Thursday, April 22, 2010

ತೊಟ್ಟಿಲು ಕಟ್ಟಿ.. ತೂಗಿದ..ಹಾಗೆ..... !!

part... 2



ನಿಂಬೆ ಹುಳಿ ಪೆಪ್ಪರ ಮೆಂಟಿನ ಆಸೆಗಾಗಿ ಚೀಟಿ ವ್ಯವಹಾರಕ್ಕೆ ಒಪ್ಪಿಕೊಂಡಿದ್ದೆ..

ಈಗ ನಾವೇ ಬರೆದ ಚೀಟಿಯನ್ನು ಹೇಗೆ ಮುಟ್ಟಿಸುವದು..?


ಅವರಿಬ್ಬರ ಅಕ್ಷರವನ್ನು ಬಹಳ ಅಭ್ಯಾಸ ಮಾಡಿ..
ನಾಗು ಬರೆದಿದ್ದ..


ಕುಷ್ಟನ ಬಳಿ ಬರೆಯಲು ಆಗಲಿಲ್ಲ..
ಚೀಟಿ ನೋಡಿದ ಕೂಡಲೇ.. ಅವರಿಬ್ಬರಿಗೂ ಗೊತ್ತಾಗಿ ಬಿಡುತ್ತದಲ್ಲವೆ..?
" ಗೊತ್ತಾಗುವ ಛಾನ್ಸೇ...ಇಲ್ವೋ...!


ಅವರಿಬ್ಬರೂ ಲವ್ವಲ್ಲಿ ಮುಳುಗಿ ಹೋಗಿದ್ದಾರೆ..


ಚೀಟಿಯಲ್ಲಿ ಇರೋ ವಿಷಯ ಅವರಿಗೆ ಮುಖ್ಯ..


ಅಕ್ಷರದ ಕಡೆಗೆ ಗಮನ ಇರುವದಿಲ್ಲ..


ನೀನು ಸುಮ್ಮನೆ ಕೊಟ್ಟು ಬಾ..."


ಪದ್ದಿ  ಒಬ್ಬಳೇ ಇರುವ ಸಮಯ ನೋಡಿ ಅವಳಿಗೆ ಚೀಟಿ ಕೊಟ್ಟೆ..


" ಈ ಹೊತ್ತು.. ... ಚೀಟಿನಾ..??  !! "


ಬಹಳ ಆಸಕ್ತಿಯಿಂದ ತಗೊಂಡು ಓದಿದಳು..
ಅವಳಿಗೆ ಆಶ್ಚರ್ಯ ಆಗಿರಬೇಕು..


"ತಗೊ .. ಪ್ರಕಾಶು..
ಇವತ್ತು ಪೆಪ್ಪರ್ ಮೆಂಟು ಇಲ್ಲ..
ಉಪ್ಪು ಹಾಕಿದ ಜೀರಿಗೆ ಅಪ್ಪೆ ಮಾವಿನ ಮಿಡಿ ಇದೆ..
ಇದನ್ನೇ... ತಗೋ.."


ನನಗೆ ಮತ್ತೆ ಬಾಯಲ್ಲಿ...
 ಅಪ್ಪೆ ಮಿಡಿ ಹುಳಿಯ ನೀರು ಬಂದಂತಾಯಿತು...


"ಈ ಪದ್ದಕ್ಕ ಎಷ್ಟು ಒಳ್ಳೆಯವಳು..!
ಹೀಗೆಲ್ಲ ಮಾಡ ಬಾರದಿತ್ತು.."
ಅನಿಸಿತು...


ಅವಳು ಕೊಟ್ಟ ಅಪ್ಪೆ ಮಿಡಿ ತೆಗೆದು ಕೊಂಡು ಅಲ್ಲಿಂದ ಓಡಿದೆ...ಹಾಗೆ ಯಂಕಟಣ್ಣನಿಗೂ ಕೊಟ್ಟು ಬಂದೆ...


ನಾವು ಬರೆದಂತೆ ..
ಭಾನುವಾರ ಮೂರುಗಂಟೆಗೆ ಅಶ್ವತ್ಥ ಮರದ ಕೆಳಗೆ ಬರಲು ಹೇಳಿದ್ದೆವು..


ನಾವು ಎರಡುವರೆಗೆ ಅಲ್ಲಿ ಈಶಾಡಿ ಮರದ    ರೆಂಭೆ ಹತ್ತಿ ಕುಳಿತ್ತಿದ್ದೆವು..


ಮೂರುಗಂಟೆಯ ಸುಮಾರಿಗೆ ಪದ್ದಿ ಬಂದಳು...!


ಸ್ವಲ್ಪ ದೂರದಲ್ಲಿ.. ಯಂಕಟೂನೂ ಬರುತ್ತಿದ್ದ......!!


"ಏಯ್.. ಪ್ರಕಾಶು ....!!
ಅಲ್ಲಿ ಈಶಾಡಿ ಮಾವಿನ ಮರದ ಮೇಲೆ ಏನು ಮಾಡ್ತೀರೋ..?"


ಕೆಳಗೆ ನೋಡಿದೆ...


ಟಮ್ಮಟಿ... ಬಂದಿದ್ದ...!


ಅಯ್ಯೋ... ರಾಮಾ... !!
ಟಮ್ಮಟಿ ಅಂದ್ರೆ ಯಂಕಟಿ ತಮ್ಮ...!!


"ಏನೂ ಇಲ್ವೊ..!.
ತಿನ್ನಲಿಕ್ಕೆ ಮಾವಿನ ಕಾಯಿ ಕೊಯ್ತಾ ಇದ್ದೇವೆ...
ನೀನು ಹೋಗು.. ನಾವು  ಬರ್ತೇವೆ..."


ನಾಗು ಬಹಳ ಸಮಯ ಪ್ರಜ್ಞೆಯಿಂದ ಹೇಳಿದ...


"ಹೋಗ್ರೋ..
ಇಲ್ಲಿ ಪಕ್ಕದಲ್ಲಿ ತೋತಾಪುರಿ ಮಾವಿನ ಗಿಡ ಇದೆ..
ಇದನ್ನು ಬಿಟ್ಟು ಅಲ್ಲಿ ಒಗರು ಮಾವಿನ ಕಾಯಿ ಕೊಯ್ತೀರಾ ?
ನೀವೂ..... ಏನೋ .. ನೋಡ್ತಾ ಇದ್ದೀರಿ..?
ಏನದು ?"


"ಏನೂ ಇಲ್ವೊ... ನೀನು ಹೋಗು ..
ನಾವು ಬಂದು ಬಿಡ್ತೇವೆ..."


ಇತ್ತ...
 ಯಂಕಟಿ... ಪದ್ದಿಯ ಹತ್ತಿರ.. ಹತ್ತಿರ ಬರುತ್ತಿದ್ದ...!!


"ಇಲ್ಲಾ.. ನಾನು ಹೋಗೋದಿಲ್ಲ..
ನೀವೇನೋ.. ನೋಡ್ತಾ ಇದ್ದೀರಿ..
ನಾನೂ ನೋಡ್ಬೇಕು....!!..."


"ಏನೂ ಇಲ್ವೊ.. ನೀನು ಹೋಗು.. !!.."


ಇತ್ತ...
ಯಂಕಟಿ ... ಇನ್ನೂ ಹತ್ತಿರ ಬಂದ...!!


"ನೀವು ಸುಳ್ಳು ಹೇಳ್ತಾ ಇದ್ದೀರಿ..!!
ಇರಿ ..... ನಾನೂ ನೋಡಿಯೇ... ಬಿಡ್ತೇನೆ.."


ಎನ್ನುತ್ತ... ಮರದ ರೆಂಭೆಗೆ ಜೋತು ಬಿದ್ದ..!

ಇಲ್ಲಿ ...
"ಯಂಕಟು ಮತ್ತೆ ಪದ್ದಿ " ಮುಖ .. ಮುಖ..
ನೋಡಿ ಮುಗುಳು ನಗೆ ಸೂಸಿದರು..!!.
ಏನೋ ಮಾತಾಡುತ್ತಿದ್ದ ಹಾಗೆ... ಅನಿಸಿತು...


ಟಮ್ಮಟಿ ಮರದ ರೆಂಭೆ ಹಿಡಿದು ಹತ್ತುತ್ತಿದ್ದ...!

ಛೇ... ಇವನೊಬ್ಬ  ತಲೆ ಹರಟೆ...


"ಜಟ್.. ಪಟ.. ಪಟ್... ರ್...!!!


ನಾವು  ನಿಂತಿದ್ದ  ಹೆಣೆ  ಮುರಿಯುತ್ತಿತ್ತು...!


"ಇಳಿಯೋ.. !  ಇಳಿಯೋ.!. ಟಮ್ಮಟಿ ..!!...
ಎಲ್ಲರೂ ಬಿದ್ದು  ಹೋಗ್ತೀವೋ..!!."


ನಾವು ಹೇಳಿದ್ದನ್ನು ಲೆಕ್ಕಿಸದೇ ಮೇಲೆ ಹತ್ತಲು ಕಸರತ್ತು ಮಾಡುತ್ತಿದ್ದ...!


ಇಲ್ಲಿ ...
ಪದ್ದಿ ..ಯಂಕಟು.. ಅತ್ತಿತ್ತ ..
ಸುತ್ತಲೂ ನೋಡಿದರು.. ಅವರಿಗೆ  ಅನುಮಾನ  ಬಂದಿರ ಬೇಕು...!!


ನಾವು ನಿಂತಲ್ಲೇ  ಕುಳಿತು  ಕೊಂಡೆವು...


ಅಷ್ಟರಲ್ಲಿ ಮಾವಿನ ಮರದ ರೆಂಭೆ ಮುರಿದೇ.. ಹೋಯಿತು....!!


ಎಲ್ಲರೂ ನೆಲಕ್ಕೆ ಮುಳ್ಳಿನ ಪೊದೆಯ ಮೇಲೆ ಬಿದ್ದೇವು....!!


ಮೈಯೆಲ್ಲ ತರಚಿ.... ಪರಚಿ ಗಾಯವಾಯಿತು...


ಅಲ್ಲಲ್ಲಿ ರಕ್ತವೂ ಬಂದು ನೋವಾಗತೊಡಗಿತು...!


"ಯಾಕೆ .. ಇಲ್ಲಿ  ಮಾವಿನ  ಮರ  ಹತ್ತಿದ್ದು ?.. ??.."


ದರ್ಪದ ಧ್ವನಿ ಕೇಳಿಸಿತು...


ತಲೆಯೆತ್ತಿ ನೋಡಿದರೆ... ಮಂಜಣ್ಣ.. !!


