Thursday, May 14, 2009

ಚಂದಕ್ಕಿಂತ... ಚಂದ... ಕಿವಿಯು... ಸುಂದರಾ...!!





ಒಂದು ಜನಪ್ರಿಯ "ಲಾವಣಿ" ಇದೆ ಕೇಳಿ.....

ತನ್ನ ಹೆಂಡತಿ ಪತಿವ್ರತೆಯೆಂದು...
ತವರು ಮನೆಗೆ ಆರು ತಿಂಗಳು ಕಳಿಸ ಬಾರದ್ರಿ....
ಕಳಿಸಿದ್ರೆ ಕಳಿಸಿಕೊಳ್ಳಿ .. ಮತ್ತೆ ಒಂದು ಹೇಳುತ್ತೀನಿ....

"ಹೆಂಡತಿ ಕರ್ಕೊಂಡು ಲಗ್ನಕ್ಕ ಹೋಗ ಬಾರದ್ರಿ.."

ಮಡದಿ ಜೊತೆ "ಮದುವೆಗೆ" ಹೋಗ ಬಾರದಂತೆ....

ಊರಿಗೆ ಹೋದಾಗ ಒಂದು ಮದುವೆಗೂ ಹೋಗಿದ್ದೆ..
ಜೊತೆಗೇ ನನ್ನಾಕೆಯೂ ಇದ್ದರು.....
ಹೆಗಲಲ್ಲಿ ಕ್ಯಾಮರಾ.......

ಅಲ್ಲಿನ ಗಡಿಬಿಡಿ, ಸಂಭ್ರಮ,
ಸಡಗರ ಸಂತೋಷದ ವಾತಾವರಣ ಗಮನಿಸುತ್ತಿದ್ದೆ...
ರೇಷ್ಮೆ ಸೀರೆ, ಮೈ ತುಂಬಾ ಆಭರಣ, ಮುಡಿ ತುಂಬಾ ಹೂ...
ಆ ನಗು, ಆ ಸಂತೋಷ...

ದೊಡ್ಡ ಧ್ವನಿಯಲ್ಲಿ ಬಾಯಿತುಂಬಾ ಮಾತುಗಳು....
.... ಗದ್ದಲ.....
ಹಾಡುಗಳು...

ಕ್ಯಾಮರಾ ಲೆನ್ಸ್ ನಲ್ಲಿ ಇವೆಲ್ಲ ನೋಡುತ್ತಾ ಕುಳಿತಿದ್ದೆ...

ನನ್ನಾಕೆಗೆ ಹಾಗೆಲ್ಲ ಬಹಳ ಹೊತ್ತು ಸುಮ್ಮನಿರಲಾಗುವದಿಲ್ಲ...

ತಾನು ಮಾತಾಡಬೇಕು ...
ಇಲ್ಲವೇ ಬೇರೆಯವರು ತನ್ನ ಮಾತನ್ನು ಕೇಳಬೇಕು...

ಎರಡರಲ್ಲಿ ಒಂದು ಆಗುತ್ತಿರ ಬೇಕು....

" ರ್ರೀ... ಏನು ನೋಡ್ತಾ ಇದ್ದೀರಿ..? "

"ಈ ಜನರನ್ನು ಗಮನಿಸುತ್ತಾ ಇದ್ದೇನೆ ಕಣೆ"

"ಈ ಹೆಂಗಳೆಯರನ್ನು ನೋಡಿದ್ರಾ...?"

" ಹೂಂ ಕಣೆ...."

"ನೀವು ಒಂದು ಹೆಣ್ಣನ್ನು ನೋಡಿದಾಗ ಏನೇನು ನೋಡ್ತೀರಿ..? "

ಇದೇನು.... ಇಷ್ಟು ವರ್ಷ ಆದಮೇಲೆ ಹೀಗೇಕೆ ಕೇಳ್ತಾ ಇದ್ದಾಳೆ...?
ನನಗೆ ಸೋಜಿಗವಾಯಿತು.....

" ಏನೆಲ್ಲ ನೋಡ ಬೇಕು ಅನ್ನಿಸಿದ್ರೂ......
ನನ್ನ ವಯಸ್ಸು,
ಸಿಕ್ಕಿದ ಸಂಸ್ಕಾರ,
ನಿನ್ನ ನೆನಪಾದರೆ ಹಾಗೆಲ್ಲ ಏನೂ ನೋಡಲಿಕ್ಕೆ ಹೋಗುವದಿಲ್ಲ ಕಣೆ...
ಸ್ವಲ್ಪ ಸಭ್ಯಸ್ಥ ನಾನು..."

"ಥೂ... ಎಲ್ಲಿಂದ ಎಲ್ಲಿಗೆ ಹೋಗಿ ಬಿಡ್ತೀರಪ್ಪಾ...
ಏನೇ ಮಾತಾಡಿದ್ರೂ ಅಲ್ಲಿಗೆ ತಂದು ನಿಲ್ಲಿಸಿ ಬಿಡ್ತಿರಪ್ಪಾ....
ನಾಚಿಕೆನು ಆಗೋಲ್ವಾ...?
ನಾನು ಹೇಳಿದ್ದು ಹೆಣ್ಣಿನ ಮುಖದಲ್ಲಿ ಏನೇನು ನೋಡ್ತೀರಿ... ? ಅಂತ..."

"ನಾನು ಮೊದಲು ನೋಡುವದು ಮೂಗು.."

" ಎಲ್ಲಾ ಬಿಟ್ಟು "ಮೂಗಾ" ...? ಏಕೆ...? "

" ಮುಖದ ಆಕಾರ,
ಕಣ್ಣು ಬಾಯಿ ಎಲ್ಲವೂ ಚೆನ್ನಾಗಿದ್ದರೂ..
ಆ ಮುಖಕ್ಕೆ ಹೊಂದುವಂಥ ಮೂಗು ಇಲ್ಲದಿದ್ದರೆ..
ಉಳಿದವಗಳ ಚಂದ ವೇಸ್ಟ್..
ಇದು ನನ್ನ ಅಭಿಪ್ರಾಯ "

"ಮತ್ತೆ ಏನೇನು ನೋಡ್ತೀರಿ...?"

"ನಂತರ ಕಣ್ಣು.."

"ಅದು ಗೊತ್ತು .. ವಿಜಯಾಕಣ್ಣು..,
ಹೈಸ್ಕೂಲಲ್ಲಿ ಕಾಡಿತ್ತು ಅಂತೆಲ್ಲಾ ಅಂತೆಲ್ಲ ಕೊರಿಬೇಡಿ..
ಮುಂದೆ ಹೋಗಿ ಮತ್ತೆ ...?"

"ತುಟಿ, ಕೆನ್ನೆ...
ಕೆನ್ನೆ ದೊಡ್ಡದಾಗಿದ್ದರೆ ಚಂದ..,
ಹಣೆಯಲ್ಲಿ ಕುಂಕುಮ...."

" ಸಾಕು... ಸಾಕು... ಇವತ್ತು ನಿಮಗೆ ಒಂದು ವಿಶೇಷ ತೋರಿಸ್ತೇನೆ...
ಅದೋ... ಅಲ್ಲಿ ನೀಲಿ ರೇಷ್ಮೆ ಸೀರೆಯವರ ಕಿವಿಗೆ ನಿಮ್ಮ ಕ್ಯಾಮರಾ ಝೂಮ್ ಮಾಡಿ..."

ನಾನು ಝೂಮ್ ಮಾಡಿ ನೋಡಿದೆ...

ಅಬ್ಭಾ...!
ಎಷ್ಟು ಚಂದದ ಕಿವಿ...?
ಅದರ ಅಲಂಕಾರ...!
ಮುಂಗುರುಳಿನ ಸಂಗಡ ಇಳಿಬಿಟ್ಟ ಆಭರಣಗಳು...
ಎಷ್ಟೊಂದು ವಿನ್ಯಾಸಗಳು......!!

ಹೆಣ್ಣಿನ ಕಿವಿ ಇಷ್ಟು ಸುಂದರವಾಗಿರುತ್ತದಾ..?...?

ವಾವ್....!

ನಾನು ಮಾತು ಬಾರದೇ ಮೂಕನಾಗಿದ್ದೆ...

ಮತ್ತಷ್ಟು ಹೆಂಗಳೆಯರ ಕಿವಿಗಳಿಗೆ ಫೋಕಸ್ ಮಾಡಿದೆ...

ಒಂದಕ್ಕಿಂತ ಒಂದು ಸುಂದರ....!




ಮಾನಿನಿ... ನೀನೆ ಚಂದ....
ನಿನ್ನ ಕಿವಿಗೆ... ... ಮತ್ತೇಕೆ ... " ಅಂದ." .....?




ಮುಖವೇ " ಚಂದ " ಅನ್ನುವವರಿಗೆ...
ಕಿವಿಯಲ್ಲೂ.... .. " ಅಂದ " ತೋರಿಸಿದೆಯಲ್ಲೇ....!!

ಮುಖದ ಪಕ್ಕದ ಕಿವಿ...
ಕೂದಲು ಮುಚ್ಚಿಕೊಂಡರೂ ಅದಕ್ಕೆ ಚಂದ ಬೇಕೆ...?






ಕಿವಿಯ ಅಲಂಕಾರದಲ್ಲೂ ಎಷ್ಟೊಂದು ಬಗೆ...?




.... ಹೆಣ್ಣೇ ..
ನಿನ್ನ ಸೊಂದರ್ಯ ಪ್ರಜ್ಞೆಗೊಂದು ನಮಸ್ಕಾರ...!!




ಸರಳತೆಯಲ್ಲೂ ಚಂದವೇನೆ.... ಓ.. ಭಾಮಿನಿ....??..




ಅಲಂಕಾರಕ್ಕೆ ಬಡವ, ಬಲ್ಲಿದ ಅಂತ ಭೇದ ಇಲ್ಲ ಸ್ವಾಮಿ....!!



ಮುತ್ತು ಮಳೆಗಾಗಿ ಹೊತ್ತು ಕಾದಿದೆ...
ಕಿವಿಗೂ
ಮುತ್ತೇ...?






