Monday, August 15, 2011

ಒಂದು ಅಸಾಧ್ಯವನ್ನು "ಸಾಧ್ಯ"ವಾಗಿಸುವ ಪ್ರಯತ್ನ......


ಕಳೆದ ವರ್ಷ ನಾನು ಸಿಂಗಾಪುರಕ್ಕೆ ಹೋಗಿದ್ದೆ..
ನನ್ನ ತಮ್ಮ, ನಾದಿನಿ ತುಂಬಾ ಬಲವಂತ ಮಾಡಿದ್ದರು....


ತುಂಬಾ ದಿನಗಳಾಗಿದ್ದವು ಎಲ್ಲಿಯೂ ಹೋಗದೆ..


ಸಿಂಗಾಪುರಕ್ಕೆ ಹೋಗಿ ಅಲ್ಲಿನ ಅಭಿವೃದ್ಧಿಯನ್ನು ಕಂಡು ಮೂಕನಾಗಿದ್ದೆ..


ನನ್ನ ತಮ್ಮ ನನಗೆ ಅಲ್ಲಿನ ಇತಿಹಾಸ ವಿವರಿಸಿದ..


"ಅಣ್ಣಾ..
ಈ ದೇಶ ಕೆಲವು ದಶಕಗಳ ಹಿಂದೆ ಜೂಜುಕೋರರ..
ಗಾಂಜಾ.. ಮಾದಕ ವಸ್ತು ಸೇವಿಸುವವರ ಅಡ್ಡೆಯಾಗಿತ್ತು..
ಈ ದೇಶವನ್ನು ಈ ಸ್ಥಿತಿಗೆ ತಂದವರು "ಲೀ" ಅಂತ..
ಹಗಲೂ ರಾತ್ರಿ ಕಷ್ಟಪಟ್ಟು..
ಕೆಲವು ನಿರ್ದಾಕ್ಷಿಣ್ಯ ನಿರ್ಧಾರಗಳನ್ನು ತೆಗೆದುಕೊಂಡು ಸಿಂಗಾಪುರವನ್ನು ಈ ರಿತಿ ಅಭಿವೃದ್ಧಿ ಮಾಡಿದ್ದಾರೆ..."


ಜುರಾಂಗ್ ಅಂತ ಒಂದು ದ್ವೀಪವನ್ನು ಕಟ್ಟಿದ್ದಾರೆ..
ಮಣ್ಣನ್ನು ಬೇರೆಕಡೆಯಿಂದ ತಂದು.. 
ಸಮುದ್ರದಲ್ಲಿ ಹಾಕಿ,  ದ್ವೀಪವನ್ನು ನಿರ್ಮಿಸಿ..
ಅದನ್ನು..
ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿ ಮಾಡಿದ್ದಾರೆ...


ದೇಶದ ಜನಕ್ಕೆ ಅಗತ್ಯವಾದ ನೀರೂ ಕೂಡ ಅಲ್ಲಿಲ್ಲ... !
ಪಕ್ಕದ ದೇಶ "ಮಲೇಶಿಯಾದಿಂದ ನೀರನ್ನು ಆಮದು ಮಾಡಿಕೊಳ್ಳುತ್ತಾರೆ..


ಇಂಡೋನೇಶಿಯಾದಿಂದ ಕಚ್ಛಾ ತೈಲವನ್ನು ತಂದು..
ಇಲ್ಲಿನ ರಿಫೈನರಿಯಲ್ಲಿ ಶುದ್ಧಿಗೊಳಿಸಿ..
ಬಹಳಷ್ಟು "ಏಷಿಯಾದ ದೇಶಗಳಿಗೆ" ತೈಲ ರಪ್ತು ಮಾಡುತ್ತಾರೆ...!!


ನಾವು ಹುಚ್ಚರು.. !!
ನಮ್ಮ ಕಬ್ಬಿಣದ ಅದಿರನ್ನು ರಫ್ತು ಮಾಡಿ..
ಕಬ್ಬಿಣದ ಬೆಲೆ ಸಾಮಾನ್ಯ ಜನರ ಕೈಗೆ ಎಟುಕದ ಹಾಗೆ ಮಾಡಿದ್ದೇವೆ...


ನಮ್ಮದೇಶದಲ್ಲಿ ಎಲ್ಲವೂ ಇದೆ..
ಆದರೆ ನಾವೇಕೆ ಹೀಗೆ?


ನೂರು ಕೋಟಿ ಭಾರತೀಯರಲ್ಲಿ ಒಬ್ಬ "ಲೀ" ನಂಥಹ ವ್ಯಕ್ತಿ ಯಾಕೆ ಹುಟ್ಟಿಲ್ಲ...?
ದೇಶವನ್ನಾಳುವ ನೂರಾರು ಧುರಿಣರಲ್ಲಿ ಒಬ್ಬ "ಪ್ರಾಮಾಣಿಕ" ಯಾಕೆ ಇಲ್ಲಾ?


