Tuesday, April 12, 2011

"ಇದೇ.. ಇದರ.. ಹೆಸರು... !.."

ಹೆಸರು ಇಡುವದು ಬಲು ಕಷ್ಟದ ಕೆಲಸ...

ಹೆಸರಿಡುವ ಮೊದಲೂ..
ನಂತರವೂ.. 
ಸಮಾಧಾನವಾಗುವದು ಬಲು ಕಡಿಮೆ...

ನನ್ನ ಎರಡನೇ ಪುಸ್ತಕ  ಬಿಡುಗಡೆ ಆಗ್ತಾ ಇದೆ....

ಸರಿ...

"ಈ ಪುಸ್ತಕಕ್ಕೆ  ಏನು ಹೆಸರು...?"

"ಹೆಸರೇ.. ಬೇಡ.. !""

" ಅಯ್ಯೋ...ಅದು ಆಗ್ಲೇ ಇಟ್ಟಾಗಿದೆ.. !!.."

ತಲೆ ಕೆರೆದು ಕೊಳ್ಳುವಂಥಹ  ಪರಿಸ್ಥಿತಿ..!!

ಆಗ ಹೊಳೆದದ್ದು  "ಇದೇ.. ಇದರ.. ಹೆಸರು... !.."

ಆಗ ತಕ್ಷಣ ನೆನಪಾದದ್ದು ನಾಡಿನ ಹೆಸರಾಂತ  ಕಲಾವಿದ "ರಘು ಅಪಾರ"

"ರಘುರವರೆ ..
"ಇದಕ್ಕೊಂದು ಮುಖಪುಟ ಮಾಡಿಕೊಡಿ...
ಪುಸ್ತಕದ ಹೆಸರು..
"ಇದೇ.. ಇದರ.. ಹೆಸರು... !.."

"ನೀವು ಈ..ತರಹದ  ಹೆಸರಿಟ್ಟರೆ ಮುಖ ಪುಟ ಮಾಡುವದು ಹೇಗೆ...?"

ಈಗ ಅಪಾರ ತಲೆ ಬಿಸಿ ಮಾಡಿಕೊಂಡರು...

ಗೆಳೆಯ ಮಲ್ಲಿಕಾರ್ಜುನ.. ದಿನಕರ ಮೊಗೆರಾ.. ಅಳಿಯ  ಅನಿಲ್, ನವಿನ  ಹಳ್ಳಿ ಹುಡುಗ, ಮೈಸೂರಿನ ಬಾಲು ಸರ್.. 
ಎಲ್ಲರೂ.. ಪ್ರಯತ್ನಿಸಿದರೂ..
ಇವರೆಲ್ಲರ ಸಂಗಡ  ನಾನೂ ಕೆಲವು ಫೋಟೋ ತೆಗೆದೆ..

ಯಾವುದೂ " ಅಪಾರ " ಅವರಿಗೆ  ಸಮಾಧಾನವಾಗಲಿಲ್ಲ..
ಅವರೊಂದು ಅಧ್ಬುತ ಪ್ರತಿಭೆ..
ಅವರಿಗೆ ಸಮಾಧಾನವಾದಂತೂ ಪಟ್ಟು ಸಡಿಲಿಸುವವರಲ್ಲ...

ಅಷ್ಟರಲ್ಲಿ ನನ್ನ ಅಳಿಯ ನಾಗರಾಜ ಕೆ. ಒಂದು ಐಡಿಯಾ  ಕೊಟ್ಟ...

ಅದನ್ನು ಪ್ರತಿಭಾನ್ವಿತ  ಛಾಯಾಗ್ರಾಹಕ "ದಿಗ್ವಾಸ್ " ಬಳಿ ಹೇಳಿದೆ...

ಇದು ದಿಗ್ವಾಸ್  ತೆಗೆದ ಫೋಟೋ..

ಅದಕ್ಕೊಂದು ರೂಪ.. ವಿನ್ಯಾಸ ಮಾಡಿದವರು ರಘು  "ಅಪಾರ"

ಗೆಳೆಯರೆಲ್ಲರಿಗೂ ಹೃದಯ ಪೂರ್ವಕ ವಂದನೆಗಳು...

ಅವರೆಲ್ಲರ ಪರಿಶ್ರಮ ನಿಮ್ಮ ಮುಂದಿದೆ...

