Thursday, April 21, 2011

ಇದು..ಸಡಗರ.. ಸಂಭ್ರಮದ ಆತಂಕ !!


ದೆಹಲಿಯಿಂದ ಗೆಳೆಯ  ಸೀತಾರಾಮ ಕೆಮ್ಮಣ್ಣು..

"ಪ್ರಕಾಶ್... 
ಬೆಳಗಿನ ವಿಮಾನಕ್ಕೆ ಬರುತ್ತಿದ್ದೇನೆ.." 
ಎಂದಾಗ ಕಣ್ಣಲ್ಲಿ ಹನಿಗೂಡಿತ್ತು..

ಮುಂಬೈ ಗೆಳೆಯ "ಅಶೋಕ್ ಶೆಟ್ಟಿ "
" ಪ್ರಕಾಶಣ್ಣ  .. 
ನಾನು ಮತ್ತು ನನ್ನ ಕುಟುಂಬ ಹಿಂದಿನ ದಿನವೇ ಬರುತ್ತಿದ್ದೇವೆ.." 
ಅಂದಾಗ ಮೂಕನಾಗಿ ಹೋದೆ..

ಮುಂಬೈನಿಂದ  ಒಟ್ಟೂ ನಾಲ್ಕು  ಸ್ನೇಹಿತರ ಕುಟುಂಬ ಬರುತ್ತಿದೆ... !!

ಮಂಗಳೂರಿನ ದಿನಕರ್ ದಂಪತಿಗಳು..
"ಪ್ರಕಾಶಣ್ಣ .. ನಾವು ಎರಡು ದಿನ ಮೊದಲೇ ಬರುತ್ತೇವೆ.."
ಎಂದಾಗ ಮತ್ತೆ ಮೂಕನಾದೆ..

ಇವರಿಗೆಲ್ಲ ಹೇಗೆ ಕೃತಜ್ಞತೆ ಹೇಳಲಿ...?

ಬ್ಲಾಗ್ ಗೆಳೆಯ "ಶಿವ ಶಂಕರ್ ಯಳವತ್ತಿ"  ಗದಗಿನಿಂದ ಬರುತ್ತಿದ್ದಾರೆ..

ಗೆಳೆಯರೇ..

ನಿಮ್ಮೆಲ್ಲರ ಪ್ರೀತಿಗೆ.. ಸ್ನೇಹಕ್ಕೆ.. ನಾನೇನು ಮಾಡಬಲ್ಲೆ?
ಇದಕ್ಕೆಲ್ಲ ನನಗೆ ಅರ್ಹತೆ ಇದೆಯಾ..?
ಬಹಳ ಬಾರಿ ಪ್ರಶ್ನಿಸಿಕೊಂಡಿದ್ದೇನೆ...

ಇವುಗಳೆಲ್ಲದರ ನಡುವೆ...
ಎಲ್ಲ ಅಡ್ಡಿ ಆತಂಕಗಳ ನಡುವೆಯೇ.. ನಿರೀಕ್ಷಿಸುತ್ತಿರುವ  ದಿನ ಹತ್ತಿರ ಬಂದೇ..ಬಿಟ್ಟಿತು..
ಗೆಳೆಯರೆಲ್ಲರ ಉತ್ಸಾಹ ..
ಪ್ರೋತ್ಸಾಹ ...
ನಮ್ಮ ಆತಂಕವನ್ನು ಕಡಿಮೆ ಮಾಡಿದೆಯಾದರೂ..

ಸಂಭ್ರಮದ ಆತಂಕ ಜಾಸ್ತಿಯಾಗತೊಡಗಿದೆ...!

ಕಾರ್ಯಕ್ರಮ ಹೇಗಾಗ ಬಹುದು..?

ಬಂದ ಗೆಳೆಯರನ್ನೆಲ್ಲ ಮಾತನಾಡಿಸಿ ...
ಅವರ ಸಂತೋಷದಲ್ಲಿ ಹೇಗೆ ಭಾಗಿಯಾಗಬಲ್ಲೆ?
ಎಲ್ಲವನ್ನೂ ಸರಿಯಾಗಿ ನಿಭಾಯಿಸ ಬಲ್ಲೇನೆ..?

ಮತ್ತೆ  ಆತಂಕ..!