ಇಳಿವಯಸ್ಸಿನಲ್ಲೂ ಚಂದದ ಬಗೆಗೆ ಅಭಿಮಾನ...
ಅಲಂಕಾರದ ಸಂಭ್ರಮ...!!





ಎಲ್ಲೆಲ್ಲೂ ಸೌಂದರ್ಯವೇ....!
ಕೇಳುವ ಕಿವಿ ಇರಲು....!
ನೋಡುವ ಕಣ್ಣಿರಲು....!



ಚಂದಕ್ಕಿಂತ ... ಚಂದ... ಕಿವಿಯು ಸುಂದರಾ...!!




ತಲೆ ಕೂದಲಿಗೆ ಬಗೆ ಬಗೆ ವಿನ್ಯಾಸ......
ಹೂ ಗಳ ಅಲಂಕಾರ....
ಮೂಗಿಗೂ ಬಗೆಬಗೆಯ ಶ್ರಂಗಾರ....
ಕಿವಿಯ ಆಭರಣಗಳ ಬೆಡಗು...
ಕೊರಳಿಗೆ ಹಾರಗಳ ಸೊಬಗು....

... ಹೆಣ್ಣೇ...
ನಿನ್ನ.....
ಸೌಂದರ್ಯದ ಪ್ರಜ್ಞೆಗೆ...!
ಅಂದ.., ಚಂದದ ಅಭಿಮಾನಕ್ಕೆ...!
ಮಗ್ನವಾಗಿ ಅಲಂಕರಿಸಿಕೊಳ್ಳುವ ಶ್ರದ್ಧೆಗೆ....!

ಸಾವಿರ.... ಕೋಟಿ... ಪ್ರಣಾಮಗಳು.....!!




(ಕಿವಿಯ ಅಲಂಕಾರದ ಬಗೆಗೆ ಇನ್ನೂ ಇವೆ....
ಹೆಣ್ಣಿನ ಕೇಶ ವಿನ್ಯಾಸ...
ಜಡೆಗಳ ಗಂಟು... ಮೊಗ್ಗಿನ ಜಡೆ ಅವುಗಳ ಬಗೆಗೆ ,
ಹಣೆಯ ಕುಂಕುಮ, ಬಿಂದಿಗಳ ಬಗೆಗೆ ,
ಕೈಗೆ ಮೆಹಂದಿ ಮತ್ತು ಬಳೆಗಳ ಅಲಂಕಾರ..,
ಕೊರಳಿನ ಹಾರಗಳು...

ಸೊಂಟದ ಪಟ್ಟಿ....
ಇತ್ಯಾದಿಗಳ ಬಗೆಗೆ ಮುಂದೆ ಬರಲಿದೆ... ನಿರೀಕ್ಷಿಸಿ....
ಚಿತ್ರ ಲೇಖನಕ್ಕೆ ಕಿವಿಯ ಆಭರಣಗಳ ಅಂದ ತೋರಿಸಿದ
ಎಲ್ಲ ಮಾನಿನಿಯರಿಗೆ ಕ್ರತಜ್ನತೆಗಳು...)

75 comments:

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ,
ಕಿವಿಯ ಅಲಂಕಾರದ ಬಗೆಗಿನ ಲೇಖನ ಸುಂದರವಾಗಿ ಮೂಡಿ ಬಂದಿದೆ. ನಿಮ್ಮ ಸಂಶೋಧನೆಗೊಂದು ಅಬಿನಂದನೆ. ಫೋಟೊಗಳಂತೂ ಅಧ್ಭುತ

ಬಾಲು said...

kivige haakuva aabharana galu ishtu irthava? innu mele hudugeera kivi mele ondu kannu idabeku!!! chennagide chitra lekhana

PARAANJAPE K.N. said...

ಪ್ರಕಾಶರೆ
ಚೆನ್ನಾಗಿದೆ ಕಿವಿಪುರಾಣ. ಸರ್ವಾಲ೦ಕಾರಭೂಷಿತ ಕಿವಿಗಳನ್ನು ತೋರಿಸಿದ್ದೀರಿ. ಒ೦ದೇ ಒ೦ದು ನಿರಾಭರಣ ಸು೦ದರ ಕಿವಿ ಸಿಕ್ಕಿಲ್ಲೆನಿಸುತ್ತದೆ ನಿಮಗೆ ಅಲ್ಲವೇ ? ಶಿವೂ ಗೆ ಬೋಳುತಲೆ ಹಿ೦ಭಾಗ ಕ್ಲಿಕ್ಕಿಸುವ (ಬಹುಶ ಐಡಿಯ ನೀವೇ ಕೊಟ್ಟಿದ್ದೆ೦ದು ಅವರು ಹೇಳಿದ ನೆನಪು) ಐಡಿಯ ಕೊಟ್ಟು ನೀವು ಕಿವಿ ಕಡೆ ಗಮನ ಹರಿಸಿದ್ದೀರಿ. ಇನ್ನು ಏನೇನೋ ತೋರಿಸ್ತೀರೋ ಅ೦ತ ಕಾದಿದ್ದೇನೆ.

Rajesh Manjunath - ರಾಜೇಶ್ ಮಂಜುನಾಥ್ said...

ಪ್ರಕಾಶ್ ಸರ್,
ಬೊಂಬಾಟ್... ರಸವತ್ತಾದ ರಸಿಕತೆಯ ಬರಹ...

ಮನಸು said...
This comment has been removed by the author.
Ittigecement said...

ಗುರುಮೂರ್ತಿಯವರೆ (ಸಾಗರದಾಚೆಯ ಇಂಚರ)

ಹೆಣ್ಣಿಗೆ ಹೋಲಿಸಿದಾಗ ಗಂಡು ನೀರಸ.....

ಹೆಣ್ಣನ್ನು ಪ್ರಕ್ರತಿಗೆ ಹೋಲಿಸುತ್ತಾರೆ.....
ಸಣ್ಣ ಸಣ್ಣ ವಿಷಯಕ್ಕೂ ಅವರು ಪಡುವ ಸಂಭ್ರಮ,
ಅದರಲ್ಲಿ ಅವರು ಕಾಣುವ ಖುಷಿ ಸಂತೋಷ
ಗಂಡಸರಿಗೆ ಅಸಾಧ್ಯ....

ಎಷ್ಟೆಲ್ಲಾ ಅಲಂಕಾರ ಮಾಡಿ ಕೊಳ್ಳುತ್ತಾಳೆ ಈ ಹೆಣ್ಣು...
ಎಷ್ಟೊಂದು ಸಮಯ, ತಾಳ್ಮೆ....
ಸ್ವಲ್ಪ ತಡವಾದರೆ ಗದರುವ ಗಂಡಸು....

ಎಂಥಹ ಸೋಜಿಗ ಈ ಹೆಣ್ಣು....
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.....

ಮನಸು said...

ನಿಮ್ಮಾಕೆಗೆ ನಮ್ಮ ಕಡೆಯಿಂದ ಅಭಿನಂದನೆಗಳು ಆನಂತರ ನಿಮಗೆ ಏಕೆ ಹೇಳಿ ಅವರಲ್ಲವೆ ನಿಮಗೆ ಸೌಂದರ್ಯದ ಗುಟ್ಟು ತಿಳಿಸಿದ್ದು ಇಲ್ಲವಾದರೆ ನಿಮಗೆ ಹೊಳೆಯುತ್ತಲೇ ಇರಲಿಲ್ಲ.... ಸೌಂದರ್ಯ ಇರುವುದೇ ಹೆಣ್ಣಿನಲ್ಲಿ, ಆ ಹೆಣ್ಣು ರಾಶಿ ಗಿಡ, ಮರ, ಪ್ರಾಣಿ, ಪಕ್ಷಿ ಯಾವುದೇ ಆಗಿರಲ್ಲಿ ಅದರಲ್ಲಿ ವಿಶೇಷತೆ ಇರುತ್ತೇ.
ನಮ್ಮನೆಲ್ಲಾ(ಹೆಣ್ಣನ್ನು) ಹೊಗಳಿದ ನಿಮಗೊ ಧನ್ಯವಾದಗಳು....... ಈ ಫೋಟೋ ಎಲ್ಲಾ ತೋರಿಸಿ ನಮ್ಮವರನ್ನು ಪೀಡಿಸಿ ಆ ತರಹದ ಆಭರಣ ಕೊಳ್ಳೋಣ ಎಂದರೆ ನೀನೇ ಒಂದು ಬಂಗಾರ ನಿನಗ್ಯಾಗೆ ಬಂಗಾರ ಎಂದರೆ ಎಂದು ಸುಮ್ಮನಾಗಿದ್ದೇನೆ ಇಲ್ಲೇ ನೋಡಿ ಸವಿಯುತ್ತಲಿದ್ದೇನೆ ಹ ಹಹಹಾ.....
ತುಂಬಾ ಚೆನ್ನಾಗಿದೆ ಸರ್, ವಿಶೇಷತೆ ಎಲ್ಲದರಲ್ಲೂ ಎಲ್ಲರಲ್ಲು ಇರುತ್ತೆ ಎಂಬುದಕ್ಕೆ ನೀವು ಕೊಟ್ಟ ಸಣ್ಣ ಉದಾಹರಣೆ ಅಲ್ಲವೇ...? ಸೌಂದರ್ಯ ನೋಡೋ ಕಣ್ಣಿನಲ್ಲಿ, ನೋಡುವ ತರಹದಲ್ಲಿ ಇರುತ್ತೆ....ನಿಮ್ಮ ಕಲೆ ನಿಮ್ಮ ಮನೆಯವರ ಕಲೆ ಎಲ್ಲವೊ ಮೆಚ್ಚಿಗೆಯಾಗಿದೆ...
ವಂದನೆಗಳು.

Ittigecement said...

ಬಾಲು ಸರ್.....

ಈಗಿನ ಹೆಣ್ಣುಮಕ್ಕಳ ಫೋಟೊ ಇನ್ನೂ ಹಾಕಿಲ್ಲ....
ಅವುಗಳ ವಿನ್ಯಾಸ , ಚಂದ ಬೇರೇ ಥರವೇ ಇವೆ.....

