Thursday, September 10, 2009

ಹೆಸರೇ... ಇಲ್ಲದ ... ಗುರುತು.. ಇರಬೇಕಿತ್ತು....!!

ಆರ್ಥಿಕ ಹಿಂಜರಿತದ ಈ ದಿನಗಳಲ್ಲಿ ಕೆಲಸದ ದಕ್ಷತೆ ಜಾಸ್ತಿಯಾಗಿ ಬಿಡುತ್ತದೆ..

ನಾಳೆಯೇ .. ಕಾಂಕ್ರೀಟು..
ನೋಡಿ ಬರೋಣ ಎಂದು ಬಿಲ್ಡಿಂಗ್ ಕಡೆ ಹೊರಟೆ..


ಎಲ್ಲರೂ ಮನೆಕಡೆ ಹೊರಟಿದ್ದರು...

ಗೋವು ಮಾತ್ರ ತನ್ನಪಾಡಿಗೆ ಕೆಲಸದಲ್ಲಿ ಮಗ್ನನಾಗಿದ್ದ...

"ಗೋವು.... ಟೈಮ್ ಆಯ್ತಲ್ಲಪಾ.. ಹೊರಡು.." ಅಂದೆ...

" ಸರ್... ಇರಿ.. ನಿಮ್ಮ ಹತ್ರ ಮಾತಾಡಬೇಕು...
ಸ್ವಲ್ಪ ಇರಿ.. ಟೀ ತರ್ತೇನೆ.."

ಎಂದು ಓಡಿ ಹೋಗಿ ಕಾಕಾ ಅಂಗಡಿಯಿಂದ ಪ್ಲಾಸ್ಕಿನಲ್ಲಿ ಟೀ ತಂದ...

"ಏನಪಾ .. ಗೋವು ... ಎಲ್ಲ ಹೇಗೆ ನಡಿತಿದೆ...?"
ಸಹಜವಾಗಿ ಕೇಳಿದೆ...

"ಸಾರ್... ಈ ಜಗತ್ತಿನಲ್ಲಿ "ದೇವರೇ.. ಇಲ್ಲದ ಧರ್ಮ ಇರಬೇಕಿತ್ತು... ಅಲ್ಲವಾ...?"

"ಏನಾಯ್ತೋ ನಿಂಗೆ...?.. "

" ಸಾರ್.. ಈ ದೇವರುಗಳಿಂದಲೇ... ಜಗತ್ತು ಹಾಳಾಗಿದೆ...
ಕ್ರಿಶ್ಚಿಯನ್ಸು.. ಮುಸ್ಲಿಮ್ಸು... ಹಿಂದೂಗಳು... ದೇವರುಗಳಿಂದಲೇ ಹಾಳಾಗಿರೋದು...
ಎಲ್ಲರೂ ಬಡಿದಾಡೋದು...
ಆ ದೇವರೇ... ಇಲ್ದೇ.. ಇದ್ದಿದ್ರೆ.. ಈ ಜಗಳ ಎಲ್ಲ ಆಗ್ತಿರಿಲಿಲ್ಲ..ಸಾರ್.."

"ಅದು ಹೌದು ...ನೋಡು.. ಬೆಲ್ಲದದಂಥಹ ಮಾತು.."

"ಅಷ್ಟೆ... ಸಾರ್...!
ಬಣ್ಣವೇ ಇಲ್ಲದ ಬೆಳಕು ಇರಬೇಕಿತ್ತು......

ಈ ಬಣ್ಣದಿಂದಲೇ ಎಲ್ಲ ಹಾಳಾಗ್ತಿರೋದು..."

"ಏನೋ... ಗೋವು.. ಆರಾಮಿಲ್ಲೇನೊ...?"

"ನೋಡಿ ಸಾರ್...
ಹಿಂದೂಗಳ ಕೇಸರಿ ಬಣ್ಣ...
ಕ್ರಿಶ್ಚ್ಯನ್ನರ ಬಿಳಿ ಬಣ್ಣ.. ಮುಸ್ಲಿಮ್ಮರ ಹಸಿರು ಬಣ್ಣ..
ಎಲ್ಲ ತಮ್ಮ.. ತಮ್ಮ ಬಣ್ಣಗಳಿಗೆ ಸಾಯ್ತಾರೆ...!

ಬದುಕಲಿಕ್ಕೆ...ಯಾಕೆ ಬಣ್ಣ ಬೇಕು ಸಾರ್...?

ಸಾಯಲಿಕ್ಕೆ.... ಸತ್ತ ಮೇಲೆ.... ಯಾವ ಬಣ್ಣವೂ ಬೇಡ...
ಸಾಯಲಿಕ್ಕೂ ಬೇಡದ ಬಣ್ಣ ಬದುಕಿಗೆ ಯಾಕೆ ಬೇಕು...?
ಬಣ್ಣವೇ.. ಇಲ್ಲದ ಬೆಳಕು ಇರಬೇಕಿತ್ತು...ಅಲ್ವಾ... ಸಾರ್..."

"ಏನು ಹೇಳ್ತಾ ಇದ್ದೀಯಾ... ಗೋವು...!!
ಸತ್ಯವಾದ ಮಾತು..
ಸಾವಿಗೂ.. ಬದುಕಿಗೂ ಬಣ್ಣವೇ ಬೇಡ ನೋಡು...
ಅಂದರೆ... ಎಲ್ಲಾ ಬ್ಲ್ಯಾಕ್ ಎಂಡ್ ವೈಟು...
ಕಪ್ಪು.. ಬಿಳುಪು ಇರಬೇಕು ಅನ್ನು..."

"ಕಪ್ಪೂ... ಬಿಳುಪೂ ಬಣ್ಣವೇ ಅಲ್ಲವಾ...?
ಆಫ್ರಿಕಾದಲ್ಲಿ...
ದೊಡ್ಡ... ಶ್ರೀಮಂತ... ಧರಿದ್ರ ದೇಶ ...
ಅಮೇರಿಕಾದಲ್ಲೂ ಕಪ್ಪು, ಬಿಳುಪಿನ ಸಮಸ್ಯೆ ಅಲ್ಲವಾ...?

ಯಾವುದೇ ಬಣ್ಣವೇ ಇರಬಾರದಾಗಿತ್ತು..."

ನನಗೆ ತಲೆ ಕೆಡಲಿಕ್ಕೆ ಶುರುವಾಯ್ತು...

ಈ ಹುಡುಗನಿಗೆ ಏನಾಗಿದೆ...??
ವಿಚಿತ್ರವಾಗಿ ಮಾತಾಡ್ತಾ ಇದ್ದಾನಲ್ಲ.. ಎಂದು....

ನೋಡೋಣ ಸ್ವಲ್ಪ ಕಾಲೆಳೆಯುವ ಅಂತ.. ವಿಚಾರ ಮಾಡಿದೆ...

"ಬಣ್ಣವೇ ಇಲ್ದೇ ಇದ್ರೆ ಬದುಕಿಗೆ ಎಲ್ಲಿದೇ ಚಂದ...?
ಗೋವು...

ಬದುಕಿನ ಸ್ವಾರಸ್ಯವೇ ಬಣ್ಣ ಅಲ್ಲವೇನೊ...?
ಬಣ್ಣಗಳು ಚಂದ...ಕೆಂಪು..ಹಸಿರು.. ಗುಲಾಬಿ...!"

"ಸಾರ್.... ಚಂದ ಯಾರು ನೋಡ್ತಾರೆ...?
ಹೊಟ್ಟೆ ತುಂಬಿದವರು...!
ಹಸಿವು ಇರುವವನಿಗೆ ಚಂದ ಕಾಣಿಸೋದಿಲ್ಲ... ಸಾರ್...!
ಅವನಿಗೆ ಅದರ ಅಗತ್ಯವೂ ಇಲ್ಲ...
ಬಣ್ಣ... ಬಣ್ಣದ ಬದುಕು..
ಅಂದ.. ಚಂದ...

ಎಲ್ಲ ಹೊಟ್ಟೆ ತುಂಬಿದವರಿಗೆ... ಸಾರ್...!
ಹಸಿವಿಗೆ ಧರ್ಮವೇ.. ಇಲ್ಲ ಸಾರ್...!
ಅದಕ್ಕೆ ಧರ್ಮವೇ ಬೇಕಿಲ್ಲ..."

ಈ ಗೋವು ಎಲ್ಲಿಂದಲೋ ಎಲ್ಲಿಗೋ ಹೋಗ್ತಾ ಇದ್ದಾನಲ್ಲ...!
ವಿಚಿತ್ರವಾದ ಅವನ ವಾದ ಸರಣಿ ನನಗೆ ಕುತೂಹಲ ಹುಟ್ಟಿತು....

"ಏನೋ ಹಾಂಗದ್ರೆ...?
ಜಗತ್ತಿನಲ್ಲಿ ಹಸಿವೆ ಇದೆ ಅಂತ...
ಹೊಟ್ಟೆ ತುಂಬಿದವರಿಗೆ ಬಣ್ಣ ಬೇಡವಾ,,?
ಬಣ್ಣದ ಬದುಕು ಬೇಡವೇನೋ...?
ಏನಾಯ್ತೋ ನಿಂಗೆ..? ಯಾಕೋ ತಲೆ ಬಿಸಿ ಮಾಡ್ಕೊಂಡಿದ್ದೀಯಾ...?"

" ಸಾರ್... ಈ ಬಿಸಿನೇ ಇರಬಾರದು...
ಬಿಸಿನೇ...ಇಲ್ದಿರೋ...ಬೆಂಕಿ ಇರಬೇಕು...
ಈ ಬಿಸಿನೇ ಸುಡೋದು... ಸಾಯ್ಸೋದು...!
ಮನಸ್ಸನ್ನೂ.. ಸುಡ್ತದೆ...
ಹೃದಯಾನೂ ಸುಡ್ತದೆ..

ಇರಲಿಕ್ಕೂ ಬಿಡೋದಿಲ್ಲ... ಸಾಯಲಿಕ್ಕೂ ಬಿಡೋದಿಲ್ಲ..."

"ಗೋವು... ನಿಜ ಹೇಳು ಏನಾಯ್ತು..?
ಹೀಗೆಲ್ಲ ಒಗಟಾಗಿ ಮಾತಾಡ ಬೇಡ.. ಏನಾಯ್ತು...?"