ಶಾರಿ, ಗಣಪತಿ ಭಾವ ಬರುತ್ತೇನೆ ಎಂದಿದ್ದಾರೆ...
ನನ್ನಕ್ಕ, ಚಿಕ್ಕಮ್ಮ.. ಕೆಲವು ಹಳ್ಳಿಯ ಸ್ನೇಹಿತರು ಒಂದು ದಿನ ಮುಂಚಿತವಾಗಿ ಬರುತ್ತಿದ್ದಾರೆ...

ಒಂದು ರೀತಿಯ ಮದುವೆಯ ಸಂಭ್ರಮ.. !!

"ಅದೆಲ್ಲ ಸರಿ... " ನಾಗು "  ಬರುತ್ತಿದ್ದಾನಾ ?? "

" ಹೌದು...ನಾಗು ಬರುತ್ತಿದ್ದಾನೆ...!! "

ಇಲ್ಲಿ ಒಂದಷ್ಟು  ಶರತ್ತುಗಳಿವೆ...

ನಮ್ಮ ನಾಗುವನ್ನು ...

ನಾನಾಗಲಿ..
ನನ್ನ ಸ್ನೇಹಿತರಾಗಲಿ...
ಮನೆಯವರಾಗಲಿ... ಹೆಸರು ಹೇಳಿ ಮಾತನಾಡಿಸುವದಿಲ್ಲ...

"ಇದು ಒಳ್ಳೆ ಕಥೆಯಾಯಿತಲ್ಲ.. !!"

ಹೌದು...
ನಾಗುವನ್ನು ನೀವೇ ಗುರುತು ಹಿಡಿಯ ಬೇಕು...
ಅದನ್ನು ನನಗೆ ಹೇಳ ಬೇಕು...

ನೆನಪಿಡಿ... 
ಈ ವಿಷಯ  ನಾಗುವಿಗೂ ಗೊತ್ತಿದೆ...!
ಇದಕ್ಕೆ ಅವನ "ತಯಾರಿ" ಕೂಡ ಇದ್ದಿರಬಹುದು....

ನಾಗುವನ್ನು ಸರಿಯಾಗಿ ಗುರುತು ಹಿಡಿದವರಿಗೆ  "ಬಹುಮಾನ" ಇದೆ..

ಸ್ವತಹ  ನಾಗುವಿನ ಕೈಯಿಂದ...!!

ಇವೆಲ್ಲ ಕನಸಿನಂತೆ ಅನಿಸುತ್ತಿದೆ...

ಎಲ್ಲ ಬ್ಲಾಗಿಗರು..
ಬ್ಲಾಗ್ ಓದುಗರನ್ನು ಮಾತನಾಡಿಸೋಣ... 

ಬಹುದಿನಗಳಿಂದ ಕಾಯುತ್ತಿದ್ದ ಒಂದು  ಸಂಭ್ರಮಕ್ಕಾಗಿ...
ಒಟ್ಟಿಗೆ ಸೇರಿ.. ಸಡಗರ ಪಡೋಣ...!

ನಿಮ್ಮನ್ನೆಲ್ಲ...
ನನ್ನ ಗೆಳೆಯರು.. ಬಂಧುಗಳು... ಸ್ನೇಹಿತರು...
ಅಳಿಯಂದಿರು..

ನನ್ನ ಬ್ಲಾಗಿನ  ನಿಜ ಜೀವನದ ಪಾತ್ರಗಳು...

ಎಲ್ಲರೂ  ನಿಮ್ಮನ್ನು  ಸ್ವಾಗತಿಸುತ್ತೇವೆ...

ದಯವಿಟ್ಟು ಬನ್ನಿ...

ಜೈ.. ಜೈ... ಜೈ...ಹೋ... !!

( ನಿಮ್ಮನ್ನೆಲ್ಲ  ಪ್ರತ್ಯೇಕವಾಗಿ ಕರೆಯಲಾಗಲಿಲ್ಲ...
ದಯವಿಟ್ಟು ಕ್ಷಮಿಸಿ... 
ಕಾರ್ಯಕ್ರಮಕ್ಕೆ ಬನ್ನಿ ಶುಭ ಹಾರೈಸಿ...)

