Wednesday, February 2, 2011

ಅಂದದ ಚಂದದ .. ಕೆನ್ನೆಗೆ... ಕಿವಿಯೇ....ಭೂಷಣಾ.. !



ನಾಗು ಹೇಳಿದ ಮಾತು ಇನ್ನೂ ನನ್ನ ತಲೆಯಲ್ಲಿ ಕೊರೆಯುತ್ತಿದೆ..


"ಹೆಚ್ಚಾಗಿ ಹೆಣ್ಣು ಮಕ್ಕಳಿಗೇ..
ತೂತುಗಳನ್ನು ಕೊರೆದು ಆಭರಣಗಳನ್ನು ಹಾಕುತ್ತಾರೆ... ಯಾಕೆ?"


ಯಾಕೆ?? !!


ಮೊನ್ನೆ ದಿವಾಕರ ಬಂದಿದ್ದ.. 
ಕೇಳಿದೆ..


" ಪ್ರಕಾಶು...
ನಮ್ಮ ಹಿರಿಯರು ಪ್ರತಿಯೊಂದನ್ನೂ...
ಸೂಕ್ಷ್ಮವಾಗಿ... ಅಭ್ಯಾಸ ಮಾಡಿ ಹಾಕಿರುತ್ತಾರೆ...
ಹೆಣ್ಣು ಪ್ರಕೃತಿ..
ಪ್ರತಿತಿಂಗಳೂ ಹೊಸತನ... 
ಋತುಚಕ್ರದಿಂದ ಬದಲಾವಣೆ ಹೊಂದುತ್ತಾಳೆ..
ಅಲಂಕಾರ.. ಅಂದಚಂದದ ಸಿಂಗಾರ ಅವಳಿಗೊಂದು ಭದ್ರತೆ ಕೊಡುತ್ತದೆ.."


"ಅಂದರೆ  ಹೆಣ್ಣಿಗೆ ಅಭದ್ರತೆ ಕಾಡುತ್ತದೆಯಾ? !.. ! "


"ಅಭದ್ರತೆ ಒಂದೇ ಅಲ್ಲ... 
ಆತಂಕವೂ ಕಾಡುತ್ತದೆ...!!... "
ಹಾಗಾಗಿ ಅವಳಿಗೆ ಪ್ರತಿಕ್ಷಣವೂ ಭರವಸೆ ಬೇಕು..."


"ಅದಕ್ಕೆ..?.."


"ಅದಕ್ಕಾಗಿ.. ಈ  ಎಲ್ಲ ಆಡಂಬರಗಳು.....!
ಆಭರಣಗಳು.. !
ಕಿವಿಯಲ್ಲಿ .. 
ಮೂಗಲ್ಲಿ...
ಕಾಲು ಬೆರಳಲ್ಲಿ...
ಕುತ್ತಿಗೆಯಲ್ಲಿ...ಜೋಲಾಡುವ ಅಲಂಕಾರಗಳು.. !.."


ನನಗೆ ಆಶ್ಚರ್ಯವಾಯಿತು..!


ದಿವಾಕರ ಹಾಗೆಲ್ಲ  ಸುಳ್ಳು ಹೇಳುವವನಲ್ಲ...
ಪ್ರತಿಯೊಂದನ್ನು ನಿಖರವಾಗಿ ಅಭ್ಯಾಸ ಮಾಡಿಯೇ ಹೇಳುತ್ತಾನೆ...


"ದಿವಾಕರ.. 
ಕೇಳುವವರಿದ್ದಾರೆಂದು ಸುಮ್ಮನೆಏನಾದ್ರೂ.. ಹೇಳಬೇಡ....
ಖರೆ ಹೇಳು.. ಮಾರಾಯಾ..."


"ನಾನು ಹೇಳುತ್ತಿರುವದು ನಿಜ... 
ಇದಕ್ಕೆ ಆಧಾರಗಳನ್ನು ಕೆಲವು ದಿನಗಳಲ್ಲಿ ಕೊಡುವೆ...
ಪ್ರತಿಯೊಂದು ಅಲಂಕಾರಕ್ಕೂ ನಿರ್ದಿಷ್ಟ ಕಾರಣವಿದೆ.."


ದಿವಾಕರ ಅಷ್ಟಕ್ಕೆ ಸುಮ್ಮನಿರುವವನಲ್ಲ... 
ಮತ್ತೆ ನನ್ನನ್ನು ಕೇಳಿದ...


" ಹೆಣ್ಣಿಗೆ  ಒಬ್ಬ ಅಪರಿಚಿತ ನೋಡಿದರೂ ಕಷ್ಟ...!
ಆತ ನೋಡದಿದ್ದರೂ ....ಆತಂಕ..! 
ಅಸಮಧಾನ...!.."


"ಯಾಕೆ..? "


" ಒಬ್ಬ ನೋಡಿದರೆ... 
ತನ್ನನ್ನು ಅಪಾರ್ಥ ದೃಷ್ಟಿಯಿಂದ ನೋಡಿರ ಬಹುದಾ? ಅಂತ..ಕೋಪವೂ ಬರುತ್ತದೆ..!


ಒಂದುವೇಳೆ.. ಆತ ನೋಡದಿದ್ದರೆ...
ತನ್ನ ಅಲಂಕಾರ ಚೆನ್ನಾಗಿಲ್ಲವಾ ...!
ನಾನು ಚಂದ ಇಲ್ಲವಾ?
ಅಯ್ಯೋ.. ನನಗೆ ವಯಸ್ಸಾಗಿಬಿಟ್ಟಿತಾ...?
ಎನ್ನುವ ಆತಂಕವೂ ಶುರುವಾಗಿ ಬಿಡುತ್ತದೆ...! "


ನನಗೆ ನಗು ಬಂತು...


"ನೋಡೊ..
ಈ ಹೆಣ್ಣು ಇರದಿದ್ದಲ್ಲಿ ಈ ಜಗತ್ತಿನಲ್ಲಿ ...
ಎಲ್ಲವೂ ನೀರಸವಾಗಿಬಿಡುತ್ತಿತ್ತು...


ನನಗೆ ಸೋಜಿಗ ಏನು ಗೊತ್ತಾ?


ಒಂದು ಸಣ್ಣ ಬಿಂದಿ ಅವರಿಗೆ ಮೆಚ್ಚುಗೆಯಾಗಿ ಇಟ್ಟುಕೊಂಡರೆ..
ದಿನವಿಡಿ  ಸಂಭ್ರಮ.. ಸಡಗರ.. ಸಂತೋಷ  ಪಡುತ್ತಾರೆ...!


ತನ್ನಿಷ್ಟದವರ ಮೆಚ್ಚುಗೆಯ ನೋಟ..
ಮಾತು ಬಯಸುತ್ತಾರೆ...


ಅದೇ ಬಿಂದಿ..
ಬೆಳಗಿನಿಂದ ಸ್ವಲ್ಪ ಓರೆಯಾಗಿದ್ದು ...
ಸಾಯಂಕಾಲ ಕನ್ನಡಿ ನೋಡುವಾಗ ಗೊತ್ತಾಯಿತು ಅಂದುಕೋ...
ನಡು ಚಳಿಗಾಲದಲ್ಲೂ  ಗುಡುಗು.. !
ಸಿಡಿಲು..! ಮಿಂಚು...!.."


ಮಾತು ಇನ್ನೂ ಮುಗಿದಿಲ್ಲವಾಗಿತ್ತು...


ನಮ್ಮನೆ ಅಡುಗೆ ಮನೆಯಿಂದ ಪಾತ್ರೆಗಳ ಶಬ್ಧ ಜೋರಾಗಿ ಕೇಳ ತೊಡಗಿತು...!


ನಾನು ದಿವಾಕರ ಸುಮ್ಮನಾದೆವು....!


ಅದು ಅನಿವಾರ್ಯವೂ ಆಗಿತ್ತು...!


ಎಷ್ಟು ವಿಚಿತ್ರ .. ಸೋಜಿಗ... ಈ ಹೆಣ್ಣು !!





ನೀ..
ತಿರುಗಿ ...
ನೋಡದಿದ್ದರೂ....
ಈ..
ನಿನ್ನ.... 
ಅಂದ  ಇಷ್ಟ ಕಣೆ... ! ನೀ.. ನನ್ನ ಚಂದ ಕಣೆ...!





ಅಂದದ ಚಂದದ .. ಕೆನ್ನೆಗೆ....
ಕಿವಿಯೇ ಭೂಷಣ..... !




ಪೂರ್ಣ ಚಂದಿರನ ಮೊಗಕೆ.. 
ಕುರುಳೆಂಬ   ಮುಗಿಲು ಮುಸುಕಿ...
ಕಿವಿಯೋಲೆ ಜೊತೆ ಸೇರಿ...
ಕ್ಯಾಮರಾ ಕಣ್ಣಿ ನಂಗಳದಿ .. ಬೆಳ್ಳಿ ತಿಂಗಳ ಹಬ್ಬ... 
(ಕವಿ.. ಗೌತಮ)

ಹರವಾದ ಕೆನ್ನೆಗೆ ಹವಳದಾ ಮೆರಗು...
ಹೆಣ್ಣೇ...
ನಿನ್ನ ಚಂದದ ಅಲಂಕಾರಕೆ  ಮರುಳಾಯಿತು.. ಎನ್ನ ಮನವು...

ಇಳಿ ಬಿಸಿಲು..
ಕಿವಿಯಲಿ ಕಚಗುಳಿಯಿಡಲು...
ಗೆಳೆಯಾ...
ನಿನ್ನ ನೆನಪಾಗಿ.. ಹೃದಯದಿ ...ಹರುಷದಾ ಹೊನಲು...!

ಅರಸುತಿದೆ.. 
ನನ್ನ ಕಣ್ಣುಗಳು...
ಕಿವಿಯೋಲೇಯಲಿ...
ಗೆಳತಿ..
ನಿನ್ನ...
ಮಧುರ. ...ನೆನಪುಗಳು.... 
ನೀ.. ಬಿಟ್ಟು ಹೋದ...ಅಂದಿನ ... ಸುಂದರ ಕನಸುಗಳು...!



ನನ್ನ..
ನಗುವಿನ ಜೊತೆಗೆ..
ನೆನಪಾಗದೆ ...
ಗೆಳೆಯಾ..
ನನ್ನ ಕಿವಿಯೋಲೆಯು...!



