Sunday, November 7, 2010

ಮನಸ್ಸು ಕಸದ ತೊಟ್ಟಿಯಲ್ಲ ...

Part 2ನನಗಂತೂ ತಲೆ ಕೆಟ್ಟು ಹೋಗಿತ್ತು....

ಬೆಳಿಗ್ಗೆ ಆರುಗಂಟೆಯಿಂದ 
"ನೀವು ಏನು ತಿಂತ್ತೀರ್ರಿ.... ಮಾರಾಯ್ರ್ತೆ ?.." 
ಎನ್ನುವದೆ ಕಿವಿಯಲ್ಲಿ ಕೊರೆಯುತ್ತಿತ್ತು...

ಅಲ್ಲಿಯವರೆಗೆ  ನನ್ನ ಮೇಲೆ ಕೂಗಾಡಿ, ರೇಗಾಡಿ..
ತಕ್ಷಣ ಹೆಗಲ ಮೇಲೆ ಕೈ ಹಾಕಿ...

"ಬೇಸರ ಮಾಡ್ಕೋ ಬೇಡಿ... ಬನ್ನಿ ಟೀ ಕುಡಿಯೋಣ "

ಅಂದಾಗ... ನನಗೆ ದೊಡ್ಡ ಷಾಕ್...!!

ಯಾವ ಥರಹದ ಮನುಷ್ಯರಿರ ಬಹುದು ಇವರು ?

ವ್ಯವಹಾರದಲ್ಲಿ ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವದು ಬಹಳ ಕಷ್ಟ....

ಟೀ ಅಂಗಡಿಯವನು ಟೀ ಕೊಟ್ಟ...

ನಾನು ಸುಮ್ಮನೆ ಟಿ ತೆಗೆದು ಕೊಂಡೆ...

"ಹೆಗಡೆಯವರೆ... ನನ್ನ ಮೇಲೆ ಬೇಸರವಾಯ್ತಾ..?..
ಬೇಸರ ಆದರೆ... ನನಗೂ ಬಯ್ದು ಬಿಡಿ...
ಮನಸ್ಸಲ್ಲಿ  ಏನನ್ನೂ ಇಟ್ಕೋಬೇಡಿ.."


ನನಗೆ ಏನು ಹೇಳಬೇಕು ಅಂತ ಒಂದು ಕ್ಷಣ ಗೊತ್ತಾಗಲಿಲ್ಲ...
ನಾನು ಮಾತನಾಡಲೇ ಬೇಕಿತ್ತು...

"ನೋಡಿ.. ಸರ್...
ನನಗೆ ಕೂಗಾಡಿ, ರೇಗಾಡಿ ಗೊತ್ತಿಲ್ಲ... 
ನನ್ನ ಕೆಲಸಗಾರಿರಿಗೂ ಸಹ ಕೂಗಿ ಬಯ್ಯುವದಿಲ್ಲ...
ನನಗೆ ಇದೆಲ್ಲ ಇಷ್ಟವಾಗೊದಿಲ್ಲ... 
ಗಲಾಟೆಯಲ್ಲಿ ನನಗೆ ನಂಬಿಕೆಯಿಲ್ಲ..."

"ಹೆಗಡೆಯವರೆ...
ನಾನು ಇರುವದೇ.. ಹೀಗೆ... ನಮ್ಮ ಮನೆಯಲ್ಲೂ ಸಹ ಹೀಗೆಯೇ ಇರುತ್ತೇನೆ...
ನಮ್ಮ  ಮನೆಯಲ್ಲಿ ಸ್ವಲ್ಪ  ಶಬ್ಧ ಜಾಸ್ತಿ...!
ನಮ್ಮ ಮನೆ  ವಿಧಾನ ಸೌಧ , 
ಪಾರ್ಲಿಮೆಂಟಿನ  ಥರಹ... ಸ್ವಲ್ಪ ಗಲಾಟೆ..."

ನನಗೆ ಮತ್ತೊಂದು ಷಾಕ್...  !!
ಇವರು  ಈ ಕೆಲಸ ಮುಗಿಯುವವರೆಗೂ ಹೀಗೆ ರೇಗಾಡುತ್ತಲೇ ಇರುತ್ತಾರಾ ??
ಇವರೊಡನೆ ಹೇಗೆ ಹೆಣಗುವದು..??

" ಸರ್... 
ನಿಮ್ಮ  ಮನೆಯವರು ಸುಮ್ಮನಿರುತ್ತಾರಾ..?.."

" ಅವರದ್ದು ತಪ್ಪಿದ್ದರೆ ಸುಮ್ಮನಿರುತ್ತಾರೆ...
ತಪ್ಪಿಲ್ಲದಿದ್ದರೆ..  ಇದಕ್ಕೆ ಪ್ರತಿಯಾಗಿ  ನನ್ನ ಮೇಲೂ ಕೂಗುತ್ತಾರೆ...
ಆಗ ನಾನು ಸುಮ್ಮನಾಗಿ ಬಿಡುತ್ತೇನೆ..."

ನಾನು ಆಶ್ಚರ್ಯ ಚಕಿತನಾದೆ..  !!

" ದಿನಾಲೂ ಹೀಗೆನಾ...? !!.. ??.."

" ನಿಜ  ...
ಹೆಗಡೆಯವರೆ...
ನಾನು  ನನ್ನ ಆಫೀಸಿನಲ್ಲೂ ಹೀಗೆಯೇ ಇದ್ದೆ...
ಈ ಮನೆ ಕಟ್ಟಿ ಮುಗಿಯುವ ತನಕ..
ನಾನು ..
ನಿಮ್ಮೊಂದಿಗೂ ಹೀಗೆಯೇ ಇರುತ್ತೇನೆ... !!.."

ನನಗೆ ಮುಂದೆ ಏನು ಮಾತನಾಡಬೇಕೆಂದೇ ತಿಳಿಯಲಿಲ್ಲ...

ತಲೆ ಕೆಟ್ಟು ಕೊಳೆತ ಕುಂಬಳಕಾಯಿಯಾಗಿ ಹೋಯ್ತು..  !!

ಮನೆಗೆ ಬಂದು ಮಡದಿಗೆ  ನಡೇದ ಸಂಗತಿಯನ್ನೆಲ್ಲ ಹೇಳಿದೆ...

" ನೋಡಿ..
ಯಾವುದೇ  ಹೊಸದಾಗಿ ಶುರುವಾದ ವ್ಯವಹಾರದಲ್ಲಿ...
ಸಂಬಂಧಗಳಲ್ಲಿ ನಯವಾದ ನಡೆ.... 
ಮೃದುವಾದ ಮಾತು...
ಹಿತವಾದ ನಗು ಸಾಮಾನ್ಯ...
ಒಳೊಗೊಳಗೆ ಬೆಟ್ಟದಷ್ಟು ಸಂಶಯವಿದ್ದರೂ.. ಹೊರಗಡೆ  ನಗು ತೋರಿಸುತ್ತಾರೆ...

ಇವರು ಹಾಗೆ ಮಾಡಿಲ್ಲ.....

ಇವರು  ತೀರಾ  ಕೆಟ್ಟವರಿರಬೇಕು...
ಅಥವಾ...
ತುಂಬಾ ನೇರ ನುಡಿಯ  ...
ಸ್ವಚ್ಛ ಹೃದಯದ ಒಳ್ಳೆಯವರಿರ ಬೇಕು..."

ನನಗೂ ಹೌದೆನಿಸಿತು...
ಒಂದೆರಡು ದಿನ  ಇವರನ್ನು ನೋಡಿ... ಇಷ್ಟವಾಗದಿದ್ದರೆ...
"ನಿಮ್ಮ ಕೆಲಸ ಬೇಡ" ಅಂತ ಬಿಟ್ಟು ಬಿಡೋಣ ಅಂದು ಕೊಂಡೆ...


ಆ ದಿನಗಳಲ್ಲಿ  ನನ್ನ ಬಳಿ  ಕೆಲಸ ಕಡಿಮೆ ಇತ್ತು...
ಆರ್ಥಿಕ ಹಿಂಜರಿತದ  ದಿನಗಳು ಅವು...
 ನನ್ನ ಬಳಿ  ನಿತ್ಯ ಕೆಲಸ ಮಾಡುವ ಕೆಲಸಗಾರರಿಗೆ ಕೆಲಸ ಕೊಡಲೇ ಬೇಕಾದಂಥಹ ..
ಅನಿವಾರ್ಯ ಸ್ಥಿತಿ ಇತ್ತು...

ತಾಳ್ಮೆ, ಸಂಯಮಗಳನ್ನು   ಪರಿಸ್ಥಿತಿ ಕಲಿಸಿಬಿಡುತ್ತದೆ...


ಮಾರನೆಯ ದಿನ ಮತ್ತೆ ಸೈಟಿಗೆ ಹೋದೆ...

ನನ್ನನ್ನು ನೋಡಿ ಮತ್ತೆ ಕೆಂಡಾ ಮಂಡಲವಾದರು..  !!

ಹೆಗಡೆಯವರೇ... ???.
ನಿಮ್ಮ ಕೆಲಸಗಾರರು ಏನು ತಿಂತಾರೆ.. ? ?
ಅನ್ನ ತಿಂತಾರ್ರೋ...?
 ಹೊಲಸು ತಿಂತಾರ್ರೋ..?"

" ಏನಾಯ್ತು ಸರ್...?"

" ಇವತ್ತು ಬೆಳಿಗ್ಗೆ ಅರ್ಧ ಗಂಟೆ ತಡವಾಗಿ ಬಂದಿದ್ದಾರೆ..!!
ಇವರೇನು ಮನುಷ್ಯರೋ...?..
ರಾಕ್ಷಸರೋ...?.. 
ನಾನು ನಿಮಗೆ ಕೊಡುತ್ತಿರುವದು ಹುಣಸೆ ಬಿಜ ಅಂದುಕೊಂಡಿದ್ದೀರೋ.....  ಹೇಗೆ..?
ನೀವು ಏನು ತಿಂತ್ತಿರ್ರಿ.... ಮಾರಾಯ್ರೇ..?.. !!.."

ಏರಿದ ಧ್ವನಿಯಲ್ಲಿ...
ಹೊಸತಾಗಿ  .. 
ಫ್ರೆಷ್ ಆಗಿ ಬಯ್ಗುಳ ಶುರು ಮಾಡಿದರು...

ಅಕ್ಕಪಕ್ಕದ ಮನೆಯವರೂ ಇಣುಕಿ ನೋಡಲು ಶುರು ಮಾಡಿದರು...

