರಿಸಿ ಹೋಗ್ತಾರೆ.. !

ನಾವು ..

ನಮ್ಮ ಬೆವರು ಸುರಿಸಿದ ಹಣ ಕೊಟ್ಟು ...
ಇವರ ಯಕ್ಷಗಾನ ಕುಣಿತ ನೋಡಬೇಕು.... !

ಇದು ನಮ್ಮ ಕರ್ಮ... !


ನಿನಗೆ ಇದೆಲ್ಲ  ಅರ್ಥವಾಗುವದಿಲ್ಲ ಬಿಡು...


ದೇಹದ ಜೊತೆಗೆ ಸ್ವಲ್ಪ ಬುದ್ಧಿನೂ ಬೆಳೆಸಬೇಕಿತ್ತು ಕಣೊ..."


ನನಗೆ ಸಣ್ಣ ಕೋಪ ಬಂತು..


"ಶಾರಿ..

ನಿನಗೇನೆ ಮಹಾ ಅರ್ಥವಾಗುವದು...?"

"ನೋಡೊ...

ಹಾವೇರಿ ಸಮಾವೇಶ ಆಯ್ತು...

ಅಲ್ಲಿಗೆ  ...

ಶಾಸಕರು... ಮಂತ್ರಿಗಳು ಹೋಗಿದ್ದೂ ಆಯ್ತು...

ಬಿಜೇಪಿ ಸರ್ಕಾರದ ವಿರುದ್ಧವಾಗಿ ...

ಜನರ ಉದ್ಧಾರಕ್ಕಾಗಿ ಹೊಸ ಪಕ್ಷದ ಉದಯ ಆಯ್ತು... !

ಏನಾಯ್ತು...?


ಸರ್ಕಾರ ಬಿದ್ದು ಹೋಯ್ತಾ ?..."


"ಇಲ್ಲವಲ್ಲೆ... !! "


"ಅದೇ ಹೇಳಿದ್ದು...

ನಿನ್ ಹೊಟ್ಟೆ ಸೈಜಿಗೆ  ತಲೆ ಇರಬೇಕಾಗಿತ್ತು ಅಂತ...!

ದಿನಾ ಬೆಳಗಾದರೆ...

"ಕೆಟ್ಟ ಸರ್ಕಾರ ...
ಹಾಗೆ ಹೀಗೆ... "  ಎಂದು ಬಯ್ಯುವ ಪಕ್ಷಗಳು ..
ಶಾಸಕರು ...
ಮನಸ್ಸು ಮಾಡಿದರೆ ಬೀಳಿಸ ಬಹುದಲ್ಲವೆ?

ಕಾಂಗ್ರೆಸ್ಸು...

ಜೇಡಿಯೆಸ್ಸು.. ಕೇಜೆಪಿ....
ಯಾರೂ ಸರ್ಕಾರ ಬೀಳಿಸುವದಿಲ್ಲ ಕಣೊ... !

ಇಲ್ಲಿ ಅಂತ ಅಲ್ಲ...

ನಮ್ ದೇಶದಲ್ಲಿ 
ಎಲ್ಲ ಪಕ್ಷಗಳ ಉದ್ದೇಶ ಒಂದೇ ಕಣೊ...

ಅವರವರದ್ದು ಅವರವರಿಗೆ...

ಸಿಕ್ಕಿದಷ್ಟು "ಚಾಚಿಕೊ... ಬಾಚಿಕೋ.... ಅಪ್ಪಿಕೋ... !!

ನಾವು ಮೂರ್ಖರು... "


ನನಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ..


"ಪ್ರಕಾಶು....

ನಮ್ಮ ಮಾಧ್ಯಮದವರು ಇನ್ನೂ ಎಚ್ಚರವಾಗಿರಬೇಕು...

ಇವರನ್ನು ...

 ಸರಿ ದಾರಿಗೆ ತರುವದಿದ್ದರೆ...
ಪ್ರಜಾಪ್ರಭುತ್ವ ಸರಿಯಾಗಿ ಇರಬೇಕೆಂದರೆ  ...
"ಎಚ್ಚೆತ್ತ ಮಾಧ್ಯಮಗಳಿಂದ ಮಾತ್ರ ಸಾಧ್ಯ....."

"ಸಾಕು ಮಾರಾಯ್ತಿ...

ಬಹಳ ಕೊರಿತಾ ಇದ್ದೀಯಾ...

ಹೇಗಿದ್ದರೂ ಪ್ರಳಯ ಆಗ್ತ ಇದೆಯಲ್ಲೆ...

ಎಲ್ಲ ಸರಿ ಆಗ್ತದೆ ಬಿಡು...."

"ಪ್ರಕಾಶು..

ಒಂದು ಮಾತು ಹೇಳ್ತೀನಿ...

ಪ್ರಳಯ ಆಗಬೇಕು ಕಣೊ... !


ಹುಟ್ಟಿದ ನಾವೆಲ್ಲ ಒಂದು ದಿನ ಸಾಯಲೇ ... ಬೇಕು...

ಸಾಯ್ತಿವಿ...
ಸಾಯುವಾಗ  ನಾವೆಲ್ಲ ಒಂಟಿಯಾಗಿ ಸಾಯ್ತಿವಿ...

 ನಾವು ಸಾಯುವಾಗ ..

ನಮ್ಮ ಹತ್ತಿರದವರೆಲ್ಲ ನಿಂತು ಅಳುತ್ತ ಇರ್ತಾರೆ...

ನಮಗೆ ಇವರನ್ನೆಲ್ಲ ಬಿಟ್ಟು ಹೋಗುವ ಸಂಕಟವೂ ಇರುತ್ತದೆ...ಇಂಥಾದ್ದೊಂದು ಪ್ರಳಯ ಆದರೆ ಮಜಾ ಕಣೊ... !
ಎಲ್ಲರೂ ಒಟ್ಟಿಗೆ ಸಾಯುತ್ತೇವೆ.. 

ದಿನಾ ಬೆಳಗಾದರೆ ..
ತಮ್ಮನೇ ಕಸವನ್ನು ನಮ್ಮನೆಗೆ ಎಸೆದು ...
ಜಗಳ ಮಾಡುವ ಪಕ್ಕದ ಮನೆ ಪರಮಣ್ಣ .. , 
ಯಾವಾಗಲೂ ಜಗಳ ಕಾಯುವ ಅವನ ಹೆಂಡತಿ  ವೆಂಕತ್ತೆ......

ಎಲ್ಲರೂ  ಒಟ್ಟಿಗೆ ಸಾಯ್ತೆವಲ್ಲೋ... !

"ಶಾರಿ...
ನಿನ್ನ ತಲೆ ಅದ್ಭುತ ಮಾರಾಯ್ತಿ...!"