ಸ್ಥಳ : ವರ್ಲ್ಡ್ ಕಲ್ಚರ್ ಸೆಂಟರ್..
ಬಿ.ಪಿ.ವಾಡಿಯ  ರಸ್ತೆ..
(ಕೃಷ್ಣ ರಾವ್ ಪಾರ್ಕ ಬಳಿ.. ಬಸವನ ಗುಡಿ ಪೋಲಿಸ್ ಸ್ಟೇಶನ್  ಹತ್ತಿರ)
ಗಾಂಧೀ ಬಜಾರಿನಿಂದ ಬಹಳ ಹತ್ತಿರ..

ಬನ್ನಿ ನಿಮಗಾಗಿ ನಾವೆಲ್ಲಾ ಕಾಯುತ್ತಿದ್ದೇವೆ...

42 comments:

ಶಿವಪ್ರಕಾಶ್ said...

ಆ ಸಂಭ್ರಮದ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ...

ಜೈ ಹೋ...

ದಿವ್ಯಾ said...

Naanu batta iddi Prakashanna..:-)

ಸಿಮೆಂಟು ಮರಳಿನ ಮಧ್ಯೆ said...

ಶಿವು....

ನಿಮ್ಮೆಲ್ಲರ ಪ್ರೀತಿ ಸ್ನೇಹ ಸಹಕಾರಕ್ಕೆ ನನ್ನ ಬಳಿ ಮಾತೆ ಇಲ್ಲ...

ಪ್ರೀತಿ, ವಿಶ್ವಾಸ ಯಾವಾಗಲೂ ಹೀಗೆಯೇ ಇರಲಿ...

ಜೈ ಜೈ ಜೈ ಹೋ !!

ಸಿಮೆಂಟು ಮರಳಿನ ಮಧ್ಯೆ said...

ದಿವ್ಯಾ...

ತುಂಬಾ ತುಂಬಾ ಖುಷಿ ಆಯ್ತು...

ನನ್ನ ಅಂದಾಜಿನ ಪ್ರಕಾರ ಆ ಕಾರ್ಯಕ್ರಮದಲ್ಲಿ ಇನ್ನೊಂದು ಸಂಭ್ರಮವಿದೆ..
ಅದೊಂದು ಸರಪ್ರೈಸ್... !!

ನಿಮ್ಮ ಗೆಳತಿಯರನ್ನೂ ಕರೆದುಕೊಂಡು ಬನ್ನಿ...

ಓ ಮನಸೇ, ನೀನೇಕೆ ಹೀಗೆ...? said...

ನಾವೂ ಕೂಡ ಆ ಸಂಭ್ರಮದ ಕ್ಷಣಕ್ಕೆ ಕಾಯ್ತಾ ಇದೀವಿ ಪ್ರಕಾಶಣ್ಣ...ಕಾರ್ಯಕ್ರಮಕ್ಕೆ ಆತ್ಮೀಯ ಶುಭಹಾರೈಕೆಗಳು.

ಸಿಮೆಂಟು ಮರಳಿನ ಮಧ್ಯೆ said...

ಓ ಮನಸೆ ನೀನೇಕೆ ಹೀಗೆ...

ನೀವು ಈ ಕಾರ್ಯಕ್ರಮಕ್ಕಾಗಿ ನಿಮ್ಮ ಲಂಡನ್ ಕಾರ್ಯಕ್ರಮ ಮುಂದೂಡಿದ್ದು.. ತುಂಬಾ ಖುಷಿ ಆಯ್ತು...

ನಿಮ್ಮ ಪ್ರೀತಿ.. ಸ್ನೇಹ ಹೀಗೆಯೇ ಇರಲಿ..

ಪ್ರೀತಿಯಿಂದ
ಪ್ರಕಾಶಣ್ಣ..

'A-NIL' said...

ಪ್ರಕಾಶ್ ಮಾಮಾ,
ನಮ್ಮ ಮನೆಯ ಸಂಭ್ರಮ ಇದು..!
ಪ್ರೀತಿ, ಸಂತೋಷ, ಸಂಭ್ರಮ ನಮ್ಮೆಲ್ಲರದು..
ಅಭಿನಂದನೆಗಳು,ಶುಭಾಶಯಗಳು,
ಶುಭ ಹಾರೈಕೆಗಳು.. :)

ಜೈ ಹೋ..!!
ಪ್ರೀತಿಯಿಂದ
ಅನಿಲ್ .. :)

ಮಹಾಬಲಗಿರಿ ಭಟ್ಟ said...