ಇವತ್ತಿನ ಜಗಳವಾದರೂ....  ಯಶಸ್ವಿಯಾಗ ಬಹುದೇ ಅನ್ನುವಂಥಹ ಕುತೂಹಲ...!!

ನಾನೂ ಸ್ವಲ್ಪ ಹೊತ್ತು ನೋಡಿದೆ... ಇವರ ಸೌಂಡ್ ಕಡಿಮೆ ಆಗಲಿಲ್ಲ..
ಕೋಪ ಬಂತು....
ನಾನೂ ಏರಿದ ಧ್ವನಿಯಲ್ಲಿ  ಕೂಗಾಡಿದೆ...

" ಏನ್ .. ಸಾರ್..?...
ಈ ಕೆಲಸ ಅವರಿಗೇ.. ಗುತ್ತಿಗೆ ಕೊಟ್ಟಿದ್ದೇನೆ,,,
ಅವರು ಎಷ್ಟು ಗಂಟೆಗೆ ಬಂದ್ರೆ ನನಗೇನು...? 
ಜಲ್ದಿ ಮುಗಿಸಿದರೆ ಅವರಿಗೆ ಲಾಭ...
ತಡವಾಗಿ ಬಂದ್ರೆ ನಿಮಗೇನೂ  ನಷ್ಟ ಇಲ್ಲ...
....ಡ..ಡಾ..ಡಾ.....!!.
....ಡಿ... ಡೀ... ಡಿ...!!...."

ಅಂತ  ಜೋರಾಗಿ ಧ್ವನಿ  ಏರಿಸಿದೆ...!

ಇಷ್ಟು ಕೂಗುವಾಗ  ನನ್ನ ಧ್ವನಿ ಕಂಪಿಸಿತು... 
ಬೆವರಿಳಿಯಿತು...
ರೂಢಿ ಇಲ್ಲವಲ್ಲ...!

ಈಗ ಅವರಿಗೆ ಸಮಾಧಾನ ವಾಯಿತು...

"ಓಹೋ... !!
ಹೀಗೋ...!
ಸರಿ ಬಿಡಿ ನಮಗೇನು...?

ಬನ್ನಿ .... ಒಂದು ಟೀ ಕುಡಿದು ಬರೋಣ...!!"

ಅಂತ ಹೆಗಲ ಮೇಲೆ ಕೈ ಹಾಕಿ ಕರೆದುಕೊಂಡು ಹೋದರು  !!

ಕ್ರಮೇಣ ಇದೆಲ್ಲ ಮಾಮೂಲಿಯಾಗಿ ಹೋಯ್ತು...

ಅವರು ಕೂಗಾಡುವದು...
ಅವರ ಸಾಮಾಧಾನಕ್ಕಾಗಿ ನಾನೂ ಕೂಗುವದು...!
ನಂತರ ಟೀ ಕುಡಿಯಲ್ಲಿಕ್ಕೆ ಹೋಗುವದು...!!

ಅಕ್ಕಪಕ್ಕದ ಮನೆಯವರೂ ಇಣುಕಿ ನೋಡುವದನ್ನು  ಬಿಟ್ಟು ಬಿಟ್ಟರು....!

ಕೊನೆ ಕೊನೆಗೆ  ಅವರು ಕೂಗಾಡದಿದ್ದರೆ ನನಗೆ  ಒಂಥರಾ ಕಸಿವಿಸಿ  ಆಗುತ್ತಿತ್ತು...
ಏನೋ ಕಳೆದುಕೊಂಡವರ ಹಾಗೆ...
ಆಗ ಅವರಿಗೆ ಫೋನ್ ಮಾಡಿಯಾದರೂ ಕೇಳೀ ಬಿಡುತ್ತಿದ್ದೆ..

"ಏನ್ ಸಾರ್... ಆರೋಗ್ಯ ಸರಿ ಇಲ್ಲವಾ..?" 
ಅಂತ... !!

ನಮ್ಮ ಮನೆಯಲ್ಲೂ ಕೆಲವೊಮ್ಮೆ ನನ್ನ  ಅನ್ಯ ಮನಸ್ಕತೆಯನ್ನು ನೋಡಿ ಕೇಳುತ್ತಿದ್ದರು...
"ಏನ್ರಿ ಒಂಥರಾ ಇದ್ದೀರಿ...
ಮನೆ ಮಾಲಿಕರು ಭೇಟಿ ಆಗಲಿಲ್ವಾ..?...!"


ಮಾಡಿದ ಕೆಲಸದ ಬಿಲ್ಲಿನ ಹಣವನ್ನು  ಒಂದು ದಿನವೂ ತಡವಾಗದಂತೆ  ಕರೆದು ಕೊಡುತ್ತಿದ್ದರು....
ಹಣಕಾಸಿನ ವಿಚಾರದಲ್ಲಿ ಒಂದು ದಿನವೂ  "ಎರಡು" ಮಾತನಾಡಲಿಲ್ಲ !!!

ಕೆಲವೊಮ್ಮೆ ಅವರು ಹೇಳುತ್ತಿದ್ದರು...

"ಹೆಗಡೆಯವರೆ...
ನನ್ನ  ಮನಸ್ಸು  ಕಸದ ತೊಟ್ಟಿಯಲ್ಲ ನೋಡಿ...
ಅಲ್ಲಿ ಬೇಡದ  ಕೊಳಕನ್ನು ಅಲ್ಲಿ ಇಟ್ಟುಕೊಳ್ಳುವ ಸ್ವಭಾವ ನನ್ನದಲ್ಲ...
ಕೊಳಕನ್ನು ಮುಚ್ಚಿಟ್ಟು ಗಲೀಜು ಮಾಡಿಕೊಳ್ಳುವದಿಲ್ಲ...


ಎಲ್ಲವೂ ಮುಕ್ತ... ! 

ನಾನು  ಅಲ್ಲಿ ಸುಗಂಧ ಇಡಲಿಕ್ಕೆ ಆಗದಿದ್ದರೂ..
ಅಲ್ಲಿ  ಕ್ಲೀನ್  ಇಡುತ್ತೇನೆ...

ನನಗೆ ಸಿಟ್ಟು ಬರಲಿ...
ಖುಷಿಯಾಗಲಿ...   ದುಃಖವೇ ಆಗಿರಲಿ...ನಾನು ಹೀಗೆಯೇ ಇರುತ್ತೇನೆ...
ಕೆಲವರಿಗೆ ಕಿರಿಕಿರಿ ಆದರೂ... 
ನಾನು ಆರೋಗ್ಯವಾಗಿದ್ದೇನೆ...!

ನನ್ನ ಸ್ವಭಾವ ಬದಲಿಸ ಬೇಕು ಅಂತ  ಬಹಳ ಪ್ರಯತ್ನ ಮಾಡಿದೆ..
ಆಗಲಿಲ್ಲ ನೋಡಿ...

ಎಪ್ಪತ್ತು ವರ್ಷ ನನಗೆ  ಬೀಪಿಯಿಲ್ಲ.. !
ಸಕ್ಕರೆ ಖಾಯಿಲೆಯಿಲ್ಲ..!!..."

ನನಗೆ ಕುತೂಹಲ ಜಾಸ್ತಿಯಾಯಿತು...

"ಸರ್ ...
 ನಿಮ್ಮ  ಮಡದಿಯವರಿಗೆ  ಅಂಥಹ ಖಾಯಿಲೆ  ಇದೆಯಾ ? "

"ದೇವರ ದಯೆಯಿಂದ ಅವರಿಗೂ ಇಲ್ಲ...
ಅವರೂ  ಮನಸಾ ಇಚ್ಛೇ.. ನನ್ನ ಮೇಲೆ ರೇಗಾಡುತ್ತಾರಲ್ಲ...!!
ನಮ್ಮ ಮನೆಯಲ್ಲಿ ಪ್ರಜಾಪ್ರಭುತ್ವವಿದೆ ಸ್ವಾಮಿ..!!.."

ನನಗೆ ಅಬ್ಭಾ ಅನಿಸಿತು  !!

ಇದೆಲ್ಲ  ಸರಿ...
ಅವರ  ಮನೆಯ ಗೃಹಪ್ರವೇಶದ ದಿನ ಹತ್ತಿರ ಬಂತು...

"ಹೆಗಡೆಯವರೆ...
ನೀವು.. ನಿಮ್ಮ  ಮನೆಯವರು...
ಮಗನನ್ನೂ...
 ಕರೆದು ಕೊಂಡು  ಗೃಹಪ್ರವೇಶಕ್ಕೆ ಬರಲೇ.. ಬೇಕು..."

ನನಗೆ ಪಿಕಲಾಟಕ್ಕೆ ಶುರುವಾಯಿತು...!!

ಗೃಹಪ್ರವೇಶಕ್ಕೆ  ತುಂಬಾ ಜನ ಬಂದಿರುತ್ತಾರೆ...
ಹೆಂಡತಿ....!
ಮಗ... !
ಎಲ್ಲರ ಎದುರಿಗೆ  "ಏನು ತಿಂತ್ತೀರ್ರಿ.. ಮಾರಾಯ್ರೆ..?" ಅಂತ ಕೂಗಾಡಿ  ಬಿಟ್ಟರೆ..??

ಏನು ಮಾಡಲಿ...?..?( "ನೀವು.. ಏನು ತಿನ್ತ್ತಿರ್ರಿ.. ಮಾರಾಯ್ರೇ .??... "
ಮೊದಲ ಭಾಗವನ್ನು  ಪ್ರಕಟಿಸಿದ...
ಬಳಗಕ್ಕೆ  ಧನ್ಯವಾದಗಳು...)


ಎಲ್ಲರಿಗೂ...


ಬೆಕಿ ಬ್ಬ" ....
  
ಶುಭಾಶಯಗಳು... !


54 comments:

AntharangadaMaathugalu said...

