ನನ್ನ ಮದುವೆಯ ಮಾರನೆ ದಿನ...
ಮನೆಯಲ್ಲಿ ನೆಂಟರು, ಗೆಳೆಯರು .. ಸಡಗರ.. ಸಂಬ್ರ್ಹಮ...
ಬಾಯಿತುಂಬಾ ಮಾತುಗಳು... ಗೌಜಿ.. ಗದ್ದಲ...!
ನನ್ನ ಮುದ್ದಿನ ಮಡದಿಯ ಸಂಗಡ... ನೆಂಟರ..ಸ್ನೇಹಿತರ ಜೊತೆ... ತಮಾಷೆಯಾಗಿ ಮಾತಾಡುತ್ತ ಕುಳಿತಿದ್ದೆವು...
" ಪಕ್ಕೇಶ ಹೆಗಡೇರು ಇದ್ದಾರಾ...?"
ನನ್ನೆದುರಿಗೇ.. ನನ್ನನ್ನು "ಪಕ್ಕು" ಎಂದು ಕರೆಯುವವದು....
ಈ ಜಗತ್ತಿನಲ್ಲಿ ಒಬ್ಬನೇ...
ಅದೂ ಅತ್ಯಂತ ಪ್ರೀತಿಯಿಂದ... ಅಭಿಮಾನದಿಂದ...
ನಾನು ಬಗ್ಗಿ ನೋಡಿದೆ... ಕುಷ್ಟ... ಬಂದಿದ್ದ...
"ಅರೇ.. ಕುಷ್ಟ ಬಾರೊ... ಚೆನ್ನಾಗಿದ್ದೀಯಾ...?"
" ನಾ ...ಚೆನ್ನಾಗಿದ್ದೀನ್ರಾ..... ನಿಮಗೆ ಮದುವೆ ಆಯ್ತಂತೆ... ಎಲ್ಲಿ ಸಣ್ಣಮ್ಮ..?"
ನಾನು ನನ್ನಾಕೆಯನ್ನು ಕರೆದೆ... ತೋರಿಸಿದೆ...
ಕುಷ್ಟ ಸ್ವಲ್ಪ ನಾಚಿಕೆ ಮಾಡಿಕೊಂಡ...
" ಪಕ್ಕೇಶ ಹೆಗ್ಡೇರೆ... ಜೋಡಿ ಚಂದಾಗೈತೆ... "
ಎಂದು ಏನೋ ಉಡುಗೋರೆ ಕೊಟ್ಟ..
"ಇದೆಲ್ಲ ಯಾಕೆ ಕುಷ್ಟ... ?...ಪ್ರೀತಿ ಇದ್ರೆ ಆಯ್ತಪ್ಪಾ.."
"ಇರ್ಲಿ ಬಿಡ್ರಾ... ಇದೂ ಪ್ರೀತಿಗೇ ಕೊಟ್ಟಿದ್ದು..."
ನಾನೂ ಅವನೂ ಅದೂ ಇದೂ ಲೋಕಾಭಿರಾಮವಾಗಿ ಮಾತಾಡಿದೆವು...
ನಮ್ಮ ತಾತನ ಕಾಲದಿಂದಲೂ ಕುಷ್ಟನ ಮನೆಯವರು ನಮ್ಮನೆಯಲ್ಲಿ ಕೆಲಸ ಮಾಡುತ್ತಾರೆ..
ಅತ್ಯಂತ ನಂಬಿಕಸ್ಥ ಜನ... ಹೃದಯವಂತರು...
ಕುಷ್ಟ ಮತ್ತು ನಾನು ಒಂದೇ ವಯಸ್ಸಿನವರು.. ಹಾಗಾಗಿ ಸಲುಗೆ ಇತ್ತು...
ಅವರಿಗೂ ಸ್ವಲ್ಪ ಜಮಿನು, ಅಡಿಕೆ ತೋಟ ಇದ್ದುದರಿಂದ ವರ್ಷವಿಡಿ ಕೆಲಸಕ್ಕೆ ಬರುತ್ತಿರಲಿಲ್ಲ...
ಅವರ ಹೊಲದಲ್ಲಿ ಕೆಲಸವಿಲ್ಲದಿದ್ದಾಗ ನಮ್ಮನೆಗೆ ಬಂದು ಕೆಲಸ ಮಾಡಿಕೊಡುತ್ತಿದ್ದರು..
ನಾನು ಕಾಲೇಜಿಗೆ ಹೋಗುವಾಗಲೇ ಈತನ ಮದುವೆಯಾಗಿತ್ತು...
ಓದು ಬರಹ ಅಷ್ಟಾಗಿ... ಅರಿಯದ ಕುಷ್ಟನದು ಪ್ರೇಮ ವಿವಾಹ... !!
ಅದೊಂದು ದೊಡ್ಡ ಕಥೆ...
ನಾನು ಸಿರ್ಸಿಯಲ್ಲಿ ಓದುವಾಗ ಮನೆಗೆ ಬಂದಾಗ ನಾನು ತಪ್ಪದೆ ಕುಷ್ಟನನ್ನು ಭೇಟಿ ಮಾಡುತ್ತಿದ್ದೆ...
ಇವನಿಗೆ ಒಂದಾದ ಮೇಲೊಂದು ಹೆಣ್ಣುಮಕ್ಕಳು... ಮನೆ ತುಂಬಾ ಹೆಣ್ಣುಮಕ್ಕಳು...
"ಕುಷ್ಟ... ಇಷ್ಟೆಲ್ಲ ಮಕ್ಕಳು ಯಾಕಪ್ಪಾ..?? ಮುಂದೆ ಕಷ್ಟ ಆಗ್ತದೆ...."
"ಅದೆಲ್ಲ..ನಮ್ಮ ಕೈಲಿ ಏನೈತ್ರ...?
ದೇವರು ಕೊಟ್ಟಂಗೆ ಆಗ್ತದೆ..
ಗಂಡು ಮಗ ಬೇಕು ಅಂತ ಎಲ್ಲ ಹೆಣ್ಣು ಮಕ್ಳು ಆಗಿ ಬಿಟ್ರು..."
"ಕುಷ್ಟ ..ಈಗಿನ ಕಾಲದಲ್ಲಿ ಹೆಣ್ಣು ಮಕ್ಳು ಗಂಡು ಮಕ್ಳು ಎಲ್ಲ ಒಂದೇಯಾ..
ಹೆಣ್ಣು ಮಗಳಿಗೆ ಮದುವೆ ಮಾಡಿ ಮನೆಯಲ್ಲೇ ಇಟ್ಗೊ..."
" ಅಯ್ಯೋ ರಾಮ ...!
ನೀವು ಓದಿದವರು... ನಿಮಗೇ ಗೊತ್ತಿಲ್ವಾ..?
ನಮ್ಮ ಕೀರ್ತನೆ ದಾಸರು ಹೇಳಿದ್ದು ಕೇಳಿಲ್ವ...?"
" ಏನು ..?"
" ನಾವು ಸತ್ತಾಗ ನಮಗೆ ಗಂಡು ಮಕ್ಳು ಬೆಂಕಿ ಇಟ್ರೆ .. ಸ್ವರ್ಗ ಲೋಕ ಸಿಕ್ತದಂತೆ...
ನಮಗೆ ಬೆಂಕಿ ಇಡ್ಲಿಕ್ಕಾದ್ರೂ ಗಂಡು ಮಗ ಬೇಕಲ್ರ..!
ಗಂಡಾಗ್ತದೆ.. ಗಂಡಾಗ್ತದೆ... ಅಂತ ಎಲ್ಲ ಹೆಣ್ಣಾಗಿ ಹೋದ್ವು..."
"ಮಾರಾಯಾ...!
ಕಿರ್ತನೇ ದಾಸರು ಹೇಳಿದ್ದು ರಾಮಾಯಣದ ಕಥೆ... ಈಗಿಂದಲ್ಲ..
ಅದೆಲ್ಲಾ ಪುರಾಣ ಕಾಲದಲ್ಲಿ... ಈಗಲ್ಲ.."
ಅವನ ಮುಗ್ಧತನಕ್ಕೆ ಬಹಳಷ್ಟು ತಿಳಿ ಹೇಳಿದ್ದೆ...
ನಾನು ಮುಂಬೈ ಹೋಗಿ ಅಲ್ಲಿಂದ.. ಕಲ್ಕತ್ತಾ.. ಲಕ್ನೋ.... ದೋಹಾ ಎಲ್ಲ ತಿರುಗಿದ್ದೆ..
ಹಲವು ವರ್ಷಗಳ ನಂತರ ಈಗ ಸಿಕ್ಕಿದ್ದ...
" ಪಕ್ಕೇಶ ಹೆಗ್ಡೇರೆ... ನಿಮ್ಮ ಹತ್ರ ಒಂದು ವಿಷ್ಯಾ ಹೇಳ ಬೇಕ್ರಾ..
ಹೆಂಗಸ್ರೂ .. ಮಕ್ಕಳ್ರೂ ಎದುರಿಗೆ ಆ .. ವಿಷ್ಯಾ..
ಮಾತಾಡುದು.. ಬ್ಯಾಡ್ರಾ...
