Thursday, December 9, 2010

ವರುಷ ಮೂರು... !! ಸಂಖ್ಯೆ ಮುನ್ನೂರು... !!ನನ್ನ ಬ್ಲಾಗ್ ಹೊಸದಾಗಿ ಓದಲು ಶುರುಮಾಡಿದ ಒಬ್ಬರು ನನಗೆ ಫೋನ್ ಮಾಡಿದ್ದರು...


"ಪ್ರಕಾಶಣ್ಣಾ..
ನಿಮ್ಮ  ಕವನಗಳು ಬಲು ಸೊಗಸಾಗಿರುತ್ತದೆ..!
ನಾನು ಈ ಮೊದಲು ಇಂಥಹ ಕವನಗಳನ್ನು ಓದಿರಲೇ ಇಲ್ಲ...!!"


ಮೊದಲೇ ಡುಮ್ಮಣ್ಣನಾದ ನಾನು ಮತ್ತಷ್ಟು ಉಬ್ಬಿ ಹೋದೆ..


" ಛಾಯಾ ಚಿತ್ತಾರ ಬ್ಲಾಗ್ ಅಲ್ಲವಾ..?"


"ಅಲ್ಲಾ.. ಪ್ರಕಾಶಣ್ಣಾ...!
ಇಟ್ಟಿಗೆ ಸಿಮೆಂಟ್ ಬ್ಲಾಗು.. !!  "


"ಇಟ್ಟಿಗೆ ಸಿಮೆಂಟಿನಲ್ಲಿ ಕವಿತೆಗಳಾ...?.. !!.."


" ಅದೇ.. ಪ್ರಕಾಶಣ್ಣಾ...!!
ಬಣ್ಣ.. ಬಣ್ಣದ  ಅಕ್ಷರಗಳು...  !
ಓದಿದೆ...!
 ಸೊಗಸಾಗಿತ್ತು.. !!.. !! "


ನಾನು ತಲೆ ಕೆರೆದು ಕೊಂಡೆ.. !


"  ಯಾವದು ?  "


"ಅದೇ.. ಪ್ರಕಾಶಣ್ಣಾ... "ಅಸಹಜ"..ಅಂತ....
ಮಸ್ತ್  ಬರಿತಿಯಾ  ಪ್ರಕಾಶಣ್ಣಾ... !! "


"ಅಯ್ಯೋ ..!!
 ಮಾರಾಯ್ರೆ ಅದು  ಕವಿತೆ  ಅಲ್ಲ..!!
ಆದು ನಾನು ಬರೆದ  ಕಥೆ.. !! .."


.........................................
...........................ಇನ್ನೊಂದು  ವಿಷಯ ನಿಮಗೆ  ಹೇಳಲೇ ಬೇಕು...


ಅದೇನು ಗೊತ್ತಾ?


ನನ್ನ ಮಗನಿಗೆ  ಅವನ ಗೆಳೆಯ ರಜತ್ ಕೇಳಿದನಂತೆ...
( ಈ ಪುಟ್ಟ ರಜತ್ ನನ್ನ ಗೆಳೆಯ "ಸತ್ಯ" ನ  ಮಗ)


"ಕನ್ನಡ ಕವಿತೆಗಳನ್ನು ಬರೆಯುವದು ಹೇಗೆ?"


ನನ್ನ  ಮಗ ಅವನಿಗೆ ಹೇಳಿದನಂತೆ..


"ಬಹಳ ಸುಲಭ ಕಣೋ...
ಒಂದು ವಾಕ್ಯ  ಬರೆದುಕೊ..
ಆಮೇಲೆ ಅದರ ಒಂದು ಅಥವಾ ಎರಡು ಶಬ್ಧಗಳನ್ನು...
ಒಂದೊಂದು ಸಾಲುಗಳಲ್ಲಿ ಬರೆಯುತ್ತ...
ಅವುಗಳ ಮುಂದೆ ಪೂರ್ಣವಿರಾಮಗಳನ್ನು ಯಥಾನುಶಕ್ತಿ ಇಡು.. 


ಅದೇ  ಕವನ  ಕಣೋ..!!...


ನನ್ನಪ್ಪ ಹೀಗೇ  ಕವನ ಬರಿತಾರೆ  ..!!. "

ಅಂದನಂತೆ..


.....................
...................................


ಬರೆಯುತ್ತ.. ಬರೆಯುತ್ತ... 
ಮೂರು ವರ್ಷಗಳು  ಕಳೆದು ಹೋದವು...


ಇಂಥಹ  ಸೊಗಸಾದ ಅನುಭವಗಳ ಜೊತೆ..!!


ನಿನ್ನೆ  ಬೆಳಿಗ್ಗೆ  ಎಂದಿನಂತೆ  ಬ್ಲಾಗ್ ನೋಡಿದೆ...


ಪ್ರೋತ್ಸಾಹಿಸುವವರ ಸಂಖ್ಯೆ.." ಮುನ್ನೂರು"  !!


ಅಬ್ಭಾ... !  
ಬಹಳ  ಬಹಳ ಖುಷಿಯಾಯಿತು...!


ಆತ್ಮಸ್ತುತಿ ಅನ್ನಿಸಿದರೂ... ಆನಂದವನ್ನು  ಬಚ್ಚಿಡಲಾಗಲಿಲ್ಲ ...!


ಎಲ್ಲೋ...
ಈ ಬೆಂಗಳೂರಿನ... 
ಟ್ರಾಫಿಕ್ಕು... ಜನಸಂದಣಿ.. ಟೆನ್ಷನ್ ಗಳ ನಡುವೆ...
ಲಾಭ, ನಷ್ಟಗಳ ಜೊತೆ ಲೆಕ್ಕಾಚಾರ ಮಾಡುತ್ತಿದ್ದ  ..
ನನ್ನನ್ನು ...
ಇಲ್ಲಿಗೆ ತಂದು  ಪ್ರೋತ್ಸಾಹಿಸುತ್ತಿರುವ  ನಿಮಗೆಲ್ಲ  ನನ್ನ  ಅನಂತ  ಅನಂತ ಕೃತಜ್ಞತೆಗಳು...


ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗಳು ...
ನನಗೆ ಇನ್ನಷ್ಟು ಬರೆಯಲು ಉತ್ಸಾಹ 
ಕೊಟ್ಟಿದೆ...


ಕೊಡುತ್ತಿದೆ...


ಈ ಬ್ಲಾಗ್ ಲೋಕ  ಒಳ್ಳೆಯ ಸ್ನೇಹಿತರನ್ನು... ಸಹೋದರಿಯರನ್ನು ಕೊಟ್ಟಿದೆ...


ದೂರದ ದೇಶದಿಂದ...
ರಾಜ್ಯದ ಇತರೆ ಭಾಗಗಳಿಂದ...
ಪುಣೆಯಿಂದ, ದೆಹಲಿಯಿಂದ.. ಮುಂಬೈಯಿಂದ...
ಸ್ನೇಹಿತರು.. ನನ್ನನ್ನು ಭೇಟಿಯಾಗಲು ಬರುತ್ತಾರೆ.. ಎಷ್ಟೋ ವರ್ಷಗಳ ಬಳಗದವರಂತೆ.. ! 


ಅವರೊಡನೆಯ ಮಾತುಗಳು...
ನಗು... ಹಾಸ್ಯ... !
ಆ  ಅನುಭವ...ಬಾಂಧವ್ಯ  ಕೊಡುವ  ಖುಷಿ ವರ್ಣಿಸಲು ಆಗದು...

