Wednesday, June 22, 2011

ಮಾಬ್ಲು .. ನಮ್ಮೂರಿಗೆ ಈಗಲೂ ಬರ್ತಾನೆ... !




ನಾವಾಗ ಕನ್ನಡ ಶಾಲೆಯಲ್ಲಿ ಓದುತ್ತಿದ್ದೆವು...


ಶಾಲೆಯಲ್ಲಿ ಏಳು ಕ್ಲಾಸುಗಳಿಗೆ ಇಬ್ಬರೇ ಮಾಸ್ತರುಗಳು..


ಹಾಗಾಗಿ ಮಾಸ್ತರ್ರು ಕೆಲವು ಕ್ಲಾಸಿನ ಮಕ್ಕಳಿಗೆ ..
ನಿಬಂಧ.. ಪ್ರಶ್ನೋತ್ತರ ಬರೆಯುವ ಕೆಲಸ ಕೊಟ್ಟು ತಾವು  ಪಾಠ ಮಾಡುತ್ತಿದ್ದರು...


ಇನ್ನು ಕೆಲವು ಕ್ಲಾಸಿನ ಮಕ್ಕಳಿಗೆ ಆಟ ಆಡಲು ಹೇಳುತ್ತಿದ್ದರು..


ಅಂದು ನಮಗೆ 
" ಹೋಗ್ರೋ...
ಹೊರಗೆ ಹೋಗಿ ಆಟ ಆಡಿ.. 
ಗಲಾಟೆ ಮಾಡಬೇಡಿ.. ಸುಮ್ಮನೆ ಆಟ ಆಡಿ..
ಗಲಾಟೆ ಮಾಡಿದರೆ ಛಡಿ ಏಟು...!!.."


ಎಂದು ಕಣ್ಣು ಕೆಂಪಗೆ ಮಾಡಿ ಹೇಳಿದರು...
ಅವರು ಯಾವಾಗಲು ಹಾಗೇನೆ.. !


ನಾವು ಛಂಗನೇ ಜಿಗಿಯುತ್ತ ಆಟದ ಮೈದಾನಕ್ಕೆ ಬಂದಿದ್ದೆವು...


" ಏನು ಆಟ ಆಟ ಆಡೋಣ...?"


"ಕಳ್ಳ.. ಪೋಲಿಸು ಆಟ...? "


ಪರಮೇಸ್ರಣ್ಣಯ್ಯನಿಗೆ ಚಿಂತೆಯಾಯಿತು...


" ನೋಡ್ರೋ.. 
ನಮ್ಮನೆಗೆ ನನ್ನ ಅತ್ತೆಯ ಮಗ  ಮಾಬ್ಲು ಬಂದಿದ್ದಾನೆ...
ಅವನನ್ನೂ ಸೇರಿಸ್ಕೊಂಡು ಆಟ ಆಡಿ ಅಂತ ಮನೆಯಲ್ಲಿ ಹೇಳಿದ್ದಾರೆ.."


ಮನೆಗೆ ನೆಂಟರ ಮಕ್ಕಳು ಬಂದರೆ  ...
ಮನೆಯಲ್ಲಿ ಗಲಾಟೆ ಮಾಡುತ್ತಾರೆಂದು ಶಾಲೆಗೆ ಕಳಿಸುವದು ..


ಆಗ ನಮ್ಮೂರಲ್ಲಿ ಅದು ಸಾಮಾನ್ಯವಾಗಿತ್ತು...


ಪರಮೇಸ್ರಣ್ಣಯ್ಯ.. ಮಾಬ್ಲುವನ್ನು ಶಾಲೆಗೆ ಕರೆದುಕೊಂಡು ಬಂದಿದ್ದ...


ಇನ್ನೊಬ್ಬ ಹುಡುಗ ಆಡಲಿಕ್ಕೆ ಸಿಕ್ಕಿದ್ದಾನಲ್ಲ...!!
ಕುಷ್ಟನಿಗೆ ಖುಷಿಯಾಯ್ತು..


"ಒಳ್ಳೆಯದಾಯ್ತು ಬಿಡ್ರಾ..
ಪರಮೇಸ್ರಣ್ಣ.. 
ಆಡ್ಲಿಕ್ಕೆ ಇನ್ನೊಬ್ರು ಜಾಸ್ತಿ ಆದ್ರು..."


"ಹಾಗಲ್ರೋ... 
ಮಾಬ್ಲುಗೆ ಆರೋಗ್ಯ ಸರಿ ಇಲ್ಲ...
ಅವನನ್ನು ಬಿಟ್ಟು ಹೇಗೆ ಆಡೋದು...?"


ನಾವೆಲ್ಲ ಮಾಬ್ಲು ಹತ್ತಿರ ಬಂದೆವು...
ಮುಖ ಬಾಡಿಸಿಕೊಂಡು ಕುಳಿತ್ತಿದ್ದ...


ಕುಷ್ಟನಿಗೆ ಬೇಸರ ಆಯ್ತು...


" ಮಾಬ್ಲು.. 
ಹೆದರ ಬೇಡ್ರಾ...
ಏನಾಗ್ತ ಇದೇರ್ರಾ...?.."


" ಹೊಟ್ಟೆಯಲ್ಲಿ ಏನೋ ಆಗ್ತ ಇದೆ...
ಸಣ್ಣಕೆ ನೋವು..ತಲೆ ನೋವು..."


ಕುಷ್ಟ ಮೈ ಮುಟ್ಟಿ ನೋಡಿದ..


"ಜ್ವರ ಇಲ್ರಾ... 
ನೀವು ಇಲ್ಲೇ .. ಇರ್ರಾ...
ನಮ್ಮನೆಯಲ್ಲಿ ಮಾತ್ರೆ ಇದೇರ್ರಾ...
ತರ್ತೀನ್ರಾ.. "


ಕುಷ್ಟನ ಮನೆ ಶಾಲೆಯಿಂದ ತುಂಬಾ ಹತ್ತಿರ..
ಒಂದು ಏರು ಹತ್ತಿ.. 
ಒಂದು ಇಳಕಲು  ಇಳಿದರೆ.. ಅವನ ಮನೆ !!


ಚಕ್ಕನೆ ಮನೆಗೆ ಓಡಿ ಹೋಗಿ ಬಂದ..

ಏದುಸಿರು ಬಿಡುತ್ತ ಬಂದ..


" ಮಾಬ್ಲು..
ನಮ್ಮ ಸಂಗಡ ಆಡ ಬಹುದ್ರಾ...
ಹೆದರ ಬೇಡ್ರಾ.. ಈ ಮಾತ್ರೆ ತಕಳಿ.."


ಪರಮೇಸ್ರಣ್ಣಯ್ಯ ಶಾಲೇಯಿಂದ ಚೊಂಬಲ್ಲಿ ನೀರು ತಂದ...
ನಮ್ಮ ಶಾಲೆಯಲ್ಲಿ ಲೋಟ ಇಲ್ಲವಾಗಿತ್ತು..


ಕುಷ್ಟ ಒಂದು ಮಾತ್ರೆ ಕೊಟ್ಟ.. ಮಾಬ್ಲು ನೀರು ಕುಡಿದು ಮಾತ್ರೆ ತಗೊಂಡ..


ಕುಷ್ಟ ಮಾಬ್ಲುವಿಗೆ ಮತ್ತಷ್ಟು ಧೈರ್ಯ ತುಂಬಿದ..


"ಏನೂ ಆಗೋದಿಲ್ರ..
ನಮ್ಮ ಸಂಗದ ಆಡ ಬಹುದ್ರಾ...
ಇದು ಹೊಟ್ಟೆ ನೋವಿನ ಮಾತ್ರೆ.. 
ಕಾನಸೂರು ಡಾಕ್ಟ್ರು ಕೊಟ್ಟಿದ್ರಾ...
ನೀವು ತಗಳ್ರಾ.."


ಕುಷ್ಟ ಈಗ ಐದು ಮಾತ್ರೆ ಕೊಟ್ಟ...
ಮಾಬ್ಲು  ತಗೊಂಡ...


