Sunday, March 1, 2009

ಏಲಕ್ಕಿ ಬೆಳೆಗಾರರು...


ಮತ್ತದೇ... ಕಾನಸೂರು ಹೈಸ್ಕೂಲ್..
ಗೋವಿಂದ ಭಟ್ಟರ ಪಾಠ..

ತರ್ಲೆ ನಾಗು, ನಾನು ಹಿಂದಿನ ಬೇಂಚಿನ ಸರದಾರರು...

ನಾಗು ಮೂಗಿನಲ್ಲಿ ಬೆರಳು ತೂರಿಸುತ್ತ...
ಭಾವನಾ ಲೋಕಲ್ಲಿ.. ಕಳೆದು ಹೋಗಿದ್ದ...


ಭಟ್ಟರು ಇವನನ್ನು ನೋಡಿ... ತುಸು ಕೋಪದಿಂದ...

"ಏನಪ್ಪಾ " ಏಲಕ್ಕಿ ಬೆಳೆಗಾರ.".. ಕ್ಲಾಸಿನಲ್ಲಿ ಗಮನ ಇಲ್ಲವಾ..?.

ನಾಗು ಒಳ್ಳೆಯ ಮಾತುಗಾರ..

"ಸರ್... ನಾನು ಅಡಿಕೆ ಬೆಳೆಗಾರ...ನಮ್ಮನೆಯಲ್ಲಿ.. ಅಡಿಕೆ ಬೆಳೆಯುತ್ತಾರೆ..! "

"ನೀನು ಮೂಗಿಗೆ ಬೆರಳು ಹಾಕಿ ಏನು ತೆಗೆಯುತ್ತಿದ್ದೆ..?"

"ಮೂಗಿನ ಕಿಟ್ಟ ಸಾರ್.."

"ಅದೇ ಏಲಕ್ಕಿ...ಅಲ್ಲವೇನೋ..?

ಅದಕ್ಕೆ ನೀನು " ಏಲಕ್ಕಿ ಬೆಳೆಗಾರ..!"


ನಮಗೆಲ್ಲ ಏನೇನೋ ಹೆಸರಿಡುತ್ತಿದ್ದ ನಾಗು...

ಅಂದಿನಿಂದ ನಮಗೆಲ್ಲ "ಏಲಕ್ಕಿ ಬೆಳೆಗಾರ" ನಾದ...


ಇತ್ತೀಚೆಗೆ..
ಹಾಲೆಂಡ್ ದೇಶದಿಂದ ನನ್ನ ಗೆಳೆಯರೊಬ್ಬರು ಬಂದಿದ್ದರು..

ನಮ್ಮ ಸ್ನೇಹ ೧೫ ವರ್ಷ.. ಹಳೆಯದು..

ಭಾರತದ ಬಗೆಗೆ ಬಹಳ ಅಭಿಮಾನವಿದ್ದವರು..

ಎಲ್ಲ.. ಸುತ್ತಾಡಿ ಬಂದಮೇಲೆ ನಾನು ಸಹಜ ಕುತೂಹಲದಿಂದ ಕೇಳಿದೆ...

"ಸ್ಲಾಂಗನ್... ಭಾರತ ನಿನಗೆ ಏನನ್ನಿಸಿತು..?
ಏನು ವಿಶೇಷ ಕಂಡೆ.. ಇಲ್ಲಿ..?"

"ಬಡತನವಿದ್ದರೂ ಚಂದದ ದೇಶ ನಿಮ್ಮದು..
ಭವ್ಯ ಪರಂಪರೆ, ಸಂಸ್ಕ್ರತಿ ಬಹಳ ಚೆನ್ನಾಗಿದೆ...

ಆದರೆ..."

"ಆದರೆ..ಏನು..?

" ಈ ಭಾರತೀಯರು ಹೀಗೇಕೆ.. ಮಾಡ್ತಾರೆ.... .?
ಮಾರಾಯಾ..!
..ಮೂಗೆಂದರೆ ಅಷ್ಟು ಪ್ರೀತಿ...?..?

ಯಾವಗಲೂ ಮೂಗಿನಲ್ಲಿ ಬೆರಳು ತೂರಿಸಿ...

ಏನು ಮಾಡ್ತಾರಪ್ಪಾ ಅದರಲ್ಲಿ.?..!

ಏನು ಇರುತ್ತಪ್ಪಾ ಆ ಮೂಗಿನಲ್ಲಿ..! ?.."


ನಾನು ಅವಕ್ಕಾದೆ..." ಹೌದಲ್ಲಾ...!

ಎಂಥಹ ಸತ್ಯ..!!


ನಾವೆಲ್ಲ "ಏಲಕ್ಕಿ ಬೆಳೆಗಾರರು..!"

ನಮ್ಮ ಬೆರಳು ಹೆಚ್ಚಿನ ಸಮಯ ಮೂಗಿನ ಮೇಲೇ ಇರುತ್ತದೆ...!

ಮೂಗಿನ ಒಳಗೋ ಅಥವಾ ಹೊರಗೋ ತಿಕ್ಕುತ್ತಲೇ ಇರುತ್ತೇವೆ..!

ಪ್ರತಿ ಐದು ನಿಮಿಷಕ್ಕೊಮ್ಮೆ ನಮ್ಮ ಕೈ ಮುಗಿನಲ್ಲಿರುತ್ತದೆ...!

ಗುರುತ್ವಾಕರ್ಷಣೆ " ಶಕ್ತಿ " ಇದೆಯಾ ಅಲ್ಲಿ...?

ಈ ಮೂಗಿಗೆ ಏನಾದರೂ ಮರು ಜನ್ಮ ಅಂತಿದ್ದರೆ..
ಭಾರತ ಮಾತ್ರ ಬೇಡಪ್ಪಾ ಅನ್ನಬಹುದೇನೋ...!

ನಮ್ಮ ದೇಶದಲ್ಲೇ "ಏಲಕ್ಕಿ ಬೆಳೆ " ಯಾಕೆ ಜಾಸ್ತಿ..?

ಇಲ್ಲಿನ ಧೂಳು. ! . ಹೊಗೆ... !
ಅತಿಯಾದ.. ಕೆಟ್ಟ ವಾತಾವರಣ....!!!

ಇಷ್ಟೇನಾ...?

ಬಿಚ್ಚುತ್ತಾ ಹೋದಂತೆ ಬಹಳಷ್ಟು ವಿಷಯಗಳು ಹೊರಬಿದ್ದವು...

ವೈದ್ಯಕೀಯ ಕಾರಣಗಳು..
ವೈಜ್ಞಾನಿಕ ಕಾರಣಗಳು..
ಮಾನಸಿಕ ಕಾರಣಗಳು..

ಏನೂ ಕಾರಣವಿಲ್ಲದೇ

"ವಿನಾಕಾರಾಣಗಳು "..!

ಇವುಗಳನ್ನು ವಿವರವಾಗಿ ಮುಂದಿನ ಬರಹಗಳಲ್ಲಿ ಚರ್ಚಿಸೋಣ...

"ಏಲಕ್ಕಿ ಬೆಳೆ" ಅಲ್ಲಿ ಇಲ್ಲಿ ಎಂದೇನೂ ಇಲ್ಲ..
ಎಲ್ಲಕಡೆ ಬೆಳೆಯುತ್ತದೆ..
ಬಡವ . ಶ್ರೀಮಂತ..,
ಜಾತಿ, ಮತ ಧರ್ಮ.. ಮೀರಿ ಇದು ಇದೆ...

ಆತಂಕವಾದಿಗಳು..
ಸೈನಿಕರು..
ರಾಜಕಾರಣಿಗಳು..
ಅಧಿಕಾರಿಗಳು..
ಕೂಲಿಕಾರ್ಮಿಕರು..
ಹೆಂಗಸರು.. ಗಂಡಸರು...!

ಎಲ್ಲಿ ಬೇಕಾದರೂ...

ಯಾವುದೇ ಭೇದವಿಲ್ಲದೇ...
ಏಲಕ್ಕಿ ಬೆಳೆಯನ್ನು ಹುಲುಸಾಗಿ " ಕಾಣ " ಬಹುದು...


" ಏಲಕ್ಕಿ ಬೆಳೆಯೇ" ಮಾನವ ಧರ್ಮ...

ಮೇಲುಕೀಳಿಲ್ಲದ...

ಮಾನವತೆಯ ಧರ್ಮ...


ಈ ಲೇಖನ..
ಫೋಟೊ ನೋಡಿ ಮುಗಿಯುವಷ್ಟರಲ್ಲಿ..

ನೀವು.. ಎಷ್ಟು ಬಾರಿ ..
ಏಲಕ್ಕಿ ಬೆಳೆ ..
ತೆಗೆದಿದ್ದೀರಿ.....?


" ಏಲಕ್ಕಿ ಬೆಳೆ " ತೆಗೆದ ಮೇಲೆ ಮುಂದೇನು...?

ಇನ್ನೂ ವಿಷಯಗಳಿವೆ... ಮುಂದಿನ ಬಾರಿ....!


ಏನೀ... ಮಹಾನಂದವೇ...?



ವರ್ಣಿಸಲಾಗದು... ಬಣ್ಣಿಸಲಾಗದು... ಪರಮಾನಂದ...! ಅಹಾ...!



ಏನೋ... ಗಹನವಾದ ಚಿಂತೆಯಲ್ಲೂ... ಇದು "ಸಂಗಾತಿ..!'



ಅಲ್ಲಾ.. ಸ್ವಾಮಿ... " ಹುಡುಗಿಯರ ಫೋಟೋ ಕ್ಕೂ
"ಏಲಕ್ಕಿ ಬೆಳೆಗೂ
." ಸಂಬಂಧ ಇರಬಹುದಾ....?.!??





ಹೆಂಗಸರನ್ನೂ ಕಾಡದೇ ಬಿಟ್ಟಿಲ್ಲ ಈ... "ಏಲಕ್ಕಿ ಬೆಳೆ..!"




74 comments:

  1. ಪ್ರಕಾಶ್ ಸರ್,
    ನಿಮ್ಮ ಬರಹ ನೋಡಿ ನಗು ತಡೆಯಲಾಗದೆ ಆಫೀಸಿನಲ್ಲಿ ಎಲ್ಲರು ಬಂದು ಕೇಳೋ ಹಾಗೆ ಮಾಡಿದಿರಿ...ಏನಾಯಿತು ಹೀಗೆ ಒಬ್ಬಳೇ ಹುಚ್ಚಿ ತರ ನಗುತೀಯ ಎಂದು ಬಿಟ್ಟರು ಹ ಹ ...