"ಅಷ್ಟೇ ಅಲ್ವೋ...

ಯಾವಾಗಲೂ ಜಗಳ ಮಾಡುತ್ತ...
ಪ್ರೀತಿ ಮಾಡೊ ನನ್ನ ಗಂಡ...
ಮಕ್ಕಳು..
ನಮ್ ಗೆಳೆಯರು... ಎಲ್ಲರೂ ಒಟ್ಟಿಗೆ ಹೋಗ್ತಿವಲ್ಲೋ...!

ನಮ್ಮ ನಮ್ಮ ಆತ್ಮೀಯರನ್ನು ...

ಜೀವದ ಗೆಳೆಯರನ್ನು ...
ತಬ್ಬಿ ಹಿಡಿದುಕೊಂಡು ಸಾಯುವದು ಎಷ್ಟು ಮಜಾ ಅಲ್ವೇನೋ...!

"ಪ್ರಳಯದ ಶುಭಾಶಯಗಳು " ಅಂತ ಹೇಳಿ ಸಾಯಬಹುದಲ್ಲೋ...!


ಒಂಥರಾ ಥ್ರಿಲ್ಲು ಕಣೊ... ರೋಮಾಂಚನ ಆಗ್ತಿದೆ... !


ಇಡಿ ಜಗತ್ತಿನ ಜನ ...

ಒಂದು ದಿನ ಕಾದು ಕುಳಿತು...
ತಮ್ಮ....
ತಮ್ಮ ಅನಿವಾರ್ಯವಾದ ಸಾವನ್ನು ಕಾಣುವದು.... 
ಮಜಾ ಅಲ್ವೇನೋ... !! .."

ನನಗೂ ಮಜಾ ಅನ್ನಿಸಿತು... ವಾಹ್.... !


"ಲೇ...ಡುಮ್ಮಣ್ಣ...


ನೀನು ..

ನಿನ್ನ ಹೆಂಡ್ತಿ... ಮಗನ ಸಂಗಡ ಅಲ್ಲಿರಬೇಡ... !

ಸುಡುಗಾಡು ...

ಗಲೀಜು ಬೆಂಗಳೂರಲ್ಲಿ ಸಾಯಬೇಡ... !

ಮೊದಲೇ ಸ್ಮಶಾನದ ತರಹದ ಇದೆ.. ನಿಮ್ " ಮೆಟ್ರೊ" ಬೆಂಗಳೂರು  !


ಎಲ್ಲರೂ "ಪ್ರಳಯಕ್ಕಾಗಿ... "  ನಮ್ಮನೆಗೆ ಬನ್ನಿ...


ಒಟ್ಟಿಗೆ ಸಾಯೋಣ...

ಮಜಾ ಮಾಡೋಣ... ಏನಂತೀಯಾ...?... !!... 

ಡುಮ್ಮಣ್ಣ..

ಹ್ಯಾಪಿ ಪ್ರಳಯ ಇನ್ ಅಡ್ವಾನ್ಸ್... !..."

ನಾನು ತಲೆ ಕೆರೆದು ಕೊಂಡೆ ....


"ಹ್ಯಾಪಿ  ಪ್ರಳಯಾ... ! "   ಅಂತ  ಹೇಳಲಾ? ಬೇಡವಾ ಅಂತ.....
( ದಯವಿಟ್ಟು ಶಾರಿಯ ಮಾತುಗಳನ್ನು ಹಾಸ್ಯವಾಗಿ ಪರಿಗಣಿಸಿ ...)

25 comments:

ಸತೀಶ್ ನಾಯ್ಕ್ said...

ಹ್ಮ್ಮ್..

ಉಂಡು ಮಲಗೋ ಹೊತ್ತಲ್ಲಿ ಪ್ರಳಯದ ಚಿಂತೆ..!!

ನಮ್ಮಮ್ಮನು ಕೂಡ ಹಾಗೆ.. ಇವತ್ತು ಫೋನ್ ಮಾಡಿ ಒಂದು ವಾರ ರಜೆ ಹಾಕಿ ಊರ್ ಕಡೆ ಬಾ.. ತುಂಬಾ ನೋಡ್ಬೇಕು ಅನ್ನಿಸ್ತಿದೆ.. ದೇವಸ್ತಾನದಲ್ಲಿ ಧನುರ್ಮಾಸದ ಮೊದಲ ವಾರದ ಪೂಜೆ ನಾವೇ ಮಾಡ್ಸೋಣ ಅಂತಿದ್ರು..

ಪ್ರಳಯದ ಕಡೆಗಿನ ಭಯದಿಂದ ನನ್ನನ್ನವರು ಕರೆದಿದ್ರು ಅನ್ನೋದು ಸತ್ಯವಾದರೂ.. ಅದನ್ನ ಅವರು ನನ್ನ ಬಳಿ ಪ್ರಸ್ತಾಪಿಸಿದರೆ ನಾ ಅದೂ ಇದೂ ಸೈನ್ಸು ಮ್ಯಾತ್ಸು.. ಪಾಠ ಹೇಳಿ ಅವರ ತಲೆ ಕೆಡಿಸ್ತೀನಿ ಅಂತ ಗೊತ್ತು ಅದ್ಕೆ.. ಪೂಜೆ ಪ್ರವಚನ ಹೇಳ್ತಾ ಇದ್ರು.

ಪ್ರಳಯ ಆಗುತ್ತೋ ಬಿಡುತ್ತೋ.. ಆದ್ರೆ ಸಾಯೋವಾಗ ಒಟ್ಟಿಗಿರೋಣ ಅನ್ನೋ ಆಸೆ ಇದೆಯಲ್ಲ.. ಅದೊಂದು ಮಾತ್ರ ಅದ್ಭುತ ಜೀಕುತನ.

ನಮ್ಮ ಬದುಕಿನ ಪ್ರತೀ ಮಹತ್ವದ ಘಟ್ಟದಲ್ಲೂ ಅಷ್ಟೊಂದು ಜನ ಸಾಕ್ಷಿಯಾಗೊವಾಗ.. ನಮ್ಮ ಸಾವಿಗೆ ಯಾಕಾಗಬಾರದು..?? ಸತ್ತ ನಂತರ ನಮ್ಮ ಮುಖ ಅವರು ನೋಡ ಬಹುದೇ ವಿನಃ ಅವರುಗಳ ಮುಖ ನಾವು ನೋಡಲಾದೀತೇ..??