ಈ ಹೆಣ್ಣೊಂದು ಸೋಜಿಗ ....

ಸರಳ ಅನ್ನಿಸಿದರೂ.....
ಬಹಳ ಗೊಜಲು.. ಗೊಜಲು.... ಸಂಕೀರ್ಣ.....

ಸುಲಭವಾಗಿ ಅರ್ಥವಾಗೊಲ್ಲ ಸರ್....

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು...

Ittigecement said...

ಪರಾಂಜಪೆಯವರೆ...

ಸ್ನೇಹಿತ ಶಿವು ಅವರ ನಡೆದಾಡುವ ಭೂಪಟಕ್ಕೆ ಐಡಿಯಾ ಕೊಟ್ಟಿದ್ದು ನಾನೇ..
ಅವರು ಅದನ್ನು ಬಹಳ ವಿಸ್ತರಿಸಿಕೊಂಡು ಹೋಗಿದ್ದಾರೆ...

ಹೆಣ್ಣು ಸಹಜವಾಗಿ ಅಲಂಕಾರ ಪ್ರಿಯೆ....
ಚಂದವಾಗಿ ಶ್ರಂಗರಿಸಿ ಕೊಳ್ಳುವದರಲ್ಲಿ ಸಂಭ್ರಮ ಪಡುತ್ತಾಳೆ..
ಸಂತೋಷ ಪಡುತ್ತಾಳೆ...

ಈ ಅಲಂಕಾರ ಎಲ್ಲ ಯಾಕೇ ಬೇಕು...?

ಆಕರ್ಷಣೆಗೆ..?

ಚಿತ್ರ ಲೇಖನ ಇಷ್ಟವಾದುದಕ್ಕೆ
ವಂದನೆಗಳು....

Ittigecement said...

ರಾಜೇಶ್.....

ತಲೆಯಿಂದ ಪಾದದವರೆಗೆ ಅಲಂಕಾರಗೊಳ್ಳುವ ಹೆಣ್ಣಿಗೆ....
ಎಷ್ಟು ಸಮಯ ಬೇಕಾಗ ಬಹುದು...?

ಸ್ವಲ್ಪ ಮುಂದೆ ಹೋಗೋಣ....
ಎಷ್ಟು ಖರ್ಚಾಗ ಬಹುದು...?

ಉಗುರು, ಅದರ ಕಟಿಂಗ್, ಪಾಲಿಷ್, ತುಟಿ ಲಿಫ್ಟಿಕ್,
ಕೆನ್ನೆಗೆ ಬಣ್ಣ, ಕಿವಿ, ಮೂಗು..
ಒಂದೇ... ಎರಡೇ....?

ಇದೆಲ್ಲ ನಮ್ಮಿಂದ ಆಗದ ಕೆಲಸ....

ಈ ಅಲಂಕಾರ, ಸಂಭ್ರಮವನ್ನು ನೋಡಿ ಖುಷಿಪಡುವದಕ್ಕೆ ದೇವರು ನಮ್ಮನ್ನು ಸ್ರಷ್ಟಿಸಿದ್ದಾನೆ...
ಏನಂತೀರಿ...?

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಮನಸು.....

ಗಂಡು ನವಿಲು ನೋಡಿದ್ದೀರಾ...?
ಅಲ್ಲಿ ಸೌಂದರ್ಯವಿದೆ....
ಹೆಣ್ಣು ನವಿಲು ಚಂದವಿಲ್ಲ...
ಬಹುಷಃ ಈ ಜಗತ್ತಿನಲ್ಲಿ ಹೆಣ್ಣು ನವಿಲೊಂದೇ ಅಪವಾದ ಇರಬಹುದು....

ಈ ಹೆಣ್ಣೆಂದರೆ ಹೊಟ್ಟೆಕಿಚ್ಚಾಗುತ್ತದೆ...
ಒಂದು ಚಿಕ್ಕಹಣೆಗೆ ಇಟ್ಟುಕೊಳ್ಳುವ "ಬಿಂದಿಯನ್ನು.."
ಖುಷಿಪಟ್ಟು ತಂದು,
ಸಂಭ್ರಮ ಪಟ್ಟು ಧರಿಸಿ...
ಖುಷಿ ಪಡುವ ಪರಿ ಇದೆಯಲ್ಲ...
ಅದು ಹೆಣ್ಣಿಗೆ ಮಾತ್ರ ಸಾಧ್ಯ....!

ನಿಮ್ಮ ಯಜಮಾನರ ಐಡಿಯ ತುಂಬಾ ಚೆನ್ನಾಗಿದೆ..
ಕಲಿಸಿಕೊಟ್ಟಿದ್ದಕ್ಕೆ "ಮಹೇಶರಿಗೆ " ವಂದನೆ ತಿಳಿಸಿ....

ಬಂಗಾರಿಗೆ ಬಂಗಾರವೇಕೆ ಬೇಕು....? ಹ್ಹಾ...ಹ್ಹಾ....!

ಈ ಚಿತ್ರ ಲೇಖನದ ಎರಡನೇ ಫೋಟೊ ನೋಡಿ.....
ಅದರಲ್ಲಿ ಐದು ತೂತು ಇವೆ...
ತೂತು ಮಾಡುವಾಗ ಎಷ್ಟೊಂದು ನೋವು ಅನುಭವಿಸಿರ ಬಹುದು...?

ಅಂದ ಚಂದಕ್ಕಾಗಿ ನೋವು ಅನುಭವಿಸ ಬೇಕು... ಅಲ್ಲವಾ...?

ಆ ನೋವಿನಲ್ಲೂ ಸಂಭ್ರಮ ಇದೆಯೇನೋ...!!

ಚಂದದ ಪ್ರತಿಕ್ರಿಯೆಗಾಗಿ
ಧನ್ಯವಾದಗಳು...

Ramya Hegde said...

ಮಸ್ತೋ ಮಸ್ತು.... ಪ್ರಕಾಶಣ್ಣ...,ಗ್ರೇಟ್ ಜಾಬ್.
very nice photography.
ಪುರಾಣದ ಕಾಲದಿಂದಲೂ ಹೆಣ್ಣು ಅಲಂಕಾರ ಪ್ರಿಯೆ ಅಂತಾನೆ ವರ್ಣನೆ ಇದ್ದು ಅಲ್ದ.ಅದೇ ಪರಂಪರೆ ಮುಂದುವರಿತಾ ಇದ್ದು ಅಷ್ಟೇ.

Ittigecement said...

ರಮ್ಯಾ.....

ಗಂಡೇಕೆ ಹೆಣ್ಣಿನಷ್ಟು ಅಲಂಕಾರ ಪ್ರಿಯ ಅಲ್ಲ...?
ಅಲಂಕಾರ ಪ್ರಿಯ ಕೆಲವು ಗಂಡಸರಿರುತ್ತಾರೆ..

ಬಹಳ ಕಡಿಮೆ...

ಇದ್ದರೂ ಅದು ಹರೆಯದಲ್ಲಿ ಮಾತ್ರ...
ಆದರೆ ಹೆಣ್ಣನ್ನು ನೋಡಿ ಎಂಬತ್ತರ ವಯಸ್ಸಿನಲ್ಲೂ...
ಅಲಂಕಾರ ಮಾಡಿಕೊಳ್ಳುವದನ್ನು ನಾನು ನೋಡಿದ್ದೇನೆ...

ಬದುಕಿನಲ್ಲಿ ಆಸಕ್ತಿ...
ಖುಷಿಪಡುವ ಸ್ವಭಾವ ಹೆಣ್ಣಿಗೆ ಜಾಸ್ತಿ ಇರುತ್ತದೆ...

ಚಿತ್ರ ಲೇಖನ ಇಷ್ಟವಾದುದಕ್ಕೆ
ಧನ್ಯವಾದಗಳು...

sunaath said...

ಹೆಣ್ಣುಮಕ್ಕಳ ಕರ್ಣಾಭರಣಗಳ ಕಡೆಗೆ ನಿಮ್ಮ ಗಮನ ಸೆಳೆದ ನಿಮ್ಮ ಶ್ರೀಮತಿಯವರು, ತಮಗೂ ಅಂತಹದೇ ಬೇಕು ಎಂದು
ಕೇಳಲಿಲ್ಲವೆ? ನೀವೇ ಅದೃಷ್ಟವಂತರು!

ಶಿವಪ್ರಕಾಶ್ said...

"ಎಲ್ಲೆಲ್ಲೂ ಸೌಂದರ್ಯವೇ....!
ಕೇಳುವ ಕಿವಿ ಇರಲು....!
ನೋಡುವ ಕಣ್ಣಿರಲು....!"
ಸಕತ್ ಆಗಿ ಮ್ಯಾಚ್ ಮಾಡಿದಿರಿ....
ಕಿವಿಗಳು ಇಷ್ಟವಾದವು,
ಕಿವಿಗಳಿಗಿಂತ. ಕಿವಿ ಜೊತೆಗೆ ಇದ್ದ ಚಿನ್ನದ ಗಣಿ ಇಷ್ಟ ಆಯ್ತು...
ಒಳ್ಳೆಯ ಚಿತ್ರಗಳು

Geetha said...

ಚೆನ್ನಾಗಿದೆ ಸರ್..ಕಿವಿಯ ಅಲಂಕಾರಗಳು...ಆದ್ರೆ ಅಷ್ಟಷ್ಟು ಭಾರದ ಓಲೆಗೆ ಕಿವಿ ತೂತಾದ್ರೆ ಕಷ್ಟ...ಹಹಹ

Umesh Balikai said...

ಎಲ್ಲಾ 'ಕಿವಿ'ಗಳನ್ನೂ ಮೈತುಂಬಾ ಕಣ್ಣಾಗಿ ನೋಡಿದೆ. ಒಂದಕ್ಕಿಂತ ಇನ್ನೊಂದು ಅದ್ಭುತ. ನಿಮ್ಮ ಚಿತ್ರ-ಲೇಖನದ ಮುಂದಿನ ಕಂತಿಗಾಗಿ ಕಾಯುತ್ತಿರುವೆ.