ಅಣ್ಣಾ ನಾನು ರೆಡಿಆಗಿ ಕೂಳಿತುಕೊಂಡಿದ್ದೇನೆ ಆಕ್ಷಣಕ್ಕಾಗಿ ಕಾದುಕುಳಿತಿದ್ದೇನೆ ................................

ಮನದಾಳದಿಂದ............ said...

ಪ್ರಕಾಶಣ್ಣ,
ನಾನು ನಿಮ್ಮೆಲ್ಲರನ್ನೂ ಮಿಸ್ ಮಾಡ್ಕೋತಾ ಇದ್ದೇನೆ......

Rashmi Hegde said...

Congrats Prakashanna.......

Dr.D.T.krishna Murthy. said...

ಪ್ರಕಾಶಣ್ಣ ;ಅನಿವಾರ್ಯ ಕಾರಣಗಳಿಂದ ಬುಕ್ ಮಾಡಿದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಯಿತು.ಬರಲಾಗುವುದಿಲ್ಲ.ಬೇಸರಿಸಿಕೊಳ್ಳ ಬೇಡಿ.ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು.

ಗಿರೀಶ್.ಎಸ್ said...

Jai ho....Itz a great moment...

Guru's world said...

ನಾನು ಈ ವೀಕ್ ಎಂಡ್ US ಗೆ ಹೋಗಬೇಕಾಗಿ ಇತ್ತು... ಮಿಸ್ ಮಾಡ್ಕೋತಾ ಇದೇನೇ ಅಲ್ವ ಅಂತ ಅಂದುಕೊಂಡೆ.... ಆದರೆ ನನ್ನ ಅದೃಷ್ಟ ... ವೀಸಾ ಇನ್ನು ಬಂದಿಲ್ಲ... ನೆಕ್ಷ್ತ ವೀಕ್ ಎಂಡ್ ಹೋಗಬೇಕಾಗಬಹುದು.....
ಸೊ ತಪ್ಪದಿರ ನನ್ನ ಮಡದಿ ಸಮೇತ ಬರುತ್ತೇನೆ

ಸಿಮೆಂಟು ಮರಳಿನ ಮಧ್ಯೆ said...

ಅನಿಲೂ... ನಾಗು.. ವಿಶ್ವ.. ಗಿರೀಶ್...

ಎಲ್ಲಿಯ ಗುಲ್ಬರ್ಗ...?
ಎಲ್ಲಿಯ ಕೋಣನ ಕುಂಟೆ..?

ನಿಮ್ಮ ಹಾಗೂ ನಿಮ್ಮ ಗೆಳೆಯರ ಸ್ನೇಹ ವಿಶ್ವಾಸ ಹೀಗೆಯೇ ಇರಲಿ...

ಜೈ ಜೈ ಜೈ ಹೋ !!

Sandeep.K.B said...

ಪ್ರಕಾಶಣ್ಣ,
ಅನಾಮಿಕರನ್ನು ಆತ್ಹ್ಮೀಯರನ್ನಗಿ ಮಾಡುವ ನಿಮ್ಮ ಪ್ರೀತಿಗೆ ಜೈ ಹೋ..
ನಾವು ಕಂಡಿತ ಬರುತ್ತೇವೆ .....

shankar said...

BEST OF LUCK PRAKASHANNA.

prabhamani nagaraja said...

ಅಬ್ಬ! ಈ ಸಂಭ್ರಮ, ಈ ಸ೦ತಸ.....ನಿಜಕ್ಕೂ ಆನ೦ದಕರ. ನಿಮ್ಮ ಸ್ನೇಹಪರತೆಗೆ ನಮನಗಳು..`ಹೆಸರೇ ಬೇಡ' ದಿ೦ದ .`" ಇದೇ ಇದರ ಹೆಸರು " ! .`ಹೆಸರೇ ಬೇಡ' ಇಲ್ಲೇ ನನ್ನ ಮು೦ದೇ ಟೇಬಲ್ ಮೇಲಿದೆ! ಬರಲು, ಬ್ಲಾಗ್ ಮಿತ್ರರನ್ನೆಲ್ಲಾ ನೋಡಲು ತು೦ಬಾ ಇಷ್ಟವಿದೆ.ಪ್ರಯತ್ನಿಸುತ್ತೇನೆ.