    ಕಣ್ಣು ಕಿವಿ ಮೂಕು ಬಾಯಿ ಎಲ್ಲ ಅವರವ ಕೆಲಸ ಮಾಡ್ತಾನೆ ಇರುತೆ ಹಾಗೆ ಕೈ ಕೂಡ ಅದರ ಕೆಲಸ ಮಾಡುತ್ತೆ ...... ಕೈ ಸುಮ್ಮನಿರಲಾರದೆ ಮೂಗಿನೊಂದಿಗೆ ಸರಸಲ್ಲಾಪದಲ್ಲಿ ತೊಡಗಿರುತ್ತೆ... ಹ ಹ ಹ

    ReplyDelete
  2. ಆತ್ಮೀಯ ಪ್ರಕಾಶಣ್ಣ,

    ಏಲಕ್ಕಿ ಬೆಳೆಯನ್ನು ವಿಡಂಬನಾತ್ಮಕವಾಗಿ ವರ್ಣಿಸಿದ ರೀತಿ ತುಂಬಾ ನಗು ತರಿಸಿತು. ಕೆಲವು ಸಾಮಾನ್ಯ ವಿಷಯಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ನಾವು ನಮ್ಮದೇ ಲೋಕದಲ್ಲಿ ವಿಹರಿಸುತ್ತಿರುತ್ತೇವೆ. ಇನ್ನೊಬ್ಬರು ತೋರಿಸಿದಾಗ ಸತ್ಯದ ಪರಮದರ್ಶನವಗುತ್ತದೆ. ಮಾನವ ಸಹಜ ಧರ್ಮವಲ್ಲವೇ.
    ಮತ್ತೊಮ್ಮೆ ಸುಂದರ ಬರಹ, ಕಸದಲ್ಲಿ ರಸವನ್ನು ಹುಡುಕುವ ನಿಮ್ಮ ಲೇಖನ ಶೈಲಿ ತುಂಬಾ ಹಿಡಿಸಿತು. ನಡು ನಡುವೆ ಹಾಕಿದ ಫೋಟೋಗಳು ಇನ್ನು ಬರಹದ ಸೌಂದರ್ಯವನ್ನು ಹೆಚ್ಚಿಸಿತು ಎನ್ನಬಹುದು.
    ಹೀಗೆ ಬರೆಯುತ್ತಿರಿ,
    ಗುರು

    ReplyDelete
  3. ಪಾಪ ಮಲೆನಾಡಿನ ಏಲಕ್ಕಿ ಬೆಳೆಗಾರರು ಏಲಕ್ಕಿ ಬೆಳೆ ಇಲ್ಲದೇ ನಲುಗುತ್ತಿದ್ದರೇ ನೀವು ಒಳ್ಳೆ ಬೆಳೆಯನ್ನು ಹುಡುಕಿ ತೆಗೆದಿದ್ದಿರಾ!!! :)
    ನಿಜ ನಾವು ದಿನ ನಿತ್ಯ ಇದನ್ನು ನೋಡುತ್ತಲೇ ಏಲಕ್ಕಿ ಬೆಳೆಯನ್ನು ಉತ್ಪಾದಿಸುತ್ತಿರುತ್ತೇವೆ!.ಅದು ಚಟವೋ,ದಿನನಿತ್ಯದ ಕೆಲಸವೋ ಎಲ್ಲವನ್ನೂ ಮೀರಿ ಬೆಳೆದು ಬಿಟ್ಟು ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.ಆದರೂ ನಾವು ಕೆಲವೋಂದು ಸ್ಥಳದಲ್ಲಾದರೂ ಅಂದರೆ ನಮ್ಮೇದುರಿನ ವ್ಯಕ್ತಿ ಎದುರು ಮಾತಣಾಡುತ್ತಿರುವಾಗ,ಬಹಳ ಜನರ ಎದುರು ಇದ್ದಾಗ ಆದರೂ ಏಲಕ್ಕಿಯನ್ನು ಉತ್ಪಾದಿಸುವುದನ್ನು ಬಿಟ್ಟರೆ ಚೆಂದ ಅಲ್ಲವೆ?ಮತ್ತೆ ಅದು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.ಏಲಕ್ಕಿ ಉತ್ಪಾದಿಸಿದ ಮೇಲೆ ಅದೇ ಕೈ ಯಿಂದ ಬೇರೆಯವರಿಗೆ ಶೇಕ್ ಹ್ಯಾಂಡ್, ನೀಡಲು ಸಂಕೋಚವಿಲ್ಲದೇ ಹೋಗುವವರು ಇದ್ದಾರೆ.ಆದರೆ ಶೇಕ್ ಹ್ಯಾಂಡ್ ತೆಗೆದುಕೊಳ್ಳುವವನ ಸ್ಥೀತಿ ಏನಾಗಿರ ಬೇಡ!!!

    ಮತ್ತೋಂದು ವಿಷಯ. ನೀವು ಮತ್ತು ಶಿವು ಸೇರಿ "ಬೋಳು ತಲೆಗಳನ್ನು" ಸೇರೆ ಹಿಡಿದಂತೆ ವಿವಿಧ ರೀತಿಯಲ್ಲಿ "ಏಲಕ್ಕಿ ಉತ್ಪಾದಿಸಲು ಕೈ ತೂರಿಸಿದವರ " ಫೋಟೊವನ್ನು ಏಕೆ ಸೆರೆ ಹಿಡಿಯಬಾರದು!! ಅದನ್ನು ನೆನೆದೆ ನಗು ಬರುತ್ತಿದೆ!!


    ಮುಂದಿನ ವಿಶೇಷ ಆದಷ್ಟು ಬೇಗ ಬರಲಿ!!!

    ReplyDelete
  4. ಪ್ರಕಾಶರೆ,
    ಚೆನ್ನಾಗಿದೆ ಕಣ್ರೀ ನಿಮ್ಕಥೆ. ಇದ್ಕೇನಾ ನೀವು ಮತ್ತು ಶಿವಣ್ಣ ಒಟ್ಟಿಗೆ ಸೇರಿ ಫೋಟೋ ತೆಗೀಲಿಕ್ಕೆ ಹೋಗಿದ್ದು. ನಾನು ಹೈಸ್ಕೂಲಿನಲ್ಲಿ ಇದ್ದಾಗ ನಮ್ಮ ಮೇಸ್ಟ್ರು ಅದಕ್ಕೆ "ಉಪ್ಪಿನಕಾಯಿ ತೆಗಿಯೋದು' ಅ೦ತಿದ್ರು. ಇತ್ತೀಚಿನ ವರ್ಷಗಳಲ್ಲಿ ಅದಕ್ಕೆ'ಗಣಿಗಾರಿಕೆ' ಅ೦ತ ಹೆಸರು ಬ೦ದಿದೆ. ಚೆನ್ನಾಗಿದೆ ಚಿತ್ರ-ಲೇಖನ. ನಿಮ್ಮ ಬರಹ ಓದಿ ನನ್ನ ಕೈ ಮೊಗಿನ ಹತ್ರ ಹೋಗಿದ್ದು ವಾಪಸು ಬ೦ತು. ಅಲ್ರೀ, ಯಾರ್ಯಾರೋ ಪಾಪದವರ ಫೋಟೋ ಹಾಕಿದಿರಲ್ಲ, ದೇವೇಗೌಡರು, ರೇವಣ್ಣ ಸಿಗಲಿಲ್ಲವಾ ನಿಮಗೆ ? ಗುಡ್

    ReplyDelete
  5. ಮನಸು...

    ನನಗೆ ಬಹಳ ಆತಂಕವಿತ್ತು ..
    ಇದು ನಿಮಗೆಲ್ಲ ಇಷ್ಟವಾಗುತ್ತಾ ಇಲ್ಲವೋ ಎಂದು...

    ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿ.. ಖುಷಿಯಾಗುತ್ತಿದೆ..

    ಈ ಮೂಗು ನನ್ನನ್ನು ಬಹಳ ಕಾಡಿದೆ..

    ಯಾಕೆ ನಾವು ಈ ಮೂಗನ್ನು ಮುಟ್ಟುವದು.., ತಿಕ್ಕುವದು ಮಾಡುತ್ತೇವೆ..?

    ಅದು ಒಂಥರ "ಡ್ರಿಂಕ್ಸ್" ಚಟದ ಥರಹ..

    ಖುಷಿಯಾಗಿದೆ .. ಮುಟ್ಟುತ್ತೇವೆ..

    ದುಃಖವಾಗಿದೆ ತಿಕ್ಕುತ್ತೇವೆ..

    ಅನ್ಯಮನಸ್ಕರಾಗಿದ್ದೇವೆ.. ಬೆರಳು ತೂರಿಸಿ ಏನೆಲ್ಲ ಮಾಡಿ ಬಿಡುತ್ತೇವೆ...

    ಎಲ್ಲದಕ್ಕೂ ಈ ಬಡಪಾಯಿ ಮೂಗೇ ಬೇಕೆ..?

    ನೀವು ಸಂತೋಷ ಪಟ್ಟು..
    ಕೊಟ್ಟ ಪ್ರತಿಕ್ರಿಯೆಗೆ ..
    ಹ್ರದಯ ಪೂರ್ವಕ ವಂದನೆಗಳು...

    ReplyDelete
  6. ಗುರುಮೂರ್ತಿಯವರೆ...

    ನಮಗೆ ಗೊತ್ತಿಲ್ಲದಂತೆ ಇಂಥಹ ಕ್ರಿಯೆಗಳು ನಡೆದು ಹೋಗುತ್ತವೆ..

    ಈ ದುರಭ್ಯಾಸವನ್ನು ಬಿಡಬಹುದು...

    ಹೆಚ್ಚಾಗಿ "ಅನ್ಯಮನಸ್ಕಾರಾಗಿದ್ದಾಗ"

    ಈರೀತಿ ಆಗಿ ಬಿಡುತ್ತದೆ...

    ಏಲಕ್ಕಿ ಬೆಳೆಗಾರನನ್ನು ಮೆಚ್ಚಿದ್ದಕ್ಕೆ
    ವಂದನೆಗಳು..

    ಪ್ರೋತ್ಸಾಹ ಹೀಗೆಯೇ ಇರಲಿ...

    ReplyDelete
  7. ನಿತಿನ್..

    ನಿಮ್ಮ ಪ್ರತಿಕ್ರಿಯೆ ಓದಿ ನಕ್ಕೂ ನಕ್ಕೂ ಸುಸ್ತಾದೆ...