ನಮ್ಮ ಇತಿಹಾಸಗಳು...
ಪುರಾಣಗಳು ಹೇಳುವ  ಸತ್ಯ ಚಾರಿತ್ರದ  ಕಥೆಗಳು..
ಘಟನೆಗಳು ಸುಳ್ಳೇ...?


ಲಾಲ್ ಬಹಾದ್ದೂರ್ ಶಾಸ್ತ್ರಿ,   ಸುಭಾಸ್ ಚಂದ್ರ ಭೋಸ್.. 
ಗಾಂಧಿ ತಾತ.., ಗುರ್ಜಾರಿ ಲಾಲ್ ನಂದಾ...
ಇವರೆಲ್ಲ ನಿಜವಾಗಿಯೂ ಇದ್ದಿದ್ದರಾ?


ನಾವು ಯಾಕೆ ಹೀಗಿದ್ದೇವೆ...?


ಯಾಕೆ ನಾವು ಹೀಗಾಗಿದ್ದೇವೆ ?


ನಾವು ನಮ್ಮ ಆತ್ಮಸಾಕ್ಷಿಯನ್ನೇ ಕಳೆದುಕೊಂಡು ಬದುಕಿದ್ದೇವಾ...?
ಯಾಕೆ ಇಂಥಹ ಬದುಕು  ?


ಮಂತ್ರಿಗಳ ವಿರುದ್ಧ.. ಹಗರಣದ ವಿರುದ್ಧ ನಾವು ಮಾತನಾಡುತ್ತೇವೆ..
ನಿಜ ..
ಕೇವಲ ಮಾತನಾಡುತ್ತೇವೆ..


ಇದು ನಮ್ಮ ಕೈಯಲ್ಲಿ ಏನೂ ಮಾಡಲಾಗುವದಿಲ್ಲ ಅಂತ ಹಳಿದುಕೊಂಡು ಸುಮ್ಮನಾಗಿಬಿಡುತ್ತೇವೆ..


ಚುನಾವಣೆ ಬಂದಾಗ "ನಮ್ಮ ಜಾತಿ.. ಧರ್ಮದ.. ಭಾಷೆಯ" ಪ್ರಲೋಭನೆಗೆ ಒಳಗಾಗಿ "ಮತ" ಚಲಾಯಿಸುತ್ತೇವೆ...


ಇಂದು ನಮ್ಮ ದೇಶದ ಪ್ರಧಾನ ಮಂತ್ರಿ ಕೆಂಪುಕೋಟೆಯಿಂದ ಭಾಷಣ ಮಾಡುತ್ತಾರೆ..


"ಉಪವಾಸ.. ಸತ್ಯಾಗ್ರಹಗಳಿಂದ"...
 ಬ್ರಷ್ಟಾಚಾರ ನಿರೋಧ ಕಾನೂನು" ತರಲಾಗುವದಿಲ್ಲ..."


ಆಯ್ತು...
ನೀವೇ ಮಾಡಿರಪ್ಪಾ...!!


ಹಲ್ಲಿಲ್ಲದ .. ಯಾರಿಗೂ ಪ್ರಯೋಜನವಾಗದ..
ನಿಷ್ಪ್ರಯೋಜನ "ಲೋಕಪಾಲ" ಬಿಲ್ಲು ಯಾಕೆ ಮಂಡಿಸಿದ್ದೀರಿ..?


ಇಂಥಹ ಬಿಲ್ಲು ಮಾಡುವದಿದ್ದರೆ..
"ಅಣ್ಣಾ ಹಜಾರೆ"ಯವರ ತಂಡವನ್ನು  "ಮಸೂದೆ" ಮಾಡಲು ಯಾಕೆ ಕರೆದಿದ್ದೀರಿ..?
ಯಾಕೆ ಮೂರು ತಿಂಗಳ ಸಮಯವನ್ನು ಹಾಳು ಮಾಡಿದ್ದೀರಿ ?


ನಿಮಗೆ "ಇಚ್ಛಾ ಶಕ್ತಿ" ಇದ್ದಿದ್ದರೆ.. ಅದೇ ಮಸೂದೆಯನ್ನು ಲೋಕಸಭೆಯಲ್ಲಿ ಯಾಕೆ ಮಂಡಿಸಲಿಲ್ಲ..?


ಜನ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ..
ಅಪರೂಪದ ಮಹಾನ್ ವ್ಯಕ್ತಿ "ಬಾಬುರಾವ್ ಕಿಷನ್ ಹಜಾರೆ"


ಇಂಥಹ ವ್ಯಕ್ತಿ ನಿಮಗೆ "ಬ್ರಷ್ಟಾಚಾರಿಯಾಗಿ" ಕಾಣುತ್ತಾನೆಯೆ...?