ಇಲ್ಲೆಲ್ಲ ಬ್ಯಾಡಾ..ಅಡಿಕೆ ತೋಟಕ್ಕೆ ಹೋಗೋಣ..."
ನನ್ನ ಅಣ್ಣನಿಗೂ ಕುತೂಹಲ ಹುಟ್ಟಿತು..
"ಏನೋ ಕುಷ್ಟಾ... ನಾನೂ ಬರಬಹುದೇನೋ...?"
"ಬನ್ನಿ ವಡೆಯಾ..ನಿಮಗೆ ಪ್ರಯೋಜನ ಇಲ್ರಾ..
ನಿಮಗೆ ವಯಸ್ಸಾಯಿತಲ್ರಾ..!
ಪಕ್ಕೇಶ ಹೆಗ್ಡೆರಿಗೆ ಉಪಯೋಗ ಆಗ್ತದೆ..
ಈಗಷ್ಟೇ ಮದುವೆ ಆಗಿದೆಯಲ್ರ...!!"
ನನಗೂ ಕೆಟ್ಟ ಕುತೂಹಲ ಹುಟ್ಟಿತು..!!
ಏನಿರ ಬಹುದು ..!!..? ?
"ನಡಿ .. ಕುಷ್ಟ.... ಇಲ್ಲೇ ಅಡಿಕೆ ತೋಟಕ್ಕೆ ಹೋಗೋಣ.."
ತೋಟಕ್ಕೆ ಹೊರಟೇ ಬಿಟ್ಟೇವು... !!
ಅಣ್ಣ ಮನೆಯಲ್ಲೇ ಉಳಿದ....
"ಕುಷ್ಟ ... ಎಷ್ಟು ಮಕ್ಳು ಈಗ ನಿನಗೆ...? "
" ನಂಗೆ ಎಂಟು ಮಕ್ಕಳು ....
ಇನ್ನು ಮಕ್ಳು ಅಗದೆ ಇದ್ದಾಂಗೆ... "ವೆಲ್ಡಿಂಗ್ " ಮಾಡ್ಕೋ ಬಿಟ್ಟಿದ್ದೀನಿ....."
"ವೆಲ್ಡಿಂಗಾ...? ಏನೋ ಇದು...?"
"ಅದೇ.... ಸಿರ್ಸಿ ಪೇಟೆಯಲ್ಲಿ.. .ಕಬ್ಬಿಣ ಎಲ್ಲ ಮಾಡ್ತಾರಲ್ರ... ಹಂಗೆಯಾ...!!
ನನಗೂ .. ನಮ್ಮ ಹೆಂಡ್ರಿಗೂ ಮಕ್ಕಳು ಆಗ್ದಿದ್ದಾಂಗೆ ವೆಲ್ಡಿಂಗ್ ಮಾಡ್ಕೋಬಿಟ್ಟಿದ್ದೇವೆ....!!...
ಅದೇ...ತೂತು ಬಿದ್ದಿರೊ ಹಿತ್ತಾಳೆ ಪಾತ್ರಕ್ಕೆ ವೆಲ್ಡಿಂಗು ಮಾಡ್ತಾರಲ್ರ....!
ಅದೇ ಥರ..!!"
" ಅಯ್ಯೋ.. ಮಾರಾಯಾ...!!
ಅಪರೇಷನ್ನು ಅನ್ನು...!!
ಒಳ್ಳೆದಾಯ್ತು ನೋಡು..ತುಂಬಾ ತಡ ಆದ್ರೂ..
ಬುದ್ಧಿ ಬಂತಲ್ಲ...ನಿನಗೆ.."
" ನಂಗೆ ಎಂಟನೆಯದು ಗಂಡು ಮಗುವ್ರಾ..!
ಅದನ್ನೇ.. ನಿಮಗೆ ಹೇಳ್ಬೇಕಿತ್ರಾ..."
"ಅಂತೂ..ಗಂಡು ಮಗು ಆಯ್ತಾ...!! ಅದೂ.. ಒಳ್ಳೆದಾಯ್ತು ಬಿಡು.."
"ಸುಮ್ನೆ.. ಕಾಲಿ ಪುಕ್ಕಟೆ.. ಗಂಡು ಮಗಾ ಆಗ್ಲಿಲ್ರಾ.. !
ನಾವು ಗಂಡ ಹೆಂಡ್ತಿ.. ಸಿಕ್ಕಾಪಟ್ಟೆ ..ಕಷ್ಟಪಟ್ಟಾಯ್ತು..!
ಸಿರ್ಸಿಯಲ್ಲಿ ಎಲ್ಲಾ ಡಾಕ್ಟ್ರ ಹತ್ರ ಹೋದೆ..
ಆ.. ಇಂಗ್ಲೀಷ್ ಡಾಕ್ಟ್ರ ಹತ್ರ.. ಏನೂ ಆಗ್ಲಿಲ್ಲ..!."
" ಹೌದಾ..? ಏನು ಮಾಡ್ದೆ...?"
" ನಮ್ಮ..ಕಾಮತ್ರು ಗೊತ್ತಲ್ಲ...!!
ಅದೇ... ಮಂತ್ರ ಎಲ್ಲ ಮಾಡ್ತರಲ್ರ.. "ಕಾಮತ್ ಹತ್ರ ಹೋಗಿದ್ದೆರಾ.."
"ಕಾಮತ್ರಾ...? ಅವರು .. ಏನು ಮಾಡಿದ್ರು...?"
" ಅವರು ನಂಗೂ... ನನ್ನ ಹೆಂಗಸ್ರಿಗೂ ...
ತಾಯತ ಕೊಟ್ಟು ಮಂತ್ರಿಸಿ ಕೊಟ್ರು ... ನೋಡಿ.. !!
ಎಂತಾ.. ಮಂತ್ರ ಶಕ್ತಿ ಅಂತೀರ್ರೀ..!!.?
ಗಂಡು ಮಗು ಆಗೇ ಬಿಡ್ತು.. !!
ಮಗು ಹೆಂಗೈತೆ ಅಂತಿರ್ರಾ...!!..???
ಹೂವೇ..ಹೂವು...!
ಕಾಮತ್ರ ಹಂಗೇ ಐತೆ..!!.
ಬೆಳ್ಳಗೆ..ಕೆಂಪಗೆ ಟೊಮೆಟೊ ಹಂಗೆ ಐತೆ...!!.."
"ಛೇ.. ಛೇ... ಹಾಗೆಲ್ಲ ಹೇಳಬೇಡಪ್ಪ..."
" ನನ್ನ ಮಗನ್ನ ನೋಡದು ಬ್ಯಾಡಾ...!
ಕಾಮತ್ರ ನೋಡದು ಬ್ಯಾಡಾ..!
ಹೂವೇ..ಹೂವು.... ಕಾಮತ್ರು..!!.. ಪಕ್ಕೇಶ್ ಹೆಗಡೇರೆ...!.."
" ಥೂ ... ಮಳ್ಳ ...!
ಹಂಗೆಲ್ಲ ಬೇರೆ ಯಾರತ್ರೂ ಹೇಳ್ಬೇಡ..!
ಅಪಾರ್ಥ ಮಾಡ್ಕೋತಾರೆ..
ನಿನ್ನ ಹೆಂಡ್ತಿ ಬೆಳ್ಳಗೆ ಇದ್ದಾಳೆ ..
ಮಗುನೂ ಬೆಳ್ಳಗೆ ಹುಟ್ಟಿದೆ...
ಅದರ್ಲಿ ...
ಏನೋ ಹೇಳ್ಬೇಕು ಅಂದ್ಯಲ್ಲಾ... ಏನು..?"
" ಪಕ್ಕೇಶ್ ಹೆಗ್ದೇರೆ...!
ನಮಗೂ ನಿಮಗೂ ದೋಸ್ತಿ ಐತೆ..
ಅದಕ್ಕೆ ಮನಸ್ಸು ತಡಿಲಿಕ್ಕೆ ಆಗ್ದೆ.... ಹೇಳ್ಳಿಕ್ಕೆ ಬಂದೆ....
ನೀವೂ ಹೊಸತಾಗಿ ಮದುವೆ ಆಗಿದ್ದೀರಿ...
ನೀವೂ..ನಂಥರ ಎಡವಟ್ಟು ಮಾಡ್ಕೋಬೇಡಿ..!!.
ಕಾಮತ್ರ ಹತ್ರ ಹೋಗಿ ತಾಯತ ಕಟ್ಟಿಸಕ್ಕಳ್ಳಿ ...
ಗಂಡು ಮಗು ಆಗ್ತದೆ.."
ಯಾರೋ ಹಿಂದುಗಡೆಯಿಂದ ಕಿಸಕ್ಕನೇ ನಕ್ಕಂತಾಯಿತು...
ಹಿಂದೆ ನೋಡಿದ್ರೆ ಅಣ್ಣ ಬಿದ್ದೂ ಬಿದ್ದೂ ನಗ್ತಾ ಇದ್ದ....!!
ಅಣ್ಣ ನಗುತ್ತಲೆ...ಕುಷ್ಟನನ್ನು ಕೇಳಿದ...