"ಸಾರ್...
ನನ್ನ ಅಪ್ಪ ನನಗೆ ಮದುವೆ ಆಗಲಿಕ್ಕೆ ಒತ್ತಾಯ ಮಾಡ್ತಾ ಇದ್ದಾನೆ...

ನಂಗೆ ಇಷ್ಟ ಇಲ್ಲ...
ನಂಗೆ ಮದುವೆನೇ.. ಬೇಡ..

ಲಿಂಗ ಇಲ್ದಿರೋ ಮನುಷ್ಯ ಜಾತಿ ಇರ್ಬೇಕಿತ್ತು...
ಗಂಡು.. ಹೆಣ್ಣು ಅಂತ ಇರಬಾರದಿತ್ತು..
ಈ ಮದುವೆ.. ಮಕ್ಕಳು.. ಸಂಸಾರ.. ಸಮಸ್ಯೆನೇ ಇರ್ತಿರಲಿಲ್ಲ...."

" ಯಾವ ವಯಸ್ಸಿನಲ್ಲಿ ಏನು ಆಗಬೇಕೊ ಅದು ಆಗ ಬೇಕು...
ನಿಂಗೆ.. ಮದುವೆ ಆಗಲಿಕ್ಕೆ ಏನು ತೊಂದ್ರೆ...?"

"ಸಾರ್...
ಈಗಿನ ಹೆಣ್ಣು ಮಕ್ಕಳು ಅತ್ತೆ ,ಮಾವನ್ನ ಸರಿಯಾಗಿ ನೋಡಿಕೊಳ್ಳೋದಿಲ್ಲ...
ಅವರಿಗೆ ತಮ್ಮ ವಯಕ್ತಿಕ ಬದುಕೇ ಮಹತ್ವ...
ನಾನೂ ನನ್ನ ಫ್ರೆಂಡು.. ಸಂಬಂಧಿಕರ ಮನೆಗಳಲ್ಲಿ ನೋಡಿದಿನಿ...

ಅತ್ತೆ, ಮಾವಂದಿರ ಬಗೆಗೆ ಅವರಿಗೆ ಸ್ವಲ್ಪವೂ ಗೌರವ ಇರೋದಿಲ್ಲ..
ಗಂಡನ ಮನಸ್ಸನ್ನೂ ತಿರುಗಿಸಿ ಬಿಡ್ತಾರೆ...
ಆ ಗಂಡನಿಗೂ ಹೆಂಡತಿಗೆ ಹೊಂದಿಕೊಳ್ಳೋ ...
ಅನಿವಾರ್ಯ ಸ್ಥಿತಿ ತಂದಿಟ್ಟು ಬಿಡ್ತಾರೆ..."


" ಎಲ್ಲರೂ ಹಾಗಿರೊಲ್ಲ... ಗೊತ್ತಿರೋ ಹೆಣ್ಣು ನೋಡಿ ಮದುವೆ ಆಗ ಬೇಕು..."

"ಅಲ್ಲೇ ಸಾರ್... ಇರೋದು...
ನಮ್ಮ ಮೇಸ್ತ್ರಿ ಮಾವನ ಮಗಳು ನಮಗೆ ಸಣ್ಣ ಇರುವಾಗಿಲಿನಿಂದ ಗೊತ್ತು..
ಅವಳು ನನ್ನ ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ತಾಳೆ...
ನಮ್ಮ ಮನೆ ಸ್ಥಿತಿ ಎಲ್ಲ ಅವಳಿಗೆ ಗೊತ್ತು...
ಅವಳು ನನಗೆ ಇಷ್ಟ..
ನಾನು ಅಂದರೆ ಅವಳಿಗೂ ಇಷ್ಟ...."


"ಸರಿ ಇನ್ನೇನು...?
ಇಬ್ಬರ ಬಳಿಯೂ ನಾನು ಮಾತಾಡ್ತೇನೆ..."


"ಇಲ್ಲ ಸಾರ್...
ಇಬ್ಬರೂ ಹಾವು... ಮುಂಗುಸಿ ಥರ ಇದ್ದಾರೆ..
ನಮ್ಮ ಜಾತಿ.. ಭಾಷೆಗಳು.. ಬೇರೆ.. ಬೇರೆ..
ಹೃದಯಕ್ಕೆ ಬೇಡದ ಜಾತಿಯನ್ನು ಯಾರು ಮಾಡಿದ್ದು... ಸಾರ್...?
ನನ್ನ ಅಪ್ಪನಿಗೆ ಇತ್ತೀಚೆಗೆ ಮೇಸ್ತ್ರಿ ಕಂಡ್ರೆ ಆಗಲ್ಲ...
ಇನ್ನು ಮೇಸ್ತ್ರಿ ಮಾವನಿಗೆ..
ನನ್ನ ಹೆಸರು ಕೇಳಿದ್ರೆ.. ಆಗೋದಿಲ್ಲ.."


"ಯಾಕೆ...?"

"ಸರ್....ಜಗತ್ತಿನಲ್ಲಿ..
ಮನುಷ್ಯರಿಗೆ...ಈ ಹೆಸರೇ... ಇರಬಾರ್ದು...
ಹೆಸರೇ ಇಲ್ದಿರೋ ಗುರುತು ಇರಬೇಕಿತ್ತು...
ಒಂದು ಮನಷ್ಯನನ್ನು ನೋಡಿದ್ರೆ...
ಪಕ್ಕದಲ್ಲಿ ಕಂಪ್ಯೂಟರನಲ್ಲಿ ಬರ್ತದಲ್ಲಾ..

ಆ...ಥರಹ ಒಂದು ಸ್ಕ್ರೀನ್ ಬರ್ಬೇಕು..
ಅದರಲ್ಲಿ ಅವನ ಒಳ್ಳೇ ಕೆಲಸಗಳು.. ಕೆಟ್ಟ ಕೆಲಸಗಳು ಬಂದು ಬಿಡಬೇಕು...
ಜನ ಅವನ ಒಳ್ಳೆಯ ಕೆಲಸದಿಂದ ಗುರುತು ಹಿಡಿಯ ಬೇಕಿತ್ತು...

ಹೆಸರೇ ಇಲ್ದಿರೊ ಗುರುತು ಇರಬೇಕಿತ್ತು..."

"ಅದಕ್ಕೂ ... ನಿನ್ನ ವಿಷ್ಯಕ್ಕೂ ಏನೋ ಸಂಬಂಧ...?"

"ಸಾರ್.. ನಾಲ್ಕಾರು ವರ್ಷದ ಹಿಂದೆ..
ನಾನೊಂದು ಹುಡ್ಗಿಗೆ ಲೈನ್ ಹೊಡಿತಿದ್ನಂತೆ..

ಅದನ್ನು ಮೇಸ್ತ್ರಿ ಮಾವ ನೋಡಿದ್ನಂತೆ...
ಅಲ್ಲಿಂದ ಅವನಿಗೆ ನನ್ನ ಮೇಲೆ ಒಳ್ಳೆಯ ಅಭಿಪ್ರಾಯ ಇಲ್ಲ..

ನಾನು ಬದಲಾಗಿದ್ದೇನೆ... ಸರ್...
ನಾನು ಆಥರಹ ಇಲ್ಲ...
ಜನ ಯಾಕೆ ಹಳೆಯದನ್ನೇ ಹಿಡಕೊಂಡು ಕೂತಿರ್ತಾರೆ...?
ಬದಲಾವಣೆ ಕಾಣೋದಿಲ್ವಾ...? ಯಾಕೆ ನೋಡೋದಿಲ್ಲಾ...?"

"ಓಹೊ .. ಇದೋ ಸಮಾಚಾರ..!
ನಾನು ಏನು ಮಾಡ ಬೇಕು...? ಹೇಳು..."


"ಸಾರ್...
ಸಧ್ಯದಲ್ಲೇ ನನ್ನಪ್ಪ ನಿಮ್ಮ ಹತ್ರ ಮಾತಾಡುವವರಿದ್ದಾರೆ..

ನನ್ನನ್ನು ಮದುವೆಗೆ ಒಪ್ಪಿಸಲಿಕ್ಕೆ..
ನೀವು ಹೇಳಿದ್ರೆ ನಾನು ಒಪ್ತೀನಿ ಅಂತ..
ನಾನು ಮದುವೆ ಆದ್ರೆ ಮೇಸ್ತ್ರಿ ಮಾವನ ಮಗಳನ್ನು..
ಇಲ್ಲ ಅಂದ್ರೆ ನಂಗೆ ಮದುವೇನೇ.. ಬೇಡ..

ಈ ಮೇಸ್ತ್ರಿ ಮಾವ... ನನ್ನಪ್ಪ ನಮ್ಮ ಮದುವೆಗೆ ಒಪ್ಪೋದಿಲ್ಲ...

ನನಗೆ ಹೆಚ್ಚಿಗೆ ಒತ್ತಾಯ ಮಾಡಿದ್ರೆ ದೇಶಾಂತರ ಹೊರಟು ಹೋಗ್ತೇನೆ..."

" ಛೇ.. ಹಾಗೆಲ್ಲ ಮಾತಾಡ ಬೇಡ...
ನಿಮ್ಮಿಬ್ಬರ ಮದುವೆ ನಾನು ಸಹಾಯ ಮಾಡ್ತೇನೆ..
ನೋಡೋಣ ಇರು..."

ನಾನೇನೋ ಧೈರ್ಯ ಆವನಿಗೆ ಹೇಳಿದೆ....

ಹೇಗಾದರೂ ಮಾಡಿ ಇವರಿಬ್ಬರ ಮದುವೆ ಮಾಡಿಸ ಬೇಕಲ್ಲ.....!

ಮೊದಲು ಇವನನ್ನು ಇಷ್ಟಪಡುವ ಆಹುಡುಗಿಯ ಸಂಗಡ ಮಾತನಾಡ ಬೇಕು...!
ಅವಳ ಮನಸ್ಸಲ್ಲಿ ಏನಿದೆ...?
ಅದನ್ನು ಮೊದಲು ತಿಳಿದು ಕೊಳ್ಳ ಬೇಕು...

ಆದರೆ...

ಭೇಟಿಯಾಗುವದು...
ಹೇಗೆ...?

ಎಲ್ಲಿ..?



( ನಮ್ಮ ಗೋವು ಅಂದರೆ ನಿಮಗೆ ನೆನಪಾಯ್ತಾ...?
ಅದೇ ಪಲ್ಸರ್ ಬೈಕ್... ಸೈಕಲ್ ಬೆಲ್ಲು..!!