ಸ್ವಲ್ಪ ಹೊತ್ತು ಕಳೆಯಿತು.. ಮಾಬ್ಲುಗೆ ಕಡಿಮೆ ಆಗಲಿಲ್ಲ..


"ಮಾಬ್ಲು..
ಇನ್ನೂ ಮಾತ್ರೆ ಇದೇರ್ರಾ.. ಹೆದರ ಬೇಡ್ರಾ.. ತಕಳಿ..!!.."


ಅಂತ ಮತ್ತೆ ಒಂದಷ್ಟು ಮಾತ್ರೆ ಕೊಟ್ಟ..


ಮಾಬ್ಲುಗೆ ಸಣ್ಣ ಸಂಶಯ ಬಂತು..


" ಕುಷ್ಟಾ ...
ನಿನಗೆ ಹೇಗೆ ಗೊತ್ತು ಇದು ಹೊಟ್ಟೆ ನೋವಿನ ಮಾತ್ರೆ ಅಂತ...?


" ನನ್ನ ಅವ್ವಂಗೆ ..
ಆಗಾಗ ಹೊಟ್ಟೆ ನೋವು ಬರ್ತದರ್ರಾ..
ನೀವು ತಗಳ್ರಾ..  
ಹೆದರಬೇಡ್ರಾ. !!.."


ಮಾಬ್ಲು  ಕುಷ್ಟ ಕೊಟ್ಟ ಅಷ್ಟೂ ಮಾತ್ರೆ ತಗೊಂಡ...!


ಸ್ವಲ್ಪ ಹೊತ್ತು ಕಳೆಯಿತು...


ಮಾಬ್ಲು ಬೆವರ ತೊಡಗಿದ... 


"ನನಗೆ ಏನೋ ಆಗ್ತಾ ಇದೆ... !
ಅಯ್ಯೋ.. ಅಯ್ಯೊಯ್ಯೋ.. !!
ಹೊಟ್ಟೆ ನೋವು..!
ತಡಿಲಿಕ್ಕೆ ಆಗ್ತ ಇಲ್ಲ...!.."


ಅಂತ ಬಿದ್ದು  ಬಿದ್ದು..ಹೊರಳಾಡ ತೊಡಗಿದ...!


ನಾವೆಲ್ಲ ಗಾಭರಿಯಿಂದ ಮಾಸ್ತರ್ರ ಬಳಿ ಓಡಿದೆವು..
ಮಾಸ್ತರ್ರು ಓಡೋಡಿ ಬಂದರು...


"ಏನಾಯ್ತು..?.. !.."


" ಮಾಬ್ಲುಗೆ ಹೊಟ್ಟೆ ನೋವು.. 
ಕುಷ್ಟ ಮನೆಗೆ ಹೋಗಿ ಮಾತ್ರೆ ಕೊಟ್ಟ..


ಈಗ ಜಾಸ್ತಿ ಆಗೋಯ್ತು.."


ಈಗ ಮಾಸ್ತರ್ರೂ ಗಾಭರಿ ಬಿದ್ದರು..!


ಮಾಬ್ಲು ಹೊಟ್ಟೆ ನೋವಿನಿಂದ ಮತ್ತೂ ಜೋರಾಗಿ ಕೂಗಾಡತೊಡಗಿದ...


"ಅಯ್ಯೋ... ಅಯ್ಯೊಯ್ಯೋ... !!.."


ನೋವು ತಡೆಯಲಾಗದೆ ಹೊರಳಾಡ ತೊಡಗಿದ..!


ಮಾಸ್ತರ್ರು ಅಲ್ಲೆ ಇದ್ದ ಹಳ್ಳಿಯ ಜನರನ್ನು ಕೂಗಿ  ...
ಮಾಬ್ಲುವನ್ನು ಕಾನಸೂರಿಗೆ ಕಳಿಸುವ ವ್ಯವಸ್ಥೆ ಮಾಡಿದರು...


ಅಗೆಲ್ಲ ವಾಹನ ಸೌಕರ್ಯ ಇರಲಿಲ್ಲ..


ಹಳ್ಳಿಯವರು ಕಂಬಳಿಯಲ್ಲಿ ಮಾಬ್ಲುವನ್ನು ಹಾಕಿ..
ಕಾನಸೂರಿಗೆ ಹೊತ್ತುಕೊಂಡು ಓಡೋಡಿ ಹೋದರು.. 


ನಮಗೆಲ್ಲ ಹೆದರಿಕೆ ಗಾಭರಿ... ಆತಂಕ... ಕುತೂಹಲ...!!


ನಮ್ಮೂರಿಂದ ಕಾನಸೂರು ನಾಲ್ಕು ಕಿಲೋಮೀಟರ್..
ಸಮತಟ್ಟಾದ ರಸ್ತೆಯೇ ಇಲ್ಲ.. ಮಣ್ಣು ರಸ್ತೆ..


ಅಲ್ಲಿ ನಡೆದು ಬರುವದೇ ಒಂದು ಸಾಹಸ.. !


ಸುಮಾರು ಹೊತ್ತಿನ ಮೇಲೆ ಒಬ್ಬ ಸೈಕಲಿನಲ್ಲಿ ಬಂದ...
ಗಡಿಬಿಡಿಯಲ್ಲಿದ್ದ.. !


ಬಹುಶಃ  ಸೈಕಲ್ಲು ತಲೆ ಮೇಲೆ ಹೊತ್ತು ಬಂದಂತಿತ್ತು... !
ಬಹಳ ಏದುಸಿರು ಬಿಡುತ್ತಿದ್ದ...! 


"ಮಾಸ್ತರ್ರೆ...
ಇಲ್ಲಿ ಕುಷ್ಟ ಅಂದ್ರೆ ಯಾರು..?"


ಮಾಸ್ತರು ಕುಷ್ಟನ ಕಡೆ ನೋಡಿದರು..


ಕುಷ್ಟನಿಗೆ ಕೈಕಾಲು ನಡುಕ ಹುಟ್ಟಿತು...!


ಕಾನಸೂರಿನಿಂದ ಬಂದವ ಬುಸು ಬುಸು ಶ್ವಾಸ ತೆಗೆಯುತ್ತಿದ್ದ...!
ಬೆವರುತ್ತಿದ್ದ...!


" ಕುಷ್ಟ.. 
ನೀನು ಯಾವ ಮಾತ್ರೆ ಕೊಟ್ಟಿದ್ದು..?"


" ಗೊತ್ತಿಲ್ರ... !
ಮನೆಯಲ್ಲಿತ್ತು... ತಂದೆರ್ರಾ...!!.."


ಕಾನಸೂರಿನಿಂದ ಬಂದವ ಬಹಳ ಟೆನ್ಷನ್ ಮಾಡ್ಕೊಂಡಿದ್ದ..
ಸಿಕ್ಕಾಪಟ್ಟೆ ಗಾಭರಿಯಲ್ಲಿದ್ದ.. !


" ಮಾಸ್ತರ್ರೆ...
ಇದು ಬಹಳ ಸೀರಿಯಸ್ ವಿಷಯ...!
ಅಲ್ಲಿ ಹುಡುಗ ಪ್ರಜ್ಞೆ ತಪ್ಪುತ್ತಿದ್ದಾನೆ...!
ಯಾವ ಮಾತ್ರೆ ಅಂತ ಗೊತ್ತಾಗದ ಹೊರತು ಔಷಧ ಕೊಡುವದು ಕಷ್ಟವಂತೆ..
ಕುಷ್ಟನ ಮನೆಯವರನ್ನು ಕೇಳೋಣ .. 
ನಡೀರ್ರೀ.. !.."


ಮಾಸ್ತರ್ರು ನಾವು ಎಲ್ಲರೂ ಕುಷ್ಟನ ಮನೆಗೆ ಹೊರಟೆವು..


ಅಗ ಮಧ್ಯಾಹ್ನ ಊಟಕ್ಕೆ ಬಿಡುವ ಸಮಯ...!