ಅಯ್ಯೋ.... !!
ಮೀಸೆ  ಮಂಜಣ್ಣ  ಪದ್ದಿಯ ಅಪ್ಪ... !!


"ಮಂಜಣ್ಣ...
ಮಾವಿನ ಕಾಯಿ ಕೊಯ್ಲಿಕ್ಕೆ.. ಉಪ್ಪು ಹಚ್ಚಿ ತಿನ್ನಲಿಕ್ಕೆ...  !!."


"ಪಕ್ಕದಲ್ಲಿದ್ದ.. 
ತೋತಾ  ಪುರಿ  ಬಿಟ್ಟು..
ಕಹಿ ಮಾವಿನ ಕಾಯಿ ತಿಂತೀರಾ..?
ಸುಳ್ಳು ಹೇಳ್ತಿದ್ದೀರಿ..!..
ಖರೆ... ಹೇಳಿ...?  ಏನು ಮಾಡ್ತಾ  ಇದ್ದಿದ್ರಿ  ?"


ಅವನ ಮೀಸೆ...!
ದರ್ಪದ ಕಂಠ ...!


ಸ್ವಲ್ಪ ಹೆದರಿಕೆ ಆಗತೊಡಗಿತು...


"ಏ..ಯ್.. ಪ್ರಕಾಶು... !
ಇತ್ತೀಚೆಗೆ ನಿನ್ನ ತುಂಟತನ ಜಾಸ್ತಿ ಆಗಿದೆ...
ಮೊನ್ನೆ..
ನಾನು  ಕುಡಿಯೋ...ಬೀಡಿಯಲ್ಲಿ ಕೇಪು (ಸಣ್ಣ ಪಟಾಕಿ) ಇಟ್ಟಿದಿದ್ದೆ..
ಇವತ್ತು ಇಲ್ಲಿ ಸುಳ್ಳು ಹೇಳ್ತ್ತಿದ್ದೀಯಾ..
ಎಲ್ಲರೂ ನಡಿ..ರಿ...!
 ನಿನ್ನ ಚಿಕ್ಕಪ್ಪ ಬಳಿ...
ಒಮ್ಮೆ ಅವನ ಬಳಿ  ಪೆಟ್ಟು ಕೊಡಿಸಿದರೆ ಸರಿ ಆಗ್ತೀಯಾ..."


"ಬೇಡ ಮಂಜಣ್ಣ... ನಿನ್ನ ದಮ್ಮಯ್ಯ...
ಚಿಕ್ಕಪ್ಪ.. ಬಳಿ ಬೇಡ..
ನಿನ್ನ ಬೀಡಿಯಲ್ಲಿ ಇನ್ನು ಏನೂ ಮಾಡುವದಿಲ್ಲ.."


"ಸಾಧ್ಯವೇ.. ಇಲ್ಲ...
ಅಪ್ಪ  ಇಲ್ದಿರೋ  ಹುಡುಗ...
ಈ  ನಾಗೂ  ಜೊತೆ ಸೇರಿ...
ನೀನು ಕೆಟ್ಟು ಹಾಳಾಗುವದನ್ನು ನನ್ನಿಂದ ನೋಡಲು ಆಗುವದೇ ಇಲ್ಲ..!...
ಎಲ್ಲರೂ ನಡೆಯಿರಿ.."


ಟಮ್ಮಟಿಗೆ  ನಮಗಿಂತ ಹೆಚ್ಚಿಗೆ ಪೆಟ್ಟಾಗಿತ್ತು...
ಮಂಜಣ್ಣನ ಬಳಿ ಟಮ್ಮಟಿ  ಗೋಗರೆದ...


" ಮಂಜಣ್ಣ..
ನನ್ನನ್ನು ಬಿಟ್ಟು ಬಿಡು...
ಇವರು ಮರ ಹತ್ತಿ ಕಿತಾಪತಿ ಮಾಡ್ತಾ ಇದ್ದವರು...
ನಾನು  ಏನೂ ಮಾಡ್ಲಿಲ್ಲ...!
ಇವರು...
ಮರ ಹತ್ತಿ ಏನನ್ನೋ ನೋಡ್ತಾ ಇದ್ದರು..!
 ಏನೂ ಅಂತ ನನಗೂ ಹೇಳ್ಳಿಲ್ಲ..!.."


"ಇವರು ಮರ ಹತ್ತಿ ನೋಡ್ತಾ ಇದ್ರಾ..?.. !!
 ಏನು ನೋಡ್ತಾ ಇದ್ರೊ...?.."


"ಏನೂ ಇಲ್ಲ ಮಂಜಣ್ಣ...!.."


"ಇವರು ಹೀಗೆಲ್ಲ  ಸುಮ್ಮನೆ ಬಾಯಿ ಬಿಡೋದಿಲ್ಲ...
ಎಲ್ರೂ ನಡೆಯಿರಿ... ನಮ್ಮನೆಗೆ..
ನಾಗು ..ಮತ್ತು ಟಮ್ಮಟಿ..ಇಬ್ಬರ  ಅಪ್ಪಂದಿರನ್ನೂ  ಕರೆಸುತ್ತೇನೆ...
ನಿನ್ನ  ಚಿಕ್ಕಪ್ಪನಿಗೂ  ಬರಲಿಕ್ಕೆ  ಹೇಳ್ತೇನೆ..!!...
ಶಾಲೆಯ ಮಾಸ್ತರರಿಗೂ... ಹೇಳ್ತೇನೆ...!!..
ಹೀಗೆ  ಬಿಟ್ರೆ ನೀವೆಲ್ಲ ಹಾಳಾಗಿ ಹೋಗ್ತಿರಿ..."

ಅಯ್ಯೋ...!
ಇದೇನು  ಆಗ್ತಾ  ಇದೆ..??  !!

ಟಮ್ಮಟಿ  ಯಂಕಟುನ  ತಮ್ಮ...!
ಮಂಜಣ್ಣ  ಪದ್ದಿಯ  ಅಪ್ಪ...!
ಮಾಸ್ತರ್ರು...!ಚಿಕ್ಕಪ್ಪ...!

ಎಲ್ಲರೂ  ಒಟ್ಟಿಗೆ  ಸೇರಿದರೆ...??  !!


ಏನು ಅಂತ ಹೇಳುವದು ????


ಚಿಕ್ಕಪ್ಪ...!


ಮಂಜಣ್ಣನ ಮೀಸೆ...!


ದರ್ಪದ ಮಾತುಗಳು...!


ಬಯ್ಗಳು..!
ಮಾಸ್ತರ್ರು...!
ಹೊಡೆತ...! ಪೆಟ್ಟು...!!


ಚಡ್ಡಿ...
ಒದ್ದೆಯಾದ ಅನುಭವ ಆಗತೊಡಗಿತು......


 ಕೆಳಗಡೆ...
ಯಾಕೋ....
ತೊಟ್ಟಿಲು  ಕಟ್ಟಿ.. ತೂಗಿದ..ಹಾಗೆ...... ಭಾಸವಾಗತೊಡಗಿತು.........!!






( ತೊಟ್ಟಿಲು ಕಟ್ಟುವದು...  ??  !!
ಗೊತ್ತಾಗದಿದ್ದಲ್ಲಿ... ಇಲ್ಲಿ  ನೋಡಿ...

post_23.htmlhttp://ittigecement.blogspot.com/2009/05/blog-post_23.html

(ನಾನು .. ಶಾರಿಯ ಗಂಡ " ಗಣಪ್ತಿ.." ಅಂತ.. )





ಪ್ರೀತಿಯ ಓದುಗರೇ...

ನನ್ನ ಬ್ಲಾಗ್ ಅನುಸರಿಸಿ...
ಪ್ರೋತ್ಸಾಹಿಸುವವರ ಸಂಖ್ಯೆ... ಎರಡು ನೂರು  ದಾಟಿದೆ...

It is   200+     now  !!!!

ತುಂಬಾ  ಖುಷಿಯಾಗುತ್ತಿದೆ...

ನಿಮ್ಮ ಒಂದೊಂದು  ಪ್ರೋತ್ಸಾಹದ  ನುಡಿ..
ನನಗೆ ಇನ್ನಷ್ಟು ಬರೆಯಲು  ಉತ್ಸಾಹ  ಕೊಡುತ್ತದೆ...


ಓದುವ  ಎಲ್ಲ  ಆತ್ಮೀಯರಿಗೆ  ನನ್ನ ಹೃದಯ ಪೂರ್ವಕ ವಂದನೆಗಳು...

71 comments:

Unknown said...

:-) :-) . ಪ್ರಕಾಶೆಣ್ಣ ,
ಯಾವಗಿನ ಹಾಗೆ ಸೊಗಸಾದ ನಿರೂಪಣೆ . ಆದರೆ ನಿಮ್ಮ ಎಲ್ಲರ ಕುತೂಹಲ ಹಾಗೆ ಉಳಿಯಿತಲ್ಲ ಎ೦ಬ ಬೇಸರ !!!! . ನಿಮ್ಮ ಕುತೂಹಲಕ್ಕೆ ಬೇರೆ ಸ೦ದರ್ಭದಲ್ಲಿ ಉತ್ತರ ಸಿಕ್ಕಿತೆ ? ಅಥವಾ ಇನ್ನು ತು೦ಬ ವರ್ಷ ಕಾಯ ಬೇಕಾಯಿತೇ ?:-):-)

ವನಿತಾ / Vanitha said...

ಹ್ಹ ಹ್ಹ ಹ್ಹೋ ಹ್ಹೋ..ಚಪಾತಿ ಪ್ರಕಾಶಣ್ಣ, ಪೋಸ್ಟ್ ಮ್ಯಾನ್, ಕಿತಾಪತಿ..ಇನ್ನೂ ಎಷ್ಟು ಹೆಸರು !!! ನಿಮ್ಮ ಒಂದೊಂದು ಕಥೆಗೂ ಒಂದು ಹೆಸರು ಅಡಿಷನ್...ಚೆನ್ನಾಗಿದೆ, ಬರೇ ತರ್ಲೆ ಪಟ್ ಲಾಂ!!!!! ಕೊನೆಗೂ ಪೆಟ್ಟು ಸಿಕ್ಕಿತ್ತಾ , ಇಲ್ವಾ!!..ವೈಟಿOಗು :-)

Ittigecement said...

ರೂಪಾರವರೆ....

ಪ್ರೇಮಿಸಿದಾಗ "ಹಾಡು ಹೇಳ್ತಾರಾ?"
ಈ ಕುತೂಹಲ ತಣಿದ ಅನುಭವ ಬೇರೇನೇ ಇದೆ...