ಇಲ್ಲಿ ನೋಡಿ...

ಜನಕ್ಕೆ ನಮ್ಮ ಬಗ್ಗೆ ಒಳ್ಳೆ ಅಭಿಪ್ರಾಯ ಬರಲಿಕ್ಕೆ .. ನಮ್ಮ ಒಡನಾಟವಷ್ಟೇ.. ಸಾಲೋದಿಲ್ಲ......


ಚಂದವಾದ.. ಮನೋಜ್ಞವಾದ ಪ್ರತಿಕ್ರಿಯೆಗಳಿವೆ...
ದಯವಿಟ್ಟು ಓದಿ

65 comments:

Anonymous said...

hmm nice..

ibrannu elladru meet agi matadu, opge adre munduvari anna..

nice one related to this generation.. :)

Ee barahakke inspiration yaaru ???

Ittigecement said...

ಶ್ರೀ...

ನನ್ನ ಪುಸ್ತಕಕ್ಕಿಂತ ಈ "ಗೋವಿನ ಮದುವೆ" ನನ್ನ ತಲೆ ಕೆಡಿಸಿದೆ..
ಈ ಹುಡುಗ ನನಗೆ ಇಷ್ಟವಾಗಿದ್ದಾನೆ..
ನನ್ನ ಪ್ರಯತ್ನ ಮಾಡುತ್ತೇನೆ...
ನೋಡೋಣ ಏನಾಗುತ್ತದೆಂದು...

ಅವನ ಮಾತುಗಳು ತುಂಬಾ ವಿಚಿತ್ರವಾಗಿ ಕಂಡರೂ..

ನನಗೆ ಬಹಳ ಕಾಡುತ್ತಿದೆ..
ಅದರಲ್ಲಿರುವ ಕಟುಸತ್ಯದ ವಾಸ್ತವ...!

ಈ ಲೇಖನಕ್ಕೆ "ಗೋವು"ನೇ... ಸ್ಪೂರ್ತಿ...

ಪ್ರತಿಕ್ರಿಯೆ ಪ್ರೋತ್ಸಾಹಕ್ಕೆ ವಂದನೆಗಳು...

ಪಾಚು-ಪ್ರಪಂಚ said...

ಅಬ್ಭಾ..ಎಂಥಹ ತರ್ಕ, ಬಹುಶ: ನಿಮ್ಮ ಗೋವುಗೆ ಮಾತ್ರ ಸಾಧ್ಯವೇನೋ ಈ ರೀತಿಯ ಯೋಚನೆ ಮಾಡಲು.

ಪ್ರಕಾಶಣ್ಣ, ಈ ಲೇಖನವನ್ನು ೨ ಬರಿ ಓದಿದೆ, ಈ "ವಿಚಿತ್ರ ಸತ್ಯ" ಇನ್ನೂ ತಲೆ ಕೊರೆಯುತ್ತಿದೆ. ಹಾಗೆಯೇ, ಈ ರೀತಿ ತಲೆಯಲ್ಲಿ ಹುಳ ಬಿಡುವಂತೆ ಬರೆಯಲು ನೀವೇ ಸೈ.!

ಮುಂದುವರೆಸಿ ಮದುವೆಗೆ ನಾವು ಹಾಜರ್...!!

Ittigecement said...

ಪ್ರಶಾಂತ್..(ಪಾಚು ಪ್ರಪಂಚ..)

ಇದು ನಡೆದದ್ದು ಆದಿತ್ಯವಾರ...
ಆ ದಿನ ಮೈತುಂಬಾ ಕೆಲಸ.. ಮಧ್ಯರಾತ್ರಿಯವರೆಗೆ ಕುಳಿತು ಈ ಲೇಖನ ಬರೆದೆ...

ನನಗೆ ಅತ್ಯಂತ ಸವಾಲು, ಚಾಲೇಂಜ್.. ಎನಿಸಿದ ಲೇಖನ ಇದು..

ಅವನ ಮಾತುಗಳಿಗೆ ಪಾಲಿಷ್ ಮಾಡಿ ನಿಮ್ಮೆದುರಿಗೆ ಇಟ್ಟಿದ್ದೇನೆ..
ತನ್ನ ಮದುವೆ..
ಅದಕ್ಕಿರುವ ಅಡ್ಡಿ..ಆತಂಕಗಳನ್ನು ಹೇಳಲು..
ಎಷ್ಟು ಬುದ್ಧಿವಂತಿಕೆಯಿಂದ ನನ್ನ ಬಳಿ ಪ್ರಸ್ತಾಪ ಮಾಡಿದ್ದಾನೆ..!!

ಅವನ ಪ್ರಾಮಾಣಿಕತೆ ನನಗೆ ಇಷ್ಟಾವಾಯಿತು...

ನನ್ನ ತಲೆಗೆ ನಾನೇ ಹುಳ ಬಿಟ್ಟು ಕೊಂಡಂತಾಗಿದೆ...

ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...

ಪ್ರೋತ್ಸಾಹಕ್ಕೆ ಧನ್ಯವಾದಗಳು...

ಸುಮ said...

ಚೆನ್ನಾಗಿದೆ,ಮುಂದಿನ ಭಾಗ ಬೇಗ ಬರೆಯಿರಿ.ನಿಮ್ಮ ಗೋವು ಹೇಳುವ ರೀತಿಯ ಸಮಾಜ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಲ್ಲವೆ ಪ್ರಕಾಶಣ್ಣ?

Ittigecement said...

ಸುಮಾ.. ಸುಧಾಕಿರಣ್‍ರವರೆ..

ದೇವರು ಅಷ್ಟೊಂದು ಅನಿವಾರ್ಯವಾ...?
ದೇವರಿಲ್ಲದ ಧರ್ಮವಿದ್ದಿದ್ದರೆ .. ಕಲ್ಪನೆ ಕೂಡ ಚಂದವೇ..!

ಬಡಿದಾಡುವದು ಮನುಷ್ಯನ ಮೂಲ ಸ್ವಭಾವ...
ಹುಟ್ಟುಗುಣ..

ಅದಕ್ಕೊಂದು ನೆಪ, ಕಾರಣ ಬೇಕು..
ಈ ದೇವರು.. ಧರ್ಮ ಅವನಿಗೆ ನೆಪಗಳು ಅಷ್ಟೆ..

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಗೋವು ವಿನ ಮಾತಿನ ಸರಣಿ ನಿಜಕ್ಕೂ ಸಮಾಜಕ್ಕೆ ಹಿಡಿದ ಸತ್ಯವಲ್ಲವೇ?
ಅವನು ಹೇಳಿದ್ದೆಲವೂ ನಿಜ,

ಪುಣ್ಯಕ್ಕೆ ದೇಹವೇ ಇಲ್ಲದ ಮನುಷ್ಯರಿರಬೇಕಿತ್ತು ಎಂದು ಹೇಳಲಿಲ್ಲ ನಮ್ಮ ಪುಣ್ಯ,

ಚಂದ ದ ಬರಹ

ಮೂರ್ತಿ ಹೊಸಬಾಳೆ. said...

ಪ್ರಕಾಶಣ್ಣ,
ಇದನ್ನ ನಾನು ಗೋವುವನ ಬಗ್ಗೆ ನಿಮ್ಮ ಮೊದಲ ಬರಹದ ಕಾಮೆಂಟ್ ನಲ್ಲೇ ಹಾಕಿದ್ದೇನೆ.

Ittigecement said...

ಡಾ. ಗುರುಮೂರ್ತಿಯವರೆ.. (ಸಾಗರದಾಚೆ ಇಂಚರ)

ನನಗೆ ಸೋಜಿಗ ಎನಿಸಿದ್ದು ಬಣ್ಣವಿಲ್ಲದ ಬೆಳಕು...

ವಾಹ್...!

ಅವನ ತರ್ಕಸರಣಿಯ ಗೂಢಾರ್ಥ ಅವನಿಗೆ ಬಹುಷಃ ಗೊತ್ತಿಲ್ಲ
ಆತ ಹೇಳಿದ್ದು ತನ್ನ ಮದುವೆಗೆ ಸಂಬಂಧ ಪಟ್ಟು...

ಅವನ ಮಾತನ್ನು ಅಲ್ಲಿಯೇ ನೋಟ್ ಮಾಡಿಕೊಂಡೆ...

ತತ್‍ಕ್ಷಣ ಮಲ್ಲಿಕಾರ್ಜುನ್‍ರವರಿಗೆ ಮಾತಾಡಿ ಈ ಘಟನೆ ಹೇಳಿದೆ...
ಅವರು ಇದನ್ನು ಬ್ಲಾಗಿನಲ್ಲಿ ಬರೆಯಲು ಆಗ್ರಹ ಮಾಡಿದರು..

ನಮ್ಮ ಗೋವು.." ದೇಹವೇ ಇಲ್ಲದ ಮನುಷ್ಯರ" ಬಗೆಗೆ ಮಾತಾಡ ಬಲ್ಲ ...

ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...

ಮುಸ್ಸ೦ಜೆ said...

ಪ್ರಕಾಶಣ್ಣ,

ತು೦ಬಾ ಚೆನ್ನಾಗಿ ಬರೆದಿದ್ದೀರಿ. ಗೋವಿನ ಪ್ರತೀ ಮಾತಿನಲ್ಲೂ ಅದ್ಭುತವಾದ ಅರ್ಥ ಅಡಗಿದೆ.

ಬರಹ ಇಸ್ಟವಾಯ್ತು.

sunaath said...

ಪ್ರಕಾಶ,
ಗೋವೂನ ತರ್ಕಬದ್ಧ ವಿಚಾರಸರಣಿ ತುಂಬ ಚೆನ್ನಾಗಿದೆ. ಬೆಳಕಿನ ಬಣ್ಣದಿಂದ ಪ್ರಾರಂಭ ಮಾಡಿ, ತನ್ನ ಮದುವೆವರೆಗೂ ಚೆನ್ನಾಗಿ ತರ್ಕ ಕಟ್ಟಿದ್ದಾನೆ.
ಪ್ರಕಾಶ, ಇವನ ಮದುವೇನೊಂದು ಇವನ ಪ್ರೀತಿಯ ಹುಡುಗಿ ಜೊತೆ ಮಾಡಿಸಿ ಪುಣ್ಯ ಕಟ್ಟಿಕೊಳ್ರಪ್ಪಾ!

ಸವಿಗನಸು said...