ನಮ್ಮನ್ನೆಲ್ಲ ನೋಡಿ ಕುಷ್ಟನ ಮನೆಯವರೂ ಕಂಗಾಲು...!
ಆತಂಕ.. !!


"ಕುಷ್ಟಾ ..
ಮಾತ್ರೆ ಎಲ್ಲಿತ್ತು..?..?.. "


ಕುಷ್ಟನಿಗೂ ಹೆದರಿಕೆ ಆಗತೊಡಗಿತು.. 
ಧ್ವನಿ ಕಂಪಿಸುತ್ತಿತ್ತು..


"ಅಡಿಗೆ ಮನೆಯಲ್ಲಿ... !
ಮಜ್ಜಿಗೆ ಕಪಾಟಿನಲ್ಲಿ..!
ಒಗ್ಗರಣೆ ಡಬ್ಬ ಇಡುವ ಜಾಗದ  ಪಕ್ಕದಲ್ಲಿತ್ರ ...!!.."


"ಅಲ್ಲಿ ಯಾವ ಮಾತ್ರೆ ಇತ್ತು...?.?"


ಕುಷ್ಟನ ಅಪ್ಪ ತೊದಲಿದ..
ಅವನೂ ಗಾಭರಿಯಲ್ಲಿದ್ದ..!


"ಭೂತನ ಕಟ್ಟೆ ಭೂತದ ಆಣೆ.. ಮಾಡ್ತಿನ್ರಾ..!
ನನಗೆ ಗೊತ್ತಿಲ್ರ..!!..."


ಮತ್ತೆ ಟೆನ್ಷನ್ !!


ಕುಷ್ಟನ  ಅಮ್ಮನನ್ನು ಕರೆಸಲಾಯಿತು..!!


"ಮಜ್ಜಿಗೆ ಕಪಾಟಿನಲ್ಲಿ ಇಟ್ಟ ಮಾತ್ರೆ ಯಾವದು..?.. !.."


ಅಮ್ಮ ಸ್ವಲ್ಪ ನಾಚಿಕೊಂಡಳು..


"ಅದು ಹೆಂಗಸರ ಮಾತ್ರೆರ್ರಾ...
ಹೋದ ವರ್ಷ ತಂದಿದ್ದು... !"


ಮಾಸ್ತರರಿಗೆ ಕೋಪ ಬಂತು...
ಮಾಸ್ತರ್ರು  ಸ್ವಲ್ಪ ಧ್ವನಿ ಏರಿಸಿದರು..


"ನೋಡಮ್ಮ ... 
ಜಲ್ದಿ ಹೇಳು.. !
ಅಲ್ಲಿ ಹುಡುಗ ಪ್ರಜ್ಞೆ ತಪ್ಪುತ್ತಿದ್ದಾನೆ..!
ಯಾವ ಮಾತ್ರೆ ಅಂತ ಹೇಳಿ..
ಮೆಡಿಸಿನ್ ಕೊಡ್ಲಿಕ್ಕೆ ಅವಶ್ಯಕತೆ ಇದೆ.. !.."


ಕುಷ್ಟನ  ಅಮ್ಮ ತಡವರಿಸಿದಳು...


"ಅದು..
ಅದೂ.. ಏನೂ ಇಲ್ರ.. !!
....
ಹೋದ ವರ್ಷ ಗಣೇಶನ ಹಬ್ಬಕ್ಕೆ ...
ತಿಂಗಳ ರಜೆ ಬಾರದಿರಲಿ ಅಂತ ತರಿಸಿದ್ದೇರ್ರಾ...!


ಮುಟ್ಟು ಮುಂದೆ  ಹೋಗುವ ಮಾತ್ರೆ.. !!.. "


ಮಾಸ್ತರ್ರು ಎಚ್ಚರ ತಪ್ಪುವದೊಂದು ಬಾಕಿ...!!


ಅಯ್ಯೋ ರಾಮಾ !!


ಕಾನಸುರಿನಿಂದ ಬಂದವ ಕಂಗಾಲಾದ !


" ಎಷ್ಟು ಮಾತ್ರೆ ಇತ್ತು ?"


"ಯಾವದಕ್ಕೂ ಇರ್ಲಿ ಅಂತ ಹದಿನೈದು ತರ್ಸಿದ್ದೇರ್ರಾ..."


"ಯಾವುದಕ್ಕೂ ಇರ್ಲಿ ಅಂತ ಅಷ್ಟೆಲ್ಲ ತರಿಸಲಿಕ್ಕೆ...
 ಅದೇನು 
ಸಕ್ರೆ ಚೀಲಾನಾ? ?  
ಎಣ್ಣೆ ಡಬ್ಬಾನಾ? ? ಛೆ.. ಛೆ.. !!.."


ಮಾಸ್ತರ್ರು ಈಗ ಕುಷ್ಟನ ಕಡೆ ತಿರುಗಿದರು...


ಕುಷ್ಟ ಎದ್ದೂ ಬಿದ್ದೂ ತೋಟದ ಕಡೆ ಓಡತೊಡಗಿದ...!!
ಮೂರು ನಾಲ್ಕು ದಿನ ಶಾಲೆಗೂ ಬರಲಿಲ್ಲ...!


ಸಧ್ಯ ಮಾಬ್ಲುಗೆ  ಏನೂ ಆಗಲಿಲ್ಲ...


ಮಾಬ್ಲು... ನಮ್ಮೂರಿಗೆ ಈಗಲೂ ಬರ್ತಾನೆ...


ಅವನನ್ನು ನೋಡಿ ...
ನಾವು ಮನೆಗೆ ಬಂದು ಕನಿಷ್ಟ ಹತ್ತು ನಿಮಿಷವಾದರೂ ನಗುತ್ತೇವೆ...


ಕೆಲವು ಬಾರಿ ಬಿದ್ದು ಬಿದ್ದು...!
ಕಣ್ಣಲ್ಲಿ ನೀರು ಬರುವಷ್ಟು.. !!.. 
ಬೇಡ ಬೇಡವೆಂದರೂ ನಗು ಬರುತ್ತದೆ.. ತಡೆಯಲಾರದಷ್ಟು..!








59 comments:

Guruprasad . Sringeri said...

ಚಿಕ್ಕಂದಿನ ಶಾಲೆಯ ಅನುಭವಗಳು ಎಂದಿಗೂ ಮರೆಯಲಾರವು..... ಒಳ್ಳೆಯ ಒಂದು ಘಟನೆಯನ್ನು ನಮ್ಮೊಂದಿಗೆ ಸುಂದರವಾಗಿ ಹಂಚಿಕೊಂಡಿರುವಿರಿ ಧನ್ಯವಾದಗಳು ಪ್ರಕಾಶ್.........

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಸಿಕ್ಕಾಪಟ್ಟೆ ನಗು ಬರ್ತಾ ಇದ್ದು. ಬೆಳಬೆಳಿಗ್ಗೆ ನಗ್ಸಿದ್ದಕ್ಕೆ ಥ್ಯಾಂಕ್ಸು :-)

ಪ್ರೀತಿಯಿಂದ,
-ಶಾಂತಲಾ

Ittigecement said...

ಗುರುಗಳೆ...

ಕುಷ್ಟ ಒಂದರ ಮೇಲೆ ಇನ್ನೊಂದು ಮಾತ್ರೆ ಕೊಡುತ್ತಿದ್ದ...
ಮಾಬ್ಲು ಗುಣವಾಗಿ ನಮ್ಮ ಜೊತೆ ಆಡಲು ಬರಲೆಂದು...

ಮಾಬ್ಲು ನೆನಪಾದರೂ ಸಿಕ್ಕಾಪಟ್ಟೆ..
ತಡೆಯಲಾರದಷ್ಟು ನಗು ಬರ್ತದೆ...

ಆತ ನಮ್ಮನೆಗೆ ಬಂದರೆ.. ಮೊದಲು ಬಿದ್ದೂ ಬಿದ್ದೂ ನಗುತ್ತೇವೆ..
ಆಮೇಲೆ ಮಾತು.. !!