 ಗುಳಿ..
ಕೆನ್ನೆಗೂ.. 
ಕಚಗುಳಿ...
ಕಿವಿಯ ..  ಆಭರಣಗಳು...!




ಎಂಥಾ ಸೌಂದರ್ಯ ಬೀಡು.....!
ನನ್ನಾ.. 
ಕಿವಿಯ ಆಭರಣಗಳ ಕಡೆ ನೋಡು...!


ನಿನ್ನ..
ಮೆಚ್ಚುವ ಕಣ್ಣುಗಳಿಗೆ...
ಈ.. ಅಂದದ ನಿರೀಕ್ಷೆಯಿದೆ... ಹುಡುಗಿ....!



ಈ... 
ಸೌಂದರ್ಯಕೆ.....
ನಿನ್ನ.. ಅಂದ.. ಚಂದಕೆ... ಮರುಳಾದೆ...!


ಯಾರೇ.. 
ನೀನು ..ಸುಂದರ  ಚಲುವೆ...
ಯಾರಿಗೆ ಕಾದಿರುವೆ..?



ಹೆಣ್ಣೇ... ನಿನ್ನ ಸೌಂದರ್ಯ ಪ್ರಜ್ಞೆಗೊಂದು ಸಲಾಂ !



ಅಂದವೂ...
ಚಂದವೂ..
ಕಿವಿಯ ಓರೆ.. ತಿರುವಿನಲ್ಲೂ.. ಇದೆಯಾ? 
ಹೆಣ್ಣೇ ನಿನಗಿದೋ...
ನನ್ನ  ...ನವೀನ ...ನಮನಗಳು...!




ಕಿಸಿ...
ನಝಾರ್ ಕೋ.. ತೇರಾ.. 
ಇಂತಜ್ಹಾರ್  ಆಜ್  ಭೀ.....ಹೈ....!



ಹೆರಳು...
ಈ.. 
ಕಿವಿ ತರಲೆಗಳು...
ಹೊರೆಯಾಗದೆ... ಓ.. ತರಳೆ...?


ಮಾತೊಂದ ಹೇಳುವೆ... 
ಹತ್ತಿರ ಹತ್ತಿರ ಬಾ...!
ಮುತ್ತೊಂದ ತಂದಿರುವೆ...!


ಹೂವೊಂದು... 
ಬಳಿ ಬಂದು... ತಾಕಿತು ಎನ್ನೆದೆಯಾ...!
ಏನೆಂದು ಕೇಳಲು 
ಹೇಳಿತು...
ನಿನ್ನ ಕಿವಿಯ ಅಲಂಕಾರವಾ....!

ಬಾರೆ... ಬಾರೆ...
ಚಂದದ ಕಿವಿಯೋಲೆಯ  ತಾರೆ...!


ಎಂಥಾ ಸೌಂದರ್ಯ ಕಂಡೆ.... !


ಮುಗಿಲ ಮಾರಿಗೆ... ಕಿವಿಯ ಒಲೆಯು ಚಂದ ಹೆಚ್ಚಿತ್ತ...
ಹುಡುಗಿ...
ನಿನ್ನ ಕೆನ್ನೆಯ  ಕೆಂಪು ರಂಗು ಏರಿತ್ತ....!

ಸಣ್ಣ.. ಸೂಕ್ಷ್ಮ ಅಲಂಕಾರದಲ್ಲೂ ಸಂತೋಷ..
ಸಂಭ್ರಮಾ.. ಸಡಗರಾ...
ಹೆಣ್ಣೇ.. 
ನೀ.. 
ಈ ಜಗದ.. ಸೋಜಿಗ...!



ದಿವಾಕರ  ಹೇಳಿದ ಮಾತುಗಳು... ನನಗೆ ಹೌದೆನಿಸಿತು...


ತಕ್ಷಣ ನನಗೆ ನೆನಪಾದದ್ದು... ನನ್ನ  ಗೆಳೆಯ "ನಾಗೂ"


ತಕ್ಷಣ ಫೋನ್ ಮಾಡಿದೆ...
ದಿವಾಕರ ಹೇಳಿದ ವಿಷಯಗಳನ್ನೆಲ್ಲ ಹೇಳಿದೆ...


"ಪ್ರಕಾಶು...
ಈ ದಿವಾಕರ ಏನೇ ಹೇಳಲಿ... 
ನನ್ನದು ಬೇರೆ ಅಭಿಪ್ರಾಯವೇ.. ಇದೆ...
ಆದರೆ  ಈ  ತೂತುಗಳನ್ನೆಲ್ಲ... ಮಾಡಿ...
 ಆಭರಣಗಳನ್ನೆಲ್ಲ ಅಲ್ಲಲ್ಲಿ  ತೂಗಾಡಿಸಿ...
ಎಲ್ಲವನ್ನೂ ...... ಹೆಣ್ಣಿಗೆ ಯಾಕೆ ಮಾಡ್ತಾರೆ ಗೊತ್ತೇನೋ...?


"ಇನ್ನೂ ಸರಿಯಾಗಿ ಗೊತ್ತಾಗಲಿಲ್ಲ ಮಾರಾಯಾ...!


" ಪ್ರಕಾಶು..
ನಮ್ಮ ಕುಷ್ಟನಿಗೆ ಗೊತ್ತಿರುವ ವಿಚಾರನೂ ಗೊತ್ತಿಲ್ಲವಲ್ಲೋ ನಿನಗೆ...!
ಪುಣ್ಯಾತ್ಮಾ..
ನಾಳೆ ಬೆಳಿಗ್ಗೆ   ಕ್ಯಾಮರಾ ತಗೊಂಡು ನಮ್ಮನೆಗೆ ಬಾ.....
ಹೆಂಡ್ತಿ ಕರ್ಕೊಂಡು ಬರಬೇಡ... 
ನೀ...ಒಬ್ಬನೇ ಬಾ..."


ನಾನು ಒಬ್ಬನೇ ಹೋಗ ಬೇಕಾ?


ಈ ನಾಗೂ ತಲೆಯಲ್ಲಿ... ಏನಿದೆ?


ದಿವಾಕರ  ಯಾವ ಆಧಾರ... ಕಾರಣಗಳನ್ನು ಕೊಡ ಬಹುದು...?


ನನ್ನ ತಲೆ ಬಿಸಿಯಾದಂತೂ ಸತ್ಯ....






ಕಿವಿಯ ಬಗೆಗೆ ಇಲ್ಲಿ ನೋಡಿ...

೧)

ಚಂದಕ್ಕಿಂತ... ಚಂದ... ಕಿವಿಯು... ಸುಂದರಾ...!!

೨)

ಕಿವಿಯೂ.... ಚೆಲುವೆಲ್ಲಾ... ತಂದೆಂದಿತು....!!




ಕೃತಜ್ಞತೆಗಳು..
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಿವಿಯ ಫೋಟೋ ತೆಗೆಯಲು ಅನುಮತಿ ಕೊಟ್ಟ ಅಪರಿಚಿತ ಯುವತಿ,
ಕಿವಿಯ ಫೋಟೋ ತೆಗೆಯಲು  ಅನುಮತಿ ನೀಡಿದ..
ಚೇತನಾ.., ನಿವೇದಿತ ಸುಶ್ರುತ್, ನಾ.ರತ್ನಾ, ಆಶಾ, ಸರಿತಾ, ರಾಜಶ್ರಿ, 
ಪ್ರೀತಿಯ ರಾಜಿ... ಪವಿತ್ರಾ....  ..... , ಗೀತಾ ಸುಬ್ಬಣ್ಣ ..  .... , ....


ಚಿತ್ರ ಸಂತೆಯಿಂದ ಫೋಟೋ ಕದ್ದು  ತಂದ "ಅನಿಲ ಬೆಡಗೆ"..ಮತ್ತು  "ನವೀನ್ ಹಳ್ಳಿ ಹುಡುಗ ", 
ಚಂದದ ಒಂದು ಕವನ ಕೊಟ್ಟ "ಗೌತಮ್"
.......
..........        ಎಲ್ಲ ಸ್ನೇಹಿತರಿಗೆ...ಜೈ ಹೋ !!..  

81 comments:

  1. ಹ್ಹ ಹ್ಹ ಹ್ಹ......ಸೂಪರ್ ಪ್ರಕಾಶಣ್ಣ.....ಒಂದಕ್ಕಿಂತ ಒಂದು ಚೆಂದದ ಕಿವಿಯೋಲೆಗಳು...ಮುದ ನೀಡುವ ಸಾಲುಗಳು.. ಸಕತ್ ಇಷ್ಟವಾಯ್ತು.

    ReplyDelete
  2. ಪ್ರಕಾಶ ಸರ್
    " ಹೆಣ್ಣಿಗೆ ಒಬ್ಬ ಅಪರಿಚಿತ ನೋಡಿದರೂ ಕಷ್ಟ...!
    ನೋಡದಿದ್ದರೂ .... ಅಸಮಧಾನ...!.." ಈ ಸಾಲುಗಳು ಎಂಥ ಸತ್ಯವಾದ ಮಾತು!!.ನಿಮ್ಮ ಈ ಲೇಖನದ ಮೊದಲ ಪೋಟೋ ನಂಗೆ ತುಂಭಾನೆ ಹಿಡಿಸಿತು..ತುಂಭಾನೆ ಧನ್ಯವಾದಗಳು

    ReplyDelete
  3. ಓ.. ಮನಸೆ...

    ದೇವರ ಚಂದದ ಕೌತುಕ ಸೃಷ್ಟಿಯಾದ..
    ಹೆಣ್ಣಿಗೆ..
    ಈ ಅಭದ್ರತೆ...
    ಆತಂಕ ಯಾಕೆ? ?

    ಗಂಡಿಗೆ ಇದ್ದರೂ ಕಡಿಮೆ..
    ಯಾಕೆ?

    ನಿಜಕ್ಕೂ ಬಹಳ ಸೋಜಿಗದ ವಿಚಾರ...

    ದಿವಾಕರನ ಉತ್ತರಕ್ಕೆ ಬಹಳ ಕುತೂಹಲವಿದೆ...

    ಸಾಲುಗಳು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸು...

    ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು..