ಪ್ರಕಾಶ್ ಸಾರ್...
ಅವರು ನಿಜಕ್ಕೂ ಎಂಥಹ ಮನುಷ್ಯರೆಂದು ನಮಗೇ ನಿರ್ಧರಿಸಲು ಬಿಟ್ಟಿದ್ದೀರಾ...? :-).. ಹಲವಾರು ಪ್ರಶ್ನೆಗಳಿಗೆ ನಮ್ಮನ್ನೇ ಉತ್ತರ ಹುಡುಕಿಕೊಳ್ಳಿ ಎಂದಿದ್ದೀರಿ... ಹೀಗೆ ವಿವಿಧ ಮನಸ್ಥಿತಿಯ ಜನರನ್ನು ನಾವು ಭೇಟಿಯಾಗುತ್ತಲೇ ಇರುತ್ತೇವೆ ದಿನ ಬೆಳಗಾದರೆ ಅಲ್ವಾ... ಆದರೆ ಕೆಲವರನ್ನು ಮರೆಯಲು ಆಗೋದೇ ಇಲ್ಲ..!!! ಚೆನ್ನಾಗಿದೆ ನಿಮ್ಮ ಅನುಭವ ಕಥನ...
ನಿಮಗೂ ನಿಮ್ಮ ಕುಟುಂಬದವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.....

ಶ್ಯಾಮಲ

ಸಿಮೆಂಟು ಮರಳಿನ ಮಧ್ಯೆ said...

ಅಂತರಂಗದ ಮಾತುಗಳು....

ನನಗೆ ಮೊದಮೊದಲು ಕಸಿವಿಸಿಯಾದರೂ....
ಸ್ವಚ್ಛವಾದ ಅವರ ಮನಸ್ಸು ಇಷ್ಟವಾಗಿಬಿಟ್ಟಿತು...

ಕಪಟವಿಲ್ಲದ ಸ್ವಭಾವ... !

ಕೂಗುತ್ತಾರೆ ನಿಜ...
ಆದರೆ ಒಳಗೊಂದು ಹೊರಗೊಂದು...
ಬಣ್ಣ ಬದಲಾಯಿಸುವ ಸ್ವಭಾವವಿಲ್ಲವಲ್ಲ... !!

ಇಂಥವರೊದನೆ ವ್ಯವಹಾರ ಬಹಳ ಸುಲಭ... ಮತ್ತು ಇಷ್ಟ... ಅಲ್ಲವೆ?
ನಿಮಗೂ ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬದ ಶುಭಾಶಯಗಳು...

ನಿಮ್ಮೆಲ್ಲರ ಬ್ಲಾಗುಗಳಿಗೆ ಕೆಲವು ದಿನಗಳಿಂದ ಬರಲಾಗಲಿಲ್ಲ...

ಅದಕ್ಕೆ ಕಾರಣ "ಬಜ್"
ಇನ್ನು ಬಜ್ ಕಡಿಮೆ ಮಾಡಿ ಬ್ಲಾಗುಗಳಿಗೆ ಬರುತ್ತೇನೆ...

ದಯವಿಟ್ಟು ಬೇಸರಿಸದಿರಿ....

chandramukhi said...

ಎರಡೂ ಭಾಗವನ್ನು ಕುತೂಹಲದಿಂದ ಓದಿದೆ. ತುಂಬಾ ಸೊಗಸಾದ ನಿರೂಪಣೆ. ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡವರಿಗೆ ಕೆಲಸಗಾರರನ್ನು ನಿಭಾಯಿಸುವುದೇ ದೊಡ್ಡ ತ್ರಾಸದ ಕೆಲಸ. ಅದರಲ್ಲೂ ಮಾಲೀಕ ಕೂಡ ಹೀಗಾದರೆ ದೊಡ್ಡ ತಾಳ್ಮೆ ಬೇಕು. ಆದರೂ ಒಳ್ಳೆಯ ಮಾಲೀಕ ಬಿಡಿ. ಗೃಹಪ್ರವೇಶದಲ್ಲಿ ಏನಾಯ್ತು ಮತ್ತೆ? ಅಡುಗೆ ಚೆನ್ನಾಗಿತ್ತಾ ಹೇಗೆ?

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ಚಂದ್ರ ಮುಖಿ...

ಎಲ್ಲೋ ಓದಿದ್ದೆ...

ಯಾರಾದರೂ ಮಾತನಾಡುವಾಗ ಅವರು ಏನು ಹೇಳುತ್ತಾರೆ ಅನ್ನುವದನ್ನು ಕೇಳ ಬಾರದಂತೆ...!!
ಬದಲಾಗಿ...
"ಅವರು ಏನು ಹೇಳುವದಿಲ್ಲವೋ... ಆಆದನ್ನು ಕೇಳ ಬೇಕಂತೆ..!!"

ಬೆರೆಯವರೊಡನೆ ಮಾತನಾಡುವಾಗ ನಾವು ನಮ್ಮ ದೌರ್ಬ್ಯಲ್ಲಗಳ...
ನಮ್ಮ ಸೋಲುಗಳ..
ನಮ್ಮ ಕೆಟ್ಟ ಸ್ವಭಾವಗಳ ಬಗೆಗೆ ಮಾತನಾಡುವದೇ ಇಲ್ಲ...

ಚಂದವಾದ ಬಣ್ಣದ ಮಾತನಾಡಿಬಿಡುತ್ತೇವೆ...

ಬೇರೆಯವರೂ ನಮ್ಮ ಬಳಿ ಹೀಗೆ ಮಾಡುತ್ತಾರಲ್ಲವೆ??

ಅವರ ಮನೆ ಗ್ರಹ ಪ್ರವೇಶದ ಕಥೆ, ಅನುಭವ ...
ಅದೂ ಕೂಡ ಇನ್ನೊಂದು ಥರಹದ ಅನುಭವ...

ನಿಮ್ಮೆಲ್ಲರ ಬ್ಲಾಗುಗಳಿಗೆ ಇನ್ನೊಂದೆರಡುದಿನಗಳಲ್ಲಿ ಬರುವೆ .. ಬೇಸರಿಸದಿರಿ...

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ಜಲನಯನ said...

ಪ್ರಕಾಶ್ ಯಾಕೋ ಹಲವಾರು ಅತಿ-ಗಳನ್ನು ನುಂಗುವ ನಿನ್ನ ದೇಹ ಕಸದ ತೊಟ್ಟಿಯಾಗ್ತಿದೆ ಅನ್ಸುತ್ತೆ....ಹಹಹಹ ಹೌದು..ಕೆಲವರು ಇಂಥವರು ಇರುತ್ತಾರೆ...ನಿಜ,,,ಇವರನ್ನು ನಂಬಬಹುದು ಎಲ್ಲಾ ನೇರ...ಅದೇ ಮೂ ಸೆ ರಾಮ್ ರಾಮ್ ಬಗಲ್ ಮೆ ಛುರಿ -ಠರದವರನ್ನ ನಂಬಬಾರದು....ಗುಡ್ ಲಕ್ ಕಣಪ್ಪಾ...ಕೆಲ್ಸ ಮುಗಿಯೋವರ್ಗೆ...

ಸಿಮೆಂಟು ಮರಳಿನ ಮಧ್ಯೆ said...

ಆಜಾದು....

ನಮಗೆ ನಾವು ಮಾಡಿದ ಕೆಲಸದ ಹಣವನ್ನು ಸರಿಯಾಗಿ ಕೊಡುವವರು ಒಳ್ಳೆಯವರು...

ಇವರು ಇನ್ನೂ ಇದ್ದಾರೆ...
ದೇವರು ಅವರಿಗೆ ಆಯುರಾರೋಗ್ಯವನ್ನು ದಯಪಾಲಿಸಲಿ...

ಇಂಥಹ ಸ್ವಚ್ಛ ಹೃದಯದವರೊಡನೆಯ ವ್ಯವಹಾರ ಬಲುದೊಡ್ಡ ಅನುಭವ...
ಇವರೊಡನೆಯ ಮುಂದಿನ ಅನುಭವ ಅದೂ ಕೂಡ ವಿಶಿಷ್ಟ ಅನುಭವ...

ಒಳಗೊಂದು ಹೊರಗೊಂದು...
ಏನಿದ್ದರೂ ಎದುರಿಗೆ ಮಾತನಾಡುವ ಇಂಥವರು ವಿರಳ...

ಈ ಮನೆ ಕಟ್ಟಿ ತುಂಬಾ ದಿನಗಳಾದವು...

ಪ್ರತಿಕ್ರಿಯೆಗೆ ಧನ್ಯವಾದಗಳು....

ಜೈ ಹೋ.... !

sunaath said...

ಪ್ರಕಾಶ,
ಎಂಥೆಂಥಾ ಪರಿಸ್ಥಿತಿಯಲ್ಲಿ ಹಾಯ್ದು ಉತ್ತೀರ್ಣರಾಗಿದ್ದೀರಲ್ಲ. ನಿಮ್ಮ ತಾಳ್ಮೆಯನ್ನು ಪ್ರಶಂಸಿಸಲೇ ಬೇಕು.
ದೀಪಾವಳಿಯ ಹಾರ್ದಿಕ ಶುಭಾಶಯಗಳು.

prash said...

ha ha !! All the best mama..nice experiences with all kinds of people !!

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿದೆ ಕಥೆ ಜೊತೆಗೆ ಒಂದು ಸಂದೇಶ. ಮುಕ್ತ ಮನಸ್ಸಿನ ಮಾತುಕತೆಗಳು, ಮನಸ್ಸಲ್ಲಿ ಕಲ್ಮಶವಿತ್ತು ಮಾತನ್ನು ನಯವಾಗಿಸುವ ಡೋಂಗಿ ಜನಕ್ಕೆ ಒಳ್ಳೆ ಸಲಹೆ.

ಸಿಮೆಂಟು ಮರಳಿನ ಮಧ್ಯೆ said...

ಸುನಾಥ ಸರ್....

ಆ ದಿನಗಳು ಆರ್ಥಿಕ ಹಿಂಜರಿತದ ದಿನಗಳು...
ಕೆಲವು ವರ್ಷಗಳಿಂದ ನನ್ನ ಬಳಿ ಖಾಯಮ್ ಆಗಿ ಕೆಲಸ ಮಾಡುವ ಕೆಲಸಗಾರರಿಗೆ..
ಕೆಲಸ ಕೊಡಬೇಕು...
ಅವರು ಒಮ್ಮೆ ಬಿಟ್ಟು ಹೋದರೆ ಮತ್ತೆ ಸಿಗುವದಿಲ್ಲ...

ಒಳ್ಳೆಯ , ಪ್ರಾಮಾಣಿಕ ಕೆಲಸಗಾರರು ಸಿಗುವದು ಕಡಿಮೆ...

ಇಂಥಹ ಸಂದರ್ಭದಲ್ಲಿ ಈ ಮನೆ ಕಟ್ಟುವ ಕೆಲಸ ಸಿಕ್ಕಿತ್ತು...
ಮರಳುಗಾಡಿನಲ್ಲಿ ನೀರು ಸಿಕ್ಕಂತೆ...!