ಮಾಬ್ಲುವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

balasubramanya said...

ಹೋ ಹೋ ಹೋ ಹಾ ಹಾ ಹಾ ಹೇ ಹೇ ಹೇ ಹಿ ಹಿ ಹಿ ಉಸ್ಸ್ ಅಪ್ಪ ನಕ್ಕೂ ನಕ್ಕೂ ಸಾಕಾಯ್ತು. ರೀ ಪ್ರಕಾಶ್ ನಿಜ ಹೇಳಿ ಎಷ್ಟು ಜನರಿಗೆ ಹಿಂಗೆ ಮಾತ್ರೆ ತಿನ್ನಿಸಿದ್ದೀರ?? ನೀವು ಮಾಡಿ ಪಾಪ ಕುಶ್ತನ ಮೇಲೆ ಅಪಾದನೆ ಹಾಕ್ತೀರಾ??? ಪಾಪ ಮಾಬ್ಲೂ ,ಹೆಂಗಸರ ಮಾತ್ರೆ ನುಂಗಿ ಸಂಕಟ ಪಟ್ಟ. ಮಾಬ್ಲೂ ಈಗಲಾದರೂ ಹುಷಾರಾಗಿರಬೇಕು. ಪಾಪ ಮಾತ್ರೆ ಕೊಟ್ಟೋರು ಯಾರು ಆಡಿಕೊಳ್ಳೋದು ಮಾಬ್ಲೂ ನಾ !!! ಡೋಂಟ್ ವರಿ ಮಾಬ್ಲು ಐ ಯಾಂ ವಿಥ್ ಯೂ . ಚಿಕ್ಕ ವಯಸ್ಸಿನ ತುಂಟತನ ಮರೆಯಲಾಗದ್ದು. ಅಂದು ಟಿ.ವಿ., ಕಂಪ್ಯೂಟರ್ ಇದ್ದಿದ್ರೆ ಇದೆಲ್ಲಾ ಸಾಧ್ಯ ಆಗ್ತಿತ್ತಾ ಅನ್ಸುತ್ತೆ.ಜೈ ಹೋ ಪ್ರಕಾಶಣ್ಣ.

Pradeep Rao said...

ಸಾರ್... ನೀವು ನಮ್ಮನ್ನೂ ಬಿದ್ದು ಬಿದ್ದು ನಗುವ ಹಾಗೆ ಮಾಡಿದಿರಿ!! ಪಾಪು ಮಾಬ್ಲು ಗೆ ಈಗ ಏನೂ ತೊಂದರೆ ಇಲ್ಲ ತಾನೆ?

ಅಯ್ಯೋ! ನಕ್ಕು ನಕ್ಕು ನನ್ನ ಹೊಟ್ಟೆ ಹುಣ್ಣಾಯ್ತು! ಯಾವ್ದಾದ್ರೂ ಮಾತ್ರೆ ಇದ್ರೆ ಕೊಡಿ ಅಂತ ಮಾತ್ರ ನಿಮ್ಮನ್ನ ಕೇಳಲ್ಲ!

Ittigecement said...

ಶಾಂತಲಾ...

ಇವತ್ತು ಮಾಬ್ಲು ಫೋನ್ ಬಂದಿತ್ತು...

"ನಾನು ಮಾತ್ರೆ ಮಾಬ್ಲು ಕಣೊ" ಅಂದ.

ಒಂದು ಐದು ನಿಮಿಷ ನಕ್ಕು ಉಳಿದ ಮಾತಾಡಿದೆವು...

ಡಾಕ್ಟರ್ ಕುಷ್ಟ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ragat paradise said...

ಹಾ ಹಾ ಹೋ ಹೋ ಮಬ್ಲು ಹೊಟ್ಟೆ ನೋವು ಅಂತ ಕೂಗದೆ ಇದ್ರೆ ಗ್ಯಾರಂಟಿ ಕುಷ್ಟ ಮಾತ್ರೆ ಕೊಟ್ಟು ಕೊಟ್ಟು ಅವನಿಗೆ ಕಾಗೆ ಹಾರಿಸುತ್ತಿದ್ದ....

ಜಲನಯನ said...

ಹಹಹ ಬಹಳ ಮಜವಾಗಿದೆ...ನನಗೂ ಇಂಥದೇ ಅನುಭವ...ಮೊಡವೆಗೆ ಹಾಕೋ ಎಸ್ಕಮೆಲ್ ಕ್ರೀಮನ್ನ ನನ್ನ ಸ್ನೇಹಿತ ಹಲ್ಲಿಗೆ ಹಾಕಿ ತಿಕ್ಕಿದ್ದ.. ನಾನು ತಂದಿರೋ ಹೊಸ ಪೇಸ್ಟ್ ಅಂದ್ಕೊಂಡು..ಹಹಹಹ

Kanthi said...

maja iddu.. Kushta mattu maablu prasanga..

ಚಿತ್ರಾ said...

ಪ್ರಕಾಶಣ್ಣ
ಅಲ್ಲಾ, ನಿಮ್ಮ ಗ್ಯಾಂಗ್ ಎಲ್ಲಾ ಒಂಥರಾ ಹೀಗೆನಾ? ನಾಗು, ಕುಷ್ಟ , ಮಾಬ್ಲು ....ಒಬ್ಬೊಬ್ರೂ ಒಂದೊಂದು ಐಟಂ ಗಳು !!
ಜೊತೆಗೆ " ಚಪಾತಿ ಪ್ರಕಾಶಣ್ಣ " ಹಾ ಹಾ ಹಾ ....." ದೊಡ್ಡ " ಐಟಂ !!!
ಏನೋ ಪಾಪ ಮಾಬ್ಲು ಅದೃಷ್ಟ ಚೆನ್ನಾಗಿತ್ತು. ಯಾವ ಮಾತ್ರೆ ಅಂತ ಗೊತಾಯ್ತು ! ಪಾಪ ..ಕುಷ್ಟ ಒಳ್ಳೆ ಉದ್ದೇಶದಿಂದ ಮಾತ್ರೆ ತಂದು ಕೊಟ್ಟಿದ್ದಾ.... ಅದು ಹೀಗಾಗ ಬೇಕೇ?
ಹಿ ಹಿ ಹಿ .. ನಗ್ತಾ ಇದೀನಿ. ಪಾಪ ... ಮಾತ್ರೆ ಮಾಬ್ಲು .....

Ittigecement said...

ಬಾಲೂ ಸರ್...

ಅದು ಮುಟ್ಟಿನ ಮಾತ್ರೆ ಅಂತ ಕುಷ್ಟನಿಗೆ ಹೇಗೆ ಹೇಳುವದು?

ಕುಷ್ಟನ ಉಪ ಪ್ರಶ್ನೆಗಳು ಯಾಕೆ ಅಂತ ಮನೆಯಲ್ಲಿ
"ಅದು ಹೊಟ್ಟೆ ನೋವಿನ ಮಾತ್ರೆ" ಅಂದಿದ್ದರು...

ಮಾಬ್ಲು ಹೊಟ್ಟೆ ನೋವು ಅಂದ..
ಕುಷ್ಟ ಒಂದು ವರ್ಷ ಹಳೆಯ ಮಾತ್ರೆ ತಂದು ಕೊಟ್ಟ...

ಯಥಾನು ಶಕ್ತಿ... !!

ಪಾಪ ಮಾಬ್ಲು... !!

ಮಾತ್ರೆ ಮಾಬ್ಲು ಇಷ್ಟವಾಗಿದ್ದಕ್ಕೆ ಜೈ ಜೈ ಜೈ ಹೋ !!

Keshav.Kulkarni said...

ನಗುವಿಗಿಂತ ನನಗೆ ಭಯ ಆಯ್ತು.

Ittigecement said...

ಪ್ರಿಯ ಪ್ರದೀಪ್...