    ReplyDelete
  4. ಕನಸು...

    ತನ್ನ ಅಂದ ಚಂದದ ಬಗೆಗೆ ಗಂಡು ಅಷ್ಟಾಗಿ ತಲೆಕೆಡಿಸಿಕೊಳ್ಳುವದಿಲ್ಲ...

    ಹೆಣ್ಣಿಗೆ ಹಾಗಲ್ಲ...

    ಆಕರ್ಷಣೆಯೇ ಅವಳ ಜೀವ...

    ಒಬ್ಬನೋಡದಿದ್ದರೂ ಕಷ್ಟ... ನೋಡಿದರೂ ಕಷ್ಟ...

    ಬಹಳ ಸೋಜಿಗ ಈ ಹೆಣ್ಣು... ಅಲ್ಲವಾ?

    ನಿಮ್ಮ ಬ್ಲಾಗಿನ ಚಂದದ ಕವನ ಓದಲು ನಾನು ಆಗಾಗ ಬರುತ್ತಿರುತ್ತೇನೆ...

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  5. ಪ್ರಕಾಶಣ್ಣಾ...ಸೂಪರ್.

    ReplyDelete
  6. ನಿಮ್ಮದು ಕರ್ಣಮನೋಹರ ಲೇಖನ!

    ReplyDelete
  7. ಪ್ರೀತಿಯ ದಿಗ್ವಾಸ್...

    ದಿವಾಕರ ಮತ್ತು ನಾಗು ಇಬ್ಬರೂ ಪ್ರತಿಭಾನ್ವಿತರು...
    ಅದರಲ್ಲಿ ಸಂಶಯವೇ ಇಲ್ಲ..

    ಒಬ್ಬ ಉತ್ತರಧ್ರುವ... ಇನ್ನೊಬ್ಬ ದಕ್ಷಿಣ ಧ್ರುವ.. !

    ಇಬ್ಬರೂ ಕೊಡುವ ಕಾರಣಗಳೂ ಹಾಗೆಯೇ ಇರುತ್ತವೆಯೆ?

    ನಾನು ತೆಗೆದ ಛಾಯ ಚಿತ್ರಗಳ ಗುಣಮಟ್ಟ ಉತ್ತಮವಾಗಲು ನೀವೇ ಕಾರಣ...
    ನಿಮ್ಮ ಸಲಹೆ ಸೂಚನೆಗಳು...
    ತಿಳಿಸಿಕೊಟ್ಟ ತಾಂತ್ರಿಕ ಅಂಶಗಳು ತುಂಬಾ ಸಹಾಯವಾಗಿದೆ...

    ನಿಮಗೆ ತುಂಬ ತುಂಬಾ ಧನ್ಯವಾದಗಳು... ಜೈ ಹೋ !

    ReplyDelete
  8. ಸುನಾಥ ಸರ್...

    ನಿಮ್ಮ ಒಂದೇ ಒಂದು ಸಾಲಿನಲ್ಲಿ ಎಲ್ಲವೂ ಅಡಗಿದೆ !

    ನಯನ ಮನೋಹರ ಕೇಳಿದ್ದೆ..."ಕರ್ಣ ಮನೋಹರ" ವಾಹ್ !

    ತುಂಬಾ ತುಂಬಾ ಧನ್ಯವಾದಗಳು...

    ಪ್ರೋತ್ಸಾಹ ಹೀಗೆಯೇ ಇರಲಿ...

    ಸರ್..
    ನಿಮ್ಮ ಪ್ರತಿಕ್ರಿಯೆಗಳು ಇನ್ನಷ್ಟು ಬರೆಯಲು ಉತ್ಸಾಹ ಕೊಡುತ್ತದೆ...

    ReplyDelete
  9. ವಾಹ್,,ಪ್ರಕಾಶಣ್ಣಾ..ಸೂಪರ್ರೋ ಸೂಪರ್ರು..
    ಕೆಲವೊಂದು ಓಲೆಯ ನಮೂನೆಗಳು ಬಹಳ ಇಷ್ಟವಾಯ್ತು..ಮುಂದಿನ ಸಲ ಅದೇ ತರಹದ ಓಲೆಗಳನ್ನು ಮಾಡಿಸುತ್ತೇನೆ..:D :D
    ದಿವಾಕರ್ ಅವರ ಉತ್ತರವನ್ನು ಕೇಳಲು ಉತ್ಸುಕಳಾಗಿರುವೆ..ಅವರನ್ನು ನೋಡಿ ಮಾತನಾಡಿದ ಮೇಲಂತೂ ನಿಮ್ಮ ಬರಹಗಳು ಇನ್ನೂ ಆತ್ಮೀಯವಾಗಿವೆ..ಸುಂದರವಾದ ಫೋಟೋಗಳು..

    ReplyDelete
  10. ಲೋ ಪ್ರಕಾಶ ನನಗೆ ಸುಮ್ನೆ ಕಂಡಾಪಟ್ಟೆ ಹೀಂಗ್ ಹೊಟ್ಟೆ ಉರಿಸ್ಬೇಡಾ..ಅಲ್ಲಾ ಅಷ್ಟೊಂದು ಚಂದುಳ್ಳಿಯರ ಕಿವೀನ ಫೋಕಸ್ ಮಾಡಿ ನನ್ನ ತಲೆತೂತು ಕೊರೆದೆ..ಆದ್ರೆ ಶಿವು ತಲೆಗೆ ಹುಳ ಬಿಟ್ತೆ...ಅಲ್ಲಾ ಮಾರಾಯಾ..??......... ಛೇ...ಹೋಗ್ಲಿ ಬಿಡು...
    ಅಂತೂ..
    ಕಿವಿಯಿದ್ದರೇನು ಸಿವಾ
    ತೂತಾದರೇನು ಸಿವಾ
    ಬೆಂಡೋಲೆ ಕಾಣದಿದ್ದರೆ
    ಎಲ್ಲಾ ಬರಿ ತೂತೆ ಸಿವಾ
    ಕಿವಿಯೆಲ್ಲಾ ಬರಿ ತೂತೆ ಸಿವಾ....
    ನನಗೆ ಹಿಂದೆ ಒಬ್ಬ ಕ್ರಿಕೆಟ್ ಟಿ.ವಿ.ಕಾಮೆಂಟೇಟರ್ ಹುಡ್ಗ್ರೀರ ಓಲೆಕಡೆ ನಮ್ಮ ನಜರ್ ಓಲೋ ಹಾಗೆ ಮಾಡ್ತಾ ಕಾಮೆಂಟ್ ಮಾಡ್ತಿದ್ದದ್ದು ನೆನಪಾಯ್ತು...ನೋಡು...

    ReplyDelete
  11. ಪೂರ್ಣ ಚಂದಿರನ ಮೊಗಕೆ..
    ಕುರುಳೆಂಬ ಮುಗಿಲು ಮುಸುಕಿ...
    ಕಿವಿಯೋಲೆ ಜೊತೆ ಸೇರಿ...
    ಕ್ಯಾಮರಾ ಕಣ್ಣಿ ನಂಗಳದಿ .. ಬೆಳ್ಳಿ ತಿಂಗಳ ಹಬ್ಬ...
    (ಕವಿ.. ಗೌತಮ) ವಾವ್ ಎಂತಹ ಕಲ್ಪನೆ ಸ್ವಾಮೀ, ಕಿವಿಯ ಬಗ್ಗೆ ತಿಸೀಸ್ ಬರೆಯೋಕೆ ಹೊರಟಿದ್ದೀರಿ.ನಿಮ್ಮ ಈ ಸುಂದರ ಲೇಖನಕ್ಕೆ ಎಷ್ಟೊಂದು ಕಿವಿಗಳು ಬಲಿಯಾದವೋ ಪಾಪ!!ಮೊದಲು ನಿಮಗೆ ಈ ಲೇಖನ ಬರೆಯಲು ಸ್ಫೂರ್ತಿ ನೀಡಿದ ಕಿವಿಗಳಿಗೆ, ಜೈ ಹೋ ಅನ್ನೋಣ. " ಕೇಳುವ ಕಿವಿ ಇಲ್ಲದಿದ್ದರೆ ಕವಿಯ ಹಾಡಿಗೆ ಏನು ಬೆಲೆ ಆಲ್ವಾ. ಇದನ್ನು ಓದಿದ ಹೆಣ್ಣುಮಕ್ಕಳು ಖಂಡಿತ ಕನ್ನಡಿಯ ಮುಂದೆ ನಿಂತು ತಮ್ಮ ಕಿವಿಯನ್ನು ನೋಡಿ ವಿಮರ್ಷಿಸಿಕೊಳ್ಳುತ್ತಾರೆ. ಸ್ವಾಮೀ ಮುಂದಿನ ಪಯಣ ಮೀನಿನಂತ ಕಣ್ಣುಗಳು,ಕೆಂಡಸಂಪಿಗೆಯಂತ ಮೂಗಿನ ಕಡೆಗೋ !!!! ಹೌದು ಯಾಕಾಗಬಾರದು < ಅದೂ ಬಂದುಬಿಡಲಿ !!!

    ReplyDelete
  12. ಆಕಾಶ ಬುಟ್ಟಿ..

    ಪ್ರತಿಕ್ರಿಯೆಗಳು ಉತ್ಸಾಹ ತುಂಬುತ್ತವೆ..

    ಕಿವಿಯ ಅಲಂಕಾರಗಳು ಬೆರೆ ಅರ್ಥವನ್ನೂ ಹೊಂದಿವೆ..
    ಇದು ನಾಗು ಹೇಳಿದ್ದ...
    ಆತಂಕ, ಮತ್ತುಭಯವನ್ನು ನಿವಾರಿಸಿ..
    ಭರವಸೆಯನ್ನು ತುಂಬುತ್ತವೆ ಅನ್ನುವದು ನನಗಂತೂ ಹೊಸ ವಿಚಾರ..

    ದಿವಾಕರನ ಹುಡುಕಾಟದ ತಲೆಯಲ್ಲಿ ಇನ್ನೂ ಏನೇನಿದೆಯೋ.. !

    ತರಲೆ ನಾಗು ಏನು ತೋರಿಸುತ್ತಾನೊ ನೋಡೋಣ ಮುಂದಿನ ಭಾಗದಲ್ಲಿ...!

