Tuesday, September 30, 2008

ನೀವುಂಟು ನಮ್ಮಮನೆಯವರುಂಟು ..!!!

ನಾನು ಒಬ್ಬ ಗುತ್ತಿಗೆದಾರ.

ಸಮಾಜದಲ್ಲಿ ಗುತ್ತಿಗೆ ದಾರ ಅಂದರೆ ಮನುಷ್ಯರೇ... ಅಲ್ಲ.
ಅವರ ಬಳಿ ಹಣ ಬೆಕಾದ ಹಾಗೆ ಬಿದ್ದಿರುತ್ತದೆ.
ನಂಬಿಕೆಗೆ ಯೊಗ್ಯ ವ್ಯಕ್ತಿಗಳಲ್ಲ. .....

ಯಾಕೆ ಥರ ?

ನಮ್ಮಲ್ಲಿ ಎರಡು ಮನೆ ಕಟ್ಟಿದ.. ಮೇಸ್ತ್ರಿ ಕೂಡ "ಗುತ್ತಿಗೆದಾರ" ಅಗಿಬಿಡುತ್ತಾನೆ...!!
ಯಾವುದೇ ...ಡಿಗ್ರಿ ಅವಶ್ಯಕತೆ ಇಲ್ಲ....
ಪ್ರಾಮಾಣಿಕತೆಗೆ ಬೆಲೆ ಇಲ್ಲ....
ಮನೆ ಕಟ್ಟುವವರಿಗೆ ಆಪ್ಯಾಯಮಾನವಾಗಿ ಮಾತಾಡುವ ಮೇಸ್ತ್ರಿ ಆಪ್ತನಾಗಿಬಿಡುತ್ತಾನೆ......
"ಹೊಸ ಡಾಕ್ಟರ್ ಕ್ಕಿಂತ ಹಳೆ ಕಂಪೌಂಡರ್ ಮೇಲು "
ಅನ್ನುವ ತತ್ವದವರು....

ಹೀಗೆ ವಿಚಾರ ಮಾಡುತ್ತಿದ್ದಾಗ ಫೊನು ಶಬ್ದ ಮಾಡಿತು.

"
ಹಲೋ... ನಾನು ಥಾಮಸ್,, ನಿಮ್ಮ ಸ್ನೆಹಿತರು ನಿಮ್ಮ ಫೊನ್ ನಂಬರ್ ಕೊಟ್ಟಿದ್ದಾರೆ,
ನಮಗೆ
ಒಂದು ಮನೆ ಕಟ್ಟೀಕೊಡಿ. ಪ್ಲಾನ್ ಏನೂ ಮಾಡಿಲ್ಲ.
ನೀವೆ
ಎಲ್ಲ ಮಾಡಿಸಿ ಕೊಡಿ.
ಯಾವಾಗ ಬರ್ತಿರಿ ಹೆಗಡೆಯವರೆ?"
ಎಂದು ಕೇಳಿದರು.

ನಾನು " ನಾಳೆ ಬರ್ತೇನೆ ಸರ್" ಎಂದೆ.

ಕೆಂಗೆರಿಯಲ್ಲಿತ್ತು ಅವರ ಮನೆ. ಬಾಗಿಲು ಬೆಲ್ ಮಾಡಿದೆ.

ಒಳಗೆ ಸ್ವಾಗತ ಮಾಡಿದರು.

"
ನೋಡಿ ಹೆಗಡೆಯವರೆ, ಇದು ನಮ್ಮ ಜೀವಮಾನದ ಕನಸು.
ಈಗ ನನಸು ಮಾಡಿ ಕೊಳ್ತಾ ಇದ್ದೇವೆ.
ಮನೆ ಒಳಗಿನ ಪ್ಲಾನ್ ನಮ್ಮ ಮಿಸೆಸ್ಸಗೆ ಹೇಗೆ ಬೇಕೊ ಹಾಗೆ ಮಾಡಿ, ...
ನನಗೆ ಕಂಪೌಂಡು ಮಾತ್ರ ಚೆನ್ನಾಗಿ ಬರಬೇಕು...
ಇಡಿ ಬೆಂಗ್ಳೂರಲ್ಲಿ ಥರ ಕಂಪೌಂಡು ಇದ್ದಿರಬಾರದು...!!
ಓಕೆ ನಾ?.."
ಎಂದು ಕೇಳಿದರು.