ಈ..
ಬ್ಲಾಗ್ ಲೋಕಕ್ಕೆ...
ನಿಮ್ಮ  ..
ಪ್ರೀತಿಗೆ..
ಸ್ನೇಹಕ್ಕೆ..   ನನ್ನ  ನಮನಗಳು...
ಧನ್ಯವಾದಗಳು....

ನನ್ನ  ಬ್ಲಾಗನ್ನು ಅನುಸರಿಸುವ..
ಮತ್ತು ಓದುವ ಎಲ್ಲ ಸ್ನೇಹಿತರಿಗೆ  ನನ್ನ  ವಂದನೆಗಳು...
ಕೃತಜ್ಞತೆಗಳು..
ಪ್ರೋತ್ಸಾಹ ಹೀಗೆಯೇ.. ಇರಲಿ...

ಪ್ರೀತಿಯಿಂದ...ಪಕ್ಕುಮಾಮ 1


ಪಕ್ಕುಮಾಮ ವಿಡಿಯೋ  ಭಾಗ ಎರಡು ನೋಡಲಿಕ್ಕೆ  ಇಲ್ಲಿ ಕ್ಲಿಕ್ಕಿಸಿರಿ...
PAKKUMAMA 2

(ಪಕ್ಕುಮಾಮ ಸಂದರ್ಶನ  
ಸಂದರ್ಶಕರು .. ಶ್ರೀ. ಸತ್ಯನಾರಾಯಣ..(ಕುಬೇರ ಕನ್ಸ್ಟ್ರಕ್ಷನ್ಸ್  ಬೆಂಗಳೂರು)
 ಕ್ಯಾಮರ...       ಆಶೀಷ್ ಪಿ. 
ಹಿನ್ನೆಲೆ ಸಂಗೀತ ... ಡಾ. ಪ್ರಶಾಂತ್ 
ವಸ್ತ್ರ  ಮತ್ತು  ಮೇಕಪ್ ಮತ್ತು ನಾಮ ವಿನ್ಯಾಸ   ..  ಆಶಾ ಹೆಗಡೆ ಮತ್ತು ರೇಖಾ  ದೀಕ್ಷಿತ್ 
ಸಲಹೆ ಸೂಚನೆ... ನಾಗರತ್ನ ಮತ್ತು  ಕೆ.ಎಸ. ರಜತ್..


("ಕುಡಿಯಿರಿ ಮತ್ತು ಕಲಿಸಿರಿ"  ಯೋಜನೆಯ  ಕಲ್ಪನೆ "ನಿಮ್ಮೊಳಗೊಬ್ಬ ಬಾಲು")


ಜೈ ಹೋ....73 comments:

nimmolagobba said...

ಪ್ರಕಾಶಣ್ಣ ವರುಷ ಮೂರು , ಹಿಂಬಾಲಕರ ಸಂಖ್ಯೆ ಮುನ್ನೂರು.ಹರಿದಾಡಿದ ಭಾವನೆಗಳು ಸಾವಿರಾರು, ಈ ಶುಭಸಂಧರ್ಭದಲ್ಲಿ ಮೊದಲಿಗನಾಗಿ ನಿಮ್ಮನ್ನು ಅಭಿನಂದಿಸುತ್ತೇನೆ. ಕನ್ನಡ ಬ್ಲಾಗ್ ಲೋಕದ ಒಂದು ನಕ್ಷತ್ರ ನೀವು ನಿಮಗೆ ಸಂತಸದ ಶುಭಾಶಯಗಳು.ಮತ್ತೊಂದು ವಿಚಾರ ನೀವು ಅಪ್ಲೋಡ್ ಮಾಡಿರುವ ಎರಡು ಕಂತಿನ ಪಕ್ಕು ಮಾವ ಸ್ಪೆಷಲ್ ಸಂದರ್ಶನ ದಲ್ಲಿ ಭಾಗ ,1 ಹಾಗು ಭಾಗ .2 ಎರಡರಲ್ಲೂ ಮೊದಲ ಸಲ ನಡೆಸಿದ ಸಂದರ್ಶನ ಇದೆ , ಅದನ್ನು ಸರಿಪಡಿಸಿ.ಆದರೂ ಎರಡನೇ ಭಾಗದ ಸಂದರ್ಶನ ಯೂ ಟ್ಯೂಬ್ ನಲ್ಲಿ ನೋಡಿದೆ ಚೆನ್ನಾಗಿದೆ.

ದಿನಕರ ಮೊಗೇರ said...

congratulation aNNa...

hige munduvariyiri....

eshTo jana himbaalisade nimmannu , nimma barahavannu iahTapaduttaare... avarannellaa lekka maaDidare saavira daatavahudu...

hige iri...
khushi khushi aagiri...

Dr.D.T.krishna Murthy. said...

ಪ್ರಕಾಶಣ್ಣ;ಮುನ್ನೂರು,ಮೂರು ಸಾವಿರವಾಗಲಿ.ನಿಮ್ಮಂತಹ ಅನೇಕ ಒಳ್ಳೆಯ ಸ್ನೇಹಿತರನ್ನು ಒದಗಿಸಿ ಕೊಟ್ಟ ಬ್ಲಾಗ್ ಲೋಕಕ್ಕೆ ನಮನಗಳು.

ಸುಮ said...

ಕಂಗ್ರಾಟ್ಸ್ ಪ್ರಕಾಶಣ್ಣ . ಹೀಗೇ ಕವಿತೆಯಂತಹ ಕಥೆಯನ್ನು , ಕಥೆಯಂತಹ ಕವಿತೆಗಳನ್ನು ಬರೆಯುತ್ತಿರಿ :)

ಸಿಮೆಂಟು ಮರಳಿನ ಮಧ್ಯೆ said...

ಬಾಲು ಸರ್...

ಯೂ ಟ್ಯೂಬ್ ತಪ್ಪನ್ನು ಈಗ ಸರಿಪಡಿಸಿರುವೆ...

ಇದರಲ್ಲಿ ಬರುವ "ಕುಡಿಯಿರಿ ಮತ್ತು ಕಲಿಸಿರಿ" ಯೋಜನೆಯ ಕಲ್ಪನೆ ನೀವು ಕೊಟ್ಟಿದ್ದು..
ತುಂಬಾ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ .. ಪ್ರೀತಿ , ವಿಶ್ವಾಸ ಹೀಗೆಯೇ ಇರಲಿ...

ತುಂಬಾ ತುಂಬಾ ಥ್ಯಾಂಕ್ಸ್.. !! ಜೈ ಹೋ... !!

RAGHU said...

Congrats.keep rocking prakashanna.......

ಸಿಮೆಂಟು ಮರಳಿನ ಮಧ್ಯೆ said...

ದಿನಕರ್...

ಬ್ಲಾಗ್ ಲೋಕ ನನ್ನ ಜೀವನದ ಗತಿಯನ್ನು ಬದಲಿಸಿಬಿಟ್ಟಿದೆ...

ದಿನಾಲೂ ಒಮ್ಮೆ ಇಲ್ಲಿಗೆ ಭೇಟಿ ಕೊಡದಿದ್ದರೆ ಏನೋ ಕಳೆದುಕೊಂಡಂಥಹ ಅನುಭವ..

ಎಷ್ಟೋ ಸ್ನೇಹಿತರನ್ನು, ಅವರ ಪ್ರೀತಿಯನ್ನು ಕೊಟ್ಟ ಈ ಬ್ಲಾಗಲೋಕಕ್ಕೆ ಹೃದಯ ಪೂರ್ವಕ ನಮನಗಳು...

ನಿಜ...
ಅನುಸರಿಸುತ್ತಿರದೆ ಖಾಯಮ್ ಓದುಗರು ಇನ್ನೂ ಜಾಸ್ತಿ ಇದ್ದಾರೆ..

ಅವರಿಗೆ... ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...