ಪ್ರಕಾಶಣ್ಣ,
ಗೋವುವಿನ ಮಾತಿನಲ್ಲಿ ನಿಜವಾಗಲೂ ಅರ್ಥ ಇದೆ.
ಗೋವು ಹೇಳುವ ರೀತಿಯ ಸಮಾಜ ಇದ್ದಿದ್ದರೆ ಚೆನ್ನಾಗಿರುತ್ತಿತ್ತು....
ತು೦ಬಾ ಚೆನ್ನಾಗಿ ಬರೆದಿದ್ದೀರಿ..
ಮುಂದಿನ ಭಾಗಕ್ಕೆ ಕಾಯುತ್ತ....

Vish said...

Thumba ehnnagide nimma bharah. Munde bareyari

Ramya Hegde said...

ಪ್ರಕಾಶಣ್ಣ..,
ನಿಮ್ಮ ಗೋವಿನದು ತರ್ಕ ಬದ್ಧವಾದ ಮಾತು.ಆದ್ರೆ ಅವನು ಹೇಳಿದಂತೆ ಜಗತ್ತು ಇದ್ದ್ರೆ ಜೀವನದಲ್ಲಿ ಸ್ವಾರಸ್ಯವೇ ಇರ್ತಿಲ್ಲೆ ಅಂತ ಅನ್ಸ್ತು ನಂಗೆ. ಹೇಗಾದ್ರೂ ಮಾಡಿ ಅವರಿಬ್ಬರ ಅಪ್ಪಂದಿರಿಗೆ ಸಂಧಾನ ಮಾಡ್ಸಿ ಗೋವಿನ ಮದ್ವೆ ಮಾಡ್ಸಿ.

Ittigecement said...

ಮೂರ್ತಿ ಹೊಸಬಾಳೆ...

ನಿಮ್ಮ ಊಹೆ ಸರಿಯಾಯಿತು..
ಆ ಹುಡುಗ ತುಂಬ ಪ್ರಾಮಾಣಿಕ.. ಅದು ಈ ಕಾಲದಲ್ಲಿ ತುಂಬ ದುಬಾರಿ..

ಗೋವು ವಾರದಲ್ಲಿ ಎರಡುದಿನ ಲೈಬ್ರರಿಗೆ ಹೋಗಿ ಪುಸ್ತಕಗಳನ್ನು ಓದುತ್ತಾನಂತೆ..
ದಿನಾ ಪೇಪರ್ ಓದುತ್ತಾನೆ..

ಅವನ ರಾಜಕೀಯದ ವಿದ್ಯಮಾನಗಳ ದೃಷ್ಟಿ ತುಂಬ ಮಜವಾಗಿದೆ...

ಅದನ್ನು ಇನ್ನೊಮ್ಮೆ ಬರೆಯುವೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

ಮನಸು said...

ಪ್ರಕಾಶಣ್ಣ,
ಗೋವುವಿನ ಮಾತಿನಲ್ಲಿ ಎಷ್ಟು ಅರ್ಥವಿದೆ. ನೀವು ಮದುವೆ ಮಾಡಿಸುವ ಕೆಲಸ ಬೇರೆ ಮಾಡ್ತೀರ ಒಳ್ಳೆಯ ಕೆಲಸ ಹ ಹ ಹ ಒಳ್ಳೇದಾಗಲಿ.. ಮುಂದಿನ ಭಾಗ ಏನಾಯಿತೆಂದು ಕಾಯುತ್ತಲಿದ್ದೇವೆ.
ಧನ್ಯವಾದಗಳು

Unknown said...

ಗೋವು ಎಂದಾಕ್ಷಣ ಹಿಂದಿನ ಕಥೆ ಎಲ್ಲಾ, ಪಲ್ಸರ್ ಬೈಕ್ ಸೈಕಲ್ ಬೆಲ್, ಕನಸುಕಣ್ಣಿನ ಹುಡುಗ ನೆನಪಾದ. ಓದುತ್ತಿದ್ದಂತೆ ಮನುಷ್ಯನ ಆಸೆಯ ವೈಶಾಲ್ಯತೆ ನನಗೆ ಬೆರಗು ಮೂಡಿಸಿತು. ಇಲ್ಲಿ ಬರುವ
ಹಸಿವು ಇರುವವನಿಗೆ ಚಂದ ಕಾಣಿಸೋದಿಲ್ಲ... ಸಾರ್...!
ಅವನಿಗೆ ಅದರ ಅಗತ್ಯವೂ ಇಲ್ಲ...
ಬಣ್ಣ... ಬಣ್ಣದ ಬದುಕು..
ಅಂದ.. ಚಂದ...
ಎಲ್ಲ ಹೊಟ್ಟೆ ತುಂಬಿದವರಿಗೆ... ಸಾರ್...!
ಹಸಿವಿಗೆ ಧರ್ಮವೇ.. ಇಲ್ಲ ಸಾರ್...!
ಈ ಸಾಲುಗಳು ನಮ್ಮನ್ನು ಚಿಂತನೆಗೆ ತಳ್ಳುತ್ತವೆ. ನಿಮ್ಮ ಲೇಖನ ಪೋಸ್ಟ್ಟ ಾಗುವುದಕ್ಕೆ ಬಹುಶಃ ಇಪ್ಪತ್ತನಾಲ್ಕು ಗಂಟೆಗಳ ಹಿಂದೆ ಒಂಚು ಚರ್ಚ್ ಮೇಲೆ ಧಾಳಿ ನೆಡೆದಿದೆ! ಇದೆಲ್ಲಾ ಹೊಟ್ಟೆ ತುಂಬಿದವರ ಕೆಲಸ. ಹೊಟ್ಟೆಗಿಲ್ಲದವರು ಯಾವ ಧರ್ಮದಲ್ಲಿದ್ದರೂ ಅವರ ೋಟ ಗುರಿ ಎಲ್ಲಾ ಹೊಟ್ಟೆ ತುಂಬಿಸುವದಕ್ಕಷ್ಟೇ ಸೀಮಿತವಾಗಿರುತ್ತದೆ; ಧರ್ಮ ನೆನಪಾಗುವುದಿಲ್ಲ.

umesh desai said...

ಹೆಗಡೇಜಿ ನಿಮ್ಮ ಗೋವು ನ ನಿಲುವೇನೋ ಸರಿ...ಆದರೆ ಹೀಗಾಗಲು ಸಾಧ್ಯವೇ ನಿಜ ತಲೆಯಲ್ಲಿ ಹುಳ ಬಿಟ್ಟುಕೊಂಡು ನೋಡಬೇಕು..ಬಹಳ ಅರ್ಥಗರ್ಭಿತ ವಿಚಾರ ಅವನದು ಪ್ರಶ್ನೆ ಏನೋ ಕೇಳೀರಿ...ಉತ್ತರದ ಹುಡುಕಾಟ ಆಯುಷ್ಯ ವಿಡೀ
ಸಾಗಬಹುದೇನೋ....

Unknown said...

ಏನೂ ಹೇಳುವುದು ಎ೦ದು ಗೊತ್ತಾಗುತ್ತಿಲ್ಲ . ಅವನ ವಾದ ಸರಿ ಇದೆ . ಅವನು ಹೇಳಿದ ಮೇಲೆ ನಾನು ನಮ್ಮ ಬಗ್ಗೆ ವಿಮರ್ಶೆ ಮಾಡ ಬೇಕಾದ೦ತಹ ಸ್ಥಿತಿ. ನಾವು ಬರಿ ಅಕ್ಷರಸ್ಥರೆ ? ಅಥವಾ ವಿದ್ಯಾವ೦ತರೆ ಎ೦ದು ?
ಸೊಗಸಾದ ಬರಹ ..

ಶಿವಪ್ರಕಾಶ್ said...

ಪ್ರಕಾಶ್ ಅವರೇ,
ಗೋವು ಬಹಳ ಲೋಕಜ್ಞಾನಿಯಾಗಿ ಮಾತಾಡಿ ತನ್ನ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾನೆ. ಚತುರ.
ಅವನ ಮದುವೆಗೆ ಬೇಕಾದ ಸಹಾಯ ಮಾಡಿ. ನೀವು ಮಾಡದೇ ಇದ್ರೆ ಅವನು ಆ ಹುಡುಗಿ ಜೊತೆ ಓಡಿ ಹೋಗಿ ಬಿಡ್ತಾನೆ.

Unknown said...

ಮತ್ತದೇ ಕೆಲಸದ ಕಾರಣ, ಬ್ಲಾಗ್ ಓದಲು ಬರೆಯಲು, ಕೊನೆಗೆ ಕೆರೆದುಕೊಳ್ಳಲೂ ಸಮಯ ಸಿಗಲಿಲ್ಲ... ಇವತ್ತು ನಿಮ್ಮ ಬ್ಲಾಗ್ ಓದಿದೆ... ಗೋವು ಮದುವೆ ಬೇಗನೆ ನಡೆಯಲಿ ..ಊಟ ನಮಗೆಲ್ಲ ನೀವೇ ಹಾಕಿಸಬೇಕು...:) ಬಣ್ಣವೇ ಇಲ್ಲದ ಬೆಳಕು... ದೇವರೇ ಇಲ್ಲದ ಜಗತ್ತು... ವಾಹ್..ಮೆಚ್ಚಬೇಕು... ಎಂತಹ ಸುಂದರ ಆಲೋಚನೆ...

ಕ್ಷಣ... ಚಿಂತನೆ... said...

ಪ್ರಕಾಶಣ್ಣ.. ಈ ಲೇಖನ ಚೆನ್ನಾಗಿದೆ. ಹೌದಲ್ವಾ... ಯಾಕೆ ಹಾಗಿರಬಾರದಿತ್ತು ಎಂದು ಯೋಚಿಸುವಂತೆ ಮಾಡಿತು. ಮತ್ತೆ, ಮುಂದೇನು? ಎಂಬ ಕುತೂಹಲವೂ ಇದೆಯನ್ನಿ. ಉಳಿದ ಅನಿಸಿಕೆಗಳನ್ನು ನಿಮ್ಮೊಡನೆ (ಚಾಟ್) ಹಂಚಿಕೊಂಡಿದ್ದೆ. ಅದಕ್ಕೆ ಈ ಮೇಲಿನೆರಡು ಸಾಲು ಮಾತ್ರ ಕಾಮೆಂಟಿಸಿದ್ದೇನೆ.