"ಕುಷ್ಟಾ... ನಿನಗೆ ವೆಲ್ಡಿಂಗ್ ಮಾಡಿದ್ದು ಯಾರು...???..!
ಕಾಮತ್ರಾ...?"
ಕಾಮತ್ರಿಗೆ.. ವೆಲ್ಡಿಂಗ್ ಮಾಡ್ಲಿಕ್ಕೆ ಬರೂದಿಲ್ರ...!
ಅವರು ಏನಿದ್ರೂ ..ವೆಲ್ಡಿಂಗ್ ತೆಗಿತಾರ್ರಾ....!!..
ಅವರ ಮಂತ್ರ ಶಕ್ತಿಗೆ .. ಅವರ ತಾಯತಕ್ಕೆ.. ಸಿಕ್ಕಾಪಟ್ಟೆ ತಾಕತ್ ಐತ್ರ..!
ನಮಗೆ ವೆಲ್ದಿಂಗು.. ಸಿರ್ಸಿ ಡಾಕ್ಟ್ರು ಮಾಡಿದ್ದು.."
ಮತ್ತೆ ಕುಷ್ಟನೇ ಹೇಳಿದ...
" ದೊಡ್ಡ ಹೆಗ್ಡೇರೆ....
ನೀವಾದ್ರೂ ಹೇಳಿ... ಪಕ್ಕೇಶ ಹೆಗ್ಡೆರಿಗೆ...
ಜೀವನದಲ್ಲಿ ಬದುಕಲಿಕ್ಕೆ ಕಷ್ಟ ಪಡ್ತೀವಿ...
ಸತ್ತಮೇಲಾದ್ರೂ.. ಆರಾಮ್ ಇರುಬಹ್ದು...
ಗಂಡು ಮಕ್ಳು ಹುಟ್ಟಿ..ಬೆಂಕಿ ಇಟ್ರೆ ....
ಸ್ವರ್ಗಕ್ಕೆ ಹೋಗಬಹುದಲ್ಲ..!
ಕಾಮತ್ರ ತಾಯತ ..ಕಟ್ಟಿಸ್ಕಳ್ಳಿಕ್ಕೆ..ನಿವಾದ್ರೂ.. ಹೇಳ್ರೀ..."
...............................................................
( ಕುಷ್ಟನ ಮಾತುಗಳು ನಿಮಗೆ ಅರ್ಥವಾಗುತ್ತದಾ...?
ಅದು ಅಲ್ಲಿನ ಆಡು ಭಾಷೆ...)
Saturday, September 5, 2009
Subscribe to:
Post Comments (Atom)
60 comments:
ಹಹಹಾಹ...
ನಿಮ್ಮ ಕುಷ್ಟನ ಕಥೆ ಕೇಳಿ ನಗು ತಡೆಯಲಿಕ್ಕೆ ಆಗಲಿಲ್ಲ....
ಚೆನ್ನಾಗಿದೆ ಪ್ರಕಾಶಣ್ಣ ವೆಲ್ಡಿಂಗೂ....
ಎಂತೆಂಥಾ ಜನ ಸಿಕ್ಕವ್ರೆ ನಿಮಗೆ ಉಪಯಗಳನ್ನು ಕೊಡೊಕೆ...
ಪ್ರಕಾಶಣ್ಣ ತಾಯ್ತಾ ...
workout ಆಯ್ತಾ.......
ಸವಿಗನಸು....(ಮಹೇಶ್..)
ಈ ಕುಷ್ಟನ ಕಥೆ ಬಹಳ ಇದೆ...
ಓದು ಬರಹ ಅಷ್ಟಾಗಿ ಅರಿಯದ ಈತನದು ಪ್ರೇಮ ವಿವಾಹ..!
ಅದು ಮಸ್ತ್ ಕಥೆ...!
"ನಾನು ತಾಯತ ಕಟ್ಟಿಸ್ಕಳ್ರಿಲ್ರ...
ಅದೆಲ್ಲ ದೇವರ ಕೈಲಿ ಐತ್ರ...!
ಕಾಮತ್ರ ಮಂತ್ರ ಶಕ್ತಿ ನಂಗೆ ಗೊತ್ತಾಗ್ಲಿಲ್ರ..."
ಇಷ್ಟಪಟ್ಟು ನಕ್ಕಿದ್ದಕ್ಕೆ ಧನ್ಯವಾದಗಳು...
hahahahahahaha
idu oLle phajeethi aaytalla.
tea kuDita odide. nakku netthige hatti, paaDu paDbEkaaytu.
welding indeed!!!!!!
:-)
ms
ಪ್ರಕಾಶ್
ನಿಮ್ಮ ಬರಹಗಳಲ್ಲಿ ಬರುವ, ಅಥವಾ ನೀವು ಸೃಷ್ಟಿಸುವ ಒಂದೊಂದು ಕ್ಯಾರೆಕ್ಟರ್ರೂ ಸೂಪರ್. ಅವನ್ನೊಮ್ಮೆ ನಾವು ಮಾತನಾಡಿಸಬೇಕು ಅನ್ನಿಸುತ್ತದೆ. ಅಷ್ಟರ ಮಟ್ಟಿಗೆ ಆ ಪಾತ್ರಗಳು ನಮ್ಮ ಮನಸ್ಸನಲ್ಲಿ ನಿಂತುಬಿಡುತ್ತವೆ. ಕುಷ್ಟನ ಮುಗ್ಧತೆಯ ಹಿಂದೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕುಷ್ಟ, ಹೆಸರಿನಷ್ಟೇ ವಿಭಿನ್ನ ಆತನ ವ್ಯಕ್ತಿತ್ವ!
ನೆನಪಿನ ಸಂಚಿಯಿಂದ...
ಇದರಲ್ಲಿ ಸ್ವಲ್ಪ ಸೆನ್ಸಾರ್ ಮಾಡಬೇಕಾಯಿತು...
ಅವತ್ತಿನಿಂದ ಇವತ್ತಿನವರೆಗೆ ಕುಷ್ಟನ ವೆಲ್ಡಿಂಗ್ ಕಥೆ ನೆನಪಾದರೆ ಬುಸಕ್ಕನೆ ನಗು ಬರ್ತದೆ...!
ಇದು ಎಲ್ಲಿ "ಎ" ಸರ್ಟಿಫಿಕೇಟ್ ಪಡೆದುಕೊಳ್ಳುಬಿಡುತ್ತದೊ ಅಂತ ಹೆದರಿದ್ದೆ...!
ಸಧ್ಯ ಹಾಗಾಗಿಲ್ಲ..!
ಅವನ ಪ್ರೇಮ ಪ್ರಕರಣ ಬರೆಯಬಹುದು ಅಂತಾಯಿತು..!!
ನಿಮಗೆ ಟೀ ನೆತ್ತಿಗೆ ಏರಿದ್ದಕ್ಕೆ ಸಾರಿ...!
ಹ್ಹಾ...ಹ್ಹಾ...!
ಪ್ರತಿಕ್ರಿಯೆಗೆ ಧನ್ಯವಾದಗಳು...
ಛೆ ! ಮೊದ್ಲೇ ಹೇಳಿದ್ದಿಲ್ಯಲ ಮಾರಾಯಾ...ಅದೆಲ್ಲಾ ಸರಿ, ಈ ಕಾಮತ್ರು ಎಲ್ಲಿ ಸಿಗ್ತ್ರು ?
ಸತ್ಯನಾರಾಯಣ ಸರ್...
ಕುಷ್ಟ ಮತ್ತು ನಾನು ಯಕ್ಷಗಾನ ಕುಣಿದ ಪ್ರಸಂಗ ಇದೆ....
ಬೀಡಿ ಸೇದಿದ ಕಥೆ ಇದೆ...
ನನ್ನ ಶಾಲೆಯ ತುಂಟಾಟದ ದಿನಗಳ ಘಟನೆ ಇದೆ...
ನಾನಿನ್ನೂ ನನ್ನ ಬಾಲ್ಯದ ನೆನಪು ಹೇಳಲೇ ಇಲ್ಲ...
ಇದು ಮಲ್ಲಿಕಾರ್ಜುನ್" ಮತ್ತು ಅಜಿತ್ ಕೌಂಡಿನ್ಯರ ಒತ್ತಾಯಕ್ಕೆ ಬರೆದದ್ದು...
ಕುಷ್ಟ ಸೃಷ್ಟಿಸಿದ ಪಾತ್ರವಲ್ಲ... ಇದ್ದಾನೆ ಹೆಸರು ಬದಲಾಯಿಸಿದ್ದೇನೆ...
ಅವನಾಡುವ ಭಾಷೆ ನಿಮಗೆಲ್ಲ ಅರ್ಥವಾಗುತ್ತಾ...?
ಸರ್ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ಹಿತ್ತಲಮನೆ ಬೀಗಣ್ಣನವರೆ....
ಮೊದಲೇ ಹೇಳಿದ್ದರೆ ನೀವು ಬೀಗಣ್ಣ ಆಗುತ್ತಿರಲಿಲ್ಲವಲ್ಲ...!!