ಆದರೆ ಇಲ್ಲಿ ಸಿಕ್ಕಿ ಹಾಕಿಕೊಂಡು ಪೇಚಿಗೆ ಸಿಲುಕಿದ ಅನುಭವ ಇನ್ನೂ ರೋಚಕವಾಗಿದೆ..!

ನಮಗೆ ಕಷ್ಟ ಇದ್ದಿದ್ದು ಕುಷ್ಟನದು...
ಮುಗ್ಧ.. !

ಎಲ್ಲಾದ್ರೂ ಬಾಯಿ ಬಿಟ್ರೆ ಅಂತ... !!

ಪ್ರತಿಕ್ರಿಯೆಗೆ ಧನ್ಯವಾದಗಳು...

ಬರ್ತಾ ಇರಿ....

Ittigecement said...

ವನಿತಾರವರೆ...

ಮಂಜಣ್ಣ ಬಹಳ ಬೀಡಿ ಸೇದುತ್ತಿದ್ದ...
ಒಮ್ಮೆ ಯಾವ ಕಾರ್‍ಅಣಕ್ಕೋ ನನಗೆ ಬಯ್ದಿದ್ದ...

ಅವನ ಬೀಡಿ ಕಟ್ಟಿನಿಂದ..ಒಂದು ಬೀಡಿ ತೆಗೆದು ಕೊಂಡು ಹೋಗಿ...
ಅದಕ್ಕೆ ತೆಳುವಾಗಿ ನೀರು ಸವರಿ..
ಅದರ ದಾರವನ್ನು ಮೆಲುವಾಗಿ ಬಿಚ್ಚಿ..
ಆಟಿಕೆಯ ಪಿಚ್ತೂಲಿಗೆ ಹಾಕುವ ಕೇಪು ಮಧ್ಯದಲ್ಲಿಟ್ಟು..
ಮತ್ತೆ ವಾಪಸ್ಸು ಕಟ್ಟಿದ್ದೆ...

ಮಂಜಣ್ಣ ಸೇದುವಾಗ
"ಡಬ್" ಅಂತ ಶಬ್ಧವಾಗಿ ಹೆದರಿ ಹೋಗಿದ್ದ...!

ಅವರು ನನ್ನ ತಂದೆಯವ ಆತ್ಮೀಯ ಸ್ನೇಹಿತರಾಗಿದ್ದರಂತೆ...
"ಹುಡುಗ" ಕೆಟ್ಟು ಹಾಳಾಗಿ ಹೋಗುತ್ತಾನಲ್ಲ ಅಂತ...

ಅವರ ಮನೆಯಲ್ಲಿ ವಿಚಾರಣೆ...!!

ಚಿಕ್ಕಪ್ಪ...
ಮಾಸ್ರರು..
ಎಲ್ಲ ಹೆದರಿಕೆಯ ಪಂಚ ಭೂತಗಳು ಒಟ್ಟಿಗೆ ಸೇರಿದರೆ ಏನಾಗ ಬಹುದು...?

ತೊಟ್ಟಿಲು ಕಟ್ಟಿದ ಅನುಭ...
ಹ್ಹಾ..ಹ್ಹಾ... ಹ್ಹಾ.. !!

ಧನ್ಯವಾದಗಳು....

Dr.D.T.Krishna Murthy. said...

ಕೊನೆಗೂ ಪದ್ದಿಮತ್ತು ಯಂಕ್ಟ ಅವರ ಲೌವ್ ಸ್ಟೋರಿ ಏನಾಯಿತು ಅನ್ನೋ ಕುತೂಹಲ ಉಳಿಸಿ ಬಿಟ್ರಿ .ಬರಹ ಚೆನ್ನಾಗಿತ್ತು.ನನ್ನ ಬ್ಲಾಗಿಗೆ ಒಮ್ಮೆ ಭೇಟಿ ಕೊಡಿ .ನಮಸ್ಕಾರ.

Ittigecement said...

ಕೃಷ್ಣಮೂರ್ತಿಯವರೆ....

ಪ್ರೇಮಿಸಿದಾಗ ಹಾಡು ಹೇಳುತ್ತಾರಾ...?
ಈ ಕುತೂಹಲ ತಣಿದದ್ದು ಬಹಳ ಮೋಜಾದ ಕಥೆಯಿದೆ...

ಪದ್ದಕ್ಕ ಒಳೆಯವಳು...
ನನ್ನಿಂದಾಗಿ ಅವಳ ಹೆಸರು..
ಅವಳು ಹೇಳಿದ ಕೆಲಸ ರಟ್ಟಾಗಿ ಹೋಗುತ್ತದಲ್ಲಾ ಅನ್ನುವ ಅಂಜಿಕೆ...
ಇತ್ತ ಬೀಡಿಯಲ್ಲಿ ಕೇಪು ಇಟ್ಟಿದ್ದಕ್ಕೆ..
ಚಿಕ್ಕಪ್ಪನ ಬಳಿ ಪೆಟ್ಟು ತಿನ್ನ ಬೇಕು...
ಇನ್ನು ಮಾಸ್ತರು ಬಂದರಂತೂ ... ಗೃಹಾಚಾರ ನೆಟ್ಟಗಿಲ್ಲವೆಂದೇ ಹೇಳ ಬೇಕು....!

ಸರ್ ನಿಮ್ಮ ಬ್ಲಾಗಿಗೆ ಖಂಡಿತ ಬರುತ್ತೇನೆ...

ಪ್ರತಿಕ್ರಿಯೆಗಾಗಿ ಧನ್ಯವಾದಗಳು...

ನಾಗರಾಜ್ .ಕೆ (NRK) said...

ಪದ್ದಕ್ಕ-ಯಂಕಟಣ್ಣನ ಪೂಜೆಲಿ ನೀವು ಕರಡಿಗಲಾಗಿದ್ದಕ್ಕೆ
ಮಾಸ್ತರ್ ನಿಮಗೆ 'ಪೂಜೆ' ಹೆಂಗೆ(ಎಷ್ಟು) ಮಾಡಿದ್ರು . . . ?
ತೊಟ್ಟಿಲು ಕಟ್ಟಿ ತೂಗಿದ ಹಾಗಾಯ್ತು ಅಂದ್ರಲ್ಲ ಅಬ್ಬಾ
ನಕ್ಕು ನಕ್ಕು ಸಾಕಯ್ತು . . . . ತುಂಬಾ ಚೆನ್ನಾಗಿದೆ

ಮನಮುಕ್ತಾ said...

:))...............:))...!!
ಇತ್ತೀಚೆಗೆ ಒ೦ದು ಸಮಸ್ಯೆ ಶುರು ಆಗಿದೆ...??..!!ಬಹುಶಃ ನಿಮ್ಮ ಬರಹ ಓದುವ ಎಲ್ಲರಿಗೂ ಇದೇ ಸಮಸ್ಯೆ ಇರಬಹುದು.....!! ಪ್ರಕಾಶ ಅನ್ನೊ ಹೆಸರಿನವರು ಸಿಕ್ಕರೆ ನಿಮ್ಮ ಹಾಸ್ಯದ ನೆನಪಾಗಿ ಜೋರಾಗಿ ನಗು ಬರುತ್ತದೆ.ಆಮೇಲೆ ನಿಮ್ಮ ಬರಹದ ಬಗ್ಗೆ ಹೇಳಿ ಅವರನ್ನೂ ನಗಿಸಿ ನನ್ನ ನಗುವನ್ನು ಸಮರ್ಥಿಸಿಕೊಳ್ಳುತ್ತೇನೆ.
ನಿಮ್ಮ ಎಲ್ಲ ಬರಹಗಳನ್ನೂ ಓದುತ್ತಿದ್ದೇನೆ.ಕೆಲವೊಮ್ಮೆ ಕಮೆ೦ಟಿಸಲಾಗದ್ದಕ್ಕೆ ಕ್ಷಮೆ ಇರಲಿ.

Shashi jois said...

ಪ್ರಕಾಶ್ ,

ಪದ್ದಿ ಮತ್ತು ಎಂಕಟು ಪ್ರೇಮಕತೆ ಒಳ್ಳೆ ತಿರುವು ಪಡೆದು ಕೊಳ್ಳುತ್ತಿರುವಾಗಲೇ ನಿಲ್ಲಿಸಿ ಬಿಟ್ರಿ .ಕುತೂಹಲ ಆಗ್ತಿದೆ ಮುಂದೆ ಏನಾಗಬಹುದು ಅಂತ .ಕಾಯೋಣ !!!

ಯಾರು ಯಾರಿಗೆ ಎಷ್ಟು ಕಜ್ಜಾಯ ಬಿದ್ದಿರಬಹುದು ಅಂತ ಎನಿಸಿದರೆ ನಗು ಬರ್ತಿದೆ .. .ನಿರೂಪಣೆ ಚೆನ್ನಾಗಿತ್ತು..

Manasaare said...

ಪ್ರಕಾಶಣ್ಣ ಸಕತ್ತಾಗಿ ಬಂದಿದೆ , ಅದರ ಜೊತೆ ಸ್ವಲ್ಪ ನಿರಾಸೆ ತಂದಿದೆ ಹ ಹ ಹಃ . ನಿರಾಸೆ ಏನು ಅಂತಿರಾ ? ಪದ್ದಿ ಮತ್ತು ಯಂಕಟ ನ ಭೆಟ್ಟಿ ರೀ . ಪೋಸ್ಟ್ ನಲ್ಲಿ ಮೊದಲು ತಡಕಾಡಿದ್ದು ಅದನ್ನೇ ಹಹಹಹ . ಮತ್ತೆ ಕೂತುಹಲ ಹಾಗೆ ಉಳಿಸಿಬಿಟ್ರಿ.
ಆ ಟಮ್ಮಟಿ ಮತ್ತು ಮಂಜಣ್ಣ ಒಂದು ಒಳ್ಳೆ romantic ಸ್ಟೋರಿಗೆ ಕಲ್ಲಕಿ ಬಿಟ್ರು . ಆದ್ರೆ ಒಂದು ಮಾತು ನಿಜ ಓದುತ್ತ ಓದುತ್ತ ನಾವು ನಿಮ್ಮ ಜಾಗದಲ್ಲಿ ಇದ್ದ ಅನುಭವ ಆಗುತ್ತೆ . ನಿಮಗಾದ ಹೆದರಿಕೆ , ಅಳುಕು , ಕೂತೂಹಲ ಎಲ್ಲ ನಮಗೆ ಅಂದಂತೆ ಭಾಸವಾಗುತ್ತೆರಿ . ನೀವು ಕಥೆ ಹೇಳುವ ರೀತಿ ಅಧ್ಬುತ . ಬಾಲ್ಯದಲ್ಲಿ ಮಹಾ ತುಂಟರು ಅನ್ನಿಸುತ್ತೆ , ಅದೇ ಮಂಜಣ್ಣನ ಬಿಡಿ ಗೆ ಕೇಪು ಸೇರಿಸಿದ್ದು ಓದಿ ನೆನಿಸ್ಕೊಂಡೆ ನಗು ನಿಲ್ಲೋಲ್ಲ .