ಚಂದ್ರು

Umesh Balikai said...

ಪ್ರಕಾಶ್ ಸರ್,

ಮತ್ತೊಂದು ಸ್ವಾರಸ್ಯಕರ ಪ್ರಸಂಗವನ್ನು ಎಂದಿನಂತೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ಗೋವು ಮತ್ತು ಅವನ ಹುಡುಗಿಯ ಪ್ರೀತಿ ಅವರಪ್ಪನಿಗೆ ಮತ್ತು ಅವನ ಮಾವನಿಗೆ ಅರ್ಥವಾಗಿ ಅವರಿಬ್ಬರ ಮದುವೆ ನಿಮ್ಮ ಮಧ್ಯಸ್ತಿಕೆಯಲ್ಲಿ ನಿಮ್ಮ ಮಧ್ಯಸ್ತಿಕೆಯಲ್ಲಿ ಸಾಂಗವಾಗಿ ನೆರವೇರಲಿ ಅಂತ ಹಾರೈಸ್ತೀನಿ.

SSK said...

ಪ್ರಕಾಶ್ ಅವರೇ,
ಮನುಷ್ಯನ ಜೀವನವೇ ಹೀಗೆ, ತನಗೆ ತೀರಾ ಬೇಕೆನಿಸಿದ್ದು ಸಿಗದೇ ಇದ್ದರೇ, ಪ್ರಪಂಚವೇ ಶೂನ್ಯ ಎಂದು ಭಾವಿಸಿಬಿಡುತ್ತಾನೆ!

ಇಲ್ಲಿ ನಿಮ್ಮ ಗೋವುವಿನ ಪರಿಸ್ಥಿತಿಯೂ ಇಂತಹುದೇ ಆಗಿದೆ. ಅಕಸ್ಮಾತ್ ಅವನ ಇಷ್ಟದ ಹುಡುಗಿಯೊಂದಿಗೆ ಮದುವೆಯಾದರೆ, ನಂತರ ಅವನು ಹೇಳಿದ ಈ ಮಾತುಗಳನ್ನು ನೆನೆಪಿಸಿ, ಬಹುಷಃ ಆಗ ಅವನ ಈ ಮಾತುಗಳಿಗೆ ಅವನೇ ನಗಬಹುದೇನೋ?

Ittigecement said...

ಮುಸ್ಸಂಜೆಯ ಇಂಪು...

ಕೆಲವರ ಸ್ವಭಾವವೇ ಹಾಗೆ..
ಎಲ್ಲರಿಗಿಂತ ಪ್ರತ್ಯೇಕವಾಗಿರುತ್ತಾರೆ...
ಅವರ ಸ್ವಭಾವವೂ ಭಿನ್ನವಾಗಿರುತ್ತದೆ...

ಗೋವು ಆ ಥರಹದವನು...

ಇಂದು ಆ ಹುಡುಗಿಯ ಬಳಿ ಮಾತನಾಡಿದೆ...
ಅದೂ ಇಂಟರೆಷ್ಟಿಂಗ್ ಇದೆ...ಮುಂದೆ ಬರೆಯುತ್ತೇನೆ...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಸುನಾಥ ಸರ್...

ಬಣ್ಣವೇ ಇಲ್ಲದ ಬೆಳಕಿನಿಂದ ಶುರುವಾದದ್ದು...
ಮದುವೆಯ ವಿಷಯದವರೆಗೆ ಬಂದು ನಿಂತಿತ್ತು...

ಸರ್..
ಇವತ್ತು ಆ ಹುಡುಗಿಯ ಬಳಿ ಮಾತನಾಡಿದೆ..
ಏನು ಹೇಳ ಬೇಕೆಂದು ತೋಚುತ್ತಿಲ್ಲ...

ಮುಂದೆ ಬರೆಯುವಂಥಹ ವಿಷಯ ಅದು.. ಮುಂದಿನ ಪೊಸ್ಟ್ ಅದನ್ನೇ ಹಾಕುವೆ....

ಅವರ ಮದುವೆಗೆ ಪ್ರಯತ್ನ ಮಾಡುತ್ತಿರುವೆ...
ನೋಡೋಣ..

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Veena DhanuGowda said...

hmm oled aytu!!!
engg vruthi bittu maduve dalali kelsa hidithira hege? [ juz kidding ]

preemi galana ond madoo punnya sigo sadyathe kanthaide
All the best sir :)

Ittigecement said...

ಮಹೇಶ್..(ಸವಿಗನಸು)

ಗೋವು.. ಯಾವಾಗಲೂ ಹೀಗೆ ಮಾತನಾಡುವದು.. ವಿಚಿತ್ರವಾಗಿ..
ಕೆಲವು ಸಾರಿ ಅರ್ಥವಿರುತ್ತದೆ.. ಕೆಲವು ಸಾರಿ ಅರ್ಥವಾಗುವದಿಲ್ಲ..

ಅವನ ವೇಷ ಭೂಷಣಗಳೂ ಹಾಗೇನೇ.. ವಿಚಿತ್ರವಾಗಿರುತ್ತದೆ...

ಈ ವಿಚಿತ್ರಗಳನ್ನು ಆ ಹುಡುಗಿ ಇಷ್ಟಪಟ್ಟಿರ ಬಹುದಾ..?
ಏನನ್ನುತಾಳೆ ಆ ಹುಡುಗಿ...?

ಗೋವುನ ಮಾತುಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ವಿಷ್....

ನನ್ನ ಬ್ಲಾಗಿಗೆ ಸ್ವಾಗತ...

ಗೋವಿನ ಮಾತು ಕೆಲವುಗಳು ಇಷ್ಟವಾಗುತ್ತವೆ...
"ಸಾಯಲಿಕ್ಕೆ ಯಾವ ಬಣ್ಣವೂ ಬೇಡ..
ಬದುಕಿಗೆಕೆ ಬೇಕು ಬಣ್ಣ....?
ಬಣ್ಣ.. ಅಂದ ಚಂದ ಎಲ್ಲ ಹೊಟ್ಟೆ ತುಂಬಿದವರಿಗೆ..."

ಬಹಳ ಇಷ್ಟವಾಗುತ್ತದೆ.. ಅವನ ಈ ಮಾತುಗಳು...

ನೀವೂ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ರಮ್ಯಾ...

ಇದೂ ಕೂಡ ನಿಜ...
ಗೋವಿನ ದೃಷ್ಟಿಯಂತೆ ಪ್ರಪಂಚವಿದ್ದಿದ್ದರೆ... ಏನೂ ಸ್ವಾರಸ್ಯವೇ ಇರುವುದಿಲ್ಲವಾಗುತ್ತಿತ್ತು...

ಬಣ್ಣವಿಲ್ಲದ ಜಗತ್ತು...
ದೇವರಿಲ್ಲದ ಧರ್ಮ...

"ಸ್ವಾರಸ್ಯವನ್ನು ಕಾಣುವದು ಕೂಡ ಒಂದು ಸ್ವಭಾವ...
ನೀರಸದಲ್ಲೂ ಸ್ವಾರಸ್ಯವನ್ನು ಕಾಣ ಬಹುದು..."

ಅಹಾ..! ಇಂಥದ್ದೊಂದು ಅನುಭವ ನನಗಾಗಿದೆ...
ನೆನಪಿಸಿದ್ದಕ್ಕೆ ಧನ್ಯವಾದಗಳು...

ಲೇಖನ ಇಷ್ಟವಾಗಿದ್ದಕ್ಕೂ ವಂದನೆಗಳು...

PARAANJAPE K.N. said...

ಪ್ರಕಾಶರೇ
ನಿಮ್ಮ ಎಂದಿನ ಸ್ವಾರಸ್ಯಕರ ಶೈಲಿಯಲ್ಲಿ "ಗೋವು ಪ್ರೇಮ ಪ್ರಸ೦ಗ" ದೊಡನೆ ಒ೦ದಷ್ಟು ವೇದಾ೦ತವನ್ನು ಬೆರೆಸಿ ರುಚಿಕಟ್ಟಾದ ಲೇಖನ ಕೊಟ್ಟಿದ್ದೀರಿ. ಹೌದು ನಿಮ್ಮ ಗೋವು ಹೇಳುವ೦ತೆ, ದೇವರಿಲ್ಲದ ಲೋಕ, ಜಾತಿಯಿಲ್ಲದ ಜನ, ಲಿ೦ಗವಿಲ್ಲದ ಮನುಷ್ಯ ಇದ್ದಿದ್ದರೆ ಹೇಗಿರುತ್ತಿತ್ತು ? ಕಲ್ಪನೆಯೇನೋ ಚೆನ್ನಾಗಿದೆ, ಆದರೆ ಆವಾಗ ಬೇರೆಯದೇ ಆದ ಹೊಸ ಸಮಸ್ಯೆಗಳು ಇರುತ್ತಿದ್ದವೋ ಏನೋ ? ಚೆನ್ನಾಗಿದೆ. ಬೇಗ ಗೋವು ಗೆ ಮದುವೆ ಮಾಡಿ ಪುಣ್ಯ ಕಟ್ಕೊಳ್ರಪ್ಪಾ?

ಚಿತ್ರಾ said...