ಆಗ ಮಾಸ್ತರ್ರು... ಮನೆಯವರು ಎಲ್ಲರೂ ಗಾಭರಿಯಾಗಿದ್ದರು..
ಕುಷ್ಟನಿಗೆ ಮನೆಯಲ್ಲೂ ಚೆನ್ನಾಗಿ ಏಟು ಬಿದ್ದಿತ್ತು...

ಕಾನಸೂರಿನಲ್ಲಿ ಡಾಕ್ಟರು ಬಹುಷಃ ವಾಂತಿ ಮಾಡಿಸಿದರು ಎನ್ನುವ ನೆನಪು...
ಸ್ವಲ್ಪ ಉಪ್ಪು.. ಖಾರ ಮಸಾಲೆ ಹಾಕಿ ಇಟ್ಟಿದ್ದು..

ಆತಂಕ.. ಗಾಭರಿ.. ಗಡಿಬಿಡಿ ಇದ್ದರೂ...

ಮಾಬ್ಲು ನೆನಪಾಗಾದಗಲೆಲ್ಲ ಸಿಕ್ಕಾಪಟ್ಟೆ ನಗು ಬರುತ್ತದೆ..

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಟಾನಿಕ್ ಥರಹ..
ಪ್ರೀತಿ.. ಸ್ನೇಹ ಹೀಗೆಯೇ ಇರಲಿ...

Ittigecement said...

ರಾಘುರವರೆ...

ಮಕ್ಕಳ ಕೈಗೆ ಸಿಗದ ಹಾಗೆ ಔಷಧಗಳನ್ನು ಇಡಬೇಕು...
ಅದರಿಂದಾಗುವ ಕೆಟ್ಟ ಪರಿಣಾಮಗಳನ್ನು ಅವರಿಗೆ ತಿಳಿಸಿ ಹೇಳ ಬೇಕು...

ಸಿಕ್ಕಪಟ್ಟೆ ಮಾತ್ರೆಗಳನ್ನು ತೆಗೆದು ಕೊಂಡರೆ ಆಪಾಯ ಎನ್ನುವದನ್ನು ತಿಳಿಸಿ ಹೇಳಬೇಕು...

ನಮ್ಮದು ಮಲೆನಾಡಿನ ಕುಗ್ರಾಮ..
ಪದೆ ಪದೆ ಯಾಕೆ ಪಟ್ಟಣಕ್ಕೆ ಹೋಗಬೇಕು ಅಂತ ಜಾಸ್ತಿ ಮಾತ್ರೆ ತರಿಸಿ ಇಟ್ಟಿಡುತ್ತಾರೆ..

ಅದು ಮಾಬ್ಲುವಿಗೆ ವಕ್ರಿಸಿದ್ದು.. ಗ್ರಹಚಾರ..

ಆದರೂ ಅನಾಹುತ ತಪ್ಪಿತ್ತು...

ಪ್ರತಿಕ್ರಿಯೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

Srikanth Manjunath said...

ರಾಜನಾಗಿ ಇರಬೇಕಿದ್ದ ಮಾಬ್ಲು...ರಜ ಮಾತ್ರೆ ತಿಂದು...ಉರುಳಾದುವುದು ಓದಿದಾಗ ಒಂದು ಕಣ್ಣಲ್ಲಿ ನಗು..ಇನ್ನೊಂದರಲ್ಲಿ ಕಣ್ಣೀರು..ಬಾಲ್ಯದ ತುಂಟತನ...ಮುಗ್ದತೆ ಇವೆಲ್ಲ ಯಾಕಾದರೂ ಕಳೆದು ಕೊಂಡೆವು ಅನ್ನಿಸುತ್ತೆ...ಆ ನೆನಪುಗಳು ಮಾತ್ರ ಮಧುರ, ಅಮರ, ಮತ್ತು ಸದಾ ಹಸಿರು..ಇನ್ನೊಂದು ಮುಗ್ಧ, ಸ್ನಿಗ್ಧ, ನಗುವಿನ ಪುಟಕ್ಕೆ ಅಭಿನಂದನೆಗಳು...

Ittigecement said...

ಆಜಾದು...

ಆ ಬಾಲ್ಯದ ದಿಗಳೇ ಹಾಗೆ..
ಎಷ್ಟು ಸೊಗಸು... ಮಧುರ... !!

ಆಗ ಆತಂಕ ಗಾಭರಿಯಾಗಿದ್ದರೂ..

ಈಗ ಭರಪೂರ್ ನಗು !!

ನನಗೂ ಒಮ್ಮೆ ಹೀಗಾಗಿತ್ತು...ಕಣೊ..

ನಾಗುವಿನಿಂದಾಗಿ ಷೇವಿಂಗ್ ಕ್ರೀಮ್ ಹಾಕಿ ಹಲ್ಲು ಉಜ್ಜಿದ್ದೆ...!

ಅದೊಂದು ದೊಡ್ಡ ಕಥೆ.. ಮುಂದೊಮ್ಮೆ ಬರೆಯುವೆ..

ಪ್ರತಿಕ್ರಿಯೆಗೆ .. ಪ್ರೋತ್ಸಾಹಕ್ಕೆ ಜೈ ಹೋ !!

Ittigecement said...

ಕಾಂತಿ...

ಈ ಮಾತ್ರೆ ಪ್ರಕರಣದಿಂದ ನಮ್ಮ ಬಳಗದಲ್ಲಿ ಡಾಕ್ಟರ್ ಒಬ್ಬ ಹುಟ್ಟಿದ..

ಕುಷ್ಟನನ್ನು ನಾವೆಲ್ಲ ಡಾಕ್ಟರ್ ಕುಷ್ಟ ಅಂತ ಕರೆಯತೊಡಗಿದೆವು..

ಕುಷ್ಟನಿಗೆ ಇನ್ನೊಂದು ಹೆಸರಿದೆ..
ನಿಜ ಹೇಳ ಬೇಕೆಂದರೆ ಅದನ್ನು ಮೊದಲು ಬರೆಯ ಬೇಕಿತ್ತು... ಇನ್ನೊಮ್ಮೆ ಬರೆಯುವೆ..

ಕುಷ್ಟ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

Ittigecement said...

ಚಿತ್ರಾ...

ನಾವೆಲ್ಲ ಒಂದೊಂದು ಐಟಮ್ಮುಗಳಾ.. !!
ರಾಮಾ.. ರಾಮಾ.. !!
ಹಾ..ಹ್ಹಾ..ಹ್ಹಾ !!

ಮಾಬ್ಲುವಿಗೆ ವಾಸಿಯಾಗಿ ನಮ್ಮ ಬಳಿ ಆಟ ಆಡಲು ಬರಲಿ ಎನ್ನುವದು ಕುಷ್ಟನ ಉದ್ದೇಶ..

ಅಮ್ಮನ ಹೊಟ್ಟೆನೋವಿನ ಮಾತ್ರೆ ಮಾಬ್ಲುವಿಗೆ ಕೊಟ್ಟ..!

ಕಾನಸೂರು ಡಾಕ್ಟೈಗೆ ತಲೆ ಧಿಮ್ ಎಂದಿರ ಬೇಕು...

ಮಾಸ್ತರ್ರು ನಮ್ಮನ್ನು ನೋಡಿದರೆ ಟೆನ್ಷನ್ ಮಾಡಿಕೊಳ್ಳುತ್ತಿದ್ದರು...

ಶಾಲೆಯ ವಿಷೇಶ ಕಾರ್ಯಕ್ರಮಗಳಲ್ಲಿ ನಮಗೆ ವಿಷೇಶ ಎಚ್ಚರಿಕೆ ತಪ್ಪದೆ ಇರುತ್ತಿತ್ತು...

ನಮ್ಮನ್ನೆಲ್ಲ "ಐಟಮ್" ಮಾಡಿದ್ದಕ್ಕೆ..
ಪ್ರೀತಿಯ ಪ್ರೋತ್ಸಾಹಕ್ಕೆ ವಂದನೆಗಳು.. ಜೈ ಹೋ !

Ittigecement said...

ಕೇಶವ ಕುಲಕರ್ಣಿ ಸರ್...

