Tuesday, October 21, 2008

ಮಧ್ಯ ರಾತ್ರಿಯಲ್ಲಿ ವಾಸ್ತು ಪಾಠ

ಅದು ಶನಿವಾರ ರಾತ್ರಿ.
ಗಾಢವಾದ ನಿದ್ರೆಯಲ್ಲಿದ್ದೆ.

ನಮಗೆ ಶನಿವಾರ ಚೆನ್ನಾಗಿ ನಿದ್ರೆ ಬರುತ್ತದೆ.
ಸಪ್ಲೈದಾರರದ್ದು, ಲೇಬರ್ ಪೆಯ್ಮೆಂಟ್ ಆಗಿರುತ್ತದೆ.
ಮುಂದೆ ಒಂದುವಾರ ಪೇಯ್ಮೆಂಟಿನ ಚಿಂತೆ ಇರುವದಿಲ್ಲ....

ಅದಕ್ಕೆ ಶನಿವಾರ ಗುಂಡು ಪಾರ್ಟಿಗಳೂ ಇರುತ್ತದೆ.
ಹಾಗಾಗಿ ನಮಗೆ ನಿದ್ರೆನೂ ಜಾಸ್ತಿ,.....
ಮೊಬೈಲು ಕಿರಿ ಕಿರಿ ಕೂಡ ಇರುವದಿಲ್ಲ.

ಮನೆ ಕಟ್ಟಿಸುವ ಮಾಲಿಕರು, ಸೂಕ್ಶ್ಮತೆ ಇರುವವರು ಫೋನ್ ಮಾಡುವ ಸಾಹಸ ಮಾಡುವದಿಲ್ಲ.

ಆದರೂ ಫೋನ್ ರಿಂಗ್ ಆಗ್ತಾ ಇದೆ.......!!

ನಾನು ತಡಕಾಡಿ ಮೊಬೈಲು ತೆಗೆದುಕೊಂಡೆ.

ಮಧ್ಯ ರಾತ್ರಿ ೧೨ ಗಂಟೆ...

".. ಹಲೋ.. ಹೆಗಡೆಯವರಾ...??..!!.."

ಪರಿಚಯದ ಧ್ವನಿ..!!.
ಹೊಸತಾಗಿ ಮನೆಕಟ್ತಾ ಇದ್ದೆ. ಜವರೆ ಗೌಡರ ಧ್ವನಿ. ...!!

ತುಂಬಾ ಒಳ್ಳೆಯ ಜನ....
ಬಿಲ್ಲು ಕೊಟ್ಟ ತಕ್ಷಣ ಹಣ ರೆಡಿ....

ನಮ್ಮಂಥವರಿಗೆ ಮಾಡಿದ ಕೆಲಸಕ್ಕೆ ಹಣ ಬಂದೆರೆ ಅವರು ತುಂಬಾ ಒಳ್ಳೆಯ ಜನ...

"ಹೌದು ಸಾರ್.. ಏನು ಇಷ್ಟೊತ್ನಲ್ಲಿ..?? !!..
ಬೆಳಿಗ್ಗೆ ಮಾತಡೊಣ ಸಾರ್.."... ಎಂದೆ.

"ಮತ್ತೇನಿಲ್ಲ.. ಮನೆ ಪ್ಲಾನ್ ನೊಡ್ತಾ ಇದ್ದೆ.. ...
ಸ್ವಲ್ಪ ಬದಲಾವಣೆ.. ಮಾಡೊಣ.. ಅಂತಾ..."

ಇದು ಬಹಳ ಸಹಜ....

ಜೀವಮಾನವಿಡಿ ಹಣ ಉಳಿತಾಯ ಮಾಡಿ..
ತಮ್ಮ ಆಸೆ.. ಬೇಕು ಬೇಡಗಳನ್ನು ತಡೆ ಹಿಡಿದು... ಕಟ್ಟಿಸುತ್ತಾರಲ್ಲ...

ಹಗಲಿರುಳು ಮನೆಯದೆ ಕನಸು.. ಮಾತು....!

"ಗೌಡ್ರೆ.. ಬೆಳೀಗ್ಗೆ ಮಾತಾಡೊಣ.. ಪ್ಲೀಸ್..."

ಬಹಳ ವಿನಯವಾಗಿ ಹೇಳಿದೆ.. ಅವರು ಅನ್ನದಾತರಲ್ಲವೆ..?

" ಅಲ್ಲ.... ಹೆಗಡೆಯವರೆ...ಸ್ವಲ್ಪ ..
ಸ್ಮಾಲ್ .... ಸಣ್ಣ ಚೇಂಜು..
ಈಗಿನ ಪ್ಲ್ಯಾನ್ ಪ್ರಕಾರ...
ನಮ್ಮ ಟಾಯ್ಲೆಟ್ ಪೂರ್ವ ಪಶ್ಚಿಮಇದೆ... ........
ಅದನ್ನಾ.. ಉತ್ತರ ದಕ್ಶಿಣಕ್ಕೆ ಮಡಗಬೇಕು..!!..."