ಇದು ಎಂಥಾ ವಿಚಿತ್ರ.. ?.!!.
ಲೊಕೊ ಭಿನ್ನ ರುಚಿ, ...!!
ಜಗತ್ತಿನಲ್ಲಿ ಬಹಳ ತರಹದ ರುಚಿಗಳಿವೆಯಂತೆ...!!

ಇದೂ ಸಹ ಒಂದು ತರಹ ರುಚಿನಾ...?

ನಾನು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಅವರ ಬಳಿ ವಿವರವಾಗಿ ಚರ್ಚಿಸಿದೆ.
ಎಲ್ಲಾ ಡಿಟೆಲಾಗಿ ಬರೆದು ಕೊಂಡೆ.

ಹಾಗೆ ಮಿಸೆಸ್ಸ್ ಥಾಮಸ್ ಬಳಿಯೂ ಮನೆ ಪ್ಲಾನ್ ಬಗ್ಗೆ ವಿವರಗಳನ್ನು ತಿಳಿದು ಕೊಂಡೆ.

ಬಹಳ ವಿನಯದಿಂದ " ಸರ್.. ನಾನು ಎಲ್ಲ ರೆಡಿ ಮಾಡಿಕೊಂಡು ಮುಂದಿನವಾರ ಬರುತ್ತೆನೆ"
ಎಂದು ಹೊರಗೆ ಬಂದೆ.

ಮುಂದಿನ ವಾರ ಪ್ಲಾನ್ ರೆಡಿ ಆಗಿತ್ತು....
ಥಾಮಸರು ಹಲವು ಬಾರಿ ಫೊನು ಮಾಡಿ ತಲೆ ತಿಂದಿದ್ದರು.
ನಾನು ಅವರ ಮನೆಗೆ ಹೊದಾಗ ಬಹಳ ಆದರದ ಸ್ವಾಗತ ಸಿಕ್ಕಿತು.

ಅವರು ಮೊದಲಿಗೆ ಕೆಳಿದ್ದು ಕಂಪೌಂಡಿನ ಪ್ಲಾನು..!!

ನಾನು ಅವರಿಗೆ ಅದನ್ನೆಲ್ಲ ವಿವರಿಸಿ ಹೆಳಿದೆ....
ಅವರಿಗೆ ತುಂಬಾ ಖುಶಿಯಾಯಿತು....

"
ಹೆಗಡೆಯವರೆ,...
ನೀವು ಹಣದ ಬಗ್ಗೆ ವಿಚಾರ ಮಾಡಬೇಡಿ. ಅದು
. ಎಷ್ಟೇ...
ಖರ್ಚಾದರೂ
ಪರವಾಗಿಲ್ಲ... ಕಂಪೊಂಡು... ಚೆನ್ನಾಗಿ ಬರಬೇಕು..".
ಎಂದರು.

ನಾನು ಅದೇ ವಿಧೇಯತೆಯಿಂದ...
"
ಸರ್.. ಮನೆ ಪ್ಲಾನ್ ಕೂಡ ರೆಡಿಯಗಿದೆ....
ನೋಡಿ.... ಎರಡು ಕಿಡಕಿ.... ಹಾಲಿನಲ್ಲಿ..
ಇದು ಸಿಟಿಂಗ ಏರಿಯ..."

ಇನ್ನೂ ಹೆಳ್ತಾ ಇದ್ದೆ ಆಗ....

" ಹೆಗಡೆಯವರೇ..ಮನೆ ಒಳಗೆ ನೀವುಂಟು ನಮ್ಮ ಮಿಸೆಸ್ಸ್ ಉಂಟು,...!!

ಅವರಿಗೆ ಹೆಗೆ ಬೆಕೊ ಹಾಗೆ ಮಾಡಿ ಮಾರಾಯ್ರೆ,..