ಹೇಗಿದೆ...?


ಬೆನ್ನುಡಿಯನ್ನು ಪ್ರೀತಿಯಿಂದ ಬರೆದುಕೊಟ್ಟವರು..
ಹೆಸರಾಂತ ರಂಗ ಭೂಮಿ ಕಲಾವಿದೆ..
ಕಿರುತೆರೆ ನಟಿ..
ಮುಕ್ತ ಮುಕ್ತ ಧಾರಾವಾಹಿಯ "ಮಂಗಳತ್ತೆ.."

ಶ್ರೀಮತಿ. ಜಯಲಕ್ಷ್ಮಿ ಪಾಟಿಲ್..



ಅಂತೂ ಮತ್ತೊಂದು ಕನಸು ನನಸಾಗುತ್ತಿದೆ..


ನನ್ನ ಎರಡನೇ ಪುಸ್ತಕ ಬಿಡುಗಡೆಯಾಗುತ್ತಲಿದೆ..


ಇದೇ ತಿಂಗಳು   ಭಾನುವಾರ ...
(24/4/2011)...
ಬಸವನಗುಡಿಯ  ವಾಡಿಯಾ  ರಸ್ತೆಯಲ್ಲಿರುವ...  
"ವರ್ಲ್ಡ್  ಕಲ್ಚರ್  ಸೆಂಟರ್"  ನಲ್ಲಿ..

ಬೆಳಿಗ್ಗೆ ೧೦.೩೦ ಕ್ಕೆ.....

ದಯವಿಟ್ಟು... ದಯವಿಟ್ಟು ಬನ್ನಿ...

ಅಂದು ...
ಕಿವಿಗೆ ಇಂಪಾದ ಸಂಗಿತವಿರುತ್ತದೆ...
ಹೊಟ್ಟೆ ತುಂಬಾ  ನಗಲಿಕ್ಕೆ ಹಾಸ್ಯವಿರುತ್ತದೆ..

ರುಚಿಕಟ್ಟಾದ ತಿಂಡಿ... 
ಬೆಚ್ಚನೆಯ ಟೀ.. ಕಾಫಿ..

ಜೋರಾಗಿ ನಕ್ಕು ನಗಲು ಗೆಳೆಯರ ದಂಡೆ ಇದ್ದಿರುತ್ತದೆ...

ಬ್ಲಾಗಿಗರ... 
ಬ್ಲಾಗ್ ಓದುಗರ  ಮಿನಿ ಸಮ್ಮೇಳನ ಅದಾಗಿರುತ್ತದೆ...

ಬರುವಿರಲ್ಲಾ...?

" ಅದೆಲ್ಲ ಸರಿ... ಮಾರಾಯ್ರೇ...!

ಅತಿಥಿಗಳು ಯಾರು?
ಕಾರ್ಯಕ್ರಮದ ಅಧ್ಯಕ್ಷರು ಯಾರು...?

ನಗಿಸಲು .. 
ಹಾಸ್ಯದ ಹೊಳೆ ಹರಿಸಲು ಯಾರ್ಯಾರು ಬರ್ತಾರೆ...?"

ಸ್ವಲ್ಪ...
ಸ್ವಲ್ಪ....ದಯವಿಟ್ಟು  ಕೆಲವೇ...ದಿನ... ಕಾಯಬೇಕು ..
ವಿವರಗಳನ್ನು ತಿಳಿಸುವೆ....

ನಿಮ್ಮೆಲ್ಲರ ಪ್ರೀತಿ... ಸ್ನೇಹಕ್ಕೆ ಸದಾ ಚಿರ ಋಣಿ...

ಪ್ರೀತಿಯಿಂದ...
ಇಟ್ಟಿಗೆ ಸಿಮೆಂಟು....

ಜೈ.. ಜೈ.. ಜೈ... ಹೋ !!


63 comments:

  1. ತು೦ಬ ಖುಷಿಯಾಯ್ತು, ಮುಖಪುಟ ಆಕರ್ಷಕ, ಬೆನ್ನುಡಿ ಬಗ್ಗೆ ಮಾತೇ ಇಲ್ಲ. ಪುಸ್ತಕದ ಒಳಹೂರಣ ಚೆನ್ನಾಗಿದೆ ಎ೦ಬ ಬಗ್ಗೆ ಅನುಮಾನವೇ ಇಲ್ಲ. ಮುಖ್ಯ ಅತಿಥಿಗಳು ಯಾರು ಅಂತ ಬೇಗ ತಿಳಿಸಿ ಗುರುವೇ.