ಕಾಮತ್ರು ಸಿರ್ಸಿಯಲ್ಲಿ ಸಿಗುತ್ತಾರೆ....!!
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.....
ನಿಮ್ಮ ಕುಷ್ಟನ ಮುಗ್ಧತೆ, ದೇಸಿ ಸೊಗಡಿನ ಭಾಷೆ, ಕಾಮತ್ ಡಾಕ್ಟರು, ವೆಲ್ಡಿ೦ಗು - ನಗುವಿನೊ೦ದಿಗೆ ಹಳ್ಳಿಯ ಜೀವನದ ಹಲವು ಆಯಾಮಗಳನ್ನು ತೆರೆದಿಡುತ್ತದೆ. ತಮಾಷೆಯ ಜೊತೆಗೆ ಹೇಳಬೇಕಾದ್ದನ್ನು ಹೇಳುವ ನಿಮ್ಮ ಕಲೆ ಮೆಚ್ಚತಕ್ಕದ್ದು. ಅ೦ದ ಹಾಗೆ ನೀವು ಕಾಮತ್ ರತ್ರ ಹೋಗಿದ್ರಾ, ತಾಯತ ಕಟ್ಟಿಸ್ಕೊಳ್ಳೊಕೆ ?
ಪ್ರಕಾಶಣ್ಣ ,
ನಿಂಗೇನು ಯೋಚನೆ ಇಲ್ಲೆ ಬಿಡು . ಮಗ ಇದ್ದ ಸ್ವರ್ಗಕ್ಕೆ ಕಳಿಸಲೇ ! ಕಾಮತರ ತಾಯಿತದ ಬಗ್ಗೆ ಯೋಚನೆ ಮಾಡದೂ ಬೇಡ !
ನಿಮ್ಮ ' ಕುಷ್ಟ' ನಂತದೆ ಒಂದು ಕ್ಯಾರೆಕ್ಟರ್ ನನ್ನ ಗಂಡನ ಮನೆಯಲ್ಲೂ ಕೆಲಸಕ್ಕೆ ಇದ್ದ ! ಅವನ ಬಗ್ಗೆ ಬರೆಯಲೇ ನೆನಪು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು .
ಮತ್ತೆ , ಕುಷ್ಟನ " ವೆಲ್ಡಿಂಗ್ " ಬಗ್ಗೆ ಓದಿ ನಗು ಬಂತು . ಅಂದ ಹಾಂಗೆ ನಂಗನೂ " ವೆಲ್ಡಿಂಗ್ ಮಷಿನ್ " ತಯಾರು ಮಾಡದು ! ಆದರೆ ಈ " ವೆಲ್ಡಿಂಗ್ " ನಮ್ಮ ಮಷಿನ್ ನಲ್ಲಿ ಆಗ್ತಿಲ್ಲೆ ! ಹಾ ಹಾ ಹಾ ...
welding !!! :) nammur kade enen maja aagtu aldanra hegdre!! :)
ಪ್ರಕಾಶ್.. ಮತ್ತೊಂದು ವ್ಯಕ್ತಿ ಪರಿಚಯ.. ಏನು ಹೇಳ್ಬೇಕು ಅಂತ ಗೊತ್ತಾಗದಷ್ಟು ಮುಗ್ಧತೆಯ ಅನುಭವ ಕುಷ್ಟನಲ್ಲಿ. ಈಗೀಗ ನಮ್ಮೂರ ಕಡೆಗೂ ಈ ಮುಗ್ಧತೆ ಕಡಿಮೆ ಆಗ್ತಿದೆ ಗೊತ್ತಾ? ಅನುಭವೀಕರಿಸುವ ನಿಮ್ಮ ಬರಹ ಯಾವಾಗಿನಂತೆ ಈ ಸಲವೂ ಬಹಳ ಖುಷಿ ಕೊಟ್ಟಿತು!!
ಪರಾಂಜಪೆಯವರೆ...
ಅದು ಯಾವ ಪುರಾಣದಲ್ಲಿ ಹೇಳಿದೆಯೋ...
ಗಂಡು ಮಕ್ಕಳು ಬೆಂಕಿ ಇಟ್ಟರೆ ಸ್ವರ್ಗಕ್ಕೆ ಹೋಗುತ್ತೇವೆ...!
ಇದು ಓದು ಬರಹ ಬಲ್ಲವರೂ ಸಹ ನಂಬುತ್ತಾರೆ..!
ಗಂಡು ಮಕ್ಕಳು ಅಪ್ಪ, ಅಮ್ಮರ ಬಾಳಿಗೇ ಬೆಂಕಿ ಇಟ್ಟರೂ ಪರವಾಗಿಲ್ಲ..
ವಂಶೋದ್ಧಾರಕ ಪುತ್ರ ಬೇಕು...!
ಕೆಲವಷ್ಟು ನಂಬಿಕೆಗಳು ಯಾವಾಗ ನಾಶವಾಗುತ್ತದೋ ಗೊತ್ತಿಲ್ಲ...
ಕುಷ್ಟನ ವೆಲ್ಡಿಂಗ್ ಕಥೆ ಇಲ್ಲಿಗೆ ಮುಗಿದಿಲ್ಲ...!
ಮೆಚ್ಚಿದ್ದಕ್ಕೆ ಧನ್ಯವಾದಗಳು...
ಚಿತ್ರಾ....
ನಿಮ್ಮ ಹೊಸ ಲೇಖನ ಓದಿ ಸಿಕ್ಕಾಪಟ್ಟೆ ನಕ್ಕಿದ್ದೇನೆ...
ಈ ಲೇಖನ ನನ್ನ ಪುಸ್ತಕದಲ್ಲಿ ಹಾಕೋಣ ಎಂದು ಕೊಂಡಿದ್ದೆ...
ಪುಸ್ತಕ ಆಗುತ್ತಿದೆ ಅದಕ್ಕೆ ನೀವೆಲ್ಲ ಓದುಗರು ಕಾರಣ...
ನೀವು ಓದಿ ಪ್ರೋತ್ಸಾಹಿಸಿದ್ದಕ್ಕೆ ಪುಸ್ತಕ ಆಗುತ್ತಿದೆ...
ಹಾಗಾಗಿ ಬ್ಲಾಗಿನಲ್ಲಿ ಮೊದಲು ಹಾಕ ಬೇಕು ಎಂದು ಹಾಕಿದ್ದೇನೆ...
ಕುಷ್ಟ ಇಷ್ಟವಾಗಿದ್ದಕ್ಕೆ ಖುಷಿಯಾಗುತ್ತಿದೆ...
ಅವನ ಕಥೆಗಳನ್ನು ಇನ್ನಷ್ಟು ಬರೆಯುವೆ....
ತುಂಬಾ... ತುಂಬಾ ಧನ್ಯವಾದಗಳು...
ನಿತಿನ್....
ಹಳ್ಳಿಯ ಮುಗ್ಧತೆ ಈಗ ಮೊದಲಿನಷ್ಟು ಇಲ್ಲ...
ಆದರೂ ಇದೆ... ಶಾರಿಯಂಥವರು.. ಕುಷ್ಟನಂಥವರು ಇನ್ನೂ ಇದ್ದಾರೆ...
ಊರಿಗೆ ಹೋದಾಗ ಏನೂ ಮಾಡ ಬೇಕಿಲ್ಲ...
ಇವರೊಡನೆ ಸುಮ್ಮನೆ ಮಾತನಾಡಿದರೆ ಸಾಕು...
ಸಿಕ್ಕಾಪಟ್ಟೆ ವಿಷಯಗಳು ಸಿಗುತ್ತವೆ...
ಓದು ಬರಹ ಅರಿಯದವ ಫಿಲೊಸಫಿ ಆಶ್ಚರ್ಯ ತರುತ್ತದೆ...
ಬದುಕಲ್ಲಿ ಕಷ್ಟ ತೀರಾ ಸಹಜ...!
ಅದು ದೊಡ್ಡ ವಿಷಯ ಅಲ್ಲ ಅವರಿಗೆ...
ಸತ್ತ ನಂತರ ಸ್ವರ್ಗ ಲೋಕದ ಬಗೆಗೆ ತಯಾರಿ...!
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಸರ್ ಮೊದಲೇ ಜನಸಂಖ್ಯೆ ಜಾಸ್ತಿ ಆಗ್ತಿದೆ, ಅದರಲ್ಲಿ ಬೆಂಕಿ ಇಡಲಿಕ್ಕಾದರೂ ಅಂತ ಹುಟ್ಟಿಸಿ ಹುಟ್ಟಿಸಿ ಇನ್ನೂ ಎಷ್ಟು ಜನ ಜಾಸ್ತಿ ಆಗುತ್ತಾರೋ...
ಒಂದು ಒಳ್ಳೆದೂ ಅಂದರೆ ಈ ಹಳ್ಳಿಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಇನ್ನೂ ಜಾಸ್ತಿಯಗಿಲ್ಲ(ಆಗಿದ್ದಾರೂ ನನಗೆ ಗೊತ್ತಿಲ್ಲ).. ಹಾಗಾಗಿ ಹೀಗಾದರೂ ಹೆಣ್ಣುಮಕ್ಕಳು ಹುಟ್ಟೀ ಲಿಂಗ ಅನುಪಾತ ಸರಿಯಾದೀತೆ!