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಇಂಥಹ ಸಂದರ್ಭ ಮಿಸ್ ಮಾಡಿಕೊಳ್ತಾ ಇದೀನಿ ಅನ್ನೋ ಬೇಸರ ಇದೆ
ಆದರೆ ಪ್ರೀತಿ ಹಾರೈಕೆ ಸದಾ ನಿಮ್ಮೊಂದಿಗೆ ಇದೆ
ಕಾರ್ಯಕ್ರಮದ ಯಶಸ್ಸಿಗೆ ಶುಭಾ ಹಾರೈಕೆ
ನಿಮ್ಮ
ಗುರು

shivu.k said...

ಸರ್,

ನಾನು..................................................................................................................ಇಂಥ ಸಂಭ್ರಮಗಳು ಬದುಕಿನಲ್ಲಿ ಅಪರೂಪ.........................ನಾನು ಏನು ಹೇಳಬೇಕೆಂದುಕೊಂಡಿದ್ದೇನೆ. ಇಲ್ಲಿ ಹೇಳಲಾರೆ. ಅದು ನಿಮಗೆ ಗೊತ್ತು. ಅದನ್ನು ಹೇಳಿಬಿಟ್ಟರೆ ಎಲ್ಲರಿಗೂ ಗೊತ್ತಾಗಿಬಿಡುತ್ತದೆ. ಗೊತ್ತಾಗುವುದು ಬೇಡ. ಕಾರ್ಯಕ್ರಮ ನಮ್ಮದು. ಮತ್ತಷ್ಟು ನಮ್ಮದಾಗಿಸಿಕೊಳ್ಳೋಣವೆಂದುಕೊಂಡಿದ್ದೇನೆ..
ಮಣಿಕಾಂತ್ ಇಂಥ ಬ್ಲಾಗ್ ಬರಹಗಾರರ ಹತ್ತಾರು ಪುಸ್ತಕಗಳನ್ನು ಮಾಡಲಿ ಎಂದು ಹಾರೈಸುತ್ತೇನೆ..

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಮಹಾಬಲ..

ಆ ದಿನದ ಸಂಭ್ರಮಕ್ಕಾಗಿ ನಾನೂ ಕಾಯುತ್ತಿರುವೆ..
ಈ ರಜೆಗಳ ನಡುವೆ ಕಾರ್ಯಕ್ರಮ ಯಶಸ್ವಿಯಾಗುವದು ಪ್ರೀತಿಯಿಂದ..
ಸ್ನೇಹದಿಂದ..

ಬ್ಲಾಗಿಗರು.. ಓದುಗರಲ್ಲದೆ..

ಮಣಿಕಾಂತರ ಅಭಿಮಾನಿಗಳೂ ಬರಲಿದ್ದಾರೆ..

ನಿಜಕ್ಕೂ ಸಂಭ್ರಮದ ..ಸಡಗರದ ಕ್ಷಣಗಳು...

ಸ್ನೇಹ, ಪ್ರೀತಿ ಹೀಗೆಯೇ ಇರಲಿ...

ಸಿಮೆಂಟು ಮರಳಿನ ಮಧ್ಯೆ said...

ಮನದಾಳದಿಂದ.. ಪ್ರವೀಣ..

ಏನು ಮಾಡೋಣ... ಹೇಳಿ..

ನಮ್ಮ ನಮ್ಮ ಕೆಲಸ ಕೂಡ ಅಷ್ಟೇ ಮಹತ್ವದ್ದು..
ಕೆಲಸ ಮೊದಲು.. ನಂತರ ಇವೆಲ್ಲ..

ಮುಂದಿನ ಬಾರಿ ಬರ್ತೀರಲ್ಲ ಆಗ ಭೇಟಿಯಾಗೋಣ..

ಕಾರ್ಯಕ್ರಮದ ಫೋಟೊಗಳನ್ನು ಹಾಕುತ್ತೇವೆ..

ಪ್ರೀತಿಯಿಂದ ಶುಭ ಹಾರೈಸಿ.. ಅಷ್ಟು ಸಾಕು... ಜೈ ಹೋ !!

ಚುಕ್ಕಿಚಿತ್ತಾರ said...