    ReplyDelete
  2. ತುಂಬಾ ಸಂತೋಷ ಆಯ್ತು..
    ಖಂಡಿತ ಬರುವೆ ಮೊದಲನೇ ಸಾಲಿನಲ್ಲಿ ಸೀಟು ಕಾದಿರಿಸಿ ಹ ಹ ಹ .

    ReplyDelete
  3. ಪ್ರಕಾಶಣ್ಣಾ.....
    really very nice....
    ಮುಖಪುಟ ರಾಶೀ impress ಮಾಡಿತ್ತು....

    ತುಂಬಾ ತುಂಬಾ ಖುಷಿ ಆಗ್ತಾ ಇದ್ದು.......

    ಜೈ ಹೋ.....

    ReplyDelete
  4. hegadeji suspense king..!!
    yaaru avaru bega helri

    ReplyDelete
  5. ಪರಾಂಜಪೆಯವರೆ...

    ತುಂಬಾ ತುಂಬಾ ತುಂಬಾ ಥ್ಯಾಂಕ್ಸ್...

    ನಿಮ್ಮೆಲ್ಲರ ಸ್ನೇಹ.. ಪ್ರೀತಿ ಕೊಟ್ಟ ಈ ಬ್ಲಾಗ್ ಲೋಕಕ್ಕೆ ಜೈ ಜೈ ಜೈ ಹೋ.. !!

    ಸಧ್ಯದಲ್ಲೇ... ಬಲು ಬೇಗ " ಆಮಂತ್ರಣ ಪತ್ರಿಕೆ" ನಿಮ್ಮ ಕೈ ಸೇರಲಿದೆ..

    ಪ್ರೀತಿ..
    ಪ್ರೋತ್ಸಾಹ ಹೀಗೆಯೇ ಇರಲಿ...

    ReplyDelete
  6. ಪ್ರಕಾಶಣ್ಣ,

    "ಇದೆ ಇದರ ಹೆಸರು" ಮುಖ ಚಿತ್ರ ಹಾಗೂ ಮಂಗಳತ್ತೆಯ ಬೆನ್ನುಡಿ ಎರಡು ಚೆಂದಿದೆ. ನೀವೇನೇ ಮಾಡಿದರು ನಿಮಗೆ ನಮ್ಮ ಬೆಂಬಲ ಸದಾ ಇರುತ್ತೆ, ನಿಮ್ಮ ಪ್ರಯತ್ನಕ್ಕೆ ನಲ್ವಾರ್ಯೇಕೆಗಳು.

    --

    ಅರವಿಂದ್

    ReplyDelete
  7. Congratulations Prakashanna! ಮುಖಪುಟ ಬೊಂಬಾಟ್ ಆಗಿದೆ :-)
    ಎಲ್ಲಾ ಚೊಲೋದೇ ಆಗ್ಲಿ..

    ಪ್ರೀತಿಯಿಂದ,
    ಪೂರ್ಣಿಮಾ

    ReplyDelete
  8. Hesaru yake bidi, bookke saaku...........
    Kandita baruve.
    Thank you

    ReplyDelete
  9. Jai Ho Prakashanna....

    Waiting for that day.. :)

    Shubhashayagalu.. :)

    ReplyDelete
  10. ಪ್ರಕಾಶಣ್ಣ,
    ಖಂಡಿತ ವಾಗಿಯೂ, ಬರುತ್ತೇನೆ,,,, ತುಂಬಾ ದಿನ ಆಯಿತು,,, ನಮ್ಮ ಬ್ಲಾಗ್ ಸ್ನೇಹಿತರನ್ನು ನೋಡಿ..... ಮತ್ತೆ,,, ನಿಮ್ಮ ಹೊಸ ಪ್ರಯತ್ನಕ್ಕೆ ಅಭಿನಂದನೆಗಳು....
    ಗುರು