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ಇನ್ನೂ ಕುತೂಹಲ ಹಾಗೆಯೇ ಉಳಿಸಿದ್ದಿರಿ
ನಿಮ್ಮ ಹಾಸ್ಯ ಭರಿತ ಶೈಲಿ ಬಹಳ ಸೊಗಸು
ಮುಂದಿನ ವಾರಕ್ಕೆ ಕಾಯುತ್ತೇನೆ

Ittigecement said...
This comment has been removed by the author.
ಸೀತಾರಾಮ. ಕೆ. / SITARAM.K said...

ಹಾಸ್ಯ ಪ್ರಸ೦ಗ ಫ಼ಜೀತಿಗೆ ತಿರುಗುತ್ತಾ ಕಳೆ ಕಟ್ಟತಾ ಇದೆ.... ಹೆಚ್ಚು ಕಾಯಿಸಬೇಡಿ...
ಚೆನ್ನಾಗಿದೆ ತಮ್ಮ ಕಿತಾಪತಿ..

Ittigecement said...

Dear "NRK" .....

ಯಂಕಟು ಮತ್ತು ಪದ್ದಿ ಇಬ್ಬರೂ ಭೇಟಿಯಾದಾಗ ಬಹುಷಃ...
"ನಾನು ಬರೆದಿಲ್ಲ.. ನಾನು ಬರೆದಿಲ್ಲ " ಅಂತ ಮಾತಾಡಿಕೊಂಡಿರ ಬೇಕು..
ಹಾಗಾಗಿ ಅನುಮಾನದಿಂದ ಸುತ್ತಲೂ ನೋಡಿದ್ದಾರೆ...

ಆದರೆ ಇಲ್ಲಿ
"ಟಮ್ಮಟಿ" ರೆಂಭೆಗೆ ಜೋತು ಬಿದ್ದಿದ್ದರಿಂದ... ನಾವೆಲ್ಲ ಬೀಳುವ ಹಾಗಾಯಿತು..
ಅದು ಬಿದ್ದಿದ್ದು ಚದುರಂಗಿ ಮುಳ್ಳಿನ ಮಟ್ಟಿಯ(ಪೊದೆ) ಮೇಲೆ...

ತರಚಿದ ಗಾಯ...
ಮಂಜಣ್ಣನ ಹೆದರಿಕೆ...
ಸಂಗಡ... ಮಾಸ್ತರು.. ಚಿಕ್ಕಪ್ಪರ ಹೆದರಿಕೆ...

ತೊಟ್ಟಿಲು ತೂಗಿದ ಹಾಗೆ ಅನಿಸಿದ್ದರೆ...
ಅದು ಸಹಜ... ಅಲ್ಲವಾ ?

ನಿಮ್ಮ ಪ್ರೋತ್ಸಾಹದ ನುಡಿಗಳು ನನಗೆ ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...

ಧನ್ಯವಾದಗಳು...

Ittigecement said...

ಪ್ರೀತಿಯ "ಮನಮುಕ್ತಾ"....

ನಿಮ್ಮ ಪ್ರೀತಿಯ ನುಡಿಗಳಿಗೆ ನನ್ನ ನಮನಗಳು...

ಮೊನ್ನೆ ಕೂಡ ಹೀಗೆ ಆಗಿದೆ ...
" ಚಪಾತಿ ಪ್ರಕಾಶಣ್ಣ" ಅಂದ್ರೆ ಇವರೆ..." ಅಂತ ಒಬ್ಬರು ನನ್ನನ್ನು ಪರಿಚಯ ಮಾಡಿಸಿಕೊಟ್ಟರು...!

ನನ್ನ ಬ್ಲಾಗ್ ಓದಿ.. ಅನುಸರಿಸಿ ಪ್ರೋತ್ಸಾಹಿಸುವವರ ಸಂಖ್ಯೆ "ಇನ್ನೂರು" ದಾಟಿದೆ...

ಬಹಳ ಖುಷಿಯಾಗುತ್ತಿದೆ..

ಕನ್ನಡ ಮಾತನಾಡುವವರೆ ಕಡಿಮೆಯಾಗುತ್ತಿರುವ ಇಂಥಹ ಸಮಯದಲ್ಲಿ ..
ಇಂಟರ್ ನೆಟ್ ನಲ್ಲಿ ಕನ್ನಡ ಓದುವವರು ಇಷ್ಟೆಲ್ಲ ಇದ್ದಾರಲ್ಲ ಅಂತ...

ನಿಮ್ಮ ಪ್ರೋತ್ಸಾಹಕ್ಕೆ ತುಂಬು ಹೃದಯದ ಧನ್ಯವಾದಗಳು...

ನಿಮ್ಮೆಲ್ಲರ ಪ್ರೋತ್ಸಾಹ ಹೀಗೆಯೇ ಇರಲಿ..

ಥ್ಯಾಂಕ್ಸ್..
ಧನ್ಯವಾದಗಳು..
ಶುಕ್ರಿಯಾ...

ಸವಿಗನಸು said...

ಪ್ರಕಾಶಣ್ಣ,
ಎಂದಿನಂತೆ ಸೊಗಸಾದ ನಿರೂಪಣೆ....
ಕುತೂಹಲ ಹಾಗೆಯೇ ಇದೆ....
ಹಾಸ್ಯ ಭರಿತ ಶೈಲಿ ಸೂಪರ್
ಮುಂದಿನ ಭಾಗ ಬರಲಿ ಬೇಗ....

ಗೌತಮ್ ಹೆಗಡೆ said...

'ತೊಟ್ಟಿಲು ಕಟ್ಟಿ ತೂಗದು' ಹಹಹ... ಒಳ್ಳೆ ಶಬ್ದ ಹುಡ್ಕಿದ್ದೆ ಮಾತ್ರ.ಆದರೆ ತೊಟ್ಟಿಲು ಕಟ್ಟಿ ತೂಗುವುದರ ಪುರಾಣ ಇದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ರೆ ಅದು ಸಿಕ್ತ ಇಲ್ಲೇ.ನಂಗೆ ಓದವು ಅದನ್ನ.ಬೇಗ ರಿಪೇರಿ ಮಾಡು.ನಾ ಮತ್ತೆ ಬಂದು ನೋಡ್ತಿ..ಮಸ್ತ್ ಕಥೆ .ಒಳ್ಳೆ ಮಜಾ ಬಂತು.ಮುಂದ?...

Me, Myself & I said...

ಕಥೆ ರೋಕಾಕವಾಗಿತ್ತು/ವಾಗಿದೆ :)))
ಬೇಗ ಮುಂದುವರಿಸಿ

ಓ ಮನಸೇ, ನೀನೇಕೆ ಹೀಗೆ...? said...

ಪ್ರಕಾಶಣ್ಣ...ನಕ್ಕು ನಕ್ಕೂ ಕಣ್ಣಲ್ಲೆಲ್ಲ ನೀರು ಬಂತು...ಜಬರ್ದಸ್ತ್ ನೀರೂಪಣೆ. ಈ ಕಥೆನಾ ತುಂಬಾ ಎಂಜಾಯ್ ಮಾಡಿದ್ಯ ಯೆಂಗ .
ಮತ್ತೆ ಗೌತಮ್ ಹೆಳ್ದಾಂಗೆ...ತೊಟ್ಟ್ಲಿಂದು ಲಿಂಕ್ open ಆಗ್ತಾ ಇಲ್ಲೇ. ರೇಪೇರಿ ಮಾಡಿ ಬೇಗ ...ನಂಗಕ್ಕಿಗೂ ಒದವು ಅದನ್ನ.

sunaath said...

ಪ್ರಕಾಶ,
ತುಂಬ ಸೊಗಸಾದ ವಿನೋದ. ಇದು tragedy ಆಗದೇ, comedyಯಾಗಿಯೇ ಮುಗಿಯಲಿ!

Ittigecement said...
This comment has been removed by the author.
Ittigecement said...

ಶಶಿಯವರೆ..

ಪದ್ದಿ.. ಯಂಕಟುರವರ ಪ್ರೇಮದಲ್ಲಿ ನಾನು ಕರಡಿಯಾದಂತೂ ನಿಜ...

ವಿವೇಚನೆ ಇಲ್ಲದ ವಯಸ್ಸು...
ತುಂಟತನ..
ಕುತೂಹಲ ಇಷ್ಟೆಲ್ಲ ಮಾಡಿಸಿತು.....

ನನಗೆ ಎಲ್ಲ ಓದುಗರ ಅಭಿಮಾನ ಸ್ನೇಹದ ಬಗೆಗೆ ಹೇಳಲೇ ಬೇಕಾಗಿದೆ....

ಏನು ಹೇಳಲಿ ?

ಮಾತು ಬಂದರೂ ಮೂಕನಾಗಿ ಹೋಗಿದ್ದೇನೆ...
ಇದೆಲ್ಲ ನನಗೆ ಹೊಸದು...
ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ..
ನಿಮ್ಮೆಲ್ಲರ ಪ್ರೀತಿ... ಅಭಿಮಾನ...ವಾತ್ಸಲ್ಯ...!

ನಿಮ್ಮ ಪ್ರೀತಿಯ ನುಡಿಗಳನ್ನು ಓದುತ್ತಿದ್ದರೆ ನನ್ನ ಜವಾಬ್ದಾರಿ ಹೆಚ್ಚಿದೆ...
ಅದಕ್ಕೊಂದು ಚೌಕಟ್ಟು ಹಾಕಬೇಕಾಗಿದೆ..
ಎಂದೆಲ್ಲ ಅನಿಸುತ್ತಿದೆ...

ಆದರೆ... ಯಾಕೆ...?

ಇಷ್ಟೊಂದು ಸ್ನೇಹಕ್ಕೆ.. ಆದರಕ್ಕೆ ...ನಾನು ಅರ್ಹನೆ..?

ಏನೇ ಇದ್ದರೂ...
ನೀವೆಲ್ಲ ಇಷ್ಟಪಟ್ಟಿದ್ದಕ್ಕೆ ನನ್ನದೊಂದು ಪುಟ್ಟ "ಸಲಾಮ್" ಧನ್ಯವಾದ... ಶುಕ್ರಿಯಾ !!