-ಧನ್ಯವಾದಗಳು

Jayalaxmi said...

ನೋವಿಗೆ ಹೆದರಿ ಕಿವಿ ಚುಚ್ಚಿಸಿಕೊಳ್ಳದೆ ಬಿಟ್ಟಿದ್ದರ ನಷ್ಟದ ಅನುಭವ ಈಗಾಗ್ತಿದೆ!! ಇಲ್ದಿದ್ರೆ ನಿಮ್ಮ ಕ್ಯಾಮರಾದ ಕಣ್ಣಿಗೆ ನನ್ ಕಿವೀನೂ ಕೊಟ್ಟು... ಹೊಟ್ಟೆಕಿಚ್ಚಾಗ್ತಿದೆ ಬಗೆ ಬಗೆಯ ಕಿವಿಯ ಆಭರಣ ತೊಟ್ಟ ಕಿವಿಗಳನ್ನು ಕಂಡು. :-(

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಕಾಶಣ್ಣ...
ಚೆಂದದ ಫೋಟೋಗಳು.
ಪ್ರಕೃತಿಯಲ್ಲಿ ಹೆಣ್ಣಿಗಿಂತ ಗಂಡು ಆಕರ್ಷಕ ಎನ್ನುವ ಮಾತಿದೆ. ಗಂಡು ನವಿಲು ಮಾತ್ರವಲ್ಲ, ಗಂಡು ಸಿಂಹವನ್ನು ನೋಡಿ. ಹಲವು ಜೀವಿಗಳಲ್ಲಿ ಗಂಡು ಸುಂದರವಾಗಿದ್ದರೆ, ಇನ್ನು ಕೆಲವು ಜೀವಿಸಂಕುಲದಲ್ಲಿ ಹೆಣ್ಣು ಸುಂದರವಾಗಿದೆ.
ಅಲ್ಲಿಯೂ ಒಂದು ಸಮತೋಲನವಿದೆ.
ಆದರೆ ಮನುಜನ ಮನೋಭಾವಕ್ಕೆ, ಬುದ್ಧಿವಂತಿಕೆ, ಇಷ್ಟಾನಿಷ್ಟಗಳಿಗನುಸಾರವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವವರ ಮತ್ತು ಸೌಂದರ್ಯಾರಾಧಕರಿಗನುಗುಣವಾಗಿ ಕೆಲವೊಮ್ಮೆ ಹೆಣ್ಣು ಮತ್ತು ಗಂಡುಗಳ ಸೌಂದರ್ಯದೊಳಗಣ ಏರುಪೇರು ಗೋಚರಿಸುವುದೇನೋ ಅಂತ ಅನ್ನಿಸುತ್ತದೆ.

ಚೆಂದದ ಫೋಟೋ ಕ್ಲಿಕ್ಕಿಸಿದ ನಿಮಗೆ ಹಾಗೂ ಸ್ಪೂರ್ತಿಯಾದ ನಿಮ್ಮ ಮಡದಿಯವರಿಗೆ ಇಬ್ಬರಿಗೂ ಅಭಿನಂದನೆ.

Ittigecement said...

ಸುನಾಥ ಸರ್....

ಆ ಲಾವಣಿ ಪದದದಲ್ಲಿ ಹೇಳಿದ ಹಾಗೆ

ಮಡದಿಯ ಸಂಗಡ ಮದುವೆಗೆ ಹೋಗ ಬಾರದು....

ಇವೆಲ್ಲ ಕರ್ಣಾಭರಣಗಳನ್ನು ನೋಡಿ..
ಕೆಲವೊಂದನ್ನು ಮಾಡಿಸಿ ಕೊಂಡಿದ್ದಾರೆ...
(ಮಡದಿ ಚಂದ ಕಾಣಲಿ ಅನ್ನುವ ಸ್ವಾರ್ಥವೂ ಇದೆ ಅನ್ನಿ.
ಫೋಟೊ ನೋಡಿ)
ಪುಣ್ಯ ಕಂಠಾಭರಣ ತೋರಿಸಲಿಲ್ಲವಲ್ಲ...

ಮುಖದಲ್ಲಿ ಏನನ್ನು ಮೊದಲು ಗಮನಿಸುತ್ತೀರಿ...?
ಕಣ್ಣು, ಮೂಗು, ಕೆನ್ನೆ,....??

ಇದು ಬಹಳ ಇಂಟರೆಸ್ಟಿಂಗ್ ಪ್ರಶ್ನೆ....

ಬಹಳ ಮಿತ್ರರನ್ನು ನಾನೂ ಕೇಳಿದ್ದೇನೆ ...
ಉತ್ತರಗಳು... ಮಜವಾಗಿದ್ದವು...

ಫೋಟೊಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು....

Unknown said...

ಪ್ರಕಾಶ್ ಸರ್, ಮೊದಲು ನಿಮಗೆ ಈ ಸುಪರ್ಬ್ ಐಡಿಯಾ ಕೊಟ್ಟ ನಿಮ್ಮ ಶ್ರೀಮತಿಯವರಿಗೆ ಅಭಿನಂದನೆಗಳು. ನಂತರ ನಿಮ್ಮ ಹುಡುಕಾಟ ತಾಳ್ಮೆ ಮೊದಲಾದವಕ್ಕೆ. ಕೊನೆಯಲ್ಲಿ ಇನ್ನೂ ಏನೇನೋ ಬರಲಿದೆ ನಿರೀಕ್ಷಿಸಿ ಎಂದು ಬೇರೆ ಹೇಳಿದದ್ದೀರಿ. ನಾನೂ ಕುತೂಹಲದಿಂದ ಕಾಯುತ್ತಿದ್ದೇನೆ. ಒಂದಕ್ಕಿಂತ ಒಂದು ಚೆಂದ ನಿಮ್ಮ ಕಿವಿಗಳ ಚಿತ್ರ-ಲೇಖನ ಖುಷಿಕೊಟ್ಟಿತು. ಆಸಕ್ತಿಯಿಂದ ಬೆಳೆಸಿಕೊಂಡ ಒಂದು ಹವ್ಯಾಸ ಎಷ್ಟೊಂದು ಕ್ರಿಯೇಟೀವ್ ಆಗಿ ಮನುಷ್ಯನನ್ನು ಇಡಬಲ್ಲದು ಎಂಬುದಕ್ಕೆ ನಿಮ್ಮ ಲೇಖನವೂ ಸೇರಿದಂತೆ ಬ್ಲಾಗ್ ಲೋಕದಲ್ಲಿ ಹರಿದಾಡುತ್ತಿರುವ ತರಾವರಿ ಬರವಣಿಗೆಯೇ ಸಾಕ್ಷಿ, ಏನಂತಿರಿ?

Veena DhanuGowda said...

Hello,

chennagide :)
barahada jothe chandada chitra galu...adarli nima sreemathi yavaradhu thumbane chennagide :)

ಮೂರ್ತಿ ಹೊಸಬಾಳೆ. said...

ತಾನು ಮಾತಾಡಬೇಕು ...
ಇಲ್ಲವೇ ಬೇರೆಯವರು ತನ್ನ ಮಾತನ್ನು ಕೇಳಬೇಕು...

ಎರಡರಲ್ಲಿ ಒಂದು ಆಗುತ್ತಿರ ಬೇಕು....
hahaha prakaashanna entaa adbuta kalpane!!!!!!!!!!!!!!!

Unknown said...

Oh... Hingoo idyaa?? :-)

ವಿನುತ said...

ಆಹಾ! ಊರಿ೦ದ ಏನೆಲ್ಲಾ ತಗೊ೦ಡು ಬ೦ದಿದೀರ. ಎಷ್ಟು ಚ೦ದದ ಜುಮುಕಿಗಳು, ಬುಗುಡಿಗಳು... ಏನೋ, ಆ ಲೋಲಕ್ಗಳನ್ನು ಅಲ್ಲಾಡಿಸಿಕೊ೦ಡು ಓಡಾಡುವುದೇ ನಮಗೆ ಖುಷಿ :)

umesh desai said...

ಹೆಗಡೆ ಅವ್ರ ಆ ಕಿವಿ ಯಾರವು ಪುಣ್ಯಾ ಮಾಡ್ಯಾರ ನಿಮ್ಮಿಂದ ಹೊಗಳಿಸಿಕೊಳ್ಳಲಿಕ್ಕೆ....

umesh desai said...

ಹೆಗಡೆ ಅವ್ರ ಆ ಕಿವಿ ಯಾರವು ಪುಣ್ಯಾ ಮಾಡ್ಯಾರ ನಿಮ್ಮಿಂದ ಹೊಗಳಿಸಿಕೊಳ್ಳಲಿಕ್ಕೆ....

Guruprasad said...

ಪ್ರಕಾಶ್,
ಕಿವಿಯ ಲೇಖನ ಹಾಗು ಚಿತ್ರಗಳು ತುಂಬ ಚೆನ್ನಾಗಿ ಇದೆ.... ವರ್ಣಿಸಿರುವ ರೀತಿ ಮಜಾ ಇದೆ....ಹೀಗೆ ಮುಂದುವರಿಸಿ ..
ಊರಿನಿಂದ ಬಂದಮೇಲೆ ನಮ್ಮ ಬ್ಲಾಗಿನ ಕಡೆ ಬರಲೇ ಇಲ್ಲ. ಒಮ್ಮೆ ಬಂದು ಹೋಗಿ....
ಗುರು

Ittigecement said...

ಶಿವಪ್ರಕಾಶ್....

ನಮ್ಮ ಪೂರ್ವಜರ ಸೌಂದರ್ಯ ಕಲ್ಪನೆ ನಿಜಕ್ಕೂ ಅದ್ಭುತ...!!
ಅಭರಣಗಳ ವಿನ್ಯಾಸ ಸಕತ್ ಇರುತ್ತವೆ..
ಸೌಂದರ್ಯ ಹೋಲಿಕೆಯ ಜೊತೆಗಿರ ಬೇಕಂತೆ...
ಆಗ ಚಂದ ಅನಿಸುತ್ತದಂತೆ...