ತಾಳ್ಮೆ, ಸಂಯಮಗಳನ್ನು ಪರಿಸ್ಥಿತಿ ಕಲಿಸಿಬಿಡುತ್ತದೆ ಸರ್... !
ಅಲ್ಲವೆ?

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು...

ವಿ.ಆರ್.ಭಟ್ said...

ಇವತ್ತಿನ ದಿನಮಾನ ಹೇಗಿದೆಯೆಂದರೆ ಯಾವುದೇ ವೃತ್ತಿಯನ್ನು ಮಾಡುತ್ತಿರಲಿ ಒಂದಿಲ್ಲೊಂದು ಸಮಯದಲ್ಲಿ ಈ ರೀತಿ ಸನ್ನಿವೇಶ ಎದುರಿಸಬೇಕಾಗಿ ಬರುತ್ತದೆ.ಕೆಲವೊಮ್ಮೆ ನಮಗೆಲ್ಲಾ ಯಾಕೆ ಇದು ಸುಮ್ಮನೇ ಎನ್ನುವಷ್ಟು ಜಿಗುಪ್ಸೆಗೂ ಕಾರಣವಾಗುತ್ತದೆ. ವೈಯಕ್ತಿಕವಾಗಿ ನಾನು ಕೂಗುವ ಹಲವರನ್ನು ಶಾಂತವಾಗಿದ್ದೇ ನಿಭಾಯಿಸಿದ್ದೇನೆ-ಒಮ್ಮೆ ತಮ್ಮ ತಪ್ಪನ್ನು ಅರಿತ ಅವರು ಮತ್ತೆ ಯಜಮಾನನ ಮುಂದೆ ಬಾಲ ಅಲ್ಲಾಡಿಸುವ ನಾಯಿಯಂತಾಗಿಹೋಗುತ್ತಾರೆ. ಜೀವನದ ಜೋಕಾಲಿಯ ಹಗ್ಗ/ಸರಪಳಿ ಭದ್ರವಿದೆಯೋ ಎಂಬುದು ಒಂದುಕಡೆಗಾದರೆ ಜೋಕಾಲಿಯನ್ನು ಕಟ್ಟಿರುವ ಮರವೋ ಅಥವಾ ಸೌಧದ ಹುಕ್ಕೋ ಗಟ್ಟಿ ಇದೆಯೋ ಎಂಬುದು ನಮ್ಮ ಆತಂಕಕ್ಕೆ ಕಾರಣವಾಗುತ್ತದೆ. ಇಲ್ಲಿ ಹಗ್ಗವನ್ನೂ ಮತ್ತು ಹುಕ್ಕನ್ನೂ ಬೇರೆ ಬೇರೆ ಸ್ವಭಾವದ ಜನರಿಗೆ ಹೋಲಿಸಿ ಬರೆದಿದ್ದೇನೆ. ತಮ್ಮ ತಪ್ಪಿನ ಅರಿವಾಗದ ಜನ ಎಲ್ಲವನ್ನೂ ಇನ್ನೊಬ್ಬರ ಮೇಲೆ ಹಾಕಲು ಪ್ರಯತ್ನಿಸುವುದು ಸರ್ವೇಸಾಮಾನ್ಯ. ಇನ್ನೂ ಕೆಲವರು ತಮ್ಮ ಕೆಲಸ ಸಾಧಿಸಿಕೊಳ್ಳಲು " ನಂಗೆ ಬಾಳಾ ಶಾರ್ಟ್ ಟೆಂಪರ್ರು, ಕೋಪಬಂದ್ರೆ ಮನ್ಯವ್ರನ್ನೂ ಬಡ್ದಾಕ್ಬುಡ್ತೀನಿ " ಎಂತೆಲ್ಲಾ ಅಡ್ವಾನ್ಸ್ ಆಗಿ ಎಚ್ಚರಿಕೆ ಕೊಟ್ಟ ರೀತಿ ಹೇಳಿರುತ್ತಾರೆ! ಒಟ್ಟಿನಲ್ಲಿ ಒಳ್ಳೆಯ ವ್ಯವಹಾರಸ್ಥರಿಗೆ ಕೀಳು ಮನೋಭಾವದ ಗಿರಾಕಿಗಳು ಸಿಗುವಾಗ ಆಗುವ ಅಪಚಾರವೇ ಇದು. ಇದನ್ನು ಗ್ರಹಿಸಿಯೇ ಬಹುತೇಕ ದೊಡ್ಡ ಕಂಪನಿಗಳು ತಮ್ಮಿಂದ ಗ್ರಾಹಕರಿಗೆ ಸಿಗಬೇಕಾದ ಸೇವೆಗೆ ಕಾಲ್ ಸೆಂಟರ್ ಮಾಡಿದ್ದಾರೆ. ಎಲ್ಲಾ ಶಾರ್ಟ್ ಮತ್ತು ಲಾಂಗ್ ಟೆಂಪರ್ ಗಳೂ ಕಾಲ್ ಸೆಂಟರ್ ನವರ ಹತ್ತಿರವೇ ಮಾತಾಡಿ ಬಗೆಹರಿಸಿಕೊಳ್ಳಬೇಕು.ನಾವು ನೇರವಾಗಿ ಗಿರಾಕಿಗಳಿಗೆ ಸಿಗುವುದರಿಂದ ಈ ಅಪಚಾರ ಅನುಭವಿಸಬೇಕಾಗಿ ಬರುತ್ತದೆ. ನಿಮ್ಮ ಈ ಅನುಭವ ಕಥನ ಚೆನ್ನಾಗಿದೆ, ವ್ಯವಹಾರದಲ್ಲಿರುವವರಿಗೆ ತಿಳುವಳಿಕೆ ನೀಡುತ್ತದೆ. ಧನ್ಯವಾದಗಳು

Mahesh Bhat said...

ಪ್ರಜಾಪ್ರಭುತ್ವದ ಉತ್ತುಂಗ. ನಿಮ್ಮ ತಾಳ್ಮೆಗೆ ಮೆಚ್ಚಲೇಬೇಕು. ಚೆನ್ನಾಗಿದೆ ನಿಮ್ಮ ಅನುಭವ

ಸಿಮೆಂಟು ಮರಳಿನ ಮಧ್ಯೆ said...

ಪ್ರಶಾಂತ್...

ಬದುಕು ಬೇಯಿಸುತ್ತದೆ...
ಬೇಡದಿದ್ದರೂ ಕಲಿಸುತ್ತದೆ...

ಬದುಕಿನ ಅನಿವಾರ್ಯತೆಗಳು ತಾಳ್ಮೆ, ಸಂಯಮವನ್ನೂ ಕಲಿಸುತ್ತದೆ...

ಇಷ್ಟೊಂದು ಮನೆ ಕಟ್ಟಿರುವ ನನಗೆ ಪ್ರತಿಯೊಂದು ಮಾಲಿಕರು...
ಅವರೊಡನೆಯ ಅನುಭವಗಳು .. ಮರೆಯಲಾಗದ ಅನುಭವಗಳು...

ಇದರಲ್ಲಿ ಸಿಹಿಗಳೆ ಜಾಸ್ತಿ...

ಒಂದೆರಡು ಕಹಿಗಳಿದ್ದರೂ.. ಅವುಗಳು ಹೆಚ್ಚಾಗಿ ನೆನಪಿಲ್ಲ...

ಇಂಥಹ ಅನುಭವಗಳನ್ನು ಕೊಟ್ಟ ...
ನನ್ನ ಬದುಕನ್ನು ಬದಲಿಸಿದ..
ನನ್ನ ವೃತ್ತಿಗೆ ಶರಣು .. ಶರಣು...

ಜೈ ಹೋ...

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್...

ಇವರು ಕಲ್ಮಶವಿಲ್ಲ...
ಸ್ವಚ್ಛ ಹೃದಯದ ವ್ಯಕ್ತಿ

ಸರಿ...

ಆದರೂ ಈ ಕೂಗಾಟ..
ಹಾರಾಟ... ಬೇರೆಯವರ ಮನ ಬೇಡವೆಂದರೂ ನೋಯುಸುವದು...

ಇದೆಲ್ಲ ಸಮರ್ಥನೀಯವಲ್ಲ...

ಆದರೂ..
ಇವರು ಡೊಂಗಿಯಲ್ಲ..
ಕಪಟವಿಲ್ಲ ..
ಹಾಗಾಗಿ ಇಂಥವರ ಸಹವಾಸ ಓಕೆ..
ಮತ್ತು ಖುಷಿಕೊಡುತ್ತದೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು...

umesh desai said...

ಮಾನವನ ಗುಣಸ್ವಭಾವಗಳ ಅಧ್ಯಯನ ಎಷ್ಟೊಂದು ವಿಚಿತ್ರ ಹಾಗೂ ಸೋಜಿಗ ಅಲ್ಲವೇ ಹೆಗಡೇಜಿ
ಕೆಲ ಜನ ಹಾಗೆಯೇ ತಮ್ಮ ಭಾವನೆ ವ್ಯಕ್ತಪಡಿಸಿಕೊಂಡು ನಿರಾಳ ಆಗ್ತಾರೆ. ಅದು ಒಂದು ರೀತಿಯ ಕ್ಲೀನಿಂಗ್
ಆದರ ಅದನ್ನು ಸ್ವೀಕರಿಸುವನ ಮನಸ್ಥಿತಿಯೂ ವಿಚಿತ್ರ ದ್ವಂದ್ವದಲ್ಲಿರುತ್ತದೆ..ಒಳ್ಳೆಯ ಬರಹ,

ಮನಮುಕ್ತಾ said...

ನಿಜಕ್ಕೂ ಒಬ್ಬೊಬ್ಬರ ಸ್ವಭಾವ ಒ೦ದೊ೦ದು ರೀತಿ..ಅದಕ್ಕೆ ಸರಿಯಾಗಿ ಎಲ್ಲೂ ತಪ್ಪಾಗದ೦ತೆ ನಾವು ವರ್ತಿಸುವುದು ಸುಲಭವಲ್ಲ.ನಿಮ್ಮ ಅನುಭವದ ಸಾಲುಗಳನ್ನು ಚೆನ್ನಾಗಿ ವಿವರಿಸಿದ್ದೀರಿ.

ಗುಬ್ಬಚ್ಚಿ ಸತೀಶ್ said...

ವ್ಯಕ್ತಿಯ ಅಂತರಾಳ ಅರಿಯುವುದು ಕಷ್ಟಸಾಧ್ಯ,
ಅರಿತ ಮೇಲೆ ಸ್ನೇಹಪರತೆ.