ಜೈ ಹೋ.. !

ಸುಶ್ರುತ ದೊಡ್ಡೇರಿ said...

ಕಂಗ್ರಾಟ್ಸು ಪ್ರಕಾಶಣ್ಣ.. ಬರೀತಿರು.

ಚುಕ್ಕಿಚಿತ್ತಾರ said...

.........:):)......:):).....:):)

all d best..

ವಸಂತ್ said...

ಧನ್ಯವಾದಗಳು ಸರ್ ನಿಮ್ಮ ಬರಹಗಳು ಸದಾ ನಮ್ಮನ್ನು ಓದುವಂತೆ ಮಾಡುತ್ತಿರಲಿ ಮತ್ತು ನಿಮಗೆ ಇನ್ನಷ್ಟು ಬರೆಯುವಂತ ಶಕ್ತಿ ಆ ದೇವರು ಕೊಡಲಿ ಎಂದು ಹಾರೈಸುತ್ತೇನೆ.
ವಂದನೆಗಳೊಂದಿಗೆ

ವಸಂತ್..

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ

ವರುಷ ಮೂರು ಹರುಷ ನೂರು

ನಿಮ್ಮ ಬ್ಲಾಗ್ ಕಾರು ಬಾರು

ಸೆಳೆದ ಸಂಖ್ಯೆ ಮುನ್ನೂರು

ಬರುತಲಿರಲಿ ಸಾವಿರಾರು

೩ ರ ಸಂಭ್ರಮಕ್ಕೆ ವಿಶೇಷ ಅಭಿನಂದನೆಗಳು

ಹೀಗೆಯೇ ನಿಮ್ಮ ಅಕ್ಷರ ದಾಹ ತಣಿಯದಿರಲಿ

ಅದನ್ನು ಓದುವ ಭಾಗ್ಯ ನಮ್ಮದಾಗಲಿ

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಡಾಕ್ಟ್ರೆ...

ನನಗಿನ್ನೂ ನೆನಪಿದೆ...
ಹೊಸದಾಗಿ ಬ್ಲಾಗ್ ಶುರು ಮಾಡಿದ್ದೆ...
ನಾಗು.. ರಾಜಿಯರ ಕಥೆ ಬರೆಯುತ್ತಿದ್ದೆ...
ಒಂದು ದಿನ ನನ್ನ ಮಡದಿ ಕೇಳಿದ್ದರು..

" ಇದೇ ಥರಹ ಬ್ಲಾಗಿನಲ್ಲಿ ಎಷ್ಟು ದಿನ ಅಂತ ಬರೆಯ ಬಲ್ಲೀರಿ..?"

ಆಗ ನಾನು ಬಹಳ ತಲೆಕೆಡಿಸಿಕೊಂಡಿದ್ದೆ..

ಒಮ್ಮೆ ಶೇಷಶಾಸ್ತ್ರಿಗಳು ಮಾತನಾಡುತ್ತ...
ವಯಕ್ತಿಕ ಅನುಭವಗಳ ಮಧ್ಯದಲ್ಲಿ ಕಥೆಯನ್ನೂ ಬರೆಯಿರಿ ಅಂದಿದ್ದರು..

ಹೀಗೆ ಬರೆಯುತ್ತಿರುವ ನಾನು ಇನ್ನೆಷ್ಟು ದಿನ ಮುಂದುವರೆಸಿಯೇನು..? ಗೊತ್ತಿಲ್ಲ...

ನಿಮ್ಮ ಪ್ರೀತಿ... ಪ್ರೋತ್ಸಾಹ ಹೀಗೆಯೇ ಇರಲಿ...

ಡಾಕ್ಟ್ರೆ ನಿಮ್ಮ ಸ್ನೇಹಕ್ಕೆ ನಾನು ಚಿರ ಋಣಿ..

"ನಾಗರಾಜ್ .ಕೆ" (NRK) said...

Maama, Hearty Congratulations

ಜಲನಯನ said...

ಪ್ರಕಾಶ್ (ಇಟ್ಟಿಗೆ ಸಿಮೆಂಟ್) ...ಮನತುಂಬಿದ ಅಭಿನಂದನೆಗಳು...ಹೀಗೇ ಇನ್ನೂ ಇನ್ನೂ ಹೆಚ್ಚು ಹೆಚ್ಚು ಬೆಳೆಯಲಿ ನಿನ್ನ ಬ್ಲಾಗ್ ಗೆಳೆಯಾ...
ಬ್ಲಾಗ್ ಕೊಟ್ಟ ಉತ್ತಮ ಗೆಳೆಯನ ಬ್ಲಾಗ್ ಮೂರನೇ ಹುಟ್ಟುಹಬ್ಬಕ್ಕೆ ಶುಭಕೋರುವ...
.....ಜಲನಯನ

SNEHA HEGDE said...
This comment has been removed by the author.
SNEHA HEGDE said...

ನಿಮ್ಮ ಬರಹಗಳಾದ ಲೇಖನ/ಕಥೆ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ನೀವು ಎಂತಹ ವ್ಯಕ್ತಿ yendu ಹೇಳಬಹುದು ಅಂದರೆ ನಂಬುತ್ತೀರಾ!!!???
ಯಾವುದೇ ಚೌಕಟ್ಟಿಗೂ ಸಿಕ್ಕಿಕೊಳ್ಳದೇ ಬದುಕಿನ ಬಗ್ಗೆ ಒಂದು ಪ್ಲಾನ್ ಇಟ್ಟುಕೊಂಡು ಹವ್ಯಾಸವನ್ನು ವ್ರತ್ತಿಯ ಜೊತೆ ಜೊತೆಗೆ ಸಾಗಿಸಿಕೊಂಡು ತೀರಾ ಸಾಮಾನ್ಯ ವಿಷಯಗಳನ್ನು ವಿವರಿಸುವ ಕಲೆ' ನಿಮಗೆ ಸಿದ್ಧಿಸಿದೆ.
ಹತ್ತು ಜನರ ಮುಂದೆ ಪಾಂಡಿತ್ಯ ಪ್ರದರ್ಶಿಸಬೇಕು ಎನ್ನುವ ಉದ್ದೆಶವಿರದ,ಬೇರೆಯವರಿಗಿಂತ ವಿಶೇಷ ಅನ್ನಿಸುವ ಪದಗಳು, ವಿಷಯಗಳು ನಿಮ್ಮ ಲೇಖನಗಳಲ್ಲಿ ಇನ್ನು ಮುಂದು ಕೂಡ ಹೆಚ್ಚಾಗಿ ಬರಲಿ ಎಂಬ ಹಪಹಪಿಯಿಂದಲೇ ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರೆಯುತ್ತಿದ್ದೇನೆ.
ಸ್ವಾರಸ್ಯಕರ ಲೇಖನಗಳ ಹೆಚ್ಚಿನ ನಿರೀಕ್ಷೆ ಇದೆ.

ಗುಬ್ಬಚ್ಚಿ ಸತೀಶ್ said...

ಹೀಗೇ ನೂರಾರು ವರುಷ ಬರೆಯುತ್ತಾ ಇರಿ.
ಅಭಿನಂದನೆಗಳು.

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಪ್ರಕಾಶಣ್ಣ
ಅಭಿನ೦ದನೆಗಳು.ಇನ್ನಷ್ಟು ಬರಹಗಳು ನಿಮ್ಮಿ೦ದ ಮೂಡಿ ಬರಲಿ ಎ೦ಬುದೇ ನನ್ನ ಸದಾಶಯ.

ಗೌತಮ್ ಹೆಗಡೆ said...

congrats prakaaashanna :) all the best :)

ಸುಬ್ರಮಣ್ಯ ಮಾಚಿಕೊಪ್ಪ said...