ನಿಜ...
ಆ ಸಮಯದಲ್ಲಿ ಭಯ.. ಆತಂಕ ಆಗಿತ್ತು..

ಸಧ್ಯ ಮಾಬ್ಲುವಿಗೆ ಏನೂ ಆಗಿಲ್ಲ...

ಮಾಬ್ಲುವಿನ "ಪರದೇಶಿ" ಮುಖ ನೆನಪಾದ ಕೂಡಲೆ ನಗು ತಡೆದುಕೊಳ್ಳಿಕ್ಕೆ ಸಾಧ್ಯ ಆಗ್ತಿಲ್ಲ..
ಈಗಲೂ ಸಹ !

ಕುಷ್ಟನಿಂದಾಗಿ ಒಂದು ಗಾದೆ ಸೃಷ್ಟಿಯಾಯಿತು...

"ಕುಷ್ಟ ಮಾಬ್ಲುವಿಗೆ ಮಾತ್ರೆ ಕೊಟ್ಟ ಹಾಗೆ" ಅಂತ..

ಸರ್..
ಪ್ರೀತಿಗೆ .. ಪ್ರೋತ್ಸಾಹಕ್ಕೆ ಧನ್ಯವಾದಗಳು...

ವಾಣಿಶ್ರೀ ಭಟ್ said...

:) :) :) :)

Dr.D.T.Krishna Murthy. said...

ಪ್ರಕಾಶಣ್ಣ;ಒಳ್ಳೆಯ ಪ್ರಹಸನ.ಮಕ್ಕಳು ಮಾಡಿಕೊಳ್ಳುವ ಅನಾಹುತ ಓದಿ ಗಾಭರಿ ಆಯಿತು.ಪುಣ್ಯಕ್ಕೆ ಅಂತಹ ಅನಾಹುತವಾಗಲಿಲ್ಲವಲ್ಲಾ ಎಂಬುದೇ ಸಮಾಧಾನ.ನಿಮ್ಮ ಕುಷ್ಟ,ನಾಗು ನಿಜಕ್ಕೂ ಇಂಟರೆಸ್ಟಿಂಗ್ characterಗಳು !!

ಚುಕ್ಕಿಚಿತ್ತಾರ said...

ಪ್ರಕಾಶಣ್ಣ..
ಅದ್ಯಾವ್ಯಾವ್ ನಮ್ನಿ ಭಾನಗಡೆ ಮಾಡಿದ್ರೇನ.. ದೇವ್ರೆ..
ಹೊಟ್ಟೆನೋವು ಗುಣ ಆಪವರಿಗೂ ಮಾತ್ರೆ ನು೦ಗ ವಿಚಾರ ಮಾತ್ರ ಹೈಕ್ಲಾಸ್..!!!
ನೆಗ್ಯಾಡಿ ನೆಗ್ಯಾಡಿ ಇಟ್ಟಿ...:):):):)

Ittigecement said...

ಶ್ರೀಕಾಂತ ಮಂಜುನಾಥ..

ಆಗೆಲ್ಲ ಊರಿಗೆ ನೆಂಟರ ಮನೆಯಿಂದ ಯಾವ ಮಕ್ಕಳೆ ಬರಲಿ...
ಆ ಊರಿನ ಶಾಲೆಗೆ ಕಳುಹಿಸಿ ಬಿಡುತ್ತಿದ್ದರು...

ನಾವು ಅಜ್ಜನ ಮನೆಗೆ, ನೆಂಟರ ಮನೆಗೆ ಹೋದರೂ ಅಲ್ಲಿಯ ಶಾಲೆಗೆ ಹೋಗಿ ಕುಳಿತುಕೊಳ್ಳ ಬೇಕಾಗಿತ್ತು..

ಅಲ್ಲೆಲ್ಲ ತಲೆಹರಟೆ ಮಾಡದೆ ಇರಬೇಕಾಗಿತ್ತು..

ಆದರೆ ಪಾಠ.. ಓದು ಇರೋದಿಲ್ಲವಾಗಿತ್ತು..

ಬಾಲ್ಯ... ಅದರ ನೆನಪು ಬಲು ಸುಂದರ...!

ಚಂದದ ಪ್ರತಿಕ್ರಿಯೆಗೆ.. ಪ್ರೋತ್ಸಾಹಕ್ಕೆ ಧನ್ಯವಾದಗಳು...

Soumya said...

First time visitor...via Fb. ಕೆಲವು ಹಳೆ posts ಗಳನ್ನು ಓದಿದೆ. Nice, humourous posts. ಇದನ್ನು ಓದಿ ನಾನು ನನ್ನ cousinsನ classಗಳಲ್ಲಿ ಕೂತದ್ದು ನೆನಪಾಯಿತು... :)

ಮನಸು said...

ಪ್ರಕಾಶಣ್ಣ ಆಫೀಸಿಗೆ ಬಂದ ಕೂಡಲೆ ನಗುನೋ ನಗು ಹಹಹ ಥಾಂಕ್ಯೂ ಹಹಹ...

Ambika said...

Yuppa..!!! Sikkapatte chennagide :) :) :)

sunaath said...

ಮಾಬ್ಲುವಿನ ಬಗೆಗೆ ಕನಿಕರ ತುಂಬಿಕೊಳ್ಳುತ್ತೆ.

ಕನಸು ಕಂಗಳ ಹುಡುಗ said...

ಹ ಹ್ಹ ಹ್ಹಾ...... ಸೂಪರ್......
ಒಳ್ಳೆ ಮಜಾ ಬಂತು.....
ಇದೇನ್ ಬಿಡು ಪ್ರಕಾಶಣ್ಣಾ....
ನಮ್ಮೂರ ಕಣ್ಣೀ ಡಾಕ್ಟರು 3-4 ಜನರಿಗೆ ಒಂದೇ ಬಾರಿ ಚೆಕ್ ಮಾಡಿ ಆಮೇಲೆ ಒಂದೇ ಬಾರಿ ಮಾತ್ರೆ ಬರೆದು ಕೊಡ್ತಿದ್ರು. ಅವಾಗ ಯಾರಿಗೋ ಕೊಡೋ ಹೆರಿಗೆ ನೋವು ಬರೋ ಇಂಜಕ್ಷನ್ ಯಾವನಿಗೋ ಕೊಟ್ಟಿದ್ರಂತೆ.... ಅವನಿಗೆ ಹೆರಿಗೆ ನೋವು ಬಂದದ್ದೊಂದು ದೊಡ್ಡ ಕಥೆ ಇದೆ.....
ಹಾಗೇ ಆಯ್ತು ಇದೂನು....
ಹ್ಹ ಹ್ಹಾ... ಒಳ್ಳೆ ನಿರೂಪಣೆ....
ಚನ್ನಾಗಿದೆ.

vasu said...

he he *balyada nenapu ati madhura* tumba chennagi,rasavattagi baritira. Bahushha kustana matre sariyagi kelsa madiddare ata doctre aguttiddaneno....

ಸವಿಗನಸು said...

ಹಹಹಾಹಹಹ.....ಚಿತ್ರಾ ಹೇಳಿರೊ ಹಾಗೆ ಎಲ್ಲರೂ ಐಟಂ ಗಳೆ....
ಚೆನ್ನಾಗಿದೆ ಹಾಸ್ಯ....

ಸುಮ said...

:) :) ...ಪ್ರಕಾಶಣ್ಣ ನಿಮಗೆ ಎಲ್ಲಿಂದ ಸಿಗ್ತೋ ಇಂತಹ ಕಥೆಗಳು...ಈಗ ನಗು ಬತ್ತು ಆದರೆ ಈ ಘಟನೆ ನಡೆದಾಗ ಎಷ್ಟು ಗಾಬರಿಯಾಗಿದ್ದಿಕ್ಕು?

PARAANJAPE K.N. said...