    ನೀವು ಪ್ರಸ್ತಾಪಿಸಿದ ಎಲ್ಲ ವಿಷಯಗಳನ್ನೂ ಮುಂದೆ ಬರೆಯುವೆ..

    ತುಂಬ ಸ್ವಾರಸ್ಯಕರವಾಗಿದೆ...

    ಸ್ನೇಹಿತ ಶಿವು,
    ನಾವಿಬ್ಬರೂ ಫೋಟೊ ತೆಗೆಯಲು ಹೋಗಿದ್ದೇವು..

    ಅದೆಲ್ಲ ಮುಂದಿನ ಬಾರಿ ಹಾಕುವೆ...

    ಸುಮ್ಮನೆ ಯಾರೋ ಮುಗಿಗೆ ಬೆರಳು ಹಾಕುವಾಗ..
    ಫೋಟೊ ತೆಗೆದರೆ ಸುಮ್ಮನಿರುತ್ತಾರೆಯೆ..?
    ಬುರುಡೆಗೆರಡು ಬಾರಿಸಿ ಕಳಿಸುತ್ತಾರೆ..

    ಈ ಫೋಟೊ ತೆಗೆದ ಕಥೆ.. ಸಹಸವೇ ಬಹಳ ಮಜ ಇದೆ...

    ಅದನ್ನೂ ಬರೆಯುವೆ..

    ಧಾರವಾಹಿಯಾಗಿ..

    ಏಲಕ್ಕಿ ಬೆಳೆಗಾರನನ್ನು ಮೆಚ್ಚಿದ್ದಕ್ಕೆ

    ಧನ್ಯವಾದಗಳು..

    ReplyDelete
  8. ಪರಾಂಜಪೆಯವರೆ...

    ಶಿವು ನಾನೂ ಹೋಗಿ ಬಹಳಷ್ಟು ಫೋಟೊ ತೆಗೆದಿದ್ದೇವೆ...

    ಅವೆಲ್ಲ ಮುಂದಿನ ಬ್ಲಾಗುಗಳಲ್ಲಿ ಬರುತ್ತವೆ...

    ಶಿವು ತಮ್ಮ ಕೆಲಸಕಾರ್ಯಗಳನ್ನು ಬಿಟ್ಟು..
    ನನಗೆ ಫೋಟೊ ತೆಗೆದು ಕೊಟ್ಟರು..

    ಈ ಲೇಖನದಲ್ಲಿ ತೆಗೆದ ಫೋಟೊಗಳು..
    ನಾನೇ...

    ಏನೇ ಹೇಳಿ..

    ಇದಕ್ಕೆ ಫೋಟೊ ತೆಗೆಯುವದು ಬಹಳ ಕಷ್ಟದ ಕೆಲಸ...

    ನನಗೂ ರಾಜಕೀಯಕ್ಕೂ ಬಹಳ ದೂರ .. ಸ್ವಾಮಿ..

    ಏಲಕ್ಕಿಯನ್ನು ಮೆಚ್ಚಿದ್ದಕ್ಕೆ..
    ಧನ್ಯವಾದಗಳು...

    ReplyDelete
  9. ಅಲ್ಲಾ ಎಲ್ಲಿಂದ ಹುಡುಕುತ್ತೀರಿ ಇಂತಹ ಅಡ್ಡ ಹೆಸರುಗಳನ್ನು!!

    ಇನ್ಮುಂದೆ ಯಾರನ್ನು ನೋಡಿದರೂ ಯಾವಾಗ ಏಲಕ್ಕಿ ಬೆಳೆ ತೆಗೀತಾರೆ ಅಂತ ಕಾಯೋದೇ ಆಗುತ್ತೆ.ಅಂತೂ ಇದಕ್ಕೂ ಎರಡ ಮೂರು ಹೆಸರಿದೆ ಅಂತ ಗೊತ್ತಾಯಿತು. ಗಣಿಗಾರಿಕೆ ತುಂಬಾ ಚೆನ್ನಾಗಿ ಹೊಂದುತ್ತೆ.
    ಒಳ್ಳೆಯ ಹಾಸ್ಯ ಬರಹಕ್ಕೆ ಧನ್ಯವಾದಗಳು.

    ReplyDelete
  10. ಚಂದ್ರಕಾಂತರವರೆ...

    ಬಹುಷಃ ಅದರ ಬಣ್ಣದಿಂದಾಗಿ..

    ಗಾತ್ರದಿಂದಾಗಿ...

    "ಏಲಕ್ಕಿ ಬೆಳೆ "

    ಅನ್ನುವ ಶಬ್ಧ ಹೆಚ್ಚು ಸೂಕ್ತ ಎನ್ನುವದು ನನ್ನ ಭಾವನೆ..

    ಯಾರನ್ನೂ ಬಿಟ್ಟಿಲ್ಲ ನೋಡಿ ಈ

    "ಏಲಕ್ಕಿ ಬೆಳೆ"

    ಏಲಕ್ಕಿ ಬೆಳೆಯನ್ನು ಮೆಚ್ಚಿದ್ದಕ್ಕಾಗಿ
    ವಂದನೆಗಳು...

    ReplyDelete
  11. sir yestu anta nagodu 5 baari odiddene abba hotte novu baruvudonde baaki,istondella nimage hege holiyuttade

    ReplyDelete
  12. ಪ್ರಕಾಶಣ್ಣ,

    ಮೊದಲು ಚಪಾತಿಗೆ, ಆಮೇಲೆ ಸರಸತ್ತೆ ದೋಸೆಯಿಂದಾಗಿ ದೋಸೆಗೆ, ಈಗ ಏಲಕ್ಕಿಗೆ ಹೀಗೇ ಎಲ್ಲದಕ್ಕೂ ಸಂಚಕಾರ ತಂದರೆ ನಾವು ಮುಂದಿನ ಪದಾರ್ಥಗಳಿಗೆ ಪೇಟೆಂಟ್ ತಗೋಬೇಕಾಗೊತ್ತೆ ಅಷ್ಟೇ :) ಓದುತ್ತಾ ಓದುತ್ತಾ ಇದ್ದಂತೆ ನನ್ನ ಮೂಗಿನ ಮೇಲಿಟ್ಟಿದ್ದ ಕೈ ಬೆರಳು ತಕ್ಷಣ ಕೆಳಬಂತು :) (ಏಲಕ್ಕಿ ಬೆಳೆ ಏನೂ ತೆಗೀತಾ ಇರ್ಲಿಲ್ಲ :) ). ನಿಮ್ಮ ಹಾಸ್ಯ ಪ್ರಜ್ಞೆಗೆ ಎರಡು ಮಾತಿಲ್ಲ...

    ReplyDelete
  13. ನಾವೆಲ್ಲಾ ಇದಕ್ಕೆ "ಚಿನ್ನದ ಗಣಿ" ತೋಡೋದು ಅಂತಿದ್ವಿ :) "ಏಲಕ್ಕಿ" ಹೆಸ್ರು ಹೊಸ್ತು.. ನಿಮ್ಮ ಚಿತ್ರ ಸಂಗ್ರಹ ಚೆಂದದ ಬರಹಕ್ಕೆ ವಂದನೆಗಳು
    --
    ಪಾಲ

    ReplyDelete
  14. ಪ್ರಕಾಶ್ ಸರ್,
    ನೆನ್ನೆ ಶಿವೂ ಸರ್ ಬಳಿ ಮಾತನಾಡಿದಾಗ ಗೊತ್ತಾಗಿತ್ತು, ಆದರೆ ಯಾವ ವಿಚಾರ ಅಂತ ಹೇಳಬೇಡಿ, ಕುತೂಹಲ ಇರಲಿ ಅಂದಿದ್ದೆ. ಈಗ ಮುಂದಿನ ವಾರ ಯಾವಾಗ ಆಗುತ್ತೆ ಅಂತ ಕಾಯುತ್ತೇನೆ... ಎಂದಿನಂತೆ ಸೊಗಸಾದ ನಿರೂಪಣೆ...

    ReplyDelete
  15. ಪ್ರಕಾಶ,
    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಪ್ರತಿ ದಿನವೂ ನಾನು ಏಲಕ್ಕಿ ಬೆಳೆಗಾರರನ್ನು ಭೆಟ್ಟಿಯಾಗುತ್ತಲೇ ಇರುತ್ತೇನೆ. ಹೆಚ್ಚೇನು, ನಾನೂ ಸಹ ಏಲಕ್ಕಿ ಬೆಳೆಗಾರನೇ!

    ReplyDelete
  16. ಪ್ರಕಾಶ್ ಸಾರ್ ಏನಿದು... ಏನೇನು ಹುಡುಕಿ ತರುತ್ತೀರಿ ನೀವು ಅಂತೀನಿ... ಪ್ರತೀ ಸಾರಿಯೂ ಏನೊ ಒಂದು ಸ್ವಾರಸ್ಯವಿರುತ್ತದೆ... ನಮ್ಮ ಅಡ್ಡ ಹೆಸರು ಮೂಗಿ ಹಾಗಂತ ನಾವೇನು ಪಕ್ಕಾ ಏಲಕ್ಕಿ ಬೆಳೆಗಾರರಲ್ಲ ಬಿಡಿ ಹ ಹ ಹ...

    ReplyDelete
  17. ಸರ್,
    ಮೂಗಿನಲ್ಲಿ ಬೆರಳನ್ನು ಹಾಕಿ ತಿರುವುದನ್ನು "ಸ್ಕ್ರೂ ಡ್ರೈವರ್" ಎನ್ನುತ್ತಿದ್ದರು ನಮ್ಮ ಶಾಲೆಯಲ್ಲಿ ಮಾಸ್ತರರು. ನಾನು ಶಾಲೆಯಲ್ಲಿ ಓದುವಾಗ ನನ್ನ ಕ್ಲಾಸ್ ಮೇಟ್ ಒಬ್ಬನ ಮೂಗಿನ ಎರಡೂ ಹೊಳ್ಳೆಗಳಿಂದ ಧಾರಾಕಾರವಾಗಿ ಇಳಿಯುತ್ತಲೇ ಇರುತ್ತಿತ್ತು. ಅವನ ತಂದೆಯದ್ದು ದಿನಸಿ ಅಂಗಡಿಯೂ ಇದ್ದುದರಿಂದ ನಾವು "ಡಾಲ್ಡಾ" ಎಂದು ಹೆಸರಿಟ್ಟಿದ್ದೆವು!
    ನಮ್ಮ ಭಾರತೀಯರು ಸಾಂಭಾರು ಪದಾರ್ಥಗಳಿಗೆ ವಿಶ್ವಪ್ರಸಿದ್ಧ!
    ಅದರ ಗುಟ್ಟನ್ನು ನೀವು ಹೀಗೆಲ್ಲಾ ಬಹಿರಂಗಪಡಿಸಬಾರದಿತ್ತು!
    ಇದರ ಫೋಟೋ ತೆಗೆವುದು ಭಾಳ ಕಷ್ಟ! ಅದಕ್ಕಾಗಿ ನಿಮಗೆ ಅಭಿನಂದಿಸಲೇಬೇಕು.