ಅಭಿನಂದನೆಗಳು. ಮುನ್ನೂರು ಜನ ಹಿಂಬಾಲಕರನ್ನ ಪದೆದದಕ್ಕೆ. ಸುಮ್ಮನೆ ಕುತೂಹಲಕ್ಕೆ- ಅದಕ್ಕಿಂತ ಹೆಚ್ಚಿಗೆ ಹಿಂಬಾಲಕರು ಯಾರಿಗಾದಾರೂ ಇದ್ದಾರಾ?

ಕಾಮೆಂಟ್ ಮಾಡುವಲ್ಲಿ ವರ್ಡ್ ವೆರಿಫಿಕೇಶನ್ ತೆಗೆದು ಹಾಕಿ. ಅದು ಕಿರಿ ಕಿರಿ.

ಅನಂತರಾಜ್ said...

ಶುಭಾಶಯಗಳು ಪ್ರಕಾಶ್ ಸರ್. ಈಗಾಗಲೇ ಮುನ್ನೂರು ದಾಟಿದ ನೀವು ಸಹಸ್ರವನ್ನೂ ಮುಟ್ಟುವ೦ತಾಗಲಿ. ವೈವಿಧ್ಯತೆಯೇ ನಿಮ್ಮ ತಾಣದ ಪ್ರಮುಖ ಆಕರ್ಷಣೆ. ಕನ್ನಡ ಸಾರಸ್ವತ ಲೋಕವನ್ನು ಶ್ರೀಮ೦ತಗೊಳಿಸುವಲ್ಲಿ ಬ್ಲಾಗ್ ಬರಹಗಳೂ ಉತ್ತಮ ಕೊಡುಗೆಯನ್ನು ನೀಡುತ್ತಿದೆ. ಸ೦ಖ್ಯೆಯ ದೃಷ್ಟಿಯಿ೦ದ ಹಿರಿಯರಾದವರು (ವಯಸ್ಸಿನಲ್ಲಿ ಅಲ್ಲ!), ಉದಯೋನ್ಮುಖರಿಗೆ ಕೆಲವು ಉತ್ತೇಜಕ ಸಲಹೆ, ಪ್ರೋತ್ಸಾಹಗಳನ್ನು ಕೊಡುವಲ್ಲಿ, ಪ್ರಮುಖ ಪಾತ್ರವನ್ನು ವಹಿಸಿ ಬ್ಲಾಗ್ ಲೋಕವನ್ನು ಮತ್ತಷ್ಟು ಶ್ರೀಮ೦ತಗೊಳಿಸಬಹುದೆ? ಏನಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದೆ? ನನ್ನದೊ೦ದು ವಿನಮ್ರ ಸಲಹೆ ಅಷ್ಟೆ..ಅನ್ಯಥಾ ಭಾವಿಸಬೇಡಿ.

ಧನ್ಯವಾದಗಳು

ಅನ೦ತ್

sunaath said...

ಪ್ರಕಾಶ,
ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಯಶೋಗಾಥೆ ಹೀಗೆಯೇ ವರ್ಧಿಸುತ್ತ ಹೋಗಲಿ!

ಕವಿತಾ said...

ಪ್ರಕಾಶಣ್ಣ,

ಅಭಿನ೦ದನೆಗಳು.
ನಿಮ್ಮ ಬ್ಲಾಗ್ ಹೀಗೆ ಬೆಳೆಯಲಿ...
ಹೊಸ ಹೊಸ ಕಥೆಗಳು ಬರಲಿ... ಅವು ಪುಸ್ತಕಗಳಾಗೂ ಹೊರ ಬರಲಿ..
ಯಾಕೊ ಗೊತ್ತಿಲ್ಲ...ನಿಮ್ಮ ಬ್ಲಾಗ ಮನಸ್ಸಿಗೆ ತು೦ಬಾ ಖುಷಿ ಕೊಡುತ್ತದೆ...
ಮತ್ತೊಮ್ಮೆ ತು೦ಬು ಹೃದಯದ ಅಭಿನ೦ದನೆಗಳು.

- ಕವಿತಾ.

ವಿ.ಆರ್.ಭಟ್ said...

ಮೂರು ವರ್ಷ ತುಂಬಿದ ನಿಮ್ಮ ಬ್ಲಾಗ್ ನೂರುವರ್ಷ ಪೂರೈಸಲಿ ಎಂದು ಹಾರೈಸುತ್ತೇನೆ. ಬರಹಗಳು ಒಬ್ಬೊಬ್ಬರದೂ ಒಂದೊಂದು ಶೈಲಿಯಲ್ಲವೇ? ನಿಮಗೆ ನಿಮ್ಮದೇ ಶೈಲಿ. ಹಾರ್ದಿಕ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಸುಮಾ..

ಇನ್ನೊಂದು ವಿಷಯ ನಿಮಗೆ ಹೇಳಲೇ ಬೇಕು...
ಅದೇನು ಗೊತ್ತಾ?

ನನ್ನ ಮಗನಿಗೆ ಅವನ ಗೆಳೆಯ ರಜತ್ ಕೇಳಿದನಂತೆ...
( ಈ ಪುಟ್ಟ ರಜತ್ ನನ್ನ ಗೆಳೆಯ "ಸತ್ಯ" ನ ಮಗ)

"ಕನ್ನಡ ಕವಿತೆಗಳನ್ನು ಬರೆಯುವದು ಹೇಗೆ?"

ನನ್ನ ಮಗ ಅವನಿಗೆ ಹೇಳಿದನಂತೆ..

"ಬಹಳ ಸುಲಭ ಕಣೋ...
ಒಂದು ವಾಕ್ಯ ಬರೆದುಕೊ..
ಆಮೇಲೆ ಅದರ ಒಂದು ಅಥವಾ ಎರಡು ಶಬ್ಧಗಳನ್ನು...
ಒಂದೊಂದು ಸಾಲುಗಳಲ್ಲಿ ಬರೆಯುತ್ತ...
ಅವುಗಳ ಮುಂದೆ ಪೂರ್ಣವಿರಾಮಗಳನ್ನು ಯಥಾನು ಶಕ್ತಿ ಇಡು..
ಅದೇ ಕವನ ಕಣೋ...

ನನ್ನಪ್ಪ ಹೀಗೇ ಬರಿತಾರೆ ... "

ಅಂದನಂತೆ..

ಯಾಕೇ ಹೀಗೆ ಬರಿತೇನೆ..? ಅನ್ನುವದಕ್ಕೆ ನನ್ನ ಬಳಿಯೂ ಉತ್ತರ ಇಲ್ಲ..

ಇಷ್ಟಪಟ್ಟು ಪ್ರೋತ್ಶಾಹಿಸುತ್ತಿರುವದಕ್ಕೆ ತುಂಬಾ ತುಂಬಾ ಧನ್ಯವಾದಗಳು...

ಜೈ ಹೋ... !

ಸಿಮೆಂಟು ಮರಳಿನ ಮಧ್ಯೆ said...

ರಾಘು...

ನಾವು ಬರೆಯುವದು ಓದುಗರಿಗೆ ಇಷ್ಟವಾದರೆ...
ಇದಕ್ಕಿಂತ ಇನ್ನೇನು ಬೇಕು?

ಸಾರ್ಥಕ ಅನ್ನುವ ಶಬ್ಧವೂ ಸಾರ್ಥಕಗೊಳ್ಳುತ್ತದೆ...

ನಿಮ್ಮ ಪ್ರೋತ್ಸಾಹ ಯಾವಗಲೂ ಹೀಗೆಯೇ ಇರಲಿ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಶ್ರುತ...