ಅಲ್ರಾ ಪಕ್ಕೇಶ್ ಹೆಗಡ್ರು ನೀವು ಹೀಂಗೆಲ್ಲಾ ಮಾಡೂಕಾಗದ್ರ ಪಾಪ ಕುಷ್ಟ ನಿಮ್ಮ ಬಾಲ್ಯದ ದೋಸ್ತ ಹೇಳಿ ಎಲ್ಲಾ ಹೇಳಿದ್ರೆ ನೀವು ಎಲ್ಲಾ ಬರ್ದಿ ಅವನ್ ಮರ್ವಾದೆ ತೆಗೆದ್ರಲ್ರಾ!!!!!!!!!
ಎಂದಿನಂತೆ ನಿಮ್ಮ ಹಾಸ್ಯಬರಿತ ಲೇಖನದಲ್ಲಿ ಸಮಾಜಕ್ಕೊಂದು ಸಂದೇಶ ಕೊಟ್ಟಿದ್ದೀರಿ.ಆ ಕಾಮತರ ವಿಳಾಸವನ್ನೂ ಕೊಟ್ತಿದ್ದಿದ್ದರೆ ಮತ್ತಷ್ಟು ಜನ ಸ್ವರ್ಗಕ್ಕೆ ಹೋಗಬಹುದಿತ್ತು. (ಕೆಲವರಿಗೆ ಸ್ವರ್ಗಕ್ಕೆ ಹೋಗುವ ಆಸೆ ಇದ್ದರೂ ಕಾಮತರ ವಿಳಾಸ ಕೇಳಲು ಮುಜುಗರ ಆಗುತ್ತದೆ)
ಸುಮನಾರವರೆ....
ಬಹಳದಿನಗಳಿಂದ ನಂತರ ಬಂದಿದ್ದೀರಿ...
ಒಂಥರಾ ಅಭಾಸವಾದರೂ... ಮುಗ್ಧತೆ ಇಷ್ಟವಾಗಿಬಿಡುತ್ತದೆ...
ಎಷ್ಟೇ ಹೇಳಿದರೂ .. ಸಿಟ್ಟು ಮಾಡಿದರೂ ಈ ಕುಷ್ಟ..
"ಪಕ್ಕೇಶ ಹೆಗಡೇರೆ" ಅನ್ನುವದನ್ನು ಬಿಡಲಿಲ್ಲ..
"ನಿಮ್ಮ ಹೆಸರನ್ನು ನನಗೆ ಹೀಗೆಯೇ ಹೇಳಲಿಕ್ಕೆ ಆಗುತ್ತದೆ" ಅಂದು ಬಿಟ್ಟ...
ಊರಲ್ಲಿರುವ ನನ್ನ ಚಿಕ್ಕಪ್ಪ ಈಗಲೂ ತಮಾಶೆಗೆ ನನಗೆ ಹೀಗೆಯೇ ಕರೆಯುತ್ತಾನೆ...
"ಯಾರ್ಯಾರೋ ಏನೇನೋ ಹೇಳ್ತಾರಂತೆ..
ಈತ ಮನಸ್ಸಿನಿಂದ ಹೇಳುವದಿಲ್ಲ...
ಹೃದಯದಲ್ಲಿ ಸ್ವಚ್ಛ.. ಹೇಳಲಿ ಬಿಡು" ಅಂತ ಮನೆಯವರೆಲ್ಲ ಉಪದೇಶ ಮಾಡಿದರು...
ಇನ್ನೇನು..?
"ಭಗವಂಥ...ನೀನೇ ಗತಿ.. ಅಂತ ಸುಮ್ಮನಿದ್ದೇನೆ...
ಇತ್ತೀಚೆಗೆ... "ಪಕಾಸ್.. ಹೆಗಡೇರು.." ಅಂತ ಹೇಳುವಷ್ಟು ಸುಧಾರಣೆ ಆಗಿದೆ..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
Hahaha,Prakashanna,kushtana matu keli sakkattagi nakkiddene,Kushtana prema vivahada bagge bareyiri.............
sir,
tiLihAsyadondige kushtana kashtada kathe...chennagide.
ನಿಮ್ಮ ಕುಷ್ಟನ ಕಥೆ, ಅವನ ಮಾತು,ಮುಗ್ಧತೆ, ನಿಮ್ಮ ಕಡೆಯ ಭಾಷೆ ಎಲ್ಲವೂ ಚೆನ್ನಾಗಿದೆ!!
ವೆಲ್ಡಿಂಗೂ ಕೇಳಿ ನಗು ತಡೆಯಲಿಕ್ಕೆ ಆಗಲಿಲ್ಲ.
ಗಂಡು ಮಕ್ಕಳ ವ್ಯಾಮೋಹ ಬರೀ ಕುಷ್ಟನಂತವರಿಗೆ ಮಾತ್ರ ಅಲ್ಲ, ಓದಿ ಒಳ್ಳೆ ಉದ್ಯೋಗದಲ್ಲಿರುವವರಿಗೂ ಇದೆ!!!
ಪ್ರಕಾಶಣ್ಣ,
ಕುಷ್ಥ ಕಥೆ ಕೇಳಿ ನಕ್ಕಿದ್ದೆ ನಕ್ಕಿದ್ದು, ಬಹಳ ಸುಂದರವಾಗಿದೆ ಬರಹ ಎಂದಿನಂತೆ
ಸರ್,
ಕುಷ್ಟನ ಮಾತಲ್ಲಿ ನಾನಾ ಅರ್ಥಗಳಿವೆ. ತಂದೆತಾಯಿಯರು ನಾನಾ ಕಷ್ಟಪಡುವುದು ಹೆಚ್ಚಾಗಿ ಗಂಡುಮಕ್ಕಳಿಂದಲೇ. ಬೆಂಕಿ ಇಡೊವ್ರು ಇವ್ರೇ. ಆದರೆ ಬದುಕಿರುವಾಗಲೇ ತೊಂದರೆ ಕೊಡುವವರು (ಬೆಂಕಿ) ಗಂಡುಮಕ್ಕಳೇ!
ಬದುಕಿರುವಾಗ ನಾನಾ ಕಷ್ಟಪಡುವ ನಾವು ಮುಂದೆಂದೋ ಸ್ವರ್ಗವೆಂಬ ಕಾಣದ ಲೋಕದಲ್ಲಿ ಸುಖ ಪಡುತ್ತೇವೆಂಬ ಮುಗ್ಢನಂಬಿಕೆ ಎಷ್ಟು ಚೆನ್ನ ಅಲ್ಲವೇ?
ಅದಿರಲಿ Wedding Anniversary ತರಹ Welding Anniversary ಕೂಡ ಆಚರಿಸಬಹುದು ಅಲ್ಲವೇ?
ಪ್ರಭು...
ನೀವು ಅನ್ನೋದು ನಿಜ..
ಹಳ್ಳಿಗಳಲ್ಲಿ ಭ್ರೂಣ ಹತ್ಯೆ ಕಡಿಮೆ...
ಇನ್ನೂ ಮಾನವೀಯತೆ ಅಲ್ಲಿ ಸ್ವಲ್ಪ ಜೀವಂತವಾಗಿದೆ....
ಈ ಗಂಡು ಮಕ್ಕಳ ಭ್ರಮೆ ನಮ್ಮವರಿಗೆ ಜಾಸ್ತಿಯಾಯಿತು....
ಸತ್ತ ಮೇಲೆ ಇಡುವ ಬೆಂಕಿಯನ್ನು ಜೀವ ಇರುವಾಗಲೇ ಅವರ ಬಾಳಿಗೆ ಇಟ್ಟು ಬಿಡುತ್ತಾರೆ...
ಹೆಣ್ಣುಮಕ್ಕಳೇ ವಾಸಿ...
ಅಪ್ಪ, ಅಮ್ಮರನ್ನು ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳುತ್ತಾರೆ....
ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಹೆಗಡೆಜಿ ನಿಜವೇ ಗಂಡಿನಿಂದಲೇ ಉದ್ಧಾರ ಅಂತ ತಿಳದು ನಿಮ್ಮ ಕುಷ್ಟನಂತಹವರು ತಂದುಕೊಂಡ ಗೋಳು ಇದು.
ವಿಚಿತ್ರ ಆದರು ಸತ್ಯ ಈ ಮುಕ್ತಿ,ಮೋಕ್ಷಗಳ ಬೆನ್ನುಹತ್ತಿ ನಾವು ಹಾಳಾಗುತ್ತಲೇ ಇದ್ದೇವೆ ಯಾವಾಗೋ ಅದು ನಿಲ್ಲೋದು....
ಪ್ರಕಾಶಣ್ಣ ನಿಮ್ಮ ಲೇಖನವೇ ನಗು ತರಿಸುವಂತಹುದು, ಮತ್ತೊಬ್ಬ ಮುಗ್ದ ಮಾನವನ ಪರಿಚಯವಾಗಿದೆ ಹ ಹ ಹ
ಪ್ರಕಾಶಣ್ಣ...