ಅಣ್ಣಾ ಹಜಾರೆಯವರಿಗೂ ಒಂದು ಬಣ್ಣ ಬಳಿದು ..
ಅವರ ಬಗೆಗೂ ಜನರಲ್ಲಿ ಅನುಮಾನ ತರಲು ಹೊರಟಿದ್ದೀರಾ?
"ಅಣ್ಣಾ ಹಜಾರೆ ಆರೆಸ್ಸಿಗರು.. ಬೀಜೇಪಿಯವರು.. ಕಮ್ಯುನಿಷ್ಟ್ ಬೆಂಬಲಿತರು ಅಂತೆಲ್ಲ ಹೇಳಿ..
ಆಂದೋಲನದ ದಿಕ್ಕು ತಪ್ಪಿಸಲು ಹೊರಟಿದ್ದೀರಾ?


ಛೇ....!!


ಧಿಕ್ಕಾರ ನಿಮ್ಮ ರಾಜಕೀಯಕ್ಕೆ..
ನಿಮ್ಮಂಥಹ "ಮನಸ್ಥಿತಿಗೆ"....


ಗೆಳೆಯರೆ...


ರಾಜಕೀಯದವರನ್ನು, ಅಧಿಕಾರಿಗಳನ್ನು ಬಯ್ಯುವ " ನಾವು " ಸಂಭಾವಿತರೆ?


ನಾವೂ ಕೂಡ ಲಂಚಕೊಟ್ಟಿದ್ದೇವೆ...
ಮನೆ ಕಟ್ಟುವ ಸಂಧರ್ಭದಲ್ಲೋ..
ಡ್ರೈವಿಂಗ್ ಲೈಸನ್ಸ್ ಪಡೆಯುವಾಗಲೋ ಕೊಟ್ಟಿದ್ದೇವೆ...


ನಮ್ಮ ಕೆಲಸ ಜಲ್ದಿಯಾಗಿ ಮುಗಿಯಲಿ ಅಂತಲೂ ಕೊಟ್ಟಿದ್ದೇವೆ...
ಇದೆಲ್ಲ "ಸಹಜ" ಎಂದು ಕೊಟ್ಟಿದ್ದೇವೆ..


ಅದು ಈಗ ನಮ್ಮನ್ನೇ ತಿಂದು ತೇಗುವ ಹಾಗೆ ಬೆಳೆದಿದೆ...


ಇದಕ್ಕೊಂದು ಕಿಡಿ ಹಚ್ಚಿ ...
ಬೆಂಕಿ ಹಚ್ಚಿ ಮುಗಿಸಲೇ ಬೇಕಲ್ಲವೆ?


ಅದಕ್ಕೊಂದು ಕಾಲ ಈಗ ಬಂದಿದೆ...


ನಮಗೊಬ್ಬ "ಗಾಂಧಿ ತಾತ" ಸಿಕ್ಕಿದ್ದಾರೆ..!!


ಅಣ್ಣಾ ಹಜಾರೆ !!!


ಜನ ಲೋಕಪಾಲ ಬಿಲ್ಲು ಜಾರಿಗೆ ಬರುವದು ಅಸಾಧ್ಯ...
ಸತ್ಯ ನಮಗೂ ಗೊತ್ತು..


ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಎಷ್ಟು ಎಂಪಿ ಗಳಾಗಿ ಹೋಗಿದ್ದಾರೆ?
ಎಷ್ಟೊಂದು ಎಮ್ಮೆಲ್ಲೆ ಗಳಾಗಿದ್ದಾರೆ...??


ಅಧಿಕಾರಿವರ್ಗದವರು ... ಇವರೆಲ್ಲ ಸುಮ್ಮನಿರುತ್ತಾರೆಯೇ ?


ಖಂಡಿತ ಇಲ್ಲ...


ಚುನಾವಣೆಯಲ್ಲಿ ಕೋಟಿಗಟ್ಟಲೆ ಖರ್ಚುಮಾಡುವ  ...
ಎಲ್ಲ ರಾಜಕೀಯ ಪಕ್ಷದವರು ಈ ಬಿಲ್ಲನ್ನು ಖಂಡಿತ ಒಪ್ಪುವದಿಲ್ಲ...

ಅಣ್ಣಾ ಹಜಾರೆಯವರ ಈ ಆಂದೋಲವನ್ನು ..
ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿತ್ತುರಾಯೇ ಹೊರತು ಬೆಂಬಲಿಸುವದಿಲ್ಲ...


"ಕಪ್ಪು ಹಣದ" ವಿರುದ್ಧ ಮಾತನಾಡಿದ ಬಾಬಾ ರಾಮದೇವ ಈಗ ಎಲ್ಲಿದ್ದಾರೆ ?


ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ .
ಅವರ  ಸಹಾಯಕರ ವಿರುದ್ಧವೂ ಕೇಸು ಹಾಕಿ...


ಏನೇನೋ ಹುಳುಕು ಎತ್ತುತ್ತ ಆ ಆಂದೋಲನದ ದಿಕ್ಕು ತಪ್ಪಿಸಿದ್ದನ್ನು ಮರೆಯಲು ಸಾಧ್ಯವೇ?


ರಾಮದೇವ ಏನೇ ಇರಬಹುದು...?