ನಿಮ್ಮೆಲ್ಲರ ಒಂದೊಂದು ನುಡಿ ನನಗೆ ಇನ್ನಷ್ಟು ಬರೆಯಲು ಪ್ರೇರಣೆ ನೀಡುತ್ತಿದೆ...

ನನಗೆ ನಿಮ್ಮ ಪ್ರತಿಕ್ರಿಯೆ..
ಪ್ರೋತ್ಸಾಹದ ನುಡಿ ಬೇಕು...
ಇದೇ .. ನನಗೆ ಸ್ಪೂರ್ತಿ...

ಕೇವಲ ಬಾಯಿ ಮಾತಿನಿಂದಲ್ಲ...
ಹೃದಯದಿಂದ ಹೇಳುತ್ತಿರುವೆ...

ಧನ್ಯವಾದಗಳು......
ಬರುತ್ತಾ ಇರಿ....

ಧನ್ಯ...
ಧನ್ಯವಾದಗಳು...

Ittigecement said...

ಮನಸಾರೆ....

ಮಂಜಣ್ಣನ ಬೀಡಿ ಕಥೆ ಏನೆಂದು ಹೇಳಲಿ..

ನನ್ನ ತಂದೆಯ ಸ್ಥಾನದ ವ್ಯಕ್ತಿ ಅವರು...
ಗೌರವ.. ಹೆದರಿಕೆ ಎಲ್ಲ ಇತ್ತು...
ಆದರೆ
ಆ ವಯಸ್ಸಿನಲ್ಲಿ ಒಂದು ಸಿಟ್ಟು ಕೂಡಾ ಬಂದುಬಿಟ್ಟಿತ್ತು...

ಒಮ್ಮೆ ಅವರು ನನ್ನನ್ನು ವಿನಾ ಕಾರಣ ಬಯ್ದದ್ದು...

ಅವರ ಬೀಡಿಯಲ್ಲಿ "ಕೇಪು" ಇಟ್ಟಿದ್ದು...

ಆಗೆಲ್ಲ ಪಟಾಕಿ ಹಚ್ಚುವ ಹಬ್ಬಗಳಲ್ಲಿ ಆಟಿಕೆಯ ಪಿಸ್ತೂಲಿನಲ್ಲಿ..
ಬೋಲ್ಟ್ ನಟ್ಟಿನಲ್ಲಿ ಇಟ್ಟುಕೊಂಡು ಹೊಡೆಯುವ "ಕೇಪು" (ಸಣ್ಣ ಪಟಾಕೆ) ಬಹಳ ಜನಪ್ರಿಯವಾಗಿದ್ದಿತ್ತು...

ಅದನ್ನೇ ಮಂಜಣ್ಣನ ಬೀಡಿಯಲ್ಲಿಟ್ಟು ಬಿಟ್ಟಿದ್ದೆ...

ಅದು ಸ್ಫೋಟವಾದಾಗ ನಾನು ಸಾಕ್ಷಿಯಾಗಿದ್ದೆ...
ಮಂಜಣ್ಣನ ಬಳಿ...
ಚಿಕ್ಕಪ್ಪನಿಂದ ಪೆಟ್ಟು ತಿಂದಿದ್ದೆ...

ಮಂಜಣ್ಣ... ಮತ್ತು ಟಮ್ಮಟಿ ನಿಜವಾಗಿಯೂ "ಶಿವಪೂಜೆಯಲ್ಲಿನ" ಕರಡಿಗಳು...
ನಾವಲ್ಲ...!

ಅವರ ಪ್ರವೇಶವಿರದಿದ್ದಲ್ಲಿ...
ನಮ್ಮ "ಹಾಡು ಕೇಳುವ... ನೋಡುವ ಸಮಯ" ಸರಿಯಾಗಿರುತ್ತಿತ್ತು...
ಅನ್ನುವ ಕಂಪ್ಲೇಂಟು ಈಗಲೂ ಇದೆ...

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು....

ಬರುತ್ತಾ ಇರಿ...

Ittigecement said...

ಗುರುಮೂರ್ತಿ (ಸಾಗರಾದಾಚೆಯ ಇಂಚರ)

ಟಮ್ಮಟಿಯ ಹೆಸರು ಬೇರೆನೇ.. ಇದೆ...
ಆತ ಬೆಳ್ಳಗೆ...
ದುಂಡಗೆ.. ಕೆಂಪು.. ಕೆಂಪಾಗಿ ಟೊಮೆಟೊ ಥರಹ ಇದ್ದ...

ಹಾಗಾಗಿ ಅವನಿಗೆ "ಟಮ್ಮಟಿ" ಅಂತ ಹೆಸರು ಬಂತು...

ಮಹಾ ಕಿತಾಪತಿಯಾಗಿದ್ದ...
ಈಗ ಮಹಾ ಜಂಟಲ್‍ಮ್ಯಾನ್ ಆಗಿ ಬಿಟ್ಟಿದ್ದಾನೆ...

ಟಮ್ಮಟಿ ನಾವೆಲ್ಲ ಯಕ್ಷಗಾನ ಕುಣಿದ ಘಟನೆ ನೆನಪಾಗಿದೆ...
ಮುಂದೊಮ್ಮೆ ಬರೆಯುವೆ...

ತೊಟ್ಟಿಲು..
ತೂಗಿದ.. ಅನುಭವ ಇಷ್ಟವಾಗಿದ್ದಕ್ಕೆ.. ಧನ್ಯವಾದಗಳು....

Ittigecement said...

ಸೀತಾರಾಮ್ ಸರ್...

ನಮ್ಮೂರಲ್ಲಿ ಆಗ ಇದ್ದಿದ್ದೇ ಹತ್ತು ಮನೆಗಳು...
ಬಹಳ ಸಣ್ಣ ಊರು..

ಎಲ್ಲೆಲ್ಲೂ ಬೆಟ್ಟ, ಅಡಿಕೆ ತೋಟ...
ಪ್ರೇಮಿಗಳು ಭೇಟಿಯಾಗುವದು ತೋಟದಲ್ಲೋ..
ಯಾವುದೋ ಮರದ ಕೆಳಗೊ.. ಆಗಬೇಕಿತ್ತು..

ಆಗಂತೂ ಈ ಲವ್ವು, ಪ್ರೇಮವೆಲ್ಲ ತೀರಾ ಹೊಸದು..
ಬಹಳ ಕ್ರಾಂತಿಕಾರಕ ವಿಷಯಗಳು..

ಯಂಕಟು ಮತ್ತು ಪದ್ದಿಯ ಹಾಡು ಹೇಳಬಹುದಾ?
ಹೇಗೆ ಪ್ರೇಮಿಸುತ್ತಾರೆ..?
ಸಿನೇಮಾ ಥರಹನಾ ? ಎಂದೆಲ್ಲಾ ಕುತೂಹಲವಿತ್ತು...

ನಿರಾಸೆಯಾದದ್ದಂತೂ ನಿಜ...

ಅದಕ್ಕಿಂತ ಬಹಳ ಟೆನ್ಷನ್ ಮಾಸ್ತರು, ಚಿಕ್ಕಪ್ಪನದು....!

ಏನು ಮಾಡಲಿ..?

ತಿಳಿಯದೆ... ತೊಟ್ಟಿಲು ಕಟ್ಟಿದ ಅನುಭವ ಆಗಿತ್ತು...

ದೀಪಸ್ಮಿತಾ said...

ಸೊಗಸಾದ ತಿಳಿ ಹಾಸ್ಯದ ನಿರೂಪಣೆ

Ittigecement said...

ಸವಿಗನಸು...

ನಮ್ಮ ಬಾಲ್ಯದಲ್ಲಿ ನಮಗೆ ಹೆದರಿಕೆ ಅನ್ನುವದು ಇರುತ್ತಿತ್ತು...
ಅದು ಅನಿವಾರ್ಯವೂ ಆಗಿತ್ತು..(ನಮ್ಮ ತುಂಟತನಕ್ಕೆ)
ಆದರೆ ಈಗ ಹೆದರಿಕೆಯೇ ಇಲ್ಲ... ಮಕ್ಕಳಿಗೆ...

ಬಹಳ ಪ್ರೀತಿ ಕೊಟ್ಟು ಹಾಳುಮಾಡುತ್ತಿದ್ದೇವೆಯೇ...?

ಆಗ ಊರಿನಲ್ಲಿ ಎಲ್ಲರೂ ..
ಎಲ್ಲ ಮಕ್ಕಳ ಒಳಿತನ್ನು ಬಯಸಿ..ಗದರಿಸುತ್ತಿದ್ದರು...

ಮಂಜಣ್ಣ ನಮ್ಮನ್ನು ಗದರಿಸಿದ್ದಕ್ಕೆ ಮನೆಯಲ್ಲಿ ಯಾರೂ ಒಂದು ಮಾತು ಆಡಿಲ್ಲ...

ಈಗೇನಾದರೂ ಗದರಿಸಿದರೆ..
ಗದರಿಸಿದವನಿಗೇ... ಉಲ್ಟಾ ಹೊಡೆಯುತ್ತದೆ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

umesh desai said...

ಹೆಗಡೇಜಿ ಎಂದಿನಂತೆ ಸೊಗಸಾದ ನವಿರಾದ ಬರಹ.ಈ ಪ್ರೀತಿ ಪ್ರೇಮ ಮಾಡುವರಿಗಷ್ಟೆ ಅಲ್ಲದೆ ಕದ್ದು ನೋಡುವರಿಗೂ ಫಜೀತಿ
ತರುತ್ತದೆ ಅಲ್ಲವೆ....

ಮನಸು said...

prakashanna,

enu nimma kathe, baari historyne ide nimma jote hahaha.......

enO maadalu hOgi enO aagta ide... haha munduvariyali kathe

AntharangadaMaathugalu said...

ತರ್ಲೆ ಪ್ರಸಂಗಗಳನ್ನು ಓದಿ ನಕ್ಕು ಸಾಕಾಗ್ತಿದೆ. ಇಷ್ಟೆಲ್ಲಾ ಹಾಸ್ಯದ ಮಧ್ಯೆಯೂ ಸಕತ್ ಕುತೂಹಲ ಉಳಿಸುತ್ತೀರ.. ಅದೇ beauty ನಿಮ್ಮ ಬರಹದ್ದು.....

nenapina sanchy inda said...

ಚೀಟಿ ವ್ಯವಹಾರಕ್ಕೆ ಕೈ ಹಾಕಿದವರಿಗೆ ತಕ್ಕ ಶಾಸ್ತಿಯಾಯ್ತು.
ಹೆಹೆಹೆ very humorous
:-)
ಮಾಲತಿ ಎಸ್.