ಹೌದು ಹಾಗೊಮ್ಮೆ ಪ್ರಳಯ ಆಗೋದೇ ಆದರೆ.. ಆಗಿ ಹೋಗಲಿ. ಒಟ್ಟಿಗೆ ಬಾಳೋಕೆ ಆಸೆ ಪಡದ ಅದೆಷ್ಟೋ ಜನರಿಗೆ ಈ ಪ್ರಳಯ ಅನ್ನೋ ಭ್ರಮೆ.. ಒಟ್ಟಿಗೆ ಸಾಯ್ತೀವಲ್ಲ ಅನ್ನೋ ಸಮಾಧಾನ ಸೃಷ್ಟಿಸಿ ಕೊಟ್ಟಿದ್ರೂ ಕೊಟ್ಟಿರ ಬಹುದು..

ನಿಮ್ಮ ಲೇಖನದಲ್ಲಿ ಶಾರೀ ಅವರ ಪ್ರಸಂಗ ಮುದ ಕೊಡುತ್ತದೆ ಪ್ರಕಾಶಣ್ಣ.. ಪ್ರಳಯದ ಬಗೆಗೆ ಅವರದೇ ಆದ ದೃಷ್ಟಿಕೋನ & ಪ್ರಳಯ ಆಗುವುದಿಲ್ಲ ಅನ್ನುವುದಕ್ಕೆ ಅವರೇ ಕೊಡುವ ಪ್ರತಿಪಾದನೆಗಳು ನಿಜಕ್ಕೂ ತುಟಿಯಂಚಲಿ ನಗೆ ಮೂಡಿಸುತ್ತವೆ.. ಪಾಪಿ ಚಿರಾಯು ಅನ್ನುವ ಮಾತಿಗೆ ಪರ್ಯಾಪ್ತವಾಗಿ ಈಗಿನ ರಾಜಕೀಯ ವಲಯದ ಜ್ವಲಂತ ಗಳನ್ನ ಉದಾಹರಣೆ ಕೊಟ್ಟು ಅವರದನ್ನು ಸಮಜಾಯಿಸೋ ರೀತಿ.. ಅದಕ್ಕೆ ಅವರೇ ಸಾಟಿ.

ಇನ್ನು ಅತ್ತಿಗೆ ನಿಮ್ಮ ಮೇಲಿಟ್ಟ ಅದಮ್ಯ ಪ್ರೀತಿ.. ಮತ್ತೊಮ್ಮೆ ಮದುರ ಅನುಭೂತಿಯೊಂದರ ಪರಿಚಯ ಮಾಡಿಸಿ ಕೊಟ್ಟು ಹೋಗುತ್ತದೆ..

ಬರಹ ಬಹಳ ಚೆಂದ ಇದೆ ಪ್ರಕಾಶಣ್ಣ.. :) :)

Srikanth Manjunath said...

ಬಹುದಿನಗಳ (ತಿಂಗಳುಗಳ) ನಂತರ ಶಾರಿ ಮೇಡಂ ಬಂದಿದ್ದು ಖುಷಿ ಆಯಿತು..ಎಂತಹ ಸಮಸ್ಯೆಗೂ ತಮ್ಮದೇ ತರ್ಕಬದ್ಧವಾದ ಉತ್ತರ ಕೊಡುವ ಅವರ ಮಾತಿನ ಚಾಟಿ ಸೂಪರ್ ಇರುತ್ತೆ. ಜಗತ್ತಿಗೆ ಕಡೆ ಎಂದು ತಿಳುವಳಿಕೆ ಬಂದಾಗ ಮಾನವನ ಪ್ರೀತಿ ಪ್ರೇಮಗಳು ಎಲ್ಲವನ್ನು ಮರೆತು ಮುನ್ನುಗ್ಗಿ ನಿಲ್ಲುತ್ತದೆ.ನನಗಾಗಿ ನೀವು..ನಿಮಗಾಗಿ ನಾವು ಎನ್ನುವ ಮಾತುಗಳು ಎಷ್ಟು ಸುಂದರ. ಸಾಮಾನ್ಯ ನಿಮ್ಮ ಲೇಖನಗಳು ಲಯ್ಲಾಂಡ್ ಲಾರಿಯ ತರಹ ನಿಧಾನವಾಗಿ ಶುರುವಾಗಿ ನಂತರ ವೇಗ ಪದೆದುಕೊಳ್ಳುತಿತ್ತು...ಆದರೆ ಈ ಲೇಖನ ಘಟ್ಟ ರಸ್ತೆಯ ತರಹ ಅಚಾನಕ್ಕಾಗಿ ತಿರುವು ಪಡೆದುಕೊಂಡು..ಜಲಪಾತದ ಪರಿ ಧುಮುಕಿ ಶಾರಿ ಮೇಡಂ ಹತ್ತಿರ ತಲುಪಿದ್ದು ಸೊಗಸಾಗಿತ್ತು...ಕಪಟ, ಮೋಸ, ವಂಚನೆ ಇಲ್ಲದ ತಿಳಿ ಹಾಸ್ಯ ಭರಿತ ಮಾತುಗಳು ಎಷ್ಟು ತರ್ಕ ಬದ್ಧ..ಸುಂದರ ಲೇಖನ ಪ್ರಕಾಶಣ್ಣ...ಪ್ರಳಯವಿರಲಿ..ಪ್ರಣಯವಿರಲಿ ಬ್ಲಾಗ್ ಲೋಕದ ತಾರೆಗಳು ಯಾವಗಲು ಮಿನುಗುತ್ತಿರಲಿ...ಅಭಿನಂದನೆಗಳು...

ಜಲನಯನ said...

ಹಹಹಹಹ
ನಗೆಯು ಬರುತಿದೆ ಎನಗೆ
ನನ್ನ ದೂರದ ಅಕ್ಕನ ಮಗ 1 ರಿಂದ 9 ರ ವರೆಗೆ ಕಲಿತಿದ್ದ ಎಣಿಕೆ
10 ತೋರಿಸಿ ಎಷ್ಟೋ ಇದು ? ಅಂತ ಕೇಳಿದ್ದಕ್ಕೇ ಇದು ಸಂಖೆನೇ ಅಲ್ಲ ಅಂತ ಹೇಳಿದ್ದ. 9 ನಂತರದ ಎಣಿಕೆ ಗೊತ್ತಲ್ಲದ ಮಾಯನರು ಕಂಪ್ಯೂಠರ ಯುಗದ ನಮಗೆ ಪೆದ್ದರ ಕ್ಯಾಲಂಡರ್ ತೋರಿಸಿ ಪ್ರಳಯ ಅಂದ್ರೆ ನಂಬೋದಾ?
ಆದ್ರೆ ಪ್ರಕಾಷೂ, ನಿನ್ನ ವಿಷಯ ನವಿರು ಹಾಸ್ಯದೊಡನೆ ಮೇಳೈಸಿ ನಿರೂಪಣೆ.ಮಾಡೂವ ಶೈಲಿ "ಪ್ರಕಾಶ್' ಟ್ರೇಡ್ ಮಾರ್ಕ್
ಪ್ರಳಯ ಪ್ರಣಯವಾಗಿದ್ದು, ಸೂಪರ್

ಸವಿಗನಸು said...

prakashanna,
praLaya mast aagide...shaari bahaLa dina admele bandidaare...
oTTige saayodu...kone aasey yaarigaadru idya anta yaaru keLore illa yaarigu....