ಅವರು ಧ್ವನಿ ಎತ್ತಿದ "ಕಪ್ಪುಹಣ" ವಿಚಾರ ಒಳ್ಳೆಯದಿತ್ತು ಅಲ್ಲವೆ?


ಆದರೆ ಮಧ್ಯರಾತ್ರಿಯಲ್ಲಿ ಅಮಾಯಕರ ಮೇಲೆ ಹಲ್ಲೆ ನಡೇಸಿ ಬಲವಂತವಾಗಿ ಓಡಿಸುವ "ಗಣತಂತ್ರದ" ಸರಕಾರಕ್ಕೆ ಏನನ್ನ ಬೇಕು?


ನಮ್ಮ ತಪ್ಪೂ ಇದೆ...


ನಮಗೆ ಬಾಬಾ ರಾಮದೇವ "ಚೂಡಿದಾರ" ಧರಿಸಿಕೊಂಡು ಓಡಿಹೋಗಿದ್ದು "ಮಾತನಾಡುವ"  ವಿಷಯವಾಗುತ್ತದೆ..!!


" ವಿದೆಶದಲ್ಲಿಟ್ಟ"  ಕಪ್ಪು ಹಣವನ್ನು" ಮರೆತು ಬಿಡುತ್ತೇವೆ...!!


ಅಣ್ಣಾ ಹಜಾರೆಯವರ ಈ ಆಂದೋಲನ ಹೀಗಾಗದಿರಲಿ..


"ಅಣ್ಣಾ ಹಜಾರೆಯವರ " ಈ ಆಂದೋಲನಕ್ಕೆ  ನಾವೇನು ಮಾಡ ಬಹುದು?



ಹಜಾರೆ ತಾತನಿಗೆ ನಾವು ಹೇಗೆ ಬೆಂಬಲ ಕೊಡಬೇಕು...?
ಹೇಗೆ ಕೊಡ ಬಹುದು...?


ನಾವು  ನಮ್ಮ ಸ್ನೇಹಿತರು "ಹದಿನೈದು ಜನ" ಒಂದು ದಿನ ಉಪವಾಸ ಮಾಡಲು ತಯಾರಾಗಿದ್ದೇವೆ...


ನಾವು ಇಲ್ಲಿಯವರೆಗೆ ಲಂಚಕೊಟ್ಟ ಪಾಪಕ್ಕಾಗಿ..
ಪ್ರಾಯಶ್ಚಿತಕ್ಕಾಗಿ ಉಪವಾಸ ಮಾಡೋಣ....


ಒಂದು ಅಸಾಧ್ಯವನ್ನು "ಸಾಧ್ಯ"ವಾಗಿಸುವ ಪ್ರಯತ್ನ ಮಾಡೋಣ ಅಲ್ಲವೇ?...


ಇಂದು ಅಗಸ್ಟ್  ಹದಿನೈದು...


ನಿಮಗೆಲ್ಲ "ಸ್ವಾತಂತ್ರ್ಯೋತ್ಸವದ " ಶುಭಾಶಯಗಳು...


ಇಂದು ರಾತ್ರಿ ಎಂಟು ಗಂಟೆಯಿಂದ  ಒಂಬತ್ತು  ಗಂಟೆಯವರೆಗೆ ಮನೆಯ ಎಲ್ಲ ದೀಪಗಳನ್ನು ಆರಿಸೋಣ...


ಒಳ್ಳೆಯ ನಾಯಕನಿಗಾಗಿ ದೇಶ ಹುಡುಕುತ್ತಿರುವಾಗ..
ಒಬ್ಬ ಅಜ್ಜ ಸಿಕ್ಕಿದ್ದಾನೆ ನಮಗೆ..


ರಾಜಕೀಯ ಹಂಬಲವಿಲ್ಲದ..
ಚಾರಿತ್ರ್ಯವುಳ್ಳ ಹಜಾರಿ ತಾತ ...


ಹಜಾರೆ ತಾತನ ಆಂದೋಲನಕ್ಕೆ ಬೆಂಬಲ ಸೂಚಿಸೋಣ..


ಈ ದೇಶ ನಮ್ಮದು...


ಜೈ ಹೋ !!



ಗೆಳೆಯರೆ...

ರಾಮ ಲಂಕಾಪಟ್ಟಣಕ್ಕೆ ಹೋಗಲೆಂದು ಸಮುದ್ರಕ್ಕೆ ಸೇತುವೆ ಕಟ್ಟುತ್ತಿದ್ದನಂತೆ..
ಆಗ ಇಣಚಿಯೊಂದು ಬಂದು ತನ್ನ ಮೈಯನ್ನು ಒದ್ದೆ ಮಾಡಿಕೊಂಡು ..
ಮರಳಲ್ಲಿ ಹೊರಳಾಡಿ ಸೇತುವೆ ಕಟ್ಟುತ್ತಿದ್ದ ಜಾಗದಲ್ಲಿ ಮರಳನ್ನು ಉದುರಿಸುತ್ತಿತ್ತಂತೆ...

ಅದು "ಅಳಿಲು ಸೇವೆ... !!