ತುಂಬಾ ಚೆನ್ನಾಗಿದೆ ನಿಮ್ಮ ಈ ಲೇಖನ..(quiet informative)
ವಿಜ್ಞಾನ ಇಷ್ಟು ಮುಂದುವರೆದರೂ ಕುಷ್ಟ ನಂತ ಜನರು ಇದ್ದಾರೆ ಎಂದರೆ ನಾಚಿಕೆಯ ವಿಷಯವೇ ಸರಿ..
ಹೆಣ್ಣು ಮಕ್ಕಳು ಈಗಿನ ಕಾಲದಲ್ಲಿ ಯಾವ ವಿಷಯದಲ್ಲೂ ಗಂಡಿಗಿಂತ ಕಡಿಮೆ ಇಲ್ಲ ಎಂದು ಈ ಜನ ಯಾವಾಗ ತಿಳಿದು ಕೊಳ್ಲುತ್ತಾರೋ???:(
ಸದ್ಯ ಆಮೇಲಾದರೂ ಕುಷ್ಟನಿಗೆ ಬುದ್ದಿ ಬಂದಿತಲ್ಲ ..ಅದೇ ಸಂತೋಷ!!!
ಪ್ರಕಾಶ್ ರವರೇ,
ನಾನು ಒಮ್ಮೆಯೂ ಹಳ್ಳಿಯ ಜೀವನವನ್ನು ನೋಡಿಲ್ಲ. ಹಾಗಾಗಿ ಯಾರಾದರೂ ಹಳ್ಳಿಯ ಬಗ್ಗೆ ಮಾತಾಡಿದರೆ ನನ್ನ ಮೈಯೆಲ್ಲಾ ಕಿವಿಯಾಗುತ್ತದೆ. ಅಂಥ ಮುಗ್ಧತೆ ಬಗ್ಗೆ ಆಶ್ಚರ್ಯವಾಗುತ್ತದೆ!!! ಈಗ ಬ್ಲಾಗುಗಳಲ್ಲಿ ಹಳ್ಳಿ ವಿಷಯ ಕೇಳಿ ಒಂಥರಾ ವಿಶೇಷವೆನಿಸುತ್ತದೆ.
ಇನ್ನಷ್ಟು ಬರೆಯಿರಿ :)
ಪ್ರಕಾಶ್ ಸರ್,
ಕುಷ್ಟನ ವೆಲ್ಡಿಂಗ್ ಕತೆ ತುಂಬಾ ಚೆನ್ನಾಗಿದೆ. ಓದಿ ನಗುಬಂತು . ಆತನ ಮಾತಿನಲ್ಲಿ ಅದೆಷ್ಟು ಮುಗ್ದತೆ, ಆತನ ಆಡುಭಾಷೆ, ಕಾಮತ್ ಡಾಕ್ಟರು...ಇತ್ಯಾದಿಗಳೆಲ್ಲಾ ತುಂಬಾ ಚೆನ್ನಾಗಿ ಮೂಡಿಬಂದಿವೆ...
ಇನ್ನೂ ಎಂಥೆಂಥ ಪದಗಳು ನಿಮ್ಮಲ್ಲಿವೆಯೋ ನಾಕಾಣೆ...
ಪಕ್ಕೇಶ ಹೆಗಡೇರೆ,
ಹಾಸ್ಯದ ಅಂತರಂಗದಲ್ಲಿಯೇ ಜೀವನದರ್ಶನವನ್ನು ಅಡಗಿಸಿಕೊಂಡ ಕತೆ ಇದು.
‘ಕುಷ್ಟ’ ಭಾರಿ ಇಷ್ಟವಾದ.
Hello Sir,
Thumba chennagide
sikapatte nagu banthu
ಮೂರ್ತಿ ಹೊಸಬಾಳೆ...
ಈ ಲೇಖನ ಸಿದ್ದ ಪಡಿಸಿ ಅಣ್ಣನಿಗೆ ಫೋನ್ ಮಾಡಿದ್ದೆ..
ನನ್ನಣ್ಣ ಕುಷ್ಟನಿಗೆ ನನ್ನ ಲೇಖನದ ಬಗೆಗೆ ಹೇಳಿದನಂತೆ..
"ಪಕಾಸ್.. ಹೆಗ್ಡೇರ ಪುಸ್ತಕದಲ್ಲಿ ನನ್ನ ಹೆಸ್ರು ಬರ್ತದೆ ಅಂದ್ರೆ ..
ಬರ್ಲಿ ಬಿಡ್ರಾ.." ಅಂದನಂತೆ..
ಅವನಿಗೆ ವಿಷಯ ಗೊತ್ತು.....
ಅವನು ಹೆಳಿದ ನಮ್ಮ ಬದುಕಿನ ಕಟುಸತ್ಯ ..
ಅಕ್ಷರ ಜ್ಞಾನವಿಲ್ಲದಿದ್ದರೂ ಬದುಕಿನ ಅರ್ಥ...
ನಮ್ಮ ಭಾರತೀಯ ಪರಂಪರೆಯ ಮೌಢ್ಯ ಹಾಗು ಸಂಸ್ಕೃತಿಯ ತತ್ವದ ಸಮ್ಮೀಳನ...
ಈ ಕುಷ್ಟ... ಪ್ರತಿನಿಧಿಸುತ್ತಾನೆ..
ಅವನ ಮುಗ್ಧತೆ ಅವನಿಗೊಂದು ಮೆರಗು...
ಅಲ್ಲವಾ...?
ಮೂರ್ತಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ನಿಮ್ಮ ಬ್ಲಾಗಿನಲ್ಲಿ ನಮ್ಮೆಲ್ಲ ನಗಿಸುತ್ತಿರುವದಕ್ಕೆ ಅಭಿನಂದನೆಗಳು...
ಪ್ರಕಾಶ್ ಅವರೆ,
ಒಳ್ಳೆಯ ವಿಚಾರದ ಬಗ್ಗೆ ಬರೆದಿದ್ದೀರ. ಈ ಕಾಲದಲ್ಲೂ ಹೆಣ್ಣುಮಕ್ಕಳನ್ನು ಕೀಳಾಗಿ ನೋಡುವುದು ದುರಂತ.
ಆದರೆ ಜನಸಂಖ್ಯೆ ಹೆಚ್ಚಾಗುತ್ತಿದೆ ಆದುದರಿಂದ ಎರಡೇ ಸಾಕು ಅನ್ನುವ ವಿಚಾರ ನಾನು ಒಪ್ಪುವುದಿಲ್ಲ. ಒಂದು ಪರಂಪರೆ ಉಳಿಯಬೇಕಾದರೆ ಕನಿಷ್ಠಪಕ್ಷ ೨.೨ ಫರ್ಟಿಲಿಟಿ ರೇಟ್ ಇರಬೇಕು ಎಂದು ಒಂದು ರಿಸರ್ಚ್ ಹೇಳುತ್ತದೆ. ಇದರ ಬಗ್ಗೆ ಗೂಗಲ್ ಮಾಡಿ ನೋಡಿ.
nimma barahagala visheshathene adu... yaaraadaru obba paathradhaari alli visheshavaagi iruththaane... naagu, pettige gappathi, shaari eega kushta... prakashanna idu thumba chendha iththu... odi kushi aaythu....
[nimma pusthakakke kaaytha ideeni]
ರಶ್ಮೀ....
ಕಾಮತ್ರು ಡಾಕ್ಟರ್ ಅಲ್ಲಾ...
ಅವರು ಮಾಟ, ಮಂತ್ರ ಮಾಡಿಕೊಡುವವರು..
"ನನ್ನ ಮಗು ಹೋವೇ.. ಹೂ... ಕಾಮತ್ ಥರ ಅಂದಾಗ ಸಿಕ್ಕಾಪಟ್ಟೆ ನಗು ಬಂದಿತ್ತು..
ಈ ಕುಷ್ಟನ ಹೆಂಡತಿ ಬೆಳ್ಳಗಿದ್ದಾಳೆ..
ಅದಕ್ಕೆ ಬಿಳಿ ಮಗು ಹುಟ್ಟಿದೆ...
ಹಳ್ಳಿಗಳಲ್ಲಿ ಇನ್ನೂ ಅಂಥವರು ಸಿಗುತ್ತಾರೆ..
ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...
ಕ್ಷಣ ಚಿಂತನೆ...
ಒಂದು ಕಡೆ.. ಅತಿ ಪ್ರೀತಿ.. ಮುಗ್ಧತೆ...
ನೀವೂ ತಯತ ಕಟ್ಟಿಸ್ಕೋಬೇಕು ಎನ್ನುವ ಒತ್ತಾಯ...
ನನಗಂತೂ ಎಡವಟ್ಟಾಯಿತು..
ನೀವು ಹಾಗೆ ಮಾಡ್ಕೋಬೇಡಿ... ಅನ್ನುವ ಒತ್ತಾಯ...
ನನ್ನ ಅಣ್ಣ ಈಗಲೂ ನನ್ನನ್ನು ಛೇಡಿಸುತ್ತಾರೆ...