    ReplyDelete
  18. ಕೌಂಡಿನ್ಯ...

    ಹೀಗೆಯೆ ಅಭಿಮಾನ..
    ಪ್ರೋತ್ಸಾಹವಿದ್ದರೆ..
    ಇನ್ನಷ್ಟು ಬರೆಯ ಬಲ್ಲೇನು...

    ನೀವು ಏಲಕ್ಕಿ ಬೆಳೆ

    ಮೆಚ್ಚಿದ್ದು ತುಂಬಾ ಸಂತೋಷವಾಯಿತು...

    ನಿಮ್ಮ ಅಭಿಮಾನಕ್ಕೆ.. ಪ್ರತಿಕ್ರಿಯೆಗೆ..

    ಧನ್ಯವಾದಗಳು...

    ReplyDelete
  19. ತೇಜಸ್ವಿನಿಯವರೆ...

    ನಾವು ಇದನ್ನು ಬಹಳ ಸಹಜವಾಗಿ ಮಾಡಿಬಿಡುತ್ತೇವೆ..
    ಅಲ್ಲವಾ..?

    ಇದಕ್ಕೆ
    ಖಿನ್ನತೆಯೂ ಕಾರಣವಿರಬಹುದಂತೆ..!

    ಸಿರ್ಸಿಯ ಒಬ್ಬ ಡಾಕ್ಟರಿಗೆ ಈ ಅಭ್ಯಾಸವಿತ್ತು..
    ಅವರ ಔಷಧದಲ್ಲಿ "ಏಲಕ್ಕಿ" ಇರುತ್ತದೆ..
    ಹಾಗಾಗಿ ಜಲ್ದಿ ವಾಸಿಯಾಗುತ್ತದೆ
    ಎಂದು ನಾವೆಲ್ಲ ನಗುತ್ತಿದ್ದೇವು..

    ಏಲಕ್ಕಿ ಬೆಳೆ
    ನಿಮಗೆ ಇಷ್ಟವಾಗಿದ್ದಕ್ಕೆ
    ಧನ್ಯವಾದಗಳು...

    ReplyDelete
  20. ಪಾಲಚಂದ್ರರವರೆ..

    ಏಲಕ್ಕಿ ಚಿನ್ನದ ಬೆಳೆ ಅಂತಾರೆ..
    ಒಂದೇ ಆಯಿತಲ್ಲ...!

    ಒಂದು ವ್ಯಕ್ತಿಯನ್ನು ಐದು ನಿಮಿಷ ನೋಡುತ್ತಾ ಇರಿ..
    ಒಮ್ಮೆ ಮೂಗಿನ ಮೇಲೆ ಅವನ ಬೆರಳು ಹೋಗೇ ಹೋಗುತ್ತದೆ..!

    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  21. ಶ್ರೀನಿಧಿಯವರೆ..

    ನಾಗುವಿನ ಸಹವಾಸ ದೋಷವೆ..?

    ಅವನ ಸಹವಾಸ "ದೋಷ" ಖಂಡಿತಾ ಅಲ್ಲ..

    ಅವನ ಬಗೆಗೆ ಇನ್ನೂ ಹಲವು ವಿಷಯಗಳಿವೆ..

    ಬರೆಯಲೇ ಬೇಕಿವೆ..

    ಮುಂದೊಮ್ಮೆ ಬರೆಯುವೆ...

    ಇನ್ನು ಶಿವು ಅವರಿಗೆ..

    ನನ್ನ ಸಹವಾಸ "ದೋಷ" ಅವರಿಗೆ ಆಗಿಬಿಟ್ಟಿದೆ...!
    ಪಾಪ ಅವರು ಫೋಟೊಗ್ರಫಿ ಅದು ಇದು ಅಂತ ಓಡಾದುತ್ತಿದ್ದರು..
    ಸಂಗಡ ಈಗ..
    ಭೂಪಟ, "ಏಲಕ್ಕಿ ಬೆಳೆ" ಅಂತೆಲ್ಲ ಅವರ ವೇಳೆಯನ್ನೂ ಹಾಳುಮಾಡುತ್ತಿರುವೆ...!

    ಹ್ಹಾ...ಹ್ಹಾ..!

    ವಂದನೆಗಳು...!

    ReplyDelete
  22. ರಾಜೇಶ್...

    ನೀವೂ ಕೂಡ ಏಲಕ್ಕಿ ಬೆಳೆಗಾರರೆಂದು ಯಾರೋ ಹೇಳಿದ ನೆನಪು..
    ನಿಜವಾ..?

    ಏಲಕ್ಕಿ ಬೆಳೆಗಾರನ ಬಗೆಗೆ ಕಾಲೇಜಿನ ದಿನಗಳಲ್ಲಿ ಕವನ ಕೂಡ ಬರೆದಿದ್ದೆ..
    ಸ್ವಲ್ಪ ನೆನಪಿದೆ..
    ಮುಂದೊಮ್ಮೆ ಬರೆಯುವೆ..!

    ನಿಮ್ಮ ಪ್ರೋತ್ಸಾಹ ಹೀಗೇಯೇ ಇರಲಿ..

    ದ್ಶನ್ಯವಾದಗಳು...

    ReplyDelete
  23. ಸುನಾಥ ಸರ್...

    ನೀವು ಏಲಕ್ಕಿ ಬೆಳೆಗಾರರಾ..?

    ನಿಮ್ಮ ಪ್ರತಿಕ್ರಿಯೆಗೆ ಉತ್ತರ ಕೊಡುತ್ತ ನಾನೂ ಕೂಡ ನಿಮ್ಮ ಸಂಗಡ ಸೇರಿದೆ...

    ಹ್ಹಾ..ಹ್ಹಾ..

    ಎಲ್ಲೆಲ್ಲೂ ಸಮ್ರುದ್ಧವಾದ ಏಲಕ್ಕಿ ಬೆಳೆ..

    ಮಂತ್ರಿಗಳು ಖುಷಿ ಪಡಬಹುದೇನೋ..!

    ನಿಮ್ಮ ಪ್ರೋತ್ಸಾಹ ಹೀಗೆಯೆ ಇರಲಿ
    (ಸರ್.. ಏಲಕ್ಕಿ ಬೆಳೆಗಲ್ಲ..!)

    ನನ್ನ ಮೇಲೆ..
    ಲೇಖನಗಳ ಮೇಲೆ..!

    ಧನ್ಯವಾದಗಳು...

    ReplyDelete
  24. ಪ್ರಭು..

    ಈ ಆರ್ಥಿಕ ಸಂಕಷ್ಟದಲ್ಲಿ..
    ಕೆಲಸ ಕಡಿಮೆ ಇರುವಾಗ..
    ಈ ರೀತಿ ಬರೆದು ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳುವದು ಒಳ್ಳೆಯದು..

    ಬ್ಲಾಗಿನಲ್ಲಿ ಬರೆಯುವದು ಮನಸ್ಸಿಗೆ ಖುಷಿಯಂತೂ ತರುತ್ತಿದೆ..
    ನಿಮ್ಮ ಪ್ರತಿಕ್ರಿಯೆಯಿಂದಾಗಿ ಇನ್ನೂ ಬರೆಯೋಣ ಅನಿಸುತ್ತದೆ....

    ಪ್ರೋತ್ಸಾಹ, ಅಭಿಮಾನಕ್ಕೆ
    ಧನ್ಯವಾದಗಳು...

    ReplyDelete
  25. ಮಲ್ಲಿಕಾರ್ಜುನ್..

    ಎರಡೂ ಹೊಳ್ಳೆಗಳಿಂದ ಧಾರಾಕಾರವಾಗಿ ಬರುತ್ತಿದ್ದರಿಂದ..
    ಡಾಲ್ಡಾ ಎಂಬ ಹೆಸರು..

    ವಾವ್..! ಅದ್ಭುತವಾಗಿದೆ ಸಾರ್..!

    ಈ ಫೋಟೊ ತೆಗೆಯುವದು ಬಹಳ ಕಷ್ಟವಾಯಿತು..
    ಮೊದಲ ಮೂರುದಿನ.."೪೦೦" ಫೋಟೊ ತೆಗೆದರೂ ಸಿಕ್ಕಿದ್ದು
    ಎರಡೇ ಫೋಟೊ...

    ನಾಲ್ಕನೆಯದಿನ ಮೆಜೆಸ್ಟಿಕ್ ಕಡೆ ಹೋದೆ ನೋಡಿ.. ವಾವ್..!
    ಹುಲುಸಾದ ಯಾಲಕ್ಕಿ ಬೆಳೆ..! ಮನಸ್ಸಿಗೆ ಸಂತೋಷವಾಯಿತು...

    ಇನ್ನೂ ಕೋರಮಂಗಲ, ಜಯನಗರ, ಬ್ರಿಗೇಡ್ ರೋಡ್ ಕಡೆ ಹೋಗಿಲ್ಲ...

    ನಾವು ಫೋಕಸ್ ಮಾಡಿ ತೆಗೆಯುವಷ್ಟರಲ್ಲಿ ..
    "ತಟಕ್ಕನೆ" ತೆಗೆದು ಬಿಡುತ್ತಾರೆ..!

    ಆಮೇಲೆ ನಮ್ಮ "ಶಿವು" ಬಳಿ ಸಂಕಷ್ಟ ಹೇಳಿ ಕೊಂಡೆ...

    ಇಬ್ಬರೂ... ರಾಜಾಜಿನಗರ, ಮಲ್ಲೇಶ್ವರಮ್, ರೇಲ್ವೆ ನಿಲ್ದಾಣ ತಿರುಗಿ..
    ಒಂದಷ್ಟು ಸಂಗ್ರಹ ಮಾಡಿದೆವು...

    ಅದೆಲ್ಲಾ

    ಮುಂದಿನ ಸಂಚಿಕೆಯಲ್ಲಿ...

    ಧನ್ಯವಾದಗಳು...

    ReplyDelete
  26. Hi Prakashanna,

    Iduvaregoo nanage ee thara vishaya noo iratte antha gotte iralilla... Nakkoo nakkoo sustayitu.

    Hosa vara / Tingala aarambha naguvinda shuruvagide..