ನಾನು ಬ್ಲಾಗ್ ಲೋಕಕ್ಕೆ ಬಂದಾಗ ನನ್ನ ಪ್ರತಿ ಬರಹಕ್ಕೆ ಬೆನ್ನುತಟ್ಟಿದವರಲ್ಲಿ ನೀವೂ ಒಬ್ಬರೂ...

ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಚುಕ್ಕಿಚಿತ್ತಾರಾ...

ಈ ನಡುವೆ ಮೊದಲಿನ ಹಾಗೆ ವಾರಕ್ಕೊಂದು ಬರಹ ಬರೆಯಲಾಗುತ್ತಿಲ್ಲ...

ಕೆಲಸದ ಒತ್ತಡ... ಇದಕ್ಕೆ ಕಾರಣ..

ನಾನು ಬರೆದ ಬರಹಗಳನ್ನು ತಪ್ಪದೇ ಓದುವ ಎಲ್ಲರಿಗೂ ನನ್ನ ಕೃತಜ್ಞತೆಗಳು...

ತುಂಬಾ ತುಂಬಾ ಧನ್ಯವಾದಗಳು.. ವಿಜಯಶ್ರೀ...

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ವಸಂತ್..

ನಿಮ್ಮ ಕನ್ನಡ ಪ್ರೇಮ... ನೀವು ಬರೆಯುವ ಸಾಲುಗಳು ಬಹಳ ಇಷ್ಟವಾಗುತ್ತದೆ...

ನಿಮ್ಮ ಪ್ರೀತಿಗೆ..
ಶುಭ ಹಾರೈಕೆಗಳಿಗೆ ತುಂಬು ಹೃದಯದ ಕೃತಜ್ಞತೆಗಳು...

ಯಾವಗಲೂ ಪ್ರೋತ್ಸಾಹ ಹೀಗೆಯೇ ಇರಲಿ... ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಸಾಗರದಾಚೆಯ ಇಂಚರ (ಗುರು)

ಕೆಲವೇ ದಿನಗಳ ರಜೆಯಲ್ಲಿ ಬೆಂಗಳೂರಿಗೆ ಬಂದರೂ...
ನನ್ನನ್ನು ತಪ್ಪದೆ ಭೇಟಿಯಾಗುವ ನಿಮ್ಮ ಪ್ರೀತಿಗೆ ನನ್ನ ಬಳಿ ಶಬ್ಧಗಳಿಲ್ಲ..

ಸ್ನೇಹ, ವಿಶ್ವಾಸ ಯಾವಾಗಲೂ ಇರಲಿ..

ಜೈ ಹೋ...

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ನಾಗರಾಜು...

ಪ್ರಕಾಶಣ್ಣನಾಗಿದ್ದ ನನ್ನನ್ನು "ಪಕ್ಕುಮಾಮ" ನನ್ನಾಗಿಸಿದ ನಿಮ್ಮ ಮತ್ತು..ನಿಮ್ಮಗೆಳೆಯರ ಬಳಗಕ್ಕೆ ನನ್ನ ಕೃತಜ್ಞತೆಗಳು...

ಈ ಬ್ಲಾಗ್ ಲೋಕ ಕೊಟ್ಟ ನನ್ನ ತುಂಟ ಅಳಿಯಂದಿರುಗಳಲ್ಲಿ ನೀವೂ ಒಬ್ಬರು..

ಸದ್ದಿಲ್ಲದೆ ಹೃದಯ ಗೆದ್ದವರು ನೀವು...

ಈ ಬ್ಲಾಗ್ ಲೋಕಕ್ಕೂ..
ನಿಮಗೂ...
ತುಂಬು ಹೃದಯದ ಧನ್ಯವಾದಗಳು...

ಜೈ ಹೋ.. !!

ಸಿಮೆಂಟು ಮರಳಿನ ಮಧ್ಯೆ said...

ಆಜಾದು...

ನೀನು ನನ್ನ ಹೃದಯದ ರಾಜ...ಕಣೋ.. ಕುಚ್ಚಿಕ್ಕು... ಕುಚ್ಚಿಕ್ಕೂ...

ಜೈ ಹೋ... !!

ಸಿಮೆಂಟು ಮರಳಿನ ಮಧ್ಯೆ said...

ಸ್ನೇಹಾ...

ನನ್ನ ಬರಹಗಳನ್ನು ಇಷ್ಟಪಟ್ಟು ಓದುವ ನಿಮ್ಮ ಪ್ರೀತಿಗೆ ನಾನು ಚಿರ ಋಣಿ...

ನಿಮ್ಮ ಪ್ರತಿಕ್ರಿಯೆ..
ಪ್ರೋತ್ಸಾಹಕ್ಕೆ ಹೃದಯ ತುಂಬಿ ಬಂದಿದೆ...

ತುಂಬಾ ತುಂಬಾ ..

ಇನ್ನೂ ತುಂಬಾ ತುಂಬಾ...ಧನ್ಯವಾದಗಳು...

ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ...

umesh desai said...

ಹೆಗಡೇಜಿ ಪಾರ್ಟಿ ಯಾವಾಗ ಹಿಂದೂ ಕೇಳಿದ್ದೆ ಅವಾಗೂ ರೆಡಿ ಅಂದ್ರಿ..
ಶುಭಹಾರೈಕೆಗಳು. ನಿಮ್ಮ ಲವಲವಿಕೆ ನನ್ನಂಥಾ ಸೋಮಾರಿಗಳಿಗೆ ಟಾನಿಕ್ಕು ಹಿಂಗ ಮುಂದುವರಸಿರಿ..
ನಾವು ಹಿಂದ ಇರತೇವಿ

chetana said...

hahhahhaaaa!
nija nija, ondara keLagondu vaakya baredu, allalli ,-.-... gaLanna iTtare adE kavirte :)
naanu haagene bareyOdu!
maganige JaihO!
- CT

ದೀಪಸ್ಮಿತಾ said...

ಹ್ಹ ಹ್ಹ ಹ್ಹ. ಹೌದು ಕೆಲವರ ಕವನಗಳು ಹಾಗೇ ಇರುತ್ತವೆ. ಮೂರು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು

ಹಳ್ಳಿ ಹುಡುಗ ತರುಣ್ said...

prakashnna... nimma ee mooru varusha da moonnuru.. mooru kotiyagali...

nimma barvanigegalu keval kateyalla, kaviteyalla, avu ondu riti nagna sayagala, naijya baravnige... enatavarannu odabeku anniso nimma baravanige mattastu barili...danyavada mattu shubhashayagalu....

prabhamani nagaraja said...

`ಮೂರು-ಮುನ್ನೂರು' ಈ ಮಹತ್ತರ ಸಾಧನೆಗಾಗಿ ಅಭಿನ೦ದನೆಗಳು. ನಿಮ್ಮಬರಹಗಳು ನಿರ೦ತರವಾಗಿ ಸಾಗಲಿ . ನಿಮ್ಮ ಸ೦ತಸ, ಸ೦ಭ್ರಮದಲ್ಲಿ ಪಾಲ್ಗೊಳ್ಳಲು ನಾವೂ ಸದಾ ಭಾಗಿಗಳು.

ಜಲನಯನ said...

ಪ್ರಕಾಶ ನಿನ್ನ ಉತ್ತರ ನೋಡಿ ಬಿಸಿ ಬಿಸಿ ..ನಿನ್ನ ಸ್ಟೈಲ್ ನಲ್ಲಿ..

ವನ...

ಮನ,
ಗು
ನುಗು
ನಿಸಿದೇ
ಹಾ
ಡು..
ಪರ
ಪರಿ
ಸಿದ್ದೇ

ವನ..