Unknown said...

prakasha,neenu adestu birudankitagaLa saradara,?heLi nee heLdidru ellarigu gottagotalo!!!ottinalli "PRAKASHA"heLa hesar keLidkoodle beda andru kisakne negi ukkuvange barkanje!!!Yaraddru uppinkayi bharNi(kavLa tumbkend baayi)mayimele chellihodre neene hoNe han!.

Ittigecement said...

ಗೌತಮ್...

ನಾನು ಸಣ್ಣವನಿದ್ದಾಗ ನನಗೆ ರಿಕೆಟ್ಸ್ ಆಗಿತ್ತು...
ತುಂಬಾ ವೀಕ್ ಆಗಿದ್ದೆ...

ಬಡಕಲು ಕಾಲುಗಳು...
ತಲೆ ಮಾತ್ರ ದೊಡ್ಡ...

ಸ್ವಲ್ಪ ಹೆದರಿಕೆ ಆದಗ ತೊಟ್ಟಿಲು ಕಟ್ಟುವ ಅಭ್ಯಾಸವಿತ್ತೇನೊ..

ದೊಡ್ಡವನಾದ ಮೇಲೆ ಗೊತ್ತಾಯಿತು..
ಅದು ನನ್ನೊಳಗಿನ "ಕೀಳರಿಮೆಯಿಂದಾಗಿ"
ಆತ್ಮವಿಶ್ವಾಸದ ಕೊರತೆಯಿಂದಾಗಿ ಹೀಗಾಗುತ್ತಿತ್ತು...

ನನ್ನಲ್ಲಿ ವಿಶ್ವಾಸ ತುಂಬಿ...
ಒಬ್ಬ ಮನುಷ್ಯನನ್ನಾಗಿ ಮಾಡಿದ್ದು...

ನನ್ನಮ್ಮನ ಪ್ರೀತಿ..
ಚಿಕ್ಕಪ್ಪ, ಚಿಕ್ಕಮ್ಮರ ಪ್ರೋತ್ಸಾಹ...
ದೇವರಂಥಹ ಗುರುಗಳು...
ಜೀವದ ಸ್ನೇಹಿತರು...

ಎಷ್ಟೊಂದು ಜನರ ಋಣ ಇರುತ್ತದೆ ಅಲ್ಲವಾ ?


ಈಗ ಲಿಂಕ್ ಸರಿಪಡಿಸಿದ್ದೇನೆ ದಯವಿಟ್ಟು ಓದಿ....
ಆ ಲೇಖನದಲ್ಲಿ ಗೆಳೆಯ ಕಟ್ಟೆ ಶಂಕ್ರಣ್ಣನ ಪ್ರತಿಕ್ರಿಯೆ ತಪ್ಪದೇ ... ಓದಿ...

ನನ್ನ ಲೇಖನಕ್ಕಿಂತ ಚೆನ್ನಾಗಿದೆ..

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಲೋದ್ಯಾಶಿಯವರೆ...

ಪ್ರೇಮಿಸುವಾಗ ಹಾಡು ಹೇಳುವದನ್ನು ಕೇಳಲು ಹೋಗಿ...
ಬಿದ್ದು .. ಪೆಟ್ಟಾಗಿ...
ಮಂಜಣ್ಣನ ಕೈಗೆ ಸಿಕ್ಕುಬಿದ್ದು...
ಟಮ್ಮಟಿಯೂ ಜೊತೆಯಲ್ಲಿದ್ದು...

ಮತ್ತೆ ಎಲ್ಲ ಹಿರಿಯರ ಮುಂದೆ ವಿಚಾರಣೆ...!!

ಏನಾಗಿರ ಬಹುದು ನನ್ನ ಸ್ಥಿತಿ...?
ಇನ್ನೇನು ..?

"ತೂಗಿರೆ...ತೊಟ್ಟಿಲ...!!"

ಹ್ಹಾ..ಹ್ಹಾ...!

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಓ ಮನಸೇ.. ನೀನೇಕೆ ಹೀಗೆ...?


ಮಂಜಣ್ಣನ ಮೀಸೆ ...
ಬೀಡಿ ಕುಡಿಯುತ್ತ..
ಸಣ್ಣಗೆ ಕೆಮ್ಮುವ..
ಆತನ ತೀಕ್ಷ್ಣ ಪ್ರಶ್ನೆಗಳಿಗೆ ಹೇಗೇ ಉತ್ತರ ಕೊಡುವದು...
ಅದಲ್ಲದೆ...
ಅವನ ಬೀಡಿಯಲ್ಲಿ ಕೇಪು ಇಟ್ಟಿದ್ದು... ಅವನಿಗೂ ಕೋಪ ಇತ್ತು....
ಆ ಪ್ರಕರಣ ಇನ್ನೂ ಹಸಿಯಾಗಿತ್ತು...
ನಾನು ಮಂಜಣ್ಣನ ಕೈಗೆ ಸಿಗದೆ ಓಡಾಡುತ್ತಿದ್ದೆ...

ಹೇಗೆ ಚಿಕ್ಕಪ್ಪನನ್ನು, ಮಾಸ್ತರ್ರನ್ನು..ಎದುರಿಸುವದು ?

ಸಿಕ್ಕಾಪಟ್ಟೆ ಹೆದರಿಕೆ ಆಗಿ...
ಚಡ್ಡಿಯಲ್ಲಿ ಒದ್ದೆಯಾದ ಅನುಭವ ಆಯ್ತು...

ತೊಟ್ಟಿಲು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಬಾಲು ಸಾಯಿಮನೆ said...

ಸಖತ್ತಾಗಿದ್ದು. ನಕ್ಕು ಸಾಕಾತು.

ಸಾಗರಿ.. said...

ಪ್ರಕಾಶಣ್ಣ,
ಹ ಹ್ಹ ಹ್ಹಾ part 1 ಗೆ ಪ್ರತಿಕ್ರೀಯಿಸಿದ್ದ ಪ್ರತಿಕ್ರೀಯೆ ಯಾಕೋ display ಆಗ್ಲೆ ಇಲ್ಲ. ಕಥೆ ಮತ್ತು ಅದನ್ನು ಹೇಳುವ ಪರಿ ಮತ್ತು ಅದರೊಂದಿಗೆ ಸ್ವಾರಸ್ಯವನ್ನು ಕಾಯ್ದುಕೊಳ್ಳುವ ರೀತಿ ಎಲ್ಲವೂ ಚೆನ್ನಾಗಿದೆ. ಮತ್ತೆ ನಿಮ್ಮ ಬ್ಲಾಗನ್ನು ಅನುಸರಿಸುವವರ ಸಂಖ್ಯೆ ೨೦೦ ದಾಟಿದ್ದಕ್ಕೆ congratulations.

ಶಿವಪ್ರಕಾಶ್ said...

Che... Duet song miss aytu... ha ha ha...

PARAANJAPE K.N. said...

ಮೊನ್ನೆ ನೀವು ಸಿಕ್ಕಾಗ ನಾನು ನಿಮ್ಮ ಕಥೆಯ ಉತ್ತರಾರ್ಧ ಓದಿರಲಿಲ್ಲ. ಆಮೇಲೆ ಓದಿದಾಗ ನಗು ತಡೆಯಲಾಗಲಿಲ್ಲ. ತೊಟ್ಟಿಲು ಕಟ್ಟಿ ತೂಗಿದ ಅನುಭವದ ಲೇಖನವನ್ನೂ ಮತ್ತೆ ಮೆಲುಕು ಹಾಕಿದೆ. ನಿಮ್ಮ ಪ್ರಾಸ೦ಗಿಕ ವಿನೋದ ಪ್ರವೃತ್ತಿ, ಜೀವನಾನುಭವ ಎಲ್ಲವೂ ಅನನ್ಯ. ಚೆನ್ನಾಗಿದೆ.

Unknown said...

ಮಕ್ಕಳ ಪ್ರಶ್ನೆಗಳಿಗೆ,, ಉತ್ತರಿಸಿ, ಅವರಿಗೆ ಮರ್ಯಾದೆಯ "ಚೌಕಟ್ಟಿನಲ್ಲಿ" ತಿಳಿಸಿಕೊಡುವುದು ನಿಜ, ಎಷ್ಟು ಕಷ್ಟ!! ಮತ್ತು ಅದು ಪಾಲಕರ ಎಷ್ಟು ದೊಡ್ಡ ಜವಾಬ್ದಾರಿ ಕೂಡ ಅಲ್ಲವೇ??,,, .. ಮಕ್ಕಳ ಮುಗ್ದತೆ, ಕುತೂಹಲ, ತುಂಟತನ,, ತುಂಬಿದ ಈ ಕಥೆಯನ್ನ,ಹಾಸ್ಯ ಭರಿತವಾಗಿ, ಸರಳವಾಗಿ, ಅಶ್ಲೀಲತೆಯ ಚೌಕಟ್ಟಿನ ಒಳಗೆ , ತುಂಬಾ ಚೆನ್ನಾಗಿ ಬರೆದಿದ್ದೀರ ಪ್ರಕಾಶಣ್ಣ... ಮುಂದಿನ ಕಂತಿಗೆ ಕುತೂಹಲದಿಂದ ಕಾದಿದ್ದೇವೆ..

Ittigecement said...

ಸುನಾಥ ಸರ್...

ಈ ಘಟನೆ ಘಟಿಸಿ ಹೋಗಿದೆ..
ಆಗ ಏನಾಗಿತ್ತೋ..
ಅದನ್ನು
ಮೆಲುಕುಹಾಕುವದು ನನ್ನ ಕೆಲಸ..

ಕೆಲವು
ಬದುಕಿನ ಸತ್ಯ..
ಅದಕ್ಕೆ
ತುಸು ಹಾಸ್ಯದ ಲೇಪ..
ಅಳು..
ನಗು..
ಇದೇ.. ಅಲ್ಲವೆ ಜೀವನ..?

ಸರ್ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

Ittigecement said...
This comment has been removed by the author.
ಜಲನಯನ said...

ಎನಪ್ಪಾ ಪ್ರಕಾಶ...ಅಲ್ಲಾ ನಿನಗೆ ಯಾರು ಹೇಳಿ ಕೊಟ್ಟದ್ದು...ಕ್ಲೈಮಾಕ್ಸ್ ಗೆ ಕೊಮ್ಡೋಗಿ ಏಕ್ ದಮ್ ಈ ತರಹ ಕಥೆ ಕಟ್ ಮಾಡೋದು...??
ಸರಿಬಿದು ಕಾಯೋಣ...

ಚಿತ್ರಾ said...