Ashok.V.Shetty, Kodlady said...

ಈಗಷ್ಟೇ ನಾನು ಮತ್ತೆ ನನ್ನಾಕೆ ಈ ಪ್ರಳಯದ ಬಗ್ಗೆ ಮಾತಾಡ್ತಾ ಇದ್ವಿ....ಪ್ರಳಯ ಆಗೋಲ್ಲರೀ ಅಂತ ಅವಳು ಹೇಳಿದ್ರು ಅದೇ ಮಾತಲ್ಲಿ ಅವಳು ಇನ್ನೊಂದು ವಿಷಯವನ್ನು ಹೇಳಿದಳು..."ಪ್ರಳಯ ಆಗುತ್ತೆ ಅಂತ ಎಲ್ಲರೂ ಊರಿಗೆ ಬಂದಿದ್ರೆ ಎಷ್ಟೋ ವರುಷಗಳ ನಂತರ ನಾವೆಲ್ಲಾ ಒಟ್ಟಿಗೆ ಸೇರೋ ಅವಕಾಶ ಆಗ್ತಾ ಇತ್ತು ಅಲ್ವಾ ....ಸತ್ರು ಎಲ್ರೂ ಒಟ್ಟಿಗೆ ಸಾಯ್ತೀವಿ ಆಲ್ವಾ" ಅಂತ. ಹೌದು ಈ ಪ್ರಳಯದ ನೆಪದಲ್ಲಾದ್ರೂ ನಾವೆಲ್ಲಾ ಒಟ್ಟಿಗೆ ಸೇರೋಕೆ ಆಗ್ತಾ ಇತ್ತು ಎನ್ನುವ ಮಾತು ನನಗೂ ಸರಿ ಅನ್ನಿಸಿತು .........ಈ ಒಟ್ಟಿಗೆ ಸಾಯುವ ಮಾತು ಸಹ ......ಹೌದು ..ಒಂಥರಾ ಥ್ರಿಲ್ ಇದೆ ನೋಡಿ ಇದ್ರಲ್ಲಿ.......ಪ್ರಕಾಶಣ್ಣ, ನೀವು ಮತ್ತೆ ನಿಮ್ಮಾಕೆಯ ಈ ಪ್ರೇಮ ಸಂಭಾಷಣೆಯನ್ನು ನಾನು ನನ್ನಾಕೆ ಗೂ ತೋರಿಸಿದೆ.....ಅವರನ್ನು ನೋಡಿ ಸ್ವಲ್ಪ ಕಲೀರಿ ಎಂದಳು.....೨೧ ನೆ ತಾರೀಕು ಹೋಗಲಿ....ಆಮೇಲೆ ನೋಡೋಣ ಅಂದೆ ........

ಎಂದಿನಂತೆ ತಿಳಿ ಹಾಸ್ಯ ಲೇಪಿತ ಸುಂದರ ಬರಹ.....ಇಷ್ಟ ಆಯಿತು ಪ್ರಕಾಶಣ್ಣ.....ಪ್ರಳಯ ಆಗದೆ ಉಳಿದು ಬಿಟ್ರೆ ನಿಮ ಮುಂದಿನ ಪೋಸ್ಟ್ ಗೆ ಕಾಮೆಂಟ್ ಹಾಕ್ತೀನಿ......ಜೈ ಹೋ.....

ಸಿಮೆಂಟು ಮರಳಿನ ಮಧ್ಯೆ said...

ಸತೀಶು...

ಬಹಳ ಚಂದದ ಪ್ರತಿಕ್ರಿಯೆ.....!!

ಕೆಲವು ಡಂಬಾಚಾರದ ಜ್ಯೋತಿಷಿಗಳು...
ಪ್ರಚಾರದ ಹಂಬಾಲದ ಮಾಧ್ಯಮಗಳು ಹುಟ್ಟಿಸಿದ ಭ್ರಮೆಗಳು ಇವು....

ನೀವು ನಂಬುತ್ತೀರೊ ಇಲ್ವೊ...
ಇಪ್ಪತ್ತೊಂದಕ್ಕೆ ನನ್ನ ಕೆಲಸಗಾರರು ಕೆಲಸಕ್ಕೆ ಬರುವದಿಲ್ಲವಂತೆ..
ಹಿಂದಿನ ದಿನವೂ ಕೂಡ...!

ಸಾಯ್ತಿವಿ ಅನ್ನೋ ಹೆದರಿಕೆ ಮನುಷ್ಯನಿಗೆ ಆಗಾಗ ನೆನಪು ಆಗ್ತ ಇರಬೇಕು...
ಇದರ ಬಗೆ ಒಂದು ಮಸ್ತ್ ಘಟನೆಯನ್ನು ಇನ್ನೊಮ್ಮೆ ಹಂಚಿಕೊಳ್ಳಬೇಕು..

ಈ ಲೇಖನದಲ್ಲಿ ಉದ್ದವಾದೀತು ಅಂತ ಹಾಕಿಲ್ಲ...

ನನ್ನ ಅಮ್ಮನೂ ನಿನ್ನೆ ಕೇಳ್ತಾ ಇದ್ರು "ನಿಜಕ್ಕೂ ಪ್ರಳಯ ಆಗಬಹುದಾ?" ಅಂತ...

"ಅಮ್ಮಾ...
ದಿನ ನಿತ್ಯದ ಸುದ್ಧಿ ಪತ್ರಿಕೆ ಓದು...
ಸುದ್ಧಿ ಛಾನೆಲ್ಲು ನೋಡಮ್ಮಾ...

ಇನ್ನೆಂಥಹ ಪ್ರಳಯ ಆಗಬೇಕಿದೆ?

ದೆಹಲಿಯಲ್ಲಿ ಬಸ್ಸಿನಲ್ಲಿ ನಡೆದ ಅತ್ಯಾಚಾರ...

ಮನುಷ್ಯನ ಮಾನಸಿಕ ಸ್ಥಿತಿಗೆ "ಪ್ರಳಯ" ಆಗಿಬಿಟ್ಟಿದೆ ಅಲ್ವಾ?..."

ಅಮ್ಮ ಹೌದೆಂದು ಒಪ್ಪಿಕೊಂಡರು..

ಪ್ರಳಯ ಆಗುವದಿಲ್ಲ.... ಆಗಿಬಿಟ್ಟಿದೆ...

ಬರೆದದ್ದು ಸಾರ್ಥಕ ಎನ್ನುವಂಥಹ ಪ್ರತಿಕ್ರಿಯೆ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಪ್ರೀತಿ ಹೀಗೆ ಇರಲಿ...