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ, ತಡವಾಗಿ ಅಭಿನಂದನೆ ತಿಳಿಸುತ್ತಿರುವೆ. ಕಾರಣ ಗೂಗಲ್ ಪುಟ ಅಥವಾ ಬ್ಲಾಗಿಗೆ ಹೋಗಲು ಆಗುತ್ತಿರಲಿಲ್ಲ. ತೊಂದರೆ ಇತ್ತು. ಮೂರು ವರುಷ ಮುನ್ನೂರು ಮಂದಿಯೊಂದಿಗಿನ ನಿಮ್ಮ ಬ್ಲಾಗ್‌ ಬರವಣಿಗೆಯ ಪಯಣವು ಮತ್ತಷ್ಟು ಬೆಳೆಯಲಿ.

Guru's world said...

ಮೂರು ವರ್ಷ ಪೂರೈಸಿದ ನಮ್ಮ ಪ್ರಕಾಶಣ್ಣನ ಇಟ್ಟಿಗೆ ಸಿಮೆಂಟು ಬ್ಲಾಗ್ ಗೆ ಅಭಿನಂದನೆಗಳು..... ಕತೆ ಗಳು, ಲೈವ್ ಸ್ಟೋರಿ ಗಳು, ಎಲ್ಲವೂ ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ....ಕೆಲವೊಂದು ನೈಜ ಘಟನೆಗಳು ಮತ್ತು ಅದರ ಪರಿಣಾಮಗಳು, ಕೆಲವರಿಗೆ ಒಳ್ಳೆಯ ಸಂದೇಶಗಳನ್ನು ಕೂಡ ಕೊತ್ತಿಎ ಇದೆ ರೀತಿ ಇನ್ನು ಹೆಚ್ಚಿನ ಬರಹಗಳು ಮೂಡಿ ಬರಲಿ.....
Guru

ಹಳ್ಳಿ ಹುಡುಗ ತರುಣ್ said...

prakasanna.. last 1month inda swalpa kelsa and oodinalli busy agogidde so addakke ivetuu beredu ondu post madona anta idri so adaralli nivu eenaadru bariri anta comments hakiddira.. thnaks sir.. nanu ondu kavana post maadiddene... munde regular hagi post mad tene.. :)

thanks prakashanan..

Vijayendra said...

prakashanna ninna blogna dinakkond sala open madi nodti....entakke andre elladru nin kathe taphodre heli kanstu nange.....hinge barta irli nin kathe.lekhana ellava....congrats.....

ಸಿಮೆಂಟು ಮರಳಿನ ಮಧ್ಯೆ said...

ಗುಬ್ಬಚ್ಚಿ ಸತೀಶ್...

ಬರೆಯುವದರಲ್ಲಿ ಇಷ್ಟೆಲ್ಲ ಸೊಗಸಿದೆ...
ಸುಖವಿದೆ ಅಂತ ತಿಳಿದಿರಲಿಲ್ಲ..

ನಾನು ಬರೆದುದದ್ದನ್ನು ನೀವೆಲ್ಲ ಓದಿ ಪ್ರತಿಕ್ರಿಯಿಸಿದಾಗ ಬಹಳ ಖುಷಿಯಾಗುತ್ತದೆ..

ನಿಮ್ಮ ಪ್ರೋತ್ಸಾಹದ ಪ್ರತಿಕ್ರಿಯೆಗಳೆ ನನಗೆ ಬರೆಯಲು ಸ್ಪೂರ್ತಿ..

ನನಗೆ ನಿಮ್ಮೆಲ್ಲರ ಬ್ಲಾಗುಗಳಿಗೆ ಸತತವಾಗಿ ಬರಲಾಗದಿದ್ದರೂ..
ಪ್ರೀತಿಯಿಂದ ಬಂದು ಪ್ರೋತ್ಸಾಹಿಸುತ್ತೀರಲ್ಲ..

ನಿಮಗೆಲ್ಲ ಹೇಗೆ ಕೃತಜ್ಞತೆ ಅರ್ಪಿಸಲಿ?

ತುಂಬಾ ತುಂಬಾ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಕುಸು ಮಲಿಯಾಲ.. (ಸುಬ್ರಮಣ್ಯ)

ಈಬ್ಲಾಗಿನೊಡನೆ ನಂಟಿರದಿದ್ದರೆ..
ಬಹುಷಃ ನನಗೆ ಈ ಧಪ್ಪ ಶರೀರ ಹೊತ್ತುಕೊಂಡು..
ಬಿಪಿಯೋ... ಸಕ್ಕರೆ ಖಾಯಿಲೆಯೊ ಬಂದುಬಿಡಬೇಕಿತ್ತು...

ವ್ಯವಹಾರದಲ್ಲಿ ಎಷ್ಟೇ ಚಿಂತೆಯಿರಲಿ...
ಒಮ್ಮೆ ಇಲ್ಲಿ ಬಂದು ನಿಮ್ಮ ಪ್ರತಿಕ್ರಿಯೆಗಳನ್ನು ಓದಲು ತೊದಗಿದರೆ..
ಎಲ್ಲ ಒತ್ತಡಗಳೂ ಮಾಯವಾಗುತ್ತವೆ...

ಪ್ರೀತಿಯ ಸುಬ್ರಮಣ್ಯ... ನಿಮ್ಮ ಬ್ಲಾಗಿಗೂ ಬರದೆ ಬಹಳ ದಿನಗಳಾದವು..
ಬೇಸರಿಸದಿರಿ ಬರುವೆ..

ಪ್ರೋತ್ಸಾಹಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಗೌತಮ್...

ನಿಮಗೆ ನನ್ನ ಲೇಖನ ಇಷ್ಟವಾದರೆ ಒಂದು ಎಸ್ಸೆಮ್ಮೆಸ್ ಕೊಟ್ಟಾದರೂ.. ಪ್ರೋತ್ಸಾಹಿಸುತ್ತೀರಿ...

ತುಂಬಾ ತುಂಬಾ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಬ್ರಮಣ್ಯ ಮಾಚಿಕೊಪ್ಪ..

ನಮ್ಮ ಬ್ಲಾಗ್ ಲೋಕದ ವಿಶೇಷ ತಜ್ಞ ಅಂದರೆ ನಮ್ಮೆಲ್ಲರ ಪ್ರೀತಿಯ "ಶಿವ ಶಂಕರ್ ಯಳವತ್ತಿ"
ಅವರಿಗೆ ಎಲ್ಲ ಮಾಹಿತಿಗಳೂ ಇರುತ್ತವೆ..

ಅವರ ಪ್ರಕಾರ...

ನನಗೆ ೩೦೩..

ಶಿವಶಂಕರ್ ಯಳವತ್ತಿ ಬ್ಲಾಗ್... ೨೨೭

ಶಿವು "ಛಾಯಾಕನ್ನಡಿ".. ೨೧೭

ಪರಾಂಜಪೆ, ಸಾಗರದಾಚೆಯ ಇಂಚರ ಇವರೆಲ್ಲರಿಗೂ ಸಹ ಬಹಳ ಪ್ರೋತ್ಸಾಹಿಕರಿದ್ದಾರೆ ಅನ್ನುತ್ತಾರೆ..

ನೀವು ಹೇಳಿದ ಹಾಗೆ ವರ್ಡ್ ವೆರಿಫಿಕೇಷನ್ ತೆಗೆಯಲು ಪ್ರಯತ್ನಿಸಿದೆ ಆಗಲಿಲ್ಲ..

ನಮ್ಮನೆಗೆ ಯಾರಾದರೂ ಇದರ ಬಗೆಗೆ ಗೊತ್ತಿದ್ದವರು ಬಂದರೆ ತೆಗೆದು ಹಾಕುವೆ..