ಪ್ರಕಾಶಣ್ಣ ,
ಅತ್ಯಂತ ಆಸಕ್ತಿ ಹುಟ್ಟಿಸಿ ಅಲ್ಲಿಗೆ ನಿಲ್ಲಿಸೋದು ಯಾಕೆ ? ಇದು ಭಾಳ ಅನ್ಯಾಯ !
ಒಟ್ಟಿನಲ್ಲಿ ಎಲ್ಲರ ಎದುರು ನಿನ್ನ ವಿಚಾರಣೆ ಆತ ಹೆಂಗೆ ? ಯಂಕಟು - ಪದ್ದಿ ಪ್ರೇಮ ಪ್ರಸಂಗ ಎಂತಾ ಆತು ? ಕುತೂಹಲದಿಂದ ಕಾಯ್ತಾ ಇದ್ದಿ. ... ಬೇಗ ಬರಲಿ ಮುಂದಿನ ಭಾಗ !

Unknown said...

ಪ್ರಕಾಶಣ್ಣ ಸಕ್ಕತ್ತಾಗಿದೆ, ಅಬ್ಬಬ್ಬ ಎಂತೆಂಥ ಕಿಲಾಡಿ ಮಾಡ್ತಿದ್ರಿ...

ಚುಕ್ಕಿಚಿತ್ತಾರ said...

ತು೦ಬಾ ಚನ್ನಾಗಿದೆ... ನಿಮ್ಮ ಬಾಲ್ಯದ ವೈವಿದ್ಯಮಯ ಪು೦ಡಾಟಿಕೆ....ಹ್ಹ.. ಹ್ಹ...ಹ್ಹಾ....
ನಕ್ಕೂ ನಕ್ಕೂ ಸುಸ್ತಾಯ್ತು....
ಬೇಗ ಮು೦ದಿನ ಕಥೆ ಹೇಳಿ..ಯಾವಾಗಲೂ ಸಸ್ಪೆನ್ಸ್....!!!!!?????

ಕ್ಷಣ... ಚಿಂತನೆ... said...

ಪ್ರಕಾಶಣ್ಣ,
ಶೀರ್ಷಿಕೆ ಓದುತ್ತಿದ್ದಂತೆ ಏನೋ ವಿಶೇಷವಿದೆ ಅನ್ನಿಸಿತು. ನಿಮ್ಮ ಬಾಲ್ಯದ ಆಟ, ಆ ಹುಡುಗಾಟಗಳು, ಎಲ್ಲ ಚೆನ್ನಾಗಿ ಹಂಚಿಕೊಂಡಿದ್ದೀರಿ.
ಆಮೇಲೇನಾಯಿತು? ಎಂಬ ಕುತೂಹಲ ಉಳಿಸಿದ್ದೀರಿ.
ಮುಂದಿನ ನಿಮ್ಮ ಬರಹಕ್ಕೆ ಕಾಯುವಂತೆ ಮಾಡಿದ್ದೀರಿ.
ಧನ್ಯವಾದಗಳು.

Unknown said...

ನಮಸ್ಕಾರ, ಹಿಂದಿನ ಸಂಚಿಕೆಯಿಂದ ನಿಮ್ಮ ಬರಹ ಓದುತ್ತಿದ್ದೇನೆ.ತುಂಬಾ ಚೆನ್ನಾಗಿ ಬರೆಯಿತ್ತೀರಿ.ನಿಮ್ಮ ಓದುಗರ ಪಟ್ಟಿಗೆ ನಾನೊಂದು ಸೇರ್ಪಡೆ.

Ittigecement said...

ದೀಪಸ್ಮಿತ...


ಇವೆಲ್ಲ

ಎಳೆಯ..
ಬಾಲ್ಯ..
ಕಳೆದು..
ಹರಿವ
ಹರೆಯದ...
ಎಳೆ..
ಎಳೆಯ..
ಮಳೆಯ..
ನೆನಪುಗಳು.....

ಆ ದಿನಗಳ ನೆನಪೇ ಸೊಗಸು...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ದೇಸಾಯಿ ಸಾಹೇಬರೆ...

ನಾನು ನಿಮ್ಮ ನಶೆಯ ಚುಟುಗಗಳ ದೊಡ್ಡ ಫ್ಯಾನ್ !

ಬಾಲ್ಯದ..
ಬಚ್ಚಿಟ್ಟ..
ನೆನಪುಗಳು..
ಸಹಜ
ಕುತೂಹಲದ.. ದಿನಗಳ..
ಗೆಳೆಯರ ಒಡನಾಟ..
ಹಿರಿಯರ ಪ್ರೀತಿ..ಆಶೀರ್ವಾದಗಳ ಜೊತೆ..
ತಿಂದ ಪೆಟ್ಟುಗಳ..
ನೆನಪು...

"ಸವಿ.. ಸವಿ.. ನೆನಪು...
ಸಾವಿರ ನೆನಪು..
ಸಾವಿರ ಕಾಲಕೂ ಸವೆಯದ ನೆನಪು..."

ಅಲ್ಲವಾ ?

ಧನ್ಯವಾದಗಳು...

Ittigecement said...

ಮನಸು...

ನೀವೆಲ್ಲ ಅಲ್ಲಿ
ದೂರದ ಮರಳುಗಾಡಿನಲ್ಲಿ..
ಕನ್ನದದ ಕಂಪನ್ನು ಬೆಳಗುವದನ್ನು ನೋಡಿ ಹೆಮ್ಮೆಯಾಗುತ್ತದೆ...

ನಿಮಗೂ..
ಮಹೇಶರಿಗೂ..
ಗೆಳೆಯ "ಆಝಾದನಿಗೂ"...

ನಮ್ಮೆಲ್ಲರ ಕಡೆಯಿಂದ ಶುಭಾಶಯಗಳು...

ಪ್ರತಿಯೊಬ್ಬರ ಬಾಲ್ಯದಲ್ಲೂ..
ಸಹಜಕುತೂಹಲದ
ಕಾತುರದ ಘಟನೆಗಳ ನೆನಪು ಇದ್ದೇ ಇರುತ್ತದೆ... ಅಲ್ಲವೆ ?

ನಿಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ..
ನಮಗೆಲ್ಲ ಉಣ ಬಡಿಸಿ...

ಪ್ರೀತಿಯಿಂದ..
ಪ್ರಕಾಶಣ್ಣ..

ಸುಧೇಶ್ ಶೆಟ್ಟಿ said...

nimma blogige baradhe adheshtu dinagaLu aagi hodhuvu... bandhu Odhidhare adhe haasyadha rasadhauthaNa... Mundhina baagakke kaayuththa iddEne :)

Ittigecement said...

ಅಂತರಂಗದ ಮಾತುಗಳು...

ಇಂಥಹ ಘಟನೆಗಳಿಗೆ...
ಸ್ವಲ್ಪ ಹುಳಿ.. ಖಾರ..
ಮಸಾಲೆ..
ಮೂಲ ಘಟನೆ, ವ್ಯಕ್ತಿಗಳಿಗೆ ಬೇಸರವಾಗದ ಹಾಗೆ...

ಒಂದು ಒಗ್ಗರಣೆ..

ಸಾಕಲ್ಲವೆ...?

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು...

Ittigecement said...

ನೆನಪಿನ ಸಂಚಿಯಿಂದ...

ಚೀಟಿವ್ಯ್ವಹಾರವೆ ತಪ್ಪಲ್ಲವೆ ?
ನನ್ನಂಥಹ ಏನೂ ಅರಿಯದವನ ಹತ್ತಿರ ನಿಂಬೆ ಹುಳಿ ಪೆಪ್ಪರಮೆಂಟಿನ ಆಸೆ ತೋರಿಸಿ.
ಇದನ್ನು ಮಾಡಿಸುವದು ತಪ್ಪಲ್ಲವೆ ?

ಇನ್ನು ಮುಂದಿದೆ ಇದ್ದಿರುವದು...
ನಮ್ಮ ವಿಚಾರಣೆ...!!

ಪದ್ದಿ, ಯಂಕಟು ಅವರಿಗೆ ಹೇಗೆ ಮುಖ ತೋರಿಸುವದು ?

ಇದು ಬಹಳ ದೊಡ್ಡ ಸಮಸ್ಯೆ ಮತ್ತು ಅವಮಾನ... ! ಅಲ್ಲವಾ ?

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ನಿಮ್ಮ ಬ್ಲಾಗಿನಲ್ಲಿ
"ಐವತ್ತನೆ ಪೋಸ್ಟಿಗಾಗಿ" ನಮ್ಮೆಲ್ಲರ ಶುಭ ಹಾರೈಕೆಗಳು...

Ittigecement said...

ಗಂಗಾ ಚಿಕ್ಕಮ್ಮ...

"ತೊಟ್ಟಿಲು ಕಟ್ಟಿದ" ಬಿರುದು ನಿಮಗೆಲ್ಲ ಗೊತ್ತೇ ಇದೆ..

ಶಾರಿ ಮದುವೆ ಮನೆಯಲ್ಲಿ ಸಿಕ್ಕಿದಾಗ
ನನ್ನನ್ನು ತನ್ನ ಗಂಡನಿಗೆ ಹೀಗೆ ಪರಿಚಯ ಮಾಡಿಸಿದ್ದಳು..
"ಇಂವ ಚಡ್ಡಿಯಲ್ಲಿ ತೊಟ್ಟಿಲು ಕಟ್ಟುವ ಪ್ರಕಾಶಾ..."

ಬಾಯಿತುಂಬಾ ಎಲೆ ಅಡಿಕೆ ಅಗಿಯುವ "ಗಣಪ್ತಿ"
ಬಾಯಿತುಂಬಾ ನಕ್ಕುಬಿಟ್ಟಿದ್ದರು...!
ಬುಸಕ್ಕೆಂದು ನಕ್ಕಿದ್ದರೆ..
ಅವರ ಬಾಯಲ್ಲಿನ ಕೆಂಪುರಸ ಮೈಮೇಲೆ ಓಕಳಿಯಾಗುತ್ತಿತ್ತು !

ಹ್ಹಾ..ಹ್ಹಾ..ಹ್ಹಾ.. !

ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು

Ittigecement said...

ಬಾಲು ಸಾಯಿಮನೆ...

ಇದೀಗ ನಿಮ್ಮ ಬ್ಲಾಗ್ ನೋಡಿ ಬಂದೆ...
ವಿದೇಶದ ಹಳ್ಲಿಯ ಚಿತ್ರಣ, ವಿವರಣೆ ತುಂಬಾ ಸೊಗಸಾಗಿದೆ..
ಅಭಿನಂದನೆಗಳು..

ತೊಟ್ಟಿಲು ಕಟ್ಟುವದು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ಬರುತ್ತಾ ಇರಿ...

akshata said...