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಶ್ರೀಕಾಂತು....

ನಿಮ್ಮ ಪ್ರತಿಕ್ರಿಯೆಗಾಗಿ ನಾನು ಕಾಯ್ತಾ ಇರ್ತೇನೆ...
ಟಾನಿಕ್ಕು ಇದ್ದಂಗೆ ಇರ್ತದೆ...

ನಮ್ ಶಾರಿ...
ಮತ್ತು ಕುಷ್ಟ ಇಬ್ಬರೂ ಹಾಗೆ...

ಈ ಪ್ರಳಯದ ವಿಚಾರವಾಗಿ ಗಣಪ್ತಿ ಬಾವನನ್ನು ಮಾತನಾಡಿಸಿದ್ದೆ...
ಬಹಳ ಮಜವಿದೆ... ಇನ್ನೊಮ್ಮೆ ಹಂಚಿಕೊಳ್ಳುವೆ...

"ಪ್ರಳಯ ಆದರೆ ಆಗಿಬಿಡಲಿ ಅಲ್ವಾ?

ಬದುಕಾಗಿ ಈ ಎಲ್ಲ ಜಂಜಡಗಳು...
ಹೋರಾಟ... ಕಷ್ಟಗಳು...
ಎಲ್ಲವೂ ಒಂದೇ ಸಾರಿ ಮುಗಿದು ಹೋಗುತ್ತವೆ...

ಹೋಗುತ್ತಿರುವದು ನಾವೊಬ್ಬರೇ ಅಲ್ಲವಲ್ಲ...
ಎಲ್ಲರ ಸಂಗಡ ನಾವೂ ಸಹ..."

ಆದರೆ...
ಇದು ಹೆಚ್ಚಿನ ಜನರಲ್ಲಿ ಹೆದರಿಕೆ ಹುಟ್ಟಿಸಿತಲ್ಲ....

ಅಸಂಬದ್ಧ ತರ್ಕಗಳನ್ನು ಇಟ್ಟುಕೊಂಡು "ಪ್ರಳಯ" ಎನ್ನುವ ಭೂತವನ್ನು ಆಗಾಗ ಹುಟ್ಟಿಸುತ್ತ ಟೈಮ್ ಪಾಸ್ ಮಾಡುತ್ತಾರಲ್ಲ....

ಅಂಥಹ ಮೆದುಳುಗಳಿಗೆ ಭೇಷ್ ಎನ್ನಬೇಕು ಅಲ್ವಾ?

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

Badarinath Palavalli said...

ಪ್ರಳಯ ಆಗುತ್ತೋ ಬಿಡುತ್ತೋ ಪ್ರಕಾಶಣ್ಣ ಈಗ ಅದರದೇ ಬಿಸೀ ಚರ್ಚೆ!

ಒಟ್ಟಾರೆ, ಮನೆಯಾಕೆ ನಿಮ್ಮನ್ನು ಎನಿತು ಪ್ರೀತಿಸುತ್ತಾರೆ ಎಂದರೆ ಬಹುಶಃ ಪ್ರಳಯವೂ ಮುಂದೂಡಲ್ಪಡುತ್ತದೆ, ನೋಡ್ತಾ ಇರಿ.

"ನಮ್ಮ ಮನೆಯಲ್ಲಿ ...
ಶಾರಿಗೆ ಫೋನ್ ಮಾಡಿದರೆ ಸ್ಪೀಕರ್ ಫೋನ್ ಚಾಲು ಮಾಡಿಯೇ ಮಾತನಾಡುತ್ತೇವೆ..."

ಅಂತ ಯಾಕೆ ಬರೀತೀರಿ ಸಾರ್, ನಿಮ್ಮ ಬಗ್ಗೆ ಇಂತಹ ಸರ್ಟಿಫಿಕೇಟ್ ಬೇಕೆ? ಹಹ್ಹಹ್ಹಾ?

ಶಾರಿಯವರ ಮಾತಲ್ಲಿ ಇನ್ನೊಂದು ಅರ್ಥವಿದೆ, ಈ ಯಡ್ಡಿ ಕುಮ್ಮಿ ಮುಂತಾದವರೆಲ್ಲಾ ಯಜ್ಞ ಮಾಡ್ತಿರೋದು ಪ್ರಳಯ ಆಗದಿರಲಿ, ತಾವು ಮತ್ತೆ ಆರಿಸಿಬಂದು ಪೊಗದಸ್ತಾಗಿ ತಿನ್ನುವ ಅವಕಾಶ ಸಿಗಲಿ ಅಂತ!

ಒಳ್ಲೆಯ ಪ್ರಾಸಂಗಿಕ ಬರಹ.

ಚುಕ್ಕಿಚಿತ್ತಾರ said...

HAPPY PRALAYA.. PRANAYA..:)

vandana shigehalli said...

ಪ್ರಳಯ ಆಗುತ್ತೋಬಿಡುತ್ತೋ ಶಾರಿ ಬಂದರೆ ಮಾತ್ರ ವಾಕ್ ಪ್ರಹಾರ ಆಗುತ್ತೆ ಅದೂ ರಾಜಕೀಯವಾಗಿ .... ಸೂಪರ್ ....
ಸ್ಮಶಾನ ಬೆಂಗಳೂರಲ್ಲಿ ಸಾಯಕ್ಕಿಂತ ಶಾರಿ ಮನೇಲಿ ಸಾಯೋದು ಒಳ್ಳೇದು .......

sunaath said...

ಪ್ರಕಾಶರೆ,
ನಿಮ್ಮ ವಿನೋದದ ಪ್ರಳಯದಲ್ಲಿ ಕೊಚ್ಚಿಕೊಂಡು ಹೋದೆ ನಾ. ದಿನವೂ ಇಂತಹ ಪ್ರಳಯಗಳನ್ನು ನೀವು ಮಾಡುತ್ತಲಿರಿ ಎಂದು ಹಾರೈಸುತ್ತೇನೆ. ಪ್ರಳಯವು ನಿಜವಾಗಿಯೂ ಆಗುವಂತಹ ಸಮಯದಲ್ಲಿ ನಿಮ್ಮ ಜೊತೆಗೇ ಇದ್ದು ನಿಮ್ಮ ವಿನೋದವನ್ನು ಅನುಭವಿಸುತ್ತ ಇರಬೇಕು ಎನ್ನುವುದು ನನ್ನ ಬಯಕೆ!

Subrahmanya Hegde said...