ಪ್ರೋತ್ಸಾಹಕ್ಕೆ ತುಂಬಾ ತುಂಬಾ ತುಂಬಾ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಅನಂತ್ ರಾಜ್ ಸರ್..

ನಿಜ ಇಷ್ಟೆಲ್ಲ ಈ ಬ್ಲಾಗ್ ಲೋಕದಿಂದ ತೆಗೆದುಕೊಂಡಿದ್ದೇವೆ..
ತೆಗೆದುಕೊಳ್ಳುತ್ತಿದ್ದೇವೆ..

ಇದಕಾಗಿ ಏನಾದರೂ ಮಾಡೋಣವೆಂದು ಅನಿಸುತ್ತಿದೆ...

ನೀವೆಲ್ಲ ಏನು ಮಾಡಬಹುದು ಎಂದು ಸಲಹೆಗಳನ್ನು ದಯವಿಟ್ಟು ಕೊಡಿ...
ಎಲ್ಲರೂ ಸೇರಿ ಮಾಡೋಣ ಅಲ್ಲವೆ?

ನಿಮ್ಮ ಪ್ರೋತ್ಸಾಹಕ್ಕೆ ಹೃದಯಪೂರ್ವಕ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್...

ನಿಮ್ಮ ನಂಜಿಲ್ಲದ ಪ್ರೇಮಕ್ಕೆ...
ಪ್ರೀತಿಗೆ ನನ್ನ ನಮನಗಳು...

ನಾನು ಬರೆದ ಮೊದಲ ಲೇಖನದಿಂದ ಇದುವರೆಗೆ ಎಲ್ಲದಕ್ಕೂ ಪ್ರೋತ್ಸಾಹ ಕೊಟ್ಟಿದ್ದೀರಿ...

ನಾನು ಬರೆದ ಪುಸ್ತಕಕ್ಕೂ ಬೆನ್ನುಡಿ ಬರೆದು ಕೊಟ್ಟಿದ್ದೀರಿ...

ನಿಮ್ಮನ್ನು ಭೇಟಿಯಾಗಿ ಆಶೀರ್ವಾದ ತೆಗೆದುಕೊಳ್ಳ ಬೇಕೆಂಬ ಆಸೆ ಬಹುದಿನಗಳಿಂದ ಇದೆ..

ಅದು ಯಾವಾಗ ಈಡೇರುತ್ತದೆಯೋ ನೋಡ ಬೇಕು..

ಪ್ರೋತ್ಸಾಹ ಹೀಗೆಯೇ ಇರಲಿ...

ತುಂಬಾ ತುಂಬಾ ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ said...

ಕವಿತಾರವರೆ...

ನಿಜಕ್ಕೂ ನಾನು ತುಂಬಾ ಅದೃಷ್ಟವಂತ...
ನಾನು ಬರೆದುದನ್ನು ಓದಿ ಪ್ರೀತಿಯಿಂದ ಬಂದು ಪ್ರೋತ್ಸಾಹಿಸುವ ನಿಮ್ಮಂಥವರಿದ್ದಾರಲ್ಲ.. ಅದಕ್ಕೆ..

ಬರೆದವ ಸಾರ್ಥಕತೆ ಕಾಣುವದು ಇಲ್ಲೇ ಅಲ್ಲವೆ?

ನಿಮ್ಮ ಪ್ರೋತ್ಸಾಹಗಳೇ ನನಗೆ ಬರೆಯಲು ಸ್ಪೂರ್ತಿ...

ತುಂಬಾ ತುಂಬಾ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ವಿ. ಆರ್. ಭಟ್ಟರೆ...

ನಾನಂತೂ ನಿಮ್ಮ ಪ್ರತಿಭೆಗೆ ಮಾರು ಹೋಗಿದ್ದೇನೆ..
ನಿಮಗೆ ಸಮಯ ಸಿಕ್ಕರೆ ದಿನಕ್ಕೆರಡು ಲೇಖನ ಬರೆಯ ಬಲ್ಲಿರಿ...

ಒಂದು ಖುಷಿಯ ಸಂಗತಿ ಎಂದರೆ ಈ ಬ್ಲಾಗ್ ಲೋಕದಲ್ಲಿ "ಕಾಪಿ" ಇಲ್ಲ..

ಎಲ್ಲರದ್ದೂ ಅವರವರ ಸ್ವಂತಿಕೆ ಇದೆ..

ತುಂಬಾ ಖುಶಿಯಾಗುತ್ತದೆ..

ಪ್ರೋತ್ಸಾಹ ಹೀಗೆಯೇ ಇರಲಿ...

ಧನ್ಯವಾದಗಳು...

ನನ್ನೊಳಗಿನ ಕನಸು.... said...

ಹಾ ಹಾ ... ಪಕ್ಕುಮಾಮ ... ವಿಡಿಯೋ ಸಕ್ಕತ್ತಾಗಿದೆ ... ಪಕ್ಕುಮಾಮ ನಿಗೆ ಪಕ್ಕುಮಾಮನೆ ಸಾಟಿ..

ಚಿತ್ರಾ said...

ಪ್ರಕಾಶಣ್ಣ ,
ನಮ್ಮನ್ನೆಲ್ಲ ನಗಿಸುತ್ತಾ , ಅಳಿಸುತ್ತ , ಮೂರು ವರ್ಷಗಳನ್ನು ಅನಾಯಾಸವಾಗಿ ಮುಗಿಸಿಬಿಟ್ಟೆ ಅಂತಾಯ್ತು . ಮನೆ ಕಟ್ಟುವಂತೆಯೇ , ಸ್ನೇಹಿತರ ಬಳಗವನ್ನು ಇಟ್ಟಿಗೆಯಂತೆ ಒಪ್ಪವಾಗಿ ಜೋಡಿಸುತ್ತಾ , ಪ್ರೀತಿಯ ಸಿಮೆಂಟಿನಿಂದ ಭದ್ರಗೊಳಿಸುತ್ತಾ ಭವ್ಯವಾದ ಸ್ನೇಹ ಸೌಧವನ್ನೇ ಕಟ್ಟಿದ್ದೀಯ . ಚಂದದ ಬರಹಗಳ ಅಲಂಕಾರ ಇದೆ ಇದರಲ್ಲಿ ಒಳಗೆ ಕಾಲಿಟ್ಟರೆ , ಆತ್ಮೀಯತೆಯ ಬಿಸುಪು ... ... ಹೀಗೇ ಮುಂದುವರಿಯಲಿ ಪ್ರಕಾಶಣ್ಣ . ಮೂರು - ಮೂವತ್ತಾಗಲಿ , ಮುನ್ನೂರು - ಮೂರು ಲಕ್ಷವಾಗಲಿ ... ಇದು ಹೃದಯದಾಳದಿಂದ ಬಂದ ಹಾರೈಕೆ .

ಮನಸು said...

ಪ್ರಕಾಶಣ್ಣ ನಿಮಗೆ ಮತ್ತು ನಿಮ್ಮ ಬ್ಲಾಗಿಗೆ ಅಭಿನಂದನೆಗಳು...

Anonymous said...

Prakashanna,,

abhinandanegalu...:)

heegeye innashtu barahagalu, video galu moodi baralendu haaraisuttene...

ಸವಿಗನಸು said...

ಅಭಿನಂದನೆಗಳು. ...ಕಂಗ್ರಾಟ್ಸು .....
ಹೀಗೇ ಕಥೆಯಂತಹ

ವಿ
ತೆ
ಗಳನ್ನು ಬರೀತಿರಣ್ಣ...

Subrahmanya said...