ಚಿತ್ರಾ ಹೇಳಿದ್ದು ಸರಿ ಎನಿಸುತ್ತಿದೆ, ನೀವೆಲ್ಲರೂ ವಿಶಿಷ್ಟ ಐಟಮುಗಳು . ಅದೆಷ್ಟು ಆಟ ಆಡಿದ್ದೀರಿ ಮಾರಾಯ್ರೇ, ಹೊಟ್ಟೆಕಿಚ್ಚಾಗ್ತಾ ಇದೆ. ಶಾಲಾ ದಿನಗಳಲ್ಲಿ ಹುಡುಗಿಯರಿ೦ದ "ಗಾ೦ಧಿ" ಎ೦ಬ ಅಭಿದಾನ ಪಡೆದಿದ್ದ ಮುಗ್ಧ ನಾನು. ನಿಮ್ಮ ತರಹ ಏನೇನೂ ತರಲೆ ಮಾಡಿಲ್ಲ. ಈಗ ಪಶ್ಚಾತ್ತಾಪ ಆಗ್ತಿದೆ. ಚೆನ್ನಾಗಿದೆ. ಇನ್ನಷ್ಟು ಬರಲಿ ಇಂತಹ ರಸಪ್ರಸಂಗ ಗಳ ಮಾಲೆ, ಬೇಗ ಮೂರನೆಯ ಪುಸ್ತಕವೂ ಹೊರಬರಲಿ.

ಅನಂತ್ ರಾಜ್ said...

ಹಾಸ್ಯ ಸಪ್ತಾಹ ಪ್ರಾರ೦ಭವಾದ೦ತಿದೆ.. ಭಟ್ ರವರ ತಾಣ ನೋಡಿ ಬ೦ದೆ. ಪ್ರಕಾಶ್ ಅವರ ತಾಣದಲ್ಲೇ ಅದರ ಉತ್ಥಾನ ಎ೦ದು ಅರಿವಾಯಿತು. ಅಭಿನ೦ದನೆಗಳು ಸರ್.

ಅನ೦ತ್

ಅಮಿತಾ ರವಿಕಿರಣ್ said...

ಸುಮ್ಮನೆ ಲ್ಯಾಪ್ಟಾಪ್ ನೋಡ್ತಾ ನಗ್ತಿರೋದ್ ನೋಡಿ ನನ್ನ ೪ ವರ್ಷದ ಮಗ ಅಮ್ಮನಿಗೆ ಏನೋ ಆಗಿದೆ ಅಂತ ತನ್ನ ಪಪ್ಪನನ್ನು ಕರೆದ,,,,ಅವರಿಗೆ ನಾನು ಕಥೆ ಹೇಳಿದೆ..ಅವರು ನಗ ತೊಡಗಿದರು..ಮಗನಿಗೆ ಫುಲ್ ಟೆನ್ಶನ್ ಅಪ್ಪ ಅಮ್ಮ ಇಬ್ಬರಿಗೂ ಏನೋ ಆಗಿದೆ..ಅಂತ....ನಿಮ್ಮ್ಮ ಬರಹ...ಅಷ್ಟು ಚನ್ನಾಗಿದೆ..ನಗು...ನಗು ನಗು....ನಿಮ್ಮೂರಿನ ಮಾಬ್ಲ ..ಯುಕೆ ತನಕ ಬಂದು ನಮ್ಮನ್ನು ನಗಿಸಿದ..ಅವನಿಗೆ ಮತ್ತು ಅವನನ್ನು ಕರೆತಂದ ನಿಮಗೇ...ನಗು ನಮನಗಳು..

ಸೀತಾರಾಮ. ಕೆ. / SITARAM.K said...

sadhya maabluna dabbishaktige enu aagillaa taane???

Mohan Hegade said...

super baraha prakashji.

mabluna kate govinda. kadige tingalu atada elya???

barla,

Mohan Hegade

geeta bhat said...

Haaa,Haa,Haa...
Sakath comedy aagide...school life andrene haage, eno hudugata,eno thuntata..aaha adra nenaskondrene eno vantara kushi. nimma ee lekhanadinda namagu ella namma balyada dinagala(school days) nenapumadi kottirodakke tumba tumba THANKS....

Ittigecement said...

ವಾಣಿ...

ಕೆಲವೊಂದು ಘಟನೆಗಳನ್ನು ಯಾವಾಗಲೂ ನೆಮಪಿಸಿಕೊಂಡು ನಗುತ್ತಿರುತ್ತೇವೆ...

ಮರೆಯೋದೆ ಇಲ್ಲ..
ಸದಾ ಹಸಿರಾಗಿರುತ್ತದೆ..

ನನ್ನ ಜೀವನದಲ್ಲಿ ಈ ಘಟನೆ .

ಒಂದಲ್ಲ ಎರಡಲ್ಲ.. ಅಷ್ಟೆಲ್ಲ ಮಾತ್ರೆ ನುಂಗಿ..
ಅವನ ಮುಖ ನೆನಪಾದರೆ ನಗೆ ಉಕ್ಕುತ್ತದೆ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...

ಡಾ.ಕೃಷ್ಣಮೂರ್ತಿಯವರೆ..

ನೀವು ಫೋನಿನಲ್ಲಿ ಹೇಳಿದ ಹಾಗೆ ಈ ಮಾತ್ರೆ ಹೆಣ್ಣು ಮಕ್ಕಳು ಈ ಪ್ರಮಾಣದಲ್ಲಿ ತಗೊಂಡಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು...
ಗಂಡು ಮಕ್ಕಳಿಗೆ ಈ ಮಾತ್ರೆಯಲ್ಲಿರುವ "ಹಾರ್ಮೋನುಗಳು" ಪರಿಣಾಮ ಬೀರಲಿಲ್ಲ..
ಅಥವಾ ತತ್ಕಾಲದಲ್ಲಿ ಔಷಧ ಸಿಕ್ಕಿದ್ದರಿಂದಲೂ ಇದ್ದಿರ ಬಹುದು...

ಮಾಬ್ಲುವಿಗೆ ಏನೂ ಆಗಲಿಲ್ಲ...

ಆದರೆ ಈ ಘಟನೆ ನಮ್ಮೂರಲ್ಲಿ ವರ್ಲ್ಡ್ ಫೇಮಸ್ ಆಯಿತು....

Ashwini Dasare said...

ROFL....!!! nangantu enu helbeku antane artha aagta illa...sakat majavaagide...kushta nimma snehitanalva?? adakke sahavaas dosh aagirbeku :-P

Deep said...

Saar... maneyavrella seri tumba nakvi.. channagide..

Hinge batta irli..

Ittigecement said...

ವಿಜಯಶ್ರೀ..

ಮೊದಲು ಆ ಮಾತ್ರೆಯ ಅರ್ಥ ಗೊತ್ತಿರಲಿಲ್ಲ...
ದೊಡ್ಡವರೆಲ್ಲ ನಗುತ್ತಿದ್ದರಲ್ಲ.. ಅಂತ ನಾವೂ ನಗ್ತಾ ಇದ್ವಿ...

ಕೆಲವು ವರ್ಷಗಳ ನಂತರ ವಿಷಯ ಅರ್ಥವಾದ ಮೇಲೆ ಸಿಕ್ಕಾಪಟ್ಟೆ ನಗು ಬಂತು...
ಇನ್ನೂ ನಗ್ತಾನೇ ಇದ್ದೀವಿ..
ಹಾ..ಹ್ಹ..ಹ್ಹಾ...!!

ಇಷ್ಟಪಟ್ಟು ನಕ್ಕು..
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

Ranjita said...

ಓದುವಾಗ ಭಯ ಆಗ್ತಾ ಇತ್ತು ..ಅಯ್ಯೋ ಮಾಬ್ಲು ಗೆ ಏನಾಗತ್ತೋ ಅಂತ ಅನ್ನಿಸ್ತ ಇತ್ತು..ಪೂರ್ತಿ ಓದಿದ ಮೇಲೆ ಸಮಾಧಾನ ಆಯ್ತು ..ನಗು ಬರ್ತಾ ಇದೆ... :D

Gubbachchi Sathish said...