ಈ ಲೇಖನದಲ್ಲಿ ಹಳೆಯ ಬಂಗಾರದ ಆಭರಣಗಳನ್ನು ತೋರಿಸಿದ್ದೇನೆ..
ಮುಂದಿನ ಲೇಖನದಲ್ಲಿ ನವೀನ ರೀತಿಯ ಕಿವಿಯ ಅಲಂಕಾರ ತೋರಿಸುವೆ...

ಕೇಳುವ ಕಿವಿಯಲ್ಲೂ ಸೌಂದರ್ಯ...!
ನನಗಂತೂ ಆಶ್ಚರ್ಯವಾಗಿತ್ತು...!

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಪ್ರಕಾಶ್ ಸರ್,
ಕಿವಿ ಹಿಂಡಬೇಕಾದ ನಿಮ್ಮ ಶ್ರೀಮತಿಯವರೇ ಕಿವಿಯ ಬಗ್ಗೆ ಐಡಿಯಾ ಕೊಟ್ಟರೆ ಏನು ಹೇಳುವುದು?!
ನಾನು ಗಂಡಸರ ಮೀಸೆ ಮಕ್ಕಳ ನಗು ಸೆರೆಹಿಡಿದರೆ ನೀವು ಸುಂದರ ಸ್ತ್ರೀಯರ (ಕಿವಿ, ಜಡೆ, ಕೈ ಇತ್ಯಾದಿ ನೆಪದಲ್ಲಿ) ಫೋಟೊ ಕ್ಲಿಕ್ಕಿಸಿದ್ದೀರೇ! ಮೆಚ್ಚಬೇಕು ನಿಮ್ಮ ಐಡಿಯಾ ಮತ್ತು ಧೈರ್ಯಕ್ಕೆ. ನಿಮ್ಮ ಸೊಗಸಾದ ಬರವಣಿಗೆ ಜೊತೆ ಸುಂದರ ಚಿತ್ರಗಳು ಜೊತೆಗೂಡಿ ಈಗ ಜಗಮಗಿಸುತ್ತಿದೆ ನಿಮ್ಮ ಬ್ಲಾಗು.

ಬಿಸಿಲ ಹನಿ said...

ಪ್ರಕಾಶ್ ಸರ್,
ನಿಮ್ಮ ಚಿತ್ರ ಲೇಖನ ತುಂಬಾ ಚನ್ನಾಗಿದೆ. ಅಷ್ಟು ತಾಳ್ಮೆಯಿಂದ ಕಾದು ಅಷ್ಟು ಚೆಂದನೆಯ ಫೋಟೊಗಳನ್ನು ತೆಗಿದಿದ್ದೀರಲ್ಲ ನಿಮ್ಮ ತಾಳ್ಮೆಗೆ ಹಾಗೂ ಸೃಜನಶಿಲತೆಗೆ ಹ್ಯಾಟ್ಸಾಫ್.

shivu.k said...

ಪ್ರಕಾಶ್ ಸರ್,

ಕಿವಿಯಲಂಕಾರದ ವಡವೆಗಳು ಚೆನ್ನಾಗಿವೆ. ಕಾನ್ಸೆಪ್ಟ್ ಕೂಡ ಚೆನ್ನಾಗಿದೆ. ಆದ್ರೆ ಈ ಲೇಖನವನ್ನು ನನ್ನಾಕೆ ಇಲ್ಲದಾಗ ಮಾತ್ರ ಓದಿದೆ. ನೋಡಲು ಸುಂದರವಾಗಿದ್ದರೂ ಇದು ಅಪಾಯ ತರುವಂತದ್ದು. ನನ್ನ ಸದ್ಯದ ಪರಿಸ್ಥಿತಿಯಲ್ಲಿ ಇಂಥವನ್ನೆಲ್ಲಾ ಮನೆಯಾಕೆಗೆ ತೋರಿಸಬಾರದು ಅಂತ ನನ್ನ ಭಾವನೆ.

ಧನ್ಯವಾದಗಳು.

Anonymous said...

ಸಕ್ಕತ್ ಬರಹ!

ಕಿವಿಯ ಮೇಲೂ ಕವಿತೆ ಬರೆಯಬೇಕಾಯ್ತು ಈಗ..:)

ಹೆಣ್ಣಿನ ಕಣ್ಣಿನ ಮತ್ತಲ್ಲೇ ಕಳೆದುಹೋಗುವ ನಮಗೆ ಅಲ್ಲೇ ಪಕ್ಕದಲ್ಲೂ ಸೌಂದರ್ಯವಿದೆಯೆಂದು ತೋರಿಸಿಕೊಟ್ರಿ..

Ittigecement said...

ಗೀತಾರವರೆ...

ಅಂದ, ಚಂದ ಬೇಕಾದರೆ ನೋವು ಅನುಭವಿಸ ಬೇಕು ಎಂದಾಯಿತು...
ಅಲ್ಲವೆ...?

ನನ್ನ ತಂದೆಯವರ ತಂಗಿ(ಅತ್ತೆ) ಒಬ್ಬರಿದ್ದಾರೆ...

ಅವರು ತಮ್ಮ ಒಂದೊಂದು ಕಿವಿಗೆ ಒಂಬತ್ತು ತೂತು ಮಾಡಿಸಿಕೊಂಡಿದ್ದಾರೆ...
ಸಧ್ಯದಲ್ಲಿಯೇ ಅದರ ಫೋಟೊ ತರಿಸಿಕೊಳ್ಳುವೆ.....

ಈ ಅಂದ ಚಂದದ ಹಿಂದೆ...
ಎಷ್ಟೆಲ್ಲ ಪರಿಶ್ರಮವಿದೆಯೆಂದು...
ನನ್ನಾಕೆಯನ್ನು ನೋಡಿ ನಾನು ದಂಗಾಗಿದ್ದೇನೆ.....

ಸಧ್ಯ.... ನಾನು ಹೆಣ್ಣಾಗಿ ಹುಟ್ಟಲಲಿಲ್ಲವಲ್ಲ ಎಂದೆನಿಸುತ್ತದೆ....

ಫೋಟೊ ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು....

ನಿಮ್ಮ ಬ್ಲಾಗಿಗೆ ಇನ್ನೂ ಬರಲಾಗಲಿಲ್ಲ..... ಸಾರಿ..!

Ittigecement said...

ಉಮೇಶ್.....

"ಕಿವಿಯಲ್ಲವನ್ನೂ ಕಣ್ಣಾಗಿ ನೋಡಿದೆ..."

ನಾನೂ ಕೂದ ಅಂದು ಹಾಗೇ ಮಾಡಿದೆ...

ಈಗೆಲ್ಲ ಕಿವಿಯ ಅಲಂಕಾರ ಗಂಡಸರೂ ಮಾಡಿಕೊಳ್ಳುತ್ತಾರೆ...
ಗಂಡಸರು ಮೂಗಿಗೆ ರಿಂಗ್ ಹಾಕಿಕೊಂಡಿದ್ದನ್ನು..
ಒಮ್ಮೆ ಟಿವಿಯಲ್ಲಿ ನೋಡಿದ್ದೇನೆ...

ಲೋಕೋ ಭಿನ್ನ ರುಚಿ...

ತಲೆ ಬೋಳಿಸಿಕೊಂಡು,
ಕಿವಿಗೊಂದು, ಹುಬ್ಬಿಗೊಂದು, ರಿಂಗ್,
ಮೂಗಿಗೊಂದು ಮೂಗುತಿ,
ಅದು ಎಂಥಹ ಚಂದವೋ...
ಅದು ಅಂದವೆಂದು ಯಾರು ನೋಡುತ್ತಾರೊ

ಅಂಥಹ ಟೇಸ್ಟಿಗೊಂದು ನೂರೊಂದು ನಮನ....

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ
ತುಂಬುಹ್ರದಯದ ವಂದನೆಗಳು....

Ittigecement said...

ಜಯಲಕ್ಷ್ಮೀಯವರೆ...

ನನಗೊಬ್ಬ ಅತ್ತೆ (ತಂದೆಯವರ ತಂಗಿ) ಇದ್ದಾರೆ..
ಅವರು ಒಂದೊಂದು ಕಿವಿಗೂ ಒಂಬತ್ತು ತೂತು ಮಾಡಿಸಿಕೊಂಡಿದ್ದಾರೆ..

ಎಷ್ಟು ಅಭಿಮಾನದಿಂದ, ಶ್ರದ್ಧೆಯಿಂದ ಅಲಂಕಾರ ಮಾಡಿಕೊಳ್ಳುತ್ತಾರೆ
ಈ ಹೆಣ್ಣುಮಕ್ಕಳು...!!
ಒಂದು ಕಾರ್ಯಕ್ರಮದಲ್ಲಿ ತನ್ನ ಬಿಂದಿ ಸ್ವಲ್ಪ ಓರೆಯಾಗಿತ್ತು..
ಎಂದು ನನ್ನ ಗೆಳೆಯನ ಮಡದಿಯೊಬ್ಬರು ಎರಡು ದಿನ ಬೇಸರಪಟ್ಟುಕೊಂಡಿದ್ದರು...!

ತೂತು ಮಾಡಿಸಿಕೊಳ್ಳದೇ ಹಾಕಿಕೊಳ್ಳುವ ಆಭರಣಗಳು ಈಗ ಸಿಗುತ್ತದಂತೆ...

ಲೇಖನ ಮೆಚ್ಚಿ, ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು...

ಇಂದು ಎಚ್. ಎನ್. ಕಲಾಕ್ಷೇತ್ರದಲ್ಲಿ ನಿಮ್ಮ ಅಭಿನಯದ ನಾಟಕವಿದೆ...
ನಾವೆಲ್ಲ ಬರುತ್ತಿದ್ದೇವೆ...

ಮತ್ತೊಮ್ಮೆ ಧನ್ಯವಾದಗಳು...

ಅನಿಲ್ ರಮೇಶ್ said...