ಪ್ರಕಾಶಣ್ಣ,

ಶುಭಾಷಯಗಳು. ನಿಮ್ಮ ಯಶಸ್ಸಿನ ಪಯಣ ಮುಂದುವರಿಯಲಿ.

Shashi jois said...

ಪ್ರಕಾಶಣ್ಣ
ಅಭಿನ೦ದನೆಗಳು..

ಶಿವಶಂಕರ ವಿಷ್ಣು ಯಳವತ್ತಿ said...

ಪ್ರಕಾಶಣ್ಣ.. ಬೇಗ ಸಾವಿರ ಅಭಿಮಾನಿಗಳ ಸರದಾರರಾಗುತ್ತೀರಿ ಅನ್ನೋದರಲ್ಲಿ ಸಂಶಯವೇ ಇಲ್ಲ.
ಹೀಗೆಯೇ ಬರವಣಿಗೆಯನ್ನು ಮುಂದುವರೆಸಿ.

mahabalagiri said...

ಮೂರು ಮೂರು ಸಾವಿರವಾಗಲಿ...................,
ಮುನ್ನೂರು ಮುಕ್ಕೋಟಿಯಾಗಲಿ..........................
ನಮ್ಮ್ ಪ್ರಕಾಶಣ್ಣನ್ಗೆ ಜಯವಾಗಲಿ .........................

ಶಾಂತಲಾ ಭಂಡಿ said...

ಪ್ರಿಯ ಪ್ರಕಾಶಣ್ಣ...
ಮುನ್ನೂರು ನೂರ್ಪಟ್ಟಾಗಲಿ.

ಮೂರುವರ್ಷದ ಯಶಸ್ಸಿಗೆ ಅಭಿನಂದನೆ. ಮುಂದಿನ ಪಯಣಕ್ಕೆ ಶುಭಾಶಯ. ಬರೆಯುತ್ತಿರಿ.

ಪ್ರೀತಿಯಿಂದ,
-ಶಾಂತಲಾ ಭಂಡಿ

Nisha said...

congrats prakaaashanna :) all the best :)

AntharangadaMaathugalu said...

ಅಭಿನಂದನೆಗಳು ಪ್ರಕಾಶ್ ಸಾರ್.... ನಿಮ್ಮ ಮಾತು ನಿಜ.. ಈ ಬ್ಲಾಗ್ ಲೋಕ ನಮಗೆ ಒಳ್ಳೆಯ ಸ್ನೇಹಿತರನ್ನೂ, ಅಣ್ಣ-ತಮ್ಮಂದಿರನ್ನೂ, ಅಕ್ಕ-ತಂಗಿಯರನ್ನೂ, ಎಲ್ಲಕ್ಕಿಂದ ಮುಖ್ಯವಾಗಿ ಜೀವನದಲ್ಲಿ ಸಂತೋಷವನ್ನೂ ಕೊಟ್ಟಿದೆ. :-)

ಶ್ಯಾಮಲ

ಸುಧೇಶ್ ಶೆಟ್ಟಿ said...

Congrats Prakashanna... :) video innu nodilla.. officenalli blocked :)

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಉಮೇಶ್ ಜೀ...

ನೀವು ಬಿಡುವು ಮಾಡಿಕೊಳ್ಳಿ...
ಪಾರ್ಟಿ ಕೊಡೋಣ... ನಿಮ್ಮ ಚುಟುಕು ಶಾಯರಿಗಳು...
ಹಳೆಯ ಸಿನೇಮಾ ಗೀತೆಗಳು ಮಜವಾಗಿರುತ್ತವೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಚೇತನಾರವರೆ..

ನನಗೆ ಸಾಹಿತ್ಯದ ಪ್ರಕಾರಗಳು ಗೊತ್ತಿಲ್ಲ..
ನನ್ನ ಮಗನ ವಿಮರ್ಶೆ ನನ್ನ ಬಗೆಗೆ ಸರಿಯಾಗಿದೆ ಅಲ್ಲವೆ?

ಹಾ ಹ್ಹಾ.. !

ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ದೀಪಸ್ಮಿತಾ..

ಶಬ್ಧಗಳು ಹೇಗೇ ಜೋಡಣೆಯಾದರೂ...
ಭಾವಗಳು ಮುಖ್ಯವಾಗಿಬಿಡುತ್ತವೆ.. ಅಲ್ಲವೆ?

ನಿಮ್ಮ ಅಭಿನಂದನೆಗಳಿಗೆ ನನ್ನ ವಂದನೆಗಳು...

ಸಿಮೆಂಟು ಮರಳಿನ ಮಧ್ಯೆ said...

ತರುಣ್ ಜೀ..

ನನ್ನ ಶೈಲಿಗೆ ಕಾರಣಿಭೂತರಾದವರು ಮೂರು ಜನ..

ಬರವಣಿಗೆ ಶುರುಮಾಡಿದ ದಿನಗಳಲ್ಲಿ..
ಗೆಳೆಯ "ನಾಗು"
ಮಲ್ಲಿಕಾರ್ಜುನ್ (ಖ್ಯಾತ ಛಾಯಗ್ರಾಹಕರು)...

"ನೀನು ಬೇರೆಯವರ ಕಾಪಿ ಮಾಡ ಬೇಡ..
ನೀನು ಹೇಗೆ ಮಾತನಾಡುತ್ತೀಯೋ ಹಾಗೆ ಬರಿ.." ಎಂದು ಬೆನ್ನು ತಟ್ಟಿದವರು ಅವರು..

ನಿಮ್ಮ ಪ್ರೀತಿಗೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಪ್ರಭಾಮಣಿ ನಾಗರಾಜ್...

ನಮ್ಮ ಸಂತೋಷಕ್ಕೆ ಬರೆದದ್ದು ಓದುವವರಿಗೂ ಖುಷಿಯಾದಾಗ ಉತ್ಸಾಹ ಇಮ್ಮಡಿಸುತ್ತದೆ..

ನಿಮ್ಮ ಶುಭ ಹಾರೈಕೆಗಳಿಗೆ ..
ಪ್ರೋತ್ಸಾಹಕ್ಕೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಆಜಾದು..

ನಿನ್ನ ತುಂಟತನಕ್ಕೆ ನನ್ನದೊಂದು
ಪುಟ್ಟ..

ಸ..
ಲಾ..
ಮ್.. !

ಹ್ಹೇ ಹ್ಹೇ.. ಹ್ಹೇ.. !!

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ ಚಂದ್ರು...

ನನಗೆ ಮುಖತಃ ಪರಿಚಯವಾದ ಬ್ಲಾಗ್ ಮಿತ್ರರಲ್ಲಿ ನೀವು ಮೊದಲಿಗರು ಅಂತ ನನ್ನ ನೆನಪು..

ನಿಮ್ಮ ಪ್ರೀತಿ..
ಪ್ರೋತ್ಸಾಹ ಯಾವಾಗಲೂ ಹೀಗೆಯೇ ಇರಲಿ...

ಶಿವಪ್ರಕಾಶ್ said...

Congrats ಪ್ರಕಾಶಣ್ಣ...
ನಿನ್ನ ಬ್ಲಾಗಿಗೆ ಹುಟ್ಟು ಹಬ್ಬದ ಶುಭಾಶಯಗಳು...
ಮೊನ್ನೆ ತಾನೇ ನನ್ನ ಬ್ಲಾಗ್ ಕೂಡ, ಎರಡು ವರ್ಷ ಮುಗಿಸಿ ಮೂರನೇ ವರ್ಷಕ್ಕೆ ಕಾಲಿಟ್ಟಿತು...
Keep Blogging....

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

Hearty Congratulations Prakashanna- Hinge bareeta iri, nammanna nagsta iri :-)