    ReplyDelete
  11. All the Best Prakashanna

    eradane pustakada bidugadegoo nanage baralu aaguttilla, besara vaaguttade

    aadare preeti poorvaka haaraike sadaa ide

    Jai Ho

    ReplyDelete
  12. ಪ್ರಕಾಶಣ್ಣ ತುಂಬಾ ಸಂತೋಷ ಆಯ್ತು..
    ಖಂಡಿತ ಬರುವೆ

    ReplyDelete
  13. ಸರ್,

    ಮುಖಪುಟ ತುಂಬಾ ಚೆನ್ನಾಗಿದೆ...
    ದಿಗ್ವಾಸ್ ಫೋಟೊದಿಂದಾಗಿ ಮುಖಪುಟ ರಚನೆ ಕೆಲಸ ಅಪಾರರಿಗೆ ಸುಲಭವಾಗಿದೆ..ಸರಳವಾಗಿದೆ.
    ಅಭಿನಂದನೆಗಳು.
    ಮುಂದುವರಿಯಲಿ ಪುಸ್ತಕದ ಅಭಿಯಾನ..

    ReplyDelete
  14. ಪ್ರಕಾಶೂ - ಇದೇ ಇದರ ಹೆಸರು - ಮತ್ತದೇ ನನ್ನ ಪರಿಸ್ಥಿತಿ...ನಿನ್ನ ಕಳೆದ ಪುಸ್ತಕ ಬಿಡುಗಡೆಗೆ ಬರಲು ಅಂತಹ ಪರಿಚಯವಿರಲಿಲ್ಲ ಆದ್ರೆ ಈಗ ಬರಲಾಗುತ್ತಿಲ್ಲವಲ್ಲಾ ಎಂಬ ಕೊರಗು....
    ಇಲ್ಲಿಂದಲೇ ಪುಸ್ತಕಕ್ಕೆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭಕೋರುವುದೊಂದೇ ದಾರಿ....
    ಶುಭಮಸ್ತು...

    ReplyDelete
  15. ಚೆನ್ನಾಗಿದೆ ಇದರ ಹೆಸರು :)

    ReplyDelete
  16. ಚುಕ್ಕಿಚಿತ್ತಾರಾ...
    ವಿಜಯಾ...

    ಈ ಸಾರಿ ತಪ್ಪಿಸಲೇ ಬಾರದು...
    ಬಾವ ನಟರಾಜರನ್ನು ಕರೆದು ಬರಲೇ ಬೇಕು... ಕಾಯ್ತ ಇರ್ತಿನಿ... ಜೈ ಹೋ... !

    ReplyDelete
  17. ಪ್ರಕಾಶ,
    ಮುಖಪುಟದ ವಿನ್ಯಾಸ ತುಂಬ ಚೆನ್ನಾಗಿದೆ. ಒಳಗಿನ ತಿರುಳೂ ಚೆನ್ನಾಗಿದೆ ಎನ್ನುವದು ನಮಗೆಲ್ಲ ತಿಳಿದದ್ದೇ ಆಗಿದೆ. ಎರಡನೆಯ ಪುಸ್ತಕದ ಬಿಡುಗಡೆಗೆ ಶುಭಾಶಯಗಳು.

    ReplyDelete
  18. ಶುಭಾಶಯಗಳು ಪ್ರಕಾಶಣ್ಣ , ಮುಖ ಪುಟ ಚೆನ್ನಾಗಿ ಮೂಡಿಬಂದಿದೆ. ನಾನು ಬರುತ್ತೇನೆ.ಮತ್ತೊಮ್ಮೆ ಬ್ಲಾಗ್ ಮಿತ್ರರನ್ನು ಭೇಟಿಮಾದಬಹುದು. ಜೈ ಹೋ .

    ReplyDelete
  19. ಪ್ರಕಾಶಣ್ಣ;ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭಾಶಯಗಳು.ಪುಸ್ತಕವನ್ನೂ ಖಂಡಿತ ಕೊಂಡು ಓದುತ್ತೇನೆ.ಜೈ ಹೋ .