ಪ್ರಕಾಶ್,
ಕರ್ಣ(ಕಿವಿ) ಪುರಾಣ ಚೆನ್ನಾಗಿದೆ.

ಫೋಟೋಗಳು ಸಕ್ಕತ್.

-ಅನಿಲ್

Ittigecement said...

ಶಾಂತಲಾ....

ಗಂಡಿಗೆ ಶಕ್ತಿ ಆಕರ್ಷಣೆಯಾದರೆ..
ಹೆಣ್ಣಿಗೆ ಆಕರ್ಷಣೆಯೇ ಶಕ್ತಿಯಂತೆ....

ಆಕರ್ಷಣೆ, ಅಲಂಕಾರದ ಬಗೆಗೆ ಗಂಡಿಗಿಂತ ಹೆಣ್ಣಿಗೇ ಹೆಚ್ಚು ಆಸಕ್ತಿ...
ಅಪವಾದ ಇದ್ದೇ ಇರುತ್ತದೆ...
ನಮ್ಮ ಕಾಲೇಜಿನ ಗುರುಗಳೊಬ್ಬರು ಲಿಫ್ಟಿಕ್ ಹಚ್ಚಿಕೊಂಡು ಬರುತ್ತಿದ್ದರು...

ಮೊದಲೇ ದೇವರು ಅಂದ ಕೊಟ್ಟಿರುತ್ತಾನೆ..!
ಮತ್ತೆ ಮತ್ತೇರಿಸುವ ಅಲಂಕಾರ...!

ಅಲಂಕಾರ ರಗಳೆಯಲ್ಲವೇ...?

ಪ್ರತಿಕ್ರಿಯೆಗೆ ವಂದನೆಗಳು...

Ittigecement said...

ಸತ್ಯನಾರಾಯಣರೆ...

ಈ ಬ್ಲಾಗ್ ಲೋಕ ನನಗಂತು ಖುಷಿಯಾಗಿದೆ...

ನಾನು ಬರೆದುದನ್ನು, ನನ್ನ ಫೋಟೊಗಳನ್ನು..
ಅಭಿಮಾನದಿಂದ, ಪ್ರೀತಿಯಿಂದ ಪ್ರೋತ್ಸಾಹಿಸುತ್ತಾರಲ್ಲ...

ಎಲ್ಲರಿಗೂ ವಂದನೆಗಳು...

ನನ್ನನ್ನು ಇಲ್ಲಿಗೆ ಕರೆತಂದ ಸ್ನೇಹಿತರಾದ
ಶಿವು, ಮಲ್ಲಿಕಾರ್ಜುನ್,ಗೆ ಎಷ್ಟು ಕ್ರತಜ್ಞರಾಗಿದ್ದರೂ ಸಾಲದು...

ಈ ಬ್ಲಾಗ್ ಲೋಕದಲ್ಲಿ ಬಹಳಷ್ಟು ಹೊಸ, ಹೊಸ ಕ್ರಿಯೇಟಿವಿಟಿ ಕಾಣ ಬಹುದು...

ಅಂಥಹ ಬ್ಲಾಗ್ ಗಳನ್ನು ಹೆಸರಿಸ ಹೊರಟರೆ ಈ ಪೇಜ್ ಸಾಲುವದಿಲ್ಲ....

ತಾಳ್ಮೆಯಿಂದ ಓದಿ ಪ್ರೋತ್ಸಾಹಿಸುವ ಓದುಗರಿದ್ದಾರಲ್ಲ....!

ಅದು ಖುಷಿಯಾಗುತ್ತದೆ...

ವಂದನೆಗಳು....

Ittigecement said...

ವೀಣಾರವರೆ....

ಚಿತ್ರ ಲೇಖನ ಖುಷಿಯಾಗಿದ್ದಕ್ಕೆ ವಂದನೆಗಳು...

ಇಲ್ಲಿ ನನ್ನಾಕೆಯ ಫೋಟೊ ಒಂದೇ ಇದೆ....
ನಿಮ್ಮ ಹೊಗಳಿಕೆಯನ್ನು ಅವರಿಗೆ ತಿಳಿಸಿದ್ದೇನೆ...

ಹೀಗೇ ಬರುತ್ತಾ ಇರಿ...
ಧನ್ಯವಾದಗಳು

NiTiN Muttige said...

ಕಿವಿಯ ಅಲಂಕಾರ ತೋರಿಸಿ ಮಾನಿನಿಯರಲ್ಲಿ ಆಸೆ ಹುಟ್ಟಿಸಿದ್ದಿರಾ. ಮುಂದಾಗುವ ಎಲ್ಲಾ ಅಪಾಯಕ್ಕು ನಿಮ್ಮನ್ನೆ ಹೊಣೆ ಆಗಿಸಲಾಗುವುದು!.
ಪ್ರಕಾಶ್ ಅಣ್ಣಾ, ಹುಡುಗಿಯರ ಮೂಗು ಅವರ ಸೌಂದರ್ಯಕ್ಕೆ ಕಲಶ ಇದ್ದಂತೆ.ಸಾಮಾನ್ಯವಾಗಿ ಹುಡುಗರು [ಗಂಡಸರು] ಮೊದಲು ನೋಡುವುದು ಅದನ್ನೇ!! ಎಲ್ಲಾ ಇದ್ದು ಮೂಗು ಸರಿ ಇಲ್ಲದಿದ್ದರೆ ಏನೋ ಮಿಸ್ ಆಗುತ್ತಿರುತ್ತದೆ!!.
ಮೊಂದೊಮ್ಮೆ ಅಂದದ ಮೂಗುಗಳ ದರ್ಶನ ಮಾಡಿಸಿ!!

Prabhuraj Moogi said...

ಹೆಣ್ಣಿನ ಕಿವಿ ಬಗ್ಗೆ ಚೆನ್ನಾಗಿದೆ ಲೇಖನ, ಗಂಡಸರ ಕಿವಿ ಬಗ್ಗೆ ಯೋಚಿಸಲೂ ಬೇಡಿ ಮತ್ತೆ ಯಾವುದೊ ಬೆಳೆ ಅಂತ ಏಲಕ್ಕಿ ಬೆಳೆಗಾರರನ್ನು ಎಳೆದು ತಂದು ಬಿಡ್ತೀರೀ...ಹ ಹ ಹ...
ಮೂಗು ಸೌಂದರ್ಯದಲ್ಲಿ ಹೆಚ್ಚು ಪಾತ್ರವಹಿಸುತ್ತೆ ಅನ್ನೊದು ನನ್ನ ಅಭಿಮತ ಕೂಡ... ಗಂಡಂದಿರೆಲ್ಲ ಹುಷಾರಾಗಿರಬೇಕು ಹೆಂಡತಿಯರು ಇದನ್ನು ನೋಡಿ ಎಲ್ಲ ಒಂದೊಂದು ಸೆಟ್ಟು ಬೇಕು ಅಂದ್ರೆ... ಸುಮ್ನೇ ಆ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಬೇಡಿ...

ಸುಧೇಶ್ ಶೆಟ್ಟಿ said...

ಅ೦ತೂ ಊರಿಗೆ ಹೋದಾಗ ದೊಡ್ಡ ಸಾಹಸವನ್ನೇ ಮಾಡಿದ್ದೀರಾ ಪ್ರಕಾಶಣ್ಣ.... ತು೦ಬಾ ಚೆನ್ನಾಗಿತ್ತು...ಇದರ ಮು೦ದುವರಿಕೆಗೆ ಕಾಯುತ್ತೇನೆ...

ಕಿವಿಗಳು ಸೌ೦ದರ್ಯದಲ್ಲಿ ಎಷ್ಟು ಮುಖ್ಯ ಅ೦ತ ನಿಮ್ಮ ಚಿತ್ರಗಳೇ ಹೇಳುತ್ತದೆ....

SSK said...

ಪ್ರಕಾಶ್ ಅವರೇ, ಫೋಟೋಗಳು ಮತ್ತು ಲೇಖನ ಚೆನ್ನಾಗಿವೆ. ಆಭರಣ ತೊಡುವುದರಲ್ಲಿ, ಅಲಂಕಾರದಲ್ಲಿ ಒಬ್ಬೊಬ್ಬರ ಅಭಿರುಚಿ ಒಂದೊಂದು ರೀತಿ ಇರುತ್ತದೆ. ನಿಮ್ಮ ಶ್ರೀಮತಿ ಅವರಿಗೆ ನನ್ನ ನಮನಗಳನ್ನು ತಿಳಿಸಿ!!

Ranjita said...

ಪ್ರಕಾಶಣ್ಣ ಬೆಸ್ಟ್ ಇದ್ದು .. ಒಳ್ಳೆ ವಿಷಯ ತಗಂಜೆ .. ನಂಗು ಹಿಂಗೆ ಕಿವಿ ತುಂಬಾ ಬೊಟ್ಟು ಚುಚ್ಚಿಕೊಂಡವ್ರಾ ನೋಡಲೇ ಕುಶಿ .. :)

Ittigecement said...

ಮೂರ್ತಿ.......

ನಿನಗೆ ಮದುವೆ ಆಗಿಲ್ಲ.
ಹಾಗಾಗಿ ಕೆಲವು ವಿಷಯ ಅರ್ಥ ಆಗೊಲ್ಲ. ಮಾರಾಯಾ...!

ಹೆಂಡ್ತಿ ಮಾತಾಡ್ತಾ ಇರುವಾಗ ಗಂಡ ಏನು ಮಾಡ್ತಾ ಇರಬೇಕು..?

ಅವಳು ಹೇಳೋದನ್ನು , ಅವಳ ಮುಖ ನೋಡ್ತಾ ಕೇಳ್ತಾ ಇರಬೇಕು..
ಇಲ್ಲವೇ ಕೇಳ್ತಾ ಇದ್ದ ಹಾಗೆ ನಟಿಸುತ್ತ ತನ್ನ ಪಾಡಿಗೆ ತನ್ನ ಕೆಲಸ ಮಾಡ್ತಾ ಇರಬೇಕು.
ಮಧ್ಯದಲ್ಲ್ಲಿ ಆಗಾಗ ಕೇಳ್ತಾ ಇದ್ದರೆ ಸಾಕು.