ಪ್ರಕಾಶಣ್ಣ,
ಇಂಥಾ ಲಾಜಿಕ್ ಮುಂಚೆ ಓದಿದ್ದೆನಲ್ಲಾ ಎಂದು ಯೋಚಿಸುತ್ತಿದ್ದೆ , ಒಮ್ಮೆಲೇ ಹೊಳೆಯಿತು ನಿಮ್ಮದೇ ಬ್ಲಾಗ್ ನಲ್ಲಿ ಎಂದು ! ಓದುತ್ತಾ ಓದುತ್ತಾ, ನಾನೂ ನಿಮ್ಮ " ಗೋವು " ನ fan ಆಗಿಬಿಟ್ಟೆ . ಅವನ ಮಾತುಗಳಲ್ಲಿ ರಾಚುವಂಥ ಸತ್ಯವಿದೆ. ಎಲ್ಲರೂ ಈ ಬಣ್ಣ , ಧರ್ಮ , ಚಿನ್ಹೆಗಳನ್ನು ತಮಗಷ್ಟೇ ಸೀಮಿತಗೊಳಿಸಿಕೊಂಡರೆ ಮಾತ್ರ
ಏನಾದರೂ ಸುಧಾರಣೆಯಾಗಬಹುದು. ಅದಕ್ಕಾಗಿ ಗೋವು ನಂತೆ ಯೋಚಿಸಬಲ್ಲ ಬಹಳಷ್ಟು ಯುವಜನರು ನಮಗೆ ಬೇಕಾಗಿದ್ದಾರೆ . ಹಾಸ್ಯದ ಹೊದಿಕೆಯಲ್ಲಿ ಚಿಂತನೆಗೆ ಹಚ್ಚುವ ಬರೆಹ ಕೊಟ್ಟ ನಿಮಗೆ ಧನ್ಯವಾದಗಳು !
ಜಾತಿ, ಗೋತ್ರ , ಮನೆತನ ಎಲ್ಲ ನೋಡಿ ಚೆನ್ನಾಗಿದೆ ಅಂತ ಮಾಡುವೆ ಮಾಡಿಸಿಕೊಂಡು ಬಂದ ಹುಡುಗಿಯರೂ ಕೆಲಕಾಲದಲ್ಲೇ ಮನೆಯವರ ಯೋಚನೆ ಹಚ್ಚಿಕೊಳ್ಳದೆ ಬೇರೆ ಮನೆ ಮಾಡಿಕೊಂಡು ಇರುವುದು ಸಾಮಾನ್ಯವಾಗಿರುವಾಗ , ಪರಿಸ್ಥಿತಿ ಗೊತ್ತಿರುವ , ಹೊಂದಿಕೊಂಡು ಹೋಗುವ ಒಳ್ಳೆ ಸ್ವಭಾವದ ಹುಡುಗಿ ಯಾವ ಜಾತಿಯಾದರೇನು ಮನೆಯವರು ನೆಮ್ಮದಿಯಾಗಿರಬಹುದಲ್ಲವೇ? ನಿಮ್ಮ ಗೋವು ಗೆ ಅವನಿಷ್ಟದ ಆ ಒಳ್ಳೆಯ ಹುಡುಗಿ ಆದಷ್ಟೂ ಬೇಗ ಜೊತೆಯಾಗಲಿ ಎಂದು ಹಾರೈಸುತ್ತೇನೆ.

Ittigecement said...

ಮನಸು....

ಈ ಲೇಖನ ಬಹಳ ಇಷ್ಟಪಟ್ಟು.. ಕಷ್ಟಪಟ್ಟು ಬರೆದಿದ್ದೆನೆ..

ಬಹುಷಃ ....
"ಮಿಲ್ತೀ ಹೆ ಜಿಂದಗೀ ..ಮೆ ಮೊಹಬ್ಬತ್ ಕಭಿ.. ಕಭಿ.." ಬರೆದಮೇಲೆ
ಬಹಳವಾಗಿ ಕಾಡಿದ ಲೇಖನ ಇದು......

ನೀವೆಲ್ಲ ಇಷ್ಟಪಟ್ಟು ಪ್ರೋತ್ಸಾಹಿಸುತ್ತಿರುವದು ಖುಷಿಯಾಗುತ್ತಿದೆ...

ನಿಮ್ಮ ಒಂದೊಂದೂ ಪ್ರತಿಕ್ರಿಯೆ ನನಗೆ ಬಹಳ ಅಮೂಲ್ಯ...

ಅದಕ್ಕಾಗಿ ನಾನು ಕಾಯುತ್ತೇನೆ..
ಅದು ಇನ್ನಷ್ಟು ಬರೆಯಲು ಉತ್ಸಾಹಕೊಡುತ್ತದೆ..

ಧನ್ಯವಾದಗಳು..

Anonymous said...

ಪ್ರಕಾಶ್, ಮೊದಲಿಗೆ ಓದುತ್ತ ಇದ್ದಂತೆ ಏನೂ ಅರ್ಥ ಆಗಲಿಲ್ಲ.. ಇದೆಂಥ ತರ್ಕನಪ್ಪ ಅಂತ ಆಶ್ಚರ್ಯ ಪಟ್ಟೆ. ಕೊನೆಗೆ ಬಂದಾಗ ನಿಮ್ಮ 'ಗೋವು' ನ ಜಾಣ್ಮೆ ತಿಳೀತು!! ನಿಮ್ಮ ರಾಯಭಾರ ಎಷ್ಟು ಯಶಸ್ವಿ ಆಯಿತು ಅಂತ ತಿಳಿಯೋಕುತೂಹಲ!!
all the best to u!

ಸುಧೇಶ್ ಶೆಟ್ಟಿ said...

govu avanu mechchida hudugiya jothe maduve nadeyali... yenaayithu antha thilisi namage prakashanna...

pusthaka yellivarege banthu....

nanna blog kadege neevu bande illa :(

ಎಚ್. ಆನಂದರಾಮ ಶಾಸ್ತ್ರೀ said...

ಅಭಿಪ್ರಾಯ ವಿಚಾರಾರ್ಹ. ನಿರೂಪಣೆ ಆಕರ್ಷಕ.
’ನಾವು ಹುಟ್ಟದೇನೇ ಇರುತ್ತಿದ್ದರೆ ಚೆನ್ನಾಗಿತ್ತು’ ಎಂದು ಒಂದು ಗಳಿಗೆ ನನಗನ್ನಿಸಿದ್ದೇನೋ ನಿಜ. ಆದರೆ, ’ಹುಟ್ಟದಿದ್ದರೆ’ ’ಇರುತ್ತಿದ್ದೆವು’ ಹೇಗೆ?

Unknown said...

ಜೀವನವನ್ನು ಹೇಗಿದೆಯೋ ಹಾಗೆ ಸ್ವೀಕರಿಸಬೇಕಾಗುತ್ತದೆ. ಹಾಗಿದ್ದರೆ ಚೆನ್ನ,ಹೀಗಿದ್ದರೆ ಚೆನ್ನ ಎಂದು ಭಾವಿಸಿದರೆ, ಪರಿಸ್ಥಿತಿ ಬದಲಾಗದಲ್ಲಾ!
ಒಳ್ಳೆಯ ಬರಹ.
ಧನ್ಯವಾದ.

ಜಲನಯನ said...

ಹಸಿವಿಗೆ ಧರ್ಮವೇ.. ಇಲ್ಲ ಸಾರ್...!
ಅದಕ್ಕೆ ಧರ್ಮವೇ ಬೇಕಿಲ್ಲ... ಎಲ್ಲರಿಗೂ ಚಿರ-ಪರಿಚಿತ ಆದರೂ ಇದನ್ನು ಚಿರ-ಅಪರಿಚಿತದ ತರಹ ನೋಡಿ, ಎಲ್ಲ ವಾಸ್ತವಗಳನ್ನು ಮರಿಯುತ್ತಾರೆ...ಗೋವು...ಎಲ್ಲ ನಿಜಗಳನ್ನು ನಗ್ನಗೊಳಿಸಿ ನಿಮ್ಮ ಮುಂದೆ ಬಿಟ್ಟಿದ್ದಾನೆ..ಆದರೆ ನಗ್ನಗಳನ್ನು ವ್ಯವಸ್ಥೆ ಒಪ್ಪೊಲ್ಲ..ಪೋಷಾಕು ಬೇಕು...ಅವರವರ ಭಾವಕ್ಕೆ ಅವರವರಿಗೆನೆಇಸಿದಂತೆ ಪೋಷಾಕು ಹಾಕಿಕೊಳ್ಳುತ್ತಾರೆ ನಗ್ನತೆಯನ್ನು ಮುಚ್ಚಿಡಲು.
ಬಹು ವೈಚಾರಿಕ ಅಂಶಗಳನ್ನು ಮಾರ್ಮಿಕವಾಗಿ ಪ್ರಸ್ತಾಪಿಸಿಸಿದ್ದೀರಾ ಪ್ರಕಾಶ್...ಒಳ್ಳೆಯ ಚಿಂತನೆ.

AntharangadaMaathugalu said...

ಸಾಯಲಿಕ್ಕೆ ಯಾವ ಬಣ್ಣ......
ಬದುಕಲೇಕೆ ಬೇಕು ಬಣ್ಣ.....
ಸಿಕ್ಕಾಪಟ್ಟೆ ವಿಚಾರಗಳನ್ನು ತುಂಬಾ ಸರಳವಾಗಿ ಪ್ರಶ್ನಿಸಿ, ಗೋವು ಅಬ್ಬಬ್ಬಾ... ನಮ್ಮದೆಲ್ಲವನ್ನೂ ಮರೆತು ಚಿಂತಿಸುತ್ತಾ ಕುಳಿತುಬಿಡುವಂತೆ ಮಾಡಿದ್ದಾನೆ.... ಪ್ರಕಾಶ ಅವರೆ.. ಮುಂದಿನ ಭಾಗಕ್ಕಾಗಿ ಅತಿ ಕುತೂಹಲದಿಂದ ಕಾಯುತ್ತಿದ್ದೇನೆ.

ಶ್ಯಾಮಲ

ಮನಸಿನ ಮಾತುಗಳು said...

ಪ್ರಕಾಶಣ್ಣ ,
ತುಂಬಾ ಚೆನ್ನಾಗಿದೆ ಈ ನಿಮ್ಮ ಲೇಖನ,
ಹಾಸ್ಯದ ಜೊತೆಜೊತೆಗೆ ವಾಸ್ತವದ ದರ್ಶನ ಮಾಡಿಸಿದ್ದೀರ....
ಇನ್ನೂ ಬರೆಯಿರಿ...
ಗೋವುನ ಮದುವೆ ಆದಷ್ಟು ಬೇಗ ಮಾಡಿಸಲು ಆಗಲೆಂದು ಹಾರೈಸುತ್ತೇನೆ...
ಧನ್ಯವಾದಗಳು

Chandina | ಚಂದಿನ said...

ಕುತೂಹಲದಿಂದ ಓದಿಸಿಕೊಳ್ಳುತ್ತದೆ...ಅರ್ಥಪೂರ್ಣವಾಗಿದೆ...

ರಾಜೀವ said...