ನಾವೂ ಕೂಡ ಮಾಡೋಣವೆ?

ಇದೇ ಬರುವ ಶುಕ್ರವಾರ ಬೆಳಿಗ್ಗೆ ..(19/8/2011)
ಎಂಟು ಗಂಟೆಯಿಂದ ಸಾಯಂಕಾಲ ಎಂಟು ಗಂಟೆಯ ತನಕ..

ಫ್ರೀಡಮ್ ಪಾರ್ಕಿನಲ್ಲಿ ಕುಳಿತ ಹೋರಾಟಗಾರರಿಗೆ ಬೆಂಬಲ ಕೊಟ್ಟು ಬರೋಣ ..

ಏನಂತೀರಿ?..

ನಾನು ಇದುವರೆಗೆ ಉಪವಾಸ ಮಾಡಿಲ್ಲ...
ಎಪ್ಪತ್ತು ನಾಲ್ಕರ ಅಜ್ಜ ಆಮರಣ ಉಪವಾಸ ಮಾಡುತ್ತಿದ್ದಾನೆ ...
ನಮಗಾಗಿ..

ನಮಗೆ ಒಂದು ದಿನ ಇರಲಿಕ್ಕೆ ಆಗೊಲ್ಲವೆ?

ನಾನಂತೂ ಒಂದು ಪ್ರಯತ್ನ ಮಾಡೋಣ ಎಂದುಕೊಂಡಿದ್ದೇನೆ..
ಮೈಯಲ್ಲಿ ಗಟ್ಟಿ ಇರುವವರು ಉಪವಾಸ ಮಾಡುತ್ತಾರೆ...
ಆಗದೆ ಇದ್ದ ಗೆಳೆಯರು ಉಪವಾಸ ಕುಳಿತವರ ಉತ್ಸಾಹ ಕೊಡಲಾದರೂ ಬನ್ನಿ..
ಇದರಲ್ಲಿ ನಾಚಿಕೆಯೇನೂ ಇಲ್ಲ..

ದಯವಿಟ್ಟು ನೀವೂ ಕೂಡ ಬನ್ನಿ...

ನಮ್ಮ ದೇಶದ ಬ್ರಷ್ಟಾಚಾರ ಓಡಿಸುವಲ್ಲಿ ನಮ್ಮ "ಅಳಿಲು ಸೇವೆಯನ್ನು" ಮಾಡಿ ಬರೋಣ...

ಒಂದು ಹೆಮ್ಮೆಯ ಕಾರ್ಯದಲ್ಲಿ ಭಾಗವಹಿಸಿ.. ಧನ್ಯತೆ ಪಡೆಯೋಣ...

ದಯವಿಟ್ಟು ಬನ್ನಿ...

ನಮ್ಮ ಸಂಗಡ ಜನಪ್ರಿಯ ಲೇಖಕ "ಮಣಿಕಾಂತ್" ಕೂಡ ಇರುತ್ತಾರೆ...

ಜೈ ಹೋ !!

ಜೈ ಭಾರತ.. !!!!

24 comments:

inchara said...

Really inspirational. just liked it.

Asha said...

Prakashanna,
Ondu olle prayatna..... freedom parkge bandu nimage support madake agadiddaru 8 -9 pm light arisi nimage support madtini.....all yhe best...

inchara said...

ya i ll join. I hav already enrolled my name as a volunteer. Even our college has organized candle light march.

Ittigecement said...

ಪ್ರೀತಿಯ ಇಂಚರ..

ನಾವು ಹೇಗಾದರೂ ಈ ಆಂದೋಲನದಲ್ಲಿ ಭಾಗವಹಿಸಲೇ ಬೇಕು...

ಇಲ್ಲದಿದ್ದಲ್ಲಿ ನಮ್ಮನ್ನು ಇತಿಹಾಸ ಕ್ಷಮಿಸುವದಿಲ್ಲ..
ಒಳ್ಳೆಯ ಚರಿತ್ರೆ ಉಳ್ಳ ನಾಯಕ ನಮಗೆ ಸಿಕ್ಕಿದ್ದಾನೆ...

ಆ ತಾತನಿಗೆ ಬೆಂಬಲ ಸೂಚಿಸಿ..
ನಮ್ಮ ಪ್ರಾಯಶ್ಚಿತ್ತತೆ ಮಾಡಿಕೊಳ್ಳೋಣ...

ಅಲ್ಲವೆ?

Ittigecement said...

ಶಾರವರೆ...

ತುಂಬಾ ತುಂಬಾ ಧನ್ಯವಾದಗಳು...

ಅಧಿಕಾರಿ ಶಾಹಿಗಳಿಗೆ..
ರಾಜಕೀಯದವರಿಗೆ ಈ ಬಿಲ್ಲು ಬೇಕಿಲ್ಲ..

ರಾಮದೇವರಿಗೆ ಮಾಡಿದ ಹಾಗೆ ಇನ್ನು ಎಂಥಹ ಕುತಂತ್ರ ಮಾಡುತ್ತಾರೋ ಗೊತ್ತಿಲ್ಲ...