    ReplyDelete
  20. Congrats prakashanna ...ಮುಖಪುಟ ತುಂಬಾ ಇಂಪ್ರೆಸ್ಸಿವ್ ಆಗಿದ್ದು ... ಕಾರ್ಯಕ್ರಮ ಚೆನ್ನಾಗಿ ಮೂಡಿ ಬರಲಿ
    ನಂದು ಮತ್ತೆದೆ ಹಾಡು ಫೋಟೊಗಳನ್ನ ಕಳಿಸಿ ನೋಡ್ತೇನೆ ಅಸ್ಟೆ :D

    ReplyDelete
  21. naanantU bandE bartene......

    mukha puTa tumbaa chennaagide......

    blog baLagada ellaa snehitaru barali endu aashisuttene...

    ReplyDelete
  22. ಕನಸು ಕಂಗಳ ಹುಡುಗ .. ರಾಘವ..

    ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ..
    ಬಹಳ ದಿನಗಳಾದವು ಎಲ್ಲರೂ ಸೇರದೆ..
    ಜೋಕು ಹೇಳಿ ಹರಟೆ ಹೊಡೆಯದೆ..

    ಈ ಬಾರಿ ಎಲ್ಲರೂ ಸೇರೋಣ..

    ದಯವಿಟ್ಟು ಪ್ರಯತ್ನಿಸಿ ಬನ್ನಿ..
    ಪ್ರೀತಿಯಿಂದ
    ಪ್ರಕಾಶಣ್ಣ..

    ReplyDelete
  23. ಜೈ ಹೋ! ಮುಖಪುಟ ಸಖತ್ತಾಗಿದೆ. ಬೆನ್ನುಡಿ ತುಂಬಾ ಚೆನ್ನಾಗಿ ಬರೆದಿದ್ದಾರೆ ಮಂಗಳತ್ತೆಯವರು. ಮುಖಪುಟಕ್ಕೆ ಅಪಾರರವರ ಜೊತೆ ಗೆಳೆಯರು ಸೇರಿರುವುದು ಹೊಸ ರೂಪುರೇಷೆಯನ್ನೇ ಕೊಟ್ಟಿದೆ. ನಾ ಗೆಸ್ (ಸಜೆಸ್ಟ್ ಮಾಡಿದ್ದೆ ಅನ್ಸುತ್ತೆ) ಮಾಡಿದ್ದ ಹಾಗೆ ನೀಲಿಮಾ ಪ್ರಕಾಶನ! ನನಗೆ ಒಂದು ಸೀಟು...ಒಂದು ಪುಸ್ತಕ. ಶುಭವಾಗಲಿ.

    - ಚಿಂವ್ ಚಿಂವ್...

    ReplyDelete
  24. ಶುಭ ಹಾರೈಕೆಗಳು.

    ReplyDelete
  25. congratulations.......:))
    mukhaputa chennagide:))

    ReplyDelete
  26. ದೇಸಾಯಿ ಸಾಹೇಬರೆ..

    ನಾವೆಲ್ಲ ಮತ್ತೊಮ್ಮೆ ಸೇರೋಣ..
    ಹಾಸ್ಯ...
    ಸುಂದರ ಹಾಡುಗಳು.. ಸಂಗೀತ...!

    ಮತ್ತೇನು ಬೇಕು ಒಂದು ಭಾನುವಾರ ಸಂತೋಷವಾಗಿ ಕಳೆಯಲಿಕ್ಕೆ...!

    ನಿಮ್ಮನ್ನೆಲ್ಲ ಅಲ್ಲಿ ಕಾಯುತ್ತೇನೆ ದಯವಿಟ್ಟು ಬನ್ನಿ...

    ನಿಮ್ಮ ಸ್ನೇಹ.. ಪ್ರೀತಿಗೆ ಜೈ ಜೈ ಜೈ ಹೋ !!

    ReplyDelete
  27. Congrats Daada :)

    All the best :)

    ReplyDelete
  28. ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು

    ReplyDelete
  29. ಮುಖಪುಟ ಸುಂದರವಾಗಿ ಮೂಡಿ ಬಂದಿದೆ...ಶುಭವಾಗಲಿ......

    ReplyDelete
  30. ಶುಭ ಹಾರೈಕೆಗಳು.

    ReplyDelete
  31. Congratulations!
    ಶುಭ ಹಾರೈಕೆಗಳು.