ಹ್ಮ್ಮ್ಮಂ .... ಇದನ್ನು ಓದಿ ನನಗೆ ತಕ್ಷಣ ಅನಿಸಿದ್ದು "ಈ ಪ್ರೀತಿ ಇಷ್ಟೆಲ್ಲಾ ಪಾಠ ಕಲ್ಸತ್ತಾ?" ಎಂದು. ಪ್ರೀತಿಯಲ್ಲಿ ಅವರು ಕಂಡ ಗೆಲುವಿನ ಬಾಗಿಲು ತೆರೆಯದೆ ಇದ್ದಾಗ, ಎಲ್ಲಿಂದ ಬರುವುದೂ ಈ ವೇದಾಂತ. ಲೌಕಿಕ ಜೀವನವನ್ನು ಮೀರಿ ಛಿಮ್ಮಿದ ಈ ಧ್ಯೇಯ ಮೌಲ್ಯಾಧಾರಿತ ಪ್ರಶ್ನೆಗಳಿಗೆ ಉತ್ತರ ಅಷ್ಟು ಸುಲಭವಾಗಿ ಸಿಗುವುದೇ?

ನಿಮ್ಮ ಗೋವುಗೆ ಶುಭವಾಗಲಿ.

ವಿನುತ said...

ಕಟು ವಾಸ್ತವಕ್ಕೊ೦ದು ಹಾಸ್ಯಲೇಪ ಕೊಟ್ಟು ಬರೆಯಿವ ನಿಮ್ಮ ಶೈಲಿಗೊಂದು ಸಲಾಮ್. ಗೋವಿನ ಆಸೆ ಪೂರೈಸಿ ನಿಜಕ್ಕೂ ಪುಣ್ಯಕೋಟಿಯಾಗಲೆ೦ದೇ ಆಶಿಸುತ್ತೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಗೋವು ತನ್ನ ಮಾತಲ್ಲೇ ವಿಶ್ವರೂಪ ದರ್ಶನ ಮಾಡಿಸಿದ್ದಾನೆ. ಎಷ್ಟೋಂದು ಅರ್ಥಗಳಿವೆ ಸರ್ ಅವನ ಮಾತಲ್ಲಿ. ಅದ್ಭುತ.
ಕುವೆಂಪುರವರ ವಿಶ್ವಮಾನವ ಸಂದೇಶದಂತಿದೆ ಈ ಗೂವು ಸಂವಾದ.
ಜೀವನದ ಅನುಭವದ ರಸಪಾಕ ಅಂದರೆ ಇದೇ ಅಲ್ಲವಾ?

Anonymous said...

:) ಸೂಪರ್ ಲೇಖನ. ಹಾಸ್ಯ, ಆಧ್ಯಾತ್ಮ ಮಿಕ್ಸ್ ಆಗಿ!:)

ಸೀತಾರಾಮ. ಕೆ. / SITARAM.K said...

ಗೋವು-ನ ಮಾತಿನ ಸರಣಿ ಅದ್ಭುತ. ಸಮಾಜದ, ಧರ್ಮಗಳ ವಿವಿಧ ಮುಖ ಬಿಡಿಸಿಡುವ ಗೋವು-ನ ವಾಗ್ಝರಿ ಕೌಶಲ್ಯವಾಗಿ ಮುಡಿದೆ ಹಾಗು ಸಮಜದ ಸ೦ಕೀರ್ಣ -ಕ್ಲೀಷ್ಠಗಳಿಗೆ ಹಿಡಿದ ಕನ್ನಡಿಯಾಗಿದೆ. ಲೇಖನ ತು೦ಬಾ ಹಿಡಿಸಿತು.ಗೋವುನ ಮದುವೆಗೆ ತಪ್ಪದೆ ಕರೆಯಿರಿ.

Jayalaxmi said...

ನಿಮ್ಮ ಗೋವೂ ಈಗಲೂ ನನಗೆ ಇಷ್ಟವಾದ. ಕುತೂಹಲ ಹುಟ್ಟಿಸೊ ವ್ಯಕ್ತಿತ್ವ ಗೋವೂದು. ವಾದಸರಣಿ ಚೆನ್ನಾಗಿದೆ. ನಿಮಗೆ ಹೆಚ್ಚಾಗಿ ಇಂಥ ಜನರೇ ಸಿಗೋದು ಒಂದು ಯೋಗವೇ ಸರಿ. :)

Guruprasad said...

ಪ್ರಕಾಶ್ ಸರ್,,
ನಿಮ್ಮ ಈ ಲೇಖನ ಓದಿ ನನ್ನ ತಾಳೆನು ಎಲ್ಲೆಲಿಗೋ ಹೋಗಿ ಬಂತು...ಎಷ್ಟು ಅರ್ಥ ಇದೆ ನಿಮ್ಮ ಗೋವು ಹೇಳುವುದರಲ್ಲಿ.... ಹಾ ಹಾ ಮನುಷ್ಯನ ಪಕ್ಕದಲಿ ಕಂಪ್ಯೂಟರ್ ಸ್ಕ್ರೀನ್,, ಅದರಲ್ಲಿ ಅವನ bio data ಮಸ್ತ್ ಇದೆ ಪ್ರಕಾಶ್ imagin ಮಾಡಿಕೊಳ್ಳೋಕೆ ಕಷ್ಟ..... ನಿಮ್ಮ ಗೋವು ಯಾವುದಾದರು engilish ಫಿಲಂ ನೋಡಿ ಬಂದಿದ್ದನ :-) ....
ಆದರು ತುಂಬ ಯೋಚಿಸಬೇಕಾದ ವಿಷಯವನ್ನೇ ಆಯ್ಕೆ ಮಾಡಿಕೊಂಡ ಇದ್ದೀರಾ ... ತುಂಬ ಅರ್ಥ ಪೂರ್ಣ ಬರಹ... ಮುಂದುವರಿಯಲಿ....

Kishan said...

ಅದ್ಭುತ ! what an innovative idea sirjee !! incredible.

prasca said...

ದೇವರಿಲ್ಲದ ಧರ್ಮವಿದ್ದಿದ್ದರೆ.........

ಧರ್ಮದಲ್ಲಿ ದೇವರಿಲ್ಲ. ದೇವರುಗಳಲ್ಲಿ ಧರ್ಮವಿದೆ ಅಲ್ಲವೆ? ಮತಗಳಲ್ಲಿ ದೇವರುಗಳಿವೆ.

Ittigecement said...

ಸತ್ಯನಾರಾಯಣ ಸರ್...

ಹಸಿವೆಗೆ ಧರ್ಮವೇ ಬೇಕಿಲ್ಲ...
ಮೊನ್ನೆ ಗೆಳೆಯ "ಮಲ್ಲಿಕಾರ್ಜುನ್" ಒಂದು ಸಂಗತಿ ನೆನಪಿಸಿದರು..

ಒಂದು ವಿಮಾನ ಕ್ರಾಷ್ ಆಗಿ ಕೆಲವು ಜನ ಬದುಕಿ ಉಳಿಯುತ್ತಾರೆ..
ಆಮೇಲೆ ಅವರು ಹಸಿವೆ ನೀಗಿಸಲು ಪಡಲಾರದ ಕಷ್ಟ ಅನುಭವಿಸುತ್ತಾರೆ..
ಎಲ್ಲಿಯವರೆಗೆ ಅಂದರೆ..
ತಮ್ಮ ಗೆಳೆಯನೊಬ್ಬ ತೀರಿಹೋದಾಗ..
ಅವನನ್ನೇ.., ಅವನ ಹೆಣವನ್ನೇ.. ತಿನ್ನುತಾರೆ............!

ಇದು ಜೀವನ,...ಹಸಿವು ಕಲಿಸುವ ಪಾಠ...!

ಇದು ಸತ್ಯ ಘಟನೆ...

ನಿಮ್ಮ ಚಂದವಾದ ಪ್ರತಿಕ್ರಿಯೆಗೆ ಧನ್ಯವಾದಗಳು...

Unknown said...

ಪ್ರಕಾಶ್ ಸರ್ ನಾನು ನಿಮಗೆ ಈಗ ಿನ್ನೊಂದು ಕಥೆ ಹೇಳುತ್ತೇನೆ. ಇಲಿಯಡ್ ಕಾವ್ಯದ ಮಹಾಕವಿಯ ಇನ್ನೊಂದು ಕಾವ್ಯ Odyssey. ಈ ಕಾವ್ಯದ ನಾಯಕ ಮತ್ತು ಆಥನ ಗೆಳೆಯರು ಸಮುದ್ರಯಾನ ಮಾಡುವಾಗ ಸಮುದ್ರದ ಒಂದು ಪ್ರಾಣಿ ಅವರ ಮೇಲೆ ಧಾಳಿ ಮಾಡುತ್ತದೆ. ಆಗ ಅವರ ಸ್ನೇಹಿತನೊಬ್ಬನನ್ನು ಅದು ಹಿಡಿದು ತಿಂದು ಹಾಕುತ್ತದೆ. ಉಳಿದವರು ಹೇಗೂ ತಪ್ಪಿಸಿಕೊಂಡು ಒಂದು ದ್ವೀಪ ತಲಪುತ್ತಾರೆ. ಅಷ್ಟರಲ್ಲಿ ಅವರೆಲ್ಲಾ ಹಸಿವಿನಿಂದ ಾಯಾಸದಿಂದ ಕಂಗೆಟ್ಟು ಹೋಗಿರುತ್ತಾರೆ. ದ್ವೀಪ ತಲಪಿದವರು ಮೊದಲು ಮಾಡಿದ ಕೆಲಸವೆಂದರೆ ಆಹಾರ ಸಂಪಾದನೆ! ಚೆನ್ನಾಗಿ ಹೊಟ್ಟೆ ತುಂಬಿದ ಮೇಲೆ ತಮ್ಮ ಸ್ನೇಹಿತನ ಸಾವು ಅವರಿಗೆ ಕಾಡಲಾರಂಭಿಸುತ್ತದೆ. ಎಲ್ಲರೂ ಕುಳಿತು ಆತನಿಗಾಗಿ ರೋಧಿಸುತ್ತಾರೆ! ಸುಮಾರು 3000 ವರ್ಷಗಳಷ್ಟು ಹಿಂದೆಯೇ ಹೋಮರ್ ಹಸಿವಿನ ಮಹತ್ವವನ್ನು ಸರಳವಾಗಿ ಮನಗಾಣಿಸಿದ್ದಾನೆ ಅಲ್ಲವೆ!?

Shweta said...