ನೋಡೋಣ... ಹಿರಿಯರು ಹೇಳೀದ್ದಾರೆ...

"ಸತ್ಯ ಮೇವ ಜಯತೆ" ಅಂತ....

Ashok.V.Shetty, Kodlady said...

ಪ್ರಕಾಶಣ್ಣ...ಖಂಡಿತಾ...ನಾವು 'ಅಣ್ಣಾ' ತಾತನೊಂದಿಗಿದ್ದೇವೆ. ಉತ್ತಮ ಬರಹ...

ನಿಮಗೂ ಸ್ವಾತಂತ್ರೋತ್ಸವದ ಶುಭಾಶಯಗಳು.

Ittigecement said...

ಪ್ರೀತಿಯ ಇಂಚರ..

ಫ್ರೀಡಮ್ ಪಾರ್ಕಿಗೆ ಬಂದೇ ಬೆಂಬಲ ಸೂಚಿಸ ಬೇಕು ಅಂತೇನೂ ಇಲ್ಲ...

ಇಂದು ರಾತ್ರಿ ಎಂಟು ಗಂಟೆಯಿಂದ ಒಂಬತ್ತು ಗಂಟೆಯವರೆಗೆ ಮನೆಯ ದೀಪಗಳನ್ನು ಆರಿಸಿ ನಮ್ಮ ಬೆಂಬಲವನ್ನು ಸೂಚಿಸೋಣ..

ಅಕ್ಕ ಪಕ್ಕದ ಮನೆಯವರಿಗೂ ಇದರ ಬಗೆಗೆ ತಿಳಿಸಿ ಜಾಗ್ರತಿ ಗೊಳಿಸೋಣ..

ಪಾರ್ಕಿಗೆ ಬಂದು ಶಾಂತಿಯುತವಾಗಿ ಮುಷ್ಕರ ಮಾಡೋಣ..

ಜೈ ಹೋ..!!

Manjunatha Kollegala said...

ಹೌದು, ನಾನೂ ಹಾಗೇ ಯೋಚಿಸುತ್ತಿದ್ದೆ. ಅಣ್ಣಾ ಹಜಾರೆ ಕೈಗೆತ್ತಿಕೊಂಡಿರುವ ವಿಷಯ ರಾಷ್ಟ್ರೀಯ ಮಹತ್ವದ್ದು, ಬೆಂಬಲಿಸಲೇ ಬೇಕಾದ್ದು. ಒಂದು ದಿನದ ಸಾಂಕೇತಿಕ ಉಪವಾಸ ನಾವು ಮಾಡಬಹುದಾದ ಅತಿ ಚಿಕ್ಕ ಕೆಲಸ. "ಉಪವಾಸ.. ಸತ್ಯಾಗ್ರಹಗಳಿಂದ ಬ್ರಷ್ಟಾಚಾರ ನಿರೋಧ ಕಾನೂನು ತರಲಾಗುವದಿಲ್ಲ..." ಅಂತ ನಮ್ಮ ’ಕಲಿತ’ ಪ್ರಧಾನ ಮಂತ್ರಿಗಳು ಹೇಳಿದ್ದು ನಿಜವಿರಬಹುದು, ಆದರೂ ಈ ಉಪವಾಸ ನೀವಂದಂತೆ ಆತ್ಮಶೋಧಕ್ಕೆ, ಪ್ರಾಯಶ್ಚಿತ್ತಕ್ಕೆ ನಡೆಸುವ ವೈಯಕ್ತಿಕ ಶುದ್ಧಿ ಕ್ರಿಯೆಯಾಗಲಿ. ನಾವು ಹೊರಗೆ ಬರಲಿ, ಧರಣಿ ಕೂರಲಿ ಅಥವ ಮನೆಯಲ್ಲೇ ಇರಲಿ ಉಪವಾಸವನ್ನಂತೂ ನಡೆಸಬಹುದಲ್ಲ.

ಆದರೆ ಅದನ್ನು ಸಂಬಂಧಪಟ್ಟ ಮೂರ್ಖರ ಗಮನಕ್ಕೆ ತರೋದೂ ಮುಖ್ಯ ಅಲ್ಲವೇ? ಅದನ್ನು ಮಾಡೋದು ಹೇಗೆ? ಕೊನೇ ಪಕ್ಷ ಈ ವಿಷಯಗಳನ್ನು ನಮ್ಮ ಫೇಸ್ ಬುಕ್, ಟ್ವಿಟರ್, ಗೂಗಲ್ ಬಜ಼್, ಬ್ಲಾಗ್ ಗಳಲ್ಲಾದರೂ ನಮೂದಿಸೋಣ. ಕೈಜೋಡಿಸುವವರು ಕೈಜೋಡಿಸಲಿ.

Jagadeesh Balehadda said...

ಜೈ ಹೋ.

Anonymous said...

inthaha lekhanagalannu nirantharavaagi nireekshisuttene.

ದಿನಕರ ಮೊಗೇರ said...