    1 sec...., naanoo elakki bele tegayadu try madide...ee sala bele swalpa kammi...!!

    Thanks.
    Prashanth Bhat

    ReplyDelete
  27. ಸಕತ್ತಾಗಿದೆ ಮಾರಾಯ್ರೆ. ನಿಮ್ಮ ಲೇಖನ ಓದಿ ಏನೇನೋ ನೆನಪಿಗೆ ಬಂತು. ದೇವೇಗೌಡರು ಮೂಗಿನಲ್ಲಿ ಗಣಿಗಾರಿಕೆ ನಡೆಸುತ್ತಾರೆ ಎಂದು ದುಂಡಿರಾಜು ಚುಟುಕ ಬರೆದಿದ್ದರು. ಮಂಡ್ಯದ ಬಳಿಯ ದೇಶವಳ್ಳಿಯ ನನ್ನ ಸ್ನೇಹಿತನೊಬ್ಬ ಒಂದು ಘಟನೆ ಹೇಳುತ್ತಿದ್ದ. ಅವನ ಸ್ಕೂಲಿಗೆ ಬರುತ್ತಿದ್ದ ಹೆಚ್ಚಿನ ಮಕ್ಕಳು ಯಾವಾಗಲೂ ಮೈ ಕೆರೆದುಕೊಳ್ಳುತ್ತಾ, ತಿಕ್ಕಿಕೊಳ್ಳುತ್ತಾ, ಮೂಗು ಕಿವಿಯಲ್ಲಿ ಬೆರಳಾಡಿಸುತ್ತಾ ಇರುತ್ತಿದ್ದವಂತೆ. ಆಗ ಅವರ ಮೇಸ್ಟರು 'ಏನ್ರಪ್ಪಾ, ನೀವೆಲ್ಲಾ ಗುಳಿಗಿ ಫ್ಯಾಕ್ಟರಿ ಇಟ್ಟಿದ್ದೀರಾ ಹೇಗೆ? ಯಾವಾಗಲೂ ಗುಳಿಗಿ ಉತ್ಪತ್ತಿ ಮಾಡ್ತಾನೇ ಇರ್ತೀರಿ.' ಎನ್ನುತ್ತಿದ್ದರಂತೆ!

    ReplyDelete
  28. ಪ್ರಕಾಶಣ್ಣಾ...

    ಏಲಕ್ಕಿ ಬಗ್ಗೆ ಅಂದ್ಕುಳೆ ಎಂತೇನ ಅಂದ್ಕಂಡಿ.
    ಇಶ್ಶಿಶ್ರೋ...ರಾಮಾ... :-)

    ಬಿಸಿಬೇಳೆಬಾತ್ ಬಗ್ಗೆ ಓದಿದಾಗ ನಗು ಜೊತೆ ವಾಂತಿನೂ ಬಂದಂಗೆ ಆಗಿ ಯಾಲಕ್ಕಿ ತಿಂದಿದ್ನಾಗಿತ್ತು. ಈಗ ಈ ಬರಹ ಓದ್ಕ್ಯಂಡು ನಗು ಜೊತೆ ಮತ್ತೆ ಹೊಟ್ಟೆನೂ ತೊಳಸ್ತಾ ಇದ್ದು. ಯಾಲಕ್ಕಿ ತಿಂಬನ ಅಂದ್ರೆ ಅದೂ ಆಗ್ತಾ ಇಲ್ಲೆ....
    :-) :-)
    ದೇವ್ರೇ ಪರಮಾತ್ಮಾ...

    ReplyDelete
  29. if u r giving nick name for all our items how can we eat that items .. with that enjoyment??? :):) :):)
    any way u r post is good... continue like this :):) very funny:):)

    ReplyDelete
  30. ಅಯ್ಯೋ ರಾಮಾ,
    ಎಂಥಾ ಕಥೆ ಇದು? ನಾನು ತಲೆ ಬರೆಹ ನೋಡಿ ಇದೇನಪಾ, ಈ ಸಲ ಪ್ರಕಾಶಣ್ಣಾವ್ರು ಎಂತದೋ ಸೀರಿಯಸ್ ಆಗಿ ಬರೆದಾಂಗಿದ್ದು,ಏಲಕ್ಕಿ ಬೆಳೆಗಾರರ ಕಷ್ಟದ ಬಗ್ಗೆ ಹೇಳಿ ಓದಲೆ ಹಿಡದ್ರೆ ..... ಹಿ ಹಿ ಹಿ ....ಅಲ್ಲಾ ಎಲ್ಲಿಂದ ಒಂದೊಂದೇ ಹೊಳೀತು ನಿಮಗೆ ಅಂತ !!ಓದ್ತಾ ಓದ್ತಾ ನಾನೂ ಒಂದ್ಸಲ ಏಲಕ್ಕಿ ಬೆಳೆ ತೆಗೆಯಲೆ ಟ್ರೈ ಮಾಡಿದ್ದು ಮಾತ್ರ ಖರೆ !ಅಭ್ಯಾಸ ಇಲ್ಲದೇ ಇದ್ದವೂ ಒಂದ್ಸಲ ಪ್ರಯತ್ನ ಮಾಡ ತರ ಬರದ್ರಿ ಮಾರಾಯ್ರೆ ನೀವು!ಹಾ ಹಾ ಹ್ಹಾ..

    ReplyDelete
  31. ಪ್ರಕಾಶ್ ಸರ್,

    ಬರಹ ತುಂಬಾ ಚೆನ್ನಾಗಿದೆ....ಮತ್ತದೇ ಹಾಸ್ಯಮಯ ಧಾಟಿಯಲ್ಲಿ....

    ಅದೆಲ್ಲಕ್ಕಿಂತ ಇಷ್ಟವಾದದ್ದು....ನಿಮ್ಮ ಹೊಸ ಹೊಸ ಹೆಸರುಗಳನ್ನು ಹುಡುಕುವ ನಿಮ್ಮ ಶೈಲಿ.....

    ಈ ವಿಚಾರವನ್ನು ನೀವು ನಮ್ಮ ಮನೆಯಲ್ಲಿ ಹೇಳಿದಾಗ ನಾನು ಮತ್ತು ಹೇಮಶ್ರೀ ಇಬ್ಬರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೆವು...

    ನೀವು ಇದನ್ನು ನನ್ನ ತಲೆಗೆ ಕಟ್ಟಲು ಬಂದಿರಿ....
    ನನ್ನ ಒಂದು ಜೋಳಿಗೆಯಲ್ಲಿ ಟೋಪಿಗಳ ಸಂಗ್ರಹಣೆ, ಮತ್ತೊಂದು ಜೋಳಿಗೆಯಲ್ಲಿ ಭೂಪಟಗಳ ಭಾರವಿದೆ...ಅದರ ಜೊತೆಗೆ ಏಲಕ್ಕಿಯ ಜೋಳಿಗೆಯನ್ನು ಹೇಗೆ ಹೊರಲಿ....ಹಾಗೆ ಒಪ್ಪಿಕೊಂಡಾಗ ಮೂರಕ್ಕೂ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ....

    ಅದಕ್ಕೆ ತಲೆ ನಿಮ್ಮದು, ತೆಲೆಯೊಳಗಿನ ಇಂಥ ವಿಭಿನ್ನ [ನಗು]ಅಲೋಚನೆಗಳು ನಿಮ್ಮದೇ ಆಗಿರುವಾಗ ನೀವೇ ಇದನ್ನು ಮಾಡಬೇಕು ಮಾಡಿದ್ದೀರಿ....ಚೆನ್ನಾಗಿದೆ....ಇದಕ್ಕೆ ನನ್ನ ಕಡೇಯಿಂದ ಆಗುವ ಆಳಿಲು ಸೇವೆಯನ್ನು ನಾನು ಮಾಡುತ್ತೇನೆ..
    ಈ ರೀತಿ ನಾವು ಒಟ್ಟಿಗೆ ಈ ಕೆಲಸದಲ್ಲಿ ತೊಡಗಿಕೊಂಡಾಗ ಆ ಸಮಯದಲ್ಲಿ ಸಿಗುವ ಮಜವನ್ನು ಅನುಭವಿಸಿದ್ದೇನೆ....ಮುಂದೆಯೂ ಅದನ್ನು enjoy ಮಾಡಲು ಸಿದ್ದನಿದ್ದೇನೆ.....ಮುಂದುವರಿಸಿ....

    ReplyDelete
  32. ಪ್ರಾಶಾಂತ್..

    ಇದು ನನ್ನ ಅಕ್ಕನ ಮಗನ ಹೆಸರೂ ಕೂಡ..

    ನಿಮ್ಮ ಪ್ರತಿಕ್ರಿಯೆ ಓದಿ ನನಗೂ ..
    ನಗು ತಡೆಯಲಾಗಲಿಲ್ಲ...

    "ನಾನು ಬೆಳೆ ತೆಗೆಯಲು ಟ್ರೈ ಮಾಡ್ದೆ..
    ಬೆಳೆ ಕಮ್ಮಿ ಇತ್ತು...!"

    ಹ್ಹಾ..ಹ್ಹಾ...!

    ನೀವು ನಗುವಿನೊಂದಿಗೆ ..
    ಹೊಸ ವಾರ, ತಿಂಗಳು ..
    ಶುರು ಮಾಡಿದ್ದೀರಾ..

    ಶುಭವಾಗಲಿ...

    ಪ್ರೋತ್ಸಾಹ ಹೀಗೇಯೇ ಇರಲಿ..

    ಧನ್ಯವಾದಗಳು..

    ReplyDelete
  33. ಸತ್ಯನಾರಾಯಣ ಸರ್...

    ನೀವು ನನ್ನ ಬ್ಲಾಗ್ ಅನುಸರಿಸಿ..
    ಪ್ರೋತ್ಸಾಹ ಕೊಡುತ್ತಿರುವದು ನನಗೆ ಹೆಮ್ಮೆಯ ವಿಷಯ..
    ಧನ್ಯವಾದಗಳು...

    ನಾನು ನಿಮ್ಮ ಬ್ಲಾಗಿಗೆ ಪ್ರತಿಕ್ರಿಯೆ ಕೊಡಲು ಹೋದರೆ..
    ತಾಂತ್ರಿಕ ದೋಷದಿಂದ ಕೊಡಲಾಗಲಿಲ್ಲ..

    ನಿಮ್ಮ ಪುಸ್ತಕಗಳನ್ನು "ಮಲ್ಲಿಕಾರ್ಜುನರಿಂದ"
    ತರಿಸಿಕೊಂಡು ಓದುವೆ...