ಪ್ರಕಾಶಣ್ಣ,
ಈ ಗೋವಿಯ ಲಾಜಿಕ್ ಎಷ್ಟು ಚೆನ್ನಾಗಿದೆಯಲ್ಲ......೨ ಸಾರೇ ಓದಿದೆ
ನಿಜಕ್ಕೂ ಸರಿಯಾಗಿದೆ ಆತನ ಮಾತು ........
ನಮ್ಮ ಜನರೇ ಹಾಗೆ ,ಕಣ್ಣು ತುಂಬಾ ನಿದ್ದೆ ಮಾಡುವ ಕನಸನ್ನು ಕಾಣುವಾದಿಲ್ಲ,ಬಣ್ಣ,ಜಾತಿ ಎಂಬೆಲ್ಲಾ ಚಿಂತೆಯಲ್ಲಿ ಮುಳುಗಿ ಹೋಗಿರುತ್ತಾರೆ.
ಕೆಲ್ಸದ ಒತ್ತಡ ದಿಂದ ಬ್ಲೋಗ್ ಗೆ ಬರಲಿಕ್ಕೆ ಆಗಿಲ್ಲವಾಗಿತ್ತು...ಈಗ ಒಂದೊಂದೇ ಓದುತ್ತಿದ್ದೇನೆ.......
ಮನಮುಟ್ಟುವ ಹಾಗೆ ಬರೆಯುತ್ತೀರಿ ನೀವು ಪ್ರಕಾಶಣ್ಣ......

ಧನ್ಯವಾದಗಳೊಂದಿಗೆ,
ಶ್ವೇತಾ

Me, Myself & I said...

ಆತ್ಮೀಯ ಪ್ರಕಾಶರೆ,

ಆ ಜೋಡಿಯನ್ನ ಒಂದು ಮಾಡಿ.
ಆದ್ರೆ ಜೀವನ ಖಾಲಿ ಆಕರ್ಷಣೆ ಅಲ್ಲ ಅನ್ನೋದನ್ನ ಅವ್ರು ತಿಳಿದು ಕೊಳ್ಳಲಿ ಅನ್ನೋದು ಆ ಯುವ ಪ್ರೇಮಿ (ಗಳಿ)ಗೆ ನನ್ನ ಕಿವಿ ಮಾತು.

ಶೀರ್ಷಿಕೆ ಯ ಒಂದು ಸಾಲೇ ಎಷ್ಟೊಂದು ಅರ್ಥ ಕೊಡುತ್ತೆ. ಬರಹ ತುಂಬಾ ಆತ್ಮೀಯವಾಗಿದೆ.
ಬರಹಕ್ಕೆ ಅಭಿನಂದನೆಗಳು.

Me, Myself & I said...

ನನ್ನ ಬ್ಲಾಗಿನಲ್ಲಿಯೂ ಬಂದು ಓದಿ, ಪ್ರತಿಕ್ರಿಯಿಸಿ ಪ್ರೋತ್ಸಹಿಹಕ್ಕೆ ಧನ್ಯವಾದಗಳು.

Prabhuraj Moogi said...

ನೀಲೇಕಣಿಯವರ ಯುನೀಕ ಆಯಡಿ ಬರೋದಿದೆ ಅದಕ್ಕೆ ಕಾಯಬೇಕು :) ಆಗಲಾದ್ರೂ ಹೆಸ್ರು ಬೇಕಿಲ್ಲವೇನೋ. ಒಳ್ಳೇ ವಾಟ್ ಅನ್ ಐಡಿಯಾ ಸರ್ಜಿ ಅಂತ ಮೊಬೈಲ್ ನಂಬರುಗಳನ್ನೇ ಹೆಸರು ಮಾಡಿದ ಜಾಹೀರಾತು ನೆನಪಾಯಿತು... ಲೇಖನ ಚೆನ್ನಾಗಿದೆ.

shivu.k said...

ಪ್ರಕಾಶ್ ಸರ್,

ಕಳೆದ ಐದಾರು ದಿನಗಳಿಂದ ಬ್ಲಾಗುಗಳಿಗೆ ಬೇಟಿಕೊಡಲು ಆಗುತ್ತಿಲ್ಲ. ಅದಕ್ಕೆ ತಡವಾಗಿ ಬರುತ್ತಿದ್ದೇನೆ.

ನಿಜಕ್ಕೂ ನಿಮ್ಮ ಗೋವು ವಿಭಿನ್ನ ಗುಣದವನೇ ಸರಿ.

ಆತನ ಪ್ರತಿಮಾತುಗಳು ಕೇಳಿದ ನಂತರ ಅವಲೋಕಿಸಿದರೆ ನಾವು ಎಲ್ಲಿಗೋ ಹೋಗಿಬಿಡುತ್ತೇವೆ. ನಮಗೆ ಹೀಗಾದರೆ ಅವನು ಇಂಥ ಮಾತುಗಳನ್ನು ಆಡಬೇಕೆಂದರೆ ಆತ ಇನ್ನೆಷ್ಟು ಚೆನ್ನಾಗಿ ಚಿಂತನೆಗೊಳಗಾಗಿರಬಹುದು ಅನ್ನಿಸುತ್ತೆ...

ಖುಷಿಯಿಂದ ಓದಿಸಿಕೊಂಡು ಹೋಗುತ್ತಾ ನಮ್ಮನ್ನು ಚಿಂತನೆಗೊಳಪಡಿಸುವ ಲೇಖನ.

Ittigecement said...

ಉಮೇಶ್ ದೇಸಾಯಿಯವರೆ...

ಸುಮ್ಮನೆ ಇರುವದಕ್ಕಿಂತ ಚಿಂತನೆಗೆಗಾಗಿ
ಹುಳ ಬಿಟ್ಟುಕೊಂಡು ಇರುವದು ಲೇಸು ಅಲ್ಲವಾ...?

ಚಂದದ ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

Ittigecement said...

ರೂಪಾರವರೆ...

ನಿವೆನ್ನುವದು ನಿಜ...
ಅಕ್ಷರಸ್ಥರಿಗಿಂತ ಬದುಕನ್ನು ಬಲು ಚಂದವಾಗಿ ಅನುಭವಿಸುವವರಿಗೆ ಇಂಥಹ ವಿಚಾರಗಳು ಹೊಳೆಯುವದು ಸಾಧ್ಯ..

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..

Ittigecement said...

ಶಿವಪ್ರಕಾಶು...

ನಾನು ತಿಳಿದ ಹಾಗೆ ಗೋವು ಪಲಾಯನವಾದಿಯಲ್ಲ...

ಇದ್ದು ಸಮಸ್ಯೆಯನ್ನು ಎದುರಿಸುತ್ತಾನೆ...

ನನ್ನ ಪ್ರಯತ್ನ ಮಾಡುತ್ತೇನೆ...

ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ರವಿಕಾಂತ್ ಗೋರೆಯವರೆ...

ದೇವರಿಲ್ಲದ ಜಗತ್ತು ಅಂದರೆ ನಂಬಿಕೆಯಿಲ್ಲದ ಜಗತ್ತು ಅಂತ ನನ್ನ ಸ್ನೇಹಿತರೊಬ್ಬರು ಹೇಳುತ್ತಿಇದಾರೆ..

ದೇವರು ನಂಬಿಕೆ ಎಂದಾಗ ನಂಬಿಕೆ ಇಲ್ಲದ ಜಗತ್ತು ಆಗುತ್ತದೆ ಎನ್ನುವದು ಆತನ ವಾದ...

ಯಾವಗಲಾದರೂ ಬನ್ನಿ...

ಪ್ರತಿಕ್ರಿಯೆಗೆ ಧನ್ಯವಾದಗಳು..

Ittigecement said...

ಚಂದ್ರಶೇಖರ್...

ಕ್ಷಣ ಚಿಂತನೆಯ ನಿಮ್ಮ ಬ್ಲಾಗಿನಲ್ಲಿ ಯಾವಾಗಲೂ ಇಂಥಹ ಲೇಖನಗಳನ್ನೇ ಹಾಕಿರುತ್ತಿರಿ...

ಗೋವು ಯಾವಾಗಲೂ ಹೀಗೆಯೇ...

ವಿಚಿತ್ರವೆನಿಸುವಂಥಹ ವಾದಗಳನ್ನು ಮುಂದಿಡುತ್ತಾನೆ...

ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..

Ittigecement said...

ಉಮೇಶರವರೆ....

ಎಲ್ಲವೂ ನಾವಂದುಕೊಂಡಂತೆ ಆಗುವದಿಲ್ಲವಲ್ಲ...
ನೋಡೋಣ ನನ್ನ ಪ್ರಯತ್ನ ಮಾಡುತ್ತೇನೆ..

ಧನ್ಯವಾದಗಳು...

Ittigecement said...

ಎಸ್ಸೆಸ್ಸ್ಕೆ ಯವರೆ...

ನಮಗೆ ಹೇಗೆ ಬೇಕೋ ಹಾಗೆ ನಮ್ಮ ಪ್ರಪಂಚವನ್ನು ನೋಡುತ್ತೇವೆ..
ಈ ಗೋವು ಸ್ವಲ್ಪ ಬೇರೆ ಥರಹ ಇದ್ದಾನೆ...
ಈತ ಮಾತನಾಡುವ ಹಾಗೆ ನಡುವಳಿಕೆ ಕೂಡ ಹಾಗೆಯೇ ಇದೆ...

ಇಷ್ಟ್ ಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

Ittigecement said...

ಪ್ರೀತಿಯಿಂದ ವೀಣಾರವರೆ...

ಎಲ್ಲೇ ಹೋದರೂ ನನಗೆ ಕಮಿಷನ್ ಕೆಲಸ ಬರುವದಿಲ್ಲವಲ್ಲ...
ಇಲ್ಲೂ ಸಹ ನಾನು ರಿಯಲ್ ಎಸ್ಟೇಟ್ ಕೆಲಸ ಮಾಡುವದಿಲ್ಲ..
ಅವರ ಕಮಿಷನ್ ಕೆಲಸ ನನಗೆ ಇಷ್ಟ ಆಗುವದಿಲ್ಲ...

ನನ್ನ ಬಳಿ ಕೆಲಸ ಮಾಡುವ ಹುಡುಗರ ಸಮಸ್ಯೆ ನನ್ನ ಸಮಸ್ಯೆ ಅಲ್ಲವೇ...
ಹಾಗೆಯೇ ಗೋವು ಅಂದರೆ ಸ್ವಲ್ಪ ಸಾಫ್ಟ್ ಕಾರ್ನರ್..

ನನ್ನ ಪ್ರಯತ್ನ ಮಾಡುತ್ತೇನೆ ಏನಾಗುತ್ತದೊ ನೋಡೋಣ..

ಧನ್ಯವಾದಗಳು..