ಆಗೋದೆಲ್ಲಾ ಒಳ್ಳೇದಕ್ಕೆ, ಪ್ರಳಯ ಕೂಡ. ಕೆತ್ತದ್ದೆಲ್ಲ ಹೋಗಿ ಒಳ್ಳೆದೆಲ್ಲ ಬರಲಿ ಅನ್ನೋದೊಮ್ದೆ ಆಶಯ. ಇರುವ ಕತ್ತಲೆಯಿಂದ ಬೆಳಕಿನೆಡೆಗೆ ಹೋಗೋ ದಾರೀಲಿ ಪ್ರಳಯ ಬಂದ್ರೆ ಪ್ರಳಯ ಒಳ್ಳೇದೆ ಅಲ್ವಾ?. anyway ನಾನೂ ಪ್ರಳಯದ ದಿನ ಊರಿಗೆ ಹೋಗ್ಬೇಕು ಅಂತ ಮಾಡಿದ್ದೆ, ಹುಟ್ದಲ್ಲೇ ಸಾಯ್ವನ ಹೇಳಿ.

ನಿಮ್ಮ 'ಪ್ರಳಯ ಚೇಷ್ಟೆ' ಚೆನ್ನಾಗಿತ್ತು. :)

ಸಂಧ್ಯಾ ಶ್ರೀಧರ್ ಭಟ್ said...

ಆ ದೇವರು...
ಇಷ್ಟು ಚಂದದ ನಮ್ಮ ...
ನಮ್ಮ ಜಗತ್ತುಗಳನ್ನು ..
ಹಾಳು ಮಾಡುವಷ್ಟು ಕ್ರೂರಿ ಇರಲಿಕ್ಕಿಲ್ಲ ಅಲ್ವಾ... ?
ದೇವರು ಹಾಳು ಮಾಡುವಷ್ಟು ಕ್ರೂರಿ ಅಲ್ಲ , ಆದರೆ ಮನುಷ್ಯನೇ ಸುಂದರ ಪ್ರಪಂಚವನ್ನು ನಾಶ ಮಾಡುತ್ತಿದ್ದಾನೆ. ಮಾನವತೆಯ ಸಂದೇಶಗಳು ಯಾವ ಪ್ರಯೋಜನಕ್ಕೂ ಬರಲ್ಲ ಅನಿಸುತ್ತೆ . ಮನುಷ್ಯತ್ವ ತೊರೆದು ರಾಕ್ಷಸತ್ವ ಮೆರೆಯುತ್ತಿದೆ. ನಿಜ ನೀವಂದಂತೆ ಬೆವರು ಸುರಿಸಿ ಹಣ ಕೊಟ್ಟು ರಾಜಕೀಯ ಯಕ್ಷಗಾನ ನೋಡುತ್ತಿದ್ದೇವೆ. ಪ್ರಳಯವಾಗಿಯೇ ಪ್ರಪಂಚ ನಾಶವಾಗಬೇಕೆಂದೇನು ಇಲ್ಲ. ಅಷ್ತ್ರೆಲಿಯಾದಲ್ಲಿ ಭಾರತೀಯರ ಮೇಲೆ ಧಾಳಿ, ವಕೀಲರು ಮತ್ತು ಮಾಧ್ಯಮಗಳ ನಡುವಿನ ಗಲಾಟೆ ,ದೆಹಲಿಯ ಗ್ಯಾಂಗ್ ರೇಪ್ ನಂತಹ ವಿಷಯಗಳನ್ನು ನೋಡಿದರೆ ಸಮಾಜ ಸ್ವಾಸ್ಥ್ಯ ಕೆಡಿಸುವ ಘಾತಕ ಶಕ್ತಿಗಳು ಹೆಚ್ಚ್ಹಾಗುತ್ತ , ಮನುಷ್ಯ ಮನುಷ್ಯನನ್ನೇ ಬಡಿದು ಕೊಲ್ಲುವ ದಿನ ದೂರವಿಲ್ಲ ಅನಿಸುತ್ತದೆ. ಆದರೆ ನಮ್ಮ ತುಕ್ಕು ಹಿಡಿದ ಆಡಳಿತ ಯಂತ್ರ ಮತ್ತು ಅದರಲ್ಲಿರುವವರು ಮಾತ್ರ ಇದ್ಯಾವುದನ್ನು ಲೆಕ್ಕಕ್ಕಿಡದೆ, ಎಲ್ಲಿ ಹಣ ಗಳಿಸಬಹುದು , ಎಲ್ಲಿ ಅಧಿಕಾರಕ್ಕೆ ಬರಬಹುದು ಎಂಬ ಸ್ವಾರ್ಥ ಯೋಚನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಸಿಮೆಂಟು ಮರಳಿನ ಮಧ್ಯೆ said...

ಆಜಾದೂ....

ಇದುವರೆಗೂ ಅದೆಷ್ಟೋ ಪ್ರಕೃತಿಯ ರಹಸ್ಯಗಳನ್ನು ಮನುಷ್ಯನಿಗೆ ಅರಿಯಲಾಗಲಿಲ್ಲ...
ಹಾಗಾಗಿ ಇಂಥಹ ಬೊಗಳೆಗಳನ್ನು ನಂಬುವ ಮನಸ್ಥಿತಿ....

ನಡೆಯೋದಿಲ್ಲ ಅಂತಿದ್ದರೂ...

ಎಷ್ಟೆಲ್ಲ ಚರ್ಚೆ ಆಯಿತಲ್ಲ...!
ಎಷ್ಟೆಲ್ಲ ಸಮಯ... ಇದಕ್ಕಾಗಿ ಮೀಸಲಿಟ್ಟೆವಲ್ಲ...

ನಾಸಾ ಈಗ ವಿವರಣೆಗಳನ್ನು ಕೊಡುತ್ತಿದೆ...

ನಿಬಿರು ಗ್ರಹಕಾಯ ಭೂಮಿಗೆ ಅಪ್ಪಳಿಸುತ್ತದೆ ಎನ್ನುವ ಕಲ್ಪನೆ...
ಆಯಸ್ಕಾಂತ ಧ್ರುವಗಳ ಸ್ಥಾನ ಪಲ್ಲಟ..

ಏನೆಲ್ಲ ವೈಜ್ಞಾನಿಕ ಕಾರಣಗಳನ್ನು ಕೊಟ್ಟು ನಂಬುವಂತೆ ಮಾಡಿದ್ದರಲ್ಲ... !!

ಪ್ರಳಯವಾಗಲಿಕ್ಕೆ ಬೇರೆ ಯಾವ ಕಾರಣವೂ ಬೇಕಿಲ್ಲ..
ಮನುಷ್ಯನ ಹಿಂಸಾ ಪ್ರವೃತ್ತಿಯೊಂದು ಸಾಕು...

ಪರಮಾಣು ಬಾಂಬ್ ಯುದ್ಧ ಸಾಕು ನಮ್ಮ ಪ್ರಳಯ ಮಾಡಲಿಕ್ಕೆ...