ಮೆಗಾ ಧಾರಾವಾಹಿ ಥರಹ ವಿಷಯ ಮುಂದುವರೆಯುವದು ಬಹಳ ಸ್ಲೋ.

ಜಲ್ದಿ ಮದುವೆ ಆಗು ಮಾರಾಯಾ....
ಇನ್ನಷ್ಟು ವಿಷಯಗಳು ಅರ್ಥ ಆಗ್ತದೆ....

ಫೋಟೊ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

paapu paapa said...

kiviya kadege nirlyakshaviruva hengaLeyarige kiviya kadegoo gamana selediddeeri. Nice.

ಕ್ಷಣ... ಚಿಂತನೆ... said...

ಸರ್‍, ಈ ಲೇಖನ ಮತ್ತು ಚಿತ್ರಗಳು ಸುಂದರವಾಗಿವೆ. ಜೊತೆಗೆ ಕಿವಿಯ ಚೆಂದವನ್ನೂ ಹೆಚ್ಚಿಸಿರುವ ಆಭರಣಗಳ ಮೋಡಿಗೆ ಮನಸೋಲದವರಾರು ಎಂದು ಅನಿಸುತಿದೆ. ಒಂದು ಒಳ್ಳೆಯ ಥೀಮ್‌ಗಾಗಿ ವಂದನೆಗಳು.
ರೂಪದರ್ಶಿಯವರಿಗೂ ಧನ್ಯವಾದಗಳು.

ಧರಿತ್ರಿ said...

ಪ್ರಕಾಶ್ ಸರ್...
ನಮಸ್ತೆ..ತಡವಾಯಿತು ಬರೋದು..ಕಾರಣ ಬೆಂಗಳೂರಿನ ರಸ್ತೆ ರಸ್ತೆಗಳಲ್ಲೂ ಸಿಗೋ ಟ್ರಾಫಿಕ್ ಜಾಮ್ ಅಲ್ಲ, ನಮ್ಮ ನೆಟ್ ನೆಟ್ಟಗಿರಲಿಲ್ಲ ಅಷ್ಟೇ.

ನಿಮ್ಮ ಬರಹಕ್ಕಿಂತಲೂ ಆ ಕಿವಿಯಲ್ಲಿರುವ ಓಲೆಗಳು ನನ್ನ ನಿದ್ದೆಗೆಡಿಸಿವೆ...ಎಂಬುವುದು ನಿಜ! ಆ ಕಿವಿಯಲ್ಲಿರುವ ಓಲೆಗಳು ಅವರ ಸೌಂದರ್ಯವನ್ನು ಇಮ್ಮಡಿಸಿವೆ ಅಲ್ವಾ? ನಿಜವಾಗ್ಲೂ ನೋಡುತ್ತಾ ತುಂಬಾ ಖುಷಿಪಟ್ಟೆ.

"ಬೆಳಗು ಇಬ್ಬನಿಯಲ್ಲಿ ನಗುವ ಹುಲ್ಲ ಹನಿಗಿಂತ ಚೆಂದಕೆ ಮಿನುಗುವುದು ಅವಳ ಮೂಗುತಿಯಡಿಯ ನಗು" ಯಾವುದೋ ಒಬ್ಬ ಕವಿ ಹೇಳಿದ ಮಾತು ನೆನಪಾಗುತ್ತಿದೆ!!

-ಧರಿತ್ರಿ

Ittigecement said...

ರವಿಕಾಂತ್....

ಒಂದು ಚಲನ ಚಿತ್ರದ ಹಾಡಿದೆ...
"ಹೆಣ್ಣಿನಲ್ಲಿ ಅಂದವಿಟ್ಟನೋ..
ನಮ್ಮ ಶಿವ..
ಗಂಡಿನಲ್ಲಿ ಆಸೆ ಇಟ್ಟನೊ..."

ನಮ್ಮ ಪುರಾಣ ಕಾವ್ಯಗಳಲ್ಲೂ ಸಹ ಹೆಣ್ಣಿನ ಅಂದದ ಬಗೆಗೆ..
ಹೆಚ್ಚಿನ ಪುಟಗಳನ್ನು ಮೀಸಲಿಟ್ಟಿದ್ದಾರೆ.

ದೇವಾಲಯದ ಶಿಲ್ಪಗಳಲ್ಲಿ ಹೆಣ್ಣೇ ಪ್ರಮುಖ ಸ್ಥಾನ.

ಬೇಲೂರು, ಹಳೇ ಬೀಡಿಗೆ ಹೋದರೆ ಇದರ ಬಗೆಗೆ ಬೇಕಾದಷ್ಟು ವಿಷಯ ಸಿಗುತ್ತದೆ.

ಸರ್ವಾಂಗವೂ ಸುಂದರ ಹೆಣ್ಣಿಗೆ.

PHOT, article ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

Anonymous said...

What a variety of 'abharanas'!! thanks for showing them :)

your posts are always interesting to read and SEE!! keep posting!!

ಚಂದ್ರಕಾಂತ ಎಸ್ said...

ಪ್ರಕಾಶ್

ಆಭರಣಗಳ ಬಗ್ಗೆ ನನ್ನ ಅಭಿಪ್ರಾಯ ಬದಲಿಸಿತು, ಈ ನಿಮ್ಮ ಲೇಖನ.
ಆಭರಣಗಳೆಂದರೆ ಮೊದಲಿನಿಂದಲೂ ಅಲರ್ಜಿ ನನಗೆ. ಆದರೆ ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಮೂಡಿದ ಕಿವಿ, ಮುಖಗಳು ಆ ಆಭರಣಗಳಿಮ್ದ ತಮ್ಮ ಶೋಭೆ ಹೆಚ್ಚಿಸಿಕೊಂಡಿವೆ.ನೀವು ಸುಂದರವಾದದ್ದನ್ನೇ ಆಯ್ಕೆ ಮಾದಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೀರಿ. ಉತ್ತಮ ಅಭಿರುಚಿಯ ಛಾಯಾಚಿತ್ರಗಳು.

pavana m hegde said...

nanu missing

ರಜನಿ. ಎಂ.ಜಿ said...

ಜೀವನ್ಮುಖಿ ಎಂಬ ಬ್ಲಾಗ್ ಪರಂಜಪೆಯವರದ್ದು ಇರುವುದೂ ನಿಜ. ಆದ್ರೆ ನೀವು ಸುಕುಮಾರ ಸೇನರ ಬಗ್ಗೆ ಓದಿದ ಬ್ಲಾಗ್ ಇನ್ನೊಬ್ಬ ಜೀವನ್ಮುಖಿಯದು.
ಇರಲಿ. ಪ್ರತಿಕ್ರಿಯೆಗೆ ಧನ್ಯವಾದಗಳು

Ittigecement said...

ವಿನೂತಾರವರೆ...

ಸಣ್ಣ ಸಣ್ಣ ವಿಷಯಗಳಿಗೂ ಸಂಭ್ರಮ, ಸಂತೋಷ ಪಡುವ..
ಅಲಂಕಾರ ಪ್ರಿಯ ಹೆಣ್ಣುಮಕ್ಕಳನ್ನು ಕಂಡರೆ ..
ಸ್ವಲ್ಪ ಹೊಟ್ಟೆಕಿಚ್ಚಾಗುತ್ತದೆ...

ನಮ್ಮ ಪೂರ್ವಜರು ಜಾಸ್ತಿ ಅಲಂಕಾರ ಹೆಣ್ಣಿಗೇ ಮಾಡುತ್ತಿದ್ದರು..

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಉಮೇಶರವರೆ...

ಮೊದಲನೆಯ ಕಿವಿ...
ಶ್ರೀಮತಿ ಸುಧಾ ಬಾಲಚಂದ್ರ..

ಎರಡನೆಯದು..
ರಾಜಶ್ರೀ ಅಶ್ವಿನಿಕುಮಾರ್...

ನಾಲ್ಕನೆಯದು
ಲತಾ ನಾಗರಾಜ್...

ಆರನೆಯದು..
ಆಶಾ ಪ್ರಕಾಶ್...

ಹನ್ನೊಂದನೆಯದು...
ನಾಗರತ್ನ ಸತ್ಯನಾರಾಯಣ...

ಉಳಿದವುಗಳಲ್ಲಿ ಕೆಲವು ರಿಪೀಟ್ ಆಗಿವೆ..
ಕೆಲವು ಗೊತ್ತಿಲ್ಲ....

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಗುರುರವರೆ...

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ದಯವಿಟ್ಟು ಬೇಸರಿಸದಿರಿ..
ಸ್ವಲ್ಪ ಬ್ಯುಸಿ ಇರುವೆ..
ಖಂಡಿತ ನಿಮ್ಮ ಬ್ಲಾಗಿಗೆ ಬರುವೆ..

Ittigecement said...

ಹುಡುಕಾಟದ ಮಲ್ಲಿಕಾರ್ಜುನ್...

ಕಿವಿ ಹಿಂಡಬೇಕಾದ ಹೆಂಡತಿಯೇ..
ಸಪೋರ್ಟ್ ಮಾಡಿದ್ದಾರೆ ಗುರುಗಳೆ...
ಇನ್ನು ಯಾವ ಅಡೆತಡೆಯೂ ಇಲ್ಲ...

ಮುಂದಿನ ಸಾರಿ ಹೊಸ ಥರಹದ ಕಿವಿಗಳನ್ನು ತೋರಿಸುವ ಪ್ರಯತ್ನ ಮಾಡುವೆ..

ನೀವು ಬ್ಲಾಗ್ ಲೋಕಕ್ಕೆ ಪರಿಚಯ ಮಾಡಿಸಿರದಿದ್ದರೆ ಇವೆಲ್ಲ ಅಸಾಧ್ಯವಾಗುತ್ತಿತ್ತು..

ಹ್ರದಯ ಪೂರ್ವಕ ಧನ್ಯವಾದಗಳು...