    ಇಷ್ಟಪಟ್ಟು ಚಂದದ ಪ್ರತಿಕ್ರಿಯೆ ಕೊಟ್ಟು..
    ಪ್ರೋತ್ಸಾಹಕ್ಕೆ ತುಂಬ ತುಂಬಾ ಧನ್ಯವಾದಗಳು...

    ReplyDelete
  13. ಪ್ರಕಾಶಣ್ಣ;ನಯನ ಮನೋಹರ ಕರ್ಣಾಲಂಕಾರದ ಸೊಬಗನ್ನುಅನಾವರಣಗೊಳಿಸಿದ ಸುಂದರ ಚಿತ್ರಗಳಿರುವ ಸೊಗಸಾದ ಲೇಖನ.ನಿಮ್ಮ ಕ್ಯಾಮರಾ ಕಣ್ಣಿಗೆ ದೊಡ್ಡ ಸಲಾಂ.

    ReplyDelete
  14. ಆಜಾದೂ...

    ಅಲ್ಲಿ ಕುವೈತಿನ ಮರಳುಗಾಡಿನಲ್ಲಿ ಏನಿದೆ..? ಬಾ ಭಾತಕ್ಕೆ..
    ಇಲ್ಲಿ ಎಲ್ಲವೂ ಇದೆ ಮಾರಾಯಾ. !

    ನಿಜ ಹೇಳಬೇಕೆಂದರೆ ಕಿವಿಯ ಚಂದ ತೋರಿಸಿದ ನನ್ನ ಶ್ರೀಮತಿಗೆ ಮೊದಲ ಕೃತಜ್ಞತೆ..

    ಈಗ ನನ್ನ ಬಳಿ..
    ಸುಂದರ ಮನೋಹರ ಹಣೆಯ ಫೋಟೊಗಳು,
    ಚಂದದ ಮೂಗುಗಳು.. ಕೈಗಳು.. ಬಳೆಗಳು.. ನೇಲ್ ಪಾಲೀಷ್ ಮಾಡಿದ ಸುಂದರ ಫೋಟೊಗಳು..
    ಕಾಲಿನ , ಪಾದದ ಅಲಂಕಾರಗಳು.. ಗೆಜ್ಜೆಗಳು..

    ಇವುಗಳ ಸುಮಾರು ಇನ್ನೂರು ಫೋಟೊಗಳಿವೆ..

    ಆಜಾದು...

    ಹೆಣ್ಣು ಈ ಜಗತ್ತಿನಲ್ಲಿರದಿದ್ದರೆ ಸಿಕ್ಕಾಪಟ್ಟೆ ಬೋರ್ ಬರ್ತಿತ್ತು ಕಣೊ...

    ಅವಳೊಂದು ಸೋಜಿಗ !!

    ಚಂದದ ಪ್ರತಿಕ್ರಿಯೆ ಕೊಟ್ಟು ಇನ್ನಷ್ಟು ಉತ್ಸಾಹ ತುಂಬಿದ್ದಕ್ಕೆ ಜೈ ಹೋ !!

    ಜೈ ಹೋ.. !!

    ReplyDelete
  15. ಬಾಲೂ ಸರ್...

    ಕೂದಲಿನ ಮರೆಯಲ್ಲಿ...
    ಅಂಕುಡೊಂಕು ..
    ಬೇಡದ ತಿರುವುಗಳು..
    ಸ್ವಚ್ಛಗೊಳಿಸುವದೂ ಕಷ್ಟ...


    ಆದರೂ ಅಲ್ಲಿ.. ನೋವು ಮಾಡಿಸಿಕೊಂಡು..
    ತೂತಲ್ಲಿ ಬಣ್ಣ ಬಣ್ಣದ ನಮೂನೆಯ ಜೋಲಾಡುವ ಆಭರಣಗಳನ್ನು ಹಾಕಿಕೊಂಡು
    ಅಲಂಕಾರ ಮಾಡಿಕೊಳ್ಳುವ ಹೆಣ್ಣಿಗೆ ಮೊದಲ ನಮನ ಸಲ್ಲಬೇಕು..

    ಅಷ್ಟೊಂದು ಶ್ರದ್ಧೆಯಿಂದ..
    ತನ್ಮತೆಯಿಂದ ಅಲಂಕಾರಗೊಂಡ ಕಿವಿಯನ್ನು ನೋಡದಿದ್ದರೆ ನಮ್ಮ ಕಣ್ಣುಗಳೂ ವ್ಯರ್ಥ ಅಲ್ಲವಾ?

    ಬಾಲೂ ಸರ್..
    ಚಂದದ ಸ್ಪೂರ್ತಿಯ ನುಡಿಗಳಿಗೆ ಜೈ ಹೋ.. !

    ಪ್ರೋತ್ಸಾಹ ಯಾವಾಗಲೂ ಇರಲಿ...

    ReplyDelete
  16. ಪ್ರಕಾಶಣ್ಣ ಸೂಪರ್
    ಇಷ್ಟೆಲ್ಲಾ ಫೋಟೊ ತೆಗದಿದ್ದನ್ನ ನೋಡಿಯೂ ಅತ್ತಿಗೆ ಸುಮ್ನೆ ಬಿಟ್ಟಿದ್ದಾರ ? ಅತ್ತಿಗೆ ಗ್ರೇಟ್

    ReplyDelete
  17. ವಾಹ್!....
    ಸುಂದರ ಚಿತ್ರಗಳು ಮತ್ತು ಲೇಖನ.... ವರ್ಣನೆಗೆ ಶಬ್ದಗಳು ಸೋಲುತ್ತವೆ!

    ReplyDelete
  18. ಹೆಣ್ಣು ನಿಜಕ್ಕೂ ಪ್ರಕೃತಿಯ ಸುಂದರ ಸೃಷ್ಟಿ. ಆಕೆಯ ಹೆಜ್ಜೆ-ಹೆಜ್ಜೆಯಲ್ಲೂ ರಸಿಕರಿಗೆ ಸೌಂದರ್ಯದ ನರ್ತನ ಕಂಡುಬರುವುದು ಸಹಜ. ಹೆಣ್ಣಿವ ಕಿವಿಯನ್ನು ಕವಿಗಳಿಗೆ ಅದೆಷ್ಟು ಹೊಗಳಿದರೂ ಸಾಲದು. ಹಿಂದೆ ಇದ್ದ ಜುಮುಕಿ, ಲೋಲಕದ ಜಾಗದಲ್ಲಿ ಇಂದು ಫ್ಯಾಶನ್ ಆಭರಣದ ಅಲಂಕಾರವಿದ್ದರೂ ಕಿವಿ ಬೇಗನೆ ಆಕಷರ್ಿಸಲ್ಪಡುತ್ತದೆ...
    ಪ್ರಕಾಶ್ ಸರ್... ನಿಜಕ್ಕೂ ನೀವು ಬರೆದಿರುವ ಸಾಲುಗಳು, ಕಲ್ಪನೆ ಹಾಗೂ ಚಿತ್ರಗಳನ್ನು ನೋಡಿ ತುಂಬಾ ಖುಷಿಯಾಯಿತು.
    ಕಿವಿಯ ಓಲೆಯ ಗತ್ತು
    ಹೆಣ್ಣಿಗದೇ ಸಿರಿಸಂಪತ್ತು
    ನಲ್ಲನ ತಬ್ಬಲು ಆಕೆಯ ಕತ್ತು
    ಸಿಗುವುದು ಕಿವಿಗೆ ಪ್ರೀತಿಯ ಮುತ್ತು....

    ReplyDelete
  19. ಪ್ರಕಾಶಣ್ಣ,
    Next ಟೈಮ್ ಬರೋವಾಗ ನನ್ನತ್ರ ಇರೋ ಕಿವಿಯೋಲೆ ಎಲ್ಲ ತೊಗೊಂಡು ಬರಬೇಕು ಅಂತ ಸಧ್ಯದ ಪ್ಲಾನ್!!! :D
    - Vanitha.

    ReplyDelete
  20. ಫೋಟೋಗಳು ಮತ್ತು ಅದರ ವರ್ಣನೆ ತುಂಬಾ ಬೊಂಬಾಟಾಗಿದೆ

    ReplyDelete
  21. ತುಂಬಾ ಸೊಗಸಾಗಿ ವರ್ಣಿಸಿದ್ದಿರ ಪ್ರಕಾಶ್,

    ReplyDelete
  22. Mast............ prakashanna...
    matte yavaga hogta idde naagannana manige...? innu karnamanohara charite mundevarsu.... nangaku vividha namuneya karnabharanda darshana agtu...(hange tagamba ideanu bartu...ha ha ha)photos.. jotege adara varnaneya lines superrrrrrr...

    ReplyDelete
  23. ಪುಸ್ತಕ ಬಿಡುಗಡೆ ದಿನ ಹುಡ್ಗೀರ್ ಹಿಂದೆ ಯಾಕೆ ಸುತ್ತಾಡ್ತಾ ಇದ್ರಿ ಅಂತ ಈಗ ಗೊತ್ತಾಯ್ತು.. ಹೆಣ್ಣಿನ ಮನದ ಸೂಕ್ಷ್ಮ " ಹೆಣ್ಣಿಗೆ ಒಬ್ಬ ಅಪರಿಚಿತ ನೋಡಿದರೂ ಕಷ್ಟ...!
    ನೋಡದಿದ್ದರೂ .... ಅಸಮಧಾನ...!.." ಎಂಬ ವಾಕ್ಯದಲ್ಲಿ ಚೆನ್ನಾಗಿ ಬಿಂಬಿಸಿದ್ದೀರ.. ಒಳ್ಳೆಯ ಚಿತ್ರ ಸಂಗ್ರಹ

    ReplyDelete
  24. ಕಿವಿ ಚಂದ ಇದ್ದಿದ್ದಕ್ಕೆ ಓಲೆ ಚಂದ ಕಾಣ್ತಾ ಇದ್ದ ಅಲ್ಲಾ ಓಲೆ ಚಂದ ಇದ್ದಿದ್ದಕ್ಕೆ ಕಿವಿ ಚಂದ ಕಾಣ್ತಾ ಇದ್ದ ಗೊತ್ತಜಿಲ್ಲೆ !! ಒಳ್ಳೆ ಕವನ ..ಒಳ್ಳೆ ಫೋಟೋಸ್ :)