ಈ ಮನುಷ್ಯನಿಗೆ ಶಾಂತಿಯಿಂದ ಇರಲಿಕ್ಕೆ ಯಾಕೆ ಆಗುವದಿಲ್ಲ....?

ವಾತಾವರಣದ ಉಷ್ಣಾಂಶ ಏರಿ..
ಆಗುವ ಏರು ಪೇರಿನ ಅನಾಹುತಗಳು ಸಾಕು ಪ್ರಳಯವಾಗಲಿಕ್ಕೆ...

ಧ್ರುವ ಪ್ರದೇಶಗಳ ಹಿಮ ಕರಗಿದರೆ ಸಾಕಲ್ಲ...

ಆಜಾದು..
ಭಾರತಕ್ಕೆ ಬಂದು ಬಿಡು ಮಾರಾಯಾ...

ಇರುವಷ್ಟು ದಿನ ನಮ್ ದೇಶದಲ್ಲೆ ಇರೋಣ...

ಲೇಖನ ಇಷ್ಟವಾಗಿದ್ದಕ್ಕೆ ಜೈ ಹೋ !!

ಸಿಮೆಂಟು ಮರಳಿನ ಮಧ್ಯೆ said...

ಸವಿಗನಸು ಮಹೇಶ ಭಾವಯ್ಯ....

ಎಲ್ಲರೂ ಸಾಯುತ್ತಿರುವಾಗ "ಕೊನೆ ಆಸೆ ಏನು ? " ಅಂತ ಯಾರು ಕೇಳ್ತಾರೆ ಬಾವಯ್ಯಾ....?

೨೦೧೨ ಇಂಗ್ಲೀಶ್ ಸಿನೇಮಾದಲ್ಲಿ ತೋರಿಸಿರುವ ಹಾಗೆ ಆಕಾಶದಿಂದ ಬೆಂಕಿಯ ಉಂಡೆಗಳು ಬೀಳುವದು....
ಭೂಮಿ ಬಾಯ್ತೆರೆದು ಕೊಳ್ಳುವದು...

ಸಮುದ್ರ ಉಕ್ಕಿ ಬರುವದು...

ಜನರೆಲ್ಲ ಚಿಕ್ಕ ಚಿಕ್ಕ ಇರುವೆಗಳ ಹಾಗೆ ತೊಳೆದುಕೊಂಡು ಹೋಗುವದು... !

ಒಟ್ಟಿಗೆ ಸಾಯುವದು ಮಜಾ ಅಲ್ವಾ?

ಒಂದು ಸಾರಿ ಅನಿವಾರ್ಯದ ಸಾವು ಸತ್ತರೆ ಆಯ್ತಲ್ಲ... !

ಮತ್ತೆ ಬದುಕಿನ ... ಜಂಜಾಟವಿಲ್ಲವಲ್ಲ... ಎನ್ನುವದು ಶಾರಿಯ ಅಭಿಪ್ರಾಯ... !

ಹ್ಹಾ.. ಹ್ಹಾ... !


ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

ದಿನಕರ ಮೊಗೇರ said...

ಪ್ರಕಾಶಣ್ಣ,
ಪ್ರಳಯ...ಪ್ರಳಯ.... ಪ್ರಳಯ ಅಂತ ಎಲ್ಲರೂ ಎಲ್ಲರ ಮೇಲೆ ಪ್ರೀತಿ ತೋರಿಸ್ತಾ ಇದಾರೆ.... ಇವರೆಲ್ಲರ ಪ್ರೀತಿ ನೋಡಿ ದೇವರಿಗೂ ಪ್ರೀತಿ ಉಕ್ಕಿ ಪ್ರಳಯವನ್ನು ಮುಂದಕ್ಕೆ ಹಾಕಿದ್ದಾನಂತೆ... ಅದಕ್ಕೆ ನಿಮ್ಮ ಲೇಖನವೂ ಕಾರಣವಂತೆ... ಈ ಲೇಖನ ಓದಿದ ದೇವರು ನಿಮ್ಮ ಮನೆಯಲ್ಲಿ " ಬೇರೆ ... ಯಾವುದೋ " ಕಾರ್ಯಕ್ರಮ ಇದೆಯೆಂದು ಪ್ರಳಯವನ್ನು ಮುಂದಕ್ಕೆ ಹಾಕಿದ್ದಾನೆ..... ಧನ್ಯವಾದ ನಿಮ್ಮ ಲೆಖನಕ್ಕೆ.... ಹ್ಹ ಹ್ಹ.... ಎಂದಿನಂತೆ ಶಾರಿ ಅಕ್ಕ ಸುಪರ್...

ಸುದೀಪ said...

ಪ್ರಕಾಶಣ್ಣ...ಆಶಾ ಅತ್ತಿಗೆಯನ್ನ ಒಮ್ಮೆ ಮುಖತಃ ಭೇಟಿ ಆಗಲೇ ಬೇಕು ಅಂತ ಪ್ರತಿಬಾರಿ ನಿಮ್ಮ ಬ್ಲಾಗ್ಗೆ ಭೇಟಿ ಕೊಟ್ಟಾಗ ಅನಿಸುತ್ತೆ... :)
ಇನ್ನೊಂದು ವಿಷಯ ಈ 'ಶಾರಿ'ಪಾತ್ರ ಕಾಲ್ಪನಿಕವೇ ಅಥವಾ ನಿಜ ವ್ಯಕ್ತಿಯೇ..???

shubha hegde said...
This comment has been removed by the author.
shubha hegde said...

ನಿಮ್ಮ ಬ್ಲಾಗಿಗೆ ಬಂದರೆ ನಾನು ಯಾವುದೆ ಮೂಡಿನಲ್ಲಿದ್ದರೂ ಒಂದುಸಾರಿ ನಿಮ್ಮ ಮೂಡಿಗೆ ಕರೆದೊಯ್ದು ಬಿಡುತ್ತೀರಿ. ಅದು ನಿಮ್ಮ ಹೆಗ್ಗಳಿಕೆ. ಹಾಗೆ ನಿಮ್ಮ ಲೇಖನಗಳು ನಮ್ಮನ್ನು ಕಾಡುತ್ತವೆ. ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಕುಷ್ಟ,ಶಾರಿ, ನಾಗು ಇವರೆಲ್ಲ ನಮ್ಮವರಾಗಿಬಿಡುತ್ತಾರೆ. ನಾನು ಶಾರಿಯವರ ಬಿಗ್ ಫ್ಯಾನ್. ಕಥೆಗಳ ಜೊತೆಯಲ್ಲಿ ಇಂಥಹ ನಗೆ ಲೇಖನಗಳು ಬರುತ್ತ ಇರಲಿ.
very good article.. really very good conversation between shaari and ur family.i have liked these discussion which not only concerned abt family matters but also includes current affairs..beautifully written gossip with great fun. Thank you very much.