ಅಣ್ಣಾ ಎತ್ತಿರುವ ವಿಶಯವನ್ನು ಹಾದಿ ತಪ್ಪಿಸುತ್ತಿದ್ದಾರೆ ಅಷ್ಟೆ... ಆದ್ರೆ, ಜನ ಇದಕ್ಕೆಲ್ಲಾ ಒಗ್ಗಿಕೊಂಡಿದ್ದಾರೆ ಎನಿಸತ್ತೆ...
ಅದಕ್ಕೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲ್ಲ ಅನಿಸತ್ತೆ....
ಪ್ರಕಾಶಣ್ಣ, ತುಂಬಾ ಒಳ್ಳೆಯ ವಿಶಯದ ಬಗ್ಗೆ ಬರೆದಿದ್ದೀರಿ....
ನಾನಂತೂ ಒಂಬತ್ತಕ್ಕೆ ದೀಪ ಆರಿಸಿದ್ದೆ..... ನಿಮ್ಮ ಲೇಖನ ಆಫಿಸಿನಲ್ಲಿ ಓದಿದ್ದೆ... ಕೊಮೆಂಟ್ ಈಗ ಹಾಕುತ್ತಿದ್ದೇನೆ...

sunaath said...

ಪ್ರಕಾಶ,
ಈದಿನ ರಾತ್ರಿ ೮ರಿಂದ ೯ರವರೆಗೆ ದೀಪ ಆರಿಸಿ, ಅಣ್ಣಾ ಹಜಾರೆಯವರ ಆಂದೋಲನಕ್ಕೆ ನನ್ನ ಸಾಂಕೇತಿಕ ಬೆಂಬಲ ವ್ಯಕ್ತಪಡಿಸಿದ್ದೇನೆ. ಬ್ಲಾಗ್ ಮೂಲಕ ಅಣ್ಣಾರವರಿಗೆ ಬೆಂಬಲ ಒಗ್ಗೂಡಿಸುವ ನಿಮ್ಮ ಕಾರ್ಯಕ್ಕಾಗಿ ಅಭಿನಂದನೆಗಳು.
ವಂದೇ ಮಾತರಮ್!

Unknown said...

Sikka patte like aatu :)

Ittigecement said...

ಅಶೋಕ್ ಭಾಯ್...

ಪ್ರತಿಯೊಬ್ಬ ಸಾಮಾನ್ಯ ಜನ "ಲಂಚದ ಹಾವಳಿಯಿಂದ" ಬೇಸತ್ತಿದ್ದಾರೆ...
ನಾವೆಲ್ಲ ಒಬ್ಬ ಯೋಗ್ಯ ನಾಯಕನಿಗಾಗಿ ಕಾಯುತ್ತಿದ್ದೆವು...

ಇಂದಿನ ಚಳುವಳಿಯ ಬಿಸಿ ನೋಡಿದರೆ ಇದನ್ನು ಹತ್ತಿಕ್ಕುವದು ಸುಲಭದ ಮಾತಲ್ಲ ಅನ್ನಿಸುತ್ತಿದೆ..

ದಯವಿಟ್ಟು ಪ್ರತಿಯೊಬ್ಬರು ತಮ್ಮದೆ ಆದ ರೀತಿಯಲ್ಲಿ ಭಾಗವಹಿಸೋಣ...

ಉಪವಾಸ ಮಾಡಲು ಆಗದಿದ್ದಲ್ಲಿ ಚಳುವಳಿಯ ಜಾಗಕ್ಕೆ ಹೋಗಿ ಅಲ್ಲಿರುವವರ ಉತ್ಸಾಹವನ್ನು ಹೆಚ್ಚಿಸೋಣ...

ರಜೆ ಹಾಕಲಾಗದಿದ್ದಲ್ಲಿ ಸಾಯಂಕಾಲದ ಸಮಯ "ಚಳುವಳಿಯ" ಸ್ಥಳಕ್ಕೆ ಹೋಗಿ
ಬೆಂಬಲ ಸೂಚಿಸಿ ಬರೋಣ..

ಜೈ ಹೋ !!

bisilukudure said...

ಮನ ಮುಟ್ಟಿದ ಲೇಖನ.... ಮನ ತಟ್ಟಿದ ಚಿಂತನೆ.....

raju said...