    ReplyDelete
  32. ಉತ್ತಮ ಪ್ರಯತ್ನ. ಮುಖಪುಟ ಸುಂದರವಾಗಿದೆ. ಬೆನ್ನುಡಿ ತುಂಬಾ ಇಷ್ಟವಾಯಿತು, ಇಟ್ಟಿಗೆ ಸಿಮೆಂಟಿನ ಮಿಶ್ರಣಕ್ಕೆ ಶ್ರಮದ ನೀರು ವಿಶೇಷವಾಗಿ ಬೆರೆಸಿದ್ದೀರಿ. ಬೆನ್ನುಡಿ,ಮುಖಪುಟದಂತೆ ಒಳ ಪುಟದ ಬರಹದ ಬಗ್ಗೆ ಬೇರೆ ಮಾತಿಲ್ಲ. ಕಾದು ಓದುವ ಕುತೊಹಲವಿದೆ, ಶುಭವಾಗಲಿ...! ನಾವೊ ನಿಮ್ಮೊಂದಿಗಿದ್ದೇವೆ.........

    ReplyDelete
  33. naanu bartaa iddene prakaashanna....Delhiyindaaa... jai ho!!!

    ReplyDelete
  34. ಸಾರ್
    ಅಭಿನಂದನೆಗಳು , ಶುಭವಾಗಲಿ.
    ಮುಖಪುಟ , ಅದರ ಹಿಂದಿನ ಕಥೆ ಗಮ್ಮತ್ತಾಗಿದೆ!!
    ಪುಸ್ತಕ ಜನಪ್ರಿಯವಾಗಿ ಮನೆ , ಮನಗಳನ್ನು ತಟ್ಟಲಿ,
    ಶುಭ ಹಾರೈಕೆಗಳೊಂದಿಗೆ

    ReplyDelete
  35. congrats. magalu thumba chikkavaladakke baralu agtha illa. mundina sala khandithaa.. shubhavagali... ondoo uliyadanthe pusthakagalu kharchaagali...

    ReplyDelete
  36. ಶುಭ ಹಾರೈಕೆಗಳು...ಮುಖಪುಟ ತುಂಬಾ ಚೆನ್ನಾಗಿದೆ...
    ದಿಗ್ವಾಸ್ ಫೋಟೊ ಸೂಪರ್.....
    ಅಭಿನಂದನೆಗಳು.

    ReplyDelete
  37. Mukhaputa tumba chennagi banju. Wish u 'BEST OF LUCK' 2ne bookge..!!! ee sala nanentu miss madtnille.

    ReplyDelete
  38. ತೇಜಸ್ವಿನಿ...

    ಪ್ರೋತ್ಸಾಹಕ್ಕೆ.. ಪ್ರೀತಿಗೆ ತುಂಬಾ ತುಂಬಾ ಧನ್ಯವಾದಗಳು..
    ಕಾರ್ಯಕ್ರಮಕ್ಕೆ ದಯವಿಟ್ಟು ಬನ್ನಿ... ಶುಭ ಹಾರೈಸಿ...

    ReplyDelete
  39. Mukhaputa, Bennudi superrrr....Congrats...All the best......Jai Ho......

    ReplyDelete
  40. ಪ್ರೀತಿಯ "ಅರವಿಂದ"....

    ನಾನು ಬರೆದುದನ್ನು ಪ್ರೀತಿಯಿಂದ ಓದುವ ನಿಮಗ್ಗೆ ತುಂಬಾ ತುಂಬಾ ವಂದನೆಗಳು..
    ನಿಮ್ಮ ಸ್ನೇಹ..
    ಶುಭ ಹಾರೈಕೆ ಯಾವಾಗಲೂ ಹೀಗೆಯೇ ಇರಲಿ...

    ಪ್ರೀತಿಯಿಂದ
    ಪ್ರಕಾಶಣ್ಣ..

    ReplyDelete
  41. ಪ್ರೀತಿಯ ದಿಗ್ವಾಸು...

    ಇದರ ಮುಖ ಪುಟಕ್ಕಾಗಿ ನೀವು ತೆಗೆದುಕೊಂಡ ಶ್ರಮ ನನಗೆ ಗೊತ್ತು..
    ಎಷ್ಟೆಲ್ಲ ಪ್ರಯತ್ನ ಪಟ್ಟು..
    ಅಷ್ಟೆಲ್ಲ ತೆಗೆದರೂ.. ಅಪಾರನಿಗೆ ಇಷ್ಟವಾಗಿದ್ದು ಇದೊಂದೆ..