ಜೈ ಜೈ ಜೈ ಹೋ

ನಾವೂ ಬರುವವರಿದ್ದೇವೆ..:)

ದಿನಕರ ಮೊಗೇರ said...

ಸುಮಾರು ತಿಂಗಳಿಂದ ಕಾಯುತ್ತಿದ್ದ ಕಾರ್ಯಕ್ರಮ ಇದು.... ನನ್ನ್ ಬೆಂಗಳೂರಿನ ಗೆಳೆಯ ’ಯಾವಾಗ ಬೆಂಗಳೂರಿಗೆ ಬರೋದು’ ಎಂದು ಕೇಳಿದಾಗಲೆಲ್ಲ ನಿಮ್ಮ ಪುಸ್ತಕದ ಬಿಡುಗಡೆ ದಿನಾಂಕ ಇನ್ನೂ ಫೈನಲ್ ಆಗಿಲ್ಲ ... ಆದಾಗ ಬರುತ್ತೇನೆ ಎನ್ನುತ್ತಿದ್ದೆ.... ಅದೀಗ ಬಂದಿದೆ..... ತುಂಬಾ ಖುಶಿಯಿಂದ ಬರ್ತಾ ಇದ್ದೇವೆ,,,..... lets rock...

Kanthi said...

naanu bartaa iddi.. jai ho..

kavya said...

cograts sir.....:)

ಶಶೀ ಬೆಳ್ಳಾಯರು said...

ಸರ್... ಬರಲಾಗದೇ ಇರುವುದಕ್ಕೆ ಬೇಸರವಾಗುತ್ತಿದೆ... ವಿಪರೀತ ಕೆಲಸದ ಒತ್ತಡ... ಮನ್ನಿಸುವಿರಾಗಿ ನಂಬಿದ್ದೇನೆ. ಪುಸ್ತಕ ಬಿಡುಗಡೆ ಸಮಾರಂಭ ಸುಸೂತ್ರವಾಗಿ ನೆರವೇರಲಿ. ನಿಮ್ಮ ಬರವಣಿಗೆಯ ಮೂಲಕ ಎರಡಲ್ಲ, ಹತ್ತು, ನೂರಾರು ಪುಸ್ತಕಗಳು ಸಾಕಾರ ರೂಪ ತಾಳಲಿ. ಆಮಂತ್ರಣ ಪತ್ರ ಹಾಗೇ ಪುಸ್ತಕದ ಕವರ್ ಪೇಜ್ ಮನಸೂರೆಗೊಂಡಿದೆ.
ಈ ಬಾರಿ ಕ್ಷಮಿಸಿ ಬಿಡಿ. ಮುಂದಿನ ಬಾರಿ ಖಂಡಿತಾ ಪಾಲ್ಗೊಳ್ಳುವೆ... ಪ್ರೀತಿ ಇರಲಿ..!

Niharika said...

Nanagu baralu tumba esta ede. Barutiddene kooda.........

ವಿಚಲಿತ... said...

Abhinandanegalu..

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಹೆರಿಗೆ ನೋವು ಜೋರಾದಷ್ಟೂ ಸುಖ ಪ್ರಸವ ಗ್ಯಾರಂಟಿ!!!!
ಕಂದನ(ಪುಸ್ತಕ)ನ್ನು ಎತ್ತಿಕೊಳ್ಳಲು ನಿಮ್ಮ ಸಂಭ್ರಮವನ್ನು ಹಂಚಿಕೊಳ್ಳಲು ಎಲ್ಲರೂ ಕಾತರರಾಗಿದ್ದೇವೆ.

Saritsagara said...

Barade irale sadhyane ille.....

ಗುಬ್ಬಚ್ಚಿ ಸತೀಶ್ said...

ಇದೋ ನಾನೂ ಬಂದೆ.

Santosh Hegde Ajjibal said...

ಪ್ರಕಾಶಣ್ಣ ಇಂತಹ ರಸಮಯ ಗಳಿಗೆಯನ್ನ ಮಿಸ್ ಮಡಿಕೊಲ್ಲಕಾಗತ್ತ? ಖಂಡಿತ ಬರುತ್ತೇನೆ

ಕನಸು ಕಂಗಳ ಹುಡುಗ said...

ಸಿಮೆಂಟಣ್ಣಾ ಬರೋದಿಕ್ಕೆ ತುಂಬಾ ಇಷ್ಟಾ ಇದೆ....