ನಾವು ಬರೆಯುತ್ತಲೇ ಇರುತ್ತೇವೆ. ಕಮೆಂಟ್ ಮಾಡುತ್ತಲೇ ಇರುತ್ತೇವೆ. ಅಣ್ಣಾ ಹಜಾರೆಯವರು ಹೋರಾಟಕ್ಕೆ ನಮ್ಮ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಅದು ಸರಿಯಾದುದೇ ಈ ಸಮಯದಲ್ಲಿ ಮಾತ್ರ ನಾವು ಎಚ್ಚೆತ್ತುಕೊಳ್ಳುವ ನಾವುಗಳು ನಂತರ ನಾವು ಮಲಗುತ್ತೇವೆ. ನಮ್ಮ ಕಣ್ಣಮುಂದೆ ನಡೆಯುವ ಭ್ರಷ್ಟಾಚಾರ ನಡೆಯುತ್ತಿದ್ದರೂ ಸಹ ನಮ್ಮ ಕಣ್ಣೇದುರೇ ಲಂಚಕ್ಕೆ ಕೈಯೊಡ್ಡುತ್ತಿರುವುದನ್ನು ಕಂಡೂ ಕಾಣದೇ ನಮಗೇಕೆ ? ಅನ್ನೋ ಮನೋಭಾವ ನಾವು ಬೆಳೆಸಿಕೊಂಡಿದ್ದೇವೆ. ಸರ್ಕಾರಿ ಕಛೇರಿಯಲ್ಲಿ ಜವಾನನಿಂದ ಹಿಡಿದು, ಉನ್ನತ ಮಟ್ಟದ ಅಧಿಕಾರಿಯವರೆಗೂ ಲಂಚ ತಿನ್ನುತ್ತಾರೆ. ಆ ಹಣ ಯಾರದ್ದು ನಮ್ಮದ್ದು, ರಾಜಕಾರಣಿಗಳು ಬಳಸುವ ಹಣ, ಕಾರು ಮನೆ, ಎಲ್ಲವೂ ನಮ್ಮದೇ, ನಮ್ಮ ಹಣವನ್ನೇ ನಾವು ಕೊಟ್ಟು ಅವರನ್ನು ಬೆಳೆಸುತ್ತಾ ನಮಗೇಕೆ ಅನ್ನೋ ವಿಚಾರ ಬಿಟ್ಟು ದೇಶಕ್ಕಾಗಿ ನಾವು ಏನು ಮಾಡುತ್ತಿದ್ದೇವೆ. ಅನ್ನೋದನ್ನು ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೆ ಆವತ್ತು ನಾವು ನಿಜವಾದ ಭಾರತದ ಪ್ರಜೆಗಳು

aravinda said...

jai ho..

aravinda said...

jai ho..

Srikanth Manjunath said...

ಭ್ರಷ್ಟಾಚಾರ, ಮೋಸ ಇವೆಲ್ಲ ಸಾಗರದ ಅಲೆಯ ಹಾಗೆ..ಬರುತ್ತಲೇ ಇರುತ್ತವೆ..ನೀವು ಹೇಳಿದ ನಿಟ್ಟಿನಲ್ಲಿ ಅದನ್ನ ಎಲ್ಲರಿಗು ಮುಟ್ಟಿಸುವ ಪ್ರಯತ್ನ ಒಳ್ಳೆಯದು..ಇದು ಶಾಶ್ವತ ಪರಿಹಾರ ಅಲ್ಲದೆ ಹೋದರು..ಒಂದು ತಡೆ ಗೋಡೆ ಕಟ್ಟುವ ಪ್ರಯತ್ನ ತುಂಬಾ ಒಳ್ಳೆಯದು...ಸರಕಾರ ಅಣ್ಣ ಹಜಾರೆ ಪ್ರಯತ್ನ ಮುಚ್ಚಲು ರಾಮದೇವ ಪ್ರಸಂಗ ಮಾಡಿಸಿತು..ಈ ಪ್ರಸಂಗ 2G ಪ್ರಸಂಗವನ್ನು ಮರೆ ಮಾಚಿತು..ಜನ-ಜಾಗೃತಿ ಆಗ ಬೇಕಾದರೆ ಇಂಥ ಕಣ್ಣು ತೆರೆಸುವ ಲೇಖನಗಳು, ಸತ್ಯ-ಆಗ್ರಹಗಳು, ನಡೆಯಲೇಬೇಕು...ನಿಮ್ಮ ಶ್ರಮದ ಲೇಖನ ಸಾರ್ಥಕತೆ ಪಡೆಯುತ್ತೆ

ಸೀತಾರಾಮ. ಕೆ. / SITARAM.K said...

ತುಂಬಾ ತಡವಾಗಿ ಓದಿದರೂ ತಮ್ಮ ಕರೆ ನಾಳೆ ಉಪವಾಸವಿರುವ ಮೂಲಕ್ ಪಾಲಿಸಬಹುದೆನಿಸಿತು.

Dr.D.T.Krishna Murthy. said...

prakashanna;jai ho!

ಗಿರೀಶ್.ಎಸ್ said...

Jai Ho !!! as last time we joined there,this time also surely will join them in freedom park..

Nagaraj Bhat said...

ದೇಶ ಭಕ್ತಿ ಲೇಖನ ತುಂಬಾ ಉಪಯೊಗಕರವಾಗಿ ಇದ್ದು, ಇದೇ ರೀತಿ ಲೋಕಪಾಲ್ ಬಿಲ್ ಬಗ್ಗೆನು ಸ್ವಪ ಬರೆದರೆ ಓದುಗರಿಗೆ ಸಹಾಯ ಆಗ್ತು.

Sandeep K B said...

ಜೈ ಹೋ !!