    ನಿಮ್ಮ ಹಾಸ್ಯಮಯ ಪ್ರತಿಕ್ರಿಯೆ ನನಗೆ ಸ್ಪೂರ್ತಿ ತಂದಿದೆ..

    ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..
    ಧನ್ಯವಾದಗಳು..

    ReplyDelete
  34. ಶಾಂತಲಾ...

    ನೀವೆಷ್ಟು ಖುಷಿ ಪಟ್ಟೀದ್ದೀರೆಂದು..
    ನಿಮ್ಮ ಪ್ರತಿಕ್ರಿಯೆಯಲ್ಲಿಯೇ ಗೊಟ್ಟಾಗ್ತಾ ಇದೆ...

    ಅಂದ ಹಾಗೆ ನೀವು ಏಲಕ್ಕಿ ಬೆಳೆಗಾರರೇ..?

    ನನಗೀಗ ಕಾರಿನಲ್ಲಿ ಹೋಗುವಾಗಲೆಲ್ಲ ಬರೀ..
    ಏಲಕ್ಕಿ ಬೆಳೆಗಾರರೇ ಕಾಣ್ತಾ ಇದ್ದಾರೆ..

    ನನ್ನ ಮಡದಿ ಇದರ ಬಗೆಗೆ ಇಂದು ಚೆನ್ನಾಗಿ ಬಯ್ದಿದ್ದಾಳೆ..
    ಅವಳಿಗೂ ಬರೀ "ಅವರೇ" ಕಾಣ್ತಾ ಇದಾರಂತೆ...

    ಏಲಕ್ಕಿ ಬೆಳೆ ನಿಮಗೆ ಸಂತೋಷ ತಂದಿದ್ದರೆ..
    ನನ್ನ ಬರಹ ಸಾರ್ಥಕ ಅಲ್ಲವಾ..?

    ಪ್ರೋತ್ಸಾಹ ಹೀಗೆಯೇ ಇರಲಿ...

    ಧನ್ಯವಾದಗಳು...

    ReplyDelete
  35. ರೂಪಾರವರೆ..

    ನನ್ನ ಬ್ಲಾಗಿಗೆ ಸ್ವಾಗತ...

    ಏನು ಮಾಡೋಣ ಹೇಳಿ..
    ನನಗೆ ಅಂಥಹ ವಿಷಯಗಳೇ ಕಾಣುತ್ತಿದೆ..
    ಅದನ್ನ ನೀವುಗಳೂ ಇಷ್ಟ ಪಡುತ್ತಿದ್ದೀರಿ..

    ಮೊನ್ನೆ ನನ್ನ ಅಭಿಮಾನಿಯೊಬ್ಬರು

    "ಸರಸತ್ತೆ ಬಗ್ಗೆ ಇನ್ನಷ್ಟುಬರೆಯಿರಿ..!" ಅನ್ನುತ್ತಿದ್ದರು..!

    ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

    ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..

    ReplyDelete
  36. ಚಿತ್ರಾ...

    ನನಗೆ ಪ್ರತಿ ಲೇಖನ ಬರೆದಾಗಲೂ ಸಣ್ಣ ಅಳುಕು ಇರುತ್ತದೆ..
    ನೀವೆಲ್ಲ ಮೆಚ್ಚದಿದ್ದರೆ..ಅಂತ..!

    ಈ ಸಾಹಿತ್ಯ ನನಗೆ ಹೊಸದು..
    ಹಾಗಾಗಿ ಇರಬಹುದು ಅಂದು ಕೊಂಡಿದ್ದೇನೆ...

    ಬಹುಷಃ ಆರ್ಥಿಕ ಸಂಕಷ್ಟದ ಕಾರಣ ಓದುಗರಿಗೆ
    ಹಾಸ್ಯ ಲೇಖನ ಬೇಕೇನೊ ಅನಿಸುತ್ತದೆ..

    ಹಾಸ್ಯ ಎಷ್ಟು ಅಂತ ಬರೆಯಲಿ..?

    ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..

    ಅತೀ ಶೀಘ್ರದಲ್ಲಿ ನುರಿತ..
    "ಏಲಕ್ಕಿ ಬೆಳೆಗಾರರಾಗಿ" ಎಂದು ಹಾರೈಸುವೆ...

    ವಂದನೆಗಳು...

    ReplyDelete
  37. ಶಿವು ಸರ್...

    ನಾನು ಮೂರುದಿವಸ ಒದ್ದಾಡಿ ೪೦೦ ಫೋಟೊ ತೆಗೆದೆ..
    ಸಿಕ್ಕ ಏಲಕ್ಕಿ ಬೆಳೆಗಾರರು ಸಿಕ್ಕಿದ್ದು ಎರಡೆ ರೈತರು..

    ನೀವು ಖಂಡಿತ ಸಹಾಯ ಮಾಡಬಲ್ಲೀರಿ..
    ಒಪ್ಪಿಕೊಂಡಿದ್ದು ಖುಷಿಯಾಯಿತು...

    ನಾವು ಅಂದು ಓಡಾದಿದ ಹಾಸ್ಯ ಸಂಗತಿಗಳನ್ನು ಬ್ಲಾಗಿನಲ್ಲೇ ಬರೆಯುವೆ...

    ನಿಮ್ಮ ಪ್ರೋತ್ಸಾಹ, ಅಭಿಮಾನ ಹೀಗೆಯೇ ಇರಲಿ..

    ನಿಮ್ಮ ಶ್ರಮ, ಸಮಯಕ್ಕೆ ನಾನೇನು ಕೊಡಲು ಸಾಧ್ಯ..?

    ಧನ್ಯವಾದಗಳು.. ಶಿವು...

    ReplyDelete
  38. ಇಲ್ಲೇ ಬಹಳಷ್ಟು ಮಂದಿ "ಉತ್ತಮ ಏಲಕ್ಕಿ ಬೆಳೆಗಾರರಿರುವುದು" ಬೆಳಕಿಗೆ ಬಂದಿದೆ!! ಏಕೆ ಸಂದರ್ಶನ ಮಾಡಬಾರದು ಪ್ರಕಾಶಣ್ಣ!!!

    ReplyDelete
  39. ನಿತಿನ್...

    ನನಗೆ ಮಾಹಿತಿಗಿಂತ.."ರೂಪದರ್ಶಿ"ಗಳು ಬೇಕಾಗಿತ್ತು...!!!

    ಒಳ್ಳೆಯ ಐಡಿಯಾ.. ಕೊಟ್ಟಿದ್ದೀರಿ...

    ಹ್ಹಾ...ಹ್ಹಾ....!

    ಅವರ ಸಂದರ್ಶನದ ಸಂಗಡ ..
    ವಿವಿಧ ಪೋಸ್ ಫೋಟೊಗಳು ಬೇಕಾಗಿತ್ತು...!

    ಹಾಗೆಯೇ ಈ ವಿಷಯ ಇಲ್ಲಿಗೆ ನಿಲ್ಲುವದಿಲ್ಲ...

    ಎಪ್ರಿಲ್ ಒಂದರಂದು..

    "ಏಲಕ್ಕಿಯ ಉಪಬೆಳೆಗಳು" ಬರಲಿದೆ...

    ಅದಕ್ಕೂ ರೂಪದರ್ಶಿಗಳು ಬೇಕಿತ್ತು...

    ಯಾರದರೂ ..

    ಆಸಕ್ತರು .. ಮೊಡೆಲ್ ಗಳು

    (ಅನುಭವ ಖಂಡಿತ ಬೇಕಿಲ್ಲ)

    ಸಂಪರ್ಕಿಸಿ...!

    ಪ್ರಕಾಶಣ್ಣ...!!

    ಧನ್ಯವಾದಗಳು ..ನಿತಿನ್..!

    ReplyDelete
  40. Good one ...interesting. I think I will be a regular visitor to your blog.

    Regards
    Ramesh Bhat

    ReplyDelete
  41. ರಮೇಶ್...

    ನನ್ನ ಬ್ಲಾಗಿಗೆ ಸುಸ್ವಾಗತ..

    ನನ್ನ ಹಳೆಯ ಲೇಖನಗಳನ್ನೂ ಓದಿ....
    ನಿಮ್ಮ ಪ್ರತಿಕ್ರಿಯೆ ನನಗೆ ಬಹಳ ಅಮೂಲ್ಯ...

    ನೀವು ಸಂತೋಷ ಪಟ್ಟಿದ್ದು..
    ಬಹಳ ಖುಷಿಯಾಯಿತು....

    ಹೀಗೆಯೇ ಬರುತ್ತಾ ಇರಿ..
    ಧನ್ಯವಾದಗಳು..

    ReplyDelete
  42. Wow....picture sometime speak louder than words....:)

    ReplyDelete
  43. thank.. you...

    SUJAATA..

    thank you very much...

    Do you know kannadaa....?

    ReplyDelete
  44. Ha Ha Ha...
    Chennagiddu Prakash...
    'Elakki beLegaarara Sangha' maadadeya.. ;)

    ReplyDelete
  45. ಪೂರ್ಣಿಮಾ...

    ಲಂಡನ್ ನಲ್ಲಿ ಹೇಗಿದೆ ಏಲಕ್ಕಿ ಬೆಳೆ...?

    ನನಗೆ ತಿಳಿದ ಹಾಗೆ ಪಾಶ್ಚ್ಯಾತ್ಯರು "ಏಲಕ್ಕಿ ಬೆಳೆ"
    ಬೆಳೆಯುವದು ಕಡಿಮೆ...

    ನೀವು ಹೇಳಿದ ಹಾಗೆ ಏಲಕ್ಕಿ ಬೆಳೆಗಾರರ ಸಂಘ ಮಾಡಿದರೆ..

    ಸಭೆಯಲ್ಲಿ ತೂಕಡಿಸುವ ..
    ರಾಜಕೀಯ ನಾಯಕರೇ ..
    "ಅಧ್ಯಕ್ಷರಾಗುತ್ತಾರೆ...!"

    ಹೀಗೇಯೆ ಬರುತ್ತಾ ಇರಿ...

    ಧನ್ಯವಾದಗಳು...