Ittigecement said...

ಉದಯ್... (ಬಿಸಿಲ ಹನಿ)

ಕಿವಿಯಲ್ಲೂ ಅಷ್ಟೆಲ್ಲ ಚಂದ ಇದೆ ಅಂತ ನನಗೂ ಗೊತ್ತಿರಲಿಲ್ಲ..
ಮಡದಿಯವರಿಗೆ ಧನ್ಯವಾದ ಹೇಳಬೇಕು..

ಆ ಚಂದದ ಹಿಂದೆ ಎಷ್ಟೆಲ್ಲ ನೋವು ಇದೆ...!!
ಸಮಯ , ತಾಳ್ಮೆ, ಶ್ರದ್ಧೆ ಇದೆ...!!

ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಶಿವು ಸರ್...

ಹೇಮಾಶ್ರೀಯವರು ಅಂಥವರಲ್ಲ ಬಿಡಿ...
ನಿಮ್ಮ ಹೆಜ್ಜೆ,ಹೆಜ್ಜೆಗೂ ಅವರ ಬೆಂಬಲ ಇದೆ...

ಅವರ ಕಿವಿಯನ್ನು ನೀವು ಗಮನಿಸಿಲ್ಲ ಅನಿಸುತ್ತದೆ...
ಅವರೂ ಅಲಂಕಾರ ಮಾಡಿಕೊಳ್ಳುತ್ತಾರೆ ನೋಡಿ...

ನಿಮ್ಮ ಬೆಂಬಲ, ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ನೀಲಿ ಹೂ.....

ನನ್ನ ಬ್ಲಾಗಿಗೆ ಸ್ವಾಗತ...
ನಿಮ್ಮ ಕವನಗಳು ಬಲು ಸೊಗಸಾಗಿರುತ್ತದೆ...
ಬಹಳ ಸಾರಿ ಓದಿರುವೆ...

ನಿಮ್ಮ ಶಬ್ಧಗಳಲ್ಲಿ ಮದನೆಯರ..
ಮೋಹಕ ಕಿವಿಗಳ ..
ವರ್ಣನೆ ಬಹಳ ಚಂದವಾಗಿರುತ್ತದೆ...

ಕಲ್ಪಿಸಿಕೊಂಡು ಥ್ರಿಲ್ ಆಗಿದ್ದೇನೆ...
ದಯವಿಟ್ಟು ಬರೆಯಿರಿ...

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

Ittigecement said...

ಅನಿಲ್ ರಮೇಶ್....

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ...

Ittigecement said...

ನಿತಿನ್....

ನನಗೆ ಮೂಗು ಅಂದರೆ ಮೊದಲಿನಿಂದಲೂ ಬಹಳ ಆಸಕ್ತಿ...
ಅದರ ಬಗೆಗೂ ಬರೆವೆ...
ಫೋಟೊಗಳು ಸಾಕಷ್ಟು ಇವೆ...

ಹೆಣ್ಣಲ್ಲಿ ಎಷ್ಟೋಂದು ವೈಚಿತ್ರವಿದೆ ಅಲ್ಲವಾ...?

ಚಿತ್ರ ಲೇಖನ ಖುಷಿಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರಭು....

ಈಗಿನ ಕಾಲದ ಹುಡುಗರು ಕಿವಿಗೆ, ಮೂಗುಗೆ ರಿಂಗು ಹಾಕ್ಕೋತಾರೆ..
ಅದು ಚಂದ ಅಲ್ಲ ಅಂತ ನನ್ನ ಭಾವನೆ..
ಆದರೆ ಅಂದ ಕಾಣುತ್ತದೆ ಅಂತ ಅವರು ಹಕ್ಕೊಳ್ತಾರಲ್ಲ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..

Ittigecement said...

ಸುಧೇಶ್...

ಕಿವಿಗಳು ಮುಖದ ಪಕ್ಕದಲ್ಲಿ ಇರುತ್ತವೆ..
ಮೇಲಿಂದ ಕೂದಲು ಮುಚ್ಚಿರುತ್ತದೆ..

ಆದರೂ ಅದಕ್ಕೆ ಅಲಂಕಾರ..
ನೋವು ಅನುಭವಿಸಿ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಅವರೆ...

ಪರಸ್ಪರ ಆಕರ್ಷಣೆಗಾಗಿ ಇಷ್ಟೆಲ್ಲ ಅಲಂಕಾರ ಅಲ್ಲವೆ..?
ಆಕರ್ಷಣೆಗೆ ಅಲಂಕಾರ ಮುಖ್ಯ ಅಂದಂತಾಯಿತು...
ಆಕರ್ಷಣೆಯಿಂದ ಪ್ರೀತಿ, ಪ್ರೇಮ.. ಇತ್ಯಾದಿ..

ಒಬ್ಬರು ಇಷ್ಟವಾದಾಗ ಅಲಂಕಾರ ಮಾಡಿಕೊಳ್ಳಬೇಕೆಂಬ ಬಯಕೆ.. ವಿಚಿತ್ರ ಅಲ್ಲವೆ...?

ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ರಂಜಿತಾ....

ನೀವೇ ಅಲಂಕಾರ ಮಾಡಿಕೊಳ್ಳಿ...
ನಿಜಕ್ಕೂ ಚಂದ....
ಆ ಆಭರಣಗಳು..
ಆ ಅಲಂಕಾರಗಳು...

ನೀವೂ ಮಾಡಿಕೊಂಡು ಫೋಟೊ ಕಳಿಸಿ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

Ittigecement said...

ಪ್ರೀತಿಯವರೆ...

ಕಿವಿಯಬಗೆಗೆ ಹೆಣ್ಣುಮಕ್ಕಳಿಗೆ ನಿರ್ಲಕ್ಷ ಬಹಳ ಕಡಿಮೆ...

ಫೋಟೊ ಲೇಖನ ಇಷ್ಟಪಟ್ಟಿದ್ದಕ್ಕೆ
ಧನ್ಯವಾದಗಳು..

ಬರುತ್ತಾ ಇರಿ...

Ittigecement said...

ಕ್ಷಣ ಚಿಂತನೆ...

ಮೊನ್ನೆ ಬೆಂಗಳೂರಿನ ಪಿವಿಆರ್ ಗೆ ಹೋಗಿದ್ದೆ..
ಅಲ್ಲಿ ಬಗೆಬಗೆಯ ಕಿವಿಗಳನ್ನು ನೋಡಿ ದಂಗಾಗಿ ಹೋಗಿದ್ದೇನೆ...

ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ವಂದನೆಗಳು...

Ittigecement said...

ಧರಿತ್ರಿ....

ಯಾವಾಗಲಾದರೂ ಬನ್ನಿ...
ಸ್ವಗತವಿದೆ...
ನಿಮ್ಮ ಮೆಚ್ಚುಗೆಯ ನುಡಿಗಳು ನನಗೆ ಬರೆಯಲು ಸ್ಪೂರ್ತಿ..
ಇನ್ನಷ್ಟು ಬರೆಯೋಣ ಅನಿಸುತ್ತದೆ...
ಫೋಟೊಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

ಮೂಗುತಿಯ ಬಗೆಗೂ ಬರೆಯುವೆ.. ಫೋಟೊ ಸಂಗಡ...
ಸ್ವಲ್ಪ ಕಾಯಿರಿ...
ಪ್ರೋತ್ಸಾಹಕ್ಕೆ ಧನ್ಯವಾದಗಳು...

Ittigecement said...

ಸುಮನಾ...

ನಿಮ್ಮ ಪ್ರೋತ್ಸಾಹ ನನಗೆ ಬರೆಯಲು
ಉತ್ಸಾಹ...

ಬರಹಗಾರನಲ್ಲದ ನನಗೆ ನಿಮ್ಮ ಪ್ರೋತ್ಸಾಹ ನುಡಿಗಳು ಬರೆಯಲು ಉತ್ಸಾಹ ತರುತ್ತದೆ...
ಇನ್ನಷ್ಟು ಬರೆಯೋಣ ಅನಿಸುತ್ತದೆ...

ಧನ್ಯವಾದಗಳು...
ಬರುತ್ತಾ ಇರಿ...

Ittigecement said...

ಚಂದ್ರಕಾಂತರವರೆ...

ನಿಜ ಇಲ್ಲಿ ಸುಂದರ ಕಿವಿಗಳನ್ನು ಮಾತ್ರ ಹಾಕಿದ್ದೇನೆ..
ಅಂದ,ಚಂದ ಎಲ್ಲರಿಗೂ ಇಷ್ಟವಾಗುತ್ತದಲ್ಲವೆ...?

ಈ ಕಲ್ಪನೆಯನ್ನು ಕೊಟ್ಟ ನಮ್ಮ ಪೂರ್ವಜರ ಸೌಂದರ್ಯ ಪ್ರಜ್ನೆಗೆ ಒಂದು ಸಲಾಮ್...

ನಿಮಗೆ ಫೋಟೊ,ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

Ittigecement said...

ಪಾವನಾ...

ಇದನ್ನು ಸಿದ್ದಪಡಿಸುವಾಗ ನಿನ್ನ ನೆನಪು,ಅವಶ್ಯಕತೆ ಬಹಳ ಕಾಡಿತು...

ಹೇಗಿದ್ದರೂ ಭಾರತಕ್ಕೆ ಬರುತ್ತಿರುವೆಯಲ್ಲಾ...
ಮುಂದಿನ ಚಿತ್ರ ಲೇಖನದಲ್ಲಿ ನಿನ್ನ ಫೋಟೊ ಹಾಕೋಣ...

ಬಗೆಬಗೆಯ ಕಿವಿಯ ಆಭರಣ ಬರುವಾಗ ತೆಗೆದುಕೊಂಡು ಬಾ...

ಶುಭಾಶೀರ್ವಾದಗಳು...

Ittigecement said...

Thank you... vastava ...

neevu bareyiri....

nimma prOtsaahada nuDigaLige dhanyavaadagaLu...

Niharika said...

Neevu thegedu kollo vishayagalu tumba sundara(photo) mattu sogasagirutte.