    ಈಗ ಮುಖ ಪುಟ ಎಲ್ಲರಿಗೂ ಇಷ್ಟವಾಗಿದೆ..

    ಈ ಖುಷಿಯಲ್ಲಿ ನಿಮಗೂ ಪಾಲಿದೆ.. ಜೈ ಹೋ !!

    ReplyDelete
  42. ಪೂರ್ಣಿಮಾ..

    ದೂರದ ಲಂಡನ್ನಿನಿಂದ ಪ್ರೀತಿಯ ಶುಭ ಹಾರೈಕೆ ಖುಷಿ ಕೊಟ್ಟಿದೆ..

    ಹೇಗಿದ್ದರೂ ಬರುತ್ತಿರುವಿರಿ..
    ಕಾರ್ಯಕ್ರಮದಲ್ಲೂ ಭಾಗವಹಿಸಿ..

    ಪ್ರೀತಿಯಿಂದ

    ಪ್ರಕಾಶಣ್ಣ..

    ReplyDelete
  43. Hey Prakashanna...

    All the very best..

    ReplyDelete
  44. “ಇದೇ ಇದರ ಹೆಸರು” ಎಂಬ ಹೆಸರಿನ ನನ್ನ ಕವನ ಪ್ರಜಾವಾಣಿಯಲ್ಲಿ 27.6. 2010 ರಂದು ಪ್ರಕಟವಾಗಿತ್ತು. ನಿಮ್ಮ ಪುಸ್ತಕಕ್ಕಾಗಿ ನೀವು ಈ ಹೆಸರನ್ನು ಆಯ್ದಿರುವುದು ಓದಿ ಫುಲಕವಾಯಿತು.

    ReplyDelete
  45. Congrats prakasanna. my calender is bloked for you. nangondu seat.

    SHRIRAM BHAT.
    9916132760

    ReplyDelete
  46. ಪ್ರಕಾಸ ಸರ್,
    ಅಭಿನಂದನೆಗಳು , ಶುಭವಾಗಲಿ.

    ReplyDelete
  47. ಪ್ರಿಯ ಪ್ರಕಾಶಣ್ಣಾ...
    ಪುಸ್ತಕ ಬಿಡುಗಡೆ ಆಗ್ತಿರೋದಕ್ಕೆ ಅಭಿನಂದನೆ. ಬಿಡುಗಡೆ ಸಮಾರಂಭಕ್ಕೆ ಶುಭಾಶಯ.

    ವಂದನೆಗಳೊಂದಿಗೆ,
    ಪ್ರೀತಿಯಿಂದ,
    -ಶಾಂತಲಾ

    ReplyDelete
  48. ನಿಹಾರಿಕಾ...

    ಬರೆದು ಬಿಡಬಹುದು..
    ಆದರೆ ಅದಕ್ಕೆ ಸಮಾಧಾನ ತರುವ ಹೆಸರು ಇಡುವದು ಮಹಾ ಕಷ್ಟ..

    ದಯವಿಟ್ಟು ಕಾರ್ಯಕ್ರಮಕ್ಕೆ ಬನ್ನಿ..

    ಬ್ಲಾಗಿಗರೆಲ್ಲ ಅಲ್ಲಿ ಸೇರೋಣ..
    ಮುಖ ಪರಿಚವಿಲ್ಲದೆ ಎಷ್ಟೊಂದು ಆತ್ಮೀಯರಾಗುತ್ತೇವೆ ಈ ಬ್ಲಾಗ್ ಲೋಕದಲ್ಲಿ..

    ಹಾಡು..
    ಹಾಸ್ಯ..
    ಒಂದು ಭಾನುವಾರ ನೆನಪಿಡುವಂತೆ ಮಾಡೋಣ..

    ಈವು ಬರುತ್ತಿರುವದು ಖುಷಿಯಾಯಿತು.. ಜೈ ಜೈ ಹೋ !!

    ReplyDelete
  49. ಶಿವ ಪ್ರಕಾಶ್..

    ನಾವೆಲ್ಲ ಬೇರೆ ಬೇರೆ ರಂಗಗಳಲ್ಲಿದ್ದರೂ..
    ಒಂದು ಬಾಂಧವ್ಯ ಬೆಳೆದು ಬಿಟ್ಟಿದೆ..