    ReplyDelete
  46. ಪ್ರಕಾಶ್ ರವರೇ,

    ಹೀಗೊಮ್ಮೆ ಗೆಳೆಯರೊಬ್ಬರು, ಹಾಸ್ಯ ಹೇಗೆ ಹುಟ್ಟುತ್ತದೆ ಎಂದು ಕೇಳಿದ್ದರು. ನಿಮ್ಮ ಬ್ಲಾಗೇ ಉತ್ತರ.
    ದೈನಂದಿನ ಜೀವನದಲ್ಲಿ ಕಳೆದುಹೋಗಿರುವ ಅಥವಾ ಗಮನಕ್ಕೇ ಬಾರದ ವಿಷಯವೊಂದರಲ್ಲೂ ಹಾಸ್ಯ ಹುಟ್ಟಿಸುವ ಈ ನಿಮ್ಮ ಪ್ರತಿಭೆಗೆ ಶರಣು.
    ಕೆಲಸದಲ್ಲಿ ಹೈರಾಣಾಗಿದ್ದ ದಿನದ ಕೊನೆಗೆ ಈ ನಿಮ್ಮ ಹಾಸ್ಯದ ಟಾನಿಕ್ ಗೆ ಮತ್ತೊಮ್ಮೆ ಧನ್ಯವಾದಗಳು.

    ReplyDelete
  47. ಪ್ರಕಾಶ್ ಸರ್..
    'ನಾನು ನಗಲ್ಲ ಅಂತ ನಿಮಗೆ ಪ್ರಾಮೀಸ್ ಮಾಡಿದ್ದೀನಿ. ಹಾಗಾಗಿ ಬಂದ ನಗೂನ ಹಾಗೇ ತಡಕೊಂಡಿದ್ದೀನಿ' ...ನಿಮ್ಮ ಸರಸತ್ತೆ ಇಂದಿನವರೆಗೂ ಬಹುತೇಕ ಎಲ್ಲಾ ಬರಹಗಳು ಹೆಣವನ್ನೂ ನಗಿಸುವಂತಿದ್ದವು. ನೀವು ಏಲಕ್ಕೆ ಬೆಳೆಗಾರರನ್ನು ಹುಡುಕಾಕೆ ಹೊರಟಾಗಲೇ..ಏನಾದ್ರೂ ಕಿತಾಪತಿ ಇದೆ ಅಂದುಕೊಂಡಿದ್ದೆ. ಆದರೆ ಈ ಅಡ್ಡಹೆಸರುಗಳು ಹೇಗೇ ಹೊಳಿತಾವೆ ಅಂತ!
    ನಿಮ್ಮ ತಲೆಗೆ ಕೊಡಬೇಕು..???!! ಪೆಟ್ಟಲ್ಲ..ಗಿಫ್ಟು..!
    ಯಾವತ್ತಿನಂತೆ..ಇಂದಿನ ಬರಹನೂ ಅಚ್ಚರಿಯಿಂದ ಓದುವಂತೆ ಮಾಡಿದೆ, ಖುಷಿಗೊಳಿಸಿದೆ..ಬಾಸ್ ಮುಂದೆ ನಿತ್ಯ ಸಿಡ ಸಿಡ ಅನ್ನೋ ನನ್ನಂಥವರ ಮುಖದಲ್ಲಿ ಒಂದಿಷ್ಟು ನಗು ತರಿಸಿದೆ, ಮನಸ್ಸು ನಿರಾಳವಾಗಿಸಿದೆ..ಮತ್ತೇನು ಬರೀತಾರೆ? ಯಾವಾಗ ಬರೀತಾರೆ ಅಂತ ಕುತೂಹಲದಿಂದ ಕಾಯುವಂತೆ ಮಾಡಿದೆ...
    ಪ್ರೀತಿಯ ಸರ್..ಹೀಗೆ ನಗಿಸುತ್ತಿರಿ..ನಕ್ಕು ನಲಿಸಿ. ಆದರೆ ನಾನು ಏಲಕ್ಕಿ ಬೆಳೆಗಾರಳು ಅಲ್ಲ!

    ಪ್ರೀತಿಯೊಂದಿಗೆ,
    ಚಿತ್ರಾ

    ReplyDelete
  48. ನಮಸ್ಕಾರ ಸರ್‌, ಏಲಕ್ಕಿ ಬೆಳೆಗಾರರು ಲೇಖನ-ಚಿತ್ರಮಾಲೆ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಇದೆ. ಏಕೆಂದರೆ, ಎಲ್ಲರೂ ಒಂದಲ್ಲಾ ಒಮ್ಮೆ ಏಲಕ್ಕಿ ಬೆಳೆಗಾರರು !!!! ಹಹ್ಹಹ್ಹಹ್ಹಾ....

    ReplyDelete
  49. ಸಾರ್ ನಾನು ನಿಮ್ ಲೇಖನ ಓದ್ತಾ ಓದ್ತಾ ನಾಲ್ಕು ಸಲ ಏಲಕ್ಕಿ ಬೆಳೆ ತೆಗೆದೆ ... ಇನ್ನು ನಿಮ್ಮ ಎಲ್ಲ ಕಾಮೆಂಟ್ಸ್ ಓದೋಕೆ ಕುಳಿತರೆ ಏನ್ ಆಗಬಹುದು ನೀವೇ ಯೋಚನೆ ಮಾಡಿ !!!

    ReplyDelete
  50. ಸಾರ್..ಹ ಹಹ ಹಹಹ......ಸಾರ್ ಹೀಗೆ ತಿನ್ನೋ ಪದಾರ್ಥದ ಹೆಸ್ರುಗ್ಳು ಅನರ್ಥ ಮಾಡ್ತಿದ್ರೆ ನಾವು ತಿನ್ನೋದ್ ಏನು ಸಾರ್??!!!
    ನಮ್ಮ ಆಫೀಸಿನ clerk ಭಾರಿ ಬೆಳೆಗಾರರೆ...ಅವ್ರ ಕೈಲಿ ಏನಾದ್ರು paper ಇಸ್ಕೊಳುವಾಗ ನನ್ನ ಪಾಡು ದೇವ್ರಿಗೆ ಗೊತ್ತು..

    ReplyDelete
  51. ಪ್ರಕಾಶಣ್ಣ

    ನಿಮ್ಮ ಕಾಲೇಜು ದಿನಗಳಲ್ಲಿ ಸಕ್ಕತ್ತಾಗಿ ಆಟಾಡಿದ್ದೀರ. ಒಂದೊಂದು ಸಂಭಾಷಣೆ ನಗು ಮೂಡಿಸುತ್ತೆ. ನಕ್ಕು ನಕ್ಕು ಸಾಕಾಯಿತು..

    "ಏಲಕ್ಕಿ" concept ಸೂಪರ್..

    ReplyDelete
  52. ವಿನುತಾರವರೆ...

    ನಾನು "ಪ್ತ್ರಾಣೇಶ್" ಅವರ ಅಭಿಮಾನಿ..
    ಅವರ "ಸೀಡಿ"ಗಳು ಸಿಗುತ್ತವೆ ಒಮ್ಮೆ ನೋಡಿ..

    ಸರಳವಾದ ವಿಷಯ ಇಟ್ಟುಕೊಂಡು
    ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಾರೆ..

    ನನ್ನ ಬರಹಗಳಿಂದ ನಿಮಗೆ ನಗು ಬಂದಿದ್ದರೆ..
    ನನಗೆ "ಸಾರ್ಥಕ" ಭಾವನೆ...

    ನಿಮ್ಮ ಪ್ರೋತ್ಸಾಹ .. ಅಭಿಮಾನ...
    ನಗು.. ಯಾವಾಗಲೂ ಹೀಗೇಯೇ ಇರಲಿ...

    ಪ್ರತಿಕ್ರಿಯೆಗೆ ಧನ್ಯವಾದಗಳು...
    ( plz read my old articles..)

    ReplyDelete
  53. ಚಿತ್ರಾ...

    ಈ ಆರ್ಥಿಕ ಮುಗ್ಗಟ್ಟಿನಿಂದಾಗಿ..

    ಎಲ್ಲರಿಗೂ ಸಮಸ್ಯೆ ಇದೆ...

    ಕೆಲಸದ ಒತ್ತಡದಲ್ಲೂ...
    (ನಗಲ್ಲ ಅಂತ ಪ್ರಾಮಿಸ್ ಮಾಡಿದಾಗ್ಲೂ)
    ಬರಹ ಓದಿ ನಗು ಬಂತಲ್ಲ...

    ನನಗಂತೂ ಖುಷಿಯಾಯ್ತು..

    ನಿಮ್ಮ ಬಾಸ್ ನ "ಏಲಕ್ಕಿ ಬೆಳೆಗಾರನ" ಫೋಟೊ ಕಳಿಸಿ..
    ಎಲ್ಲರೂ ನಗಲಿ...

    ನಿಮ್ಮ ನಗು..,
    ಅಭಿಮಾನ.., ಪ್ರೋತ್ಸಾಹ..
    ಹೀಗೆಯೇ ಯಾವಗಲೂ ..ಇರಲಿ..

    ಧನ್ಯವಾದಗಳು...

    ReplyDelete
  54. ಕ್ಷಣ ಚಿಂತನೆ..

    " ಏಲಕ್ಕಿ " ಮುಖ್ಯ ಬೆಳೆ ಆದಾಗ..ಅದರ ಸಂಗಡ

    "ಉಪ ಬೆಳೆಗಳೂ" ಇರುತ್ತವೆ..

    " ಉಪ ಬೆಳೆಗಳ " ಫೋಟೊ ನನ್ನ ಮಗ ಸೆರೆ ಹಿಡಿದಿದ್ದಾನೆ..

    ಅದನ್ನು..

    ಎಪ್ರಿಲ್ ಒಂದರಂದು ಹಾಕುವ ವಿಚಾರ ಇದೆ...

    ಬರುತ್ತಾ ಇರಿ...

    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  55. ಸಂತೋಷ್...

    ಇಲ್ಲಿಯವರೆಗೆ ೭೫ ಪೋಸ್ಟ್ ಆಗಿದೆ..

    ಅಯ್ಯಯ್ಯೋ... ರಾಮಾ..

    ಅಮೂಗಿನ ಕಥೆ ಏನಾಗ ಬೇಡ...!

    ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ..
    ಪ್ರತಿಕ್ರಿಯೆಗೆ ವಂದನೆಗಳು..

    ReplyDelete
  56. ಗೀತಾರವರೆ...

    ಇನ್ನೂ ನೂಡಲ್ಸ್, ಉಪ್ಪಿಟ್ಟು,
    ಹೊಟೆಲ್ ಊಟದ ಬಗೆಗೆ ಬರೇದೆ ಇಲ್ಲ..

    ಸ್ವಲ್ಪ ಇರಿ...

    ಬರೀತಿನಿ...ಹ್ಹಾ...ಹ್ಹ...!

    ನಿಮ್ಮ ಕಲೀಗ್ ನ ಫೋಟೊ ಈಮೇಲ್ ಮಾಡಿ..