    ReplyDelete
  25. ಪ್ರಕಾಶಣ್ಣ,

    ಹೆಣ್ಣು ಎಷ್ಟು ಅದೃಷ್ಟವಂತಳು ಆಲ್ವಾ

    ಅವಳಿಗೆ ಎಷ್ಟೊಂದು ಅಲಂಕಾರ ಮಾಡಿಕೊಳ್ಳಬಹುದು

    ಪ್ರತಿದಿನ ಪ್ರತಿ ಕ್ಷಣ ಪ್ರತಿ ಅಲಂಕಾರದಲ್ಲೂ ಅವಳು ಬೇರೆಯ ರೂಪ ಪಡೆಯುತ್ತಾಳೆ

    ಅವಳ ಸೌಂದರ್ಯಕ್ಕೆ ನಾಚಿ ಅಲಂಕಾರಿಕ ವಸ್ತುಗಳೇ ನೀರಾಗಿ ಹೋಗುತ್ತವೆ,

    ಅವಳಿಗಾಗಿಯೇ ಪ್ರಪಂಚದ ಮಾರ್ಕೆಟ್ಟುಗಳು

    ಅವಳಿಲ್ಲದಿರೆ ಸೌಂದರ್ಯ ಪ್ರಜ್ಞೆ ಇರುತ್ತಲೇ ಇರಲಿಲ್ಲವೇನೋ

    ಸುಂದರ ಫೋಟೋಗಳು

    ಸುಂದರ ವಿವರಣೆ

    ಜೈ ಹೋ

    ReplyDelete
  26. ಕೃಷ್ಣಮೂರ್ತಿಯವರೆ...

    ಕಿವಿಯ ಬಗೆಗೆ ಇಷ್ಟೆಲ್ಲ ಮಾಹಿತಿ ಇದೆ ಅಂತ ಗೊತ್ತಿರಲಿಲ್ಲ..
    ಇನ್ನು ಫೋಟೊಗಳನ್ನು ತೆಗೆಯುವದು ಒಂದು ಸವಾಲು...

    "ನಿಮ್ಮ ಕಿವಿಯೋಲೆ ಚೆನ್ನಾಗಿದೆ..
    ಒಂದು ಫೋಟೊ ತೆಗೆದುಕೊಳ್ಳಲಾ?" ಅಂತ ಕೇಳುವದು ಹೇಗೆ?
    ಕೇಳಿದರೆ ವಾರಸುದಾರರು ಸುಮ್ಮನಿದ್ದಾರೆಯೆ?

    ಪರಿಚಯದವರಲ್ಲಿ ಕೇಳಿದೆ..ಫೋಟೊ ತೆಗೆದುಕೊಂಡೆ...
    (ಒಂದಿಬ್ಬರ ಅಪರಿಚಿತರ ಫೋಟೊ ಇವೆ)

    ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..

    ReplyDelete
  27. ಸಂತೋಷ್...

    ಮೊದಲು ನನ್ನಾಕೆಯ ಫೋಟೊ ತೆಗೆದೆ...
    ಆಮೇಲೆ ಉಳಿದ ಕಿವಿಗಳ ಫೋಟೊ..ತೆಗೆದೆ..

    ಮದುವೆಯಾಗಿ ಹದಿನೈದು ವರ್ಷಗಳಾದವು...
    ಹಾಗಾಗಿ ಫೋಟೊ ತೆಗೆಯಲು ತೊಂದರೆ ಆಗಲಿಲ್ಲ...

    ಭರವಸೆ ಇದೆ.. ಕಣ್ರೀ.. ! ಹ್ಹಾ...ಹ್ಹಾ !

    ಇನ್ನೊಂದು ವಿಷಯ...
    ನನಗೆ ಕಿವಿನೋಡುವ ರುಚಿ ಹುಟ್ಟಿಸಿದ್ದೇ.. ನನ್ನ ಮಡದಿ...


    ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  28. ನಾರಾಯಣ ಭಟ್ಟರೆ...

    ನಿಜಕ್ಕೂ ಹೆಣ್ಣಿನ ಅಲಂಕಾರ ಪ್ರೀಯತೆಗೆ...
    ಆ ಶ್ರದ್ಧೆಗೆ...
    ನಮಸ್ಕಾರ ಮಾಡಲೇ ಬೇಕು...

    ಸೀರೆ..
    ಅದರ ಅಂಚು.. ಬಾರ್ಡರು...
    ಸೆರಗು... ಅದರ ಡಿಸೈನ್ !
    ಅದಕ್ಕೊಪ್ಪುವ ಬ್ಲೌಸ್ ! ಅದರ ಸ್ಟಿಚ್ಚಿಂಗ್ !

    ನಂತರ ಆಭರಣಗಳು...
    ಹಿಂದುಗಡೆ ಕೂದಲಿಗೆ ಹಾಕುವ ಕ್ಲಿಪ್..
    ಅದೂ ಕೂಡ ಮ್ಯಾಚಿಂಗ್ ಆಗಬೇಕು...
    ಬಳೆಗಳು... ಅದೂ ಕೂಡ ಸೀರೆಗೆ ಮ್ಯಾಚಿಂಗ್ ಆಗಬೇಕು...

    ಇನ್ನು... ಚಪ್ಪಲಿ...!!

    ಸರ್... ಇನ್ನೂ ಇದೆ... !

    ಏನೇ ಹೇಳಿ...
    ಇಷ್ಟೆಲ್ಲ ಮಾಡಿಕೊಂಡ ಮೇಲೆ ಒಂದು ಮೆಚ್ಚಿನ ನೋಟ ಸಿಗದಿದ್ದರೆ ಹೇಗೆ?

    ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !!

    ReplyDelete
  29. Wndrful clctn PrakashaNNa
    U always Rock :)

    ReplyDelete
  30. kiviyole hagu nimma barahada salugalu chennagive.

    ReplyDelete
  31. bhala chanda ide esthu kivigalannu ellinda serisidiri ..realy nice..

    ReplyDelete
  32. ಪ್ರಕಾಶ್ ಸರ್,

    ಕಿವಿಯೋಲೆಯ ಮೂರನೇ ಭಾಗ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ದಿವಾಕರ್ ಹೆಗಡೆಯವರ ತರ್ಕಬದ್ಧ ಮಾತುಗಳು ಅಲೋಚಿಸುವಂತೆ ಮಾಡುತ್ತವೆ..
    ಕಳೆದ ಒಂದು ವರ್ಷದಿಂದ ಚಿನ್ನದ ರಿಂಗ್ ಬೇಕೆಂದು ಅರ್ಜಿ ಗುಜರಾಯಿಸಿದ್ದಾಳೆ ಹೇಮಾಶ್ರೀ. ಇದನ್ನೆಲ್ಲಾ ನೋಡಿಬಿಟ್ಟರೇ ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಂತೆ ಸರಿ..
    ಸದ್ಯ ಇದನ್ನು ನಾನು ಮಾತ್ರ ನೋಡಿದ್ದೇನೆ. ಅವಳಿಗೆ ಮಾತ್ರ ತೋರಿಸಲಾರೆ.

    ReplyDelete
  33. Prakashanna....

    abba! yenenu research maadutteero... thumba chennagidhe...

    nanna kaadambarigoo hudugiyara alankaara vishayadalli swalpa research maadabekaagi bandaaga ishtella alankaara maadtaara hudugiyaru antha anisibittittu :)

    ReplyDelete
  34. ಪ್ರಕಾಶಣ್ಣ , ನಾನು, ನೀ ಬರೆದಿದ್ದು ಓದದ್ಕಿಂತ ಎಲ್ಲರ ಕಿವಿ ಓಲೆ ನೆ ನೋಡದಿ...ಎಲ್ಲ ಸೂಪರ್... ನಾನು ಮಾಡಿಸ್ಕತ್ತಿ ಕೆಲವೊಂದು ಇಷ್ಟ ಆದ ಡಿಸೈನ್ ....

    ReplyDelete
  35. ಶಶಿಯವರೆ...

    ನಿಮ್ಮ ಪ್ರತಿಕ್ರಿಯೆ ಟಾನಿಕ್ ಥರಹ ಇದೆ .. ಓದಿ ತುಂಬ ಖುಷಿಯಾಯಿತು...

    ಕೆಲವು ದಿನಗಳ ಹಿಂದೆ ಒಂದು ಎಸ್ಸೆಮ್ಮೆಸ್ ಬಂದಿತ್ತು..

    " ಮಾನ್ಯರೆ ಗ್ಲೋಬಲ್ ವಾರ್ಮಿಂಗಿನಿಂದಾಗಿ ಜಗತ್ತು ತಲ್ಲಣವಾಗುತ್ತಿದೆ..
    ನಾವು ಪೆಟ್ರೋಲ್.. ಇಂಧನ.. ನೀರನ್ನು..ಕಡಿಮೆ ಬಳಸಬೇಕು..
    ವಾಯು ಮಾಲಿನ್ಯ..ವಾತಾವರಣ ಮಾಲಿನ್ಯವನ್ನು ತಡೆಯ ಬೇಕು..

    ನಮ್ಮ ಈ ಜಗತ್ತನ್ನು ನಾವೇ ಉಳಿಸಿಕೊಳ್ಳ ಬೇಕು..

    ಯಾಕೆಂದರೆ...

    ದೇವರ ಸುಂದರ ಸೃಷ್ಟಿಯಾದ "ಹೆಣ್ಣು" ಇಲ್ಲಿದೆ.. !"

    ನಿಜ ಅಲ್ಲವಾ?

    ಚಂದದ .. ಸ್ಪೂರ್ತಿಕೊಡುವಂಥಹ ಪ್ರತಿಕ್ರಿಯೆಗಾಗಿ ಧನ್ಯವಾದಗಳು... ಜೈ ಓ !

    ReplyDelete
  36. ವನಿತಾ...

    ಖಂಡಿತ ತಗೊಂಡು ಬನ್ನಿ...
    ಬಹುಷಃ ವಿನೋದ್ ಥರಹ ಫೋಟೊ ಚೆನ್ನಾಗಿ ತೆಗೆಯಲು ಬರಲಿಕ್ಕಿಲ್ಲ...
    ನನ್ನ ಮುಂದಿನ "ಕಿವಿಗಳ" ಫೋಟೊ ಲೇಖನಕ್ಕೆ ಬಳಸಿಕೊಳ್ಳುವೆ...