ಕ್ಷಣ... ಚಿಂತನೆ... bhchandru said...

ಪ್ರಕಾಶಣ್ಣ, ಮಾನವನಂತರಂಗವ ಅರಿತವರಾರಿಲ್ಲ? ನಾವು ಹೀಗೇ ಎಂದುಕೊಂಡರೆ, ಅವರಿರುವುದು ಅವರ ಹಾಗೆಯೇ???
ನಿಮ್ಮ ಅನುಭವ ಕಥನ ಚೆನ್ನಾಗಿದೆ.

ಸ್ನೇಹದಿಂದ,

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ನಿಮ್ಮ ಮಾತುಗಳು ಎಂಥವರನ್ನೂ ಸಮಾಧಾನ ಪಡಿಸುತ್ತವೆ
ಜನರನ್ನು ಒಲಿಸಿಕೊಳ್ಳುವ, ಒಳ್ಳೆಯತನ ದಿಂದ ಅವರನ್ನು ಪರಿವರ್ತಿಸುವ ಗುಣ ನಿಮಗಿದೆ
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಅಲ್ಲವೇ

ಸುಧೇಶ್ ಶೆಟ್ಟಿ said...

vichitra manushya :)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ತಮ್ಮ ಅನುಭವ ಕಥನ ಚೆನ್ನಾಗಿದೆ.ಮುನುಷ್ಯನ ಅ೦ತರ೦ಗವನ್ನು ತಿಳಿಯುವುದು ಕಷ್ಟವೇ..?

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ವಿ.ಆರ್. ಭಟ್....

ಕೂಗಾಡಿ ಮಾತನಾಡುವದು ಅವರ ಸ್ವಭಾವ ಸರಿ.....

ಆದರೆ ಅದನ್ನು ಕೇಳುವವರಿಗೆ ಹಿಂಸೆಯಲ್ಲವೆ?
ಕಿರಿಕಿರಿಯಲ್ಲವೆ?
ಎಷ್ಟು ದಿನ ಅಂತ ಸಹಿಸ ಬಹುದು...?

ಇಲ್ಲಿ ನನಗೆ ಕೆಲಸದ ಅನಿವಾರ್ಯವಿತ್ತು...
ನನ್ನ ಕೆಲಸಗಾರರಿಗೆ ಕೆಲಸ ಕೊಡುವ ಅಗತ್ಯ ಇತ್ತು..
ಹಾಗಾಗಿ ಒಂದೆರಡು ದಿನ ಇವರ ಸ್ವಭಾವ ನೋಡೋಣ ಎಂದು ಕೊಂಡೆ..

ಅದಿಲ್ಲದಿದ್ದರೆ...
ಮೊದಲ ದಿನವೇ... ಅವರ ಕೆಲಸ ಬಿಟ್ಟು ಬರುತ್ತಿದ್ದೆ ಅಂತ ನನಗನ್ನಿಸುತ್ತದೆ..

ಕ್ರಮೇಣ ಗೊತ್ತಾಯಿತು ಇವರು ಸ್ವಚ್ಛ ಹೃದಯದವರು... ಅಂತ.

ಎಲ್ಲಕ್ಕಿಂತ ಹೆಚ್ಚಾಗಿ ಬಿಲ್ಲಿನ ಹಣವನ್ನು ಅವರಾಗಿಯೆ ಕರೆದು ಕೊಡುತ್ತಿದ್ದರು.
ನನ್ನಂಥಹ ವ್ಯವಹಾರದವರು ಬಯಸುವದನ್ನು ಇದನ್ನು.

ಈಗಲೂ ಇವರಿಗೆ ನನನ್ನು ಕಂಡರೆ ಬಲು ಅಕ್ಕರೆ..
ತಮ್ಮ ಹತ್ತಿರದವರ ಮನೆ ಕಟ್ಟುವ ಕೆಲಸಗಳನ್ನು ಕೊಡಿಸಿದ್ದಾರೆ..
ಇವರ ಆತ್ಮೀಯತೆಯನ್ನು ಸವಿದವರೇ.. ಧನ್ಯ..

ಇನ್ನೊಂದು ಮಜಾ ಏನು ಗೊತ್ತ್ತಾ?

ಈ ಮನುಷ್ಯ ಪ್ರೀತಿ ಮಾಡುವದೂ ಸಹ ಏರಿದ ಧ್ವನಿಯಲ್ಲಿ.. !!

ಪ್ರತಿಕ್ರಿಯೆಗೆ ಧನ್ಯವಾದಗಳು..

ಸಿಮೆಂಟು ಮರಳಿನ ಮಧ್ಯೆ said...

ಮಹೇಶ್...

ನನಗೆ ಟೀ ಕುಡಿಸುತ್ತ..

"ನೋಡಿ ನಾನು ಇರುವದೇ ಹೀಗೆ...
ನಿಮಗೆ ಕೋಪ ಬಂದರೆ ನನಗೂ ಬಯ್ಯ ಬಹುದು..
ನಾನು ಮನೆಯಲ್ಲೂ ಹೀಗೆ ಇರುವದು"
ಅಂತ ಅಂದಾಗ ನಾನಗೆ ದೊಡ್ಡ ಷಾಕ್.. !!

ನಿಜ ಅವರ ಮನೆಯಲ್ಲಿ ವಿಧಾನ ಸಭೆಯಲ್ಲಿ ನಡೆಯುವಂಥಹ ಪ್ರಜಾಪ್ರಭುತ್ವವಿದೆ..

ಆದರೆ ಆ ಏರಿದ ಮಾತುಗಳು ನಾಲ್ಕೈದು ಮಾತುಗಳಿಗೆ ಮಾತ್ರ ಸೀಮಿತ..

ನಂತರ ಎಲ್ಲವೂ ಅತ್ಯಂತ ಸಹಜ ...!
ಏನೂ ಆಗಿಯೇ ಇಲ್ಲ ಎನ್ನುವಂಥಹ ಸಮಾಧಾನದ ವಾತಾವರಣ....!!

ಧನ್ಯವಾದಗಳು.. ಮಹೇಶ್....

ಸಿಮೆಂಟು ಮರಳಿನ ಮಧ್ಯೆ said...

ಉಮೇಶ್ ಭಾಯ್..

ನಮ್ಮೆಲ್ಲರ ಸ್ಥಿತಿ ಏನು ಗೊತ್ತಾ?

ಇವರು ಹಾಗೆಂದರು...
ಹೀಗೆಂದು ಬಿಟ್ಟರು ಅಂತ ಮನಸಲ್ಲೇ ಇಟ್ಟುಕೊಂಡು ..
ಅದನ್ನು ಗೊಬ್ಬರ ಹಾಕಿ ..ಒಳಗೊಳಗೆ ಬೆಳೆಸುತ್ತೇವೆ..

ಆದರೆ ಇವರು ಹಾಗಲ್ಲ..
ಯಾರು ಏನು ಹೇಳಿದರೂ ಅಲ್ಲಿಯೇ ಅದಕ್ಕೆ ಉತ್ತರ ತಮಗನ್ನಿಸದ್ದನ್ನು ಹೇಳಿಯೇ ಬಿಡುತ್ತಾರೆ..

ಹಳೆಯದನ್ನು ಕ್ಯಾರಿಫಾರವರ್ಡ್ ಮಾಡುವದಿಲ್ಲ...

ಇದು ಅತ್ಯಂತ ಮಹತ್ವದ್ದು ಅಂತ ನನ್ನ ಅನಿಸಿಕೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಮನಮುಕ್ತಾ...

ನೀವೆನ್ನುವದು ನಿಜ...

ಅನುಭವಗಳೇ ನಮ್ಮನ್ನು ಬೆಳೆಸುತ್ತವೆ...
ಪ್ರತಿಯೊಂದು ಅನುಭವವೂ ಅತ್ಯಮೂಲ್ಯ..

ಎಷ್ಟೋ ಜನರ ಮನೆ ಕಟ್ಟಿದ್ದೇನೆ..

ಎಷ್ಟೋ ಮಾಲಿಕರು ಮರೆತು ಹೋಗಿದ್ದಾರೆ...
ಇಂಥಹ ಕೆಲವು ಅಪರೂಪದವರು ನೆನಪಲ್ಲಿ ಉಳಿದು ಬಿಡುತ್ತಾರೆ..

ಈಗಲೂ ಇವರು ನಮ್ಮನೆಗೆ ಬರುತ್ತಿರುತ್ತಾರೆ...
ಬಾಯಿತುಂಬಾ ಆಶೀರ್ವಾದ ಮಾಡುತ್ತಾರೆ..
ಒಳ್ಳೆಯದಾಗಲಿ ಅಂತ ಹರಸುತ್ತಾರೆ..

ಪ್ರತಿಕ್ರಿಯೆಗೆ ಧನ್ಯವಾದಗಳು...

PARAANJAPE K.N. said...

ನಿಮ್ಮ ಮು೦ದುವರಿದ ಕಥಾ ಭಾಗ ವ್ಯಕ್ತಿಗತ ನಡವಳಿಕೆ ಮತ್ತು ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಕೆಲವರು ಹೀಗೂ ಇರುತ್ತಾರೆ. ನೀವು ಹೇಳಿದ ವ್ಯಕ್ತಿಯ ಶೋರೂಮ್ ಚೆನ್ನಾಗಿಲ್ಲ, ಆದರೆ ಗೋಡೌನ್ ಕ್ಲೀನ್ ಆಗಿದೆ. ಈಗ ಎಲ್ಲರೂ ಶೋ ರೂಮಿನ ಅ೦ದ ನೋಡಿ ಮಾಲು ಕೊಳ್ಳುತ್ತಾರೆ. ಗೋಡೌನಿನಲ್ಲಿ ಇಲಿ-ಹೆಗ್ಗಣ ಮನೆ ಮಾಡಿರ್ತಾವೆ, ಅದು ಗಮನಕ್ಕೆ ಬರೋದೆ ಇಲ್ಲ. ಇದೊ೦ಥರಾ ವಿಪರ್ಯಾಸ.

ಸಿಮೆಂಟು ಮರಳಿನ ಮಧ್ಯೆ said...

ಗುಬ್ಬಚ್ಚಿ ಸತೀಶ್...