    ಬ್ಲೋಗ್ ನಲ್ಲಿ ಹಾಕೋಣ..

    ನಿಮ್ಮ ಕಲೀಗ್ ಗೆ ಈ ಬ್ಲಾಗ್ ತೋರಿಸಿ..

    " ಏಲಕ್ಕಿ ಬೆಳೆ" ಕಡಿಮೆ ಆಗಬಹುದು...!

    ಏಲಕ್ಕಿ ಬೆಳೆ " ಖುಷಿ ಪಟ್ಟಿದ್ದಕ್ಕೆ
    ಧನ್ಯವಾದಗಳು..

    ReplyDelete
  57. ಅಂತರ್ವಾಣಿ..

    ನಮ್ಮ ಕಾಲೇಜಿನಲ್ಲಿ ಒಬ್ಬಳು ಬ್ಯೂಟಿ ಕ್ವೀನ್ ಇದ್ದಳು..

    ಅವಳು "ಏಲಕ್ಕಿ " ಬೆಳೆಯುತ್ತಿದ್ದಳು..

    ಅವಳು ಬಹಳ ಧಿಮಾಕಿನಿಂದ ಇರುತ್ತಿದ್ದಳು..
    ಒಮ್ಮೆ ಸ್ನೇಹಿತನೊಬ್ಬನಿಗೆ ಸುಮ್ಮನೇ ಅವಮಾನ ಮಾಡಿದಳು..

    ಮರುದಿನ ಅವಳು

    "ಏಲಕ್ಕಿ ಬೆಳೆ" ಬೆಳೆಯುವ ಚಿತ್ರ

    ಬೋರ್ಡಿನ ಮೇಲೆ ರಾರಾಜಿಸುತ್ತಿತ್ತು...!

    ನೀವು ಸಂತೋಷಪಟ್ಟಿದ್ದಕ್ಕೆ ..
    ಪ್ರತಿಕ್ರಿಯೆಗೆ..

    ಧನ್ಯವಾದಗಳು..

    ReplyDelete
  58. Haaaa!HAHaaaaa!!!!Laughter is the best Medicine!!!!!nakku,nakku,Saakagide!!!!
    Super!!!

    ReplyDelete
  59. ವ್ಹಾ !ಅಪರೂಪದ ವಿಷಯ ಬಹಳ ಹಾಸ್ಯಮಯವಾಗಿ ನಿರೂಪಿಸಿದ್ದೀರಿ!ತುಂಬಾ ಚೆನ್ನಾಗಿದೆ !

    (Khushwant Pune)

    ReplyDelete
  60. ham sakkatagiddu,adre yelakki belegi season yella iddu, idu nodre yella sesonnallu belitha kanthu alva?

    ReplyDelete
  61. innu mele mooginaththa kai hoguvaagalella nimma lekhana nenapige bandu echchrisuththade... entha kashta thandu bittiralla prakashanna neevu :):)

    ReplyDelete
  62. ಪ್ರಕಾಶಣ್ಣನ ಈ ಏಲಕ್ಕಿ ಬೆಳೆಗಾರರನ್ನು ಮೊನ್ನೆ ನೋಡಿದ್ದೆ. ಆದರೆ ಪ್ರತಿಕ್ರಿಯಿಸೋದು ತಡವಾಯಿತು. ಒಳ್ಳೆ ಲೇಖನ ಇನ್ನು ನಮ್ಮ ಏಲಕ್ಕಿ ಬೆಳೆಗಾರರು ತುಂಬಾ ಎಚ್ಚರಿಕೆಯಿಂದ ಇರಬೇಕು ಅಲ್ವಾ ಪ್ರಕಾಶಣ್ಣ. ಈ ಲೇಖನದಲ್ಲಿ ಬರೋ ಹಾಸ್ಯದ ಬರಹ ನೋಡಿ ಇನ್ನು ನಾನು ಏಲಕ್ಕಿ ಬೆಳೆಯೋ ಸಮಯದಲ್ಲಿ ಆ ಕಡೆ ಈ ಕಡೆ ನೋಡುವ ಹಾಗೆ ಮಾಡಿ ಬಿಟ್ಟಿರಿ.

    ReplyDelete
  63. ವಾಣಿಯವರೆ...

    ನೀವೆನ್ನುವದು ನಿಜ..

    ನಗುವದು ರೋಗದ ಪರಿಹಾರ...!

    ಜೀವನದಲ್ಲಿ ಯಾವಾಗಲೂ..
    ನೀವು, ನಿಮ್ಮವರು...
    ಹೀಗೆಯೇ ನಗುತ್ತಲಿರಿ..

    ಶುಭಾಶೀರ್ವಾದಗಳು..

    ReplyDelete
  64. ಖುಷಿಯವರೆ..

    ಚಂದದ ಹೆಸರು ನಿಮ್ಮದು..

    ಯಾಲಕ್ಕಿ ಯ ..ಸಂಗಡ ಬೆಳೆಯುವ..
    "ಉಪ ಬೆಳೆಗಳ ಬಗೆಗೆ " ..
    ಬರೆಯುವ ವಿಚಾರ ಇದೆ..
    ಎಪ್ರಿಲ್ ಒಂದರಂದು ...ಇನ್ನೂ ಲೇಖನ ರೆಡಿಯಾಗಿಲ್ಲ..

    ಏಲಕ್ಕಿ ಬೆಳೆ" ಇಷ್ಟವಾಗಿದ್ದಕ್ಕೆ..

    ಧನ್ಯವಾದಗಳು..

    ಪುಣೆಯಲ್ಲಿ ಹೇಗಿದೆ ಏಲಕ್ಕಿ ಬೆಳೆ..?
    ಹೀಗೆ ಬರುತ್ತಾ ಇರಿ...

    ReplyDelete
  65. ವೆಂಕಟೇಶ್..

    ಹೌದಲ್ಲ..?

    ಈ ಏಲಕ್ಕಿ ಬೆಳೆ..ಎಲ್ಲಕಾಲದಲ್ಲೂ ಬೆಳೆಯುವ..

    "ಸರ್ವಕಾಲಿಕ" ಬೆಳೆ..

    ಹ್ಹಾ...ಹ್ಹಾ...!

    ನೀವು ಸಂತೋಷಪಟ್ಟಿದ್ದಕ್ಕೆ..
    ಧನ್ಯವಾದಗಳು..

    ಹೀಗೆಯೇ ಬರುತ್ತಾ ಇರಿ...

    ಧನ್ಯವಾದಗಳು..

    ReplyDelete
  66. ಆತ್ಮೀಯ ಸುಧೇಶ್...

    ನಿಮ್ಮ ಬ್ಲಾಗಿನ ಹುಟ್ಟು ಹಬ್ಬದ ಶುಭಾಶಯಗಳು..

    'ಏಲಕ್ಕಿ ಬೆಳೆ ತೆಗೆಯುವಾಗ" ನನ್ನ ಲೇಖನದ..
    ನೆನಪಾದರೆ..
    ಸಾರ್ಥಕತೆ ಭಾವನೆ ನನಗೆ..

    ಇದನ್ನು ಬಿಟ್ಟು ಬಿಡುವದೇ ಒಳ್ಳೆಯದು...

    ಹೀಗೆ ಬರುತ್ತಾ ಇರಿ..

    ಧನ್ಯವಾದಗಳು..

    ReplyDelete
  67. ಭಾವನಾ ಲಹರಿ...

    ನಾನು ನನ್ನ ಮಿತ್ರ "ಸತ್ಯ " ಹೀಗೆ ಮಾತನಾಡುತ್ತ ಕುಳಿತಿರುವಾಗ..
    ನನ್ನ ಮಗ..

    ನಾವು ಏಲಕ್ಕಿ ಬೆಳೆ ಬೆಳೆಯುವ

    ಫೋಟೊ ತೆಗೆದಿದ್ದಾನೆ...

    ಈಗ ನಾನೂ ಕೂಡ ಎಚ್ಚರಿಕೆಯಲ್ಲಿರಬೇಕಾದ ಸಂದರ್ಭ..

    ಹೀಗೇ ಬರುತ್ತಾ ಇರಿ..

    ಧನ್ಯವಾದಗಳು...

    ReplyDelete
  68. ಈಗ ಪುಣೆ ಯಲ್ಲಿ ಏಲಕ್ಕಿ ಬೆಳೆ ಕಡಿಮೆಯಾಗಿ ಕರಿ ಉದ್ದಿನ ಬೇಳೆಯ ಬೆಳೆ (ಹೇನು)ಹೆಚ್ಚಾಗಿದೆ !!!!ಏಕೆಂದರೆ ಬಿಸಿಲಿನ ತಾಪ ಹೆಚ್ಚಾಗಿದ್ದಕ್ಕೆ!!!
    (Khushwant ಪುಣೆ)

    ReplyDelete
  69. ಖುಷಿಯವರೆ...

    ಕರಿ ಉದ್ದಿನ ಬೆಳೆ ಅಪಾಯಕಾರಿ
    ಅಲ್ವೇನ್ರೀ..?

    ಯಾಲಕ್ಕಿ ಉಪ ಬೆಳೆಗಳ ಬಗೆಗೆ ಇನ್ನೋದು ಲೇಖನ ಬರಲಿದೆ ...

    ಸಧ್ಯದಲ್ಲೇ...

    ಧನ್ಯವಾದಗಳು...

    ReplyDelete
  70. nice mama...good work>>>u must have really worked hard for that photos>>>and plz write about elakki upabelegamu also soon>>ur readers and fans will surely like that too

    ReplyDelete
  71. ಪ್ರಶಾಂತು...

    ಏಲಕ್ಕಿಯ ಉಪಬೆಳೆಗಳ ಬಗೆಗೆ ಸಧ್ಯದಲ್ಲೇ ಬರಲಿದೆ...

    ಸ್ವಲ್ಪ ಇಕಾಯಿರಿ...

    ಏಲಕ್ಕಿ ಬೆಳೆ ಇಷ್ಟಪಟ್ಟಿದ್ದಕ್ಕೆ

    ಅಭಿನಂದನೆಗಳು..

    ನಿಮ್ಮ ಕಾಲೇಜಿನಲ್ಲಿ ಹೇಗಿದೆ..

    ಏಲಕ್ಕಿ ಬೆಳೆ..?

    ReplyDelete
  72. ಈ ಏಲಕ್ಕಿಗೆ ದರ ಇಲ್ದೆ ಹೋದ್ರೆ ಇಷ್ಟು...ಇನ್ನು ದರ ಇದ್ದಿದ್ರೆ?

    ReplyDelete