    ನನಗೆ ಒಂದು ಫೋಟೊ ಅವಶ್ಯವಾಗಿ ಬೇಕಾಗಿದೆ..

    "ಮಾರ್ವಾಡಿಗಳು ಮೂಗಿಗೆ ದೊಡ್ಡ ರಿಂಗು ಹಾಕಿ ಅದರಿಂದ ಚಂದದ ಚೈನಿನಿಂದ ಕಿವಿಗೆ ಜೋಡಿಸಿರುತ್ತಾರೆ.."

    "ಜೋಧಾ ಅಕ್ಬರ್" ಸಿನೇಮಾದಲ್ಲಿ ಐಷ್ವರ್ಯಾ ರೈ ಹಾಕ್ಕೊಂಡಿರ್ತಾಳೆ.. ಅಂಥಾದು..
    ನಿಮ್ಮ ಪುಟ್ಟಿ ಫೋಟೊ ಇದ್ದರೆ ದಯವಿಟ್ಟು ಕಳುಹಿಸಿಕೊಡಿ...

    ನಿಮ್ಮ ವಿಶ್ವಾಸಕ್ಕೆ ಪ್ರೀತಿಯ ವಂದನೆಗಳು..

    ಪ್ರೀತಿಯಿಂದ
    ಪ್ರಕಾಶಣ್ಣ..

    ReplyDelete
  37. This comment has been removed by the author.

    ReplyDelete
  38. ಪ್ರಕಾಶಣ್ಣ
    ಇಷ್ಟೊಂದೆಲ್ಲ ಇದ್ದೀಯ,,,, ಹೆಣ್ಣಿನ ಅಲಂಕಾರದ ಹಿಂದೆ... :-) ಫೋಟೋಗಳಂತು ಸೂಪರ್......

    ReplyDelete
  39. ಪ್ರಕಾಶಣ್ಣ, "ಕಿವಿ" ಮತ್ತೆ "ಕವಿ"ಯ ಸಂಗ್ರಹ ಮಸ್ತಿದ್ದು.

    ReplyDelete
  40. ಪ್ರಕಾಶಣ್ಣ, ತು೦ಬಾತು೦ಬಾತು೦ಬಾ ಚೊಲೊ ಇದ್ದು. ಇದರ ಸ೦ತಿಗೆ ಬುಗುಡಿದು ಪೋಟಾ ಹಾಕಿದಿದ್ರೆ ಇನ್ನೂ ಮಸ್ತಾಗಿರತಿತ್ತು.-ಗ೦ಗಣ್ಣ.

    ReplyDelete
  41. ಸುಂದರ ಮೊಗದಲಿ
    ತನುವಲ್ಲಿ ತುಂಬಿದ
    ಗುಳಿ ಕೆನ್ನೆಯ
    ಅಂದದ ಕಿವಿಯಲಿ
    ವಿಧ-ವಿಧ ರೂಪದಿ
    ಚೆಂದದಿ ನಲಿಯುತ
    ನೇತಾಡುವ ಓಲೆಯು
    ಮುದ ನೀಡುವ
    ಕಿರುಗವನಗಳೊಂದಿಗೆ
    ನೊಡುವ ಕಣ್ಣಿಗೆ
    ತಂಪನ್ನು ತುಂಬಿತು...

    ಸೂಪರ್ ಪ್ರಕಾಶಣ್ಣ.... :)

    ReplyDelete
  42. ಮನಸು...

    ಒಂದು ಸಣ್ಣ ವಿಷಯಕ್ಕೂ ಹೆಣ್ಣು ಪಡುವ ಸಂಭ್ರಮ ಗಂಡಿಗೆ ಅಸಾಧ್ಯ... !

    ಅವಳಿಗೆ ಇಷ್ಟವಾದ ಗಾಜಿನ ಬಳೆ ಧರಿಸಿಕೊಂಡು..
    ದಿನವಿಡೀ ಸಡಗರ ಪಟ್ಟುಕೊಳ್ಳುತ್ತಾಳೆ..
    ತವರು ಮನೆ ಉಡುಗೋರೆಯನ್ನು ನೋಡಿ ತನ್ನ ಜನ್ಮವಿಡೀ ಖುಷಿ ಪಡುತ್ತಾಳೆ..

    ನನ್ನ ಅಮ್ಮನಿಗೆ ಎಪ್ಪತ್ತು ವರ್ಷ..
    ಈಗಲೂ "ಇದು ತನ್ನ ತವರು ಮನೆಯಲ್ಲಿ ಕೊಟ್ಟಿದ್ದು" ಅಂತ ಸಂತಸ ಪಡುತ್ತಾಳೆ..

    ಇದೆಲ್ಲ ಗಂಡಿಗೆ ಯಾಕೆ ಇಲ್ಲಾ?(ನಮಗೆ)

    ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ReplyDelete
  43. ಕೋಲೆ ಬಸವರೆ...

    ಹೆಣ್ಣಿನಷ್ಟು ಪ್ರೀತಿಸಲು ಗಂಡಿಗೆ ಅಸಾಧ್ಯ...

    ತಾಯಿ ಕೋಳಿಯ ಜೊತೆಯಲ್ಲಿ ಹೋಗುವ ಒಂದು ಪುಟ್ಟ ಮರಿಯನ್ನು ಹಿಡಿಯಲು ಪ್ರಯತ್ನಿಸಿ ನೋಡಿ..
    ನಿಮ್ಮನ್ನು ಹಿಡಿದು ಗಾಯಗೊಳಿಸಿಬಿಡುತ್ತದೆ...

    ತಾಯಿ ಗುಬ್ಬಚ್ಚಿ ತನ್ನ ಮರಿಗಳಿಗೆ ತಿಂಡಿಯ ಗುಟುಕು ತಂದು ಹಾಕುತ್ತಾಳೆ..

    ತಾಯಿ ಹಕ್ಕಿ ತನ್ನ ಮರಿಗಳಿಗೆ ಹಾರುವದನ್ನು ಕಲಿಸುತ್ತಾಳೆ..

    ಹೆಣ್ಣು ಸಿಂಹ ತನ್ನ ಮಕ್ಕಳಿಗೆ ಪ್ರಾಣಿಗಳ ಬೇಟೆಯಾಡಿ ಆಹಾರ ತರುತ್ತದೆ..

    ಸ್ವಾಮಿ ಗಂಡು ಜಾತಿ ಏನು ಮಾಡುತ್ತದೆ?

    ಹೆಣ್ಣು ಪ್ರೀತಿಸುವಷ್ಟು ಗಂಡು ಮಾಡಲಾರ..

    ಸರ್ ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ತುಂಬ ತುಂಬ ಧನ್ಯವಾದಗಳು..

    ReplyDelete
  44. ಮನಮುಕ್ತಾ...

    ಬದುಕಿನಲ್ಲಿ ಹೆಣ್ಣಿಗಿರುವಷ್ಟು ಆಸ್ಥೆ ಗಂಡಿಗೆ ಖಂಡಿತ ಇಲ್ಲ...
    ಅವಳಷ್ಟು ಖುಷಿ..
    ಸಂಭ್ರಮ ಯಾವತ್ತೂ ಪಡಲಾರ..

    ಹೆಣ್ಣನ್ನು ಕಂಡರೆ ಗಂಡು ಜೀವಕ್ಕೆ "ಅಸೂಯೆ".. ಕಾಡಬಹುದಾ?

    ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ReplyDelete
  45. ಶಶಿಯವರೆ..

    ಹೆಣ್ಣು ಈ ಜಗತ್ತಿನ ಸೋಜಿಗ ಖಂಡಿತ ಹೌದು...!

    ತಾಳ್ಮೆ.. ಸಂಯಮ...

    ಬದುಕನ್ನು ಅವಳು ಕಟ್ಟುವ ರೀತಿ ..
    ಬದುಕಿನಲ್ಲಿ ಅವಳಿಗಿರುವ ಆತ್ಮ ವಿಶ್ವಾಸ... ನಿಜಕ್ಕೂ ಆಶ್ಚರ್ಯ.. !

    ಚಿತ್ರ ಲೇಖನ ಖುಷಿ ಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು..

    ReplyDelete
  46. ಸರಿತಾ...

    ಬ್ಲಾಗ್ ಲೋಕಕ್ಕೆ ಸ್ವಾಗತ...

    ಚಂದವಿದ್ದರೆ ಸಾಲದು...
    ಸೌಂದರ್ಯ ಪ್ರಜ್ಞೆ ಇರಬೇಕು...
    ಹೆಚ್ಚಿನ ಹೆಣ್ಣು ಮಕ್ಕಳಿಗೆ ತಾವು ಹೇಗಿದ್ದರೆ ಚಂದ ಕಾಣಿಸುತ್ತೇವೆ ಅನ್ನುವ ಕಲ್ಪನೆ ಸಹಜವಾಗಿ ಇದ್ದಿರುತ್ತದೆ...

    ಸೌಂದರ್ಯ ಪ್ರಜ್ಞೆ ಹೆಣ್ಣಿಗೆ ಪ್ರಕೃತಿ ದತ್ತವಾಗಿ ಬಂದಿರುತ್ತದೆ..

    ಹಾಗೆ ನೋಡಿದರೆ ಗಂಡು ಜೀವ ನೀರಸ...

    ಸಧ್ಯದಲ್ಲೇ ನಾಗುವಿನ "ಉವಾಚ" ಹಾಕುವೆ...
    ಫೋಟೊಗಳ ಸಹಿತ..!

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  47. ಒರೀತಿಯ ಪಾಲ...

    ಮಲ್ಲಿಕಾರ್ಜುನ್ ಪುಸ್ತಕ ಬಿಡುಗಡೆಯ ದಿನ ನೀವೂ ಸಹ ನನ್ನ ಕ್ಯಾಮರಾದಲ್ಲಿ "ಕಿವಿಯೋಲೆಯ" ಫೋಟೊ ತೆಗೆದಿರುವಿರಿ... !!
    ನಿಮ್ಮ ಹಾಗೆ ದಿಗ್ವಾಸ್ ಕೂಡ !!

    ಹ್ಹಾ ಹ್ಹಾ !!