ಆಸ್ ಯುಸುಅಲ್ ಅದ್ಭುತ ಸರ್, ಪ್ರತಿಯೊಬ್ಬರಿಗೂ ತನ್ನ ಬಾಲ್ಯದ ನೆನಪಿರುತ್ತದೆ ನಿಜ ಆದರೆ ತುಂಬ ಕಡಿಮೆ ಜನ ತಮ್ಮ ಬಾಲ್ಯವನ್ನು ತುಂಟಾಟದಲ್ಲಿ ಕಳೆದು ಬೆಳೆದು ದೊಡ್ಡವರಾದಾಗ ಅದನ್ನು ನೆನೆಸಿಕೊಂಡು ಇತರರಿಗೂ ಹಾಸ್ಯದೌತಣ ಉಣಬಡಿಸುತ್ತಾರೆ ಅಲ್ಲವೆ? ಬೇಗ ಮುಂದುವರೆಸಿ, ಹೆಚ್ಚು ಥತ್ಪೆನ್ಸ್? ಬೇಡ.
ಅಕ್ಷತ.

Veena DhanuGowda said...

Nice one prakashanna...
really liked it

Ittigecement said...

ಸಾಗರಿ....

ಬಾಲ್ಯದ ದಿನಗಳು ಮತ್ತೆ ಸಿಗುವದಿಲ್ಲ...
ಆದರೆ..
ನೆನಪುಗಳು ಹಾಗಲ್ಲವಲ್ಲ...
ಸದಾ ಹಸಿರು...

ಬ್ಲಾಗ್ ಪ್ರೋತ್ಸಾಹಿಸುವವರ ಸಂಖ್ಯೆ ೨೦೦ ದಾಟಿದ್ದು ನನಗೂ ಬಹಳ ಖುಷಿಯಾಗಿದೆ...
ಬಹುಷಃ ಕನ್ನಡ ಬ್ಲಾಗಿನಲ್ಲಿ ಇದು ಮೊದಲನೆಯದೇನೋ..
ಗೊತ್ತಿಲ್ಲ...

ನಿಮ್ಮ ಪ್ರೀತಿಗೆ
ಸ್ನೇಹಕ್ಕೆ

ಧನ್ಯವಾದಗಳು...

Ittigecement said...

ಶಿವಪ್ರಕಾಶ್..

ಬಾಲ್ಯ..
ತುಂಟಾಟ...
ನಾವೆಲ್ಲರೂ ಮಾಡಿರ್ತೀವಿ..
ನಮ್ಮ ಹಿರಿಯರಿಗೆ ಕಷ್ಟ ಕೊಟ್ಟೇ ಕೊಟ್ಟಿರ್ತೀವಿ..

ನಮ್ಮನ್ನು ತಾಳ್ಮೆಯಿಂದ ಬೆಳೆಸಿದ್ದಾರಲ್ಲ...
ಅವರಿಗೆಲ್ಲ ಥ್ಯಾಂಕ್ಸ್ ಹೇಳಬೇಕು ಅಲ್ಲವಾ ?


ತೊಟ್ಟಿಲು ಇಷ್ಟವಾಗಿದ್ದಕ್ಕೆ ಧನ್ಯವಾದಗಳು....

Ittigecement said...

ಪರಾಂಜಪೆಯವರೆ...

ನಿಮ್ಮೊಡಗಿನ ಮಾತು..
ಕತೆ ತುಂಬಾ ಚೆನ್ನಾಗಿತ್ತು...
ಸಮಯ ಕಳೆದದ್ದೇ ಗೊತ್ತಾಗಲಿಲ್ಲ...

ತೊಟ್ಟಿಲು ಕಟ್ಟಿದ ಸಂದರ್ಭ ಇಷ್ಟಪಟ್ಟಿದ್ದಕ್ಕೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಶುಭಾ...

ಬಾಲ್ಯ ಕಳೆದು...
ಹರೆಯ ಹೊಕ್ಕುವ ಸಮಯ...
ಮುಗ್ಧತೆ ಇನ್ನೂ ಉಳಿದು..
ಕುತೂಹಲ ಕಾಡಿದ ಸಮಯ...

ಆ..
ಕುತೂಹಲ...
ಜೀವನದುದ್ದಕ್ಕೂ...
ಬೇರೆ..
ಬೇರೆ..
ಬಗೆಯಲ್ಲಿ..
ಬೇರೆ ಬೇರೆ..
ಬಣ್ಣಗಳಿಂದ...
ಕಾಡುವದೇ...
ಸೋಜಿಗ...!

ಬಹಳ ಚಂದದ ಪ್ರತಿಕ್ರಿಯೆ.. ಧನ್ಯವಾದಗಳು.. ಶುಭಾ...

Ittigecement said...

ಆಝಾದ್.. (ಜಲನಯನ..)

ಏನಪ್ಪಾ ಮಾಡಲಿ...?
ಈ ಕಥೆಯೇ ಹಾಗಿದೆ..
ಮುಂದಿನ ಕಂತಿನಲ್ಲಿ ಮುಗಿಸಿ..
ಮತ್ತೆ ಕೆಲವು ಕಥೆ ಬರೆಯುವ ಆಸೆ ಇದೆ...

ಪ್ರೋತ್ಸಾಹಕ್ಕೆ..
ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಚಿತ್ರಾ...

ಬಾಲ್ಯದಲ್ಲಿ..
ಕುತೂಹಲ..
ಹರೆಯದಲ್ಲಿ..
ಮಧ್ಯಮದಲ್ಲಿ..
ಮುದಿ..
ವಯಸ್ಸಿನಲ್ಲೂ..
ಕಾಡುವ..
ಕಾಮ
ಬಲು ಸೋಜಿಗ...!
ಒಂದೊಂದು ಹಂತದಲ್ಲೂ..
ಒಂದೊಂದು ಬಣ್ಣ...
ತಣಿಯದ ದಾಹ... !

ಪ್ರತಿಕ್ರಿಯೆಗೆ..
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಸುಮಂಗಲಾ...

ನೆನಪಿನ..
ಬುತ್ತಿ..
ಬಿಚ್ಚಿ..
ಸವಿದಷ್ಟೂ,...
ಸವಿ...ಸವಿ...!

ಅಲ್ಲವಾ?

ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಚುಕ್ಕಿ ಚಿತ್ತಾರ...

ಬೀಡಿಯಲ್ಲಿ ಸಣ್ಣ ಪಟಾಕೆ ಇಟ್ಟಿದ್ದು..
ಮಂಜಣ್ಣನ ಬಳಿ ಬೈಸಿಕೊಂಡಿದ್ದು..
ಇಂಥಹ ತುಂಟಾಟ ಎಲ್ಲರ ಬಾಲ್ಯದಲ್ಲೂ ಇರುತ್ತದೆ..

ನೆನಪಿಸಿಕೊಳ್ಳಿ..
ನಿಮ್ಮ ಬಾಲ್ಯದಲ್ಲೂ ಇದೆ..
ಇಂಥಹ ಬುತ್ತಿ...

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ಕ್ಷಣ ಚಿಂತನೆ..ಚಂದ್ರು...

ನಮ್ಮ ವಯಸ್ಸಿನ ಪ್ರತಿ ಹಂತದಲ್ಲೂ..
ಕಾಮ..
ಕುತೂಹಲವಾಗಿಯೇ ಇರುತ್ತದೆ..
ಉಳಿದು ಬಿಟ್ಟಿರುತ್ತದೆ..
ಬಣ್ಣ..
ಬದಲಾಯಿಸುತ್ತ..
ತೀರದ..
ದಾಹವಾಗಿ...
ಅಲ್ಲವೆ..?

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಮಾಲತಿಯವರೆ...

ತುಂಬಾ ಖುಷಿಯಾಯಿತು..
ಬರುತ್ತಾ ಇರಿ..
ನೀವೆಲ್ಲ ಬರೆಯುವ..
ಒಂದೆರಡು ಸಾಲು..
ನನಗೆ ಇನ್ನಷ್ಟು
ಉತ್ಸಾಹ.. ಕೊಡುತ್ತದೆ..
ಅದೇ..
ನನಗೆ ಟಾನಿಕ್ಕು..

ಧನ್ಯವಾದಗಳು...

Ittigecement said...

ಸುಧೇಶ್...

ನೀವು ಯಾವಾಗಲಾದರೂ..
ಬನ್ನಿ..
ಸ್ವಾಗತ..

ನೀವು ದೂರದ ಮುಂಬೈನಲ್ಲಿದ್ದರೂ..
ಬ್ಲಾಗ್ ಬಿಟ್ಟಿಲ್ಲವಲ್ಲ..
ಅದೇ ಸಂತೋಷ..

ಬರುತ್ತಾ ಇರಿ...
ನೀವೂ ಬರೆಯುತ್ತಿರಿ...

ಪ್ರೀತಿಯಿಂದ..
ಪ್ರಕಾಶಣ್ಣ..

Ittigecement said...

ಅಕ್ಷತಾ ದೇಶಪಾಂಡೆಯವರೆ...

ಬದುಕೇ..
ಹೀಗೆ..
ಕಹಿ
ವಾಸ್ತವದಲ್ಲಿ..
ಸಿಹಿ
ನೆನಪುಗಳು...
ಬರುತ್ತವೆ..
ತಂಗಾಳಿಯಂತೆ..
ಬೆವರನ್ನು..
ತಂಪಾಗಿಸುತ್ತವೆ..
ಸುಖಾನುಭವ ತರುತ್ತವೆ..

ದೂರದ ಊರಿಂದ..
ನಿಮ್ಮ ಸಂದೇಶ ಓದಿ ತುಂಬಾ ಖುಷಿಯಾಗಿತ್ತು..

ಮತ್ತೆ ಇಲ್ಲಿ ಪ್ರೋತ್ಸಾಹದ ನುಡಿಗಳು.. ಮತ್ತಷ್ಟು ಉತ್ಸಾಹ ಕೊಟ್ಟಿದೆ..

ಬರುತ್ತಾ ಇರಿ...

Ittigecement said...

ಪ್ರೀತಿಯಿಂದ ವೀಣಾ...

ಎಲ್ಲಿ ಹೋಗಿ ಬಿಟ್ಟಿದ್ದೀರಿ..?
ನಿಮ್ಮ ಬ್ಲಾಗ್ ಕೂಡ ಇಲ್ಲ..

ದಯವಿಟ್ಟು ಬರೆಯಿರಿ..

ನಿಮ್ಮ ಪ್ರೋತ್ಸಾಹಕ್ಕೆ..
ಧನ್ಯವಾದಗಳು..

ಬರುತ್ತಾ ಇರಿ..