"ಪ್ರಕಾಶ.. ಕಾಮತ್ರ ತಾಯತ ಕಟ್ಟಿಸ್ಕೊಂಡಿದ್ದ...
ಗಂಡು ಮಗು ಆಗಿದೆ..."
ನಾನಂತೂ ಈ ತಾಯತಗಳ ವಿರೋಧಿ...
ಒಟ್ಟಿನಲ್ಲಿ ಆ ಪ್ರಸಂಗ ಮಜವಾಗಿತ್ತು....
ಹ್ಹಾ ಹ್ಹಾ ಹ್ಹಾ..
ವೆಲ್ಡಿಂಗ್ ಪುರಾಣ ತುಂಬಾ ಚನ್ನಾಗಿದೆ
ಹ್ಹ ಹ್ಹ ಹ್ಹಾ... ಏನು ಮಾತಾಡಿದ್ರೆ ಏನು ಅಪಾರ್ಥ ಆಗಬಹುದು ಅಂತ ಯೋಚನೆ ಮಾಡೋಕೂ ತಿಳಿಯದಷ್ಟು ಮುಗ್ಧರು ಇರ್ತಾರಲ್ವಾ ಈ ಹಳ್ಳಿ ಜನ.. ಎಲ್ಲೋ ಓದಿದ ನೆನಪು.. ಹೀಗೆ ಒಬ್ಬರ ಮನೇಲಿ ಕೆಲಸದಾಳು ಒಬ್ಬ ಜೀತಕ್ಕೆ ಇರ್ತಾನೆ.. ಅವನಿಗೆ ಮದ್ವೆ ಮಾಡ್ತಾರೆ.. ಆದರೆ ಗಂಡ ಜೀತದ ಮನೇಲಿ, ಹೆಂಡತಿ ಊರಲ್ಲಿ.. ಈತಮದುವೆ ದಿನದ ನಂತರ ಯಾವತ್ತೂ ಹೆಂಡತಿನ ನೋಡೋಕೆ ಊರಿಗೆ ಹೋದವನಲ್ಲ. ಆದರೂ ಒಂದರ ಮೇಲೊಂದರಂತೆ ಮಕ್ಕಳು ಆಗ್ತಾವೆ.. ಏನೋ ಇದೆಲ್ಲ, ಇದು ಹೇಗೆ ಸಾಧ್ಯ ಅಂತ ಕೇಳಿದ್ರೆ ಪಾಪ ಈ ಮುಗ್ಧ ಹೇಳ್ತಾನೇ "ಅಯ್ಯೋ ಎಲ್ಲ ದೇವ್ರ ದಯೆ ಬುದ್ಧಿ" ಅಂದನಂತೆ :)
ಕುಷ್ಟನ ಪ್ರೇಮ ವಿವಾಹ ಹೇಗಾಯ್ತು ಎಂದು ದಯಮಾಡಿ ಹೇಳುವಂತವರಾಗಿ :)
ಕುಷ್ಟನ ನಿಜವಾದ ಹೆಸರು ಕೃಷ್ಣ ಎಂದೇ?
ಆತ್ಮೀಯ ಪ್ರಕಾಶ ,
ನೀವು ಬರ್ದೀರೋದು ಓದಿದ್ರೆ ಎಷ್ಟು ನಗು ಬಂತು ಅಂದ್ರೆ ...ಇದೇ ಎರಡು ಪಾತ್ರನ ಟೆನ್ನಿಸ್ ಕೃಷ್ಣ - ಸಾದು ಯಾರ್ಗೆಂದ್ರೆ ಯಾರಿಗೂ ಆಕ್ಟಿಂಗ್ ಮಾಡ್ಸಿದ್ರು ಇಷ್ಟು ನಗು ಬರ್ತಿರ್ಲಿಲ್ಲ ಅನ್ಸುತ್ತೆ...
ಸೂಪರ್ರು
ಪುಟ್ಟಿಯ ಅಮ್ಮ... (ರೂಪಾಶ್ರೀಯವರೆ...)
ಈ ಕುಷ್ಟನ ಪ್ರೇಮ ಪ್ರಸಂಗ ತುಂಬಾ ಸೊಗಸಾಗಿದೆ...
ಆದರೆ ಅದನ್ನು ಬರೆಯುವದು ಹೇಗೆ...?
ಅದೊಂದು ಸವಾಲು ಅಂದುಕೊಂಡಿದ್ದೇನೆ...
ಮೂಲ ತೊಡಕು "ಅವನ ಭಾಷೆ"
ಅವನ ಭಾಷೆಯಲ್ಲೇ.. ಬರೆದರೆ ಅದರ ಮಜವೇ ಬೇರೆ..
ಅವನ ಪ್ರೇಮವಿವಾಹದ ಬಗೆಗೆ ಬರೆಯುವ ಮೊದಲು ಅವನೊಡನೆ ಕಳೆದ ಬಾಲ್ಯದ ಕ್ಷಣಗಳನ್ನು ಹಂಚಿಕೊಳ್ಳಲೇ ಬೇಕು...
ಆತ ಕೆಲವು ದಿನ ಸ್ಕೂಲಿಗೂ ಬಂದಿದ್ದ..
ನೋಡೋಣ ಏನಾಗುತ್ತದೆಂದು...
ಇಷ್ಟಪಟ್ಟು.. ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು...
ತಮ್ಮ ಲೇಖನಗಳು ಒ೦ಥರಾ ಅದ್ಭುತವಾಗಿವೆ. ವಿಶಿಷ್ಠ ಪಾತ್ರಗಳು. ಈಗ ಕುಷ್ಠ ಅದಕ್ಕೊ೦ದು ಸೇರ್ಪಡೆ. ಓದುಗರನ್ನು ಸೆಳೆಯುವಲ್ಲಿ ತಮ್ಮ ಶೈಲಿ ವಿಶಿಷ್ಠ.
ಪಕ್ಕೇಶ ಹೆಗಡೆರೆ,
ನಿಮ್ ಲೇಖನ ಚೆನ್ನಾಗಿ ಐತ್ರಾ...
ಎಂದಿನಂತೆ ಚೆಂದದ, ಕುತೂಹಲ ಹುಟ್ಟಿಸುವ ಬರಹ.
-ಧರಿತ್ರಿ
ಸಖತ್ತಾಗಿದೆ, ನಗು ತಡ್ಯೋಕ್ಕಾಗ್ತಿಲ್ಲ :D :D :D
ಡಾ. ಗುರುಮೂರ್ತಿಯವರೆ...(ಸಾಗರದಾಚೆಯ ಇಂಚರ)
"ಹೂವೇ... ಹೂವು.."
ಅದೇ ಥರಹ,,, ಅಂತ...
ಇದನ್ನು ನೋಡಿದರೆ..ಅದನ್ನು ನೋಡುವ ಅಗತ್ಯವೇ ಇಲ್ಲ" ಅಂತ.
ಅದು ಹಳ್ಳಿಗರ "ನುಡಿಗಟ್ಟು"
ಕುಷ್ಟ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಮಲ್ಲಿಕಾರ್ಜುನ್...
ಬದುಕಿದ್ದಾಗಲೂ.. ಸತ್ತ ಮೇಲೂ ಬೆಂಕಿ ಇಡುವವರು ಗಂಡು ಮಕ್ಕಳೇ...
"ವೆಡ್ಡಿಂಗ್ಗೂ... ವೆಲ್ಡಿಂಗ್ಗೂ ಬಹಳ ಹತ್ತಿರದ ಬಾಂಧವ್ಯ...
ಎರಡೂ ಇದ್ದರೇನೇ..ವೆಡ್ಡಿಂಗ್ ಯಶಸ್ವಿಯಾಗುವದು..
"ವಿಶ್ ಯು ಹ್ಯಾಪಿ ವೆಲ್ಡಿಂಗ್ ಎನಿವರ್ಸರಿ..!"
ಚೆನ್ನಾಗಿದೆ ನಿಮ್ಮ ಐಡಿಯಾ...!
ಪ್ರೋತ್ಸಾಹಕ್ಕಾಗಿ ಧನ್ಯವಾದಗಳು..
ಉಮೇಶ್ ದೇಸಾಯಿಯವರೆ...
ಬಡತನದ ಸ್ಥಿತಿಯಲ್ಲಿ...
ಎಂಟುಮಕ್ಕಳ ತಂದೆಯಾಗಿ..
ಸತ್ತಮೇಲೆ ಸ್ವರ್ಗಲೋಕದ ಖುಷಿಗಾಗಿ..
ಕಣ್ಣಮುಂದಿನ ಜೀವನ ಮರೆತು ಬಿಡುವದೆ...?
ಇದೆಂಥಹ ಆಧ್ಯಾತ್ಮ...?
ಇದೆಂಥಹ ನಂಬಿಕೆ...?
ಇವತ್ತಿಗೂ ನಾವು ಅದನ್ನು ನಂಬುತ್ತೀವಲ್ಲ...!
ಪ್ರತಿಕ್ರಿಯೆಗೆ ಧನ್ಯವಾದಗಳು...
ಮನಸು....