ಚಿನ್ಮಯ ಭಟ್ said...

ಪ್ರಕಾಶಣ್ಣಾ,
ಇನ್ನೊಂದು ಮುಖ...
ಚೆನಾಗಿದೆ...ಇಷ್ಟವಾಯ್ತು..
ಒಂದು ಸಲಹೆ..
ದಯವಿಟ್ಟು ಇದನ್ನು ಯಾವ ರಾಜಕಾರಣಿಗೂ ತೋರಿಸಬೇಡಿ,ಆ ಮೇಲೆ ಅವರು ಆತ್ಮಹತ್ಯೆ ಮಾಡಿಕೊಂಡ್ರೆ ರಿಸ್ಕು ನಿಮ್ಗೇ!!!!!!!

ಇಷ್ಟವಾಯ್ತು...
ಬರೆಯುತ್ತಿರಿ..
ಓದುವುದೊಂದೇ ನಮ್ಮ ಕೆಲಸ...

Gopal Wajapeyi said...

ಇವತ್ತು ಸಂಜೆ ಡಾಕ್ಟ್ರು, ''ಸದಾ ಮಕ ಗಂಟು ಹಾಕ್ಕಂಡೇ ಇರಬೇಡಿ... ಒಳ್ಳೇದಲ್ಲ... ಸ್ವಲ್ಪಾನಾದ್ರೂ ನಗಿ...'' ಅಂತ ವಾರ್ನ್ ಮಾಡಿ ಕಳಿಸೀದ್ರು. ಇದೀಗ ನಿಮ್ಮ
"ಚಾಚಿಕೊ... ಬಾಚಿಕೋ.... ಅಪ್ಪಿಕೋ... !! !" ಓದಿದೆ ನೋಡಿ... ನಕ್ಕು ನಕ್ಕು (ಕಫವೆಲ್ಲ ಹೊರಗೆ ಹೋಗಿ) ಎದೆ ಹಗುರವಾಯ್ತು... ಮಕ ಸ್ವಲ್ಪ ಅರಳಿತು. ಈಗ ಮತ್ತೆ ಓದಿದೆ. ಮತ್ತೆ ನಗತೊಡಗಿದೆ. ನನ್ನಾಕೆ ನನ್ನನ್ನೇ ವಿಚಿತ್ರವಾಗಿ ನೋಡಿ, ''ಡಾಕ್ಟರ್ ಹತ್ರ ಹೊಗೋದಕ್ಕೆ ಮುಂಚೆ ಚೆನ್ನಾಗಿದ್ರಲ್ರೀ... ಈಗೇನಾತು?'' ಅಂತ ಕೇಳಿ, ಮಿಕಿ ಮಿಕಿ ಮಕ ನೋಡತೊಡಗಿದಳು. ''ಓದಿ ನೋಡು.'' ಅಂತ ಅವಳಿಗೆ ನಾನು ಹೇಳೋ ಹಾಗಿಲ್ಲ. ಯಾಕಂದ್ರೆ ಆಕೆಗೆ ಕನ್ನಡ ಓದೋದಕ್ಕೆ ಬರೋದಿಲ್ಲ.
ಪ್ರಕಾಶ್ ಜಿ... ಇಷ್ಟೆಲ್ಲಾ ನಗೆಗುಳಿಗೆಗಳನ್ನ ನೀವು ಎಲ್ಲಿಟ್ಟಿರ್ತೀರಿ?''

ಅನುರಾಗ said...
This comment has been removed by the author.
ಅನುರಾಗ said...

ಪ್ರಕಾಶಣ್ಣ...ಯಾವತ್ತಿನಂತೆ ಸೂಪರ್...
ಪ್ರಳಯ ಆಗಲ್ಲ....ಗ್ಯಾರಂಟಿ! ನಿಮ್ಮ ಲೇಖನ ಓದಿಯೇ ಪ್ರಳಯ ಬಿದ್ದು ಬಿದ್ದು ನಗಬಹುದು...

balasubrahmanya k.s. balu said...

ಪ್ರಳಯ ಪ್ರಳಯ ಪ್ರಣಯ ಪ್ರಣಯ ಹ ಹ ಹ ಎಂತಹ ಭಾಷೆ ನಮ್ಮದು ಪ್ರ ಮತ್ತು ಯ ನಡುವಿನ ಒಂದು ಅಕ್ಷರ ಎಂತಹ ಆತಾ ಆಡಿಸ್ತಾ ಇದೆ ಸಾರ್.ಪ್ರ ಮತ್ತು ಯ ನಡುವೆ "ಳ "ಬಂದರೆ ಭಯ ಪಡುತ್ತಾರೆ," ಣ " ಬಂದರೆ ಸಂಭ್ರಮಿಸುತ್ತಾರೆ.ನಿಮ್ಮ ಲೇಖನದಲ್ಲಿಯೂ ಈ ಎರಡು ಅಕ್ಷರ ಗಳದೇ ಕಾರುಬಾರು, ಜೊತೆಗೆ ಶಾರಿಯ ಮಾತಿನ ಧರ್ಬಾರು,ಒಟ್ಟಿನಲ್ಲಿ ಒಳ್ಳೆಯ ವಿಡಂಬನೆಯ ಹಾಸ್ಯದ ಹೂರಣ ವನ್ನು ಪ್ರಳಯದ ಉಡುಗೊರೆಯಾಗಿ ನೀಡಿದ್ದೀರಾ. ಜೈ ಹೊ

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಅಶೋಕ್....

ಪ್ರಳಯ ಒಂದೇ ಸಾರಿ ಆಗಲಿಕ್ಕಿಲ್ಲ...
ಪ್ರಕೃತಿಯ ಪರಿಸರ ನಾಶದ ಪರಿಣಾಮ ಖಂಡಿತವಾಗಿ ಭೂಮಿಯ ಮೇಲೆ ಆಗುತ್ತದೆ..

ಮುಖ್ಯವಾಗಿ ನೀರಿನ ಸಮಸ್ಯೆ.... !
ಹಿಮಕಲ್ಲು ಕರಗುತ್ತದೆ... ಸಮುದ್ರ ಉಕ್ಕುತ್ತದೆ... ಭೂಮಿ ಮುಳುಗುತ್ತದೆ....

ಇದು ಜಾಗತಿಕ ಸಮಸ್ಯೆಯಾಯಿತು....

ಮನೆಯೊಳಗೆ ಪ್ರಳಯವಾಗಬೇಕಾದರೆ "ನೀರೆಯರೇ" ಕಾರಣ... ಅಲ್ವಾ?

ಹ್ಹಾ... ಹ್ಹಾ... !!

ಚಂದದ ಪ್ರತಿಕ್ರಿಯೆಗೆ ನಮನಗಳು....