ಕುಷ್ಟ ಮಾಡಿದ ಕಿತಾಪತಿ ಚಿನ್ನಾಗಿ ನಿರೂಪಿತವಾಗಿದೆ. ಪಾಪ ಮಾಬ್ಲು ಹುಷಾರಾಗಲಿ ಅನ್ನೊ ಯೋಚನೆಯಿದ್ದರು ಯಾವುದೋ ಮಾತ್ರೆ ಕೊಡಬಾರದು ಎಂಬ ಅರಿವು ಕುಷ್ಟನಿಗೆ ಬಂದಿಲ್ಲವಷ್ಟೆ.

ಅಂತು ನಿಮ್ಮ ಗೆಳೆಯರು ಮಾಡಿದ ಮಾಡುವ ಅನಾಹುತಗಳು ಇನ್ನು ಎಷ್ಟಿವೆಯೋ!?

Ittigecement said...

ಸೌಮ್ಯಾರವರೆ..

ನನ್ನ ಬ್ಲಾಗಿಗೆ ಸ್ವಾಗತ...

ನೆಂಟರ ಮನೆಗೆ ಹೋದಾಗ ಅಲ್ಲಿನ ಶಾಲೆಗಳಿಗೆ ಹೋಗಿ ಕುಳಿತು ಕೊಳ್ಳುವದು ಒಂದು ವಿಶೇಷ ಅನುಭವ..
ಹೆಮ್ಮೆ ಕೂಡ ಆಗುತ್ತಿತ್ತು..

"ನಿಮ್ಮ ಶಾಲೆ ಹೇಗಿದೆ..?" ಈ ಪ್ರಶ್ನೆ ಸಾಮಾನ್ಯವಾಗಿರುತ್ತಿತ್ತು..

ನಮ್ಮ ಶಾಲೆಯ ಬಗೆಗೆ ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು..
ಅಲ್ಲಿ ಒಂಥರಾ ರಾಯಲ್ ಟ್ರೀಟ್...

ಶಾಲೆಯ ದೈನಂದಿನ ಕೆಲಸ ನಾವು ಅಲ್ಲಿ ಮಾಡುವಂತಿಲ್ಲ..
ಆಶಾಲೆಯ ತಪ್ಪುಗಳನ್ನು.. ಮುಲಾಜಿಲ್ಲದೆ ಹೇಳಿ ಬರುತ್ತಿದ್ದೆವು..

ಖುಷಿಯಾಗುತ್ತಿತ್ತು..

ನಮ್ಮೂರ ಶಾಲೆಗೆ ಬಂದ ಮಾಬ್ಲು ಜೀವನದಲ್ಲಿ ಮರೆಯಲಾರದ ಘಟನೆಗೆ ಸಾಕ್ಷಿಯಾದ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

ಬರುತ್ತಾ ಇರಿ...

ಶಿವಪ್ರಕಾಶ್ said...

ha ha ha... sooper prakashanna :)

Rashmi Hegde said...

Ajjayya mast iddu... nan officenalli ellargu heldi... ella biddu biddu nakkidda... but kannadadalli adu nam bhasheli odidashtu maja banjille... so nanantu full nakkiddi...

Rashmi Hegde said...

Aldo Ajjayya... ishtellaa kitapati ninga heng madtiddi.. eegina hudranna taga, eethar maja ella irte ille... ninga bidappa... "ASAMAANYA ADWITEEYA" ru... Jai ho....

Haan Marti... Nanu heenge madididdi.. nimmane gappatige choclate kodti heli shannamenasu bayige hakididdi...
Balyane haange alda...!! Eshtu maja irtu...

Badarinath Palavalli said...

ಸಧ್ಯ ಪ್ರಸಂಗ ಸುಖಾಂತ್ಯವಾಯಿತಲ್ಲ ಅದೇ ಪ್ರಕಾಶಣ್ಣ ನೆಮ್ಮದಿ. ಬಾಲ್ಯದ ತುಂಟಾಟಗಳೇ ಸೊಗಸು ಅಲ್ವಾ?

ದಿನಕರ ಮೊಗೇರ said...

nimma baraha odiye khushipaDabeku...

tumbaa nagu tarisitu...

bareda riti chennaagide...

ಆನಂದ said...

ಪಾಪ ಮಾಬ್ಲು, ಆದ್ರೂ ಮಜವಾಗಿದೆ ಕತೆ :)

ಸುಧೇಶ್ ಶೆಟ್ಟಿ said...

Bhayankaravaagittu :P

thumba nagu tharisitu kooda :)

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಹೆಹ್ಹೆಹ್ಹೆ... ನಕ್ಕು ನಕ್ಕು ಸಾಕಾತು! ಕುಷ್ಟನ ಮಾತ್ರೆ ಪುರಾಣ ಭಾರೀ ಮಸ್ತ್ ಇತ್ತು ಪ್ರಕಾಶಣ್ಣ :-)
ನಾನೂ ಒಂದ್ಸಲಾ ಮಧುಂಗೆ Cold act (ನೆಗಡಿ ಮಾತ್ರೆ) ಕೊಡುವ ಬದಲು Eldopar (ಲೂಸ್ ಮೋಷನ್‌ಗೆ ಕೊಡೋ ಮಾತ್ರೆ) ಕೊಟ್ಟಿದ್ದೆ..! :-) :P

-ಪೂರ್ಣಿಮಾ

ಅನುಶ್ರೀ ಹೆಗಡೆ ಕಾನಗೋಡು. said...

ayyayyappa ....
prakashannayya sikkapatte cholo iddu...
nim blog yalru follow maadre yalroo 10 varsha jasti badakta.
eenamni negyadstri...

NiTiN Muttige said...

ಪಾಪ, ಮಾಬ್ಲು ವಿನದ್ದು ಏನು ತಪ್ಪಿಲ್ಲಾ!! ಮನೆಯಲ್ಲಿ ಹುಡುಗರಿಗೆ ಆಗ ಯಾರು ತಾನೆ ತಿಳಿಸಿ ಹೇಳುತ್ತಾರೆ?ಹೇಳುತ್ತಾರೆ? ಹೇಳುವಂತಹ ವಿಷಯವೇ!!. ಪಾಪ ಏನೋ ಗೆಳೆಯನಿಗೆ ಸಹಾಯ ಮಾಡಲು ಹೋಗಿ "ಮಾತ್ರೆ" ಮಾಬ್ಲು ಆಗಿದ್ದು ಮಾತ್ರ ಸುಪರ್ಬ್!!!!
ಒಮ್ಮೆ ನನ್ನ ಅಣ್ಣಂಗೆ ಜ್ವರ ದ ಮಾತ್ರೆ ಕೊಡಲೆ ಅಮ್ಮ ದನಕ್ಕೆ ಕೊಡುವ ಮಾತ್ರೆ ಕೊಟ್ಟಿತ್ತು! ಪುಣ್ಯ ಏನು ಆಜಿಲ್ಲೆ!!

Sandeep K B said...

ಪಾಪ ಮಬ್ಲುಗೆ ಯಾವ್ದೋ ಮಾತ್ರೆ ಕೊಟ್ಟು .... ನಮಗೆ ನಗುವಿನ ಮಾತ್ರೆ ಕೊಟ್ರಲ್ಲ ..
ಸೂಪರ್

Nagaraj Bhat said...

ಒಳ್ಳೆ ಸೀರಿಯಸ್ ಸಂದರ್ಬದಲ್ಲಿ ತಮಾಶೆ, ಒಳ್ಳೆ ಪಾಠ ಕೂಡ.

vandana shigehalli said...

ಸಕತ್ತಾಗಿದೆ ಪ್ರಕಾಶಣ್ಣ
ಇಂತಹ ನಮ್ಮ ಊರುಗಳಲ್ಲಿ ಮಾತ್ರ ಆಗಲು ಸಾಧ್ಯ
ಬಿದ್ದು ಬಿದ್ದು ನಕ್ಕಿದ್ದೆ ನಕ್ಕಿದ್ದು

Unknown said...

Hi