ಯಾರು ಹೇಗೆ ಅಂತ ಅರಿತಿಕೊಳ್ಳುವದು ಬಲು ಕಷ್ಟ...
ಅದಕ್ಕಿಂತ ನಾವು, ನಮ್ಮ ನಡೆ, ನುಡಿಗಳು ಸರಳವಾಗಿದ್ದು ಬಿಟ್ಟರೆ ಸುಲಭವಲ್ಲವೆ?
ಇದು ಬಹಳ ಕಷ್ಟವಾದರೂ ಇದೆ ಸರಿ ಅಂತ ನನ್ನ ಅನಿಸಿಕೆ....

ಧನ್ಯವಾದಗಳು ಸತೀಶ್...

ಸಿಮೆಂಟು ಮರಳಿನ ಮಧ್ಯೆ said...

ಕ್ಷಣ ಚಿಂತನೆ ಚಂದ್ರು...

ಸರಿಯಾಗಿ ಹೇಳಿದ್ದೀರಿ...

"ಯತ್ ಭಾವ ತತ್ ಭವತಿ..."

ನಾವು ನೋಡುವ ದೃಷ್ಟಿಯ ಹಾಗೆ ಕಾಣುವ ಜಗತ್ತಿರುತ್ತದೆ...

ನಾವು ಹೆಚ್ಚಾಗಿ ಪೂರ್ವಗ್ರಹಪೀಡಿತರಾಗಿರುತ್ತೇವೆ.. ಅಲ್ಲವೆ?

ಧನ್ಯವಾದಗಳು ಚಂದ್ರು....

ಸಿಮೆಂಟು ಮರಳಿನ ಮಧ್ಯೆ said...

ಸಾಗರದಾಚೆಯ ಇಂಚರ "ಗುರು"

ನಿಜಕ್ಕೂ ನಿಮ್ಮ ಬಗ್ಗೆ ಖುಷಿಯಾಗುತ್ತಿದೆ...

ನಮ್ಮ ನಾಡಿನ ಪ್ರೇಮ ಕವಿಯ ಪುರಸ್ಕಾರ ನಿಮಗೆ ಸಿಕ್ಕಿದ್ದು ಸಣ್ಣ ವಿಷಯವೇನಲ್ಲ...
ನಾವು ಬ್ಲಾಗಿರರು ಹೆಮ್ಮೆ ಪಡುವಣ್ಥಾದ್ದು...
ನಿಮಗೆ ಮತ್ತೊಮ್ಮೆ ಅಭಿನಂದನೆಗಳನ್ನು ಕೋರುವೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಸುಧೇಶ್...

ನಿಜ ಬಹಳ ವಿಚಿತ್ರ ಮನುಷ್ಯನಾದರೂ ...
ಇಷ್ಟವಾಗುತ್ತಾರೆ...

ನಮ್ಮ ಗೆಳೆಯ ಪರಾಂಜಪೆಯವರು ಹೇಳೀದ ಹಾಗೆ "ಅವರ ಶೋ ರೂಮ್ ಚೆನ್ನಾಗಿಲ್ಲ..." ಅಷ್ಟೆ..

ಧನ್ಯವಾದಗಳು ಸುಧೇಶ್....

ಸಿಮೆಂಟು ಮರಳಿನ ಮಧ್ಯೆ said...

ಕುಮಾರ ಸುಬ್ರಮಣ್ಯ...

ಅಂತರಂಗವನ್ನು ಅಂತರಂಗ ಮಾತ್ರ ಅರಿಯಬಲ್ಲದು ಎನ್ನುತ್ತಾರೆ ಹಿರಿಯರು...
ಇದು ಸರ್ವಕಾಲಿಕ ಸತ್ಯ...

ಇಂತಹ ಹೋಲಿಕೆಯಿರುವ ಇನ್ನೊಬ್ಬರನ್ನು ಈ ಮೊದಲು ಭೇಟಿಯಾಗಿದ್ದೆ...

ಅವರೂ ಕೂಡ ಇಷ್ಟ ವಾಗುವದು ಕಷ್ಟ...
ವಿವರಗಳಿಗೆ ಇಲ್ಲಿ ಭೇಟಿಕೊಡಿ...

http://ittigecement.blogspot.com/2008/12/blog-post_18.html

ಪ್ರತಿಕ್ರಿಯೆಗೆ ಧನ್ಯವಾದಗಳು...

ಜೈ ಹೋ...

ವಸಂತ್ said...

ನಿಮ್ಮ ಅನುಭವ ಮತ್ತು ಸಲಹೆ ಅರ್ಥಪೂರ್ಣವಾಗಿದೆ ಸರ್

ಧನ್ಯವಾದಗಳ

Dr.D.T.krishna Murthy. said...

ಪ್ರಕಾಶಣ್ಣ;ಅದ್ಭುತ ಅನುಭವ ಕಥನ ನಿಮ್ಮದು.ತುಂಬಾ ಇಷ್ಟವಾಯ್ತು.ಮನುಷ್ಯನ ಮನಸ್ಸು ವಿಚಿತ್ರ.ಎಂತೆಂತಹ ಜನ!ಎಂತೆಂತಹ ನಡವಳಿಕೆ!

Shashi jois said...

ಪ್ರಕಾಶ್ ,
ಚೆನ್ನಾಗಿದೆ ಕತೆ..ನಿಮ್ಮ ತಾಳ್ಮೆಯನ್ನು ಮೆಚ್ಚಬೇಕು...ಕೆಲವೊಮ್ಮೆ ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಅನ್ನುವ ಮಾತು ಎಷ್ಟು ಸತ್ಯ ಆಲ್ವಾ.

SNEHA HEGDE said...

Howdu Prakashanna..
Badukinalli yesto janaru nammondigina odanatadalli bandu hoguttare.aadare avaralli kelave kelavaru maatra namma mandaladalli iddu biduttare... Yake haage kelavaru maatra iruttare anta prashne maadidaga avara badalagde iruvanta swabhava. Adu kelavraige vichitra annisabahudadaru, adu sarvakalika sathya.Namma nammalle iddu yenondu arthavagada reetiyalli vichitravagi vartisuvavariginta yavomdu sankochavillade vartisuvavarannu kandaga yellaru yake hegeye irabaradu....haagagiddre yellarallu dwesha asooye anno shabdakke artha huduka bekaguttittu.. hagadalli adu yestu kasta aagtitteno anta anisutte alava<???

ಮನದಾಳದಿಂದ............ said...

ಪ್ರಕಾಶಣ್ಣ,
ನಾನಿಲ್ಲಿ ಒಬ್ಬನೇ ಕುಳಿತು ನಗ್ತಾ ಇದ್ದೇನೆ. ಅಂದು ನೀವು ಈ ವಿಷಯ ಹೇಳಿದಾಗ ಹೊಟ್ಟೆ ಹುಣ್ಣಾಗಿತ್ತು, ಈಗ ಅದರ ನೋವು ಜಾಸ್ತಿ ಆಗ್ತಿದೆ.
ಹ್ಹ ಹ್ಹ ಹ್ಹಾ.........
ನಾನೂ ಇನ್ಮೇಲೆ ಅವರ ತರ ಇರೋದು ಅಂಥ ತೀರ್ಮಾನಿಸಿದ್ದೇನೆ. ಸಿಟ್ಟು, ಬೈಗುಳದಿಂದಲ್ಲ, ನಗುವಿನಿಂದ, ಪ್ರೀತಿಯಿಂದ!
ಏನಂತೀರಾ?

ಹಳ್ಳಿ ಹುಡುಗ ತರುಣ್ said...

hmmm howdu sir niv helodu nija sir....

manusyana ee kaladalli arta madikollode kasta sir.. yaru yavaga hege yen madtare annode arta agodilla.. kalada joteyalli sariyaagi nadiyodanna kalitiddare... :)

ಸಿಮೆಂಟು ಮರಳಿನ ಮಧ್ಯೆ said...

ಪರಾಂಜಪೆಯವರೆ...

ಈ ಲೇಖನಕ್ಕೆ ಬಂದ ಮಸ್ತ್ ಪ್ರತಿಕ್ರಿಯೆಗಳಲ್ಲಿ ..
ಇದು ನಂಬರ್ ಒನ್ ಅಂತ ನನ್ನ ಭಾವನೆ..

ಇಂಥಹ ಪ್ರತಿಕ್ರಿಯೆ ಇನ್ನಷ್ಟು ಬರೆಯಲು ಉತ್ಸಾಹದ ಟಾನಿಕ್ ಥರಹ...

"ಆ ವ್ಯಕ್ತಿಯ ಷೋ ರೂಮ್ ಚೆನ್ನಾಗಿಲ್ಲ..
ಗೋಡೌನ್ ಚೆನ್ನಾಗಿದೆ"

ನಿಜ ..
ವ್ಯಕ್ತಿಯ ಮಾತಿನಿಂದ ವ್ಯಕ್ತಿತ್ವ ಅಳೆಯ ಬಹುದು ಅನ್ನುತ್ತಾರೆ ಹಿರಿಯರು..
ಈ ವ್ಯಕ್ತಿಯ ಬಗೆಗೆ ಅದು ಸುಳ್ಳಾಗುತ್ತದೆ..

ನಿಜ ಹೇಳ್ತೇನೆ ಅದು ರಿಸೆಷನ್ ಸಮಯ ಆಗಿರದಿದ್ದಲ್ಲಿ ಮೊದಲನೆಯ ಸಾರಿಯ ಜಗಳದದಲ್ಲಿ ಆ ಕೆಲಸ ಬಿಟ್ಟು ಬರುತ್ತಿದ್ದೆ...

ನಿಜಕ್ಕೂ ಈ ವ್ಯಕ್ತಿ, ವ್ಯಕ್ತಿತ್ವ ಪರಿಚಯ ಆದದ್ದು ನನ್ನ ಪುಣ್ಯ ಅಂದುಕೊಳ್ಳುತ್ತೇನೆ..

ದಯವಿಟ್ಟು ಇದರ ಮುಂದಿನ ಭಾಗವನ್ನೂ ಓದಿ...

ಚಂದದ, ಉತ್ಸಾಹದ ತರುವ ಪ್ರತಿಕ್ರಿಯೆಗಾಗಿ ಧನ್ಯವಾದಗಳು..

ಜೈ ಹೋ...

ಸಿಮೆಂಟು ಮರಳಿನ ಮಧ್ಯೆ said...

ವಸಂತ್..

ಅನುಭವಗಳೇ ನಮ್ಮ ಬದುಕನ್ನು ಕಟ್ಟಿಕೊಡುತ್ತವೆ...
ಪಕ್ವವಾಗಿಸುತ್ತವೆ...