ಬರೊಕಾಗ್ತಾ ಇಲ್ಲಾ.....

miss ಮಾಡ್ಕೋತಾ ಇದೀನಿ ತುಂಬಾ..

ಕಾರ್ಯಕ್ರಮ ಯಶಸ್ವಿಯಾಗ್ಲಿ... ಆಗುತ್ತೆ....

ಜೈ ಜೈ ಜೈ ಹೋ....

ವನಿತಾ / Vanitha said...

Enjoy maadi..Jai Ho..
Photos ge kaayta irtivi :)

ಕಲರವ said...

prakaash sir, sambhramada kaaryakramakkaagi nimage shubhahaaraikegalu.

Srikanth Manjunath said...

ಕಾರ್ಯಕ್ರಮಕ್ಕೆ ನನ್ನ ಪರಿಚಯಿಸಿದ ಸಂದೀಪ್ ಕೆ. ಬಿ. ಅವರಿಗೆ ನನ್ನ ನಮನಗಳು. ಇದು ನಿಮ್ಮ ಪುಸ್ತಕ ಅನ್ನುವದಕ್ಕಿಂತ ನಮ್ಮ ಪುಸ್ತಕ ಅನ್ನುವುದು ಸೂಕ್ತ. ಪುಸ್ತಕ ಬಿಡುಗಡೆ ಸಮಾರಂಭ ನಿಮ್ಮ ಕಂತುಗಳಲ್ಲಿ ಬರುವ ಭಾವನೆಗಳ ತರಹ ಸೊಗಸಾಗಿತ್ತು, ಕಟ್ಟಡವನ್ನು ಗಾರೆ, ಜಲ್ಲಿ, ಮರಳು ಮುಂತಾದವುಗಳಿಂದ ಕಟ್ಟುತ್ತಾರೆ...ನೀವು ನಿಮ್ಮ ಪುಸ್ತಕಗಳ ಭಾವನೆಯನ್ನು, ಪ್ರೀತಿ, ಅಭಿಮಾನ, ಕೃತಜ್ಞತೆ, ಕಣ್ಣೀರು, ಪನ್ನೀರುಗಳಿಂದ ಕಟ್ತಿದ್ದೀರಿ. ಅಭಿನಂದನೆಗಳು. ಕಾರ್ಯಕ್ರಮದಲ್ಲಿ ತುಂಬಾ ಹಿಡಿಸಿದ ಕ್ಷಣ ಎಂದರೆ, ನೀವು ಮಾತಾಡುತ್ತ ಕುಟುಂಬದವರ ಬಗ್ಗೆ ಹೇಳುತ್ತಾ ನಿಮ್ಮ ಅಕ್ಕನನ್ನು ವೇದಿಕೆಗೆ ಕರೆದಾಗ ನಿಮ್ಮ ಅಭಿಮಾನಪೂರಿತ ಮಾತುಗಳು, ಕಣ್ಣಂಚಲಿ ಬಂದ ಕಣ್ಣೀರು, ನಿಮ್ಮ ಅಕ್ಕ ಅವರ ಭಾವನೆ ತುಂಬಿದ ಮಾತುಗಳು. ನಿಮಗೆ ಶುಭವಾಗಲಿ, ನಿಮ್ಮ ಅಭಿಮಾನ ನಮ್ಮಂಥಹ ಎಳೆಯ ಬ್ಲಾಗಿಗರ ಮೇಲೆ ಇರಲಿ ಎಂದು ಆಶಿಸುತ್ತ - ಶ್ರೀಕಾಂತ್

Umesh Balikai said...

ಪ್ರಕಾಶಣ್ಣಾ,

ಅಂದದ ಕಾರ್ಯಕ್ರಮ, ಚೆಂದದ ಹಾಡುಗಳು, ಸುಂದರ ನಿರೂಪಣೆ, ಅದಕ್ಕಿಂತ ಸುಂದರವಾದ ನಿಮ್ಮೆಲ್ಲರ ಒಡನಾಟ,... ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ನಿಮಗೆ ನನ್ನ ಮತ್ತು ನನ್ನ ಧರ್ಮಪತ್ನಿಯ ಕಡೆಯಿಂದ ಆತ್ಮೀಯ ವಂದನೆಗಳು. ಆಗ್ರಾದ ಹುಡುಗಿಯನ್ನು ಮೀಟ್ ಮಾಡಲು ಆಗಲಿಲ್ಲ... ಮುಂದಿನ ಸಲ ಮೀಟ್ ಮಾಡ್ತೇವೆ..