ಮುಖ್ಯವಾಗಿ ಅವರಿಗೆ ಸಮಾಧಾನವದರೆ ಆಯಿತು..!!

ನನ್ನ ಅಭ್ಯಂತರ ಏನಿಲ್ಲ..!!"

ಅಂದರು.
ನಾನು..ಇದೇನಪ್ಪ..ಎಂದುಕೊಂಡೆ...

ಸ್ವಲ್ಪ ಸಾವರಿಸಿ ಕೊಂಡು,...

"
ಸರ್.. ಅದು ಹಾಗಲ್ಲ..
ಮಾಸ್ಟರ್
... ಬೆಡ್ ರೂಮಲ್ಲಿ ನಿಮಗೆ...ಪ್ರತ್ಯೇಕವಾಗಿ ....
ಕಿಡಕಿ
ಬಳಿ ಕುಳಿತುಕೊಳ್ಳಲಿಕ್ಕೆ....ಪ್ಲಾನ್ ಮಾಡಿದ್ದೇನೆ...
ಇದರ ಬಗೆಗೆ ತುಂಬಾ ತಲೆಕೆಡಿಸಿಕೊಂಡು ಮಾಡಿದ್ದೇನೆ....
ಇಲ್ಲಿ... .
ನೋಡಿ..."

ಇನ್ನೂ ಹೆಳ್ತಾ ಇದ್ದೆ ಆಗ...

"
ಹೆಗಡೆಯವರೆ ಹಾಲಲ್ಲಿ...,ಬೆಡ್ ರೂಮ್ನಲ್ಲಿ...
ಎಲ್ಲ
ನೀವುಂಟು ಮಿಸೆಸ್ಸ್ ಉಂಟು....!!
ಎಲ್ಲಿ ...ಏನು ಬೇಕಾದ್ರೂ ಮಾಡಿಕೊಳ್ಳಿ...!!
ಹೇಗೆ
... ಬೇಕೊ ಹಾಗೆ ಮಾಡಿಕೊಳ್ಳಿ, ...!!
ನಿಮ್ಮಿಬ್ಬರ... ಮಧ್ಯೆ ನಾನು ಬರಲ್ಲ.. ...!
ನನಗೆ ನನ್ನ ಮಿಸೆಸ್ಸ್ ರಿಂದ ಕಂಪ್ಲೇಂಟು ಬರಬಾರದು...!!
ಹೆಗಡೆಯವರು ಸರಿಯಾಗಿ .. ....ಮಾಡೋದಿಲ್ಲ ...
ಅಂತ ,ಹೇಳಬಾರದು..ನೋಡಿ..
..!
ಒಟ್ನಲ್ಲಿ ಅವರಿಗೆ ಸಮಾಧಾನ ಅದರೆ ಆಯಿತಪ್ಪಾ!.. !!
ಅದು ನಿಮ್ಮ ಕೆಲಸ....!!
ನಿವುಂಟು ನಮ್ಮ ಮಿಸ್ಸೆಸ್ ಉಂಟು....!!

ಎಂದು ಹೊರಗೆ ನಡೇದೇ ಬಿಟ್ಟರು!!!!.

ನಾನು ಮೂರ್ಛೆ ಹೋಗುವದೊಂದು ಬಾಕಿ ....
‍!!!!

13 comments:

shivu.k said...

ಬ್ಲಾಗ್ ಪ್ರಪಂಚಕ್ಕೆ ಸ್ವಾಗತ. ಮೊದಲ ಲೇಖನದ ವಸ್ತು ಚೆನ್ನಾಗಿದೆ. ಹೊಸತು ಕೂಡ ಆಗಿದೆ. ಆದರೆ ಬರೆಯುವ ಉತ್ಸಾಹದಲ್ಲಿ ಕಾಗುಣಿತದಲ್ಲಿ ತುಂಬಾ ತಪ್ಪಾಗಿದೆ. ಮುಂದಿನ ಬರಹದಲ್ಲಿ ಅದರ ಕಡೆ ಹೆಚ್ಚು ಗಮನವಿರಲಿ. goodluck.
keep it up!