    ನಾನು ಒಂದು ಮಾರ್ವಾಡಿ ಗೆಳೆಯನ ಮದುವೆಗೆ ಹೋಗಿದ್ದೆ..

    ಅಲ್ಲಿ ಹೆಣ್ಣುಮಕ್ಕಳು ಎಷ್ಟು ಶೃಂಗಾರ ಮಾಡಿಕೊಂಡಿದ್ದರು ಗೊತ್ತಾ?
    ಅಲ್ಲಿಗೆ ಬಂದ ಹೆಣ್ಣು ಮಕ್ಕಳ ಹಣೆಯ ಫೋಟೊ ಸುಮಾರು ಇಪ್ಪತ್ತು ಇವೆ !
    ಎಲ್ಲವೂ ಒಂದಕ್ಕಿಂತ ಒಂದು ಸುಂದರ... !

    ಅವರ ಕಾಲು.. ಕೈ.. ಎಲ್ಲವೂ "ಮೆಹೆಂದಿಯಿಂದ" ಚಂದವಾಗಿದ್ದವು !

    ಯಾವತ್ತಿನಂತೆ ಗಂಡಸರು ತಲೆಗೊಂದು ಪೇಟಸುತ್ತಿಕೊಂಡು ಉದ್ದದ ಅಂಗಿ ಹಾಕಿಕೊಂಡು ಓಡಾಡುತ್ತಿದ್ದರು !

    ಹೆಣ್ಣು ಈ ಜಗತ್ತಿನ ಸುಂದರ ಸೃಷ್ಟಿ.. !!

    ಪಾಲ ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  48. kivi kivi kiviyo......

    ellavu sundara photogaLu......

    thanks prakashaNNa.....

    ReplyDelete
  49. ಪ್ರಕಾಶಣ್ಣ ನನ್ ಹತ್ರಾನೂ ರಾಶಿ ಕಿವಿಯೋಲೆ ಇದ್ದು. ಯಾವಾಗ ಫೋಟೋ ತೆಗೀತೆ ? ಎಲ್ಲ ಒಂದಕಿಂತ ಒಂದು ಚಂದ ಫೋಟೋ ಹಾಗೂ ಸಾಲುಗಳು :)

    ReplyDelete
  50. ಹೆಂಗಸರ ಕಿವಿ ಒಂದೇ ಅಲ್ಲ. ಎಲ್ಲವೂ ಚೆಂದನೇ. ಗಂಡನ ಮಾತು ಕೇಳುವ ಕಿವಿ ಇದ್ದರೆ ಇನ್ನೂ ಚಂದ

    ReplyDelete
  51. ವಿದ್ಯಾ ರಮೇಶ್..

    ಕೆನ್ನೆಯ ಅಂದ ಹೆಚ್ಚಿಸಿದ್ದು ಕಿವಿಯ ಅಲಂಕಾರ..
    ಜೋಲುವ ಜುಮುಕಿಗಳು..
    ಹವಳದ ಮಾಲೆಗಳು..
    ಚಂದದ ಕಿವಿಯೋಲೆಗಳು.. ಕೆನ್ನೆಗೆ ಮೆರಗನ್ನು ನೀಡಿವೆ..

    ಅಂದದ ಚಂದದ ಕೆನ್ನೆಗೆ.. ಕಿವಿಯೇ.. ಭೂಷಣಾ... ಅಲ್ಲವೆ?

    ಚಿತ್ರ ಲೇಖನ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

    ReplyDelete
  52. ಚುಕ್ಕಿಚಿತ್ತಾರ..

    ನಿನ್ನೆ ಸಾಹಿತ್ಯ ಸಮ್ಮೇಳನದಲ್ಲಿ ಒಂದು ಕಿವಿ ಸಿಕ್ಕಿದೆ..
    ಅದರಲ್ಲಿ ಹತ್ತು ತೂತುಗಳಿವೆ.. !

    ಅಬ್ಭಾ !!

    ಅದಕ್ಕೆ ಎಷ್ಟು ಬಗೆಯ ಓಲೆಗಳಿರ ಬಹುದು..

    ಪ್ರತಿಬಾರಿಯೂ ಕಾರ್ಯಕ್ರಮಗಳಿಗೆ ಹೋಗುವಾಗ ಬೇರೆ ಬೇರೆ ಓಲೆಗಳು ಬೇಕಾಗಿರ ಬಹುದಲ್ಲವೆ?

    ಚಿತ್ರ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

    ReplyDelete
  53. ಪ್ರೀತಿಯ ಗುರು...

    ಅಲಂಕಾರ.., ಶೃಂಗಾರ ಮಾಡಿಕೊಳ್ಳುವದು ಸುಲಭವಲ್ಲ..
    ಶೃದ್ಧೆ.. ತಾಳ್ಮೆ..
    ಎಲ್ಲದುದಕ್ಕಿಂತ ಸೌಂದರ್ಯ ಪ್ರಜ್ಞೆ ಬೇಕು..

    ತಮಗೆ ಯಾವುದನ್ನು ಹಾಕಿಕೊಂಡರೆ ಚಂದ..
    ತಾನು ಹೇಗೆ ಅಂದ ಕಾಣುತ್ತೇನೆ ಅನ್ನುವದು ಬಲು ಮಹತ್ವ..

    ಹೆಚ್ಚಿನ ಹೆಣ್ಣುಮಕ್ಕಳಿಗೆ ಇದು ಸಹಜವಾಗಿ ಬಂದಿರುತ್ತದೆ...

    ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  54. ವಾಣಿಶ್ರೀ ಭಟ್..

    ನನ್ನ ಬ್ಲಾಗಿಗೆ ಸ್ವಾಗತ...

    ಕಿವಿಗೆ ಹತ್ತಾರು ತೂತುಗಳನ್ನು ಚುಚ್ಚಿಸಿ ಕೊಳ್ಳುವ ನೋವಿಗಿಂತ..
    ಅಲಂಕಾರ ಮಾಡಿಕೊಂಡು ಸಂಭ್ರಮ ಪಡುವ ಸುಖವೇ ದೊಡ್ಡದು ಅಲ್ಲವೆ?

    ಕೆಲವೊಮ್ಮೆ ಅವಳ ಅಲಂಕಾರದ ಸಡಗರ..
    ಸಂಭ್ರವನ್ನು ನೋಡಿಗೆ ಸಣ್ಣ ಅಸೂಯೆಯೂ ಬರುತ್ತದೆ..

    ಗಂಡು ಜೀವಿ ಯಾಕೆ ಹೀಗೆ ಅಂತ...

    ಫೋಟೊ ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು...
    ಬರುತ್ತಾ ಇರಿ..

    ಪ್ರಕಾಶಣ್ಣ..

    ReplyDelete
  55. ಚೇತನಾರವರೆ....

    ಈ ಅಲಂಕಾರಗಳು..
    ಸಂತೋಷ... ಸಂಭ್ರಮ.. ಬದುಕಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತವೆ...ಅಲ್ಲವೆ?

    ಇಷ್ಟವಾದವರ ಮೆಚ್ಚುಗೆಯ ಒಂದು ನೋಟಕ್ಕಾಗಿ..
    ಹೆಣ್ಣು..
    ಎಷ್ಟೆಲ್ಲ ಅಲಂಕಾರ ಮಾಡಿಕೊಳ್ಳುತ್ತಾಳೆ..
    ಅಲಂಕಾರ ಮಾಡಿಕೊಳ್ಳಲಿಕ್ಕೆ ಎಷ್ಟೆಲ್ಲ ಆಯ್ಕೆಗಳಿವೆ...

    ಹೆಣ್ಣು ಈ ಜಗದ ಸುಂದರ..
    ಸೋಜಿಗದ ಸೃಷ್ಟಿ...

    ಫೋಟೊ...ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

    ಪ್ರಕಾಶಣ್ಣ..

    ReplyDelete
  56. ಸಹನಾ...

    ನನ್ನ ಬ್ಲಾಗಿಗೆ ಸ್ವಾಗತ...

    ಈ ಅಲಂಕಾರಗಳು...
    ಆಭರಣಗಳು... ಪೌಡರ್.. ಮೇಕಪ್ಪುಗಳು.. ಚಂದಕ್ಕೆ ಬೇಕು ಅಂದರೆ...

    ಮನುಷ್ಯನಿಗೆ ಸಹಜವಾಗಿರುವದು ಬೇಡ ಅಂತ ಅರ್ಥವೆ?
    ಇದನ್ನೆ ಮಾಡಿಕೊಂಡರೆ ನೋಡುವ ಕಣ್ಣಿಗೆ ಇಷ್ಟವೆ..?

    ಸಹಜತೆಯನ್ನು ರಸಿಕ ಮನಸ್ಸು ಯಾಕೆ ಇಷ್ಟಪಡುವದಿಲ್ಲ..

    ಆಡಂಬರ ಯಾಕೆ ಇಷ್ಟವಾಗುತ್ತವೆ? ಇವೆಲ್ಲ ಕೆಲವು ಪ್ರಶ್ನೆಗಳು ಸಹಜವಾಗಿ ಬರುತ್ತವೆ..

    ಫೋಟೊ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..
    ಬರುತ್ತಾ ಇರಿ..

    ReplyDelete
  57. photo galige pose kotta chandada kivigalige jai ho :)

    ReplyDelete
  58. ಸೂಪರ್ ಪ್ರಕಾಶಣ್ಣಾ...

    ReplyDelete
  59. Prakashanna..tumba tumba sundaravada lekhana mattu photo.
    Hennina bagge nimma abhimana tumba khushi koduvantadu..Odi khushiyayitu..