ಅಭಿನಂದನೆಗಳೊಂದಿಗೆ,

ಮಿಸ್ಟರ್ ಅಂಡ್ ಮಿಸಸ್ ಉಮೇಶ್ :-)

ದೀಪಸ್ಮಿತಾ said...

ಇವತ್ತಿನ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು. ಅನೇಕ ಬ್ಲಾಗ್ ಮಿತ್ರರನ್ನು ಭೇಟಿ ಆಗುವ ಸಂದರ್ಭ ಸಿಕ್ಕಿತು. ಕೋಮಲ್, ಡುಂಡಿರಾಜ್ ಅವರ ಹಾಸ್ಯಮಯ ಮಾತುಗಳು, ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ ತಂಡದ ಗಾಯನ, ಎಲ್ಲಾ ಮುದ ನೀಡಿದವು.

ಪ್ರಕಾಶಣ್ಣ, ನಿಮ್ಮನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವಾಯಿತು. ಮೊದಲು ಅಲ್ಲಿ ಕಾಲಿಟ್ಟಾಗ ತಪ್ಪಾಗಿ ಹವ್ಯಕ ಸಭೆಗೆ ಬಂದುಬಿಟ್ಟೆನೇನೋ ಅನ್ನಿಸಿಬಿಟ್ಟಿತು ;-) ಎಲ್ಲಾ ಕಡೆ ನಮ್ಮ ಶಿರಸಿಯ 'ಬಂಜು ಹೋಜು' ಮಾತುಗಳು. ಒಟ್ಟಿನಲ್ಲಿ ಕಾರ್ಯಕ್ರಮ ಸರಳವಾಗಿ, ತುಂಬಾ ಆಪ್ತವಾಗಿ ನಡೆಯಿತು. ಇನ್ನೂ ಹೆಚ್ಚಿನ ಪುಸ್ತಕಗಳು ನಿಮ್ಮಿಂದ ಬರಲಿ. ಅಷ್ಟೇ ಅಲ್ಲ, ಇದರಿಂದ ಸ್ಫೂರ್ತಿ ಪಡೆದು ಇತರ ಬ್ಲಾಗ್ ಗೆಳೆಯರ ಪುಸ್ತಕಗಳೂ ಹೊರಬರಲಿ.ಇಂಥ ಕಾರ್ಯಕ್ರಮಗಳು ಹೆಚ್ಚಾಗಲಿ

Shweta said...

Naanu Late aagi bandiddakke sory ,but Gandhi bajar navakke yaarigu IIWC building ge gottille,auto davakkuva:(

eneno road heli onduchuru allella suttu haaki konege tandu bitta auto dava antuva..

PrashanthKannadaBlog said...

Dear Prakashanna

I still feed bad that I could not make it. When I read in Vijaya karnataka about the function I felt so happy. I am sure that there will be many more books you will publish.

All the best
Love
Prashanth

ಜಲನಯನ said...

ಪ್ರಕಾಶೂ ನಿನ್ನ ಕಾರ್ಯಕ್ರಮದ ಭರ್ಜರಿ ಯಶಸ್ಸಿಗೆ ಆ ಸಮಯದಲ್ಲಿ ನಾನು ಮಕ್ಕಾದಲ್ಲಿ ಪ್ರಾರ್ಥನೆಯಲ್ಲಿ ಕೇಳಿಕೊಂಡೆ...ಅಷ್ಟೇ ನಾನು ಮಾಡಲು ಆಗಿದ್ದು...ಮನ ನಿನ್ನ ಕಾರ್ಯಕ್ರಮದಲ್ಲಿ ದೇಹ ಮಡದಿ ಮಗಳ ಜೊತೆ ಮಕ್ಕಾದಲ್ಲಿ...ಹಹಹಹ ಜೈಹೋ...

ಸೀತಾರಾಮ. ಕೆ. / SITARAM.K said...

ಇಂದು ಓದುತ್ತಿರುವೆ -ಬಹುಶಃ ದಿವಾಕರರೆ ನಾಗು ವಿರಬೇಕು.