ನಮ್ಮ ದಿನ ನಿತ್ಯದ ಮಾತುಗಳಲ್ಲಿ ಬೇಕಾದಷ್ಟು ನಗು ತರುವ ಘಟನೆ ಇರುತ್ತದೆ..
ಈ ಕುಷ್ಟನ ಬಳಿ ಸುಮ್ಮನೆ ಮಾತನಾಡಿದರೂ ಸಾಕು...
ನಗು, ಮುಗ್ಧತೆಯ ವಿಷಯಗಳು ಬೇಕಾದಷ್ಟು ಸಿಗುತ್ತದೆ...
ಮುಗ್ಧತೆಯ ಪ್ರಪಂಚವೇ ಬೇರೆ ಇರುತ್ತದೆ..
ಅಲ್ಲಿನ ರೀತಿ ನೀತಿಯೇ ಬೇರೆ...
ಥಳುಕು, ಬಳುಕು ಇಲ್ಲದ...
ನಿರಾಡಂಬರ ಜೀವನ...
ಇಷ್ಟಾಪಟ್ಟಿದ್ದಕ್ಕೆ ಧನ್ಯವಾದಗಳು...
ದಿವ್ಯಾ....
ಖುಷಿಪಡಲು ಹಣ.. ಸೌಕರ್ಯವೇ ಬೇಕೆನ್ನುವ
ಆಧುನಿಕ ಸಮಾಜ ಕುಷ್ಟನಂಥಹ ಸರಳ ಪ್ರಪಂಚವನ್ನು ನಾಶಪಡಿಸುತ್ತಿದೆ...
ಇದು ಒಂದುರೀತಿಯಲ್ಲಿ ತಪ್ಪೆನಿಸುತ್ತದೆ...
ಗಂಡು ಬೇಕೆಂದು ಏಳು ಹೆಣ್ಣು ಮಗು ಪಡೆದ ಅವನ ನಿರ್ಧಾರ ತಪ್ಪು...
ಆದರೆ ಜೀವನದ ಖುಷಿಗಾಗಿ ಕುಟುಂಬ ಚಿಕ್ಕದಾಗಿ ಮಾಡುವ ವಿಚಾರವೂ ಒಂದುರೀತಿಯಲ್ಲಿ ...ಸರಿಯೇ..?
ತಮ್ಮ ಮಕ್ಕಳು ತಮಗೆ ಹೊರೆಯಲ್ಲ ಎಂದಾಗ..
ತಮ್ಮ ಅಪ್ಪ ಅಮ್ಮಂದಿರೂ ತಮಗೆ ಭಾರವಲ್ಲ ಎನ್ನುವ ಗುಪ್ತ ಸಂದೇಶ ಕೊಡ ಬಹುದಾ...?
ಆಧುನಿಕತೆಯ ನೆಪದಲ್ಲಿ ಮೌಲ್ಯಗಳು
ಸರಿಯಾಗುತ್ತಿದ್ದರೂ...
ಎಲ್ಲೊ ಒಂದು ಕಡೆ ಕುಸಿಯುತ್ತಿದೆ... ಅಲ್ಲವೆ...?
ಧನ್ಯವಾದಗಳು ..ಚಂದದ ಪ್ರತಿಕ್ರಿಯೆಗೆ...
ರೂಪಾಶ್ರೀಯವರೆ...
ನಮ್ಮ ದೇಶ ಹಳ್ಳಿಗಳಿಂದಲೇ ಆದದ್ದು..
ಆಧಿನಿಕತೆಯ ಸೋಗಿಲ್ಲದ. ಈವನ ಅದು...
ಈಗ ಕಾಲ ಬದಲಾಗುತ್ತಿದೆ...
ಅಲ್ಲೂ ಮನೆಗಳಿಗೆ ಕಂಪೌಂಡ್ ಹಾಕಲು ಶುರುಮಾಡಿದ್ದಾರೆ..
ಮನೆಯ ಬಾಗಿಲುಗಳನ್ನು ಮುಚ್ಚಿಡುತ್ತಿದ್ದಾರೆ..
ನಾನು ಬೆಳೆದ ಹಳ್ಳಿ ಹಾಗಿಲ್ಲವಾಗಿತ್ತು...
ಖಂಡಿತ ಆ ದಿನಗಳ ಬಗೆಗೆ ಬರೆಯುವೆ...
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ನಿಮ್ಮ 'ಕುಷ್ಟ' ತುಂಬಾ ಕಷ್ಟ ಮಾರಾಯ್ರೆ.... ಹಳ್ಳಿಯಲ್ಲಿ ಇನ್ನೂ ಎಷ್ಟು ಮುಗ್ದ ಜನರಿದ್ದಾರೆ ಅಂತ ಇದರಲ್ಲಿ ಗೊತ್ತಾಗತ್ತೆ. ನಿಮ್ಮ ಲೇಖನ ತುಂಬಾ ಚೆನ್ನಾಗಿತ್ತು.... ಹೊಟ್ಟೆ ತುಂಬಾ ನಕ್ಕೆವು....
ಶಿವು ಸರ್...
ನಮ್ಮ ಕಾಮತ್ರ ಮಾಟ ಮಂತ್ರದ ಇನ್ನೊಂದು ಮಜಾ ಕಥೆ ಇದೆ..
ಅದನ್ನು ಹೇಗೆ ಹೇಳುವದು... ಅಂತ ?
ಅದೂ ಕೂಡ ಮಸ್ತ್ ಇದೆ...
ಮತ್ತೊಮ್ಮೆ ಯಾವಾಗಲಾದ್ರೂ ಬರೆಯುವೆ...
ಈ ರಿಸೆಷನ್ ದಿನಗಳಲ್ಲಿ ಬರೆಯುವ ಮೂಡ್ ಇರುವದಿಲ್ಲ...
ನನಗಂತೂ ಬರೆಯಲಿಕ್ಕೆ ಮೂಡ್ ಬೇಕು...
ಬೇಕಾದಷ್ಟು ಘಟನೆಗಳಿವೆ...
ಆ ಮೂಡ್ ಇದ್ದರೆ ಬರೆಯ ಬಹುದು...
ಕುಷ್ಟ ಇಷ್ಟೆಲ್ಲ ಜನಪ್ರಿಯ ಆಗ್ತನಂತ ನನಗನ್ನಿಸಿರಲ್ಲಿಲ್ಲ..
ನೀವೆಲ್ಲ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...
Nice one annayya..
:)
i think ninge iglu avanna nodire nagu battikku alda?
olle nin kushta,
but its nice article.. :P
ಸುನಾಥ ಸರ್...
ಕುಷ್ಟನ ಮುಗ್ಧತೆ... ನನಗೂ ಇಷ್ಟ..
ಅವನ ಬಳಿ ಮಾತನಾಡುವದೇ ಮಜ...
ಧನ್ಯವಾದಗಳು...
ವೀಣಾರವರೆ..
ನೀವು ಬರುವದಷ್ಟೇ ಅಲ್ಲ..
ಬರೆಯುವದೂ ಅಪರೂಪ ಆಗಿಬಿಟ್ಟಿದೆ...
ಬರೆಯಿರಿ ..
ಬರುತ್ತಾ ಇರಿ...
ಈ ಘಟನೆ ನೆನಪಾದಗಲೆಲ್ಲ ನಗು ಬರುತ್ತದೆ...
ವಂದನೆಗಳು...
ಸೂಪರ್.. ನಿಮ್ಮ ಕುಸ್ಟನ ವೆಲ್ಡಿಂಗ್ ಕಥೆ ಕೇಳಿ ನಕ್ಕು ನಕ್ಕು ಸಾಕೈತು..
ಕುಷ್ಟನ ಭಾಷೆ ಸೊಗಸಾಗಿದೆ.:)
ಗೋವುವಿನ ಬಣ್ಣವಿಲ್ಲದ ಬದುಕು, ದೇವರಿಲ್ಲದ ಜಗತ್ತು, ಯೋಚಿಸಿದರೆ ಈ ಸೂರ್ಯ ಚಂದ್ರರೇ ಇರ್ತಾ ಇರ್ಲಿಲ್ಲ, ಕುಷ್ಟ ನ ಥರ ಯೋಚನೆ ಮಾಡೋರು ನನಗೆ ಗೊತ್ತಿರೋರು ಒಬ್ಬರಿದ್ದಾರೆ, ಅವ್ರು ಅದೇ ಥರ ದೇವ್ರು ಕೊಟ್ಟಿದ್ದು ಅಂತ ವರ್ಷಕೊಂದರಂತೆ ೪ ಹೆಣ್ಣು ಮಕ್ಕಳನ್ನ ಹೊಂದಿದರು, ಒಂದು ಮೂರು ವರ್ಷ ಬಿಟ್ಟು ಗಂಡಿಗೆ ಟ್ರೈ ಮಾಡಿ ಅಂತು ಇಂತೂ ಗಂಡು ಮಗುನ ಹೆತ್ತರು, ಇವಾಗ ಹೇಳ್ತಾರೆ ಮೊದಲೇ ಒಂದು ಮೂರು ವರ್ಷ ಬಿಟ್ಟು ಟ್ರೈ ಮಾಡಬೇಕಿತ್ತು ಅಂತ
Post a Comment