ನಮ್ಮ ಹೈಸ್ಕೂಲ್ ಮಾಸ್ತರ್ ಒಬ್ಬರು..
ಶ್ರೀ ಗೋವಿಂದ್ ಭಟ್ಟರು ಹೇಳುತ್ತಿದ್ದರು..
"ಬದುಕು ಕಲಿಸುವಷ್ಟು ಪುಸ್ತಕ ಕಲಿಸಲಾರದು..
ತಿಳಿಸಲಾರದು..

ಹಾಗಾಗಿ ಜನರ ಹತ್ತಿರ ಮಾತನಾಡಿ...
ಬೆರೆಯಿರಿ..ಅನುಭವ ಬದುಕು ಕಟ್ಟಿಕೊಡುತ್ತದೆ..."

ಎಷ್ಟು ಸತ್ಯಾವಾದ ಅರ್ಥಪೂರ್ಣವಾದ ಮಾತುಗಳು ಅಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಕೃಷ್ಣಮೂರ್ತಿಯವರೆ...

ಮನಸ್ಸಲ್ಲಿ ಏನನ್ನೂ ಇಟ್ಟುಕೊಳ್ಳದೆ..
ಅವರು ಹಾಗೆ ಹೇಳಿದರು..
ಇವರು ಹಾಗೆ ಹೇಳಿದರು ಎನ್ನುತ್ತ..
ಮನಸ್ಸಲ್ಲಿ ಬೇಡದ ವಿಷಯಗಳನ್ನು ಕೊಳೆಸುತ್ತ..
ಕಸದ ತೊಟ್ಟಿಯಾಗಿಸದೆ...

"ನೋಡಿ ನಿಮ್ಮ ಬಗ್ಗೆ ನನಗೆ ಹೀಗೆ ಅನ್ನಿಸುತ್ತಿದೆ.."
ಎಂದು ನೇರವಾಗಿ ಹೇಳುವ ಈ ಥರಹದ ಜನರಿಗೆ ಬಹುಷಃ ಪಥ್ಯವಾಗಲಾರರು..
ಯಾರೂ ಇಷ್ಟಪಡಲಾರರು..

ಇಂಥವರನ್ನು ಇಷ್ಟ ಪಡುವ ಜನ ಯಾವಾಗಲೂ ಹತ್ತಿರವೇ ಇರುತ್ತಾರೆ..
ಬಿಟ್ಟುಕೊಡಲಾರರು..

ಪ್ರತಿಕ್ರಿಯೆಗೆ ಧನ್ಯವಾದಗಳು..

ಜೈ ಹೋ..

ಸಿಮೆಂಟು ಮರಳಿನ ಮಧ್ಯೆ said...

ಶಶಿಯವರೆ...

ಆ ತಾಳ್ಮೆ ನನಗೆ ಅನಿವಾರ್ಯವಾಗಿತ್ತು..
ಕೆಲಸದ ಅನಿವಾರ್ಯತೆ ಅತ್ಯಗತ್ಯವಾಗಿತ್ತು..

ಬಹಳ ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲಸಗಾರರ ಬಗೆಗಾದರೂ ಒಂದು ಕೆಲಸದ ಅಗತ್ಯವಿತ್ತು..

ಸ್ವಲ್ಪ ತಾಳ್ಮೆ ವಹಿಸಿದೆ...

ಒಂದು ಅಪರೂಪದ ವ್ಯಕ್ತಿತ್ವದ ಪರಿಚಯವಾಯಿತು..

ಇದಕ್ಕಾಗಿ ನನ್ನ ವೃತ್ತಿಗೆ ಥ್ಯಾಂಕ್ಸ್ ಹೇಳಬೇಕು..

ಪ್ರತಿಕ್ರಿಯೆಗೆ ತುಂಬಾ ಥ್ಯಾಂಕ್ಸ್...

ಜೈ ಹೋ...

ಸಿಮೆಂಟು ಮರಳಿನ ಮಧ್ಯೆ said...

ಸ್ನೇಹಾ...

ಕೆಲವು ಜನರ ಗುರುತು ನಮಗಿರುತ್ತದೆ...
ಅವರು ನಮ್ಮ "ಪರಿಚಯಸ್ಥರು" ಅಂತ ನಾವು ಅಂದುಕೊಳ್ಳುತ್ತೇವೆ..

ಎಲ್ಲರ ನಿಜವಾದ ಪರಿಚಯ ಮಾಡಿಸಿಕೊಡುವದು "ಸಂದರ್ಭ"

ನಿಜ ...
ಕೆಲವರು ತುಂಬಾ ಮುಕ್ತವಾಗಿ ಮಾತನಾಡುತ್ತಾರೆ..
ಹೇಳಿದಂತೆ ಅವರ ನಡತೆಯೂ ಇರುತ್ತದೆ..
ಅಂಥವರೊಡನೆ ಧೈರ್ಯವಾಗಿ ವ್ಯವಹರಿಸ ಬಹುದು..

ಅಂಥವರು ನಿಮ್ಮ ತಪ್ಪನ್ನೂ ಯಾವುದೆ ಭಿಡೆಯಿಲ್ಲದೆ ಹೇಳುತ್ತಾರೆ...
ತಮ್ಮ ತಪ್ಪನ್ನೂ ಒಪ್ಪಿಕೊಳ್ಳುತ್ತಾರೆ..

ಇಂಥವರ ಒಡನಾಟ ನಮಗೆ ಸಿಗಲು ನಾವು ಪುಣ್ಯ ಮಾಡಿರಬೇಕು..

ಅರ್ಥಪೂರ್ಣವಾದ ಪ್ರತಿಕ್ರಿಯೆಗೆ ಧನ್ಯವಾದಗಳು...

ಜೈ ಹೋ..

nimmolagobba said...

ಮನಸ್ಸಿನ ಕೊಳೆ ತೊಳೆಯಲು ಕೆಲವರು ಇಂತಹ ಚಾಳಿ ಹೊಂದಿರುವುದು ಅಚ್ಚರಿಯ ಸಂಗತಿ.ಮನಸ್ಸಿನ ತುಮುಲಗಳನ್ನು,ಕಾಡುವ ಒತ್ತಡಗಳನ್ನು ತೊಳೆದು ಹಾಕಲು ಹಲವು ವಿಧಾನ ಗಳಿದ್ದರೂ ಇವರು ತಮ್ಮ ಸುತ್ತ ಮುತ್ತಲಿನ ಜನರ ಬಳಿ ತಮ್ಮ ಒತ್ತಡವನ್ನು ಹೀಗೆ ಸುರಿದುಕೊಂಡು ತಮ್ಮ ಮನಸ್ಸನ್ನು ಹಗುರಮಾಡಿಕೊಳ್ಳುವುದು ಎಲ್ಲಾ ಸಮಯದಲ್ಲಿಯೂ ಸರಿ ಹೊಂದದೂ ಎನ್ನುವುದು ನನ್ನ ಅನಿಸಿಕೆ.ಪ್ರಕಾಶ್ ಗೆನೋ ತಾಳ್ಮೆ ಇದೆ ಇಲ್ಲದಿದ್ದರೆ ? ಅಥವಾ ಬೇರೆ ವ್ಯಕ್ತಿ ತಾಳ್ಮೆ ಕಡಿಮೆ ಇರುವವನಾದರೆ? ಆಗುವ ಅನಾಹುತ ವರ್ಣಾತೀತ. ವ್ಯಕ್ತಿ ಎಷ್ಟೇ ಒಳ್ಳೆಯ ಮನುಷ್ಯನಾಗಿದ್ದರೂ ,ಇಂತಹ ಗುಣಗಳು ಅವನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಾಧ್ಯತೆ ಜಾಸ್ತಿ. ಆದಾಗ್ಯೂ ಅವರ ಜೊತೆ ಏಗಿದ ನಿಮಗೆ ಜೈ ಹೋ .

desai said...

ಪ್ರಕಾಶರವರೇ, ನಿಮ್ಮ ಬರವಣಿಗೆ ಓದಿದೆ, ಮೆಚ್ಚುಗೆಯಾಯಿತು. 'ಹೆಸರೆ ಬೇಡ'ಕೃತಿ ಓದುವ ಬಯಕೆ ಆಗತಿದೆ. ಖಂಡಿತ ಓದುವೆ. ನಾನು ಬ್ಲಾಗ ಲೋಕಕ್ಕೆ ಹೊಸಬ. ನನಗೂ ಬರವಣಿಗೆಯ ಸ್ವಲ್ಪ ಚಟ ಇದೆ. ಅದನ್ನು ತೀರಿಸಿಕೊಳ್ಳಲು ಗೆಳೆಯರು ಬ್ಲಾಗ್ ರಚಿಸಿ ಕೊಟ್ಟಿದ್ದಾರೆ. ಆದರೆ ಬ್ಗಾಗಗೆ ಎಂ.ಎಸ್.ವರಡ್ ನಲ್ಲಿ ಟೈಪ್ ಮಾಡಿದ ಬರಹಗಳನ್ನು ಕಾಪಿ ಮಾಡಿ ಬ್ಲಾಗಗೆ ಪೇಸ್ಟ್ ಮಾಡಿದರೆ ಅವು ಕನ್ನಡ ಅಕ್ಷರಗಳು ಮೂಡುತ್ತಿಲ್ಲ. ನನ್ನ ಗೆಳೆಯರಿಗೆ ಮಾಹಿತಿಯಿಲ್ಲ. ದಯವಿಟ್ಟು ಹೇಗೆ ಸೇರಿಸಬೇಕೆಂದು ಮಾಹಿತಿ ನೀಡತೀರಾ? ದಯವಿಟ್ಟು ಇ-ಮೇಲ್ ಮಾಡಿ.gundurao.desai@gmail.com

ಸಿಮೆಂಟು ಮರಳಿನ ಮಧ್ಯೆ said...

ಪ್ರವೀಣ್....

ಮನಸ್ಸಲ್ಲಿ ಇದ್ದುದನ್ನು ಹೊರಗೆ ಹಾಕದೆ....
ಒಳಗೆ ಬೇರೆನೇ ಇಟ್ಟುಕೊಂಡು...
ಹೊರಗಡೆ ನಯ, ವಿನಯ..
ತೆಳು ನಗುವಿನ ಲೇಪವೇಕೆ....?

ಹಾಗಗಿ ಇಂಥಹವರು ಸ್ವಲ್ಪ ಗಲಾಟೆ ಅನಿಸಿದರೂ..
ನೇರ ನುಡಿ ಓಕೆ ಅನ್ನಿಸಿತ್ತದೆ ಅಲ್ಲವೆ?