    ನಿನ್ನೆ ಕುವೈತಿನಿಂದ ಮಹೇಶ್ ಮಾತನಾಡುತ್ತಿದ್ದರು..

    " ನಾವೆಲ್ಲ ಇಲ್ಲಿದ್ದರೂ ಮನಸ್ಸೆಲ್ಲ ಅಲ್ಲೇ .. ಇರುತ್ತದೆ.. ಪ್ರಕಾಶಣ್ಣ" ಅಂತಿದ್ದರು..
    ಆಜಾದು.. ಮಹೇಶ್ ದಂಪತಿಗಳು..
    ಉಳಿದ ದೇಶಗಳಲ್ಲಿರುವ ಬ್ಲಾಗಿಗ, ಓದುಗ ಸ್ನೇಹಿತರು ಬಂದಿದ್ದರೆ ಎಷ್ಟು ಮಜವಿರುತ್ತಿತ್ತು ಅಲ್ಲವೆ?

    ಮತ್ತೊಂದು ಸಣ್ಣ ಟ್ರಿಪ್ ಹಾಕಬಹುದಿತ್ತು..

    ನಿಮ್ಮೆಲ್ಲರ ಪ್ರೀತಿ.. ಸ್ನೇಹಕ್ಕೆ ವಂದನೆಗಳು..

    ReplyDelete
  50. ಪ್ರೀತಿಯ ಗುರು..


    ಬನ್ನಿ..
    ಬರುವಾಗ ನಿಮ್ಮ ತಾಯಿಯವರನ್ನೂ ಕರೆದು ಕೊಂಡು ಕುಟುಂಬದವರೊಡನೆ ಬನ್ನಿ..

    ಬರುವಾಗ ಕ್ಯಾಮರಾ ಮರೆಯ ಬೇಡಿ..

    ಅಮೇರಿಕಾದ ರಂಜಿತಾ.., ಆಸ್ಟ್ರೇಲಿಯಾದ ಮಾನಸಾ..
    ಎಲ್ಲರೂ ಕಾರ್ಯಕ್ರಮದ ಫೋಟೊ ಹಾಕಲು ಹೇಳಿದ್ದಾರೆ..

    ಕಾರ್ಯಕ್ರಮಕ್ಕೆ ಒಬ್ಬರನ್ನೂ ಬಿಡದೆ ಫೋಟೊ ತೆಗೆದು ಹಾಕೋಣ...

    ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ವಂದನೆಗಳು.. ವಂದನೆಗಳು...

    ReplyDelete
  51. ಗುರುಮೂರ್ತಿ...

    ದಯವಿಟ್ಟು ಬರಲು ಪ್ರಯತ್ನಿಸಿ...

    ಶಿವು ಮತ್ತು ಆಜಾದರ ಪುಸ್ತಕ ಬಿಡುಗಡೆಯಲ್ಲೂ ನಿಮಗೆ ಆಗಲಿಲ್ಲ..

    ಈಗ ನೀವು ಭಾರತದಲ್ಲೇ ಇರುವಿರಲ್ಲವೆ?

    ಮುಂಬೈನಿಂದ "ಅಶೋಕ್ ಶೆಟ್ಟರು" ತಮ್ಮ ಗೆಳೆಯರೊಂದಿಗೆ ಬರುತ್ತಿದ್ದಾರೆ..

    ನೀವೂ ಪ್ರಯತ್ನಿಸಿ...

    ನಿಮ್ಮೆಲ್ಲರ ಶುಭ ಹಾರೈಕೆಗಳಿಗೆ ವಂದನೆಗಳು... ವಂದನೆಗಳು..

    ReplyDelete
  52. Good Luck Prakashanna :)
    ನಾ ಕುವೈತ್ ಗೆ ಬಂದಾಯ್ತು..ಫೋಟೋಸ್ ಅಪ್ ಲೋಡ್ ಮಾಡಿ, ಇಲ್ಲಿಂದಲೇ ಎಂಜಾಯ್ ಮಾಡ್ತಿವಿ.

    ReplyDelete
  53. thumba santhosha gurugale, mukhaputa vinyasa sundharavagdhe...

    ReplyDelete