    ReplyDelete
  60. ಅಂತು ಕವಿಗಳು ಕಿವಿಯನ್ನೂ ಬಿಟ್ಟಿಲ್ಲ ಅಂತಾಯ್ತು :)

    ReplyDelete
  61. ಪ್ರಕಾಶಣ್ಣ!! ಅಮ್ಮ ಮುತ್ತಿಡುತ್ತಿರುವ ಮೊದಲನೆಯ ಫೋಟೋ!! ನಿಜಕ್ಕೂ ಸೊಗಸಾಗಿದೆ.
    ಇನ್ನೂ, ಕಿವಿಗೆ ತೂತು ಹೊಡೆದು ಸಿಗಿಸಿರುವ ಆಭರಣಗಳಿಗೆಲ್ಲಾ , ಪದಗಳ ಹವಳ ಪೋಣಿಸಿ ಸಿ೦ಗರಿಸಿರೋದು ತು೦ಬಾನೆ ಚೆನ್ನಾಗಿವೆ.
    ದಪ್ಪ-ದಪ್ಪ ಬ೦ಗಾರದ ಬೆ೦ಡೋಲೆ ಹಾಕಿರುವ ಅಜ್ಜಿಯರ(ಹೆಚ್ಚಾಗಿ ತಮಿಳುನಾಡಿನಲ್ಲಿ) ಕಿವಿ ಬಿಟ್ಟಿದ್ದೀರಿ. ಕಿವಿ ಜಗ್ಗಿ ಒ೦ದು ಕೈ ಹೋಗುವಷ್ಟು ದೊಡ್ಡ ತೂತಿರುತ್ತದೆ.

    ReplyDelete
  62. ನಿಮ್ಮ ಕಿವಿಯ ಬಗ್ಗೆ ವರ್ಣನೆ ಹಾಗು ಆ ಸುಂದರಾಂಗನೆಯರ ಚಲುವಿನ ಚಿತ್ತಾರವಾಗಿಸಿರುವ ಕಿವಿಗಳಂತು ಮತ್ತಷ್ಟು ಸುಂದರವಾಗಿವೆ. ಅವುಗಳನ್ನೆಲ್ಲ ಒಮ್ಮೆಗೆ ಕೊಯ್ದು ಕೊಂಡು ಮನೆಯಲ್ಲಿ ಅಲಂಕರಿಸ ಬೇಕೆಂಬ ಆಸೆಯಾಗುತ್ತಿದೆ. ಕರ್ಣ ಸುಂದರಿಯರಿಗೆ ಹುಶಾರಾಗಿರಲಿಕ್ಕೆ ಹೇಳಿ ಪ್ರಕಾಶ್ ಸಾರ್. ನಾನು ಈ ಮೊದಲು ಕಿವಗಳನ್ನು ತೂತು ಮಾಡಿಕೊಂಡು ಚಿತ್ರ ವಿಚಿತ್ರವಾದ ಆಭರಣಗಳನ್ನು ಹಾಕಿಕೊಂಡವರನ್ನು ನೋಡಿದಾಗ ಶೋಕೆಶ್ ನೋಡಿದ ನೆನಪಾಗುತಿತ್ತು. ಈಗ ನೀವು ಬದಲಾಯಿಸಿದಿರಿ ನೋಡಿ..

    ReplyDelete
  63. ಅಮಿತಾರವರೆ...

    ನನ್ನ ಬ್ಲಾಗಿಗೆ ಸ್ವಾಗತ..

    ಅಲಂಕರಿಸಿಕೊಳ್ಳುವ ಶೃದ್ಧೆಗೆ ಹೆಣ್ಣಿಗೊಂದು ನಮನ ಹೇಳಲೇ ಬೇಕು..
    ನಾವು ದಿನನಿತ್ಯ ಮಾಡುವ ಊಟತಿಂಡಿಯ ಹಾಗೆ ಅವಳಿಗೆ "ಅಲಂಕಾರ" ಕೂಡ..

    ಅಪವಾದಗಳೂ ಇರಬಹುದು..

    ಬಹುಷಃ ಆಹಾರವಿಲ್ಲದೇ ಹೆಣ್ಣು ಇರಬಲ್ಲಳು..
    ಆದರ ಅಲಂಕಾರವಿಲ್ಲದೆ ಅಸಾಧ್ಯ..

    ತನ್ನೆಡೆಗೆ ಒಂದೂ ಮೆಚ್ಚುಗೆಯ ನೋಟವಿಲ್ಲ ಎನ್ನುವದನ್ನು ಅರಗಿಸಿಕೊಳ್ಳುವದು ಬಹಳ ಕಷ್ಟ..

    ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..

    ReplyDelete
  64. ಶಿವು ಸರ್..

    ನಮ್ಮ ಮನೆಯಲ್ಲಿ ಎಲ್ಲರೂ "ಹೇಮಾಶ್ರೀ" ಪಾರ್ಟಿ..
    ಅವರಿಗೇ ಸಪೋರ್ಟು.. ಹಾಗಾಗಿ ಅವರಿಗೆ ಈ ಲೇಖನ ನೋಡುವ ವ್ಯವಸ್ಥೆ ಮಾಡುತ್ತೇವೆ..

    ಹ್ಹಾ..ಹ್ಹಾ.... !

    ನನಗೆ ಗೊತ್ತು.. ಹೇಮಾ ಅವರು ಹೇಳಿದ ಯಾವ ಬೇಡಿಕೆಯನ್ನೂ ನೀವು ನೆರವೇರಿಸದೆ ಇರುವದಿಲ್ಲ ಅಂತ..
    ಯಾಕೆಂದರೆ ಹೇಮಾರವರು ಅಂಥಹ ದುಬಾರಿ ಬೇಡಿಕೆ ಇಡುವದೇ ಇಲ್ಲ..

    ನಿಮ್ಮಿಬ್ಬರ ಪ್ರೀತಿ ಯಾವಗಲೂ ಹೀಗೆಯೇ ಇರಲಿ...

    ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.. ಜೈ ಹೋ !

    ReplyDelete
  65. ಚೆನ್ನಾಗಿವೆ ಫೋಟೋ-ಬರಹ ಎಲ್ಲ. ಇನ್ನು ಯಾವ್ಯಾವ ಅ೦ಗಗಳ ಮೇಲೆ ಇ೦ತಹ ಫೋಟೋ ಪ್ರಯೋಗ ಮಾಡ್ತೀರಿ ಗುರುವೇ? ನಿಮ್ಮ ಸೃಜನಶೀಲತೆ ಗೆ ದೊಡ್ಡ ಸಲಾಂ. ಹೆಣ್ಣಿನ ಕೇಶಾಲ೦ಕಾರದ ಬಗ್ಗೆ ಒ೦ದು ಸೀರೀಸ್ ಶುರು ಮಾಡಿ. ಹಾಗೇನೆ ಎಪ್ರಿಲ್ 1 ರ೦ದು ನಡೆಯಲಿರುವ ಅಖಿಲ ಭಾರತ ಕಿವಿ-ಕವಿ ಸಮ್ಮೇಳನಕ್ಕೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಶಿಫಾರಸ್ ಮಾಡಲಾಗಿದೆ.

    ReplyDelete
  66. hahahaha ondakkinta ondu syper !! bahala dinagala nantara blg ge bandiddi.. nimma baraha kivi tutina naduve netaduttiruva ole galu bahala istha aatu.

    Intha chendagi ipppanthadannella torsidre idella beku heluva bedi ke hechhadre nine javabdaari. :)

    Nitin

    ReplyDelete
  67. Nimma kiviya bagegina vislesane mattu pictures tumba chennagide.
    Comments from readers n replies also superb

    ReplyDelete
  68. Beautiful photography with Beatiful ear ornaments, with Beautiful poems!!!!
    Really Wonderfull :)

    ReplyDelete
  69. ವಾವ್ ವಾವ್ ವಾವ್...
    ಎನಿತಿದು ಕಿವಿಯ ಪರಿ
    ವಾವ್ ವಾವ್ ವಾವ್...

    ReplyDelete
  70. ಪ್ರಕಾಶಣ್ಣ ಸೂಪರ್.............!

    ReplyDelete
  71. ಲಲಿತ ಪ್ರಬಂಧವನ್ನು ಇಷ್ಟು ಚಂದವಾಗಿ ಚಿತ್ರಗಳ ಸಮೇತ ಬ್ಲಾಗಿಗೆ ಇಳಿಸಿದ್ದಕ್ಕಾಗಿ ಮೊದಲಿಗೆ ಭೇಷ್ ಸರ್. ಮೊಗೇರ ನಿಮ್ಮ ಬ್ಲಾಗಿನ ಬಗ್ಗೆ ಹೇಳಿದಾಗ, ಎಲ್ಲೋ ಹತ್ತರಲ್ಲೊಂದು ಬ್ಲಾಗ್ ಇರಬಹುದೆಂದೇ ಇಣುಕಿದೆ. ಬ್ಲಾಗಿನ ಹೆಸರೂ ಯಾವುದೋ ರಿಯಲ್ ಎಸ್ಟೇಟ್ ಸಂಸ್ಥೆಯ ಜಾಹೀರಾತಿನಂತಿತ್ತು ಅಲ್ವ ಅಲ್ಲೂ ಎಡವಿದೆ. ;-) ಆದರೇ ಇಲ್ಲಿನ ಹೂರಣವೇ ಬೇರೆ ಅದನ್ನು ಬಡಿಸುವ ಪರಿಯೇ ಬೇರೆ. ಒಮ್ಮೆ ಬಿಡುವಾಗಿ ಕುಳಿತು ತೆರೆದು ನೋಡಬಹುದಾದ ಅಧ್ಯಯನ ಯೋಗ್ಯ ಬ್ಲಾಗ್ ನಿಮ್ಮದು.
    ನನ್ನ ಬ್ಲಾಗಿಗೆ ಒಮ್ಮೆ ಬನ್ನಿ.
    www.badari-poems.blogspot.com
    www.badari-notes.blogspot.com
    facebook profile: Badarinath Palavalli

    [ಸರ್, ದಯಮಾಡಿ ನೀವು ಹೊಸ ಪೆಜ್ ಡಿಸೈನ್ ಅನ್ನು Template Designer ಮೂಲಕ ಮಾಡಿ ಸರ್. ನಿಮ್ಮ ಬ್ಲಾಗ್ ಅನ್ನು ನಾವು ಆಗ ಮೊಬೈಲಿನಲ್ಲೇ ಓದಬಹುದು.]

    ReplyDelete
  72. modhalane photo chennagidhe
    kiviyolegalu thumba chennagive
    hennige obba aparichitha nodidharu nodadhidharu asamadhana adhu nija anna

    kiviya bagge enthaha kalpane
    super

    ReplyDelete
  73. sundara chitragala jote hennina swabhavada nija chitrana mudagolisuvante... chennagide leekhana

    ReplyDelete
  74. Nice article... I liked all the photos...

    ReplyDelete