ನೀವು ಈ ವ್ಯಕ್ತಿಯ ಹಾಗೆ ಇರಬೇಕು ಅಂತ ಪ್ರಯತ್ನ ಮಾಡಬೇಕಾಗಿಲ್ಲ..
ನೀವು ಹಾಗೆಯೇ ಇದ್ದೀರಿ...
ಈ ಬ್ಲಾಗ್ ಲೋಕ ಕೊಟ್ಟ ಒಳ್ಳೆಯ ಸ್ನೇಹಿತರಲ್ಲಿ ನೀವೂ ಒಬ್ಬರು...
ನಿಮ್ಮ ಬಿಚ್ಚು ಮನಸ್ಸು ಎಲ್ಲರಿಗೂ ಇಷ್ಟ..

ಜೈ ಹೋ ಪ್ರವೀಣ್....

ಸಿಮೆಂಟು ಮರಳಿನ ಮಧ್ಯೆ said...

ಪ್ರೀತಿಯ ತರುಣ್...

ಹಳ್ಳಿಗಳಲ್ಲಿ ಇಂಥಹ ಬಿಚ್ಚು ಮನಸ್ಸಿನ ವ್ಯಕ್ತಿತ್ವಗಳನ್ನು ಇನ್ನೂ ಹೆಚ್ಚಾಗಿ ಕಾಣ ಬಹುದು...

ನಾನು ಕಂಡಿದ್ದೇನೆ...

ಪೇಟೆ ಪಟ್ಟಣಗಳಲ್ಲಿ ಬದುಕಿಗಾಗಿ ಬಣ್ಣ ಹಚ್ಚುವದು ಜಾಸ್ತಿ...
ತಮ್ಮ ನೈಜ ಬಣ್ಣ ಮರೆಮಾಚುವದು ಜಾಸ್ತಿ...

ಅಲ್ಲವೆ?

ಪ್ರತಿಕ್ರಿಯೆಗೆ ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ಬಾಲು ಭಾಯ್...

ನಿಜ... ಎಲ್ಲ ಸಮಯದಲ್ಲೂ ಇಂಥಹ ವ್ಯಕ್ತಿತ್ವವನ್ನು ಸಹಿಸುವದು ಕಷ್ಟ...

ಇವರ ಕೂಗಾಟ ಇವರಿಗೆ ಕೋಪ ಬಂದಾಗ ಮಾತ್ರ...
ಎದುರಿನವರು ತಮ್ಮ ತಪ್ಪಿಲ್ಲ ಅಂದಾಗ..ಅದು ಇವರಿಗೆ ಅರ್ಥವಾದರೆ ಮಾತ್ರ..
ತಾವು ತಪ್ಪಾಗಿ ಕೂಗಿದ್ದರೆ ತತಕ್ಷಣ ಕ್ಷಮೆಯನ್ನೂ ಕೇಳಿಬಿಡುತ್ತಾರೆ...

ಯಾವುದನ್ನೂ ಕ್ಯಾರಿ ಫಾರವರ್ಡ್ ಮಾಡುವದಿಲ್ಲ...

ಇವರ ನೆನಪಿನ ಬುತ್ತಿಯಲ್ಲಿ ಬಹಳ ಆಸಕ್ತಿದಾಯಕ ಘಟನೆಗಳಿವೆ...
ಮುಂದೆ ಒಂದೊಂದಾಗಿ ಬರೆಯುವೆ...

ನನ್ನ ತಪ್ಪಿದ್ದು ನಾನು ಬಯ್ಯಿಸಿಕೊಂಡಿದ್ದೂ ಇದೆ...
ತಪ್ಪನ್ನು ಒಪ್ಪಿಕೊಂಡರೆ ಏರಿದ ಧ್ವನಿ ಇಳಿದು ಬಿಡುತ್ತದೆ..

ನೀವು ಹೇಳಿದ್ದನ್ನು ನಾನೂ ಒಪ್ಪಿದ್ದೇನೆ... ಇಲ್ಲಿ ಪ್ರತಿಕ್ರಿಯೆಗಳಲ್ಲೂ ಹಾಕಿದ್ದೇನೆ...

ಎಲ್ಲಾ ಸಮಯ, ಎದುರಿನ ವ್ಯಕ್ತಿಗಳ ಮನಸ್ಥಿತಿ ಒಂದೇ ಥರಹ ಇದ್ದಿರುವದಿಲ್ಲ.. ಅಲ್ಲವೆ?

ಚಂದದ, ವಿಮರ್ಶಾತ್ಮಕ ಪ್ರತಿಕ್ರಿಯೆಗಾಗಿ ಧನ್ಯವಾದಗಳು..

ಇದರ ಮುಂದಿನ ಭಾಗವನ್ನೂ ದಯವಿಟ್ಟು ಓದಿ.. ಜೈ ಹೋ...

ದಿನಕರ ಮೊಗೇರ said...

prakaashaNNa ,
nimma paristiti anisikonDare nagu baratte....

mundina bhaaga innU interesting anisatte...

ಸಿಮೆಂಟು ಮರಳಿನ ಮಧ್ಯೆ said...

ದೇಸಾಯಿಯವರೆ...

ನನ್ನ ಬ್ಲಾಗಿಗೆ ಸ್ವಾಗತ..

ನಿಮ್ಮ ಬ್ಲಾಗ್ ನೋಡಿದೆ...
ಸೊಗಸಾದ ಚುಟುಕುಗಳನ್ನು ಬರೆದಿರುವಿರಿ... ಅಭಿನಂದನೆಗಳು...

ಎಮ್ಮೆಸ್ ವರ್ಡಿನಲ್ಲಿ ನನಗೆ ಏನೂ ಗೊತ್ತಿಲ್ಲ...
ನಾನು "ಬರಹ" ಸಾಫ್ಟ್ ವೇರ್ ನಲ್ಲಿ ಬರೆಯುತ್ತೇನೆ...
ಇದು ಬಹಳ ಸರಳ..
ಇದು ಫ್ರೀಯಾಗಿ ಸಿಗುತ್ತದೆ..

ನೀವೂ ಬಳಸಿನೋಡಿ..

ಧನ್ಯವಾದಗಳು...

ಸಿಮೆಂಟು ಮರಳಿನ ಮಧ್ಯೆ said...

ದಿನಕರ್...

ನಿಜ..
ಅವರು ಬರಲೇ ಬೇಕೆಂದು ಕರೆದಿದ್ದರು...

ನಾನೇ ಕಟ್ಟಿದ ಮನೆ.. ಹೋಗಲೇ ಬೇಕಿತ್ತು...

ಹೆಂಡತಿ, ಮಗನನ್ನು ಕರೆದು ಕೊಂಡು ಹೋಗದಿದ್ದಲ್ಲಿ...

ಕೋಪ ಬಂದು..

ಬಾಗಿಲಲ್ಲೇ ನಿಂತು "ಏನ್ ತಿಂತ್ತೀರ್ರೀ ಮಾರಾಯ್ರೆ?"
ಅಂತ ಕೂಗಾಡಿಬಿಟ್ಟರೆ??

ಕುಟುಂಬವನ್ನು ಕರೆದು ಕೊಂಡು ಹೋಗಲೇ...?
ಬೇದವೆ..?

ನನ್ನ ತಲೆ ಬಿಸಿಯಾಗತೊಡಗಿತು....

ಪ್ರತಿಕ್ರಿಯೆಗೆ ಧನ್ಯವಾದಗಳು...

ಕವಿತಾ said...

ತು೦ಬಾ ಚೆನ್ನಾಗಿದೆ. ತು೦ಬಾ ಸೊಗಸಾಗಿ ಬರೆಯುತ್ತೀರಿ.
ನಿಮ್ಮ ಬ್ಲಾಗ್ ಲಿ೦ಕ್ ಸಿಕ್ಕಾಗ ಮೊದಲು ೧-೨ ಲೇಖನ ಓದಿದೆ.
ತು೦ಬಾ ಇಷ್ಟವಾಯಿತು. ಎಲ್ಲವನ್ನು ಒಮ್ಮೆಯೇ ಓದುವ ತವಕದಲ್ಲಿ
ಆಫೀಸ್ ಕೆಲಸವನ್ನು ಹಾಳುಮಾಡಿಕೊ೦ಡು ನಿಮ್ಮ ಬ್ಲಾಗ್ ನೆ ಓದ್ತಾ ಕೂರುತ್ತಿದ್ದೆ. ನಿಮ್ಮ ಬರವಣಿಗೆ ಎಷ್ಟು ಇಷ್ಟವಾಗುತ್ತೆ೦ದರೇ ಮಧ್ಯದಲ್ಲೆಲ್ಲೂ ನಿಲ್ಲಿಸಲು ಮನಸ್ಸು ಬರುವುದಿಲ್ಲ. ಹೀಗೆ ಬರೆಯುತ್ತಿರಿ.

ಪ್ರವೀಣ್ ಭಟ್ said...

next innenta baida anta kelakke kaytha iddi :) odta odta nanu nimma hange adna anta !!!!!

shriram bhat said...

namaskara prakasanna . nimma lekhanagalannu tumba dinadinda odta iddi. naanu blog start madiddi plz visit & give me suggession plz. plz visit www.dreamshriram.blogspot.com .

ಶಿವಪ್ರಕಾಶ್ said...

ಅವರು ಕೂಗಾಡುವದು...
ಅವರ ಸಾಮಾಧಾನಕ್ಕಾಗಿ ನಾನೂ ಕೂಗುವದು...!
ನಂತರ ಟೀ ಕುಡಿಯಲ್ಲಿಕ್ಕೆ ಹೋಗುವದು...!!

ಕೊನೆ ಕೊನೆಗೆ ಅವರು ಕೂಗಾಡದಿದ್ದರೆ ನನಗೆ ಒಂಥರಾ ಕಸಿವಿಸಿ ಆಗುತ್ತಿತ್ತು...
ಏನೋ ಕಳೆದುಕೊಂಡವರ ಹಾಗೆ...
ಆಗ ಅವರಿಗೆ ಫೋನ್ ಮಾಡಿಯಾದರೂ ಕೇಳೀ ಬಿಡುತ್ತಿದ್ದೆ..

ನಮ್ಮ ಮನೆಯಲ್ಲಿ ಪ್ರಜಾಪ್ರಭುತ್ವವಿದೆ ಸ್ವಾಮಿ..!!.."

ಮಸ್ತ್ ಮಜ ಬಂತು... ha ha ha