ನನಗೆ ಮೈಯೆಲ್ಲ ಉರಿದು ಹೊಯಿತು... ಬಂಗಾರದಂತಾ ನಿದ್ರೆ...!!
ಮಧ್ಯರಾತ್ರಿ ಬೇರೆ...

" ಯಾಕೆ ಸಾರ್.??!!...ಹೀಗೇ ಇದ್ರೆ.. ಸಂಡಾಸ್ ಬರಲ್ವಾ..??"

" ಛೆ,, ಛೆ.. ಹಾಗಲ್ಲ.. ಹೆಗಡೆಯವರೆ..
ವಾಸ್ತು ಪ್ರಕಾರಾ.. ಉತ್ತರ ದಕ್ಶಿಣವಾಗೇ ಮಡಗಬೇಕಂತೆ...
ಮನೆಯವರೆಲ್ಲರ ಆರೋಗ್ಯ ಚೆನ್ನಾಗಿರುತ್ತದಂತೆ...!!."


ಅವರ ಮನೆ.. ಅವರ ಟೊಯ್ಲೆಟ್.. !!
ನಂಗೆನಂತೆ..? ??!!

ವಾಸ್ತು ಪಾಠ ಜಲ್ದಿ ಮುಗಿಸಿ,
ಮುಸುಕೆಳೆದು ಮಲಗಿದೆ.

ಅಂದಿನಿಂದ ಮೊಬೈಲು ಸ್ವಿಚ್ ಆಪ್ ಮಾಡುವದು ಕಡ್ಡಾಯ ಮಾಡಿಕೊಂಡೆ....

8 comments:

sunaath said...

" ಯಾಕೆ ಸಾರ್..ಹೀಗೇ ಇದ್ರೆ.. ಸಂಡಾಸ್ ಬರಲ್ವಾ..??"

ಹಹ್ಹಹ್ಹಾ!!

NilGiri said...

ಸಕತ್ ನಗು ಬಂತು :). ನನ್ನ ತಮ್ಮನೂ ಸಿವಿಲ್ ಇಂಜನೀಯರ್. ನಿಮ್ಮ ಕಷ್ಟ ಓದಿದಾಗ ಅವನೂ ಹೀಗೆ ಎಗರಾಡುತ್ತಿದುದು ನೆನಪಿಗೆ ಬಂತು. ಒಬ್ಬೊಬ್ಬರ ವಾಸ್ತು ಒಂದೊಂದು ತರಹ ಇರುತ್ತದೆನೋ? ಆದರೂ ಎಲ್ಲರ (ಬಿಟ್ಟಿ)ಸಲಹೆ-ಸೂಚನೆಗಳನ್ನು ತೆಗೆದುಕೊಂಡು ಮನೆ ಕಟ್ಟಿಸುವುದು ದೊಡ್ಡ ಕಷ್ಟವಪ್ಪ! ( ಸ್ವಂತ ಅನುಭವ:) )

Harisha - ಹರೀಶ said...

ಗುಂಡು ಪಾರ್ಟಿ ಒಳ್ಳೇದಲ್ಲ.. ಬಿಟ್ಬಿಡಿ :-)

shivu.k said...

ಹೆಗಡೆ ಸಾರ್,
ಮತ್ತೆ ಅವರಿಗೆ ಸಂಡಾಸು ಸರಿಯಾಗಿ ಆಗ್ತಿದೆಯಾ ಕೇಳಿ. ಇಲ್ಲದಿದ್ದರೆ ಅವರಿಗೆ ನನ್ನ ಗೆಳೆಯ ಹೋಮಿಯೋಪತಿ ಡಾಕ್ಟರ್ ಇದ್ದಾನೆ ಆವ್ನು ವಾಸ್ತು ಪ್ರಕಾರವೇ ಟ್ರೀಟ್ ಮೆಂಟ್ ಕೊಡ್ತಾನಂತೆ ನನ್ನ ಬಳಿ ಕಳಿಸಿ ಕರೆದುಕೊಂಡು ಹೋಗುತ್ತೇನೆ.

ಮಲ್ಲಿಕಾರ್ಜುನ.ಡಿ.ಜಿ. said...

ಸಾಮಾನ್ಯವಾಗಿ ಸಂಡಾಸ್ ಗೆ ಕೂತಾಗ ಸಿಕ್ಕಾಪಟ್ಟೆ ಐಡಿಯಾಗಳು ಬರ್ತವೆ. ಯಾರಿಗ್ಗೊತ್ತು, ಅದರ ವಾಸ್ತು ಬದಲಾದರೆ ಐಡಿಯಾಗಳ ರೇಂಜೂ ಬದಲಾಗಬಹುದೇನೋ! ನೀವು ಹೇಳಿದಂತೆ ವಾಸ್ತು(ಸಂಡಾಸ್) ಬಗ್ಗೆ ಸಾಕಷ್ಟು ಸಂಶೋಧನೆ ನಡೆಯಬೇಕಿದೆ.

ಅನಿಲ್ ರಮೇಶ್ said...

ಹ್ಹಹ್ಹಹ್ಹಾ!!!

-ಅನಿಲ್.

Ittigecement said...

Thank you Anil....!

bharathi said...

nakku nakku susthaythu