ಶಿವು.ಕೆ

ಹಿತ್ತಲಮನೆ said...

ಸಖ್ಖತ್ತಾಗಿ ಬರ್ದೆ ಮಾರಾಯಾ....short and sweet....ಮುಂದಿನ ಲೇಖನನೂ ಹೀಂಗೇ ಇರ್ಲಿ....ಉಳಿದವರಂಗೆ ಜಾಸ್ತಿ ವರ್ಣನೆ ಬೇಡ....Good Luck...! I'm sure you have many more such incidents in your stocks...it would be definitely interesting to read...--------M R Bhat

ಶರಶ್ಚಂದ್ರ ಕಲ್ಮನೆ said...

ಬರಹ ತಮಾಶೆಯಾಗಿ ಇದ್ದು ಪ್ರಕಾಶಣ್ಣ. ಕಾಗುಣಿತದ ಕಡೆ ಸ್ವಲ್ಪ ಗಮನ ಕೊಡಕ್ಕಾಗಿತ್ತು. ಇಲ್ಲೊಂದು ಲಿಂಕ್ ಹಾಕಿದ್ದಿ, ಇದ್ರಿಂದ ನಿಂಗೆ ಹೆಲ್ಪ್ ಅಗ್ತೆನ ನೋಡು. http://www.google.com/transliterate/indic/Kannada

ಶರಶ್ಚಂದ್ರ ಕಲ್ಮನೆ

sunaath said...

Hey, wonderful!
ಮನೆ ಕಟ್ಟೋ ಅಷ್ಟೇ ಚೆನ್ನಾಗಿ, ಲೇಖನವನ್ನೂ ಕಟ್ತಾ ಇದ್ದೀರಲ್ಲ!
(ವಿ.ಸೂ: ನಾನೂ ಒಬ್ಬ ಸಿವಿಲ್ ಇಂಜನಿಯರ. ಈಗ ನಿವೃತ್ತನಾಗಿದ್ದೀನಿ.)

Ittigecement said...

DEAR..
HITTALAMANEYAWARE , KALMANEYAWARE.. AND SUNAATH SIR... THANK YOU SIR...
I AM STILL WORKING, AND A CONTRACTOR ALSO. THANK YOU FOR YOUR COMENTS!!

Harisha - ಹರೀಶ said...

ಒಳ್ಳೇ "ಮೋಟುಗೋಡೆ" ಕಾಂಪೊನೆಂಟು :o)

ಚೆನ್ನಾಗಿದ್ದು :-)

ರಾಜೇಶ್ ನಾಯ್ಕ said...

ನಾನೇ ಮೂರ್ಛೆಬಿದ್ದೆ!!! ಒಳ್ಳೆ ಕಾಂಪೌಂಡ್ ಗಿರಾಕಿ!

ಚಿತ್ರಾ ಸಂತೋಷ್ said...

ನೀವುಂಟು ನಿಮ್ಮ ಬರಹ ಉಂಟು..ಚೆನ್ನಾಗೈತೆ. ಓದಕ್ಕೂ ಮಜಾ ಐತೆ.
-ಚಿತ್ರಾ

Ittigecement said...

DEAR.. HARRSH, RAJESH AND CHITRA..

THANK YOU VERY MUCH...!

Hegde's said...

This one is very good. Nice punch line :) Inspiring me to create my own blog and start using it :)

Regards
Sadashiv

Sushrutha Dodderi said...

:D ಚನಾಗಿದ್ದು ಇನ್ಸಿಡೆಂಟು!
ಬರೀತಿರಿ.

Ittigecement said...

ಸುಶ್ರುತ ದೊಡ್ಡೇರಿಯವರೆ.. ಧನ್ಯವಾದಗಳು..ಬ್ಲೊಗ್ ಗೆ ಬರುತ್ತಾ ಇರಿ..

Unknown said...

ಹೆಗಡೆಯವರ ಮೂರ್ಚೆ ಹೋಗೋ feelingಗಿಂತ ಥಾಮಸ್ ಜೊತೆಗಿನ ಚರ್ಚೆ ಸೂಪರ್.